Friday, November 2, 2012

ಚುಕ್ಕಿ

ಅಲ್ಲ ಇದು ಗಗನದಾ ಚುಕ್ಕಿ
ಇದು ನಲ್ಲೆಯ ಗಲ್ಲದ ಚುಕ್ಕೆ
ಕೆಂದುಟ್ಟಿಗಳ ಪಕ್ಕದ ಚುಕ್ಕೆ
ಅಲ್ಲ ಇದು ಬರಿ ಕಪ್ಪು ಚುಕ್ಕೆ
ನನ್ನ ಮನಸ್ಸು ಕದ್ದ ಕಳ್ಳ ಚುಕ್ಕೆ
ನಾ ಮನಸೋತ ಚುಕ್ಕೆ
ಅವಳ ಸೌಂದರ್ಯಕ್ಕೆ ಇಟ್ಟ ದ್ರುಷ್ಠಿ ಚುಕ್ಕೆ
ನಲ್ಲೆ ನಕ್ಕಾಗ ನಗುವ ಚುಕ್ಕೆ
ನಲ್ಲೆಯ ನೋವಲಿ ಮಿಯುವ ಚುಕ್ಕೆ
ನಲ್ಲೆಯ ಕೋಪಕೆ ಬೆದರದ ಚುಕ್ಕೆ
ನಲ್ಲೆ ನಾಚುವಾಗ ಮಿಂಚುವ ಚುಕ್ಕೆ
ಮುಟ್ಟಲು ಹೋದರೆ ನಾಚಿ ಮರೆಯಾಗುವ ಚುಕ್ಕೆ
ಬೇರೆಯವರಿಗೆ ಕಾಣದ ಚುಕ್ಕೆ
ನನಗೆ ಮಾತ್ರ ಸದಾ ಕಾಡುವ ಚುಕ್ಕೆ
ಇದು ನನ್ನ ನಲ್ಲೆಯ ಗಲ್ಲದ ಚುಕ್ಕೆ

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...