ಜೀವನ ಯಾವಗಲು ಹರಿಯುವ ನೀರಿನಂತೆ ಪ್ರತಿದಿನವು ಬದಲಾವಣೆಗಳು ನಡೆಯುತ್ತಲೆ ಇರುತ್ತವೆ ಬಾಲ್ಯ, ಯವ್ವನ, ಮುಪ್ಪು ಹೀಗೆ ಕಾಲ ಬದಲಾಗುತ್ತಲೆ ಇರುತ್ತದೆ, ನನ್ನ ಜೀವನದಲ್ಲು ಈಗ ಬದಲಾವಣೆಯ ಕಾಲ ಇದುವರೆಗು ವಿಧ್ಯಾಥಿ೯ಯಾಗಿದ್ದ ನಾನು ಕೇಲವೆ ದಿನಗಳಲ್ಲಿ ಪ್ರೊಪೆಷನಲ್ ಲೈಪ್ ಗೆ ಕಾಲಿರುಸುತ್ತಿದ್ದೆನೆ.
ಹುಟ್ಟಿದು ಒಂದು ಊರು, ಬೆಳದಿದ್ದು ಒಂದು ಊರು, ಓದಿದ್ದು ಹಲವು ಊರುಗಳು, ಮುಂದೆ ಕೆಲಸ......? ಯಾವ ಊರೂ ತಿಳಿಯದು.... ಜೀವನವೆ ಒಂದುತರ ಪಯಣದ ಹಾಗೆ ಇದುವರೆಗು ನನಗೆ ಸೂಕ್ತವೆನಿಸದ ಹಾಗು ಹಿರಿಯರು ತೋರಿಸಿದ ದಾರಿಗಳಲ್ಲಿ ನನ್ನ ಪ್ರಯಾಣ ನೆಡಸಿದ್ದೆ ಆದರೆ ಇಗ ಒಂದು ರಿತಿ ಕವಲು ದಾರಿಗಳ ಮಧ್ಯ ನಿಂತಿದ್ದೆನೆ ಯಾವ ಮಾಗ೯ ಆಯ್ಕೆ ಮಾಡಿಕೊಳ್ಳ ಬೇಕೂ ತಿಳಿಯುತ್ತಿಲ್ಲ, ಹಿರಿಯರು ಕೊಡ ಆಯ್ಕೆಯನ್ನು ನನಗೆ ಬಿಟ್ಟಿದ್ದಾರೆ ಹಲವು ದಾರಿಗಳು, ಎಲ್ಲವು ನೋಡಲು ಚನ್ನ ಆದರೆ ಯಾವುದು ಸೂಕ್ಕ ತಿಳಿಯುತ್ತಿಲ್ಲ, ಮನದಲ್ಲಿ ಒಂದೇ ಪ್ರಶ್ನೆ "ದಾರಿಯಾವುದಯ್ಯ ಮುಂದಿನ ಪಯಣಕ್ಕೆ? ಯಾವ ದಾರಿ ಎಲ್ಲಿಗೆ ಹೋಗುತ್ತದೂ ತಿಳಿಯದಾಗಿದೆ. ಈ ಜೀವನವೆಂಬ ದಾರಿಯಲ್ಲಿ ಮುಂದಿನ ಪಯಣ ಎಲ್ಲಿಗೂ?... ಇದುವರೆಗು ನನಗೆ ಬಾಸ್ ಆಗಿದ್ದವರು ನಮ್ಮ ಸರ್/ಮ್ಯಾಡಮ್ ಗಳು, ಆದರೆ ಅವರು ಹೇಳಿದ ಯಾವುದೆ ಮಾತುಗಳನ್ನು ಸರಿಯಾಗಿ ಪಾಲಿಸಲೆ ಇಲ್ಲ ಆದರೆ ವ್ರುತ್ತಿ ಜೀವನದಲ್ಲಿ ಬಾಸ್ ಮಾತುಗಳನ್ನು ಸರಿಯಾಗಿ ಪಾಲಿಸದೆ ಇದ್ದರೆ ಕೆಲಸಕ್ಕೆ ಆಪತ್ತು, ಅಪ್ಪಟ ಸೋಮಾರಿಗಳಾದ ಮತ್ತು ಭೇಜವ್ದಾಬಾರಿಗಳಾದ ನನ್ನಂತವರಿಗೆ ಅದ್ಯಾವ ಕಂಪನಿಯಲ್ಲಿ ಅದ್ಯಾವ ಬಾಸ್ ಕೆಲಸ ಕೋಡುತ್ತಾನೊ ಕಾದು ನೋಡ ಬೇಕು, ನಾನು ತೆಗೆದಿರುವ ಅಂಕಗಳಿಗೆ ಕ್ಯಾಂಪಸ್ ಆಯ್ಕೆಯಾಗಲಿ ಅಥವಾ ಸರಕಾರಿ ಕೆಲಸವಾಗಲಿ ಕೇವಲ ಕನಸು, ಅದಕ್ಕೆ ನನ್ನ ಮುಂದಿನ ಜೀವನದ ಬಗ್ಗೆ ನನಗೆ ತುಂಬಾ ಕುತುಹಲವಿದೆ ನೋಡೂಣಾ ಏನಾಗೂತ್ತೊ.....
ದೇವರೇ ಇದುವರೆಗು ನಾನು ನಿನ್ನಲ್ಲಿ ಕೇಳಿದಕ್ಕಿಂತ ಹೆಚ್ಚಿನದನ್ನೆ ನನಗೆ ನೀಡಿರುವೆ, ಈ ಸಾರಿ ಕೂಡ ನೀನು ನನ್ನ ಜೋತೆ ಇರುತ್ತಿ ಅಲ್ವಾ? ನಾನೇನು ಕೈ ತುಂಬಾ ಸಂಬಳ, ಎಮ್ ಎನ್ ಸಿ ಕಂಪನಿಯಲ್ಲಿ ಕೆಲಸ ಕೇಳಲ್ಲ, ಒಂದು ಚಿಕ್ಕ ಕಂಪನಿಯಲ್ಲಿ ಕೆಲಸ, ಒಳ್ಳೆ ಬಾಸ್ ಮತ್ತು ಅಪ್ಪ ಕೊಡುವ ಪಾಕೇಟ ಮನಿಗಿಂತ ಸ್ವಲ್ಪ ಜಾಸ್ತಿ ಸಂಬಳ ಅಷ್ಟೆ ಸಾಕು.... ದೇವರೆ ನನ್ನ ಆಸೆ ಇಡೇರುಸುತ್ತಿ ಅಲ್ವಾ?
No comments:
Post a Comment