Monday, September 12, 2011

ಸಂಜೆಯೊಂದರ ನೆನಪು...


                   ಅರೇ ಅದೆ ಉದ್ದವಾದ ಕುದಲುಗಳು, ಅದೆ ಅವಳ ನೇಚ್ಚಿನ ಕಪ್ಪು ಬಣ್ಣದ ಸೀರೆ, ಸಾವಿರಾರು ಕಿಲೊಮೀಟರ್ ದೂರ ಸಪ್ತ ಸಾಗರದಾಚೆ ಇರುವ ಅವಳು ಅದ್ಯಾವಾಗ ಇಲ್ಲಿಗೆ ಬಂದಳು? ಒಂದು ಕ್ಷಣ ಕುತುಹಲದಿಂದ, ದುಗುಡದಿಂದ ಅವಳ ಹತ್ತಿರ ಹೋಗಿ ನೋಡಿದಾಗ ಇವನಿಗೆ ಇವಳು ಬೇರೆಯಾರೂ ಎಂದು ತಿಳಿದು ಸ್ವಲ್ಪ ಸಮಾದಾನವಾಯಿತು, ಮನಸ್ಸಿನಲ್ಲಿ ಅಡಗಿದ್ದ ಬೇಸರವನ್ನು ಹೋಗಲಾಡಿಸಲು ಆಗುಂಬೆಯ ಸೂಯಾ೯ಸ್ತವನ್ನು ನೋಡಲು ಬಂದು ಕ್ಷಣ-ಕ್ಷಣಕ್ಕು ಬಣ್ಣ ಬದಲಿಸುತ್ತಿದ್ದ ಆಗಸ ಮತ್ತು ಸೂಯ೯ರ ರಂಗಿನಾಟದಲ್ಲಿ ಮೈ ಮರೆತಿದ್ದ ಇವನಿಗೆ ಸೂಯ೯ ಮತ್ತು ಇವನ ಮದ್ಯ ಬಂದು ನಿಂತ ಆ ಅಪರಿಚಿತ ಹೆಂಗಸು ಇವನನ್ನು ಕ್ಷಣಮಾತ್ರದಲ್ಲಿ 20 ವಷ೯ಗಳ ಹಿಂದಿನ ನೆನಪಿನಾಳಕ್ಕೆ ಎಳೆದಳು, ಏಷ್ಟೂ ವಷ೯ಗಳಿಂದ ಮನಸ್ಸಿನಿಂದ ಮರೆಯಾಗಿದ್ದ "ಪ್ರಾಥ೯ನಾ" ಎಂಬ ಹೆಸರನ್ನು ಮತ್ತೆ ನೆನಪು ಮಾಡಿದ್ದಳು.
                                               ***********************
                    "ಶೆಷಾದ್ರಿಪುರಂ ಪಿಯು ಕಾಲೇಜಿನ ಕಲಾ,ವಾಣಿಜ್ಯ ಮತ್ತು ವಿಜ್ಯಾನ ವಿಭಾಗದ ಏಲ್ಲಾ ವಿದ್ಯಾಥಿ೯ಗಳಿಗು ಇಂದಿನ ಚಚಾ೯ಸ್ಪದೆ೯ಗೆ ಸ್ವಾಗತ" ಎಂದು ಮೈಕಿನಲ್ಲಿ ದ್ವನಿ ಬರುತಿತ್ತು, ಇವನಿಗೆ ಅದ್ಯಾವುದರಲ್ಲು ಆಸಕ್ತಿ ಇಲ್ಲದಿದ್ದರು ಮನೆಗೆ ಹೋಗಿ ಮಾಡುವುದೆನು ಎಂದು ಸುಮ್ಮನೆ ಬಂದು ಸಭಾಂಗಣದಲ್ಲಿ ಕುಳಿತ, ಸ್ಪದೆ೯ ಆರಂಭವಾಗಿ ಅಧ೯ಗಂಟೆಯಾದರು ಒಬ್ಬ ಸ್ಪಧಿ೯ಯ ಮುಖವನ್ನು ನೋಡದೆ ತನ್ನದೆ ಲೋಕದಲ್ಲಿ ಮುಳುಗಿದ್ದ ಇವನಿಗೆ ಮೈಕಿನಲ್ಲಿ ಬಂದ ದ್ವನಿ "ಮುಂದಿನ ಸ್ಪಧಿ೯ ಪ್ರಥಮ ವಷ೯ದ ವಿಜ್ಯಾನ ವಿಭಾಗದ "ಪ್ರಾಥ೯ನಾ"  ಎಂದಾಗ ಅರೇ "ಪ್ರಾಥ೯ನಾ" ಏಷ್ಟೊಂದು ಮುದ್ದಾದ ಹೆಸರು, ಯಾರವಳು  ಇಷ್ಟೂಂದು ಮುದ್ದಾದ ಮತ್ತು ವಿಚಿತ್ರ ಹೆಸರಿನ ಹುಡಗಿ ಎಂದು ತೆಲೆ ಎತ್ತಿ ನೋಡಿದಾಗ ಆಗತ್ತಾನೆ ಸ್ಟೆಜ್ ಹತ್ತಿ ಮೈಕ್ ಹಿಡಿದು ನಿಂತಿದ್ದ ಹುಡಗಿ ಕಂಡಳು, ಊದ್ದವಾದ ಕುದಲು, ಕಪ್ಪನೆ ಉಡುಪು, ಮುಖದಲ್ಲಿ ದುಗುಡ , ಸಣ್ಣಗೆ ನಡುಗುತಿದ್ದ ಕೈಗಳು ಇದು ಮೂದಲನೆ ಸಲ ಅವನು ಪ್ರಾಥ೯ನಾಳನ್ನು ನೋಡಿದಾಗ ಅವಳು ಕಂಡ ರೀತಿ, ತ್ವದಲುತ್ತಲೆ ಮಾತು ಆರಂಭಿಸದಳು, ಸಭಾಂಗಣದಲ್ಲಿ ಹೊಮ್ಮುತಿದ್ದ ವಿಧ್ಯಾಥಿ೯ಗಳ ಕೇಕೆ, ನಗುಗಳನ್ನು ಏದುರಿಸಲಾಗದೆ ಬಂದಷ್ಟೆ ವೇಗವಾಗಿ ಮರಳಿ ಹೋಗಿದ್ದಳು, ಅದೇನೊ ಗೊತ್ತಿಲ್ಲ ಅವಳನ್ನು ಮಾತನಾಡಿಸ ಬೇಕು ಎಂದು ಸಭಾಂಗಣದ  ಹಿಂದೆ ಕುಳಿತಿದ್ದ ಇತ ಎದ್ದು ಅವಳ ಹತ್ತಿರ ಹೋದ, ಅವಳು ತಲೆ ತಗ್ಗಿಸಿ ಮುಲೆಯೊಂದರಲ್ಲಿ ಕುಳಿತಿದ್ದಳು ಇವನು ಪ್ರಾಥ೯ನಾ ಎಂದಾಗ ತಲೆ ಏತ್ತಿ ಇವನನ್ನು ನೋಡಿದಳು, ನೀಮ್ಮ ಜೋತೆ ಮಾತನಾಡಬೇಕು ಸ್ವಲ್ಪ ಆಚೆ ಬರುತ್ತಿರಾ ಅಂದಗಾ ಅಲ್ಲಿಂದ ಆಚೆ ಹೋದರೆ ಸಾಕು ಎಂದು ಮರು ಮಾತನಾಡದೆ ಹೋರ ಬಂದಳು.
                    ಆಚೆ ಬಂದು ಅವನು ತನ್ನ ಪರಿಚಯಮಾಡಿಕೊಂಡು ತಾನು ಪ್ರಥಮ ಕಲಾ ವಿಭಾಗದಲ್ಲಿ ಓದುತ್ತಿರುವುದಾಗಿ ತಿಳಿಸಿದ, ಒತ್ತಾಯದ ಮುಗುಳುನಗೆ ನಕ್ಕ ಅವಳು ಸುಮ್ಮನಾದಳು, ವೇಧಿಕೆಯ ಮೇಲೆ ತುಂಭಾ ಭಯದಿಂದ ನಿಂತಿದ್ದರಿ, ಅಭ್ಯಾಸವಿಲ್ಲದ ಮೇಲೆ ಏಕೆ ಇಂತಹ ಸ್ಪಧೆ೯ಗಳಲ್ಲಿ ಭಾಗವಹಿಸ ಬೇಕು ಎಂದು ಇವನು ಕೇಳಿದಾಗ ಮುಂದೆ ನಾನು ಇಂಜಿನಿಯರಿಂಗ್ ಓದಬೇಕು ಎಂದುಕೊಂಡಿರುವೆ ಅದಕ್ಕೆ ಇಂತಹ ಸ್ಪಧೆಗಳಲ್ಲಿ ಮತ್ತು ಸೆಮಿನರಗಳಲ್ಲಿ ಭಾಗವಹಿಸುವದು ಅವಶ್ಯ, ಪಸ್ಟ್ ಟೈಮ್ ಅಲ್ವಾ ಸ್ವಲ್ಪ ಭಯ ಅಯಿತ್ತು ಮುಂದೆ ಅಭ್ಯಸವಾಗುತ್ತೆ ಎಂಬ ಅವಳ ಮಾತು ಕೇಳಿ ಸುಮ್ಮನಾದ, ಕೆಲ ಕ್ಷಣದ ಬಳಿಕ
     "ಪ್ರಾಥ೯ನಾ" ಮುದ್ದಾದ ಹೆಸರು ಯಾರು ಇಟ್ಟರು ನಿಮಗೆ?
     "ಅಪ್ಪ-ಅಮ್ಮ, ನಾನು ಅಪ್ಪ-ಅಮ್ಮನಿಗೆ ಒಬ್ಬಳೆ ಮಗಳು, ಮದುವೆಯಾಗಿ 8 ವಷ೯ಗಳಾದರು ಅವರಿಗೆ ಮಕ್ಕಳಾಗಿರಲಿಲ್ಲವಂತೆ, ನಮ್ಮ ಅಜ್ಜಿ ಕಂಡ ಕಂಡ ದೇವರುಗಳಿಗೆ ಪ್ರಾಥ೯ನೆಗಳ ಮೇಲೆ ಪ್ರಥ೯ನೆ, ಪ್ರಾಥ೯ನೆಗಳ ಮೇಲೆ ಪ್ರಾಥ೯ನೆ ಮಾಡುತಿದ್ದರಂತೆ ಕೋನೆಗು ಅಜ್ಜಿಯ ಪ್ರಾಥ೯ನೆಗಳಿಗೆ ಬೇಸತ್ತ ದೇವರು ನನ್ನನ್ನು ಭೂಮಿಗೆ ಕಳುಹಿಸಿದನಂತೆ ಅದಕ್ಕೆ ನನಗೆ ಮನೆಯಲ್ಲಿ ಪ್ರಾಥ೯ನಾ ಎಂದು ಹೆಸರಿಟ್ಟರು" ಎಂದು ಅವಳು ನಕ್ಕಾಗ, ಇವನು ನಕ್ಕನು.
                                           ***********************
                ತೀಥ೯ಹಳ್ಳಿ ಪಕ್ಕದ ಹಳ್ಳಿಯವರಾದ ರಾಮೇಗೌಡರಿಗೆ ನೂರಾರು ಏಕ್ಕರೆ ಜಮೀನು ಉಂಟು, ಕುಳಿತು ಉಂಡರು ಮುಗಿಯದಷ್ಟು ಆಸ್ತಿ, ಅವರಿಗೆ ಇರುವದು ಒಬ್ಬನೆ ಮಗ, ಅವನು ಚನ್ನಾಗಿ ಓದಲಿ, ಇಲ್ಲೆ ಇದ್ದರೆ ಬರಿ ಕಾಡು ಅಲೆಯುತ್ತಾ ಹಾಳಾಗುತ್ತಾನೆ ಎಂದು ಬೆಂಗಳುರಿನಲ್ಲಿ ಇರುವ ತಮ್ಮನ ಮನೆಗೆ ಕಳುಹಿಸಿದರು ಹೀಗೆ ಬೆಂಗಳೂರಿಗೆ ಕಾಲಿರಿಸಿದ ಅಪ್ಪಟ್ಟ ಮಲೆನಾಡಿನ ಹುಡುಗನಿಗೆ ಒಂದೇ ತಿಂಗಳಲ್ಲಿ ಪರಿಚಯವಾದ ಹುಡಗಿಯೆ ಪ್ರಾಥ೯ನಾ, ಇಬ್ಬರ ತರಗತಿಗಳು ಬೇರೆ ಬೇರೆ ಆದರು ಇಬ್ಬರಿಗು ಅದು ಹೇಗೊ ಗಾಡವಾಗಿ ಸ್ನೆಹ ಬೆಳದು ಬಿಟ್ಟಿತು, ಇವನಿಗೊ ಓದುಹುದರಲ್ಲಿ ಸ್ವಲ್ಪಹು ಆಸಕ್ತಿ ಇಲ್ಲ, ಬರಿ ಕಾಡು, ಕಾಡು ಪ್ರಾಣಿಗಳೆಂದರೆ ಇಷ್ಟ, ಅವಳಿಗೊ ಓದುವದು ಬಲು ಇಷ್ಟ, ಹೀಗೆ ಪರಸ್ಪರ ವಿರುದ್ದ ಗುಣಗಳಿದ್ದರು ಇಬ್ಬರಲ್ಲೂ ಆಕಷ೯ಣೆ ಉಂಟಾಗಿತ್ತು, ಸದ್ದಿಲ್ಲದೆ ಆ ಪುಟ್ಟ ಹ್ರುದಯಗಳಲ್ಲಿ ಪ್ರೀತಿಯೊಂದು ಮೊಳಕೆ ಒಡೆದಿತ್ತು, ಪರಸ್ಪರ ಇಬ್ಬರು ಹೇಳಿಕೊಳ್ಳದಿದ್ದರು ಅವರ ಕಣ್ಣುಗಳಲ್ಲಿ ಅದು ವ್ಯಕ್ತವಾಗಿತ್ತು, ಶೆಷಾದ್ರಿಪುರಂ ಕಾಲೇಜು, ಮಲ್ಲೆಶ್ವರಂನ ರಸ್ತೆಗಳು ಅವರ ಪ್ರೀತಿಗೆ ಸಾಕ್ಷಿಯಾಗಿದ್ದವು.
             ಹೀಗೆಯೆ ವಷ೯ಗಳು ಉರಳಿದವು ಪಿ,ಯು ನಂತರ ಅವಳಿಗೆ ರಾಮಯ್ಯ ಕಾಲೇಜ್ ನಲ್ಲಿ ಇಂಜಿನಯರಿಂಗ್ ಸೀಟು ಸಿಕ್ಕಿತು, ಪಕ್ಕದ ಕಾಲೇಜ್ ನಲ್ಲಿ ಇವನು ಬಿ,ಎ ಗೆ ಅಡ್ಮಿಶನ್ ಮಾಡಿಸಿದ, ಎಲ್ಲವು ಚನ್ನಾಗಿತ್ತು ಹೀಗೆಯೆ ದಿನಗಳು ಉರಳುತಿದ್ದವು, ಅದೇಷ್ಟೊ ಸುಂದರ ಸಂಜೆಗಳಲ್ಲಿ ಇಬ್ಬರು ಕೈ ಕೈ ಹಿಡಿದು ನೆಡೆಯುತ್ತಾ ಭವಿಷ್ಯದ ಬಗ್ಗೆ ಸಾವಿರಾರು ಕನಸು ಹೆಣೆದಿದ್ದರು.
                                           ***********************
               ರಾಮೆಗೌಡರಿಗೆ ಆರೊಗ್ಯ ಸರಿಯಿಲ್ಲವೆಂಬ ಪತ್ರ ನೋಡಿದ ತಕ್ಷಣ ಇವನು ತಿಥ೯ಹಳ್ಳಿಗೆ ಹೋರಟು ನಿಂತ, ಹೋಗುವ ಮೂದಲು ಪ್ರಾಥ೯ನಾಳನ್ನು ಬೇಟ್ಟಿಮಾಡಿ ಅವಳಿಗೆ ಶಿಘ್ರದಲ್ಲೆ ಮರಳುವುದಾಗಿ ತಿಳಿಸಿ ಹೊರಟು ಹೊದ, ಆದರೆ ತಿಥ೯ಹಳ್ಳಿ ತಲುಪುವ ಮೊದಲೆ ಅವನ ತಂದೆ ತನ್ನ ಕೊನೆಯ ಉಸಿರೆಳೆದಿದ್ದರು, ತಂದೆಯ ಅಕಾಲಿಕ ಮರಣ ಮತ್ತು ಜಮೀನಿನ ಕೆಲಸದ ಹೋಣೆಯಿಂದಾಗಿ ಅವನಿಗೆ ಮತ್ತೆ ಬೆಂಗಳೂರಿಗೆ ಹೋಗುವುದಾಗಲಿ, ತನ್ನ ಶಿಕ್ಷಣವನ್ನು ಮುಂದುವರೆಸಲು ಆಗಲಿಲ್ಲ, ಕೆಲ ದಿನಗಳ ಬಳಿಕ ವಿವರವಾಗಿ ಪ್ರಾಥ೯ನಾಗೆ ಪತ್ರ ಬರೆದ ಅಲ್ಲದೆ ನೀನ್ನನ್ನು ನೋಡಬೇಕು ಮತ್ತು ಮಾತನಾಡ ಬೇಕು ಎಂಬ ಹಂಬಲ ಉಂಟಾಗುತ್ತಿದೆ ಎಂದು ಬೆರೆದಿದ್ದ, ಕೇಲವೆ ದಿನಗಳಲ್ಲಿ ಅವಳಿಂದ ಉತ್ತರ ಬಂದಿತು....
    
         ಹಾಯ್...
                    ಹೇಗಿದ್ದಿಯಾ?
                     ಅಪ್ಪ ನನಗೆ ಮದುವೆ ಗೊತ್ತು ಮಾಡಿದ್ದಾರೆ, ಹುಡುಗ ನಮ್ಮ ದೂರದ ಸಂಬಂಧಿ, ಸದ್ಯ ಅಮೇರಿಕಾದಲ್ಲಿ ಇದ್ದಾನೆ, ನಿನ್ನ ಪತ್ರ ಬಂದ ಮರುದಿನವೆ ನಮ್ಮ ಬಗ್ಗೆ ಮನೆಯೆಲ್ಲಿ ಹೇಳಿದೆ, ಜಾತಿ,ಅಂತಸ್ತು, ವಿದ್ಯೆ ಹೀಗೆ ಯಾವುದರಲ್ಲು ಸಮಾನನಲ್ಲದ ಅವನ ಜೋತೆ ನೀನು ಅವನ ಗೆಳತನ ಮತ್ತು ಸಂಭಂದ ಮುಂದುವರೆಸಿದರೆ ನೀನ್ನ ಪಾಲಿಗೆ ನಾವೆಲ್ಲ ಸತ್ತತೆ ಎಂದು ಹೊರಟು ಹೊದರು, ಬೇಳಗ್ಗೆ ಎದ್ದಾಗ ಮನೆಯಲ್ಲಿ ನನ್ನ ನೀಶ್ಚಿಥಾ೯ದ ಸಂಬ್ರಮವಿತ್ತು, ನನಗೆ ಅವರ ಸಂಭ್ರಮವನ್ನು ಹಾಳುಮಾಡುವ ಮನಸ್ಸಾಗಲಿಲ್ಲ ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡು.
                                                                                                             ಪ್ರಾಥ೯ನಾ
      
                 ಕೊನೆಯ ಅಕ್ಷರ ಓದಿದಾಗ ಅರಿವಿಲ್ಲದೆ ಅವನ ಕಣ್ಣಿನಿಂದ ನಾಲ್ಕು ಹನಿ ನೀರು ಬಿದ್ದು ಪ್ರಾಥ೯ನಾ ಎಂಬ ಅಕ್ಷರ ಕಣ್ಣಿರಿನಲ್ಲಿ ಅಳಿಸಿ ಹೊಗಿತ್ತು, ನೀಶ್ಚಿಥಾ೯ವಾಗಿರುವಾಗ ಮತ್ತೆ ಅವಳಿಗೆ ಪತ್ರ ಬರೆದು ಅವಳ ಮನಸ್ಸಿನಲ್ಲಿ ಗೊಂದಲ ಸ್ರಷ್ಠಿಸಲು ಅವನಿಗೆ ಮನಸ್ಸಾಗಲಿಲ್ಲ.
                                        ***********************
               ಹೀಗೆಯೆ ಒಂದು ವಷ೯ ಕಳೆಯಿತು ಅದೊಂದು ದಿನ ತೋಟದಿಂದ ಮನೆಗೆ ಮರಳಿದಾಗ ಕೆಲಸದವನು ಬಂದು ಪತ್ರವಂದನ್ನು ಕೋಟ್ಟ ಅದರ ಮೇಲೆ ಇದ್ದ ಅಕ್ಷರಗಳನ್ನು ನೋಡಿದಾಗಲೆ ಪತ್ರ ಅವಳದೆಂದು ತಿಳಿಯಿತು, ಅಚ್ಚರೆ,ಸಂತಸ, ಭಯಗಳಿಂದ    ಪತ್ರವನ್ನು  ತೆರೆದ...
 
       ಹಾಯ್....
                  ಈ ಪತ್ರವನ್ನು ಏರ್ ಪೋಟ೯ನಿಂದ ಬರೆಯುತಿದ್ದೆನೆ, ಒಂದು ಬಾರಿಯಾದರು ನನ್ನನ್ನು ನೋಡಲು ಬರುತ್ತಿ ಅಂದುಕೊಂಡಿದ್ದೆ ಆದರೆ ನೀನು ಬರಲೆ ಇಲ್ಲ, ಕಳೆದವಾರ ನನ್ನ ಮದುವೆಯಾಯಿತು, ನಿನಗೆ ಆಮಂತ್ರಣಪತ್ರ ಕಳಿಹಿಸುವ ದೈರ್ಯ ನನಗೆ ಬರಲಿಲ್ಲ, ಇವತ್ತು ಗಂಡನ ಜೋತೆ ಅಮೆರಿಕಾಕ್ಕೆ ಹೊಗುತಿದ್ದೆನೆ ಮತ್ತೆ ಭಾರತಕ್ಕೆ ಬರುತ್ತೆನೊ ಇಲ್ಲವೊ ಗೊತ್ತಿಲ್ಲ, ನೀನ್ನ ಜೋತೆ ಮಾತನಾಡಬೇಕೆಂಬ ನನ್ನ ಆಸೆ ಹಾಗೆಯೆ ಉಳಿಯಿತು, ನನಗೆ ಜನ್ಮಾಂತರಗಳಲ್ಲಿ  ನಂಬಿಕೆ ಇಲ್ಲ, ಈ ಜನ್ಮಕ್ಕೆ ಇಷ್ಟು ಸಾಕು.
                                                                                                             ಪ್ರಾಥ೯ನಾ  
          *********************************************************************

ಬೆಂಗಳೂರು ಡೈರಿ

    ರಾಜಭವನ Road ಮೂಲಕ ನಾವು ಮೆಜೆಸ್ಟಿಕ್ ಕಡೆ ಹೋಗುವಾಗ ಬಸವೇಶ್ವರ ಸರ್ಕಲ್ ಬರುತ್ತೆ ಅಲ್ಲಿ ಸುಮಾರು 150 ಸೆಕೆಂಡ್ ಗಳ ಸಿಗ್ನಲ್ ಇದೆ, ನಾವು ಪ್ರತಿ ಸಂಜೆ ಅದೇ ರಸ್ತ...