Sunday, December 25, 2011

ನಾನೆಂದರೆ...




ನಾನೆಂದರೆ...
ಮೌನವನ್ನೆ ಪ್ರೀತಿಸುವವ
ಮಾತುಗಳನ್ನು ದ್ವೆಷಿಸುವವ
ಅಥ೯ವಾಗದ ಮೌನಿ.

ನಾನೆಂದರೆ...
ಎಂದಿಗು ಬತ್ತದ ಭಾವನೆಗಳ ಕಣಜ
ಸದಾ ಉಕ್ಕುವ ಸ್ನೆಹದ ಚಿಲುಮೆ
ತಿಳಿ ನೀರ ಸರೋವರದಂತಹ ಮನಸ್ಸು.

ನಾನೆಂದರೆ...
ನಾಳೆಯ ಭರವಸೆಗಳಲ್ಲಿ ಬದುಕುವ ಜೀವಿ
ಊರು ಊರು ಅಲೆಯುವ ಅಲೆಮಾರಿ
ಎಟುಕದ ನಕ್ಷತ್ರಕ್ಕೆ ಆಸೆ ಪಡುವ ದುರಾಸೆ.

ನಾನೆಂದರೆ...
ಹಲವರಿಗೆ ಕೆಟ್ಟವ
ಕೆಲವರಿಗೆ ಒಳ್ಳೆಯವ
ದಾರ ಕಿತ್ತು ಗಾಳಿಗೆ ಸಿಕ್ಕ ಗಾಳಿಪಟ.

Monday, December 19, 2011

ಮೌನ ದ್ವನಿ (ಮನದ ಪ್ರೀತಿಯನ್ನು ಗಾಳಿಗೆ ತೂರಿ ಬಿಟ್ಟಾಗ)


                  ದೆಹಲಿಯ ಮಾಗಿಯ ಚಳಿಯನ್ನು ಅನುಭವಿಸಿದವರೆ ಬಲ್ಲರು, ಆ ಚುಮು ಚುಮು ಮುಂಜಾನೆಯಲ್ಲಿ ಮೈ ನಡಿಗಿಸುವ ಚಳಿಯಲ್ಲಿ ಎರೆಡೆರೆಡು ಹೊದಿಕೆ ಹೊದ್ದು ಮಲಗುವುದರಲ್ಲಿ ಅದೆಂತಹ ಸುಖ, ಇಂತಹ ಮಾಗಿಯ ಚಳಿಯ ಒಂದು ಮುಂಜಾವಿನ ಸಕ್ಕರೆಯ ಸವಿ ನಿದ್ರೆಯಲ್ಲಿದ್ದ ರವಿಗೆ ಫೊನ್ ರೀಂಗಾದಾಗ ಎಚ್ಹರವಾಯಿತು, ಒಲ್ಲದ ಮನಸ್ಸಿನಿಂದಲೆ ಹಲೋ ಎಂದನು ಆ ಕಡೆಯಿಂದ  ಮಾತನಾಡುತ್ತಿರುವವರು ಕಂಪನಿಯ ಎಂ.ಡಿ ಎಂದು ತಿಳಿದಾಗ ಸವಿ ನಿದ್ರೆಯಲ್ಲ ಇಳಿದು ಹೋಯಿತು. "ಬೆಳಗಿನ ೯ ಘಂಟೆ ವಿಮಾನಕ್ಕೆ ಮುಂಬೈಗೆ ಹೋಗಿ ಅಲ್ಲಿ ನೆಡೆಯುವ ಕಂಪನಿ ಮೀಟಿಂಗ್ ನಲ್ಲಿ ಬಾಗವಹಿಸಿ ರಾತ್ರಿ ಮರಳಿ ೮ ಘಂಟೆ ವಿಮಾನಕ್ಕೆ ದೆಹಲಿಗೆ ಬಾ, ಮಧ್ಯಾನ ೩ಕ್ಕೆ ಮೀಟಿಂಗ್ ಮುಗಿಯುತ್ತದೆ ನಂತರ ನೀನು ಎಲ್ಲಿಯಾದರು ಹೋಗು ಆದರೆ ರಾತ್ರಿ ದೆಹಲಿಗೆ ಮರಳಿ ಬಾ, ಏರ ಟೀಕೆಟ್ಸ್ ಬುಕ್ ಆಗಿದೆ" ಎಂದು ಒಂದೇ ಉಸಿರಿನಲಿ ಹೇಳಿದ ಎಂ.ಡಿ ಇವನು ಮರುಮಾತನಾಡುವ ಮೊದಲೆ ಫೋನ್ ಕಟ್ಟ್ ಮಾಡುದ್ದ.
                  ಒಲ್ಲದ ಮನಸ್ಸಿನಿಂದ ಒಂದು ದಿನದ ಮುಂಬೈ ಪ್ರವಾಸಕ್ಕೆ ಹೋರಟ ರವಿಗೆ ತಲೆಯಲ್ಲಿ ಒಂದೆ ಪ್ರಶ್ನೆ, ಮೀಟಿಂಗ್ ನಂತರ ಏನು ಮಾಡುವದು? ವಿಮಾನಯಾನದ ಸಮಯವೆಲ್ಲಾ ಯೋಚಿಸಿದ ಇವನಿಗೆ ಕೊನೆಗೆ ನೆನಪಾಗಿದ್ದು ಮುಂಬೈನಲ್ಲಿ ನೆಲಸಿರುವ ತನ್ನ ಕಾಲೇಜ್ ಗೆಳತಿ ಪಲ್ಲವಿ, ಕಾಲೇಜ್ ನಲ್ಲಿ ಓದೂತಿದ್ದಾಗ ಇದ್ದ ಇವನ ೮ ಜನರ ಗೆಳಯರ ಗುಂಪಿನಲ್ಲಿ ಅವಳು ಒಬ್ಬಳು, ಓದೂ ಮುಗಿದ ನಂತರ ಮದುವೆಯಾಗಿ ಗಂಡನ ಜೋತೆ ಮುಂಬೈಗೆ ಬಂದು ನೆಲಸಿ ಸುಮಾರು ೪ ವಷ೯ಗಳಾದವು, ಅವಳನ್ನಾದರು ಬೇಟ್ಟಿಯಾಗೋಣ ಎಂದು ನಿಧ೯ರಿಸಿ ಮುಂಬೈ ಏರ್ ಪೋಟ್೯ಗೆ ಬಂದು ಅವಳಿಗೆ ಫೊನ್ ಮಾಡಿದ, ಎಂದು ಸರಿಯಾದ ಸಮಯಕ್ಕೆ ಫೋನ್ ರೀಸಿವ್ ಮಾಡದ ಅವಳು ಇಂದು ಮಾತ್ರ ಒಂದೇ ರೀಂಗಿಗೆ ರೀಸಿವ್ ಮಾಡಿದಳು, ಉಭಯಕುಶೋಲೊಪಾರಿಯ ನಂತರ ಸಂಜೆ ೪ ಘಂಟೆಗೆ ಸಿಗುತ್ತಿಯಾ ಎಂದಾಗ ಅವಳು ಸಂತೋಷದಿಂದ ಒಪ್ಪಿದಳು, ಕೊನೆಗೆ ಸಂಜೆ  ಗೇಟ್ ವೇ ಆಫ್ ಇಂಡಿಯಾ ಬಳಿ ಇಬ್ಬರು ಸೇರಲು ನಿಧ೯ರಿಸಿದರು.
               ಕಂಪನಿಯ ಮೀಂಟಿಗ್ ಮುಗಿದ ತಕ್ಷಣ ಟ್ಯಾಕ್ಸಿ ಹಿಡಿದು ಗೇಟ್ ವೇ ಆಫ್ ಇಂಡಿಯಾ ಬಳಿ ಬಂದನು, ಪಲ್ಲವಿ ಕೊಡ ಹೇಳಿದ ಸಮಯಕ್ಕೆ ಸರಿಯಾಗಿ ಬಂದಳು, ಎಷ್ಟೊ ವಷ೯ಗಳ ನಂತರ ನೋಡಿದ್ದರಿಂದ ಮೊದಲು ಸ್ವಲ್ಪ ಭಾವುಕರಾದರು ಮೊದ ಮೂದಲು ಮೌನ ನಂತರ ಮತ್ತೆ ಹಳೆಯ ನೆನಪುಗಳಿಗೆ ಜಾರಿದರು, ಕೆಲ ಸಮಯದ ಬಳಿಕ
       ಮೊನ್ನೆ ವಿನಯ್ ಫೊನ್ ಮಾಡಿದ್ದ ನೀನ್ನ ಬಗ್ಗೆ ಎಲ್ಲಾ ಹೇಳಿದ ನಿನಂತು ನನಗೆ ಏನು ಹೇಳಲ್ಲಾ ಅಲ್ವಾ, ನಿನಗೆ ಹೋಸ ಗೆಳತಿ ಸಿಕ್ಕಿದ್ದಾಳಂತೆ ಹೌದಾ? ಹೇಗಿದ್ದಾಳೆ? ತುಂಭಾ ಸುಂದರವಾಗಿರುವ, ನೀನಗೆ ಹೆಳಿಮಾಡಿಸದಂತಹ ಹುಡಿಗಿನೆ ಸಿಕ್ಕಿದ್ದಾಳೆ ತಾನೆ?
       ಅವಳ ಮಾತಿಗೆ ರವಿ ನಗುತ್ತ  ಹೌದು ಸಿಕ್ಕಿದ್ದಾಳೆ ಎಂದ.
       ಹೇಗಿದ್ದಾಳೆ?
       ತುಂಭಾ ಸುಂದರವಾದ ಹುಡಗಿ, ಎತ್ತರ, ತುಂಭಾ ಮಾತಾಡ್ತಾಳೆ, ನಾನಂದ್ರೆ ತುಂಭಾ ಇಷ್ಠ. ಮೊದಲ ಸಲ ನೋಡಿದಾಗಲೆ ಅವಳು ನನಗೆ ಇಷ್ಠ ಆದಳು, ನಿಮ್ಮನ್ನೆಲ್ಲಾ ಬಿಟ್ಟು ದೆಹಲಿಗೆ ಬಂದ ಮೇಲೆ ತುಂಭಾ ಒಂಟಿಯಾಗಿ ಬಿಟ್ಟೆ, ನಿಮ್ಮನ್ನು, ಆ  ಕಾಲೇಜ್ ಲೈಪನ್ನು ಮರೆಯಬೇಕು ಅಂತಾ ತುಂಭಾ ಕಷ್ಠ ಪಡ್ತಾ ಇದ್ದೆ ಆವಾಗಲೆ ಅವಳು ನನಗೆ ಸಿಕ್ಲು.
     ಇವನನ್ನೆ ದಿಟ್ಟಿಸಿ ನೋಡ್ತಾ ಇದ್ದ ಪಲ್ಲವಿ ಹತ್ತಿರ ಬಂದು ಕುತುಹಲದಿಂದ ಕೋನೆಗು ನೀನು ಜೋಡಿಯಾದೆ, ಅಂತು ನಮ್ಮ ಗ್ರೂಪ್ ನಲ್ಲಿ ಎಲ್ಲರು ಸೆಟ್ಟಲ್ ಆದ ಹಾಗೆ ಆಯಿತ್ತು, ಲೋ ನೀನ್ನ ಹುಡಗಿ ಬಗ್ಗೆ ಇನ್ನೂ ಸ್ವಲ್ಪ ಹೇಳೊ ಪ್ಲಿಜ್.... ಪಲ್ಲವಿ ಮಾತುಗಳಿಗೆ ಸ್ಪದಿಸಿದ ರವಿ ಪಶ್ಚಿಮದ ದಿಗಂತದಲ್ಲಿ ಮುಳುಗಿತ್ತಿದ್ದ ಸೂಯ೯ನನ್ನೆ ದಿಟ್ಟಿಸಿ ನೋಡುತ್ತಾ ಮತ್ತೆ ಮಾತು ಆರಂಭಿಸಿದ.
       "ಅವಳು ಏಷ್ಟೆ ಬೇಡ ಅಂದ್ರು ಹಠಮಾಡಿ ಮುಖದ ಮೇಲೆ ಹಾರಿ ಬರುವ ಆ ಕುದಲುಗಳು, ನನ್ನ ಪಕ್ಕ ಬಂದು ನಿಂತ್ರೆ ನನ್ನ ಕಿವಿತನಕ ಬರುತ್ತಾಳೆ ಅಷ್ಟು ಎತ್ತರ, ನಿಧಾನವಾಗಿ ನೆಡೆದು ಗೊತ್ತೆ ಇಲ್ಲ ಯಾವಗಲು ಬರಿ ಓಟ, ತುಂಭಾ ಅವಸರದಲ್ಲಿ ಇತ್ರಾ೯ಳೆ, ತಾನು ಕನಪ್ಯೊಸ್ ಆಗ್ತಾಳೆ ನನ್ನು ಕನಪ್ಯೊಸ್ ಮಾಡ್ತಾಳೆ, ಅವಳ ದ್ವನಿಯಲ್ಲಿ ಅದೆನೊ ಜಾದು ಇದೆ ಅವಳು ಮಾತಾಡ್ತಾ ಇದ್ರೆ ಕೆಳ್ತಾನೆ ಇರಬೇಕು ಅನ್ನಿಸುತ್ತೆ, ಆದರೆ ತುಂಭಾ ಕೆಟ್ಟದಾಗಿ ಹಾಡ್ತಾಳೆ, ಸ್ವಲ್ಪ ಮುಗೋಪಿ ಆದ್ರೆ ತುಂಭಾ ಒಳ್ಳಯವಳು, ಸ್ವಲ್ಪ ಮರೆವು ಜಾಸ್ತಿ ಸಂಜೆ ಪೋನ ಮಾಡು ನಿನಗೇನೊ ಹೆಳಬೇಕು ಅಂತಾಳೆ ಪೋನ್ ಮಾಡೆದ್ರೆ ಯಾಕೆ ಪೋನ್ ಮಾಡದೆ ಅಂತಾಳೆ, ಮೇಕಪ್ ಮಾಡಿಕೊಂಡ್ರೆ ತುಂಭಾ ಕೆಟ್ಟದಾಗಿ ಕಾಣ್ತಾಳೆ, ತುಂಭಾ ಸಿಂಪಲ್ ಹುಡಗಿ ಆದ್ರೆ ಸ್ವಲ್ಪ ದಪ್ಪ ಇದ್ದಾಳೆ, ಮಧ್ಯಾನ ನೀದ್ದೆ ಮಾಡಿ ಎದ್ದಾಗ ಚಿಕ್ಕ ಮಗುತರ ಮುದ್ದಾಗಿ ಕಾಣ್ತಾಳೆ, ಅವಳ ಕಣ್ಣು ನೋಡ್ತಾ ಇದ್ರೆ ಪ್ರಪಂಚದ ಸೌಂದರ್ಯವೆಲ್ಲಾ ಕಣ್ಣಲ್ಲೆ ಇದೆಯೆನೊ ಅನ್ನುವಷ್ಟು ಸುಂಧರವಾಗಿವೆ, ಸಿನಿಮಾ ನೋಡಿ ಕಣ್ಣಿರು ಹಾಕುವಷ್ಠೂ ಭಾವಜೀವಿ, ಟೀ ಅಂದ್ರೆ ಅಲ೯ಜಿ ಆದರೆ ಕಾಪಿ ಅಂದ್ರೆ ತುಂಭಾ ಇಷ್ಠ ಒಂದೆಸಲ ಎರೆಡೆರೆಡು ಕಫ್ ಕಾಪಿ ತಗೊಂಡು ಸಣ್ಣಮಗು ತರ ಕುಡಿತಾಳೆ", ಬಿಡು ಪಲ್ಲವಿ ಏಷ್ಟ ಹೇಳಿದರು ಮುಗಿಯದ ಒಂದು ಸುಂದರ ಕಾವ್ಯ ಅವಳು.
      ಹೇ ಮುಂದಿನ ಸಲ ಮುಂಬೈಗೆ ಬರುವಾಗ ಅವಳನ್ನು ಕರೆದುಕೊಂಡು ಬಾ ನಾನು ಅವಳನ್ನು ನೋಡಬೇಕು ಓಕೆ, ಸರಿ ನನಗೆ ಲೇಟ್ ಆಗ್ತಾ ಇದೆ ಮನೆಯಲ್ಲಿ ಎಲ್ಲ ಕಾಯ್ತಾ ಇರುತ್ತಾರೆ ನಾನು ಬರ್ತಿನಿ, ಮರಿಬೇಡ ಮುಂದಿನ ಸಲ ನಮ್ಮ ಮನೆಗೆ ನೀನ್ನ ಹುಡಗಿ ಜೋತೆ ಬರಬೇಕು ಎಂದು ಹೇಳಿ ಮನೆಗೆ ಮರಳಿ ಹೋರಟಳು, ಅವಳೀಗೆ "ಬಾಯ್" ಹೇಳಿದ ರವಿ ಅವಳು ಹೋದ ದಿಕ್ಕನ್ನೆ ನೋಡುತ್ತಾ ಮನಸ್ಸಿನಲ್ಲೆ "ಹುಚ್ಚು ಹುಡಗಿ ನಾನು ಇದುವರೆಗು ಹೇಳಿದ್ದು ಇವಳ ಬಗ್ಗೆನೆ ಎಂದು ಇವಳಿಗೆ ಅಥಾ೯ನೆ ಅಗಲಿಲ್ಲ, ನನ್ನ ಜೀವನದಲ್ಲಿ ಯಾವ ಹುಡಗಿನು ಇಲ್ಲ, ನಾನು ಹೇಳಿದ್ದೆಲ್ಲಾ ಬರಿ ಸುಳ್ಳು, ಇವಳೆ ನನ್ನ ಮೂದಲ ಲವ್, ಮೊದಲ ಲವ್ ಮರೆಯುವದು ಎಷ್ಠೂ ಕಷ್ಠ ಅಂತ ನನಗೆ ಮಾತ್ರ ಗೊತ್ತು, ಇವಳನ್ನು ಮರೆಯಬೇಕು ಅಂತಾನೆ ಎಲ್ಲರಿಂದ ಅಷ್ಟೂ ದೂರ ಹೋದೆ ಆದರೆ ಮನಸ್ಸಿನಿಂದ ಮಾತ್ರ ಅವಳು ದೂರ ಆಗಲೆ ಇಲ್ಲ, ಇವಳಿಗೆ ನನ್ನ ಪ್ರೀತಿ ಅಥಾ೯ನೆ ಆಗಲಿಲ್ಲವೂ ಅಥವಾ ಎಲ್ಲ ಗೊತ್ತಿದ್ದು ನಾಟಕ ಮಾಡಿದಳಾ? ಗೋತ್ತಿಲ್ಲ, ಪ್ರಪಂಚದಲ್ಲಿ ಏಷ್ಟೂಂದು ಹುಡಗಿಯರು ಇದ್ರು ನಾನ್ಯಾಕೆ ಈ ಪೆದ್ದಿಯನ್ನು ಪ್ರೀತಿಸಿದೆ? ಕೆಲವು ಪ್ರಶ್ನೆಗಳಿಗೆ ಉತ್ತರವೆ ಇರುವುದಿಲ್ಲ" ಎಂದು ತನಗೆ ತಾನೆ ಸಮಾಧಾನ ಮಾಡಿಕೊಂಡು ಮರಳಿ ದೆಹಲಿಯತ್ತ ಪ್ರಯಣಕ್ಕೆ ಹೊರಟ, ಸಂಜೆಯ ತಂಗಾಳಿಗೆ ಮೈಒಡ್ಡಿ ನಿಂತಿದ್ದ  ಗೇಟ್ ವೇ ಆಫ್ ಇಂಡಿಯಾ ಇಂದು ಮತ್ತೊಂದು ಪ್ರೇಮ ಕಥೆಗೆ ಸಾಕ್ಷಿಯಾಯಿತು.

Tuesday, November 15, 2011

ನಾನು ತುಂಭಾ ಸ್ಮಾಟ್೯, ನನ್ನ ಹೆಸರು "ಪ್ರಶಾಂತ್"


ನನ್ನ ಹೆಸರು "ಪ್ರಶಾಂತ್"
ಅವಳ ಹೆಸರು "ನಿಶಾ" ಅಂತಾ.


ಮೊದಲ ಸಲ ನೋಡಿದೆ ಅವಳನ್ನ ಸಿಟಿ ಬಸ್ ನಲ್ಲಿ
ಎರಡನೆ ಸಲ ನೋಡಿದೆ ಮೇಜಾಸ್ಟಿಕ್  ನಲ್ಲಿ
ಅವಳ ಹತ್ತಿರ ಹೋಗಿ ಹೇಳಿದೆ ಹಾಯ್ ನಾನು "ಪ್ರಶಾಂತ್"
ಅದಕೆ ನಗುತಾ ಅವಳು ಹೇಳಿದಳು ಹಲೋ ನಾನು "ನಿಶಾ" ಅಂತಾ.


ಅದೊಂದು ದಿನ ಕರದೆ ಅವಳನ್ನು ಕಾಪಿ ಕುಡಿಯೊಕೆ 
ಅದಕೆ ಅವಳು ಹೇಳಿದಳು, ಬಾ ಇಲ್ಲೆ ಪಕ್ಕದಲ್ಲಿರುವ ’ಕಾಪಿ ಡೇ' ಗೆ
ಹುಡಗಿ ಕರೆದರೆ ಹೋಗದೆ ಇರೋಕೆ ಆಗುತ್ತಾ?
ಮರಳಿ ಬರುವಾಗ ವೇಟ್ಟರ್ ಕೈಗೆ ಕೊಟ್ಟೆದ್ದೆ ನೂರರ ಎರಡು ನೋಟು.


ಮೊನ್ನೆ ಅವಳನ್ನು ಕರದೆ ’ಲಂಚ್’ಗೆ ಅಂತಾ
ಅದಕೆ ಅವಳು ಹೇಳಿದಳು ಬಾ ಇಲ್ಲೆ ಪಕ್ಕದಲ್ಲಿರುವ "ಹಳ್ಳಿ ಮನೆ''ಗೆ
ಹುಡಗಿ ಕರೆದರೆ ಹೋಗದೆ ಇರೋಕೆ ಆಗುತ್ತಾ?
ಮರಳಿ ಬರುವಾಗ ವೇಟ್ಟರ್ ಕೈಗೆ ಕೊಟ್ಟೆದ್ದೆ ನೂರರ ನಾಲ್ಕು ನೋಟು.


ನಿನ್ನೆ ಅವಳನ್ನು ಕರದೆ ಸಿನಿಮಾಕ್ಕೆ ಅಂತಾ
ಅದಕೆ ಅವಳು ಹೇಳಿದಳು ಬಾ ಇಲ್ಲೆ ಪಕ್ಕದಲ್ಲಿರುವ ಪಿವಿRಗೆ
ಹುಡಗಿ ಕರೆದರೆ ಹೋಗದೆ ಇರೋಕೆ ಆಗುತ್ತಾ?
ಹೋಗುವಾಗ ಟೀಕೆಟ್ ಕೌಂಟರನಲ್ಲಿ ಕೊಟ್ಟೆದ್ದೆ ನೂರರ ಆರು ನೋಟು.


ಇವತ್ತು ಅವಳೆ ಕರೆದಿದ್ದಾಳೆ ’ಡಿನ್ನರ್’ಗೆ ಅಂತಾ
ಹುಡಗಿ ಕರೆದಳು ಅಂತಾ ಹೋಗೊಕೆ ಆಗುತ್ತಾ?
ಅದಕ್ಕೆ ಹೇಳಿದೆ ಅವಳಿಗೆ ಇವತ್ತು ನಂದು ’ಉಪವಾಸ’ ಅಂತಾ
ನಾನು ತುಂಭಾ ಸ್ಮಾಟ್೯, ನನ್ನ ಹೆಸರು "ಪ್ರಶಾಂತ್"

Saturday, November 12, 2011

ನೀರಿಕ್ಷೆ





ಮೊದಲ ದಿನವೆ ಮನಸ್ಸಿನ ಮಹಲಿನಲ್ಲಿ ಬಂದು ಕುಳಿತು
ಕೇಲವೆ ದಿನಗಳಲ್ಲಿ ನೂರಾರು ಕನಸುಗಳ ಬಿತ್ತಿ
ಒಲವಿನ ಲೋಕದ ಪರಿಚಯ ಮಾಡಿಸಿದವಳೆ
ಹೇಳದೆ ಕೇಳದೆ ಎಲ್ಲಿಗೆ ಹೊರಟು ಹೋದೆ.


ಗೊತ್ತಿಲ್ಲವೆ ನಿನಗೆ ನಿನೀಲ್ಲದೆ ಅಪೂಣ೯ ನಾನು
ಪ್ರತಿ ದಿನವು ನಿನ್ನ ನೆನೆಯದ ಕ್ಷಣವಿಲ್ಲ
ಕೇಳದೆ ನಿನಗೆ ನನ್ನ ಮನಸ್ಸಿನ ರೋದನೆ
ಬರಬಾರದೆ ಮರಳಿ ನನ್ನ ಮನಸ್ಸಿನ ಮಹಲಿಗೆ?


ನಿನ್ನದೆ ನೆನಪುಗಳ ಮಳೆಯಲ್ಲಿ ನೆನೆದು 
ನಿದ್ರೆ  ಬರದೆ ಮಧ್ಯರಾತ್ರಿ ಹೊರನೆಡದರೆ
ಬಿಸುವ ತಂಗಾಳಿ ಕೊಡ ನನಗೆ ಹೇಳುವುದು
ಅವಳಿಲ್ಲದೆ ನೀನು ಬೆಳದಿಂಗಳಿಲ್ಲದ ರಾತ್ರಿಯಂತೆ.


ನೆನಯಬಾರದೆಂದು ನಿನ್ನ ಗಟ್ಟಿ ಮನವ ಮಾಡಿ ಕುಳಿತರು
ನಿನ್ನದೆ ನೆನಪುಗಳ ಸಾಲು ಸಾಲು ಮೋಡಗಳು
ಬೇಡವೆಂದರು ಸುಳಿಯುವವು ಮನದ ಮುಗಿಲಲ್ಲಿ
ಮನದಲ್ಲಿ ಮಳೆಯಿಲ್ಲ, ಆದರೆ ಕಣ್ಣಲ್ಲಿ ಮಾತ್ರ ನೀರು


ಬಾರದ ನಿನ್ನ ದಾರಿಯ ಕಾಯುತ ಕುಳಿತ ನನಗೆ
ಅಮ್ಮನಿಂದ ಪ್ರೀತಿಯ ಸಾಂತ್ವಾನದ ಮಾತುಗಳು
ಅದೆಲ್ಲೊ ನನಗಾಗಿ ಕಾಯುತಿಹಳಂತೆ ಅಪ್ಸರೆಯಂತಹ ಹುಡಗಿ
ಆದರೆ ನನಗೆ ಅಪ್ಸರೆಗಿಂತ ನಿನ್ನ ನೆನೆಪುಗಳ ಮಳೆಯಲ್ಲಿ ನೆನೆವುದೆ ಇಷ್ಠ.





Wednesday, November 9, 2011

"ಶ್ರೀ ಕೃಷ್ಣ"ನೆಂದರೆ ನನಗೆ


ಕದ್ದು ಬೆಣ್ಣೆ ತಿಂದು, ಬೇರೆಯವರ ಮುಖಕ್ಕೆ ಕೈವರಸಿ
"ಅಮ್ಮ ನಾನು ದೇವರಾಣೆ ಬೇಣ್ಣೆ ಕದ್ದಿಲ್ಲ"
ಎಂದು ಹೇಳಿದ ಸುಳ್ಳುಗಾರ.

ಹದಿನಾರು ಸಾವಿರ ಸ್ತ್ರೀಯರ ಸಂಗಮಾಡಿ
ಮಹಾನ್ ರಸಿಕನೇನಿಸಿದ
ಸ್ತ್ರೀ ವ್ಯಾಮೋಹಿ.

ಅಪ್ಪಟ ವೀರ, ಧಾನ ಶೂರ ಕಣ೯ನನ್ನು
ಮೋಸದಿಂದ ಸಾಯುವಂತೆ ಮಾಡಿದ
ಮಹಾನ್ ಮೋಸಗಾರ.

ಕ್ಷತ್ರಿಯನಾಗಿ ರಣರಂಗದಲ್ಲಿ ಯುದ್ದ ಮಾಡದೆ
ಸಾರತಿಯಾಗಿ ಕೇವಲ ತಂಗಿ ಗಂಡನ
ತಲೆ ಕಾದ ಸ್ವಾಥಿ೯.

ಸತ್ಯ, ಧಮ೯ವೆ ತನ್ನ ಪ್ರಾಣ ಎಂದು
ನಂಬಿದ್ದ ಧಮ೯ರಾಯನ ಬಾಯಿಯಲ್ಲಿ
ಸುಳ್ಳಾಡಿಸಿದ ಅಧಮಿ೯.

ಕೊನೆಯಲ್ಲಿ ತ್ರುಣಮಾನವನ ಬಾಣಕ್ಕೆ
ಬಲಿಯಾಗಿ ದಟ್ಟಡವಿಯಲ್ಲಿ ಬಿದ್ದ
ಅನಾಥ ಹೆಣ.

Monday, November 7, 2011

Old Diary


             ಡೈರಿಯನ್ನು(ದಿನಚರಿ ಪುಸ್ತಕ) ಯಾರು ಹೇಗೆ ವ್ಯಾಕ್ಯಾನಿಸುತ್ತಾರೂ ಗೊತ್ತಿಲ್ಲ ಆದರೆ ನನಗೆ ಮಾತ್ರ ನನ್ನ ಹಳೆಯ ಡೈರಿಗಳು ಎಂದರೆ ಅಂದು ನನ್ನ "ಬಾಲ್ಯ", ಪ್ರತಿ ಬಾರಿಯು ನಾನು ನನ್ನ ಹಳೆಯ ಡೈರಿಗಳನ್ನು ನೋಡಿದಾಗಲೆಲ್ಲ ಚಿಕ್ಕ ಬಾಲಕನಾಗಿ ಬಿಡುತ್ತೆನೆ, ಏನುಂಟು ಏನಿಲ್ಲ ಅದರಲ್ಲಿ ಅದೂಂದು ಸುಂದರ ಪ್ರಪಂಚ.
            ಪ್ರತಿ ಪುಟಗಳನ್ನು ತಿರುಗಿಸಿದಾಗ ಕಾಣುವ ಪ್ರತಿ ಅಕ್ಷರವು ಸಾವಿರ ಸಾವಿರ ನೆನಪುಗಳನ್ನು ಮುಡಿಸುತ್ತವೆ, ಪುಟಗಳ ಮದ್ಯ ಸಿಗುವ ನವಿಲುಗರಿ, ಬಂಗಾರದ ಬಣ್ಣಕ್ಕೆ ತಿರುಗಿದ ಹಾಳೆ, ಚಲ್ಲಿದ ಪೆನ್ನಿನ ಇಂಕು, ಶಾಲೆಯ ರಿಶಿಪ್ಟ್ ಗಳು, ಹತ್ತಾರು ಪುಟಕ್ಕೆ ಒಂದರಂತೆ ಸಿಗುವ ನನ್ನದೆ Black and White ಪೋಟೂಗಳು, ಕೇವಲ ನನಗೆ ಮಾತ್ರ ಅಥ೯ವಾಗುವಂತೆ ಬರೆದ Code Wordsಗಳು ಮತ್ತು ಅವುಗಳ ಹಿಂದಿನ ವೀಷೆಶ ಘಟನೆಗಳು, ಗೆಳಯರ ಜೋತೆಗಿನ Group Photosಗಳು, Someone Splನಿಂದ ಪಡೆದ ನಾಣ್ಯ ನೆನಪಿಗೆಂದು fevical ಹಾಕಿ ಪುಟಕ್ಕೆ ಅಂಟಿಸಿದ ರೀತಿ, ಅಣ್ಣನ ಪುಸ್ತಕದಲ್ಲಿ ಸಿಕ್ಕ ಸುಂದರ Greetingsನ ತುಣಕು, ಗೆಳತಿಯೊಬ್ಬಳು Gift ಆಗಿ ಕೋಟ್ಟ Penನಿಂದ ಬರೆದ ಮೊದಲ ಸಾಲುಗಳು, ಅಕ್ಕನ ಗೆಳತಿಯರು ಮನೆಗೆ ಬಂದಾಗ ಪ್ರೀತಿಯಿಂದ ಕೋಟ್ಟ ಚಾಕಲೆಟ್ಟನ ನೆನಪಿಗಾಗಿ ಇಟ್ಟ ಅದರ ಕವರ್ ಗಳು ಜೋತೆಗೆ ಅವರು ಪ್ರೀತಿಯಿಂದ ನನ್ನ ಗಲ್ಲ ಹಿಂಡಿದ ಸವಿ ನೆನಪುಗಳು, ಅಪ್ಪ ಬೈದಾಗ, ಶಾಲೆಯಲ್ಲಿ ಎಲ್ಲರೆದರು ಗುರುಗಳು ಬೈದಾಗ ಅಂದು ರಾತ್ರಿ ಒಬ್ಬನೆ ಕುಳಿತು ಅತ್ತ ಕಣ್ಣಿರಿನ ನೆನಪುಗಳು, ಚಿಣ್ಣಿ-ದಾಂಡು ಆಡುವಾಗ ಮಾಡಿಕೊಂಡ ಗಾಯದಿಂದ ಬಂದ ರಕ್ತದ ಕಲೆ, Schoolನಲ್ಲಿ ಗೆಳತಿಯೊಬ್ಬಳು ಪ್ರಥಮ ಭಾರಿಗೆ ಕೋಟ್ಟ Newyearನ Greeting, TVಯಲ್ಲಿ ಬಂದ ಅಡುಗೆ ಪ್ರೋಗ್ರಾಂ ನೋಡಿ ಧಿಡಿರ ದೋಸೆ ಮಾಡಲು ಹೋಗಿ ಅಧ೯ Kg ಅಕ್ಕಿ ಹಿಟ್ಟು ಹಾಳು ಮಾಡಿದಾಗ ಅಮ್ಮ ಕೋಟ್ಟ ಏಟಿನ ನೆನಪು, ವೀಷೆಶ ವ್ಯೆಕ್ತಿಯೊಡನೆ ಸಿನಿಮಾಗೆ ಹೋದ ನೆನಪಿಗಾಗಿ ಇಟ್ಟುಕೊಂಡಿರುವ ಆ ಸಿನಮಾ ಟೀಕೆಟು, ಮೊದಲ ಸಲ ದಿನ ಪತ್ರಿಕೆಯಲ್ಲಿ ನನ್ನ ಹೆಸರು ಬಂದಾಗಿನ ನೆನಪಿಗಾಗಿ ಇಟ್ಟುಕೊಂಡಿರುವ ಪತ್ರಿಕೆಯ ತುಣುಕು, ಅಬ್ಬಬ್ಬಾ ಏನುಂಟು ಏನಿಲ್ಲ, ಪ್ರತಿ ಪುಟಗಳನ್ನು ತಿರುಗಿಸುತ್ತಾ ಹೋದಾಗಲು ಸಾಲು ಸಾಲು ನೆನಪುಗಳ ಸುರಿ ಮಳೆ.... ಒಟ್ಟಿನಲ್ಲಿ ಡೈರಿ ಎಂದರೆ ನನಗಂತು ಪ್ರತಿಸಲ ತೆರೆದಾಗಲು ನನ್ನ ಬಾಲ್ಯವನ್ನು ತಂದುಕೊಡುವ ಒಂದು ಮಾಯಾ ಪುಸ್ತಕ.

Monday, October 3, 2011

ಕರಗದಿರು ಮನವೆ


ಇಷ್ಟೂ ದಿನ ಕೆಂಪೇಗೌಡರ ಊರು
ಇನ್ಮೂಂದೆ ಛತ್ರಪತಿ ಶಿವಾಜಿಮಹಾರಾಜರ ಊರು
ಮನವಿಗ ಗೊಂದಲಗಳ ಗೂಡು
ಆದರೆ ಕಣ್ಣಿನಲಿ ಸಾಲು ಸಾಲು ಕನಸುಗಳು.

ಕರಗದಿರು ಮನವೆ
ಹಾಳು ಹಳೆಯ ನೆನಪುಗಳಿಗೆ
ಮರುಕಳಿಸದಂತೆ ಮಾಡು ಇತಿಹಾಸ
ಕೊಲ್ಲದಿರು ಕನಸುಗಳ.

ಭಾವನೆಗಳಿಗೆ ಬೆಲೆ ಕೊಟ್ಟು
ತಲೆ ಭಾಗದಿರು
ಇನ್ನಾದರು ವಾಸ್ತವ ಅರಿತುಕೊ
ಯಾರು ಅನಿವಾರ್ಯವಲ್ಲ ಈ ಜೀವನಕ್ಕೆ.

Monday, September 12, 2011

ಸಂಜೆಯೊಂದರ ನೆನಪು...


                   ಅರೇ ಅದೆ ಉದ್ದವಾದ ಕುದಲುಗಳು, ಅದೆ ಅವಳ ನೇಚ್ಚಿನ ಕಪ್ಪು ಬಣ್ಣದ ಸೀರೆ, ಸಾವಿರಾರು ಕಿಲೊಮೀಟರ್ ದೂರ ಸಪ್ತ ಸಾಗರದಾಚೆ ಇರುವ ಅವಳು ಅದ್ಯಾವಾಗ ಇಲ್ಲಿಗೆ ಬಂದಳು? ಒಂದು ಕ್ಷಣ ಕುತುಹಲದಿಂದ, ದುಗುಡದಿಂದ ಅವಳ ಹತ್ತಿರ ಹೋಗಿ ನೋಡಿದಾಗ ಇವನಿಗೆ ಇವಳು ಬೇರೆಯಾರೂ ಎಂದು ತಿಳಿದು ಸ್ವಲ್ಪ ಸಮಾದಾನವಾಯಿತು, ಮನಸ್ಸಿನಲ್ಲಿ ಅಡಗಿದ್ದ ಬೇಸರವನ್ನು ಹೋಗಲಾಡಿಸಲು ಆಗುಂಬೆಯ ಸೂಯಾ೯ಸ್ತವನ್ನು ನೋಡಲು ಬಂದು ಕ್ಷಣ-ಕ್ಷಣಕ್ಕು ಬಣ್ಣ ಬದಲಿಸುತ್ತಿದ್ದ ಆಗಸ ಮತ್ತು ಸೂಯ೯ರ ರಂಗಿನಾಟದಲ್ಲಿ ಮೈ ಮರೆತಿದ್ದ ಇವನಿಗೆ ಸೂಯ೯ ಮತ್ತು ಇವನ ಮದ್ಯ ಬಂದು ನಿಂತ ಆ ಅಪರಿಚಿತ ಹೆಂಗಸು ಇವನನ್ನು ಕ್ಷಣಮಾತ್ರದಲ್ಲಿ 20 ವಷ೯ಗಳ ಹಿಂದಿನ ನೆನಪಿನಾಳಕ್ಕೆ ಎಳೆದಳು, ಏಷ್ಟೂ ವಷ೯ಗಳಿಂದ ಮನಸ್ಸಿನಿಂದ ಮರೆಯಾಗಿದ್ದ "ಪ್ರಾಥ೯ನಾ" ಎಂಬ ಹೆಸರನ್ನು ಮತ್ತೆ ನೆನಪು ಮಾಡಿದ್ದಳು.
                                               ***********************
                    "ಶೆಷಾದ್ರಿಪುರಂ ಪಿಯು ಕಾಲೇಜಿನ ಕಲಾ,ವಾಣಿಜ್ಯ ಮತ್ತು ವಿಜ್ಯಾನ ವಿಭಾಗದ ಏಲ್ಲಾ ವಿದ್ಯಾಥಿ೯ಗಳಿಗು ಇಂದಿನ ಚಚಾ೯ಸ್ಪದೆ೯ಗೆ ಸ್ವಾಗತ" ಎಂದು ಮೈಕಿನಲ್ಲಿ ದ್ವನಿ ಬರುತಿತ್ತು, ಇವನಿಗೆ ಅದ್ಯಾವುದರಲ್ಲು ಆಸಕ್ತಿ ಇಲ್ಲದಿದ್ದರು ಮನೆಗೆ ಹೋಗಿ ಮಾಡುವುದೆನು ಎಂದು ಸುಮ್ಮನೆ ಬಂದು ಸಭಾಂಗಣದಲ್ಲಿ ಕುಳಿತ, ಸ್ಪದೆ೯ ಆರಂಭವಾಗಿ ಅಧ೯ಗಂಟೆಯಾದರು ಒಬ್ಬ ಸ್ಪಧಿ೯ಯ ಮುಖವನ್ನು ನೋಡದೆ ತನ್ನದೆ ಲೋಕದಲ್ಲಿ ಮುಳುಗಿದ್ದ ಇವನಿಗೆ ಮೈಕಿನಲ್ಲಿ ಬಂದ ದ್ವನಿ "ಮುಂದಿನ ಸ್ಪಧಿ೯ ಪ್ರಥಮ ವಷ೯ದ ವಿಜ್ಯಾನ ವಿಭಾಗದ "ಪ್ರಾಥ೯ನಾ"  ಎಂದಾಗ ಅರೇ "ಪ್ರಾಥ೯ನಾ" ಏಷ್ಟೊಂದು ಮುದ್ದಾದ ಹೆಸರು, ಯಾರವಳು  ಇಷ್ಟೂಂದು ಮುದ್ದಾದ ಮತ್ತು ವಿಚಿತ್ರ ಹೆಸರಿನ ಹುಡಗಿ ಎಂದು ತೆಲೆ ಎತ್ತಿ ನೋಡಿದಾಗ ಆಗತ್ತಾನೆ ಸ್ಟೆಜ್ ಹತ್ತಿ ಮೈಕ್ ಹಿಡಿದು ನಿಂತಿದ್ದ ಹುಡಗಿ ಕಂಡಳು, ಊದ್ದವಾದ ಕುದಲು, ಕಪ್ಪನೆ ಉಡುಪು, ಮುಖದಲ್ಲಿ ದುಗುಡ , ಸಣ್ಣಗೆ ನಡುಗುತಿದ್ದ ಕೈಗಳು ಇದು ಮೂದಲನೆ ಸಲ ಅವನು ಪ್ರಾಥ೯ನಾಳನ್ನು ನೋಡಿದಾಗ ಅವಳು ಕಂಡ ರೀತಿ, ತ್ವದಲುತ್ತಲೆ ಮಾತು ಆರಂಭಿಸದಳು, ಸಭಾಂಗಣದಲ್ಲಿ ಹೊಮ್ಮುತಿದ್ದ ವಿಧ್ಯಾಥಿ೯ಗಳ ಕೇಕೆ, ನಗುಗಳನ್ನು ಏದುರಿಸಲಾಗದೆ ಬಂದಷ್ಟೆ ವೇಗವಾಗಿ ಮರಳಿ ಹೋಗಿದ್ದಳು, ಅದೇನೊ ಗೊತ್ತಿಲ್ಲ ಅವಳನ್ನು ಮಾತನಾಡಿಸ ಬೇಕು ಎಂದು ಸಭಾಂಗಣದ  ಹಿಂದೆ ಕುಳಿತಿದ್ದ ಇತ ಎದ್ದು ಅವಳ ಹತ್ತಿರ ಹೋದ, ಅವಳು ತಲೆ ತಗ್ಗಿಸಿ ಮುಲೆಯೊಂದರಲ್ಲಿ ಕುಳಿತಿದ್ದಳು ಇವನು ಪ್ರಾಥ೯ನಾ ಎಂದಾಗ ತಲೆ ಏತ್ತಿ ಇವನನ್ನು ನೋಡಿದಳು, ನೀಮ್ಮ ಜೋತೆ ಮಾತನಾಡಬೇಕು ಸ್ವಲ್ಪ ಆಚೆ ಬರುತ್ತಿರಾ ಅಂದಗಾ ಅಲ್ಲಿಂದ ಆಚೆ ಹೋದರೆ ಸಾಕು ಎಂದು ಮರು ಮಾತನಾಡದೆ ಹೋರ ಬಂದಳು.
                    ಆಚೆ ಬಂದು ಅವನು ತನ್ನ ಪರಿಚಯಮಾಡಿಕೊಂಡು ತಾನು ಪ್ರಥಮ ಕಲಾ ವಿಭಾಗದಲ್ಲಿ ಓದುತ್ತಿರುವುದಾಗಿ ತಿಳಿಸಿದ, ಒತ್ತಾಯದ ಮುಗುಳುನಗೆ ನಕ್ಕ ಅವಳು ಸುಮ್ಮನಾದಳು, ವೇಧಿಕೆಯ ಮೇಲೆ ತುಂಭಾ ಭಯದಿಂದ ನಿಂತಿದ್ದರಿ, ಅಭ್ಯಾಸವಿಲ್ಲದ ಮೇಲೆ ಏಕೆ ಇಂತಹ ಸ್ಪಧೆ೯ಗಳಲ್ಲಿ ಭಾಗವಹಿಸ ಬೇಕು ಎಂದು ಇವನು ಕೇಳಿದಾಗ ಮುಂದೆ ನಾನು ಇಂಜಿನಿಯರಿಂಗ್ ಓದಬೇಕು ಎಂದುಕೊಂಡಿರುವೆ ಅದಕ್ಕೆ ಇಂತಹ ಸ್ಪಧೆಗಳಲ್ಲಿ ಮತ್ತು ಸೆಮಿನರಗಳಲ್ಲಿ ಭಾಗವಹಿಸುವದು ಅವಶ್ಯ, ಪಸ್ಟ್ ಟೈಮ್ ಅಲ್ವಾ ಸ್ವಲ್ಪ ಭಯ ಅಯಿತ್ತು ಮುಂದೆ ಅಭ್ಯಸವಾಗುತ್ತೆ ಎಂಬ ಅವಳ ಮಾತು ಕೇಳಿ ಸುಮ್ಮನಾದ, ಕೆಲ ಕ್ಷಣದ ಬಳಿಕ
     "ಪ್ರಾಥ೯ನಾ" ಮುದ್ದಾದ ಹೆಸರು ಯಾರು ಇಟ್ಟರು ನಿಮಗೆ?
     "ಅಪ್ಪ-ಅಮ್ಮ, ನಾನು ಅಪ್ಪ-ಅಮ್ಮನಿಗೆ ಒಬ್ಬಳೆ ಮಗಳು, ಮದುವೆಯಾಗಿ 8 ವಷ೯ಗಳಾದರು ಅವರಿಗೆ ಮಕ್ಕಳಾಗಿರಲಿಲ್ಲವಂತೆ, ನಮ್ಮ ಅಜ್ಜಿ ಕಂಡ ಕಂಡ ದೇವರುಗಳಿಗೆ ಪ್ರಾಥ೯ನೆಗಳ ಮೇಲೆ ಪ್ರಥ೯ನೆ, ಪ್ರಾಥ೯ನೆಗಳ ಮೇಲೆ ಪ್ರಾಥ೯ನೆ ಮಾಡುತಿದ್ದರಂತೆ ಕೋನೆಗು ಅಜ್ಜಿಯ ಪ್ರಾಥ೯ನೆಗಳಿಗೆ ಬೇಸತ್ತ ದೇವರು ನನ್ನನ್ನು ಭೂಮಿಗೆ ಕಳುಹಿಸಿದನಂತೆ ಅದಕ್ಕೆ ನನಗೆ ಮನೆಯಲ್ಲಿ ಪ್ರಾಥ೯ನಾ ಎಂದು ಹೆಸರಿಟ್ಟರು" ಎಂದು ಅವಳು ನಕ್ಕಾಗ, ಇವನು ನಕ್ಕನು.
                                           ***********************
                ತೀಥ೯ಹಳ್ಳಿ ಪಕ್ಕದ ಹಳ್ಳಿಯವರಾದ ರಾಮೇಗೌಡರಿಗೆ ನೂರಾರು ಏಕ್ಕರೆ ಜಮೀನು ಉಂಟು, ಕುಳಿತು ಉಂಡರು ಮುಗಿಯದಷ್ಟು ಆಸ್ತಿ, ಅವರಿಗೆ ಇರುವದು ಒಬ್ಬನೆ ಮಗ, ಅವನು ಚನ್ನಾಗಿ ಓದಲಿ, ಇಲ್ಲೆ ಇದ್ದರೆ ಬರಿ ಕಾಡು ಅಲೆಯುತ್ತಾ ಹಾಳಾಗುತ್ತಾನೆ ಎಂದು ಬೆಂಗಳುರಿನಲ್ಲಿ ಇರುವ ತಮ್ಮನ ಮನೆಗೆ ಕಳುಹಿಸಿದರು ಹೀಗೆ ಬೆಂಗಳೂರಿಗೆ ಕಾಲಿರಿಸಿದ ಅಪ್ಪಟ್ಟ ಮಲೆನಾಡಿನ ಹುಡುಗನಿಗೆ ಒಂದೇ ತಿಂಗಳಲ್ಲಿ ಪರಿಚಯವಾದ ಹುಡಗಿಯೆ ಪ್ರಾಥ೯ನಾ, ಇಬ್ಬರ ತರಗತಿಗಳು ಬೇರೆ ಬೇರೆ ಆದರು ಇಬ್ಬರಿಗು ಅದು ಹೇಗೊ ಗಾಡವಾಗಿ ಸ್ನೆಹ ಬೆಳದು ಬಿಟ್ಟಿತು, ಇವನಿಗೊ ಓದುಹುದರಲ್ಲಿ ಸ್ವಲ್ಪಹು ಆಸಕ್ತಿ ಇಲ್ಲ, ಬರಿ ಕಾಡು, ಕಾಡು ಪ್ರಾಣಿಗಳೆಂದರೆ ಇಷ್ಟ, ಅವಳಿಗೊ ಓದುವದು ಬಲು ಇಷ್ಟ, ಹೀಗೆ ಪರಸ್ಪರ ವಿರುದ್ದ ಗುಣಗಳಿದ್ದರು ಇಬ್ಬರಲ್ಲೂ ಆಕಷ೯ಣೆ ಉಂಟಾಗಿತ್ತು, ಸದ್ದಿಲ್ಲದೆ ಆ ಪುಟ್ಟ ಹ್ರುದಯಗಳಲ್ಲಿ ಪ್ರೀತಿಯೊಂದು ಮೊಳಕೆ ಒಡೆದಿತ್ತು, ಪರಸ್ಪರ ಇಬ್ಬರು ಹೇಳಿಕೊಳ್ಳದಿದ್ದರು ಅವರ ಕಣ್ಣುಗಳಲ್ಲಿ ಅದು ವ್ಯಕ್ತವಾಗಿತ್ತು, ಶೆಷಾದ್ರಿಪುರಂ ಕಾಲೇಜು, ಮಲ್ಲೆಶ್ವರಂನ ರಸ್ತೆಗಳು ಅವರ ಪ್ರೀತಿಗೆ ಸಾಕ್ಷಿಯಾಗಿದ್ದವು.
             ಹೀಗೆಯೆ ವಷ೯ಗಳು ಉರಳಿದವು ಪಿ,ಯು ನಂತರ ಅವಳಿಗೆ ರಾಮಯ್ಯ ಕಾಲೇಜ್ ನಲ್ಲಿ ಇಂಜಿನಯರಿಂಗ್ ಸೀಟು ಸಿಕ್ಕಿತು, ಪಕ್ಕದ ಕಾಲೇಜ್ ನಲ್ಲಿ ಇವನು ಬಿ,ಎ ಗೆ ಅಡ್ಮಿಶನ್ ಮಾಡಿಸಿದ, ಎಲ್ಲವು ಚನ್ನಾಗಿತ್ತು ಹೀಗೆಯೆ ದಿನಗಳು ಉರಳುತಿದ್ದವು, ಅದೇಷ್ಟೊ ಸುಂದರ ಸಂಜೆಗಳಲ್ಲಿ ಇಬ್ಬರು ಕೈ ಕೈ ಹಿಡಿದು ನೆಡೆಯುತ್ತಾ ಭವಿಷ್ಯದ ಬಗ್ಗೆ ಸಾವಿರಾರು ಕನಸು ಹೆಣೆದಿದ್ದರು.
                                           ***********************
               ರಾಮೆಗೌಡರಿಗೆ ಆರೊಗ್ಯ ಸರಿಯಿಲ್ಲವೆಂಬ ಪತ್ರ ನೋಡಿದ ತಕ್ಷಣ ಇವನು ತಿಥ೯ಹಳ್ಳಿಗೆ ಹೋರಟು ನಿಂತ, ಹೋಗುವ ಮೂದಲು ಪ್ರಾಥ೯ನಾಳನ್ನು ಬೇಟ್ಟಿಮಾಡಿ ಅವಳಿಗೆ ಶಿಘ್ರದಲ್ಲೆ ಮರಳುವುದಾಗಿ ತಿಳಿಸಿ ಹೊರಟು ಹೊದ, ಆದರೆ ತಿಥ೯ಹಳ್ಳಿ ತಲುಪುವ ಮೊದಲೆ ಅವನ ತಂದೆ ತನ್ನ ಕೊನೆಯ ಉಸಿರೆಳೆದಿದ್ದರು, ತಂದೆಯ ಅಕಾಲಿಕ ಮರಣ ಮತ್ತು ಜಮೀನಿನ ಕೆಲಸದ ಹೋಣೆಯಿಂದಾಗಿ ಅವನಿಗೆ ಮತ್ತೆ ಬೆಂಗಳೂರಿಗೆ ಹೋಗುವುದಾಗಲಿ, ತನ್ನ ಶಿಕ್ಷಣವನ್ನು ಮುಂದುವರೆಸಲು ಆಗಲಿಲ್ಲ, ಕೆಲ ದಿನಗಳ ಬಳಿಕ ವಿವರವಾಗಿ ಪ್ರಾಥ೯ನಾಗೆ ಪತ್ರ ಬರೆದ ಅಲ್ಲದೆ ನೀನ್ನನ್ನು ನೋಡಬೇಕು ಮತ್ತು ಮಾತನಾಡ ಬೇಕು ಎಂಬ ಹಂಬಲ ಉಂಟಾಗುತ್ತಿದೆ ಎಂದು ಬೆರೆದಿದ್ದ, ಕೇಲವೆ ದಿನಗಳಲ್ಲಿ ಅವಳಿಂದ ಉತ್ತರ ಬಂದಿತು....
    
         ಹಾಯ್...
                    ಹೇಗಿದ್ದಿಯಾ?
                     ಅಪ್ಪ ನನಗೆ ಮದುವೆ ಗೊತ್ತು ಮಾಡಿದ್ದಾರೆ, ಹುಡುಗ ನಮ್ಮ ದೂರದ ಸಂಬಂಧಿ, ಸದ್ಯ ಅಮೇರಿಕಾದಲ್ಲಿ ಇದ್ದಾನೆ, ನಿನ್ನ ಪತ್ರ ಬಂದ ಮರುದಿನವೆ ನಮ್ಮ ಬಗ್ಗೆ ಮನೆಯೆಲ್ಲಿ ಹೇಳಿದೆ, ಜಾತಿ,ಅಂತಸ್ತು, ವಿದ್ಯೆ ಹೀಗೆ ಯಾವುದರಲ್ಲು ಸಮಾನನಲ್ಲದ ಅವನ ಜೋತೆ ನೀನು ಅವನ ಗೆಳತನ ಮತ್ತು ಸಂಭಂದ ಮುಂದುವರೆಸಿದರೆ ನೀನ್ನ ಪಾಲಿಗೆ ನಾವೆಲ್ಲ ಸತ್ತತೆ ಎಂದು ಹೊರಟು ಹೊದರು, ಬೇಳಗ್ಗೆ ಎದ್ದಾಗ ಮನೆಯಲ್ಲಿ ನನ್ನ ನೀಶ್ಚಿಥಾ೯ದ ಸಂಬ್ರಮವಿತ್ತು, ನನಗೆ ಅವರ ಸಂಭ್ರಮವನ್ನು ಹಾಳುಮಾಡುವ ಮನಸ್ಸಾಗಲಿಲ್ಲ ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡು.
                                                                                                             ಪ್ರಾಥ೯ನಾ
      
                 ಕೊನೆಯ ಅಕ್ಷರ ಓದಿದಾಗ ಅರಿವಿಲ್ಲದೆ ಅವನ ಕಣ್ಣಿನಿಂದ ನಾಲ್ಕು ಹನಿ ನೀರು ಬಿದ್ದು ಪ್ರಾಥ೯ನಾ ಎಂಬ ಅಕ್ಷರ ಕಣ್ಣಿರಿನಲ್ಲಿ ಅಳಿಸಿ ಹೊಗಿತ್ತು, ನೀಶ್ಚಿಥಾ೯ವಾಗಿರುವಾಗ ಮತ್ತೆ ಅವಳಿಗೆ ಪತ್ರ ಬರೆದು ಅವಳ ಮನಸ್ಸಿನಲ್ಲಿ ಗೊಂದಲ ಸ್ರಷ್ಠಿಸಲು ಅವನಿಗೆ ಮನಸ್ಸಾಗಲಿಲ್ಲ.
                                        ***********************
               ಹೀಗೆಯೆ ಒಂದು ವಷ೯ ಕಳೆಯಿತು ಅದೊಂದು ದಿನ ತೋಟದಿಂದ ಮನೆಗೆ ಮರಳಿದಾಗ ಕೆಲಸದವನು ಬಂದು ಪತ್ರವಂದನ್ನು ಕೋಟ್ಟ ಅದರ ಮೇಲೆ ಇದ್ದ ಅಕ್ಷರಗಳನ್ನು ನೋಡಿದಾಗಲೆ ಪತ್ರ ಅವಳದೆಂದು ತಿಳಿಯಿತು, ಅಚ್ಚರೆ,ಸಂತಸ, ಭಯಗಳಿಂದ    ಪತ್ರವನ್ನು  ತೆರೆದ...
 
       ಹಾಯ್....
                  ಈ ಪತ್ರವನ್ನು ಏರ್ ಪೋಟ೯ನಿಂದ ಬರೆಯುತಿದ್ದೆನೆ, ಒಂದು ಬಾರಿಯಾದರು ನನ್ನನ್ನು ನೋಡಲು ಬರುತ್ತಿ ಅಂದುಕೊಂಡಿದ್ದೆ ಆದರೆ ನೀನು ಬರಲೆ ಇಲ್ಲ, ಕಳೆದವಾರ ನನ್ನ ಮದುವೆಯಾಯಿತು, ನಿನಗೆ ಆಮಂತ್ರಣಪತ್ರ ಕಳಿಹಿಸುವ ದೈರ್ಯ ನನಗೆ ಬರಲಿಲ್ಲ, ಇವತ್ತು ಗಂಡನ ಜೋತೆ ಅಮೆರಿಕಾಕ್ಕೆ ಹೊಗುತಿದ್ದೆನೆ ಮತ್ತೆ ಭಾರತಕ್ಕೆ ಬರುತ್ತೆನೊ ಇಲ್ಲವೊ ಗೊತ್ತಿಲ್ಲ, ನೀನ್ನ ಜೋತೆ ಮಾತನಾಡಬೇಕೆಂಬ ನನ್ನ ಆಸೆ ಹಾಗೆಯೆ ಉಳಿಯಿತು, ನನಗೆ ಜನ್ಮಾಂತರಗಳಲ್ಲಿ  ನಂಬಿಕೆ ಇಲ್ಲ, ಈ ಜನ್ಮಕ್ಕೆ ಇಷ್ಟು ಸಾಕು.
                                                                                                             ಪ್ರಾಥ೯ನಾ  
          *********************************************************************

Saturday, August 27, 2011

ಬಾವನೆಗಳ ಲೋಕದಿಂದ ಬಾರದಿಹ ಲೋಕಕ್ಕೆ


ಬಾವನೆಗಳ ಲೋಕದಲ್ಲಿ ನಾನು
"ಬಾನಾಲಿ"ಯಾಗಿ ನಲಿಯುತ
ಬಾನೆತ್ತರದಲ್ಲಿ ಹಾರುತಿದ್ದಾಗ
ಬದುಕೆಲ್ಲವು ಬಲು ಸಂತಸವಾಗಿದ್ದಾಗ
ಬೇಟೆಗಾರನೊಬ್ಬ ಸಹಿಸದೆ ನನ್ನ ಸಂತಸ
ಬಾಣವೂಂದನ್ನು ಗುರಿಯಾಗಿಸದ ನನಗೆ
ಬೇಟೆಗಾರನ ಬಾಣ ತಲುಪಿತು ಗುರಿಯ
ಬಾನಿಂದ ಭೂಮಿಗೆ ಬಿದ್ದಿರುವೆನು ನಾನು
ಬದುಕಿನ ಕೋನೆಯಲ್ಲಿ ನಿಂತಿಹೆನು
ಬರುವೆಯಾ ಗೆಳತಿ ನೋಡಲು ನನ್ನ ಕೋನೆಯ ಬಾರಿ
ಬಾವನೆಗಳ ಲೋಕದಿಂದ ಬಾರದಿಹ ಲೋಕಕ್ಕೆ ಕಳುಹಿಸಲು ನನ್ನ

Friday, July 22, 2011

ಗೆಳಯ...... ಹೀಗೆಕೆ ಮಾಡಿದೆ


                                              
                                                  ajeeb dastan hai yeah
                                                  kaha suru kaha khatam
                                                  yeah manzlie hai kon se na
                                                  wo samjh sake na hum
                          ನಿಜ ಜೀವನ ತುಂಭಾ ವಿಚಿತ್ರ ಎಲ್ಲೂ ಆರಂಭವಾಗುತ್ತೆ, ಇನ್ನೆಲ್ಲೂ ಕೋನೆಯಾಗುತ್ತೆ. ಏನೂ ಆಗಬೇಕು ಎಂದುಕೊಳ್ಳುತ್ತೆವೆ, ಇನ್ನೆನೊ ಆಗುತ್ತೆವೆ. ಯಾರನ್ನೊ ಬಯಸುತ್ತೆವೆ ಇನ್ಯಾರ ಜೋತೆ ಬದುಕುತ್ತೆವೆ. ಒಟ್ಟಿನಲ್ಲಿ ಜೀವನವನ್ನು ಅಥ೯ಮಾಡಿಕೋಳ್ಳುವದು ತುಂಭಾ ಕಷ್ಟ.
                           ನಾನು ಡಿಪ್ಲೊಮಾ ಓದುವಾಗ ನನಗೊಬ್ಬ ಗೆಳಯ ಇದ್ದ, ನನ್ನ ಸಹಪಾಠಿ ಮತ್ತು ರೊಮ್ ಮೇಟ್ ಕೊಡ ಆಗಿದ್ದ, ತುಂಭಾ ತಾಳ್ಮೆ ಸಹನೆಯಿಂದ ಇರುತ್ತಿದ್ದ ಒಟ್ಟಿನಲ್ಲಿ ತುಂಭಾ ಒಳ್ಳೆಯ ಹುಡುಗ, ಅಪ್ಪ-ಅಮ್ಮ ಅಂದರೆ ತುಂಭಾ ಪ್ರೀತಿ ಅವನಿಗೆ. 4-5 ದಿನಗಳಿಗೆ ಒಂದು ಸಾರಿ ಊರಿಗೆ ಹೋಗಿ ಬರುತ್ತಿದ್ದ, ಅಷ್ಟೊಂದು ಮನೆ ಮತ್ತು ಮನೆಯವರನ್ನು ಹಚ್ಚಿಕೊಂಡಿದ್ದ, ರಾಹುಲ್ ದ್ರಾವಿಡ್ ಅಂದರೆ ತುಂಭಾ ಇಷ್ಟ ತಾಳ್ಮೆಯಲ್ಲಿ ಅವರನ್ನು ಮಿರುಸುತಿದ್ದ, ಯಾರೆ ಬಂದರು ಅವರ ಜೋತೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದ, ಯಾವುದಕ್ಕು ಹಠ ಮಾಡುತ್ತಿರಲಿಲ್ಲ. ಡಿಪ್ಲೊಮಾ ಮುಗಿದ ಮೇಲು ದೂರದ ಊರಿಗೆ ಕೆಲಸಕ್ಕೆ ಹೋಗದೆ ಊರಿನಲ್ಲೆ ಸಣ್ಣ ಕೆಲಸ ಮಾಡುತ್ತಾ ಅಪ್ಪ-ಅಮ್ಮನ ಜೋತೆ ಇದ್ದ.
                          ಕೆಲದಿನಗಳ ಹಿಂದೆ ರಾಣೆಬೇನ್ನೂರಿಗೆ ಹೋದಾಗ ನನಗೆ ನನ್ನ ಇನ್ನೊಬ್ಬ ಗೆಳಯ ಸಿಕ್ಕಿದ್ದ, ಮಾತಿನ ಮದ್ಯ ಈ ನನ್ನ ಮಿತ್ರನ ವಿಷಯ ಬಂದಿತು, ಕುತುಹಲದಿಂದ ಅವನ ಬಗ್ಗೆ ವಿಚಾರಿಸಿದಾಗ ನನಗೆ ಅಚ್ಚರೆ ಕಾದಿತ್ತು, ನನ್ನ ಪ್ರೀತಿಯ ಮಿತ್ರ, ಸಹನೆಯ ಮೂತಿ೯, ಅಪ್ಪ-ಅಮ್ಮನ ಮುದ್ದಿನ ಮಗ ಇತ್ತಿಚೆಗೆ ಮನೆಯವರ ವಿರೋದದ ನಡುವೆಯು ಹುಡಗಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿ ದೂರದ ಹೋರ ರಾಜ್ಯದ ಊರಿನಲ್ಲಿ ವಾಸವಾಗಿದ್ದಾನೆದ್ದು ಕೇಳಿ ನನಗೆ ಅಚ್ಚರಿಯಾಯಿತು, ಅಷ್ಟೊಂದು ಹಚ್ಚಿಕೊಂಡಿದ್ದ ಅಪ್ಪ-ಅಮ್ಮನನ್ನು ಬಿಟ್ಟುಹೋಗುವಷ್ಟು ಗಾಡವಾಗಿತ್ತೆ ಅವನ ಪ್ರೀತಿ? 4-5 ದಿನಗಳಿಗೊಮ್ಮೆ ಮನೆಗೆ ಹೋಗಿಬರುತ್ತಿದ್ದ ಅವನು 6 ತಿಂಗಳು ಒಂದೇ ಊರಿನಲ್ಲಿ ಇದ್ದರು ಅಪ್ಪ-ಅಮ್ಮನ ಮುಖ ನೋಡದಷ್ಟು ಕಠೋರವಾಗಿ ಬಿಟ್ಟಾನಾ? ಒಂದೇ ಊರಿನಲ್ಲಿ ಇದ್ದರೆ ಎಲ್ಲಿ ಮತ್ತೆ ಅಪ್ಪ-ಅಮ್ಮನನ್ನು ಮಾತನಾಡಿಸಬೇಕಾಗುತ್ತದೆ ಏಂದು ಅಷ್ಟೊಂದು ದೂರದ ಊರಿಗೆ ಹೋರಟು ಹೋದೆಯ್ಯಾ? ನಿಜವಾಗಲು ಪ್ರೀತಿ ಅಷ್ಟೊಂದು ಕೇಟ್ಟದ್ದಾ? ಕಠೋರವಾದದ್ದಾ?
                        ಗೆಳಯಾ ನೀನು ಮಾಡಿದ್ದು ತಪ್ಪು ಎಂದು ನಾನು ಹೇಳುತ್ತಿಲ್ಲ ಆದರೆ ಒಂದು ಕ್ಷಣ ಯೋಚಿಸು 2-3 ವಷ೯ಗಳಿಂದ ಪ್ರೀತಿಸುತ್ತಿರುವ ಹುಡಗಿಗಾಗಿ ನೀನು ಅಷ್ಟೆಲ್ಲಾ ತ್ಯಾಗ ಮಾಡಿದೆ ಆದರೆ ನೀನು ಹುಟ್ಟಿದಾಗಿನಿಂದಲು (ಸುಮಾರು 2 ದಶಕಗಳಿಂದ) ನೀನ್ನನ್ನು ಪ್ರೀತಿಸುತ್ತಿರುವ ಅಪ್ಪ-ಅಮ್ಮನಿಗೆ ಕೊಟ್ಟ ನೋವು ಸರಿಯೆ? ಪ್ರೀತಿಸುವದು, ಪ್ರೀತಿಸಿದ ಹುಡಗಿಯನ್ನು ಮದುವೆಯಾಗುವದು ತಪ್ಪಲ್ಲ.  ಆದರೆ ಆ ಪ್ರೀತಿಯ ಜೋತೆ ಅಪ್ಪ-ಅಮ್ಮನು ಇದ್ದರೆ ಅದೆಷ್ಟು ಚೆಂದ ಅಲ್ಲವೆ. ಗೆಳಯಾ ನನಗೆನೊ ನೀನು ದುಡುಕಿದೆ ಅನ್ನಿಸುತ್ತಿದೆ, ನಿನ್ನ ಅಪ್ಪ-ಅಮ್ಮನನ್ನು ನಾನು ಬಲ್ಲೆ ಸ್ವಲ್ಪ ಪ್ರಯತ್ನಿಸಿದ್ದರೆ ಅವರನ್ನು ಒಪ್ಪಿಸಬಹುದಿತ್ತು. ಅದು ಅಲ್ಲದೆ ನೀನು ಸ್ವಲ್ಪ ನಿಧಾನಿಸಬೇಕಿತ್ತು ಅನಿಸುತ್ತದೆ, ಯಾಕೆಂದರೆ ಈ ಚಿಕ್ಕ ವಯ್ಯಸಿಗೆ ಮದುವೆ ಬೇಕಿತ್ತಾ?
                     ಆದರೆ ಒಂದು ವಿಷಯದಲ್ಲಿ ಮಾತ್ರ ನೀನು ತುಂಭಾ ಗ್ರೇಟ್ ಆಗಿ ಬಿಟ್ಟೆ, ನೀನು ಪ್ರೀತಿಸಿ ಮದುವೆಯಾದ ಹುಡಗಿ "ಅಂಗವಿಕಲೆ" ಎಂದು ಕೇಳಿದಾಗ ನನಗೆ ತುಂಭಾ ಅಚ್ಚರೆ ಮತ್ತು ಸಂತೋಷವಾಯಿತು, ನೀನು ನನ್ನ ಗೆಳೆಯ ಎನ್ನಲು ಹೆಮ್ಮೆ ಅನ್ನಿಸುತ್ತದೆ, ಆಗಿದ್ದು ಆಗಿ ಹೋಯಿತು, ಪ್ರೀತಿ ತುಂಭಾ ಪವಿತ್ರವಾದದ್ದು, ಅದು ಪುಣ್ಯವಂತರಿಗೆ ಮಾತ್ರ ಸಿಗುವಂತಹದು, ಏಲ್ಲರಿಗು ಅದು ದೊರಕುವುದಿಲ್ಲ, ನಮೆಗೆಲ್ಲ ಅದು ಕೈಗೆ ಸಿಗದ ನಕ್ಷತ್ರ ಕೇವಲ ನಕ್ಷತ್ರವನ್ನು ನೋಡಿ ಸಂತೋಷಪಡಬೇಕು ಅಷ್ಟೆ ಆದರೆ ನೀನು ಆ ನಕ್ಷತ್ರ ಪಡೆದ ಅದ್ರಷ್ಟವಂತ, ಪ್ರೀತಿಸಿದ ಹುಡಗಿಯನ್ನು ಕೋನೆಯವರೆಗು ಸಂತೋಷದಿಂದ ನೋಡಿಕೊ, ಸವ೯ವನ್ನು ಬಿಟ್ಟು ನೀನ್ನ ಜೋತೆ ಬಂದಿರುವ ಆ ಹುಡಗಿಯ ಮನಸ್ಸು ಏಂದು ನೋಯಿಸ ಬೇಡ, ಸಾದ್ಯವಾದರೆ ಒಂದು ಸಾರಿ ಅಪ್ಪ-ಅಮ್ಮನ ಹತ್ತಿರ ಕ್ಷೆಮೆ ಕೇಳು, ನಿನ್ನ ವೈವಾಹಿಕ ಜೀವನಕೆ ನನ್ನ ಶುಭ ಹಾರೈಕೆಗಳು ಮತ್ತು ನೀನ್ನ ಅನುಮತಿ ಇಲ್ಲದೆ ನೀನ್ನ ವೈಯಕ್ತಿಕ ಜೀವನದ  ಬಗ್ಗೆ ಬರೆದಿದ್ದಕ್ಕೆ ಕ್ಷಮೆ ಇರಲಿ...

Thursday, July 21, 2011

ಪ್ರೀತಿ ಎಂದರೆ...

                                 ಹುಡುಗ, ಹುಡುಗಿ ಮಾತಡುತ್ತಾ ಕುಳಿತಿದ್ದರು, ಯಾಕೋ ಯಾವುದೋ ವಿಷಯಕ್ಕೆ ಮನಸ್ತಾಪ ಬಂದು ಹುಡುಗಿ, ಹುಡುಗನ ಕೆನ್ನೆಗೆ ಫಟಾರ್ ಅಂತ ಬಾರಿಸಿದಳು, ದೂರದಲ್ಲಿ ಹೋಗಿ ಅಳುತ್ತಾ ನಿಂತಿದ್ದಳು. ಹುಡುಗ ಹುಡುಗಿಯ ಬಳಿ ಬಂದು ಅವಳ ಕಣ್ಣೊರೆಸುತ್ತಾ ಹೇಳಿದ, "ನನ್ನ ಕೆನ್ನೆಗೆ ನೀನು ಹೊಡೆದೆಯಲ್ಲ, ನಿನ್ನ ಕೈಗೆ ಎಷ್ಟು ಪೆಟ್ಟಾಗಿರ ಬೇಕು? ನೀನೆ ಹೇಳ್ಳಿದ್ದರೆ ಸಾಕಿತ್ತು. ನಾನೇ ಸಾವಿರ ಸಲ ಹೊಡೆದುಕೊಳ್ಳುತ್ತಿದ್ದೆ" ಅಂತ. ಎಂಥ ಮುಗ್ದ ಪ್ರೀತಿ ಅಲ್ವ!..............    (ಎಲ್ಲೂ ಓದಿದ ನೆನಪು)

Friday, June 24, 2011

ಅವನ ಆ ಪ್ರೀತಿಯನ್ನು ಏನೆಂದು ಕರೆಯಲಿ.....!



                  ಅಂದು ಸಂಜೆ ಕಾಪಿ ಕುಡಿಯಲೆಂದು ಹೋಟೆಲ್ಲಗೆ ಹೋಗಿದ್ದೆ ಸಂಜೆ ಸಮಯ ಹೋಟೆಲ್ಲನಲ್ಲಿ ಜಾಸ್ತಿ ಜನರು ಇರಲಿಲ್ಲ ಕಾಪಿ ಕಡಿಯುತ್ತಾ ಕುಳಿತೆ  ಅಷ್ಟರಲ್ಲೆ ಅಲ್ಲಿಗೆ ಬೈಕ್ ನಲ್ಲಿ ಯುವ ಜೋಡಿಯೊಂದು ಬಂದಿತು ಅವರ ಮಾತು, ಬಂದ ಶೈಲಿಯನ್ನು ಗಮನಿಸಿಯೆ ಹೆಳಬಹುದಿತ್ತು ಅವರಿಬ್ಬರು ಪ್ರೇಮಿಗಳೆಂದು, ನನ್ನ ಎದುರಿನ ಟೇಬಲ್ಲಿನಲ್ಲಿ ಕುಳಿತ ಅವರು ಒಂದೇ ದೋಸೆಗ ಆಡ೯ರ ಮಾಡಿದರು, ಏಷ್ಟೇ ಆದರು ಪ್ರೇಮಿಗಳಲ್ಲವೆ ಒಂದೇ ದೋಸೆಯನ್ನು ಇಬ್ಬರು ತಿನ್ನುತ್ತಾರೆ ಅಂದುಕೊಂಡೆ.
                 ಯಾಕೊ ಹುಡಗಿ ತುಂಬಾ ಡಲ್ ಆಗಿದ್ದಳು, ಕೇಲವೆ ಕ್ಷಣಗಳಲ್ಲಿ ದೋಸೆ ಬಂದಿತ್ತು, ಹುಡುಗ ಹುಡಗಿಗೆ ದೋಸೆ ತಿನ್ನಸತೂಡಗಿದ, ಒಂದೆರೆಡು ತುತ್ತು ತಿಂದ ಅವಳು ನಂತರ ತಿನ್ನಲು ನಿರಾಕರಿಸಿದಳು ಆದರೆ ಹುಡುಗ ಒತ್ತಾಯ ಮಾಡಿ ತಿನ್ನಿಸತೊಡಗಿದ, ಇನ್ನೊಂದು ತುತ್ತು ತಿಂದ ಅವಳು ಒಂದೇ ಬಾರಿಗೆ ವಾಂತಿ ಮಾಡಿಕೊಳ್ಳಲು ಆರಂಬಿಸಿದಳು, ಅದನ್ನು ಮೊದಲೆ ಗ್ರಹಿಸಿದ ಹುಡುಗ ಅವಳ ಬಾಯಿಯ ಹತ್ತಿರ ತನ್ನ ಕೈ ಹಿಡಿದು ಅವಳ ಪೂಣ೯ ಎಂಜಲ್ಲನ್ನು ಕೈಲ್ಲಿ ಸಂಗ್ರಹಿಸಿ ನಂತರ ವಾಶ್ ಟಬ್ ಹತ್ತಿರ ಹೋಗಿ ಕೈ ತೋಳೆದುಕೊಂಡು ನಂತರ ವೀಪರಿತ ಬಳಲಿ ಕುಳಿತಿದ್ದ ಹುಡಗಿಯ ಬಳಿ ಹೋಗಿ ಅಲ್ಲಿಯೆ ಅವಳ ಮುಖ ತೊಳೆದ.
                ಆ ಕ್ಷಣ ಅವನ ಮುಖ ಗಮನಿಸಿದೆ ಅವನ ಮುಖದಲ್ಲಿ ಸ್ವಲ್ಪವು ಬೇಸರವಾಗಲ್ಲಿ ಅಥವಾ ಅಸಹನೆಯಾಗಲ್ಲಿ ಇರಲಿಲ್ಲ, ಒಂದು ಕ್ಷಣ ನನಗೆ ಅನಿಸಿತು ಎಂತಹ ನಿಮ೯ಲ ಪ್ರೀತಿ, ಸ್ವಲ್ಪವು ಅಸ್ಯಹ ಪಡದೆ ಎಂಜಲ್ಲನ್ನು ಬಳೆಯುವದು ಕೇವಲ ಒಬ್ಬ ತಾಯಿಗೆ ಮಾತ್ರ ಸಾದ್ಯ, ಒಬ್ಬ ತಾಯಿ ಮಾತ್ರ ತನ್ನ ಮಗುವಿಗೆ ಈ ರೀತಿಯ ಪ್ರೀತಿ ತೋರಿಸಬಹುದು ಎಂದು ತಿಳಿದಿದ್ದ ನನ್ನ ಅಬಿಪ್ರಾಯವನ್ನು ಆ ಹುಡುಗ ಸುಳ್ಳಾಗಿಸಿದ್ದ, ನಿಜವಾಗಲು ಅಂತಹ ಹುಡುಗನನ್ನು ಪಡೆದ ಅವಳೆ ಧನ್ಯಳು, ಕೇವಲ ಪಾಕ್೯, ಸಿನಿಮಾ ಮಂದಿರದ ಕತ್ತಲೆಯಲ್ಲಿ ಆರೀತಿಯ ಪ್ರೀತಿಯನ್ನು ಕಂಡದ್ದಿ ನನಗೆ ಮೊದಲ ಬಾರಿಗೆ ನಿಮ೯ಲವಾದ ಪ್ರೀತಿ ಹೇಗಿರುತ್ತೆ ಎಂದು ಅಂದು ಆ ಹುಡುಗ ನನಗೆ ತೋರಿಸಿದ್ದ, ಅಂದೇ ನಾನು ನಿಧ೯ರಿಸಿದೆ ಅವನ ಆ ನೀಮ೯ಲ ಪ್ರೀತಿಯೆ ನನಗೆ ಎಂದಿಗು ಆದಶ೯, ಅವರ ಆ ಪ್ರೀತಿಗೆ ಏನೆಂದು ಹೆಸರು ಕೋಡಬೇಕೊ ನನಗತ್ತು ಹೋಳೆಯುತ್ತಿಲ್ಲ.

Saturday, May 21, 2011

ಶೆಟ್ಟರ ಅಂಗಡಿ ಲವ್ ಸ್ಟೊರಿ


                         ಅಂದು ಭಾನುವಾರ ಮಧ್ಯಾನದ ಸಮಯ ಯಾಕೋ ತುಂಬಾ ಬೇಜಾರಗುತಿತ್ತು ಸರಿ ಅಮ್ಮನ ಜೋತೆಯಾದರು ಮಾತನಾಡೋಣವೆಂದು ಮೊಬೈಲ್ ತೆಗೆದುಕೊಂಡೆ ಆದರೆ ಅದರಲ್ಲಿ ಬ್ಯಾಲನ್ಸ ಇರಲಿಲ್ಲ ಸರಿ ರಿಚ್ಯಜ್೯ ಮಾಡಿಸೊಣವೆಂದು ಪಾಕೆಟ್ ತೆಗೆದುಕೊಂಡೆ ಆದರೆ ಅದರಲ್ಲಿ ಬೆಳಗ್ಗೆ ಇದ್ದ 100 ರೂಪಾಯಿನ್ನು ನನಗೆ ಹೆಳದೆ ಅದಾಗಲೆ ಗೆಳಯ ಯಾವಾಗಲೊ ಎತ್ತಿಕೊಂಡಿದ್ದ, ಪಾಕೆಟಯಲ್ಲಾ ಜಾಲಾಡಿದಾಗ ಸಿಕ್ಕಿದ್ದು 1 ರೂಪಾಯಿ, ಸರಿ ಅದರಲ್ಲೆ ಅಮ್ಮನ ಜೋತೆ ಮಾತಾಡೊಣ ಎಂದು ಪಕ್ಕದ ಶೆಟ್ಟರ ಅಂಗಡಿಗೆ ಹೋಗಿ coin boxನಿಂದ ಅಮ್ಮನಿಗೆ ಕಾಲ್ ಮಾಡಿದೆ ಹಾಗೆಯೆ ಎದುರು ಮನೆಯ ಮಹಡಿ ಕಡೆ ನೋಡಿದೆ ಅಲ್ಲಿ ಹೋಸದಾಗಿ ನೆಲಸಲು ಬಂದಿದ್ದ ನಸಿ೯oಗ್ ಟೀಚರ್ ನಿಂತು ನನ್ನ ಕಡೆಗೆ smile ಕೊಡುತಿದ್ದಳು, ಜೋತಗೆ ಕಣ್ಣು ಸನ್ನೆಗಳು ಬೇರೆ, ನನಗೆ ಮನದಲ್ಲೆ double ಲಾಡು ತಿಂದ ಖುಶಿ, ಅಬ್ಬಾ ಕೋನೆಗು ನನ್ನ ಜೀವನದಲ್ಲಿ ಒಬ್ಬಳಾದರು ಹುಡಗಿ ನನಗೆ line ಕೊಡುತಿದ್ದಾಳಲ್ಲಾ ಎಂದು ಖುಶಿ, ಇತ್ತ ಪೋನಿನಲ್ಲಿ ಅಮ್ಮ ಮಾತನಾಡಿದ್ದು ಆಯ್ತು ನಿಮಿಷದ ನಂತರ ಪೋನ್ ಕಟ್ಟೂ ಆಯ್ತು ಆದರೆ ರೀಸಿವರ್ ಮಾತ್ರ ನಾನು ಕೆಳಗೆ ಇಡದೆ ಆ ಹುಡಗಿ ಎದರು ಪೋಜ್ ಕೋಡುತಿದ್ದೆ, ಹಾಗೆಯೆ ಒಂದೆರೆಡೂ ನಿಮಿಷಗಳು ಅವಳ್ಳನ್ನೆ ದಿಟ್ಟಿಸಿ ನೊಡುತ್ತಾ ಅವಳ ಕಣ್ಣುಗಳಿಗೆ ಸ್ಪಂದಿಸ ತೋಡಗಿದ್ದೆ ಆ ಎರಡೆ ನಿಮಿಷಗಳಲ್ಲಿ ಎಷ್ಟೂ ಕನಸಗಳು ಮನದಲ್ಲಿ ಮುಡಿದ್ದವು, 
              ನನ್ನನ್ನೆ ಗಮನಿಸುತ್ತಿದ್ದ ಶೆಟ್ಟರು ನನ್ನನ್ನು ಕನಸುಗಳ ಲೋಕದಿಂದ ವಾಸ್ತವ ಲೋಕಕ್ಕೆ ಕರೆದು ಹೇಳಿದರು " ತಮ್ಮಾ ಅಕಿ ನಿನ್ನ ನೋಡ್ತಾ ಇಲ್ಲ, ಅಕಾ  ಅಲ್ಲಿ ಕುಂತ್ತಾನಲ ಆ ಹೈಸ್ಕೊಲ್ ಮಾಸ್ತರ ಅವನ ನೋಡಿ ನಗಾಕ ಹತ್ಯಾಳ, ಒಂದು ವಾರದಿಂದ  ಇಬ್ರು ಹಿಂಗ ಮಾಡಾಕಾ ಹತ್ಯಾರ ನೀನು ಇವತ್ತು ನೋಡಿ ಅಷ್ಟೆ, ಸುಮ್ಮನ ಪೋನ್ ಇಟ್ಟು ಮನಿಗೆ ಹೋಗು ಅವರಿಗೆ ಡಿಸ್ಟಬ೯ ಮಾಡಬ್ಯಾಡ"

Saturday, May 14, 2011

ಗೆಳತಿಗೊಂದು ಮನವಿ


ಹೊಗದಿರು ಗೆಳತಿ ಆಚೆ ಸೂಯಾ೯ಸ್ತದ ಸಮಯದಿ
ಮರೆತಾನು ಸೂಯ೯ ಮರಳುವುದ, ಕಂಡು ನಿನ್ನ

ಹೊಗದಿರು ಗೆಳತಿ ಆಚೆ ಬೆಳದಿಂಗಳಿನಲ್ಲಿ ರಾತ್ರಿ
ಬಂದಾನು ಚಂದ್ರ ಇಳಿದು ಧರೆಗೆ ಮಾತನಾಡಿಸಲು ನಿನ್ನ

ಹೊಗದಿರು ಗೆಳತಿ ಹೂವಿನ ತೊಟಕೆ ಎಂದು
ಮರೆತಾವು ದುಂಬಿ ಮಧುವ ಹಿರುವುದ, ಕಂಡು ನಿನ್ನ

ಹೊಗದಿರು ಗೆಳತಿ ದೇವಸ್ತಾನಕ್ಕೆ ಎಂದು
ಮರೆತಾನು ದೇವರು ಭಕ್ತರ, ಕಂಡು ನಿನ್ನ

ಹೊಗದಿರು ಗೆಳತಿ ಜನರ ಗುಂಪಿನ ಮಧ್ಯ
ಬಿಟ್ಟಾರು ನಿನಗೆ ದ್ರುಷ್ಠಿ, ಕಂಡು ನಿನ್ನ ಸೌಂಧರ್ಯ

ಹೊಗದಿರು ಗೆಳತಿ ಬಿಸಿಲಿನಲಿ ಆಚೆ
ಸೂಟ್ಟಾವು ಸೂಯ೯ನ ಕಿರಣಗಳು ನಿನ್ನ ಕೋಮಲ ತ್ವಚೆಯ

ಹೊಗದಿರು ಗೆಳತಿ ಮಳೆಯಲಿ ಎಂದು
ಮಳೆಯ ನೀರಿನಲಿ ನೆನೆದು ಆದಿತು ನಿನಗೆ ಶೀತ

ಬಾರದಿರು ಗೆಳತಿ ನನ್ನ ಕನಸಿನಲಿ ಎಂದು
ಹೂಗುವುದು ಪೂಣ೯ ರಾತ್ರಿಯ ನಿದ್ರೆ ಅಂದು, ಕಂಡು ನಿನ್ನ

Monday, May 9, 2011

ನನ್ನ "ಮನೆತನ"ದ ಇತಿಹಾಸ


               "ಇತಿಹಾಸ" ಯಾವಾಗಲು ನನ್ನ ನೆಚ್ಚಿನ ವಿಷಯ, ಮಾಡಲು ಏನು ಕೆಲಸವಿಲ್ಲದಿದ್ದಾಗ ಏಹುದಾದರು ವ್ಯಕ್ತಿಯ ಅಥವಾ ದೇಶದ ಇತಿಹಾಸ ಕೆದಕುತ್ತಲೆ ಇರುತ್ತೆನೆ, ಹೀಗೆಯೆ ಅದೂಂದು ದಿನ ಸುಮ್ಮನೆ ಕುಳಿತು ಯಾವುದಾದರು ಇತಿಹಾಸ ಕೇದಕೊಣ ಎಂದು ಯೋಚಿಸುತ್ತಾ ಕುಳಿತಾಗ ಕಣ್ಣಿಗೆ ಬಿದಿದ್ದು ನನ್ನ ಹೆಸರಿನ ಮುಂದೆ ಇದ್ದ "ನಂದಿಗಾವಿ" ಎಂಬ ಶಬ್ದ, ಸರಿ ಇಂದು ನಮ್ಮ ಮನೆತನದ ಇತಿಹಾಸ ತಿಳಿಯೊಣ, ನಮ್ಮ ಮನೆತನಕ್ಕೆ ನಂದಿಗಾವಿ ಎಂಬ ಹೆಸರು ಹೇಗೆ ಬಂತು, ನಮ್ಮ ಪೂವ೯ಜರ ಇತಿಹಾಸವೇನು ಎಂಬ ಪ್ರಶ್ನೆಗಳು ನನ್ನ ತಲೆ ಹೂಕ್ಕವು. ನೋಡೊಣ ಎಂದು ಅಪ್ಪ, ಅಮ್ಮನನ್ನು ಕೇಳಿದರೆ ಅವರಿಗೆ ನಮ್ಮ ಮುತ್ತಾತನ ಹೆಸರೆ ಸರಿಯಾಗಿ ಗೋತ್ತಿಲ.
              ನಮ್ಮ ಮನೆತನದ ಇತಿಹಾಸವನ್ನು ಯಾರಲ್ಲಿ ಕೇಳುವದು? ಹೇಗೆ ತಿಳಿಯುವದು? ಎಂಬ ಪ್ರಶ್ನೆಗಳು ನನ್ನನ್ನು ಕಾಡುತ್ತಿದವು, ಅದಕ್ಕೆ ಉತ್ತರವಾಗಿ ಅಂದೂಂದು ದಿನ ನಮ್ಮ ಮನೆಗೆ ಹೆಳವರು (ಹೇಳುವವರು) ಬಂದರು, ತಕ್ಷಣವೆ ಅವರ ಬಳಿ ಹೋಗಿ ದಯವಿಟ್ಟು ನಮ್ಮ ಮನೆತನದ ಇತಿಹಾಸದ ಬಗ್ಗೆ ಹೇಳಿ ಎಂದಾಗ ತಮ್ಮ ಬಟ್ಟೆ ಗಂಟಿನಲ್ಲಿ ಇಟ್ಟಿದ್ದ ಹಳೆಕಾಲದ ಎರಡು ಪುಸ್ತಕ ತೆರೆದು ಅದರಲ್ಲಿ ಏನೂ ಹುಡಕಿ ಸ್ವಲ್ಪ ಸಮಯದ ಬಳಿಕ ನನ್ನ ಮನೆತನದ ಇತಿಹಾಸ ಹೇಳಲು ಆರಂಬಿಸಿದರು ( "ಹೆಳವರು" ಇವರು ಅಲೆಮಾರಿ ಜನಾಂಗದವರು, ಕೆಲವು ಕುಂಟುಂಬಗಳ ಮಾಹಿತಿಗಳನ್ನು ತಲ-ತಲಾಂತರಗಳಿಂದ ಸಂಗ್ರಹಿಸಿ ಇಟ್ಟುಕೂಳ್ಳುವುದೆ ಅವರ ಕೆಲಸ, ವಷ೯ಕ್ಕೆ ಒಂದುಸಾರಿ ತಮಗೆ ಸಂಬಂದಿಸಿದ ಮನೆತನದವರಿಂದ ಏನಾದರು ದಾನ ಪಡೆದು ಮತ್ತೆ ತಮ್ಮ ಅಲೆಮಾರಿ ಪ್ರಯಾಣ ಮುಂದುವರೆಸುವರು).
             ಸುಮಾರು 300 ವಷ೯ಗಳಿಗು ಹಿಂದೆ ಗುಲ್ಬಗ೯ ಬಳಿ ಒಂದು ಚಿಕ್ಕ ಹಳ್ಳಿಯಲ್ಲಿ (ನನಗೆ ಆ ಹಳ್ಳಿಯ ಹೆಸರು ಮರೆತು ಹೊಗಿದೆ) ಒಂದು ಚಿಕ್ಕ ಕುಂಟುಂಬವಿತ್ತು, ಮೂದಲೆ ಬಿಸಿಲಿನ ನಾಡಾದ ಗುಲ್ಬಗ೯ ಜಿಲ್ಲಿಯಲ್ಲಿ 3-4 ವಷ೯ಗಳಿಂದ ಸತತವಾಗಿ ಬರಗಾಲ ಬಂದ ಕಾರಣ ಆ ಚಿಕ್ಕ ಕುಂಟುಂಬ ತನ್ನ ಸಮಸ್ತ ಆಸ್ತಿಯನ್ನಲ್ಲೆ ಮಾರಿ ಹೋಸ ಜೀವನದ ಅನ್ವೇಷಣೆಯಲ್ಲಿ ಮಧ್ಯ ಕನಾ೯ಟಕದತ್ತ ಪ್ರಯಾಣ ಬೆಳಸಿತು ಹೀಗೆ ವಲಸೆ ಬಂದ ಅ ಕುಂಟುಂಬ ನೆಲಸಿದ್ದು ಇಗಿನ ದಾವಣಗೇರೆ ಜಿಲ್ಲೆಯ ಹರಿಹರ ತಾಲ್ಲೂಕಿನ ತುಂಗಭದ್ರಾ ನದಿ ದಂಡೆಯಲ್ಲಿ ಇರುವ "ನಂದಿಗಾವಿ" ಎಂಬ ಗ್ರಾಮದಲ್ಲಿ, ನದಿಯ ಪಕ್ಕದಲ್ಲೆ ಜಮೀನು ಮತ್ತು ಮನೆ ಮಾಡಿಕೊಂಡಿದ್ದರು ಆದರೆ ಕೇಲವೆ ವಷ೯ಗಳಲ್ಲಿ ಆ ಕುಂಟುಂಬಕ್ಕೆ ಮತ್ತೆ ಆಘಾತ ಕಾದಿತ್ತು, ಈ ಬಾರಿ ಸುರಿದ ಬಾರಿ ಮಳೆಯಿಂದ ತುಂಗಭದ್ರಾ ನದಿಯಲ್ಲಿ ಪ್ರವಾಹ ಬಂದು ಜಮೀನು ಮನೆಯಲ್ಲಾ ನೀರುಪಾಲಾಯಿತು ಮತ್ತೆ ಆ ಕುಂಟುಂಬ ಬಿದಿಪಾಲಯಿತು, ಕೊನೆಗೆ ನಂದಿಗಾವಿ ಗ್ರಾಮವನ್ನು ತೋರೆದು ನೆಡೆದವರಿಗೆ ಕರೆದು ಆಶ್ರಮ ಕೋಟ್ಟ ಊರು ಇಂದಿನ ಹಾವೇರಿ ಜೀಲ್ಲೆಯ ರಾಣೆಬೆನ್ನುರು ತಾಲ್ಲೂಕಿನ ಗುಡ್ಡದಬೇವಿನಹಳ್ಳಿ ಗ್ರಾಮ, ನಂದಿಗಾವಿ ಎಂಬ ಗ್ರಾಮದಿಂದ ಬಂದಿದ್ದರಿಂದ ಗುಡ್ಡದಬೇವಿನಹಳ್ಳಿಯ ಜನ ಪ್ರೀತಿಯಿಂದ "ನಂದಿಗಾವಿಯವರು" ಎಂಬ ಅಡ್ಡ ಹೆಸರಿನಿಂದ ಕರೆಯಲಾರಂಬಿಸಿದರು ಮುಂದೆ ಅದೆ ನಮ್ಮ ಮನೆತನದ ಹೆಸರಾಯಿತು.
           ಅಂದು ಕೇವಲ ಒಂದು ಚಿಕ್ಕ ಕುಂಟುಂಬವಾಗಿದ್ದ ಆ ಮನೆತನ ಇಂದು ಹಲವು ಕುಂಟುಂಬಗಳಾಗಿ ಮಾಪ೯ಟ್ಟಿದೆ, ಗುಡ್ದದಬೇವಿನಹಳ್ಳಿಯಲ್ಲಿಯೆ ನಂದಿಗಾವಿ ಮನೆತನಕ್ಕೆ ಸೇರಿದ ಸುಮಾರು 25 ಮನೆಗಳಿದ್ದು ಅಷ್ಟೆ ಅಲ್ಲದೆ ಕೆಲಸದ ಮೇಲೆ ಹೋಗಿ ಅನೇಕ ಕುಂಟುಂಬಗಳು ರಾಣೇಬೆನ್ನುರು,ಹಾವೇರಿ, ಹರಪನಹಳ್ಳಿ, ಹುಬಳ್ಳಿ, ಬೆಂಗಳೂರು, ಪುಣೆ ಮತ್ತು ವಿದೇಶಗಳಲ್ಲೂ ನೆಲೆಸಿದ್ದಾರೆ.
          ಇದು ಹೇಳವರು ಹೇಳಿದ ನನ್ನ ಮನೆತನದ ಇತಿಹಾಸ ಇದು ಎಷ್ಟೂ ನಿಜವೂ ದೇವರೆ ಬಲ್ಲ, ಆದರೆ ಹರಿಹರದ ಬಳಿ ತುಂಗಭದ್ರಾ ನದಿದಂಡೆಯಲ್ಲಿ ನಂದಿಗಾವಿ ಎಂಬ ಗ್ರಾಮ ಇರುವದು ನಿಜ, ಕಳೆದ ತಿಂಗಳು ಕೂತುಹಲದಿಂದ ಅಲ್ಲಿಗೆ ಹೋಗಿ ಬಂದಿದ್ದೆ, ಅದಕ್ಕೆ ನನಗೆ ಹೇಳವರ ಮಾತಿನ ಮೇಲೆ ನಂಬಿಕೆ ಬಂದಿದ್ದು, ಆದರು ನಿಜವಾದ ಇತಿಹಾಸ ಆ ದೇವರೆ ಬಲ್ಲ.

Wednesday, May 4, 2011

ಒಂದು ಮುಂಜಾವಿನಲಿ.....


                                                     ಬೆಳಗಿನ 5 ಗಂಟೆ.... ಇನ್ನು ಸೂಯ೯ ಉದಯಿಸಿಲ್ಲ ಆಗಲೆ ನಮ್ಮ ಓಣಿಯ ಕೋನೆಯಲ್ಲಿ ಇರುವ ಮುಸ್ಲಿಂರ ಮನೆಯ ಕೋಳಿಗಳು ಕೂಗಲು ಪ್ರಾರಂಬಿಸುತ್ತವೆ, ಅವುಗಳ ಕೂಗನ್ನು ಕೇಳಿ ನಮ್ಮ ಮನೆಯ ಎರಡು ನಾಯಿಗಳು ಬೋಗಳಲು ಆರಂಬಿಸುತ್ತವೆ ಅದರಲ್ಲೂ ನಮ್ಮ ಸಣ್ಣ ನಾಯಿಗಂತು ಅವರ ಮನೆಯ ಕೋಳಿಗಳು ಅಂದರೆ ಪಂಚಪ್ರಾಣ ಎಷ್ಟೊ ಸಾರಿ ಅವುಗಳನ್ನು  ಬೀಟೆಯಾಡಿ ಭಜ೯ರಿ ಬೋಜನ ಮಾಡಿದೆ, ನಾಯಿಗಳ ಬೋಗಳುವಿಕೆ ಕೇಳಿ ಅಮ್ಮ ಏದ್ದು ಅವುಗಳನ್ನು ಆಚೆಗೆ ಓಡಿಸುತ್ತಳೆ, ಆಗಲೆ  ಸಮಯ 5.40 ಪೂವ೯ದಲ್ಲಿ ಸೂಯ೯ನ ಆಗಮನದ ಸೂಚನೆಯಲ್ಲಿ ಅಲ್ಪ ಬೇಳಕು ಮೂಡಲು ಆರಂಬಿಸುತ್ತದೆ, ಹೋಲದಲ್ಲಿ ಕೆಲಸ ಮಾಡಲು ಹೋಗುವ ರೈತವಗ೯ದ ಜನರು ತಮ್ಮ ದೈನಂದಿನ ಬೆಳಗಿನ ಕಾಯ೯ಗಳನ್ನು ಆರಂಬಿಸುತ್ತಾರೆ.
                        
               ಸಮಯ 6..... ಭಾನಂಗಳದಲ್ಲಿ ಕೆಂಬಣ್ಣದ ಓಕಳಿ ಆಡುತ್ತಾ ಬಾಸ್ಕರನ ಆಗಮನವಾಗುತ್ತೆ, ಊರ ಸೇವಕ ಈರಪ್ಪ ನಳಗಳಲ್ಲಿ ನೀರು ಬಿಡಲು ಮೋಟಾರ್ ಆನ್ ಮಾಡಲು ಬೇಟ್ಟದೆಡೆಗೆ ಹೊಗುತ್ತಾನೆ, ಊರಿನ ಬಹುತೇಕ ಜನರು ಎದ್ದು ದೈನಂದಿನ ಕಾಯ೯ಯದಲ್ಲಿ ಮುಗ್ನರಾಗುತ್ತಾರೆ, 6.30ಕ್ಕೆ ನಳದಲ್ಲಿ ನೀರು ಬರಲು ಆರಂಭ, ಸ್ವಂತ ನಳ ಇಲ್ಲದ ಜನರು ನೀರಿಗಾಗಿ ಸಾವ೯ಜನಿಕ ನಳಗಳ ಬಳಿ ಜಮಾಯಿಸುತ್ತಾರೆ, ಆರಂಭದಲ್ಲಿ ನಗುಮುಖದೊಂದಿಗೆ ನಳದ ಬಳಿ ಆಗಮಿಸುವ ಮಹಿಳೆಯರು ಮಾತಿಗೆ ಮಾತು ಬೆಳಸಿ ಕೋನೆಗೆ ಮೆಲ್ಲಗೆ ಜಗಳ ಆರಂಬಿಸುತ್ತಾರೆ, ಅದರಲ್ಲು ಬಾಯಿ ಬಡುಕಿಯರಾದ ಮೂಲೆ ಮನೆಯ ಪಾರವ್ವ, ಪಕ್ಕದ ಮನೆಯ ಕಮಲವ್ವ ಮತ್ತು ಗಿರಿಜವ್ವ ಇದ್ದರಂತು ಮುಗಿದೆ ಹೊಯಿತು ಅವರ ಬಾಯಿಯಲ್ಲಿ ಬರುವ ಆ ಅಪ್ಪಟ್ಟ ಗ್ರಾಮ್ಯ ಬಾಷೆಯ ಸಂಸ್ಕ್ರುತ ಮಾತುಗಳನ್ನು ಕೇಳಿ ನಮ್ಮ ಕಿವಿಗಳು ಪಾವನವಾಗುತ್ತವೆ, ನೀರು ನಿಲ್ಲುವ ಸಮಯಕ್ಕೆ ಅಧ೯ ಸ್ನಾನವನ್ನು ಮುಗಿಸಿರುತ್ತಾರೆ, ಕೋನೆಗೆ ಏನು ಆಗಿಲ್ಲ ಅನ್ನುವಂತೆ ನಗು-ನಗುತ್ತಾ ಮನೆಗೆ ಹೋಗುತ್ತಾರೆ, ಅಷ್ಟರಲ್ಲೆ ಊರ ಪುಜಾರಪ್ಪ ಊರ ದೇವರಾದ ಬಸವಣ್ಣನಿಗೆ ತನ್ನ ಪೂಜೆಯನ್ನು ಅಪಿ೯ಸಿರುತ್ತಾನೆ.
                    ಸಮಯ 7.... ಇದು ನಾನು ನೀದ್ರೆಯಿಂದ ಎಳುವ ಸಮಯ, ಎದ್ದವನೆ ಬಚ್ಚಲು ಮನೆಗೆ ಹಲ್ಲುಜಲ್ಲು ಹೋಗುತ್ತೆನೆ ಅಲ್ಲಿ ನಲ್ಲಿಯಲ್ಲಿ ನೀರು ಬರುತ್ತಿರುತ್ತದೆ, ಆ ನೀರಿನಲ್ಲಿ ಆಟ ಆಡುತ್ತಾ ಮುಖ ತೋಳೆಯುವದೆ ಒಂದು ಮಜಾ, ನಂತರ ಟೀ ಕುಡಿಯುತ್ತಾ ಪೇಪರನವನಿಗಾಗಿ ಕಾಯುವದೆ ನನ್ನ ಕೆಲಸ, ಎಂದು ಸಮಯಕ್ಕೆ ಸರಿಯಾಗಿ ಬಾರದ ಆತ ವಿಷೇಶ ದಿನಗಳಂದು ಇನ್ನು ಲೇಟ್, 8.30ಕ್ಕೆ ಕೂಲಿಗೆ ಹೊಗುವ ಮತ್ತು ರೈತಾಪಿ ಜನ ತಮ್ಮ ಭುತ್ತಿಯ ಗಂಟುಗಳೊಂದಿಗೆ ಎತ್ತಿನ ಬಂಡಿಯಲ್ಲಿ ಹೋಲಗಳತ್ತ ತಮ್ಮ ಪ್ರಯಾಣಾ ಬೆಳಸುತ್ತಾರೆ, ಆ ಎತ್ತಿನ ಗಂಟೆಗಳ ಸದ್ದು, ಬಂಡೆಯ ಸದ್ದು ಕೆಳುವುದೆ ಚನ್ನ.
                    ಸಮಯ 9.... ಇಗ ನಮ್ಮ ಊರಿಗೆ ಸಕಾ೯ರಿ ಬಸ್ ಬರುವ ಸಮಯ, ಬಣ್ಣ-ಬಣ್ಣದ ಸಮವಸ್ತ್ರ ಧರಿಸಿದ ಚಿಕ್ಕ ಮಕ್ಕಳು, ಗರಿ-ಗರಿ ವಸ್ತದರಿಸಿದ ಹುಡುಗರು ಮತ್ತು ಅಂದ-ಚಂದದ ಚೂಡಿದಾರ ದರಿಸಿದ ಹುಡಗಿಯರು ಹೀಗೆ ಎಲ್ಲರು ಪಕ್ಕದ ಊರಿನ ಕಾನ್ವೆಂಟ್, ಶಾಲೆ ಮತ್ತು ಕಾಲೇಜ್ ಗೆ ಹೂಗಲು ತಯಾರಾಗಿ ಬಸ್ ಗಾಗಿ ಕಾಯುತ್ತಿರುತ್ತಾರೆ, ಎಂದಿಗು ಸರಿಯದ ಸಮಯಕ್ಕೆ ಬಾರದ ಬಸ್ ಅಧ೯ಗಂಟೆ ತಡವಾಗಿ ಬಂದು ಎಲ್ಲ ಮಕ್ಕಳನ್ನು ತನ್ನ ಒಡಲಿನಲ್ಲಿ ತುಂಬಿಕೊಂಡು ಭರ್ರೆಂದು ಧುಳು ಎಬ್ಬಿಸುತ್ತಾ ಮರೆಯಾಗುತ್ತದೆ.
          
                 ಸಮಯ 10.... ಇಗ ನಮ್ಮುರಿನ ಪರಮ ಸೋಮಾರಿ "ಮಲ್ಲಪ್ಪ" ನಿದ್ರೆಯಿಂದ ಏಳುವ ಸಮಯ ಮಹಾನ್ ಸೋಮಾರಿ ತನ್ನ ಹೆಂಡತಿ ಮಕ್ಕಳನ್ನು ಗೋಳು ಹೋಯಿಕೋಳ್ಳುವದೆ ಅವನ ಕಾಯಕ, ನಂತರ 10.30ಕ್ಕೆ ಬಣಕಾರ ಅಜ್ಜ ತಮ್ಮ ಮನೆಯ ಎಮ್ಮೆಗಳನ್ನು ಮೇಯಿಸಲು ಗುಡ್ಡಕ್ಕೆ ಹೋಡೆದುಕೋಂಡು ಹೋಗುವೂದರೊಂದಿಗೆ ನಮ್ಮುರಿನ ಮುಂಜಾವಿನ ಸಂಬ್ರಮಕ್ಕೆ ತೆರೆ ಬಿಳುತ್ತದೆ.

Tuesday, May 3, 2011

ಎಲ್ಲಿಗೆ ಈ ಪಯಣ...? ಯಾವುದು ದಾರಿ...?



               ಜೀವನ ಯಾವಗಲು ಹರಿಯುವ ನೀರಿನಂತೆ ಪ್ರತಿದಿನವು ಬದಲಾವಣೆಗಳು ನಡೆಯುತ್ತಲೆ ಇರುತ್ತವೆ ಬಾಲ್ಯ, ಯವ್ವನ, ಮುಪ್ಪು ಹೀಗೆ ಕಾಲ ಬದಲಾಗುತ್ತಲೆ ಇರುತ್ತದೆ, ನನ್ನ ಜೀವನದಲ್ಲು ಈಗ ಬದಲಾವಣೆಯ ಕಾಲ ಇದುವರೆಗು ವಿಧ್ಯಾಥಿ೯ಯಾಗಿದ್ದ ನಾನು ಕೇಲವೆ ದಿನಗಳಲ್ಲಿ ಪ್ರೊಪೆಷನಲ್ ಲೈಪ್ ಗೆ  ಕಾಲಿರುಸುತ್ತಿದ್ದೆನೆ.
              ಹುಟ್ಟಿದು ಒಂದು ಊರು, ಬೆಳದಿದ್ದು ಒಂದು ಊರು, ಓದಿದ್ದು ಹಲವು ಊರುಗಳು, ಮುಂದೆ ಕೆಲಸ......? ಯಾವ ಊರೂ ತಿಳಿಯದು.... ಜೀವನವೆ ಒಂದುತರ ಪಯಣದ ಹಾಗೆ ಇದುವರೆಗು ನನಗೆ ಸೂಕ್ತವೆನಿಸದ ಹಾಗು ಹಿರಿಯರು ತೋರಿಸಿದ ದಾರಿಗಳಲ್ಲಿ ನನ್ನ ಪ್ರಯಾಣ ನೆಡಸಿದ್ದೆ ಆದರೆ ಇಗ ಒಂದು ರಿತಿ ಕವಲು ದಾರಿಗಳ ಮಧ್ಯ ನಿಂತಿದ್ದೆನೆ ಯಾವ ಮಾಗ೯ ಆಯ್ಕೆ ಮಾಡಿಕೊಳ್ಳ ಬೇಕೂ ತಿಳಿಯುತ್ತಿಲ್ಲ, ಹಿರಿಯರು ಕೊಡ ಆಯ್ಕೆಯನ್ನು ನನಗೆ ಬಿಟ್ಟಿದ್ದಾರೆ ಹಲವು ದಾರಿಗಳು, ಎಲ್ಲವು ನೋಡಲು ಚನ್ನ ಆದರೆ ಯಾವುದು ಸೂಕ್ಕ ತಿಳಿಯುತ್ತಿಲ್ಲ, ಮನದಲ್ಲಿ ಒಂದೇ ಪ್ರಶ್ನೆ "ದಾರಿಯಾವುದಯ್ಯ ಮುಂದಿನ ಪಯಣಕ್ಕೆ? ಯಾವ ದಾರಿ ಎಲ್ಲಿಗೆ ಹೋಗುತ್ತದೂ ತಿಳಿಯದಾಗಿದೆ. ಈ ಜೀವನವೆಂಬ ದಾರಿಯಲ್ಲಿ ಮುಂದಿನ ಪಯಣ ಎಲ್ಲಿಗೂ?... ಇದುವರೆಗು ನನಗೆ ಬಾಸ್  ಆಗಿದ್ದವರು ನಮ್ಮ ಸರ್/ಮ್ಯಾಡಮ್ ಗಳು, ಆದರೆ ಅವರು ಹೇಳಿದ ಯಾವುದೆ ಮಾತುಗಳನ್ನು ಸರಿಯಾಗಿ ಪಾಲಿಸಲೆ ಇಲ್ಲ ಆದರೆ ವ್ರುತ್ತಿ ಜೀವನದಲ್ಲಿ ಬಾಸ್ ಮಾತುಗಳನ್ನು ಸರಿಯಾಗಿ ಪಾಲಿಸದೆ ಇದ್ದರೆ ಕೆಲಸಕ್ಕೆ ಆಪತ್ತು, ಅಪ್ಪಟ ಸೋಮಾರಿಗಳಾದ ಮತ್ತು ಭೇಜವ್ದಾಬಾರಿಗಳಾದ ನನ್ನಂತವರಿಗೆ ಅದ್ಯಾವ ಕಂಪನಿಯಲ್ಲಿ ಅದ್ಯಾವ ಬಾಸ್ ಕೆಲಸ ಕೋಡುತ್ತಾನೊ ಕಾದು ನೋಡ ಬೇಕು, ನಾನು ತೆಗೆದಿರುವ ಅಂಕಗಳಿಗೆ ಕ್ಯಾಂಪಸ್ ಆಯ್ಕೆಯಾಗಲಿ ಅಥವಾ ಸರಕಾರಿ ಕೆಲಸವಾಗಲಿ ಕೇವಲ ಕನಸು, ಅದಕ್ಕೆ ನನ್ನ ಮುಂದಿನ ಜೀವನದ ಬಗ್ಗೆ ನನಗೆ ತುಂಬಾ ಕುತುಹಲವಿದೆ ನೋಡೂಣಾ ಏನಾಗೂತ್ತೊ.....
          ದೇವರೇ ಇದುವರೆಗು ನಾನು ನಿನ್ನಲ್ಲಿ ಕೇಳಿದಕ್ಕಿಂತ ಹೆಚ್ಚಿನದನ್ನೆ ನನಗೆ ನೀಡಿರುವೆ, ಈ ಸಾರಿ ಕೂಡ ನೀನು ನನ್ನ ಜೋತೆ ಇರುತ್ತಿ ಅಲ್ವಾ? ನಾನೇನು ಕೈ ತುಂಬಾ ಸಂಬಳ, ಎಮ್ ಎನ್ ಸಿ ಕಂಪನಿಯಲ್ಲಿ ಕೆಲಸ ಕೇಳಲ್ಲ, ಒಂದು ಚಿಕ್ಕ ಕಂಪನಿಯಲ್ಲಿ ಕೆಲಸ, ಒಳ್ಳೆ ಬಾಸ್ ಮತ್ತು ಅಪ್ಪ ಕೊಡುವ ಪಾಕೇಟ ಮನಿಗಿಂತ ಸ್ವಲ್ಪ ಜಾಸ್ತಿ ಸಂಬಳ ಅಷ್ಟೆ ಸಾಕು.... ದೇವರೆ ನನ್ನ ಆಸೆ ಇಡೇರುಸುತ್ತಿ ಅಲ್ವಾ?


Wednesday, April 20, 2011

ಜನ್ಮದಾತರಿಗೊಂದು ನಮನ




ಅಮ್ಮ... ಜನ್ಮ ಕೊಟ್ಟವಳು ನೀನು ನನಗೆ
ನಮ್ಮೆಲ್ಲರ ಮೇಲೆ ಪ್ರಾಣವನ್ನೆ ಇಟ್ಟವಳು ನೀನು,
ತುಟಿಯ ಮೇಲೆ ಸದಾ ನಗು, ಕಣ್ಣಿನಲ್ಲಿ ಕನಸುಗಳು,
ಮಕ್ಕಳ ಒಂದು ಮುಗ್ದ ನಗುವಿನ್ನಲ್ಲಿ
ನಿನ್ನೆಲ್ಲ ನೋವು ಮರೆತವಳು.

ಅಪ್ಪ ಹುಟ್ಟು-ಹೆಸರು ಕೊಟ್ಟವರು ನೀವು
ನಿಮ್ಮ ಕೈ ಬೆರಳು ಹಿಡಿದು  ದೊಡ್ಡವನಾದೆ
ಕೆಟ್ಟ ಮತ್ತು ಒಳ್ಳೆದರ ನಡುವಿನ ಅಂತರ ತಿಳಿಸಿದವರು ನೀವು
ಎಷ್ಟೊಂದು ಋಣ ನಿಮ್ಮದು ನನ್ನ ಮೇಲೆ
ತಿರಿಸುವದು ಕಷ್ಟ ಅದನ್ನು ಈ ಜನ್ಮದಲ್ಲಿ

ನೀವು ಯಾವಾಗಲು ಹೀಗೆ ಚನ್ನಾಗಿರಿ
ನನ್ನ ಪ್ರಾಥ೯ನೆ ಇದು, ದೇವರೆ ನನ್ನದೊಂದು
ವಿನಂತಿ ನನ್ನ ಪಾಲಿನ ಸುಖ ಸಂತಸ ಆಯ್ಯೊಷ್ಯವನ್ನು
ದಯಪಾಲಿಸು ಅವರಿಗೆ, ಎಂದಿಗು ಅಳಿಯದಿರಲಿ
ಸಖ-ಸಂತಸ ಅವರ ಬಾಳಲ್ಲಿ

Friday, April 15, 2011

ಏನಾಗಿದೆ ಕನಾ೯ಟಕದ ಜನತೆಗೆ?




ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ...
                    ಅಣ್ಣಾವ್ರು "ಸತ್ಯ ಹರಿಶ್ಚಂದ್ರ"  ಚಿತ್ರದಲ್ಲಿ ಬರುವ ಮೇಲಿನ ಸಾಲುಗಳು ಎಷ್ಟೊಂದು ಅಥ೯ಪೂಣ೯ವಾಗಿವೆ, ಹುಟ್ಟು ಸಾವಿನ ಮಧ್ಯದ ನಾಲ್ಕುದಿನದ ಈ ಪಯಣದಲ್ಲಿ ಜಾತಿ-ಜಾತಿ ಎಂದು ಜನರು ಯಾಕೆ ಹೋಡೆದಾಡುತ್ತಾರೂ ಆ ದೇವರೆ ಬಲ್ಲ....
          ಏನಾಗಿದೆ ನಮ್ಮ ಕನಾ೯ಟಕದ ಜನತೆಗೆ? ಯಾಕಿಷ್ಟು ಜಾತಿ ಎಂಬ ಮತಿಭ್ರಮಣೆಯಲ್ಲಿ ಕನಾ೯ಟಕದ ಜನತೆ ಮುಳಗಿದ್ದಾರೆ? ೯೦ರ ದಶಕದ ಅಂತ್ಯದಲ್ಲಿ ಯಾರೂ ಕೆಲವು ಗೋಮುಖ ವ್ಯಾಘ್ರ ರಾಜಕಾರಣಿಗಳು ಭಿತ್ತಿದ ಜಾತಿ ಎಂಬ ವಿಷ ಬೀಜ ಇಂದು ಕನಾ೯ಟಕದ ತುಂಬ ತನ್ನ ವಿಷದ ಬಾಹುಗಳನ್ನು ಚಾಚಿದೆ, ಅನಕ್ಷರಸ್ಥರಿಗಿಂತ ಅಕ್ಷರಸ್ಥರೆ ಇಂದು ಈ ವಿಷವತು೯ಲದ ಜಾಲಕ್ಕೆ ಬಿದ್ದಿದ್ದಾರೆ.
          ಕೇವಲ ಒಂದು ಸಾರಿ ಕನಾ೯ಟಕದ ಇತಿಹಾಸವನ್ನು ನೋಡಿ ಎಂತಹ ಮಹಾನ್ ಪುರುಷರು ಹುಟ್ಟಿದ ನಾಡಿದು ೧೨ನೇ ಶತಮಾನದಲ್ಲೆ ಬಸವಣ್ಣನವರು ಜಾತಿ ಪಂಗಡಗಳನ್ನು ಹೋಗಲಾಡಿಸಬೇಕು ಎಂದು ಅಂತರ ಜಾತಿ ವಿವಾಹ ಆರಂಭಿಸಿದರು ಆದರೆ ಕೊನೆಗೆ ಆದದ್ದು ಏನು? ನಮ್ಮ ಸಮಾಜ ಅವರನ್ನೇ ಒಂದು ಜಾತಿಗೆ ಸೀಮಿತಗೋಳಿಸಿ ಅವರನ್ನೇ ಆ ಜಾತಿಯ ಸಂಸ್ಥಾಪಕರಂತೆ ಬಿಂಬಿಸಿದೆ.
             ಇಂದು ಕನಾ೯ಟಕದಲ್ಲಿ ಆಗುತ್ತಿರುವುದಾದರು ಏನು? ಹಿಂದು-ಮುಸ್ಲಿಂ ಅಥವಾ ಹಿಂದು-ಕ್ರಿಶ್ಚಿಯನ್ ರ ಗುದ್ದಾಟ್ಟವೆ? ಇಲ್ಲ! ನೆಡೆಯುತ್ತಿರುವದು ಹಿಂದು-ಹಿಂದುಗಳ ನಡುವೆ ಪೈಪೋಟಿ, ನಾನು ಮೇಲು ನಾನು ಮೇಲು ಎಂಬ ಭ್ರಮೆ, ಇದಕ್ಕೆಲ್ಲ ಕಾರಣ ನಮ್ಮ ಭ್ರಷ್ಟ ರಾಜಕಾರಣಿಗಳು. ನೋಡಿ ನಮ್ಮ ಇಂದಿನ ಕನಾ೯ಟಕದ ಹಣೆಬರಹ ಉತ್ತರಕ್ಕೆ ಲಿಂಗಾಯತರು, ದಕ್ಷಿಣಕ್ಕೆ ಒಕ್ಕಲಿಗರು, ಆ ಕಡೆ ಕುರುಬರು. ಈ ಕಡೆ ಪಂಚಮಶೀಲರು, ಮೇಲೆ ಬೆಸ್ತರು, ಕೆಳಗೆ ಕಮ್ಮಾರರು ಅಬ್ಬಬ್ಬಾ ಎಷ್ಟು ಕುಲಗಳು, ಎಲ್ಲರು ತಿನ್ನುವುದು ಹೊಟ್ಟೆಗೆ ಅನ್ನವನ್ನೇ, ಸತ್ತಾಗ ಸೇರುವದು ಮಣ್ಣನ್ನೇ.... ಯಾಕೆ ಭ್ರಷ್ಟ ರಾಜಕಾರಣಿಗಳನ್ನು ನಮ್ಮವರು ನಮ್ಮವರು ಎಂದು ಸಲಹುತ್ತಿರುವಿರಿ? ಪ್ರತಿಬಾರಿ ಮತದಾನ ಮಾಡುವಾಗ ಜಾತಿಯನ್ನು ಯಾಕೆ ನೋಡುತ್ತಿರಿ? ದಯವಿಟ್ಟು ಅಭಿವ್ರುದ್ಧಿಗೆ ಮತ್ತು ಒಳ್ಳೆಯ ಅಭ್ಯಥಿ೯ಗೆ ಬೆಂಬಲ ನೀಡಿ.
            ನಮ್ಮವರು ನಮ್ಮವರು ಎಂದು ಮತಹಾಕಿ ಕಳುಹಿಸಿದ ನಿಮ್ಮ ಕುಲದ ಅಭ್ಯಥಿ೯ಗಳು ನಿಮಗೆ ಏನು ಮಾಡಿದ್ದಾರೆ? ಒಂದು ಸಾರಿ ಯೋಚಿಸಿ ... ಸಂಪೂಣ೯ ಅಧಿಕಾರ ಇದ್ದರೂ ಕೂಡ ಉತ್ತರ ಕನಾ೯ಟಕದ ಜನತೆ ಪ್ರವಾಹದಲ್ಲಿ ಇದ್ದಾಗ ಅವರ ಕಣ್ಣೀರು ಒರೆಸಿದರೇ? ನೈಸ್ ರಸ್ತೆಯಲ್ಲಿ ಜಾಗಕಳೆದುಕೊಂಡ ಜನರಿಗೆ ಸರಿಯಾದ ಪರಿಹಾರ ದೊರೆತಿದೆಯೇ? ನಿಮ್ಮವರೆ ವಷ೯ಗಳವರೆಗೆ ಅಧಿಕಾರದಲ್ಲಿ ಇದ್ದರೂ ಪರಿಹಾರ ನಿಡಿದರೇ? ಅಷ್ಟೇ ಏಕೆ ಪಂಚಮಶೀಲ ಅಥವಾ ಕುರಬ ಜನಾಂಗದ ನಾಯಕರು ಅಧಿಕಾರಕ್ಕೆ ಬಂದಾಗ ಅವರೇನಾದರು ತಮ್ಮ ಕುಲಭಾಂದವರ ಏಳಿಗೆಗೆ ಶ್ರಮಿಸಿದ್ದಾರೆಯೇ?..... ಉತ್ತರ ಒಂದೇ ಇಲ್ಲ... ಇಲ್ಲ... ಇಲ್ಲ! ಹಾಗಿದ್ದರೆ ಪದೇ ಪದೇ ನೀವು ನಮ್ಮವರು ನಮ್ಮವರು ಎಂಬ ಭ್ರಮೆಯಲ್ಲಿ ಸಿಲುಕಿ ಯಾಕೇ ಹೀಗೆ ಮೋಸ ಹೋಗುತ್ತಿರಾ? ಇರುಳು ಕಂಡ ಭಾವಿಗೆ ಹಗಲು ಏಕೆ ಬಿಳುತ್ತೀರಿ?    
             ಕುವೆಂಪುರವರ "ವಿಶ್ವ ಮಾನವ" ಸಂದೇಶವನ್ನು ಒಂದು ಸಾರಿ ಓದಿ, ಕೇವಲ ಕುಲ ಜಾತಿಗಳೆ ಎಲ್ಲಾ ಅಲ್ಲ, ಮತಪಡಿಯಲು ಅಭ್ಯಥಿ೯ಗೆ ಜಾತಿಯೊಂದೆ ಅಹ೯ತೆಯಲ್ಲ, ಮುಂದೆ ನೀವು ಅಧಿಕಾರ ನೀಡುವಾಗ ಅಭ್ಯಥಿ೯ಯ ನೈಜ ಅಹ೯ತೆಯನ್ನು ಗಮನಿಸಿ.ಅವನು ಯಾವುದೇ ಕುಲ ಜಾತಿಯವನಾಗಿರಲಿ ಚಾರಿತ್ರ್ಯ ಶುದ್ಧವಾಗಿದ್ದರೆ  ಅವನನ್ನು ಬೆಂಬಲಿಸಿ.
   ಇದಾಗಲೇ ಕನಾ೯ಟಕ ದಕ್ಷಿಣ ಭಾರತದ ಬಿಹಾರ್ ಆಗುವತ್ತ ಸಾಗಿದೆ. ದಯವಿಟ್ಟು ಅದನ್ನು ತಪ್ಪಿಸಿ, ಕನಾ೯ಟಕದ ಜನತೆ ದಡ್ಡರಲ್ಲ! ಅನ್ಯಾಯ, ಅಕ್ರಮಗಳನ್ನು ಎಂದೂ ಸಹಿಸುವುದಿಲ್ಲ! ಎಂಬುದನ್ನು ರಾಜಕಾರಣಿಗಳಿಗೆ ಹಾಗೂ ಇತರ ರಾಜ್ಯಗಳಿಗೆ ತೋರಿಸಿ. ಮುಂದಿನ ಸಾರಿ ಅಧಿಕಾರ ನೀಡುವಾಗ ಒಂದು ಸಲ ಯೋಚಿಸಿ.... ನೆನಪಿರಲಿ ಪ್ರಪಂಚದಲ್ಲಿ ಇರುವದು ಒಂದೇ ಜಾತಿ, ಒಂದೇ ಕುಲ ಅದು ಮಾನವ ಕುಲ.............!


Sunday, April 10, 2011

ಮನದಾಳದ ಮಾತು


ಹೇಳುವಾಗ ಗೆಳಯ ತನ್ನ ಗೆಳತಿಯ ಬಗ್ಗೆ
ಅನಿಸುತ್ತದೆ ನನಗು ಹೇಳಬೇಕು ಅವರಿಗೆ ನಿನ್ನ ಬಗ್ಗೆ
ಆದರೆ ನೆನಪಾಗಿ ನಿನಗೆ ಕೊಟ್ಟ ಮಾತು 
ಉಳಿಯುವವು ಎಲ್ಲಾ ಮಾತುಗಳು ಮನಸ್ಸಿನಲ್ಲೆ..


ಹೇಳುವಾಗ ಗೆಳಯ ತನ್ನ ಗೆಳತಿಯ
ಕೋಪ ಜಗಳಗಳ ಬಗ್ಗೆ 
ನನ್ನಲ್ಲಿ ಅನಿಸುತ್ತದೆ ನನಗೆ ಹೇಳಬೇಕು ಅವರಿಗೆ
ನಿನ್ನ ಸೌಮ್ಯತೆ ಸಹನೆಗಳ ಬಗ್ಗೆ..


ಹೊಸ ಬಟ್ಟೆ ಹಾಕಿದ ತನ್ನ ಹುಡಗಿಯ ಸೌಂದರ್ಯದ ಬಗ್ಗೆ
ಹೇಳುವಾಗ ಗೆಳಯ ನನ್ನ ಬಳಿ
ಹೇಗೆ ಹೇಳಲಿ ಅವನಿಗೆ ನಾನು 
ಸೀರೆ ಉಟ್ಟಾಗಿನ ನಿನ್ನ ಆ ವಯ್ಯಾರ ಅಂದ ಚಂದದ ಬಗ್ಗೆ...


ಕಿಟಕಿಯ ಪಕ್ಕನಿಂತು  ಸುಮ್ಮನೆ
ನಗುವಾಗ ನಾನೊಬ್ಬನೆ ಕೇಳುತ್ತಾನೆ ಗೆಳಯ
ಕಾರಣ ಏನೆಂದು? ಹೇಗೆ ಹೇಳಲಿ ಅವನಿಗೆ 
ನನ್ನ ಈ ನಗುವಿನ ಹಿಂದಿನ ಕಾರಣ ನೀನೆಂದು..


ಎಂದೂ ಮುದ್ದೆ ಇಷ್ಟಪಡದ ನಾನು ತಿನ್ನುವಾಗ
ಅಂದು ಕಷ್ಟಪಟ್ಟು ರಾಗಿ ಮುದ್ದೆ ಕೇಳುತ್ತಾನೆ ಗೆಳಯ
ಯಾವಾಗಿನಿಂದಲೊ ನಿನಗೆ ಇದು ಇಷ್ಟ ಎಂದು
ಹೇಗೆ ಹೇಳಲಿ ಅವನಿಗೆ ನಾನು ಇದು ನಿಮ್ಮೂರಿನ ವಿಶೇಷ ಭೋಜನ ಎಂದು


ಇತ್ತೀಚ್ಚಿಗೆ ಪ್ರತಿ ವಿಷಯಕ್ಕೂ ಅಮ್ಮನ ಅಭಿಪ್ರಾಯ ಕೇಳುವದನ 
ನೋಡಿ ನಾನು ಕೇಳುತ್ತಾನೆ ಗೆಳಯ ಇದೇನೊ
ಹೊಸ ಬದಲಾವಣೆ ನಿನ್ನಲ್ಲಿ? ಹೇಗೆ ಹೇಳಲಿ
ಅವನಿಗೆ ನಾನು ಈ ಬದಲಾವಣೆಯ ಹಿಂದಿನ ಕಾರಣ ನೀನೆಂದು..


ಹೇಳುವಾಗ ಗೆಳಯ ನನ್ನ ಬಳಿ ತನ್ನ
ವಿರಹ ವೇದನಯ ಬಗ್ಗೆ ಹೇಗೆ 
ಹೇಳಲಿ ಅವನಿಗೆ ನಾನು ನನ್ನದೆಯ ನೋವ
ಜೀವನ ಪೂತಿ೯ ನಿನ್ನ ಅಗಲಿ ಬಾಳುವ ಸಜೆಯ.

Saturday, April 9, 2011

ಎಂದು ಮರೆಯಲಾಗದವರು


      
     ನನಗೆ ಶಿಕ್ಷಕರೆಂದರೆ ಅಪಾರ ಪ್ರೀತಿ ಮತ್ತು ಗೌರವ, ನಾನು ಒಬ್ಬ ಶಿಕ್ಷಕನ ಮಗನಾಗಿದ್ದರಿಂದಲೊ ಏನೋ ಗೊತ್ತಿಲ್ಲ, ನನಗೆ ಕಲಿಸಿದ ಎಲ್ಲಾ ಶಿಕ್ಷಕರನ್ನು ನಾನು ತುಂಬಾ ಗೌರವಿಸುತ್ತೇನೆ, ಯಾವಾಗಲು ನೆನೆಯುತ್ತೇನೆ, ವಿದ್ಯಾಥಿ೯ಗಳ ಜೀವನ ನಿರೂಪಣೆಯಲ್ಲಿ ಶಿಕ್ಷಕರ ಪಾತ್ರ ಅಪಾರ ಅದಕ್ಕೆ ನಾನು ಅವರೆನ್ನೆಲ್ಲ "ಎಂದು ಮರೆಯಲಾಗದವರು" ಎಂದು ಕರೆಯತ್ತಿರುವದು. 1 ರಿಂದ 1೦ನೇ ತರಗತಿವರೆಗೆ ಕಲಿಸಿದ ಎಲ್ಲಾ ಶಿಕ್ಷಕರನ್ನು ನಾನು ಇಲ್ಲಿ ನೆನೆಯುತ್ತಿದ್ದೇನೆ.
(1 ರಿಂದ 3ನೇ ತರಗತಿಯವರೆಗೆ ನಾನು ಸಕಾ೯ರಿ ಕಿರಿಯ ಪ್ರಾಥಮಿಕ ಶಾಲೆ ಗುಡ್ಡದ ಬೇವಿನಹಳ್ಳಿಯಲ್ಲಿ ಮತ್ತು 4 ರಿಂದ 7ನೇ ತರಗತಿಯವರೆಗೆ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆ ಆಣೂರಿನ್ನಲ್ಲಿ ಓದಿದ್ದು)
1) ಖಾಗಿ೯ ಸರ್- ಇವರು ನನಗೆ 1 ಮತ್ತು 2 ನೇ ತರಗತಿಯಲ್ಲಿ ಕಲಿಸಿದ್ದರು ತುಂಬ ಒಳ್ಳೆ ಸರ್ , ಯಾವಾಗಲು ಬರಿ ಮಗ್ಗಿ ಬರೆಯಲು ಹೆಳ್ಳುತಿದ್ದರು, ಇವರಿಗೆ ಸ್ವಲ್ಪ ದ್ರಷ್ಠಿ ದೋಷ ಇತ್ತು, ಅದನ್ನು ನಾವು ತುಂಬಾ ಚೆನ್ನಾಗಿ ಬಳಸಿಕೂಳ್ಳುತ್ತಿದ್ದವು.
2)ಮತ್ತಿಹಳ್ಳಿ ಸರ್- ಇವರು ನನಗೆ 3ನೇ ತರಗತಿಯಲ್ಲಿ ಕಲಿಸಿದ್ದರು, ಇವರು ತುಂಬಾ ಹೋಡೆಯುತಿದ್ದರು, ನಮಗೆಲ್ಲ ಇವರನ್ನು ಕಂಡರೆ ಆಗ ತುಂಬಾ ಭಯ, ಇವರಿಗೆ ವೀಪರಿತ ಕುಡಿಯುವ ಹವ್ಯಾಸ ಇತ್ತು, ಸಂಬಳವಾದ  ನಂತರ ಇವರು ಒಂದು ವಾರ ಶಾಲೆಗೆ ಬರುತ್ತಿರಲಿಲ್ಲ.
3)ಮನೋಹರ ಕೊಪ್ಪದ- ಇವರು ನನಗೆ 4ನೇ ತರಗತಿಯಲ್ಲಿ ಕಲಿಸಿದ್ದರು ಮತ್ತು ಇವರು ನಮ್ಮ ಶಾಲೆಯ ಧೈಹಿಕ ಶಿಕ್ಷಕರು ಆಗಿದ್ದರು, ಯಾವಾಗಲು ನನಗೆ ಅಳಿಯ ಅಳಿಯ ಎಂದು ಕರೆಯುತ್ತಿದ್ದರು, ತಮ್ಮ ಮಗಳನ್ನು ನನಗೆ ಕೊಡುವುದಾಗಿ ಮತ್ತು ನನ್ನನ್ನು ಅವರ ಮನೆ ಅಳಿಯನ್ನಾಗಿ ಮಾಡಿಕೊಳ್ಳುವುದಾಗಿ ತಮಾಷೆ ಮಾಡುತಿದ್ದರು.
4)ಆರ್, ಬಿ, ಕೊಪ್ಪದ- ಇವರು 5ನೇ ತರಗತಿಯಲ್ಲಿ ಹಿಂದಿ ವಿಷಯ ಕಲಿಸಿದ್ದರು, ಇವರಿಗೆ ಬಿ,ಪಿ ಇತ್ತು, ತುಂಬಾ ಕೋಪ ಬರುತಿತ್ತು, ಕೋಪ ಬಂದಾಗ ಯಾವುದಾದರು ಹುಡುಗನಿಗೆ ಸರಿಯಾಗಿ ಹೊಡೆಯುತ್ತಿದರು.
5) ಮಂಜುಳಾ ಟೀಚರ್- ಇವರು ನನಗೆ ಕಲಿಸಿದ ಮೂದಲ ಟೀಚರ್, 5 6 ಮತ್ತು 7ನೇ ತರಗತಿಯಲ್ಲಿ ನನಗೆ ಗಣಿತ ಕಲಿಸಿದ್ದರು, ನನ್ನ ಮೇಲೆ ಇವರಿಗೆ ತುಂಬಾ ಪ್ರೀತಿ, ಎಂದು ಯಾವತ್ತು ಇವರು ನನಗೆ ಬೈದಿಲ್ಲ ಮತ್ತು ಹೊಡೆದಿಲ್ಲ, ೭ನೇ ತರಗತಿಯಲ್ಲಿ ಇದ್ದಾಗ ಇವರಿಗೆ ಮದುವೆ ಆಯಿತು, ಅವರ ಮದುವೆ ಪೋಟ ಇನ್ನು ನಮ್ಮ ಮನೆಯಲ್ಲಿ ಇದೆ.
6)ದೇವೇಂದ್ರ್ ಸರ್- ಇವರು ನನಗೆ 7ನೆ ತರಗತಿಯಲ್ಲಿ ವಿಜ್ಯಾನ ಕಲಿಸಿದ್ದರು ತುಂಬಾ ಬುದ್ದಿವಂತರು,
7)ಮಲ್ಲಿಕಾಜು೯ನ್ ಸಣ್ಣಗೌಡ್ರ- 7ನೇ ತರಗತಿಯಲ್ಲಿ ಸಮಾಜ ಮತ್ತು ಕನ್ನಡ ಕಲಿಸಿದ್ದರು, ತುಂಭಾ ಬುದ್ದಿವಂತರು ಆದರೆ ಸ್ವಲ್ಪ ಅಹಂಕಾರಿ, ಇಗ ಅವರಿಗೆ ಬ್ಲಡ್ ಕ್ಯಾನ್ಸರ್ ಇದೆಯಂತೆ ಮಣಿಪಾಲ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರಂತೆ, ದೇವರು ಬೇಗ ಇವರ ಆರೋಗ್ಯ ಸುದಾರಿಸಲಿ.
 8)ಹರಿಹರ ಸರ್- 6ನೇ ತರಗತಿಯಲ್ಲಿ ಕನ್ನಡ ಕಲಿಸಿದ್ದರು, ತುಂಭಾ ಸೌಮ್ಯ ಸ್ವಬಾವದವರು, ಯಾವಾಗಲು ತಾವಾಯಿತು ತಮ್ಮ ಕೆಲಸವಾಯಿತು ಎಂದು ಇರುತ್ತಿದ್ದರು
9)ಕೆ.ಎಸ್.ನಂದಿಗಾವಿ- ನನ್ನ ತಂದೆಯವರು, 6ನೇ ತರಗತಿಯಲ್ಲಿ ಹಿಂದಿ ವಿಷಯ ಕಲಿಸಿದ್ದರು, ತುಂಭಾ ಕೋಪಿಷ್ಠರು, ಪ್ರತಿಯೊಬ್ಬ ವಿದ್ಯಾಥಿ೯ಗೂ ಬೇರೆ ಬೇರೆ ಅಡ್ಡ ಹೆಸರುಗಳಿದ್ದ ಕರೆಯುತ್ತಿದ್ದರು, ತುಂಭಾ ತಮಾಷೆ ಮಾಡುತ್ತಿದ್ದರು.

(ನಾನು ಓದಿದ ಹೈಸ್ಕೊಲ್ ಸಿ.ಇ.ಎಸ್.ಎಮ್.ಎಸ್.ಎಚ್ ಆಲದಗೇರಿ)
1)ದೊಡ್ಡಮನಿ ಸರ್-  ನಮ್ಮ ಪ್ರಧಾನ ಗುರುಗಳು, ತುಂಬಾ ಕಟ್ಟು-ನಿಟ್ಟು ಮತ್ತು ತುಂಬಾ ಹೊಡೆಯುತ್ತಿದ್ದರು, ನಮಗೆ ಸಮಾಜ, ಕನ್ನಡ ಮತ್ತು ಇಂಗ್ಲೀಷ ವಿಷಯಗಳ್ಳನ್ನು ಕಲಿಸಿದ್ದರು, ಯಾವಗಲು ಬೈಯುತ್ತಲೆ ಇರುತ್ತಿದ್ದರು ಮತ್ತು ವೀಪರಿತ ಬರೆಸುತ್ತಿದ್ದರು.
2)ಸೀಮಿಕೆರಿ ಸರ್- He is Mr-Perfect ನನ್ನ ಜೀವನದಲ್ಲಿ ಇದುವರೆಗೂ ಇಂತಹ ಶಿಕ್ಷಕರನ್ನು ನೋಡೆ ಇಲ್ಲ, ಯಾವುದೇ ವಿಷಯ ಕಲಿಸುವ ಮೊದಲು ಅದರಲ್ಲಿ ತಾವು ಸಂಪೂಣ೯ ಪರಿಪೂಣ೯ರಾಗಿ ನಂತರ ನಮಗೆ ಕಲಿಸುತ್ತಿದ್ದರು, ತುಂಬಾ ಕಟ್ಟುನಿಟ್ಟು, ಇವರು ನಮಗೆ ಇಂಗ್ಲೀಷ್, ಕನ್ನಡ ಮತ್ತು ಭೂಗೋಳ ಕಲಿಸಿದ್ದರು, ಇವರ ಕೈ ಬರಹ ತುಂಭಾ ಸುಂದರವಾಗಿತ್ತು.
3)ಶೆಟ್ಟಿ ಸರ್- ಉಡುಪಿ ಮೂಲದವರು, 8ನೇ ತರಗತಿಯಲ್ಲಿ ಸೈನ್ಸ್ ಕಲಿಸಿದ್ದರು, ಇವರಿಗೆ ಮೂಗಿನ ಮೇಲೆಯೇ ಕೋಪ, ವೀದ್ಯಾಥಿ೯ಗಳಿಗೆ ತುಂಬಾ ಹೊಡೆಯುತ್ತಿದ್ದರು, ನನ್ನ ನೆಚ್ಚಿನ ಗುರುಗಳು, ಯಾರಿಗೂ ಇವರು ಕೇರ್ ಮಾಡುತ್ತಿರಲಿಲ್ಲ, ಒಂದು ಸಾರಿ ಬಿ.ಇ.ಓ ಜೊತೆ ಶಾಲೆಯಲ್ಲಿಯೇ ಭಜ೯ರಿ ಜಗಳ ಮಾಡಿದ್ದರು.
4)ಗೀತಾ ಕುಲಕಣಿ೯- ಅಪ್ಪಟ ಬ್ರಾಹ್ಮಣ ಕುಟುಂಬದಿಂದ ಬಂದವರು, ಸನ್ಯಾಸಿಣಿ ನನಗೆ 8,9 ಮತ್ತು 1೦ನೇ ತರಗತಿಯಲ್ಲಿ ಹಿಂದಿ ವಿಷಯ ಕಲಿಸಿದ್ದರು, ನನ್ನ ಪ್ರೀತಿಯ ಗುರುಮಾತೆ, ನಾನು ಯಾರ ಜೊತೆನಾದರೂ ಜಗಳ ಮಾಡಿದಾಗ, ನನಗೆ ಕೋಪ ಬಂದಾಗಲೆಲ್ಲ ಸಮಾಧಾನಪಡಿಸುತ್ತಿದ್ದರು, ಯಾವಾಗಲೂ ರಾಮಾಯಣ ಮಹಾಭಾರತದ ಕಥೆಗಳನ್ನು ಹೆಳುತ್ತಿದ್ದರು ಪ್ರತಿ ವಷ೯ ಕೆಲ ಬಡ ವಿದ್ಯಾಥಿ೯ಗಳ ಪೀಜ್ ಇವರೆ ಕಟ್ಟುತಿದ್ದರು.
5) ಪಿ,ಎಮ್ ಸುತ್ತಕೋಟಿ- ನಮ್ಮ ಪಿ,ಇ ಸರ್, ನನ್ನ ಮೇಲೆ ತುಂಬಾ ಪ್ರೀತಿ, ಜೀವನದಲ್ಲಿ ಯವಾಗಲೂ ಅತ್ಯುತ್ತಮವಾದುದ್ದನ್ನೇ ಆರಿಸುಕೊ ಎಂದು ನನಗೆ ಯಾವಾಗಲೂ ಹೇಳುತ್ತಿದ್ದರು, ನಾನು ಇಷ್ಠಪಟ್ಟ ಎಲ್ಲಾ ಆಟಗಳಲ್ಲೂ ನನಗೆ ಅವಕಾಶ ಕೊಡುತ್ತಿದ್ದರು, ಆದರೆ ಆಟ ಆಡಿಸುವಾಗ ಮಾತ್ರ ತುಂಬಾ ಗಂಭೀರವಾಗಿ ಇರುತ್ತಿದ್ದರು, ಎಷ್ಟೋ ಬಾರಿ ಗ್ರೌಂಡ್ ತುಂಬಾ ನನ್ನನ್ನು ಓಡಾಡಿಸಿಕೊಂಡು ಹೋಡೆದಿದ್ದಾರೆ, ನನ್ನಲ್ಲಿನ ಸೋಮಾರಿತನ ಹೋಗಲಾಡಿಸಲು ನನ್ನನ್ನು 3೦೦೦ ಮೀಟರ್ ಓಟಕ್ಕೆ ಶಾಲೆಯ ಖಾಯಂ ಅಭ್ಯಥಿ೯ಯಾಗಿ ಮಾಡಿದ್ದರು, ಒಟ್ಟು 3 ಸಲ 3೦೦೦ ಮೀಟರ್ ಓಡಿದ್ದೆ ಆದರೆ ಪ್ರತಿ ಬಾರಿ ನಾನೆ ಕೋನೆಯವನಾಗಿ ಗುರಿ ಮುಟ್ಟಿದ್ದೆ.
6)ಎಮ್.ಎನ್ ನಾರಜ್ಜಿ- ಗಣಿತದ ಶಿಕ್ಷಕರು ನನ್ನನ್ನು ಕಂಡರೆ ಆಗುತ್ತಿರಲಿಲ್ಲ, ಯಾವಾಗಲೂ ನನಗೆ ಬೈಯುತ್ತಿದ್ದರು, ಗಣಿತದಲ್ಲಿ ಇವರು ತುಂಬಾ ಮೇಧಾವಿಗಳಾಗಿದ್ದರು.
7)ಗಿಡ್ಡಣ್ಣನವರ್ ಸರ್- 1೦ನೇ ತರಗತಿಯಲ್ಲಿ ಸೈನ್ಸ್ ಕಲಿಸಿದ್ದರು, ತುಂಭಾ ಶಾಂತ ಸ್ವಭಾವದವರು ಮತ್ತು ಮುಗ್ದರು, ಇವರಿಗೆ ಸರಿಯಾಗಿ ಬೈಯ್ಯಲೂ ಬರುತ್ತಿರಲ್ಲಿಲ್ಲ, 2 ವಷ೯ಗಳ ಹಿಂದೆ ಹ್ರದಯಾಘಾತದಿಂದ ನಿಧನರಾದರು.
8)ಭ್ಯಾಗವಾದಿ ಸರ್- ತುಂಬಾ ಫ಼ನ್ ಮ್ಯಾನ್, ಯಾವಾಗಲು ತಮಾಷೆ ಮಾಡುತ್ತಿದ್ದರು, ನಮಗೆ ಕನ್ನಡ, ಇಂಗ್ಲೀಷ್ ಮತ್ತು ಸಮಾಜ ವಿಷಯ ಕಲಿಸಿದ್ದರು, ಇವರಿಗೆ ಗಂಡು ಮಕ್ಕಳು ಇರಲಿಲ್ಲ 3 ಜನ ಹೆಣ್ಣು ಮಕ್ಕಳು ಆದ್ದರಿಂದ ಯಾವಾಗಲೂ ಹುಡುಗರಿಗೆ ಬಯ್ಯುತ್ತಿದ್ದರು.
9)ಗೊಣಿಗೇರ ಸರ್- ನಮ್ಮ ಕ್ರಾಪ್ಟ ಸರ್, ಇವರು ತುಂಬಾ ಉದ್ದ ಇದ್ದರು, 1೦ನೇ ತರಗತಿಯಲ್ಲಿ ನಮ್ಮ Class Teacher ಆಗಿದ್ದರು, ತರಗತಿಯಲ್ಲಿ ಏನೆ ಗಲಾಟೆ ಆದರೂ ಮೊದಲು ಹೊಡೆಯುತ್ತಿದಿದ್ದು ಕೊನೆಯ ಡೆಸ್ಕನಲ್ಲಿ ಕುಳಿತಿರುತ್ತಿದ್ದ ನಮ್ಮನ್ನು.
1೦) ಲೋಕೆಶ ಸರ್- 1೦ನೇ ತರಗತಿಯಲ್ಲಿ ಇದ್ದಗ ನಮ್ಮ ಪಿ.ಇ ಶಿಕ್ಷಕರಾಗಿದ್ದರು, ವಯಸ್ಸಾದ ಕಾರಣ ಸದಾ ಅನಾರೋಗ್ಯದಿದ್ದ ಬಳಲುತ್ತಿದ್ದರು.
11) ಅಜ್ಜಪ್ಪ ಸರ್- 1೦ನೇ ತರಗತಿಯಲ್ಲಿ ನನಗೆ ಕನ್ನಡ ವಿಷಯ ಕಲಿಸಿದ್ದರು, ನನ್ನ ಜೀವನದಲ್ಲಿ ನಾನು ಜಗಳ ಮಾಡಿದ ಏಕೈಕ ಶಿಕ್ಷಕರು, ಅದೊಂದು ದಿನ ಯಾರೋ ಮಾಡಿದ ತಪ್ಪಿಗೆ ನನ್ನನ್ನು ಬೈದಾಗ ಅವರಿಗೂ ನನಗೂ ಮಾತಿಗೆ ಮಾತು ಬೆಳೆದು ಪ್ರಧಾನ ಗುರುಗಳವರೆಗೂ ದೂರು ಹೋಗಿತ್ತು, ಕೆಲ ದಿನಗಳ ನಂತರ ಅವರು ಪಾಶ್ವ೯ವಾಯುಗೆ ತುತ್ತಾಗಿದ್ದರು .

Sunday, March 20, 2011

ಯಾಕೋ ಬೇಜಾರು......


      
                                           ಏನೂ ತಿಳಿಯದು ಯಾಕೊ ಇತ್ತಿಚಿಗೆ ತುಂಬಾ ಬೇಜಾರು ಆಗುತ್ತೆ, ತಕ್ಷಣಕ್ಕೆ ಮನಸ್ಸಿಗೆ ಅದೇನು ಆಗಿಬಿಡುತ್ತದೆಯೂ ತಿಳಿಯದು ಕೆಲ ಕ್ಷಣಗಳ ಹಿಂದೆ ಬಿಸಿ ಗಾಳಿ ತುಂಬಿದ ಬಲೂನಿನಂತೆ, ಉಲ್ಲಾಸದ ಚಿಲುಮೆಯಂತೆ ಚಿಮ್ಮುತಿದ್ದ ಮನಸ್ಸು ತಕ್ಷಣಕ್ಕೆ ತುಂಬಿದ ಬಲುನ್ ಒಡೆದು ಠುಸ್ ಎಂದು ಗಾಳಿ ಹೂರ ಹೋಗಿ ಕೆಲ ಕ್ಷಣಕ್ಕೆ ನೇಲಕ್ಕೆ ಬಿಳುವಂತೆ ಮನಸ್ಸು ಕೂಡ ಮಂಕಾಗಿ ಬಿಡುತ್ತದೆ, ಸುಮ್ಮನೆ ಬೇಜಾರಾಗಲು ಮನಸ್ಸಿಗೆ ಯಾವುದೆ ಕಾರಣಗಳು ಬೇಕಾಗಿಲ್ಲ, ಸೂಕ್ತ ಕಾರಣಗಳು ಇದ್ದು  ಮನಸ್ಸಿಗೆ ಬೇಜಾರಾದಗ ಏನೂ ಒಂದು ರೀತಿ ಆದರೆ ಕಾರಣವೆ ಇಲ್ಲದೆ ಬೇಜಾರಾದಾಗ ಏನು ಮಾಡಬೇಕು ತಿಳಿಯದು.
       ಅಪ್ಪ ಬೈದಾಗ, ಮುದ್ದಿನ ಅಮ್ಮನ ಜೋತೆ ಜಗಳ ಮಾಡಿದಾಗ, ಸ್ನೇಹಿತರು ಹಿಯ್ಯಾಳಿಸಿದಾ, ಮುಖ್ಯ ಕೆಲಸವಿರುವ ದಿನವೆ ಬಸ್ ಮಿಸ್ ಆದಗ, ಕಾಲೇಜಿನಲ್ಲಿ ನೆಚ್ಚಿನ ಸರ್/ಮೆಡಮ್ ಬೈದಾಗ, SMSಗೆ ಮುದ್ದಿನ ಗೆಳಯರು Reply ಮಾಡದಿದ್ದಾಗ, ಅಪ್ಪ-ಅಮ್ಮನನ್ನು ಇಷ್ಟ ಪಟ್ಟಷ್ಟೆ ಇಷ್ಟ ಪಡುವ ಹುಡಗಿ Facebook-Orkutನಲ್ಲಿ on-lineನಲ್ಲಿ ಇದ್ದರು ನನ್ನ ಜೋತೆ chat ಮಾಡಲು ಒಲ್ಲದಾದಾಗ ಮನಸ್ಸಿಗೆ ಬೇಜಾರಾಗುವದು ಸಹಜ ಆದರೆ ಯಾಕೊ ಸುಮ್ಮನೆ ಬೆಜಾರಿಗೆ ಉತ್ತರವೆ ಸಿಗುವುದಿಲ್ಲ.
                          ಮನಸ್ಸಿನ ಮನಸ್ಸಿಗೆ ಬೇಜಾರಾದಗ ಏನು ಹಿಡಿಸುವುದಿಲ್ಲ, ಎದುರುಗಡೆ ಎಷ್ಟೆ ಸುಂದರವಾದ ಹುಡಗಿ ಬಂದರು ಅವಳನ್ನು ಕಣ್ಣೆತ್ತಿ ಕೊಡ ನೋಡುವುದಿಲ್ಲ, ಅಚ್ಚು-ಮೆಚ್ಚಿನ ಸುಂದರ ಮೆಡಮ್ ಪಕ್ಕದಲ್ಲಿ ಕುಳಿತು Problem ಹೇಳಿಕೊಟ್ಟರು ಅದು ತಲೆಗೆ ಹೋಗುವುದಿಲ್ಲ, ಮೆಚ್ಚಿನ Heroನ Movie TVಯಲ್ಲಿ ಬರುತ್ತಿದರು ಕೂಡ Remote ನಿಂದ Channel ಬದಲಾಗುತ್ತಲೆ ಇರುತ್ತದೆ, ಊಟ ಸೇರುವುದಿಲ್ಲ, ಕೋನೆಗೆ ಮಲಗೋಣ ಎಂದರೆ ನಿದ್ರೆ ಬರುವುದಿಲ್ಲ ಸುಮ್ಮನೆ ಮಲಗಿ ಮೇಲುಗಡೆ ತಿರುಗುತ್ತಿರುವ ಅಥವಾ ನಿಂತಿರುವ ಫ಼್ಯಾನ್ ನ್ನು ದಿಟ್ಟಿಸಿ ನೋಡುವುದರಲ್ಲೆ ಮನಸ್ಸು ನಿರಂತರವಾಗಿರುತ್ತದೆ.
        ಈ ಮನಸ್ಸಿನ "ಹಾಗೆ ಬೇಜಾರಿಗೆ" ಏನು ಕಾರಣ? ಎಂದೂ ಎಷ್ಟೂ ತಿಂಗಳುಗಳ ಹಿಂದೆ ಅಪ್ಪ ಬೈದ ಮಾತುಗಳು ನೆನಪಾದಾಗ, ಯಾವಾಗಲೊ ಸೋತ ಕ್ರಿಕೆಟ್ ಪಂದ್ಯ ನೆನಪಾದಗ, ರಸ್ತೆಯಲ್ಲಿ ನೆಡೆಯುತ್ತಿರುವ ಯುವ ಜೋಡಿಯನ್ನು ನೋಡಿ ಮೆಚ್ಚಿನ ಹುಡಗಿ ನೆನಪಾದಾಗ, ಇದ್ದಕ್ಕಿದ್ದಂತೆ ಮಾವನ ಮಗನು ತೆಗೆದಿರುವ ಅಂಕಗಳು ನಾನು ತೆಗೆದಿರುವ ಅಂಕಗಳು ನೆನಪಾಗಿ ಎರಡನ್ನು ಹೊಲಿಸಿದಾಗ, ಊರಿನಲ್ಲಿ ಅಪ್ಪ-ಅಮ್ಮನ ಜೋತೆ ಹಾಯಾಗಿ ಇರುವ ಗೆಳಯ ನೆನಪಾದಾಗ, ಎಷ್ಟೂ ಬಾರಿ ನನ್ನಿಂದ ಸಹಾಯ ಪಡೆದು ನಾನು ಒಂದು ಸಣ್ಣ ಸಹಾಯ ಕೂರಿದಾಗ ನಿರಾಕರಿಸುವ ಅಹಂಕಾರಿ ಗೆಳಯ ನೆನಪಾದಾಗ ಹೀಗೆ ಒಂದಲ್ಲ ಒಂದು ಕಾರಣಕ್ಕೆ ಮನಸ್ಸು ಬೇಜಾರಾಗುತ್ತಲೆ ಇರುತ್ತದೆ, ಆದರೆ ಕೆಲ ಸಾರಿ ಕಾರಣವೆ ಇರುವುದಿಲ್ಲ ಅದೇನು ಮನಸ್ಸಿನ ಮಮ೯ವೂ ಆ ದೇವರೆ ಬಲ್ಲ.
                          ಇಂದೂ ಮತ್ತೆ ನನ್ನ ಮನಸ್ಸಿಗೆ ಯಾಕೊ ಬೇಜಾರು, ಇಡಿ ದಿನ Busyಯಾಗಿ ಇದ್ದೆ, ಹಾಯಾಗಿ ಕಳೆದೆ ನೆಚ್ಚಿನ Sirನ್ನು madamನ್ನು meet ಮಾಡಿದೆ, ಮೆಚ್ಚಿನ ಗೆಳತಿ ಜೋತೆ ಹರಟೆ ಹೊಡೆದೆ, ಅಪ್ಪ-ಅಮ್ಮನ ಜೋತೆ ಮಾತನಾಡಿದೆ, ಗೆಳಯರ ಜೋತೆ ಆಟ ಆಡಿದೆ ಆದರು ದಿನದ ಕೋನೆಗೆ ಯಾಕೊ ಬೇಜಾರು, ಇಂದು ಏನಾದರು ಆಗಲಿ ಈ ಬೇಜಾರಿನ ಮೂಲ ಹುಡುಕಲೆ ಬೇಕು ಎಂದು ಕುಳಿತೆ ಆದರೆ ಕೊನೆಗು ಆಗಲೆ ಇಲ್ಲ, ಆದರೆ ನಾನು ಸೋಲ್ಲನ್ನು ಅಷ್ಟು ಬೇಗ ಒಪ್ಪಿಕೊಳ್ಳುವುದಿಲ್ಲ Next time ಖಂಡಿತಾ ಕಂಡು ಹಿಡಿಯುತ್ತೆನೆ.            

Saturday, March 19, 2011

ನನ್ನ ಪ್ರೀತಿಯ ಅಪ್ಪ


                "ಅಪ್ಪ" ಇಂದು ಯಾಕೊ ನೀನು ನನಗೆ ತುಂಬಾ ನೆನಪು ಆಗ್ತಾ ಇದ್ದಿಯಾ, ಯಾಕೊ ನಿನ್ನನ್ನು ತುಂಬಾ miss ಮಾಡ್ತಾ ಇದ್ದೆನೆ, ನಾನು ಮನೆಯಲ್ಲಿ ಇರುವಾಗಲಿಲ್ಲ ಏನಾದರು ಕಾರಣಕ್ಕೆ ನೀನು ನನಗೆ ಬೈಯುತ್ತಲೆ ಇರುತಿದ್ದೆ ಆಗೆಲ್ಲಾ ನನಗೆ ತುಂಬಾ ಕಿರಿ ಕಿರಿ ಆಗ್ತಾ ಇತ್ತು ಆದರೆ ಇವತ್ತು ನಿನ್ನನ್ನು, ನಿನ್ನ ಬೈಗಳನ್ನು ತುಂಬಾ ಮಿಸ್ ಮಾಡ್ತಾ ಇದ್ದೆನೆ.
               ನನಗಿನ್ನು ನೆನಪಿದೆ ನಾನಗಾಗ 3-4 ವಷ೯ ಇರಬೇಕು ನಾವು ಆಗ ಆಣುರಿನಲ್ಲಿ ಇದ್ದೆವು ಪ್ರತಿದಿನ ನನ್ನನ್ನು ಅಂಗನವಾಡಿಗೆ ಕರೆದುಕೊಂಡು ಹೋಗಿ ಬಿಟ್ಟು ಬರುತಿದ್ದಿರಿ ಅಲ್ಲಿ ನನಗೆ ಮೆಸ್ಟ್ರು ಮಗ ಎಂಬ ವಿಶೇಷ ಕಾಳಜಿ ಸಿಗುತಿತ್ತು, ನಾನು 12 ವಷ೯ದವನಾಗುವವರೆಗು ಪ್ರತಿದಿನ ನೀವೆ ನನಗೆ ಸ್ನಾನ ಮಾಡಿಸುವದು, ಬೆರಳಿನ ಉಗುರು ಕತ್ತರಿಸುವದು, ನನ್ನ ಬಟ್ಟೆ Press ಮಾಡುವದು ಎಲ್ಲ ನೀವೆ ಮಾಡುತಿದ್ದಿರಿ, ಅದೆನೂ ನಿಮಗೆ ಅಣ್ಣ, ಅಕ್ಕನಿಗಿಂತ ನನ್ನ ಮೇಲೆಯೆ ಹೆಚ್ಚು ಪ್ರೀತಿ, ಮಮಕಾರ.
           3ನೇ ತರಗತಿಯವರೆಗು ನಮ್ಮೂರಿನಲ್ಲೆ ಓದಿದ ನಾನು 4ನೇ ತರಗತಿಗೆ ನಿಮ್ಮ ಶಾಲೆ ಸೇರುತ್ತೆನೆ ಅಂದಾಗ ಸಂತೋಷದಿಂದಲೆ ಒಪ್ಪಿದ್ದಿರಿ ನೀವು, ಪ್ರಥಮ ದಿನವೆ ಎಲ್ಲರಿಗು ನಾನು ಪರಿಚಯವಾಗಿದ್ದು ನಂದಿಗಾವಿ ಸರ್ ಮಗನೆಂದು ಹೂರತು ಹೋಸ ವಿದ್ಯಾಥಿ೯ ಎಂದಲ್ಲ, ನಿಮ್ಮ ಮಗನೆಂಬ ಒಂದೇ ಕಾರಣಕೆ ನನಗೆ ಆ ಶಾಲೆಯ ಎಲ್ಲಾ ತರಗತಿಗಳಿಗು, ಕೂಠಡಿಗಳಿಗು ಮುಕ್ತ ಪ್ರವೇಶವಿತ್ತು, ನಿಮ್ಮೆಲ್ಲರ ಆ ಹರಟೆ, ತಮಾಷೆಗಳು ನನಗೆ ಇನ್ನೊಂದು ಪ್ರಪಂಚವನ್ನು ತೊರಿಸಿತು, ಕೇವಲ ನಿಮ್ಮ ಮಗನೆಂಬ ಕಾರಣಕ್ಕೆ ಗ್ರಂಥಾಲಯದ ಯಾವುದೆ ಪುಸ್ತಕವನ್ನು ಯಾರದೆ ಅನುಮತಿ ಇಲ್ಲದೆ ತೆಗೆದುಕೂಳ್ಳುವ, ಓದುವ ಸ್ವಾತಂತ್ರ ನನಗೆ ಸಿಕ್ಕಿತ್ತು, ಅದು ಆ ಶಾಲೆಯಲ್ಲಿ ನಿಮಗೆ ಇದ್ದ ಗೌರವ, ಪ್ರೀತಿಯ ಒಂದು ತುಣಕು ಅಷ್ಟೆ, ಆ ಸ್ವಾತಂತ್ರ ಇದ್ದ ಕಾರಣದಿಂದಲೆ ನನಗೆ ಆ ಪುಟ್ಟ ವಯಸ್ಸಿಗೆ ದ..ಬೇಂದ್ರೆಯವರ "ನಾಕು ತಂತಿ", ಕುವೆಂಪುರವರ "ಮಲೆಗಳಲ್ಲಿ ಮದುಮಗಳು", ಕಾರಂತರ "ಮುಕ್ಕಜ್ಜಿಯ ಕನಸುಗಳು" ಹೀಗೆ ಇನ್ನು ಅನೇಕ ಗ್ರಂಥಗಳನ್ನು ನೋಡುವ ಬಾಗ್ಯ ಸಿಕ್ಕಿತ್ತು, ಆದರೆ ಆ ವಯಸ್ಸಿಗೆ ಅವುಗಳನ್ನು ಓದಿ ಅಥ೯ಮಾಡಿಕೊಳ್ಳುವ ಶಕ್ತಿ ನನ್ನಲ್ಲಿ ಇರಲಿಲ್ಲ ಆದರೆ ಅದು ನನಗೆ ಓದುವ ಗಿಳನ್ನು ಅಂಟಿಸಿತು.
            ಇನ್ನು ಮನೆಯಲ್ಲಿ ನಾನು ಎಷ್ಟೆ ತಲೆಹರಟೆ ಮಾಡಿದರು ಸುಮ್ಮನಿದ್ದು ಶಾಲೆಯಲ್ಲಿ ನನಗೆ ಬೇರೆ ಶಿಕ್ಷಕರಿಂದ ಶಿಕ್ಷೆ ಕೂಡಸುತಿದ್ದಿರಿ, ಇದೆ ವಿಷಯವಾಗಿ ನಾನು ನಿಮ್ಮ ಜೋತೆ ಮನೆಯಲ್ಲಿ ಎಷ್ಟೂಬಾರಿ ಜಗಳ ಮಾಡಿದುಂಟು, ನಿಮ್ಮದೆ ಹವ್ಯಾಸಗಳಾದ ದಿನಪತ್ರಿಕೆ ಓದುವದು, ಕ್ರಿಕೆಟ್ ನೋಡುವದು ನನಗೆ ಗೀಳಾಗಿ ಬಂದವು, ಆ ಚಿಕ್ಕ ವಯಸ್ಸಿನಲ್ಲಿ ಗಂಟೆಗಟ್ಟಲೆ ಪತ್ರಿಕೆ ಓದುತಿದ್ದೆ ಅದೆ ನನಗೆ ಅದ್ಬುತವಾದ ಸಾಮಾನ್ಯ ಜ್ನಾನ ನಿಡಿತು.
           5ನೇ ತರಗತಿಯಲ್ಲಿ ಇದ್ದಾಗ ನನಗೆ ENGLISHನ ಯಾವುದೊ ಒಂದು ಸರಳವಾದ ಪದ ಸರಿಯಾಗಿ ಬರೆಯಲು ಬಾರದಿದ್ದಾಗ ನನ್ನದೆ ತರಗತಿಯ ಹುಡಗಿಯಿಂದ   ನನ್ನ ಕೆನ್ನೆಗೆ ಹೂಡಸಿದ್ದು ನನಗಿನ್ನು ಹಸಿ-ಹಸಿಯಾಗಿ ನೆನಪಿದೆ, ಆಗ ಎಷ್ಟೂ ದಿನ ನಿಮ್ಮ ಮೆಲೆ ನನಗೆ ಕೂಪ ಇತ್ತು, ಕೆಲದಿನ ನಿಮ್ಮ ಜೋತೆ ಮಾತು ಬಿಟ್ಟಿದೆ ಆದರೆ ನನಗೆ ಇಗ ಅನಿಸುತ್ತದೆ ಅಂದು ನನಗೆ ನೀವು ಆ ಶಿಕ್ಷೆ ಕೊಡದಿದ್ದರೆ ಇಂದು ನಾನು ಇಂಜಿನಿಯರಿಂಗ ಓದುತ್ತಿರಲಿಲ್ಲ...... Thanks Dad
          ನಾನು ಇರುತಿದ್ದ ತರಗತಿಗಳಲ್ಲಿ ನೀವು ಯಾವಗಲು ಕಟ್ಟುನಿಟ್ಟಿನ  ಮತ್ತು ಶಿಸ್ತಿನ ಗುರುಗಳನ್ನೆ ಕಳುಹಿಸುತಿದ್ದಿರಿ ಪಾಪ ನನ್ನ ಸಲುವಾಗಿ ನನ್ನ ಸಹಪಾಟಿಗಳು ಶಿಕ್ಷೆ ಅನುಭವಿಸಿದುಂಟು, 5ನೇ ತರಗತಿಯಲ್ಲಿ ಇದ್ದಾಗ ನೆಡೆದ ತಾಲ್ಲೂಕ ಮಟ್ಟದ ಕ್ವಿಜ್ ಸ್ಪದೆ೯ಗೆ ನಿಮ್ಮ ಶಾಲೆಯಿಂದ ನನ್ನನ್ನು ಕಳುಹಿಸಿದಾಗ ಬೇರೆ ಶಿಕ್ಷಕರು ತಮಾಷೆ ಮಾಡಿದ್ದರು ಆದರೆ ಕೋನೆಗೆ ನಾನೆ ಗೆದ್ದು ಬಂದಾಗ ಎಲ್ಲರಿಗು ಆಶ್ಚಯ೯, ನನಗು ಕೂಡ ಒಂದು ಕ್ಷಣ ಶಾಕ್ ಆಗಿತ್ತು ಆದಿನ ನಿಮ್ಮ ಮುಖದಲ್ಲಿ ಇದ್ದ ಆನಂದವನ್ನು ನೋಡಲು ಎರಡು ಕಣ್ಣು ಸಾಲದಾಗಿದ್ದವು, ನಂತರ ತಮಾಷೆ ಮಾಡಿದ ಎಲ್ಲಾ ಶಿಕ್ಷಕರಿಗು ನೀವು ಟ್ರಿಟ್ ಕೂಡಿಸಿದ್ದು ಬೇರೆ ಕಥೆ.
         ಕೆಲಸಾರಿ ನಿಮ್ಮ ಅತಿಯಾದ ಕೋಪ, ನಿಮ್ಮ Rules ನನಗೆ ತುಂಬಾ ಕಿರಿ ಕಿರಿ ಮಾಡಿದುಂಟು, ಅದೇಕೂ ತಿಳಿಯದು ನಮ್ಮುರಿನ ಕ್ರಿಕೆಟ್ ಟಿಮ್ ಅಂದರೆ  ನಿಮಗೆ ಅದೇನು ಕೋಪನೊ ತಿಳಿಯದು, ಅವರ ಜೋತೆ  ಸೇರಲು ನನ್ನನ್ನು ಬಿಡುತ್ತಲೆ ಇರಲಿಲ್ಲ ಆಗ ನಿಮ್ಮ ಮೇಲೆ ಎಷ್ಟು ಕೋಪ ಬರುತಿತ್ತು ಗೋತ್ತಾ...? ಆದರೆ ನಿಮ್ಮ ಕಣ್ಣು ತಪ್ಪಿಸಿ ಸದಾ ನಾನು ಅವರ ಜೋತೆ ಕ್ರಿಕೆಟ್ ಆಡುತಿದ್ದೆ, ಅವರ ಜೋತೆ ಸೇರಿದರೆ ಎಲ್ಲಿ ಕೆಟ್ಟು ಬಿಡುತ್ತೆನೆ ಎಂಬ ಭಯತಾನೆ ನಿಮಗೆ? ಇಲ್ಲ ಅಪ್ಪಾ ಎಷ್ಟೆ ಆದರು ನಾನು ನಿಮ್ಮ ಮಗ.
         ಯಾವಗಲು ಅಣ್ಣನಿಗು, ಅಕ್ಕನಿಗು ಮತ್ತು ನನಗು Best oneನ್ನೆ select ಮಾಡುತಿದ್ದಿರಿ, ಅವರೇನೂ ನಿಮ್ಮ ಮಾತಿಗೆ ಒಪ್ಪಿ ನೀವು ತೋರಿದ ಹಾದಿಯಲ್ಲಿ ನೆಡೆಯುತಿದ್ದರು ಆದರೆ ನಾನು ನಿಮ್ಮ Bestಗಳನ್ನು ಎಂದು ಒಪ್ಪಿಕೂಳ್ಳಲೆ ಇಲ್ಲ, ಬರಿ ನನ್ನದೆ ಹಠ, ಎಂದು ಯಾವುದರಲ್ಲು ಸೋಲು ಒಪ್ಪದ ನೀವು ಅದೆಕೊ ಗೊತ್ತಿಲ್ಲ ಪ್ರತಿಬಾರಿ ನನ್ನ ಹಠದ ಎದಿರು ಸೋತ್ತಿದ್ದಿರಾ, ಒಂದು ಸಾರಿ ನಿಮ್ಮ ಜೋತೆ ಮನಸಾರೆ ಮನಬಿಚ್ಚಿ ಮಾತನಡ ಬೇಕು ಎಂದುಕೂಳ್ಳುತ್ತೆನೆ ಆದರೆ ನಿಮ್ಮ ಎದುರು ಮನಸ್ಸಿನ ಮಾತುಗಳೆ ಆಚೆ ಬರುವುದಿಲ್ಲ, ಹೆಳಬೇಕಾಗಿರುವುದನ್ನು ಬಿಟ್ಟು ಇನ್ನೆಲ್ಲ ಮಾತನಾಡುತ್ತೆನೆ, ಅಮ್ಮನ ಜೋತೆ ಸಲುಗೆಯಿಂದ ಮಾತನಾಡುವ ರೀತಿ ನಿಮ್ಮ ಜೋತೆ ಮಾತನಾಡ ಬೇಕು ಎಂದರು ನನ್ನಿಂದ ಸಾದ್ಯವಾಗುತ್ತಿಲ್ಲ.
         ಯಾಕೊ ಇಂದು ಬೆಳ್ಳಗ್ಗೆಯಿಂದ ನೀವು ತುಂಬಾ ನೆನಪಾಗುತ್ತಿದಿರಿ ಅದಕ್ಕೆ ಈ small flashback ಅಷ್ಟೆ, ನೆನಪುಗಳು ಎಷ್ಟು ಮದುರ, ಕೇಲವೆ ಕ್ಷಣಗಳಲ್ಲಿ ನಮ್ಮನ್ನು ಚಿಕ್ಕ ಮಗುವನ್ನಾಗಿಸಿ ಬಿಡುತ್ತವೆ, ಮನದಲ್ಲಿ ಉತ್ಸಾಹದ ಗಾಳಿಪಟ ಹಾರಿಸಿ ಬಿಡುತ್ತವೆ, 30 ವಷ೯ಗಳಿಂದ ಶಿಕ್ಷಕರಾಗಿ ನನ್ನಂತಹ ಸಾವಿರಾರು  ವಿದ್ಯಥಿ೯ಗಳ ಜೀವನಕ್ಕೆ ಮಾಗ೯ದಶ೯ನ ಮಾಡಿರುವ ಹಾಗು ಇಂದಿಗು ದಣಿಯದೆ ಅದೆ ಉತ್ಸಾಹದಿಂದ ವಿದ್ಯಾಥಿ೯ಗಳಿಗೆ ಪಾಠ ಮಾಡುತ್ತಿರುವ ನಿಮಗೆ ನನ್ನ ಕೋಟಿ-ಕೋಟಿ ವಂದನೆಗಳು........ Dad love U and missing U and mom U too
        

Thursday, March 17, 2011

ಕಲ್ಲು ಮತ್ತು ಅವಳು

ಇರುವದು ಅವಳಿಗು ಮತ್ತು ಕಲ್ಲಿಗು ಒಂದೇ ಒಂದು ವ್ಯತ್ಯಾಸ
ಅವಳು ಸಜೀವಿ ಕಲ್ಲು ನಿಜಿ೯ವಿ 
ಉಳಿದಂತೆ ಇರುವುದೆಲ್ಲ ಬರಿ ಸಾಮ್ಯತೆಗಳು
ಇಲ್ಲ ಕಲ್ಲಿಗೆ ಮನಸ್ಸು
ಇವಳ ಮನಸ್ಸೆ ಒಂದು ಕಲ್ಲು
ಇರುವುದಿಲ್ಲ ಕಲ್ಲಿನಲ್ಲಿ ಬಾವನೆಗಳು
ಇವಳು ಬಾವನೆಗಳೆ ಸತ್ತ ಹುಡಗಿ
ಕಲ್ಲೆಂದರೆ ಬರಿ ಒರಟಂತೆ
ಆಗ ಬೇಡ ಗೆಳತಿ ನೀನು ಒರಟು ಕಲ್ಲಂತೆ
ಬಳಸುವರು ಕಲ್ಲನ್ನು ಮನೆಯ ಅಡಿಪಾಯಕ್ಕೆ
ಒರಟು ಕಲ್ಲು ಹೂರುವದು ಮನೆಯ ಭಾರವನ್ನು
ನೀಡುವದು ನೆರಳನ್ನು ಆಶ್ರಯಿಸಿದ ಜನರಿಗೆ
ಆಗು ಈಗ ನೀನು ಕಲ್ಲಂತೆ
ಬೆಳಗು ನಿನ್ನ ನಂಬಿದವರ ಮನೆ ಮನಸ್ಸನ್ನು
ಆದರೆ ನೆನಪಿರಲಿ ಕೋಪ ಮನಸ್ತಾಪಗಳ
ಕಂಪನಕ್ಕೆ ಸಿಲುಕಿ ಕೆಡವ ಬೇಡ
ನಿನ್ನ ನಂಬಿದವರ ಮನೆಯ 
ನೆನಪಿರಲಿ ನೀನು ಸಜೀವಿ ನಿಜಿ೯ವಿಯಲ್ಲ...

Monday, March 7, 2011

ನನ್ನ ಪ್ರೀತಿಯ ಕಥೆ


ಕಂಡೆ ನಾನು ಅವಳ ಕಾಲೇಜು ಸಭಾಂಗಣದಿ
ಸೋತೆ ಅವಳ ಕಣ್ಣ ಕಾಂತಿಗೆ ಆ ಕ್ಷಣ
ಅನಿಸಿತು ನನಗೆ ಆಗ ಅವಳೆ ನನ್ನ ಕನಸಿನ ಹುಡಗಿ
ಹುಟ್ಟಿತು ಅವಳ ಮೇಲೆ ನನಗೆ ಮೂದಲ ನೋಟದಲ್ಲೆ ಪ್ರೀತಿ

ಮಾತನಾಡಿಸದಳು ನನ್ನ ಅವಳು ಅಂದೂಂದು ದಿನ ಕಾಲೇಜು ಅಂಗಳದಿ
ಮರು ಕ್ಷಣವೆ ಶುರುವಾಯಿತು ನನ್ನ ಮನದಿ ತಳ-ಮಳ
ಕಳೆದು ಹೋಯಿತು ನನಗೆ ಅಂದಿನಿಂದ ರಾತ್ರಿಯ ನಿದ್ರೆ
ಅನಿಸಿತು ನನಗೆ ಆಗ ಆಗಿರುವೆ ನಾನು ಅವಳ ಪ್ರೀಮಿ

ಕುಳಿತಳು ನನ್ನಪಕ್ಕ ಆ ದಿನ ಕ್ಲಾಸ್ ರೂಮಿನಲ್ಲಿ
ನನ್ನ ಕೈ ಮೇಲೆ ಕೈ ಇಟ್ಟು ಮಾತನಾಡಿಸಿದಳು ನನ್ನ
ಅನಿಸಿತಾಗ ನನಗೆ ಪಾವನವಾಯಿತು ನನ್ನ ಜೀವನ ಅವಳ ಸ್ಪಶ೯ದಿಂದ
ಅನಿಸಿತು ಆ ಕ್ಷಣಕ್ಕೆ ಇದೆ ಅವಳಿಗು ನನ್ನ ಮೇಲೆ ಪ್ರೀತಿ

ಬಂದಳು ಅವಳು ಈ ದಿನ ನನ್ನ ಬಳಿ ಕುಣಿಯುತ ಕಾಲೇಜು ಕ್ಯಾಂಟಿನಿನಲ್ಲಿ
ನನ್ನ ಕೈಯಲ್ಲಿ ಇಟ್ಟು ಒಂದು ಸುಂದರ ಪತ್ರಿಕೆ ನುಡಿದಳು
"ಗೆಳಯಾ ಇರುವದು ನನ್ನ ಮದುವೆ ಮುಂದಿನ ವಾರ
ಇದೂ ತಗೂ ಮೊದಲ ಲಗ್ನ ಪತ್ರಿಕೆ ನಿನಗೆ"
ಕೇಳಿ ಅವಳ ಮಾತು ಆ ಕ್ಷಣ ನಾನಾದೆ "ಇಂಗು ತಿಂದ ಮಂಗ"

Monday, February 21, 2011

ಕನಸು



              ಅಂದೊಂದು ಸಣ್ಣ ಹಳ್ಳಿ, ಹಳ್ಳಿಯ ಮದ್ಯ ಚಿಕ್ಕದಾದ ಒಂದು ಸುಂದರ ಕೆರೆ, ಊರಿನ ಪಕ್ಕ ಒಂದು ಸಣ್ಣ ಬೆಟ್ಟ, ಬೆಟ್ಟದ ಮೇಲೆ ಚಿಕ್ಕದಾದ ಶಿವನ ಮಂದಿರ, ಊರಿನ ಬಹುತೇಕ ಜನ ಸೋಮವಾರದಂದು ಆ ಮಂದಿರಕ್ಕೆ ಹೋಗಿ ಪೂಜೆ ಸಲ್ಲಿಸುವದು ವಾಡಿಕೆ.
            ಅಂದೂಂದು ಸೋಮವಾರದ ಸಂಜೆ ಊರಿನ ಯುವಕನೂಬ್ಬ ಶಿವನ ಪೂಜೆಗೆಂದು ಬೆಟ್ಟಕೆ ಹೊರಟ್ಟಿರುತ್ತಾನೆ ಕೈಯಲ್ಲಿ ದೇವರಿಗೆಂದು ತೆಂಗಿನಕಾಯಿ, ಬಾಳೆಹಣ್ಣು ಮತ್ತು ಕಪೂ೯ರವನ್ನು ಹೂಂದಿರುವ ಸಣ್ಣ ಕೈ ಚೀಲವನ್ನು ತೆಗೆದೂಕೂಂಡು ಹೂಗುತ್ತಿದ್ದಾನೆ, ಸ್ವಲ್ಪದೂರ ಹೂದ ನಂತರ ಅವನ ಕಣ್ಣಿಗೆ ಒಬ್ಬ ಯುವತಿ ಕಾಣುತ್ತಾಳೆ, ಚಿಕ್ಕ ಮಕ್ಕಳೊಂದಿಗೆ ಅಂಗಳದಲ್ಲಿ ಆಡುತ್ತಿರುವ ಆ ಯುವತಿಯನ್ನು ಕಂಡು ಒಂದು ಕ್ಷಣ ಈ ಯುವಕ ನಿಂತು ಅವಳನ್ನೆ ದಿಟ್ಟಿಸಿ ನೋಡುತಿದ್ದಾನೆ.
             ಆ ಗಾಡ ಕಪ್ಪು ಕಣ್ಣುಗಳು, ಸುಂದರವಾದ ಮುಖ, ಆ ಎತ್ತರವಾದ ನಿಲವು, ಬೆಳದಿಂಗಳ ಹಾಲು ಬೆಳಕಿನಂತೆ ಉಕ್ಕವ ನಗು, ಅವಳ ಸೌಂದರ್ಯವನ್ನು ಕಂಡು ಒಂದು ಕ್ಷಣ ಆ ಯುವಕ ಮಂತ್ರ ಮುಗ್ದನಂತೆ ನಿಂತು ಬಿಟ್ಟ, ಅವನ ಮನದಲ್ಲಿ ಒಂದು ಕ್ಷಣಕ್ಕೆ ಮಿಂಚಿನ ಸಂಚಾರ ಅರೆ ಈ ಸುಂದರಿಯನ್ನು ನಾನು ಎಲ್ಲೂ ನೋಡಿರುವೆ ಆದರೆ ಎಲ್ಲಿ? ಪಕ್ಕದ ಮನೆಯ ಹುಡಗಿಯೆ? ಪಕ್ಕದ ಓಣಿಯ ಹುಡಗಿಯೆ? ಅಥವಾ ದೂರದ ಸಂಭಂದಿಯೆ? ಛೇ....ಎಷ್ಟೆ ಪ್ರಯತ್ನಿಸಿದರು ಆ ಯುವಕನಿಗೆ ಏನು ನೆನೆಪಾಗಲಿಲ್ಲ ಆದರೆ ಅವಳ ಮುಖ ಮಾತ್ರ ಪರಿಚಯದ್ದು.
             ಏನಾದರು ಆಗಲಿ ಎಂದು ಹತ್ತಿರ ಹೂರಟ ಯುವಕನನ್ನು ದೂರದಿಂದ ಗಮನಿಸಿದ ಯುವತಿ ಯುವಕನೆಡೆಗೆ ಮುಗಳು ನಗೆಯನ್ನು ಚಲ್ಲಿದಳು ಯುವಕನಿಗೂ ಪುಳಕ ಪರಿಚಯದವರಂತೆ ಮಾತನಾಡಿಸಿದ ಯುವತಿ ಯುವಕನಿಗೆ ಎಲ್ಲಿಗೆ ಹೂರಟಿರುವೆ ಎಂದು ಕೇಳಿದಳು, ಯುವಕ ಬೆಟ್ಟದ ದೆವಸ್ಥಾನಕ್ಕೆ ಹೂರಟಿರುವ ವಿಷಯ ತಿಳಿಸಿದ ಅದನ್ನು ಕೇಳಿದ ಯುವತಿ ಜೋತೆಗೆ ನಾನು ಬರಬಹುದೆ ಏಂದು ಕೇಳಿದಳು, ಅತೀವ ಸಂತೋಷದಿಂದ ಅವಳಿಗೆ ಒಪ್ಪಿಗೆ  ಸೂಚಿಸಿದ.
                   ಮುಸ್ಸಂಜೆಯ ಆ ತಂಪು ಸಮಯದಲ್ಲಿ ಈ ಯುವ ಜೋಡಿ ಹೂರಟಿತು, ಮುಸ್ಸಂಜೆಯ ಸೂಯ೯ ಬಾನಂಗಳವನ್ನು ಕೆಂಪಾಗಿಸಿದ್ದ, ಈ ಯುವ ಜೋಡಿ ಮಾತಿನ ಮೋಡಿಯಲ್ಲಿ ಮುಳಗಿತ್ತು, ದಾರಿ ಸಾಗಿದ್ದೆ ಗೋತ್ತಾಗಲಿಲ್ಲ ಆಗಲೆ ಅವರು ಅಧ೯ ಬೆಟ್ಟವನ್ನು ಹತ್ತಿಯಾಗಿತ್ತು ಅಲ್ಲಿಂದ ತಿರುಗಿ ನೋಡಿದಾಗ ಆ ಊರಿನ ವಿಹಂಗಮ ನೋಟ ಕಾಣಿಸಿತ್ತು, ಆ ಊರಿನ ಕೆರೆ, ದೇವಸ್ತಾನ ಎಲ್ಲಾ ಸುಂದರವಾಗಿ ಕಾಣಿಸುತ್ತಿದವು, ಅಲ್ಲಿಂದ ಮತ್ತೆ ತಮ್ಮ ಪ್ರಯಾಣವನ್ನು ಮುಂದುವರೆಸಿದರು, ಸ್ವಲ್ಪ ಎತ್ತರ ಏರಿದ ನಂತರ ಹುಡಗಿಗೆ ಸುಸ್ತಾಗತೊಡಗಿತು, ಅವಳು ಯುವಕನಿಗೆ ನನ್ನಿಂದ ಮುಂದೆ ನೆಡೆಯಲು ಅಗದು ಎಂದಳು ಯುವಕ ಅವಳಿಗೆ ಸ್ವಲ್ಪ ದೂರ ನೆಡೆಯುವಂತೆ ವಿನಂತಿಸಿಕೂಂಡ ಆದರೆ ಅವಳು ನಿರಾಕರಿಸಿಬಿಟ್ಟಳು, ಯುವಕನಿಗೆ ಧಮ೯ಸಂಕಟ ಅವಳನ್ನು ಅಲ್ಲಿಯೆ ಬಿಟ್ಟು ಹೂಗುವ ಹಾಗಿಲ್ಲ, ಅವಳು ಇವನ ಜೋತೆ ನೆಡೆಯಲು ಸಿದ್ದವಿಲ್ಲ, ಕೊನೆಗೆ ಬಹು ಚಚೆ೯ಗಳ ನಂತರ ಯುವತಿ ಯುವಕನಿಗೆ ತನ್ನನ್ನು ಎತ್ತಿಕೊಂಡು ಹೂಗುವಂತೆ ವಿನಂತಿಸಿಕೊಳುತ್ತಾಳೆ.
           ಯುವಕನಿಗೂ ಪುಳಕ ಸುಂದರವಾದ ಯುವತಿ ಯಾರೆಂದು ತಿಳಿಯದು, ಇಗ ಅವಳನ್ನು ಎತ್ತಿಕೊಂಡು ಬೆಟ್ಟ ಹತ್ತುವ ಅವಕಾಶ ಸಿಕ್ಕಿದೆ ಹೆಗೆತ್ತಾನೆ ನಿರಾಕರಿಸಿಯಾನು? ಅವನು ಅವಳ ಮಾತಿಗೆ ಒಪ್ಪಿ ಅವಳನ್ನು ತನ್ನ ಬಾಹುಗಳಲ್ಲಿ ಎತ್ತಿಕೂಳ್ಳಲು ಅವಳೆಡೆಗೆ ನೆಡೆದ ಆದರೆ ಇದ್ದಕ್ಕಿಂದತಲೆ ಇಲ್ಲಿಂದಲೂ ಬಾರಿ ಶಬ್ದ ಕೆಳಿಸತೂಡಗಿತು, ಯುವಕನಿಗೂ ಶಬ್ದ ಕೇಳಿ ಅಚ್ಚರಿ ಎಲ್ಲಿಂದ ಇದು ಬರುತ್ತಿದೆ ಎಂದು ಸುತ್ತಲು ನೋಡತೂಡಗಿದ ಅಷ್ಟರಲ್ಲೆ ದೂರದ ಒಂದೂಂದೆ ವಸ್ತುಗಳು, ಮರಗಳು, ಮನೆಗಳು ಮಾಯವಾಗತೂಡಗಿದವು, ಶಬ್ದವು ತಿವ್ರವಾಗ ತೂಡಗಿತು,ಯುವಕನಿಗೆ ಏನಾಗುತ್ತಿದೆ ಎಂದು ಅಥ೯ವಾಗಲಿಲ್ಲ ಅಷ್ಟರಲ್ಲೆ ನಿಧಾನವಾಗಿ ಬೆಟ್ಟ ಕರಗತೊಡಗಿತು, ಕೂನೆಗೆ ಆ ಸುಂದರ ಯುವತಿ ಕೂಡ ಬೆಳದಿಂಗಳ ಬೆಳಕಿನಂತೆ, ಸೂಯ೯ನ ಎದರು ಮುಂಜಾನೆಯ ಮಂಜಿನಂತೆ ಕರಗಿ ಹೋದಳು, ಶಬ್ದದ ತಿವ್ರತೆ ವಿಪರಿತವಾಯಿತು ಅಷ್ಟರಲ್ಲಿಯೆ ಯುವಕನತಲೆಗೆ ಯಾರೂ ಭಲವಾಗಿ ಹೂಡೆದಂತೆ ಬಾಸವಾಯಿತು, ಭಯದಿಂದ ಕಣ್ಣು ಬಿಟ್ಟು ನೋಡಿದರೆ ತಲೆಗೆ ಹೊಡೆದಿದ್ದು ನನ್ನ ಅಮ್ಮ, ತೀವ್ರ ಶಬ್ದ ಬರುತ್ತಿದದ್ದು ನನ್ನ ಮೂಬೈಲ್ ನ ಅಲಾರಮ್ ನಿಂದ, ಬೇಗ ಏಳು ಎಂದು ಅಮ್ಮ ಎಚ್ಚರಿಸಿ ಹೂರ ಹೋದರು, ನಾನು ನನ್ನ ಅದ್ರುಷ್ಟವನ್ನು ಶಪಿಸುತ್ತಾಕೂಳಿತೆ.
              ಛೇ ಇನ್ನು ಸ್ವಲ್ಪ ಹೂತ್ತಿನಲ್ಲೆ ನಾನು ಆ ಸುಂದರ ಯುವತಿಯನ್ನು ನನ್ನ ಭಾಹುಗಳಲ್ಲಿ ಎತ್ತಿಕೂಳುತಿದ್ದೆ ಆದರೆ.......  ಅದಕೆ ನಾಳೆಯಿಂದ ಅಲಾರಮ್ ನ್ನು ಅಧ೯ಗಂಟೆ ತಡವಾಗಿ ಇಡಬೇಕು ಎಂದು ನಿಧ೯ರಿಸಿರುವೆ ಮತ್ತು ಅಮ್ಮನಿಗೆ ಯಾವುದೆ ಕಾರಣಕ್ಕು ಬೆಳಗಿನ ನನ್ನ ನಿದ್ರೆಗೆ ಭಂಗ ತರಬಾರದು ಎಂದು ಹೆಳಿರುವೆ.
             ಮತ್ತೆ ಅದೇ ಆ ಹುಡಗಿಯ ಆಗಮನದ ನೀರಿಕ್ಷೆಯಲ್ಲಿನ್ ನಿದ್ರೆಗೆ ಜಾರುತ್ತಿರುವೆ...........


Sunday, February 13, 2011

ನಮ್ಮುರ ಜಾತ್ರೆ

                         ನಮ್ಮುರು ಉತ್ತರ ಕನಾ೯ಟಕದ ಬಯಲು ಸೀಮೆಯ ಒಂದು ಚಿಕ್ಕ ಗ್ರಾಮ, ನಮ್ಮರಿನಲ್ಲಿ ಪ್ರತಿ ವಷ೯ವು ಫ಼ೆಬ್ರುವರಿ ತಿಂಗಳಿನಲ್ಲಿ ಗ್ರಾಮ ದೇವರಾದ ಶ್ರೀ ಬಸವೇಶ್ವರ ದೇವರ ಜಾತ್ರೆಯು ನೆಡೆಯುತ್ತದೆ, ಬಾಲ್ಯದಿಂದಲು ನನಗೆ ನಮ್ಮುರ ಜಾತ್ರೆ ಎಂದರೆ ತುಂಬಾ ಪ್ರೀತಿ, ಉತ್ಸಾಹ, ವಷ೯ಪೂತಿ೯ ನೆನಪಿಡುವಷ್ಟು ತರಲೆ, ಸಂತಸ, ಸಂಭ್ರಮವನ್ನು ನನ್ನಲ್ಲಿ ಉಂಟು ಮಾಡುತ್ತದೆ,
     ಅಂದು ಬೆಳ್ಳಗೆ ಎಲ್ಲರ ಮನೆಯಲ್ಲಿ ಬೆಳಗಿನ ಜಾವ ಬೇಗ ಏದ್ದು ಮನೆ ಅಂಗಳಕೆ ರಂಗೋಲಿ ಹಾಕಿದರೆ, ಊರಿನ ಹಿರಿಯರು ಬೆಳ್ಳಗೆ 6 ಘಂಟೆಗೆ ದೇವಸ್ತಾನದ ಹತ್ತಿರ ಸೇರಿ ರಥವನ್ನು ಸಿಂಗಾರಿಸುತ್ತಾರೆ, ಬೆಳ್ಳಗೆ 8 ಘಂಟೆಗೆ ಊರಿನ ಜನೆರೆಲ್ಲ ದೇವಸ್ತಾನದ ಹತ್ತಿರ ಸೇರಿ ರಥ ಎಳೆಯೆಲು ತಯಾರಾಗುತ್ತಾರೆ, ದೆವಸ್ತಾನದ ಪುಜಾರಿ ರಥಕ್ಕೆ ಪೊಜೆ ಮಾಡಿ ರಥದ ಗಾಲಿಗೆ ತೆಂಗಿನಕಾಯಿ ಒಡೆವುದರೊಂದಿಗೆ ರಥ ಏಳೆಯಲು ಅನುಮತಿ ನಿಡುತ್ತಾನೆ, ಊರಿನ ಪ್ರಮುಖ ಬಿದಿಗಳಲ್ಲಿ ಸಾಗುವ ರಥ ಕೋನೆಗೆ ಊರಾಚೆ ಬರಮದೇವರ ದೇವಸ್ತಾನದವರೆಗು ಸಾಗುತ್ತದೆ, ದಾರಿ ಮದ್ಯ ರಥದ ಕಳಶಕ್ಕೆ ಗುರಿ ಇಟ್ಟು ಬಾಳೆ ಹಣ್ಣು ಏಸೆಯುತ್ತಾರೆ, ಮನದಲ್ಲಿ ಏನಾದರು ಬೇಡಿಕೊಂಡು ನಂತರ ಹಣ್ಣನ್ನು ಕಳಶಕ್ಕೆ ಗುರಿ ಇಟ್ಟು ಏಸೆಯುತ್ತಾರೆ, ಹಣ್ಣು ಕಳಾಶಕ್ಕೆ ತಾಗಿದರೆ ಮನದ ಆಸೆ ಇಡೆರುತ್ತೆ ಎಂಬ ನಂಬಿಕೆ ಜನರಲ್ಲಿ ಇದೆ, ಬೆಳ್ಳಗೆ 11 ರವರೆಗೆ ರಥ ಎಳೆಯುವ ಸಂಬ್ರಮವಾದರೆ ನಂತರ ಬಸವ ದೇವರ ಗುಗ್ಗಳ ಜರುಗುತ್ತದೆ, ನಂತರ ಊಟದ ಬಿಡಿವು.
        ಸಂಜೆ 4ಕ್ಕೆ ಮತ್ತೆ ಸಂಬ್ರಮ, ಸಿಂಗರಿಸಿದ ಸಾಲು ಸಾಲು ಏತ್ತುಗಳ ಜೋತೆ ಬಂಡಿ ಮೆರವಣಿಗೆ ಆರಂಭವಾಗುತ್ತೆ ಅದರ ಮುಂದೆ ಡೋಳ್ಳು ಕುಣಿತ ಹಾಹಾ ನೊಡಲು ಎರಡು ಕಣ್ಣು ಸಾಲದು, ಸಂಜೆ ಸಂಗೀತ ಕಾಯ೯ಕ್ರಮ ಜನರ ಕೋರಿಕೆಗಳನ್ನು ಹಾಡುವ ಗಾಯಕರು, ಅದಕ್ಕೆ ತಕ್ಕತ್ತೆ ಕುಣಿಯುವ ಹುಡಗಿ, ಕೋಲು ಕೊದರೆ, ಅವೆರಡನ್ನು ನೋಡಿ ಕುಣಿಯುವ ಪೆಡ್ಡೆ ಜನರು ಒಟ್ಟಿನಲ್ಲಿ ಸಂಬ್ರಮಹೊ ಸಂಬ್ರಮ.
        ಇನ್ನು ಜಾತ್ರೆ ಎರಡು ತಿಂಗಳು ಇದೆ ಎಂದಾಗಲೆ ಜಾತ್ರೆಯ ದಿನ ಮಾಡುವ ನಾಟಕದ ತಾಲಿಮು ಆರಂಭವಾರುತ್ತೆ, ಸಿನಮಾ ಟಿವಿ ಅಬ್ಬರದಲ್ಲಿ ಇಂದು ನಾಟಕಗಳು ಅಳಿಸಿಹೋಗಿವೆ ಆದರೆ ನನ್ನ ಊರಿನಲ್ಲಿ ಮಾತ್ರ ಇಂದಿಗು ವಷ೯ಕ್ಕೂಂದು ಬಾರಿ ಜಾತ್ರಿ ದಿನ ಅಪ್ಪಟ ಉತ್ತರ ಕನಾ೯ಟಕದ ನಾಟಕ ನೊಡಲು ಸಿಗುತ್ತೆದೆ, ರಾತ್ರಿ 10 ಕ್ಕೆ ಆರಂಭವಾಗುವ ನಾಟಕ ಮುಗಿಯುವದು ಬೆಳ್ಳಗೆ 5 ಗಂಟೆಗೆ.
       ಇನ್ನು ಮನೆಯಂತು ಬಂದು ಬಳಗಗಳಿಂದ ತುಂಬಿರುತ್ತದೆ, ಚಕ್ಕಮಕ್ಕಳಂತು ಜಾತ್ರೆಗೆ ಬಂದು ವಿವಿದ ಆಟಗಲ್ಲಲ್ಲಿ ಮಗ್ನರಾದರೆ  ಯುವಕ-ಯುವತಿಯರು ತಮ್ಮದೆ ಲೋಕದಲ್ಲಿ ಮುಳಿಗಿರುತ್ತರೆ, ಓದು, ಕೆಲಸ ಹೀಗೆ ಬೇರೆ ಬೇರೆ ಕಾರಣಗಳಿಂದ ಊರಚೆ ನೆಲೆಸಿರುವ ಎಲ್ಲರು ಅಂದು ಸೇರುವುದರಿಂದ ಅಂದೊಂದು ರೀತಿ ಗಳಯರ ಸಮ್ಮೆಳನವಾಗಿರುತ್ತೆ ಹೀಗೆ ಒಟ್ಟಿನಲ್ಲಿ ಬೇಳಗಿನಿಂದ ರಾತ್ರಿವರೆಗು ಮಜವೊ ಮಜ.
    ಅಮ್ಮ ಇಂದು ಪೋನ್ ಮಾಡಿ ಈ ವಷ೯ದ ಜಾತ್ರೆ ಇದೆ ತಿಂಗಳು 28ಕ್ಕೆ ಎಂದಗ ಮನದಲ್ಲಿ ಹಾಗೆಯೆ ಹಿಂದಿನ ನೆನಪುಗಳು ಮುಡಿದವು, ನಾನಂತು ಬಾಲ್ಯದಲ್ಲಿ ನಮ್ಮುರ ಜಾತ್ರೆಯನ್ನು ತುಂಬಾ Enjoy ಮಾಡುತೆದ್ದೆ ಇಗಲು ಅದೆ ಹುರುಪಿನೊಂದಿಗೆ ಊರಿಗೆ ಹೊಗಲು Ready ಆಗುತಿದ್ದೆನೆ.

Saturday, February 12, 2011

ನಾನು ಮಾಡಿದ್ದು ಸರಿನಾ.........................?


                       ಆವತ್ತು ಬೆಂಗಳೂರಿನಿಂದ ಊರಿಗೆ ಬರುತಿದ್ದೆ, ಬೆಂಗಳೂರಿನಿಂದ ಹುಬ್ಬಳ್ಳಿ ಇಂಟರ್ ಸಿ ಟಿ ಟ್ರೈನ್ ಮುಲಕ ರಾಣೇಬೆನ್ನೊರಿಗೆ ಬಂದಾಗ ಸಂಜೆ ೭.೧೦, ರೈಲ್ವೇ ಸ್ಟೆಷನಿಂದ ಬಸ್ ಸ್ಟಾಂಡಗೆ ಬಂದಾಗ ೭.೩೦ ಆಗಿತ್ತು ಬೇಸಿಗೆ ಆದ ಕಾರಣ ಅನಿಯತ್ರಿತ್ ಲೋಡ್ ಶೇಡಿಂಗ್ ಇತ್ತು, ಅಂದು ಸಂಜೆ ಕೊಡ ಕರೆಂಟ್ ಇರಲಿಲ್ಲ, ನಾನು ನಮ್ಮುರ ಕಡೆ ಬಸ್ ಗಾಗಿ ಕಾಯುತ್ತಾ ಬಸ್ ಸ್ಟಂಡನಲ್ಲಿ ನಿಂತಿದ್ದೆ, ಯಾರ ಮುಖಗಳು ಸ್ಪಷ್ಟ್ವ ವಾಗಿ ಕಾಣುತಿರಲಿಲ್ಲ, ಅಲ್ಲಿ ಇದ್ದ ಎಲ್ಲಾ ಮುಖಗಳು ಕೇವಲ ಕಪ್ಪನೆ ಆಕಾರದಂತೆ ಗೂಚರಿಸುತಿದ್ದರು.
               ೨೬-೨೮ ವಷ೯ದ ವಯಸ್ಸಿನ ಒಬ್ಬ ಯುವಕ (ಕತ್ತೆಲೆಯಲ್ಲಿ ಅವನ ಮುಖ ನನಗೆ ಸರಿಯಾಗಿ ಕಾಣುತ್ತಿರಲಿಲ್ಲ) ನನ್ನ ಹತ್ತಿರ ಬಂದು ಸಮಯ ಎಸ್ಟು ಎಂದು ಕೇಳಿದ ನಾನು ಹೇಳಿದೆ ನಂತರ ಕೆಲ ಕ್ಷಣ ಸುಮ್ಮನಿಂದ್ದು ನಂತರ ಎಲ್ಲಿಗೆ ಹೋಗಬೇಕು ಎಂದು ಕೇಳಿದ ನಾನು ನಮ್ಮ ಊರಿನ ಹೇಸರು ಹೇಳಿ ಮರಳಿ ನೀನು ಎಲ್ಲಿಗೆ ಹೋಗಬೇಕು ಏಂದು ಕೇಳಿದೆ ಅದಕ್ಕೆ ಅವನು "ಶಿಕಾರಿಪುರ" ಎಂದ, ಮತ್ತೆ ಕೇಲ ಕ್ಷಣಗಳ ಮೌನದ ನಂತರ ಅವನು ನನಗೆ ಎಟಿಮ್ ಕಾಡ೯ ಕಳಿದು ಹೊದರೆ ಏನು ಮಾಡಬೇಕು ಎಂದು ಕೇಳಿದ ಅದಕೆ ನಾನು ಸಂಬಂದಿಸಿದ ಬ್ಯಾಂಕೀಗೆ ಹೋಗಿ ದೂರು ನೀಡಿ, ಹಳಯ ಎಟಿಮ್ ಕಾಡ೯ ಬ್ಲಾಕ್ ಮಾಡಿ ಅದರ ಬದಲು ಹೊಸಾ ಎಟಿಮ್ ಕಾಡ೯ ನಿಡುತ್ತಾರೆ ಎಂದೆ, ಅದಕ್ಕೆ ಅವನು ನನ್ನದು ಐಸಿಐಸಿ ಬ್ಯಾಂಕನದ್ದು ಬೆಂಗಳೂರಿನಲ್ಲಿ ತೆಗೆದುಕೂಂಡಿದ್ದು ಇಲ್ಲಿ ಸಮೀಪ ಎಲ್ಲಿಯೊ ಬ್ರಾಂಚ್ ಕೂಡ ಇಲ್ಲ ಎಂದ, ಅವನ ಆ ಮಾತಿಗೆ ನಾನು ಏನು ಹೇಳಬೇಕು ತಿಳಿಯದೆ ಮೌನವಾದೆ.
                           ಮತ್ತೆ ಕ್ಷಣಗಳ ನಂತರ ಅವನು ತನ್ನ ಹರಿದು ಹೋದ ಪ್ಯಾಂಟ್ ಪಾಕೇಟ್ ತೋರಿಸುತ್ತ "ನೋಡಿ ನಾನು ದಾವಣಗೇರಿಯಿಂದ ಬರುವಾಗ ಬಸ್ ನಲ್ಲಿ ಯಾರೊ ನನ್ನ ಪಾಕೇಟ್ ಕಟ್ ಮಾಡಿ ೧೨೦೦/- ರೂಪಾಯಿ ಮತ್ತು ಏಟಿಮ್ ಕಾಡ೯ ಕದಿದ್ದಾರೆ" ಎಂದು ವಿಷಾದದಿಂದ ನುಡಿದ, ಕಳಿದ ೨ ವಷ೯ಗಳಿಂದ ಬೆಂಗಳುರಿನಲ್ಲಿ ಇರುವ ನಾನು ಅಲ್ಲಿ ಇಂತಹ ನೂರಾರು ವ್ಯಕ್ತಿಗಳನ್ನು ನೋಡಿದ್ದರಿಂದಲೊ ಏನೊ ಅವನಿಂದ ಸ್ವಲ್ಫದೂರ ಸರಿದು ನನ್ನ ಬ್ಯಾಗ್ ಗಳ್ಳನ್ನು ಭದ್ರವಾಗಿ ಹಿಡಿದುಕೊಂಡೆ.
                         ಕೆಲಕ್ಷಣಗಳ ಮೌನದ ನಂತರ ಮತ್ತೆ ಮಾತು ಆರಂಬಿಸದ ಅವನು "ನನ್ನ ಹತ್ತಿರ ಒಂದು ರೂಪಾಯಿ ಕೂಡ ಇಲ್ಲ ಊರಿಗೆ ಹೇಗೆ ಹೂಗಬೇಕು ಗೋತ್ತಿಲ್ಲ ನಮ್ಮೂರಿನ ಯಾರಾದರು ಪರಿಚಯದವರು ಸಿಕ್ಕರೆ ಅವರ ಸಹಾಯದಿಂದ ಊರಿಗೆ ಹೂಗುತ್ತೇನೆ ಇಲ್ಲವಾದರೆ ದೇವರೆ ನನಗೆ ಗತಿ" ಅವನ ಆ ಮಾತುಗಳಿಗೆ ಆ ಕ್ಷಣಕ್ಕೆ ಹೇಗೆ ಪ್ರತಿಕ್ರಿಯಸಬೇಕು ಎಂದು ತಿಳಿಯದೆ ಮೌನವಾಗಿದ್ದೆ, ಕೇಲವೆ ಕ್ಷಣಗಳಲ್ಲಿ ನಮ್ಮುರಿಗೆ ಹೂಗುವ ಬಸ್ ಬಂತು, ಸಂಜೆಯ ಸಮಯವಾಗಿದ್ದರಿಂದ ಬಸ್ ವೀಪರಿತ ರಷ್ ಇತ್ತು, ಬಸ್ ನವರೆಗು ನನ್ನ ಜೋತೆ ಬಂದ ಆತ ಆತ ನಾನು ಬಸ್ ಹತ್ತಿದ ನಂತರ ಮರಳಿ ಕತ್ತಲೆಯಲಿ ಹೊರಟು ಹೊದ,
               ಬಸ್ ಹತ್ತಿದ ನಂತರ ನಾನು ಮಾಡಿದ ಮೊದಲ ಕೇಲಸ ನನ್ನ ಎಲ್ಲಾ ಬ್ಯಾಗ್ ನನ್ನ ಪಾಕೇಟ್ ಮತ್ತು ಮೊಬೈಲ್ ಇದೆಯೂ ಇಲ್ಲವೊ ಎಂದು ಚೆಕ್ಕ ಮಾಡಿದೆ, ಎಲ್ಲವು ಸರಿಯಾಗಿಯೆ ಇತ್ತು, ಆ ಕ್ಷಣಕ್ಕೆ ನನಗೆ ಬೇಸರವಾಯಿತು ಸುಮ್ಮನೆ ಒಬ್ಬ ವ್ಯಕ್ತಿಯ ಮೇಲೆ ಅನುಮಾನಿಸಿದೆ ಅನಿಸಿತು.
                   ಅವನು ಹೆಳೀದ್ದು ನಿಜ ಇರಬಹುದೆ? ಅವನಿಗೆ ನಿಜವಾಗಲು ಸಹಾಯದ ಅವಶ್ಯಕತೆ ಇತ್ತೆ? ನನ್ನ ಮನಸ್ಸು ಗೊಂದಲದಲ್ಲಿ ಇತ್ತು, ಬೆಂಗಳುರಿನಿಂದ ರಾಣೇಬೆನ್ನುರಿಗೆ ಬರುವಾಗ ರೈಲಿನಲ್ಲಿ ಕೂಲ್ ಡ್ರಿಂಕ್ಸ್, ಬೀಸ್ಕತ್ ಎಂದು ೧೦೦ಕ್ಕು ಅದಿಕ ಹಣ ಖಚು೯ ಮಾಡಿದ್ದೆ ಅವನಿಗೆ ೨೦ ರಿಂದ ೩೦ ರೂಪಾಯಿ ನಿಡಿದ್ದರೆ ನಾನು ಏನು ಕಳೆದುಕೊಳೊತ್ತಿರಲಿಲ್ಲ.
                ಎಲ್ಲಿಯೊ ನನಗೆ ಸಹಾಯ ಮಾಡಿ, ಹಣ ನೀಡಿ ಎಂದು ಕೇಳದ ಆ ಅಪರಿಚಿತ ವ್ಯಕ್ತಿಯ ಬಗ್ಗೆ ಕೇಟ್ಟದಾಗಿ ಅನುಮಾನಿಸಿ ನಾನು ತಪ್ಪು ಮಾಡಿದೆನಾ? ಈಗಲು ನನ್ನ ಮನಸ್ಸಿನಲ್ಲಿ ಕೇವಲ ಒಂದೇ ಪ್ರಶ್ನೆ ’ಅವನಿಗೆ ಸಹಾಯ ಮಾಡದೆ ನಾನು ತಪ್ಪು ಮಾಡಿದನಾ? ಅಥಾವ ನಾನು ಮಾಡಿದ್ದೆ ಸರಿನಾ?

ಹೇ ಹುಡಗಿ............


ಹಾಯ್......
                  sorry ಕಣೀ ನಿನ್ನ ಹೆಸರೆ ನನಗೆ ಗೂತ್ತಿಲ್ಲ ಅದಕ್ಕೆ ನಿನ್ನ "ಹುಡಗಿ" ಅಂತ ಕರೆಯುತ್ತಿರುವದು, ನಾನೆ ನಿನಗೆ ಒಂದು ಹೆಸರು ಇಡೋಣಾ ಅಂತಿನಿ ಆದರೆ ಯಾಹುದು ನಿನಗೆ ಸರಿ ಹೊಂದುತ್ತಿಲ್ಲ ಹೆಸರಿನ ವಿಚಾರ ಬಿಡು ಇವಾಗ ವಿಷಯಕ್ಕೆ ಬರೊಣಾ.....
          ಎಲ್ಲಾ ಹುಡುಗರ ಹಾಗೆ ನಾನು ಕೊಡ ನನ್ನ ಕನಸಿನ ಹುಡಗಿಯ ಬಗ್ಗೆ ನುರಾರು ಕಲ್ಪನೆಗಳನ್ನು ಹೂಂದಿದ್ದೆ, 5’6’’ ನಿಂದ 5’8” ಏತ್ತರ, ತಳ್ಳಗೆ, ಬೆಳ್ಳಗೆ ರಸ್ತೆಯಲ್ಲಿ ಅವಳು ಹೊಗ್ತಾ ಇದ್ರೆ ಏಲ್ಲರು ನನ್ನ ಹುಡಗಿನೆ ನೊಡ ಬೇಕು, ನಾನು ಏಷ್ಟ್ ಬೆಜಾರಲ್ಲಿ ಇದ್ದರು ಅವಳ  ಮುಖ ನೋಡಿದ ಕ್ಷಣ ಏಲ್ಲಾ ಮರೆತು ಬಿಡಬೇಕು ಹೇಗೆ ನುರಾರು ಕಲ್ಪನೆಗಳೂ ಇದ್ದವು..
        ಮೇಲಿನ ನನ್ನ ಕಲ್ಪನೆಗಳಲ್ಲಿ ಇರುವ ಯಾವುದೆ ಗುಣ ಇರದ ನೀನು ಅದು ಹೇಗೆ ನನ್ನ ಮನಸ್ಸಿಗೆ ಲಗ್ಗೆ ಇಟ್ಟೆ? ಸುಂದರವಾಗಿ ಇರುವ ಹುಡಗಿಯರನ್ನು ನೋಡಿದಾಗಲೆಲ್ಲ ಅವರನ್ನು ಮನಸ್ಸು ಇಷ್ಟಪಡುವದು ಸಹಜ ಆದರೆ ಕೆಲ ಸಮಯಗಳ ನಂತರ ಅಡ್ರೆಸ್ ಇಲ್ಲದ ಹಾಗೆ ಹೋಗಿ ಬಿಡುತ್ತಾರೆ ಆದರೆ ನೀನ್ಯಕೆ ಇನ್ನೂ ಹೋಗಿಲ್ಲ? ಯಾಕೆ ನನ್ನ ಮನಸ್ಸಿಗೆ ಇಷ್ಟೊಂದು ಕಾಡಿಸುತ್ತಾ ಇದ್ದಿಯಾ?
       ಪಾಪ ಇದರಲ್ಲಿ ನಿನ್ನ ತಪ್ಪು ಏನು ಇಲ್ಲ ಬಿಡು, ನಿನು ಯಾವತ್ತು ನನ್ನ ಮುಖ ಕೂಡ ಸರಿಯಾಗಿ ನೋಡೆ ಇಲ್ಲ ಇನ್ನು "smile" ಕೊಡುವದು ದುರದ ಮಾತು ನಾನೆ ದಿನಾ ನಿನ್ನ ಮುಖ ನೋಡಿ ನೋಡಿ ಏನೇನೊ ಕಲ್ಪಸಿ ಕೊಳ್ತಾ ಇದ್ದೆನೆ
       ಒಂದು ಸಾರಿ ನಿನ್ನ ಎದುರಿಗೆ ಬಂದು "ಹಾಯ್" ಹೇಳಿ ನಿನ್ನ ಹೆಸರು ಕೇಳಬೇಕು ಅಂಥಾ ಅಂದುಕೊಳ್ಳುತೆನೆ ಆದರೆ ದೈಯಾ೯ನೆ ಬರಲ್ಲಾ ಕಣೆ, ಅದೇನು ಜಾದುನೊ ನಿಂದು, ನುರಾರು ವಿದ್ಯಾಥಿಗಳ ಎದುರಿಗೆ ಘಂಟೆ ಘಂಟಲೆ ಚಚಾ೯ ಸ್ಪದೆ೯ಗಳಲ್ಲಿ ಯಾವುದೆ ಅಳುಕಿಲ್ಲದೆ ಮಾತನಾಡುತಿದ್ದ ನಾನು ಇಂದು ಒಂದು ಹುಡಗಿಗೆ "ಹಾಯ್" ಹೇಳೊಕೆ ಹೆದರುತಿದ್ದೆನೆ ಅಂತಾ ಏನದ್ರು ನನ್ನ ಬಾಲ್ಯ ಸ್ನೆಹಿತರಿಗೆ ಗೋತ್ತಾದರೆ ನನ್ನ ಕಥೆ ಅಷ್ಟೆ...
       ಪ್ರತಿ ಸಾರಿಯು ನೀನು ನನ್ನ ಹತ್ತಿರ ಬಂದಾಗ ನನ್ನ "Heart" 100+ ವೇಗದಲ್ಲಿ ಬಡಿದುಕೊಳುತ್ತದೆ, ನೀನು ನನ್ನ ಹತ್ತಿರ ಬರುತ್ತಿಯಾ, ನನಗೆ Smile ಕೊಡುತಿಯಾ ಅಂದುಕೊಳ್ಳುತ್ತೆನೆ ಆದರೆ ನಿನು ನನ್ನ ಯಾವ ಊರ ದಾಸ್ಸಯ್ಯಾ ಅಂಥಾ ಕೊಡ ನೋಡಲ್ಲ...
      ಹೇ ನಿನಗೆ ಹೊಲಿಸಿದರೆ ನಾನೇ ನಿನಗಿಂತ ಏಷ್ಟೊ fair ಮತ್ತು smart ಆಗಿದ್ದೆನೆ ಗೊತ್ತಾ ಆದ್ರೊ ಏನೆ ನಿಂದು ತಕರಾರು plz ಒಂದು ಸಲ ಮಾತನಡಿಸು
   ಒಂಟೆ ತರಹ Height ಇದ್ದಿಯಾ, ಆನೆ ತರಹ ದಪ್ಪ ಇದ್ದಿಯಾ, ಬಿಪಾಷ ಬಸು ಬಣ್ಣ ಇದ್ದಿಯಾ ಆದ್ರು ನೀನು ನನಗೆ ಇಷ್ಟಾ ಕಣೆ, ನಾನು-ನೀನು ರಸ್ತೆಯಲ್ಲಿ ಜೂತೆಯಾಗಿ ಹೋಗ್ತಾ ಇದ್ರೆ ಜನರು ನಮ್ಮನ್ನು ನೋಡಿ "ನೋಡು ಮಗಾ ಆನೆ-ಒಂಟೆ ಜೋತೆಗೆ ಹೋಗ್ತಾ ಇವೆ" ಅನ್ನುತ್ತಾರೆನೊ ಆದ್ರು ನನಗೆ ಬೆಜಾರಿಲ್ಲ ಏಕೆಂದ್ರೆ ನಿನೆಂದ್ರೆ ನನಗೆ ತುಂಬಾ ಇಷ್ಟಾ ಕಣೇ.
      ನೀನು ಏಷ್ಟೇ ದಪ್ಪಾ ಆಗು, ಏಷ್ಟೇ ಕಪ್ಪಾಗು ಆವಗಲು ಕೊಡಾ ನಿನ್ನ ಇಷ್ಟೇ ಇಸ್ಟಾಪಡ್ತಿನಿ plz ಒಪ್ಪ್ಕೊಳೆ...
      ಈ ಸಲ ನೀನೆ ನನಗೆ ಹಾಯ್ ಹೆಳ್ತೆಯಲ್ಲಾ?
       ನಿನಗೊಸ್ಕರ ಕಾಯುತ್ತಿರುವ
            ಯಾವಾಗಲು ನಿನ್ನವ.................................
                                                                                                   ಪ್ರಶು

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...