Saturday, August 27, 2011

ಬಾವನೆಗಳ ಲೋಕದಿಂದ ಬಾರದಿಹ ಲೋಕಕ್ಕೆ


ಬಾವನೆಗಳ ಲೋಕದಲ್ಲಿ ನಾನು
"ಬಾನಾಲಿ"ಯಾಗಿ ನಲಿಯುತ
ಬಾನೆತ್ತರದಲ್ಲಿ ಹಾರುತಿದ್ದಾಗ
ಬದುಕೆಲ್ಲವು ಬಲು ಸಂತಸವಾಗಿದ್ದಾಗ
ಬೇಟೆಗಾರನೊಬ್ಬ ಸಹಿಸದೆ ನನ್ನ ಸಂತಸ
ಬಾಣವೂಂದನ್ನು ಗುರಿಯಾಗಿಸದ ನನಗೆ
ಬೇಟೆಗಾರನ ಬಾಣ ತಲುಪಿತು ಗುರಿಯ
ಬಾನಿಂದ ಭೂಮಿಗೆ ಬಿದ್ದಿರುವೆನು ನಾನು
ಬದುಕಿನ ಕೋನೆಯಲ್ಲಿ ನಿಂತಿಹೆನು
ಬರುವೆಯಾ ಗೆಳತಿ ನೋಡಲು ನನ್ನ ಕೋನೆಯ ಬಾರಿ
ಬಾವನೆಗಳ ಲೋಕದಿಂದ ಬಾರದಿಹ ಲೋಕಕ್ಕೆ ಕಳುಹಿಸಲು ನನ್ನ

ನನ್ನ ಅಜ್ಜ

ಬೆಟ್ಟ ಕಡಿದು ಹೊಲವ ಮಾಡಿ ಖಾಲಿತಲೆಯ ಮೇಲೆ ಕಲ್ಲು ಹೊತ್ತು ಜೋಡಿ ಎತ್ತು ಕಡ ತಂದು ಸುರಿವ ಬಿಸಿಲ ಲೆಕ್ಕ ಇಡದೆ ಮೂರು ಹೊತ್ತು ಹೊಲವ ಉತ್ತಿ ನಾಲ್ಕು ದಿನಕ್ಕೆ ಆಗು...