Sunday, August 6, 2017

ತೋಚಿದ್ದು-ಗೀಚಿದ್ದು


ಇವತ್ತು ಮತ್ತೆ ಆಕಾಶದಲ್ಲಿ ನಕ್ಷತ್ರಗಳು ಸ್ಪಷ್ಟವಾಗಿ ಕಾಣಿಸುತ್ತಿವೆ, ಯಾಕೋ ಮೋಡಗಳಿಗೆ ನಮ್ಮೂರಿನ ದಾರಿ ಮರೆತಹಾಗಿದೆ, ಈ ವರ್ಷವೂ ಮುಂಗಾರು ಕೈ ಕೊಡುವ ಲಕ್ಷಣಗಳೂ ಕಾಣುತ್ತಿದೆ, ಜೂನ್ ತಿಂಗಳ ಮೊದಲವಾರದಲ್ಲಿ ಪತ್ರಿಕೆಯಲ್ಲಿ ಬಂದಿದ್ದ ಹವಾಮಾನ ವರದಿಗಳೆಲ್ಲ ಸುಳ್ಳಾಗುತ್ತಿವೆ.
ನಾನು ಚಿಕ್ಕವನಿದ್ದಾಗ ಜೂನ್ ಮತ್ತು ಜುಲೈ ಪೂರ್ತಿ ಎಡಬಿಡದೆ ಮಳೆ ಸುರಿಯುತ್ತಿತ್ತು ಸುರಿವ ಮಳೆಯಲ್ಲಿ ಮುರಿದ ಕೊಡೆ ಹಿಡಿದು ಶಾಲೆಗೆ ಹೋಗುತ್ತಿದ್ದೆ, ಆ ಶಾಲೆಗೆ ಐದು ಊರಿನ ಮಕ್ಕಳು ಬರಿತ್ತಿದ್ದರು ಎಲ್ಲರೂ ನನ್ನಂತೆ ಎರಡೂ ಮೂರೂ ಕಿಲೋಮೀಟರ್ ನೆಡೆದು ಬರುತ್ತಿದ್ದರು, ಮೊನ್ನೆ ಊರಿಗೆ ಬಂದಾಗ ಆ ಶಾಲೆಯ ಹತ್ತಿರ ಹೋಗಿದ್ದೆ, ಶಾಲೆ ಮುಚ್ಚುವ ಸ್ಥಿತಿಯಲ್ಲಿ ಇದೆಯಂತೆ, ಈಗಿನ ಹಳ್ಳಿಯ ಮಕ್ಕಳಿಗೆ ಪಟ್ಟಣದ ಶಾಲೆಯ ಮೇಲೆ ಹೆಚ್ಚು ಪ್ರೀತಿ ಹಳ್ಳಿ ಶಾಲೆ ಅಂದರೆ ಅಸಡ್ಡೆ. 

ಯಾಕೋ ಈ ಮಳೆಗೂ ಹಳ್ಳಿಗಳೆಂದರೆ ಬೇಸರವಾಗಿರಬೇಕು ಪ್ರತಿದಿನ ಬೇಡವೆಂದರೂ ಬೆಂಗಳೂರಿನಲ್ಲಿ ಬೇಕಾ ಬಿಟ್ಟಿ ಸುರಿವ ಮಳೆ ಹಳ್ಳಿ ಕಡೆಗೆ ಮಾತ್ರ ಬರುತ್ತಿಲ್ಲ, ಒಣಗಿದ ಮಣ್ಣಿನಲ್ಲೇ ಬೀಜ ಬಿತ್ತಿ ಮಳೆಯ ನಿರೀಕ್ಷೆಯಲ್ಲಿರುವ ರೈತನ ನಿರೀಕ್ಷೆಗೆ ಕೊನೆಯಿಲ್ಲ...
*********
ಅಪ್ಪ ದೂರದ ಊರಿನ ಗುಡಿಸಿಲಿನಲ್ಲಿ ಅರೇ ಹೊಟ್ಟೆ ಉಂಡು ಬದುಕಿದ್ದಾನೆ, ಮಗ ಬೆಂಗಳೂರಿನಲ್ಲಿ ನಾಲ್ಕು ಅಂತಸ್ತಿನ ಮನೆ ಕಟ್ಟಿಸಿ ಅದಕ್ಕೆ ಅಪ್ಪನ ಹೆಸರಿಟ್ಟಿದ್ದಾನೆ..
**********
ರಸ್ತೆ ಬದಿ ನಿಂತಿದ್ದ ಹಸುವಿನ ಬಾಲ ಮುಟ್ಟಿ ನಮಸ್ಕರಿಸಿದ ಅಂಗಡಿಯಾತ, ಅದೇ ಹಸು ಅವನ ಅಂಗಡಿ ಮುಂದೆ ಇಟ್ಟಿದ್ದ ಬಾಳೆಹಣ್ಣಿಗೆ ಬಾಯಿ ಹಾಕಿದಾಗ ಅದನ್ನು ಮನಾಸಾ ಇಚ್ಛೆ ಥಳಿಸಿದ.

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...