Saturday, April 28, 2018

ಬೆಂಗಳೂರು ಡೈರಿ


    ರಾಜಭವನ Road ಮೂಲಕ ನಾವು ಮೆಜೆಸ್ಟಿಕ್ ಕಡೆ ಹೋಗುವಾಗ ಬಸವೇಶ್ವರ ಸರ್ಕಲ್ ಬರುತ್ತೆ ಅಲ್ಲಿ ಸುಮಾರು 150 ಸೆಕೆಂಡ್ ಗಳ ಸಿಗ್ನಲ್ ಇದೆ, ನಾವು ಪ್ರತಿ ಸಂಜೆ ಅದೇ ರಸ್ತೆ ಮೂಲಕ ಮನೆಗೆ ಹೋಗುವುದು, ನಮ್ಮ ಕ್ಯಾಬ್ ಅಲ್ಲಿಗೆ ಸಂಜೆ 8.30 ರಿಂದ 8.40ರಷ್ಟಕ್ಕೆ ಬರುತ್ತೆ, ಅದೇ ರಸ್ತೆಯಲ್ಲಿ ವಿಧಾನಸೌಧ, ರಾಜಭವನ ಮತ್ತು ಕೆಲವು ದೊಡ್ಡ ಹೋಟೆಲ್ಗಳು ಇರುವುದರಿಂದ ರಾತ್ರಿ 10ರ ತನಕವು ಟ್ರಾಫಿಕ್ ಇರುತ್ತದೆ, ಬಸವೇಶ್ವರ ಸರ್ಕಲ್ ನ ಸಿಗ್ನಲ್ ದಾಟಲು ನಮ್ಮ ಕ್ಯಾಬ್ ಗೆ ಸುಮಾರು 2 ರಿಂದ 3 ನಿಮಿಷಗಳ ಸಮಯ ಬೇಕಾಗುತ್ತದೆ.
       ನಾನು ಹಲವು ದಿನಗಳಿಂದ ಗಮನಿಸಿದಂತೆ ಅಲ್ಲೊಂದು ಅಜ್ಜಿ ಸಿಗ್ನಲ್ ರೆಡ್ ಇದ್ದಾಗ cotton buds ಗಳ ಚಿಕ್ಕ ಚಿಕ್ಕ ಪ್ಯಾಕ್ ಗಳನ್ನು  ಹಿಡಿದುಕೊಂಡು ಬೈಕ್ ಸವಾರರು ಮತ್ತು ಕಾರುಗಳ ಹತ್ತಿರ ಹೋಗಿ ಮರುತ್ತಿದ್ದರು, ನಾನು ಗಮನಿಸಿದಂತೆ ಯಾರು ಅವುಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ, ಅದೊಂದು ದಿನ ನಮ್ಮ ಕ್ಯಾಬ್ ನ ಪಕ್ಕದಲ್ಲಿ ನಿಂತಿದ್ದ ಕಾರಿನ ಬಳಿ ಹೋದ ಅಜ್ಜಿ "ಬರಿ 15 ರೂಪಾಯಿ ಅಷ್ಟರಿ ತಗೊಳಿ" ಅನ್ನುತಿತ್ತು ಆ ಕಾರಿನ ಆಸಾಮಿ ಕಿಡಕಿಯ ಗ್ಲಾಸ್ ಕೂಡ ಇಳಿಸಲಿಲ್ಲ, ಆದರೂ ಹಠಬಿಡದ ಅಜ್ಜಿ ಹೋಗಲಿ 10 ರೂಪಾಯಿಗಾದ್ರು ತಗೊಳಿ ಎಂದು ಮತ್ತೆ ಕೇಳಿತು ಆದರೆ ಆ ವ್ಯಕ್ತಿಗೆ ಆ ಮಾತು ಕೇಳಿಸಲೇ ಇಲ್ಲ, ಯಾಕೋ ಆ ಅಜ್ಜಿ ಮುಖ ನೋಡಿ ಮನಸ್ಸಿಗೆ ತುಂಬಾ ಬೇಜರಾಯಿತು, ಹೋಗಲಿ ನಾನದರು ಕೊಳ್ಳವ ಎಂದು ಆ ಅಜ್ಜಿಯ ಕರೆದು " ಹೆಂಗಜ್ಜಿ ಒಂದು ಪ್ಯಾಕೇಟು" ಅಂದೆ ಅಜ್ಜಿ ಮುಖದಲ್ಲಿ ಯಾವುದೇ ಭಾವನೆಗಳು ಇಲ್ಲದೆ 30 ರೂಪಾಯಿ ಅಂದಿತು, ಆಗಲೇ ಸಿಗ್ನಲ್ ಹಸಿರು ಆಗಿತ್ತು ಕರೆದ ತಪ್ಪಿಗೆ 30 ರೂಪಾಯಿ ಕೊಟ್ಟು ಒಂದು ಪಾಕೆಟ್ cotton buds ಕೊಂಡೆ.
_____________________
        ಟ್ರಿಪ್ ಶೀಟ್ ನಲ್ಲಿ ಸಹಿ ಮಾಡಲು ಪೆನ್ ಹುಡುಕುತಿದ್ದೆ, ಕ್ಯಾಬ್ ನಲ್ಲಿ ಯಾರ ಬಳಿಯೂ ಪೆನ್ ಇರಲಿಲ್ಲ, ನಮ್ಮ ಕ್ಯಾಬ್ ಡ್ರೈವರ್ ಮುಂದೆ ಎಲ್ಲಾದರು ತಗೊಳೋನಾ ತಡ್ರಿ ಸರ್ ಎಂದು ಗಾಡಿ ಓಡಿಸುತ್ತಿದ್ದರು, ಅಲಸೂರ್ ಲೇಕ್ ಸಿಗ್ನಲ್ ಬಳಿ ಒಬ್ಬ ಬಾಲಕ ಪೆನ್ನುಗಳನ್ನು ಮಾರುತ್ತಿದ್ದ, ಅವನನ್ನು ಹತ್ತಿರ ಕರೆದ ನಮ್ಮ ಡ್ರೈವರ್ ಹೇಂಗೂ ಮರಿ ಪೆನ್ನು ಅಂದರು, ಅದಕ್ಕೆ ಆತ 10 ರೂಪಾಯಿ ಸಾರ್ ಅಂದ, ಸರಿ ಎಂದು 10ರ ಎರಡೂ ನೋಟು ಕೊಟ್ಟು ಎರಡು ಪೆನ್ನು ತೆಗೆದುಕೊಂಡರು, ಸಿಗ್ನಲ್ ಗ್ರೀನ್ ಆಗಿತ್ತು ಆಗಲೇ ಕ್ಯಾಬ್ ಹೊರಟಿತ್ತು, ಹಿಂದಿನಿಂದ ಸಾರ್ ಎಂದೂ ಕೂಗಿಕೊಂಡು ಓಡಿ ಬಂದ ಆ ಹುಡುಗ " ಸಾರ್ 1 ಪೆನ್ ತಗೊಂಡ್ರೆ 10 ರೂಪಾಯಿ, 2 ಪೆನ್ ತಗೊಂಡ್ರೆ 18 ರೂಪಿಯಿ ಅಷ್ಟೇ ಎಂದು ಎರಡು ರೂಪಾಯಿ ಮರಳಿಸಿ, ಕ್ಷಣಾರ್ಧದಲ್ಲಿ ಅಲ್ಲಿಂದ ಮಾಯವಾದ....

Thursday, April 26, 2018

ದೆವ್ವಗಳನ್ನು ಬೆನ್ನಟ್ಟಿ ಹೋದವನ ಕಥೆ

              ಆಗ ನಮ್ಮೂರಿನ ಪಕ್ಕದ ಹಳ್ಳಿಯ ಶಾಲೆಗೆ ಹೋಗುತ್ತಿದೆ ನನ್ನ ಜೊತೆ ಇನ್ನು ಅನೇಕ ಮಕ್ಕಳು ಬರುತ್ತಿದ್ದರು, ಸುಮಾರು 2 ಕಿಲೋಮೀಟರ್ ನೇಡದೆ ಹೋಗುತ್ತಿದ್ದೆವು, ಆ ಊರಿನ ರಸ್ತೆಯಲ್ಲಿ ಒಂದು ಹಾಳು ಬಾವಿಯೊಂದು ಇತ್ತು ಪಕ್ಕದಲ್ಲೇ ಒಂದು ದೈತ್ಯ ಹುಣಸೆಮರ, ಅಲ್ಲಿ ದೆವ್ವವಿದೆ ಎಂದು ನಾವೆಲ್ಲ ನಂಬಿದ್ದಿವು, ಆ ಸ್ಥಳ ಬಂದಾಗಲೆಲ್ಲ ನಮ್ಮ ಎದೆಯ ಬಡಿತ ಹೆಚ್ಚಾಗುತ್ತಿತ್ತು, ಆಗ ಎಲ್ಲಾ ನಾವು ದೆವ್ವಗಳ ಬಗ್ಗೆಯೇ ಮಾತಾಡುತ್ತಿದ್ದೆವು, ಕೊಳ್ಳಿದೆವ್ವ, ಗಾಳಿದೆವ್ವ, ಹೆಣ್ಣುದೆವ್ವ, ನಾಯಿ ದೆವ್ವ ಹೀಗೆ ಅನೇಕ ದೆವ್ವಗಳು ನಮ್ಮ ಮಾತಿನ ಮಧ್ಯ ಬರುತ್ತಿದ್ದವು, ಹಾಗೆಯೇ ನಮ್ಮೂರಿನಲ್ಲೇ ದೆವ್ವ ಮೈ ಮೇಲೆ ಬಂದದನ್ನು ನಾವು ಅನೇಕರು ಕಣ್ಣಾರೆ ನೋಡಿದ್ದೆವು, ಆಗ ದೆವ್ವಗಳೆಂದರೆ ವಿಪರೀತ ಭಯವಿತ್ತು ಆಗಲೇ ದೆವ್ವಗಳ ಬಗ್ಗೆ ವಿಚಿತ್ರ ಭಯಮಿಷಿತ್ರ ಕುತೂಹಲ ಮುಡಿತ್ತು.
                   ಹಳ್ಳಿಯ ಓದು ಮುಗಿಸಿ ಕಾಲೇಜಿಗೆ ಬೆಂಗಳೂರಿಗೆ ಕಾಲಿಟ್ಟ ಮೇಲು ದೆವ್ವಗಳ ಮೇಲಿನ ಕುತೂಹಲ ಕಡಿಮೆಯಾಗಿರಲಿಲ್ಲ, ಆದರೆ ಭಯ ಸ್ವಲ್ಪ ಕಡಿಮೆ ಆಗಿತ್ತು, ಪ್ರತಿ ಮದ್ಯಾಹ್ನ ನಾವು ಕ್ರಿಕೆಟ್ ಆಡಲು ಒಂದು ಚಿಕ್ಕ ಮೈದಾನಕ್ಕೆ ಹೋಗುತ್ತಿದ್ದೆವು ಅಲ್ಲಿ ಒಂದು ಹುಣಸಿಮರವಿತ್ತು, ಅದ್ಯಾಕೋ ಗೊತ್ತಿಲ್ಲ ಹುಣಸಿಮರವಿದ್ದಲ್ಲಿ ದೆವ್ವಗಳಿರುತ್ತವೆ ಎಂಬ ನಂಬಿಕೆ ನನ್ನಲ್ಲಿ ಆಳವಾಗಿ ಬೇರೂರಿತ್ತು, ಆ ಹುಣಸೆಮರದ ಸ್ವಲ್ಪ ಪಕ್ಕದಲ್ಲೇ ಒಂದು ಸ್ಮಶಾನ ಇತ್ತು, ಅದೇ ಕಾರಣಕ್ಕೆ ಅಲ್ಲಿ ಯಾರು ಆಟ ಆಡಲು ಬರುತ್ತಿರಲಿಲ್ಲ ಬಹುಷ್ಯ ನಾವೇ ಅಲ್ಲಿ ಮೊದಲು ಕ್ರಿಕೆಟ್ ಆಡಲು ಆರಂಭಿಸಿದ್ದು, ಮೊದಲೆಲ್ಲ ಸ್ವಲ್ಪ ಭಯ ವಿತ್ತು ಬರುಬರುತ್ತಾ ಅದು ಹೋಗಿ ದೆವ್ವಗಳ ಬಗ್ಗೆ ಕೇವಲ ಕುತೂಹಲ ಉಳಿದಿತ್ತು, ನಂತರ ಆ ಕುತೂಹಲ ದೆವ್ವವನ್ನೂ ಒಂದುಸಾರಿಯಾದರು ನೋಡಲೇ ಬೇಕು ಎಂಬ ಹಟವಾಗಿ ಬದಲಾಯಿತು, ಅದಕ್ಕೆ ನನ್ನ ಗೆಳೆಯರು ಸಾಥ ನೀಡಿದ್ದರು, ಅನೇಕ ರಾತ್ರಿ ನಾವು ಆ ಹುಣಸೆ ಮರದ ಬಳಿ ಹೋಗಿ ಬರುತ್ತಿದ್ದೆವು, ಆದರೆ ಎಂದು ನಮಗೆ ದೆವ್ವ ದರ್ಶನವಾಗಲಿಲ್ಲ, ಪರೀಕ್ಷಾ ಸಮಯದಲ್ಲೊಂತು ಆ ಹುಣುಸೆಮರದ ಸ್ಮಶಾನದ ಮೈದಾನ ನಮಗೆ ಓದಿನ ಚರ್ಚೆ ಮತ್ತು ಹಾಳು ಹರಟೆಯ ಸ್ಥಳವಾಗಿತ್ತು.
ಅದೇ ಸಮಯದಲ್ಲಿ ನನಗೆ ಪುಸ್ತಕ ಓದುವ ಅಭ್ಯಾಸ ಅಂಟಿತು, ಅದುವರೆಗೂ ಕೇವಲ ದೆವ್ವದ ಸಿನಿಮಾ ನೋಡುತ್ತಿದ್ದ ನಾನು ದೆವ್ವಗಳ ಬಗ್ಗೆ ಬಂದ ಪುಸ್ತಕಗಳನ್ನು ಓದಲು ಆರಂಭಿಸಿದೆ, ಆಗ ತಿಳಿದ ವಿಷಯವೆಂದರೆ ದೆವ್ವಗಳು ಕೇವಲ ಮನಷ್ಯ ಗಣದಲ್ಲಿ ಹುಟ್ಟಿದವರಿಗೆ ಮಾತ್ರ ಗೋಚರಿಸುತ್ತವೇ, ದೇವಗಣ ಮತ್ತು ರಾಕ್ಷಸಗಣದಲ್ಲಿ ಹುಟ್ಟಿದವರಿಗೆ ಅವು ಗೋಚರಿಸುದಿಲ್ಲವಂತೆ ಎಂಬ ಹೊಸದಾದ ವಿಷಯ ತಿಳಿಯಿತು ಬಹುಷ್ಯ ನಾವು ಮನುಷ್ಯಗಣದಲ್ಲಿ ಹುಟ್ಟಿಲ್ಲ ಹಾಗಾಗಿ ನಮಗೆ ಜನ್ಮದಲ್ಲಿ ದೇವ್ವ ದರ್ಶನ ಭಾಗ್ಯವಿಲ್ಲವೆಂದು ಸುಮ್ಮನಾದೆವು.

                ಇಂಜಿನಿಯರಿಂಗ್ ಮುಗಿದು ಕೆಲಸಕ್ಕೆ ಸೇರಿ ಕೆಲವು ವರ್ಷಗಳು ಉರಳಿದ್ದವವು, ದೆವ್ವಗಳನ್ನೂ ಮರೆತಾಗಿತ್ತು, ಮೊದಲ ಸಲ ಅಮೆರಿಕಾಕ್ಕೆ ಹೋಗಿದ್ದೆ, ಸೌತ್ ಕ್ಯಾರಿಲೋನಾದ ಕೊಲಂಬಿಯಾ ಎಂಬ ಪಟ್ಟಣದಲ್ಲಿ ಒಂದು ವಾರ ಇದ್ದೆ, ನನ್ನ ಜೊತೆ ನನ್ನ ಸಹೋದ್ಯೋಗಿ ಗ್ರೆಗ್ ಕೊಡ ಇದ್ದರು, ಪ್ರತಿ ಸಂಜೆ ಆಫೀಸ್ ಸಮಯದ ನಂತರ ನನ್ನನ್ನು ಅಮೇರಿಕಾ ದರ್ಶನಕ್ಕೆ ಕರೆದುಕೊಂಡು ಹೋಗುತ್ತಿದ್ದರು, ನನಗೆ ಇನ್ನೂ ಚನ್ನಾಗಿ ನೆನಪಿದೆ ಅಂದು ಗುರುವಾರ ಸಂಜೆ, ಶುಕ್ರವಾರ ಮಧ್ಯಾಹ್ನ ಗ್ರೆಗ್ ಮರಳಿ ಮಾಸವಿಲ್ ಗೆ ಹೋಗುವವರಿದ್ದರು, ನಾನು ಶನಿವಾರ ಭಾರತಕ್ಕೆ ವಾಪಸ್ಸು ಬರಬೇಕಿತ್ತು, ಸೋ ಅದು ನಾವಿಬ್ಬರು ಜೊತೆಗಿರುವ ಕೊನೆಯ ದಿನವಾಗಿದ್ದರಿಂದ ಗ್ರೆಗ್ ನನ್ನನ್ನು ರಿವರ್ ವಿವ್ವ ಎಂಬ ರೆಸ್ಟುರೇಟ್ ಗೆ ಕರೆದುಕೊಂಡು ಹೋದ, ನಮ್ಮ ಜೊತೆಗೆ ನಮ್ಮದೇ ಕಂಪನಿಯ ಇತರ ಇಬ್ಬರು ಸಹದ್ಯೋಗಿಗಳು ಇದ್ದರು, ಗ್ರೆಗ್ ಒಬ್ಬ ಅತ್ತುತ್ತಮ ಮಾತುಗಾರ ಕ್ಷಣಮಾತ್ರದಲ್ಲಿ ಯಾರ ಜೊತೆ ಬೇಕಾದರೂ ಗೆಳೆತನ ಮಾಡಬಲ್ಲವ, ಆತ ನನಗೆ ಆಫೀಸ್ ಕೆಲಸದ ಬಗ್ಗೆ ಹೇಳಿದಕ್ಕಿಂತ ಜೀವನ ಪಾಠವನ್ನೇ ಹೆಚ್ಚು ಮಾಡಿದ್ದ, ಅಂದು ರಾತ್ರಿ ಊಟ ಮುಗಿಸಿಕೊಂಡು ಹೋಟೆಲ್ ಗೆ ಮರಳಿ ಬಂದಾಗ ಮಧ್ಯರಾತ್ರಿ ಸುಮಾರು ಎರಡು ಘಂಟೆ, ನನ್ನ ರೂಮ್ ಹೋಟೆಲ್ ನ ಎರಡನೇ ಫ್ಲೋರ್ ನಲಿತ್ತು, ಗ್ರೆಗ್ 4ನೇ ಫ್ಲೋರ್ ನಲ್ಲಿ ಇದ್ದರು, ಬೆಳಗ್ಗೆ ಮತ್ತೆ 7.30 ಕ್ಕೆ ಆಫೀಸ್ ಗೆ ಹೋಗಬೇಕಾಗಿತ್ತು, ವಿಪರೀತ ನಿದ್ರೆ ಬೇರೆ ಬಂದಿದ್ದರಿಂದ ಸೀದಾ ರೂಮಿಗೆ ಬಂದವನೇ ಮಲಗಿ ಬಿಟ್ಟಿದ್ದೆ, ಆ ರೂಮು ಡಬಲ್ bed ಇದ್ದ ರೋಮ್ ಆಗಿತ್ತು, ಬಾಗಿಲಗೆ ಹತ್ತಿರವಿದ್ದ bed ನಲ್ಲಿ ನಾನು ಮಲಗಿದ್ದೆ, ಸುಮಾರು 10 ನಿಮಿಷಗಳಾಗಿತ್ತು, ಅರೆ ನಿದ್ರೆಯಲಿದ್ದೇ ಇದ್ದಕಿದ್ದ ಹಾಗೆ ಸುಮಾರು 10-12 ವರ್ಷದ ಬಲಕನೊಬ್ಬ ರೂಮಿನೊಳಗೆ ನೆಡೆದು ಬಂದ, ಬಾಗಿಲು ಲಾಕ್ ಮಾಡಿದ್ದು ನನಗೆ ಚನ್ನಾಗಿ ನೆನಪಿತ್ತು, ಆದರೂ ಅದು ಹೇಗೆ ಯಾರದು ಒಳಬರಲು ಸಾಧ್ಯ!!!? ಸೀದಾ ಬಂದ ಆ ಬಾಲಕ ಪಕ್ಕದಲ್ಲಿ ಖಾಲಿ ಇದ್ದ ಬೆಡ್ ನಲ್ಲಿ ಮಲಗಿದೆ, ಕ್ಷಣಾರ್ಧದಲ್ಲಿ ನನ್ನ ನಿದ್ರೆ ಹಾರಿತ್ತು, ಪಕ್ಕಕ್ಕೆ ತಿರುಗಿ ನೋಡಲು ನನಗೆ ಭಯವಾಗಿತ್ತು, ಮನದಲ್ಲೇ ಮುಕ್ಕೋಟ್ಟೆ ದೇವರಗಳನ್ನು ನೆನದಿದ್ದೆ, ಆ ಕ್ಷಣದಲ್ಲಿ ನನಗೆ ಪಕ್ಕಾ ಅದು ದೆವ್ವವೆ ಎಂಬ ಬಾವನೆ ಮೂಡಿತ್ತು, ಆ ಎರಡು bed ಗಳ ಮಧ್ಯ ಒಂದು ಚಿಕ್ಕ ಟೇಬಲ್ ಇತ್ತು ಅದರ ಮೇಲೆ ಒಂದು ಬೈಬಲ್ ಇಟ್ಟಿದ್ದರು, ನಾನು ನೋಡಿದ ಚಲನಚಿತ್ರಗಳಲ್ಲಿ ಕೈಯಲ್ಲಿ ಬೈಬಲ್ ಇದ್ದರೆ ದೆವ್ವಗಳು ಏನು ಮಾಡುವುದಿಲ್ಲ ಎಂಬುದು ನೆನಪಾಗಿ, ಹಿಂದೆ ತಿರಗದೆ ಟೇಬಲ್ ಮೇಲಿನ ಬೈಬಲ್ ಎತ್ತಿ ಅದ ಅವಚಿ ಮಲಗಿದ್ದೆ, ಅದ್ಯಾವಾಗ ನಿದ್ರೆ ಬಂದಿತ್ತೋ ಗೊತ್ತಿಲ್ಲ ಬೆಳಗ್ಗೆ ಅಲಾರಾಂ ಹೊಡೆದಾಗಲೇ ಎಚ್ಚರವಾಗಿತ್ತು, ಪಕ್ಕದ ಬೆಡ್ ಕಡೆ ನೋಡಿದರೆ ಯಾರು ಇಲ್ಲ, ಬೆಡ್ ಮೇಲಿನ ಬ್ಲಾಕೆಂಟ್ ಕೂಡ ಮಡಿಚಿ ಇಟ್ಟ ರೀತಿಯೇ ಇತ್ತು, ಬೈಬಲ್ ಟೇಬಲ್ ಮೇಲೆಯೇ ಇತ್ತು, ಹಾಗಾದರೆ ರಾತ್ರಿ ನಾನು ಕಂಡ ಬಾಲಕ ಎಲ್ಲಿ? ಬಾಗಿಲು ಕೂಡ ಲಾಕ್ ಆಗಿತ್ತು, ಹಾಗಾದರೆ ರಾತ್ರಿ ನಾನು ನೋಡಿದ ಬಾಲಕ ಕೇವಲ ನನ್ನ ಭ್ರಮೆಯೇ? ಅಥವಾ ಅದು ದೆವ್ವವ್ವೆ ನನಗಿನ್ನೂ ಅದು ಯಕ್ಷಪ್ರಶ್ನೆ ಯಾಗಿದೆ.
                   ಅದಾಗಿ ಕೆಲವು ವರ್ಷಗಳ ಬಳಿಕ ಅದೊಂದು ದಿನ ನಮ್ಮ ಊರಿನಿಂದ ಬೆಂಗಳೂರಿಗೆ ಕಾರಿನಲ್ಲಿ ಒಬ್ಬನ್ನೇ ಬರುತ್ತಿದ್ದೆ, ಚಿತ್ರದುರ್ಗದಿಂದ ಸ್ವಲ್ಪ ಮುಂದೆ ಬಂದಿದ್ದೆ, ನನ್ನ ಕಾರಿನ ಹಿಂದೆಯೇ ಒಂದು ಕಾರು ಬರುತಿತ್ತು, ಸುಮಾರು ದೂರದಿಂದ ಅದು ನನ್ನ ಕಾರನ್ನೇ ಪಾಲೊ ಮಾಡುತ್ತಿರುವಂತೆ ಅನಿಸಿತು, ಅದು ಕೂಡ ಕೆಂಪು ಬಣ್ಣದ ರೇನಾಲ್ಟ್ ಕಾರ್ ಮನಸಿಗ್ಗೆ ಖುಷಿ ಅನಿಸಿತು ಯಾಕಂದರೆ ನನ್ನದು ಅದೇ ಕಾರ್, ಸುಮಾರು 4-5 km ಹೋದ ನಂತರ ಮತ್ತೆ ಕನ್ನಡಿಯಲ್ಲಿ ಪರೀಕ್ಷೆ ಮಾಡಿದರೆ ಅದೇ ಕಾರ್ ನನ್ನ ಕಾರಿನ ಹಿಂದೆಯೇ ಬರುತ್ತಿದೆ, ಈ ಬಾರಿ ಸ್ವಲ್ಪ ಸೂಕ್ಷಮವಾಗಿ ಗಮನಿಸೆದೆ, ಒಬ್ಬ ಮಹಿಳೆ ಕಾರ್ ಡ್ರೈವ್ ಮಾಡುತ್ತಿದ್ದಳು, ಹಾಗೆ ಕಾರಿನ ನಂಬರ್ ಪ್ಲೇಟ್ ಕಡೆ ಕಣ್ಣು ಹಾಯಿಸಿದೆ ಒಂದು ಕ್ಷಣ ಮೈ ಜುಂ ಎಂದಿತು, ಯಾಕಂದರೆ ಆ ಕಾರಿನ ನಂಬರ್ KA 02 MM xxxx, ನನ್ನ ಕಾರಿನ ನಂಬರ ಕೂಡ ಅದೇ...


ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...