Friday, April 15, 2011

ಏನಾಗಿದೆ ಕನಾ೯ಟಕದ ಜನತೆಗೆ?




ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ...
                    ಅಣ್ಣಾವ್ರು "ಸತ್ಯ ಹರಿಶ್ಚಂದ್ರ"  ಚಿತ್ರದಲ್ಲಿ ಬರುವ ಮೇಲಿನ ಸಾಲುಗಳು ಎಷ್ಟೊಂದು ಅಥ೯ಪೂಣ೯ವಾಗಿವೆ, ಹುಟ್ಟು ಸಾವಿನ ಮಧ್ಯದ ನಾಲ್ಕುದಿನದ ಈ ಪಯಣದಲ್ಲಿ ಜಾತಿ-ಜಾತಿ ಎಂದು ಜನರು ಯಾಕೆ ಹೋಡೆದಾಡುತ್ತಾರೂ ಆ ದೇವರೆ ಬಲ್ಲ....
          ಏನಾಗಿದೆ ನಮ್ಮ ಕನಾ೯ಟಕದ ಜನತೆಗೆ? ಯಾಕಿಷ್ಟು ಜಾತಿ ಎಂಬ ಮತಿಭ್ರಮಣೆಯಲ್ಲಿ ಕನಾ೯ಟಕದ ಜನತೆ ಮುಳಗಿದ್ದಾರೆ? ೯೦ರ ದಶಕದ ಅಂತ್ಯದಲ್ಲಿ ಯಾರೂ ಕೆಲವು ಗೋಮುಖ ವ್ಯಾಘ್ರ ರಾಜಕಾರಣಿಗಳು ಭಿತ್ತಿದ ಜಾತಿ ಎಂಬ ವಿಷ ಬೀಜ ಇಂದು ಕನಾ೯ಟಕದ ತುಂಬ ತನ್ನ ವಿಷದ ಬಾಹುಗಳನ್ನು ಚಾಚಿದೆ, ಅನಕ್ಷರಸ್ಥರಿಗಿಂತ ಅಕ್ಷರಸ್ಥರೆ ಇಂದು ಈ ವಿಷವತು೯ಲದ ಜಾಲಕ್ಕೆ ಬಿದ್ದಿದ್ದಾರೆ.
          ಕೇವಲ ಒಂದು ಸಾರಿ ಕನಾ೯ಟಕದ ಇತಿಹಾಸವನ್ನು ನೋಡಿ ಎಂತಹ ಮಹಾನ್ ಪುರುಷರು ಹುಟ್ಟಿದ ನಾಡಿದು ೧೨ನೇ ಶತಮಾನದಲ್ಲೆ ಬಸವಣ್ಣನವರು ಜಾತಿ ಪಂಗಡಗಳನ್ನು ಹೋಗಲಾಡಿಸಬೇಕು ಎಂದು ಅಂತರ ಜಾತಿ ವಿವಾಹ ಆರಂಭಿಸಿದರು ಆದರೆ ಕೊನೆಗೆ ಆದದ್ದು ಏನು? ನಮ್ಮ ಸಮಾಜ ಅವರನ್ನೇ ಒಂದು ಜಾತಿಗೆ ಸೀಮಿತಗೋಳಿಸಿ ಅವರನ್ನೇ ಆ ಜಾತಿಯ ಸಂಸ್ಥಾಪಕರಂತೆ ಬಿಂಬಿಸಿದೆ.
             ಇಂದು ಕನಾ೯ಟಕದಲ್ಲಿ ಆಗುತ್ತಿರುವುದಾದರು ಏನು? ಹಿಂದು-ಮುಸ್ಲಿಂ ಅಥವಾ ಹಿಂದು-ಕ್ರಿಶ್ಚಿಯನ್ ರ ಗುದ್ದಾಟ್ಟವೆ? ಇಲ್ಲ! ನೆಡೆಯುತ್ತಿರುವದು ಹಿಂದು-ಹಿಂದುಗಳ ನಡುವೆ ಪೈಪೋಟಿ, ನಾನು ಮೇಲು ನಾನು ಮೇಲು ಎಂಬ ಭ್ರಮೆ, ಇದಕ್ಕೆಲ್ಲ ಕಾರಣ ನಮ್ಮ ಭ್ರಷ್ಟ ರಾಜಕಾರಣಿಗಳು. ನೋಡಿ ನಮ್ಮ ಇಂದಿನ ಕನಾ೯ಟಕದ ಹಣೆಬರಹ ಉತ್ತರಕ್ಕೆ ಲಿಂಗಾಯತರು, ದಕ್ಷಿಣಕ್ಕೆ ಒಕ್ಕಲಿಗರು, ಆ ಕಡೆ ಕುರುಬರು. ಈ ಕಡೆ ಪಂಚಮಶೀಲರು, ಮೇಲೆ ಬೆಸ್ತರು, ಕೆಳಗೆ ಕಮ್ಮಾರರು ಅಬ್ಬಬ್ಬಾ ಎಷ್ಟು ಕುಲಗಳು, ಎಲ್ಲರು ತಿನ್ನುವುದು ಹೊಟ್ಟೆಗೆ ಅನ್ನವನ್ನೇ, ಸತ್ತಾಗ ಸೇರುವದು ಮಣ್ಣನ್ನೇ.... ಯಾಕೆ ಭ್ರಷ್ಟ ರಾಜಕಾರಣಿಗಳನ್ನು ನಮ್ಮವರು ನಮ್ಮವರು ಎಂದು ಸಲಹುತ್ತಿರುವಿರಿ? ಪ್ರತಿಬಾರಿ ಮತದಾನ ಮಾಡುವಾಗ ಜಾತಿಯನ್ನು ಯಾಕೆ ನೋಡುತ್ತಿರಿ? ದಯವಿಟ್ಟು ಅಭಿವ್ರುದ್ಧಿಗೆ ಮತ್ತು ಒಳ್ಳೆಯ ಅಭ್ಯಥಿ೯ಗೆ ಬೆಂಬಲ ನೀಡಿ.
            ನಮ್ಮವರು ನಮ್ಮವರು ಎಂದು ಮತಹಾಕಿ ಕಳುಹಿಸಿದ ನಿಮ್ಮ ಕುಲದ ಅಭ್ಯಥಿ೯ಗಳು ನಿಮಗೆ ಏನು ಮಾಡಿದ್ದಾರೆ? ಒಂದು ಸಾರಿ ಯೋಚಿಸಿ ... ಸಂಪೂಣ೯ ಅಧಿಕಾರ ಇದ್ದರೂ ಕೂಡ ಉತ್ತರ ಕನಾ೯ಟಕದ ಜನತೆ ಪ್ರವಾಹದಲ್ಲಿ ಇದ್ದಾಗ ಅವರ ಕಣ್ಣೀರು ಒರೆಸಿದರೇ? ನೈಸ್ ರಸ್ತೆಯಲ್ಲಿ ಜಾಗಕಳೆದುಕೊಂಡ ಜನರಿಗೆ ಸರಿಯಾದ ಪರಿಹಾರ ದೊರೆತಿದೆಯೇ? ನಿಮ್ಮವರೆ ವಷ೯ಗಳವರೆಗೆ ಅಧಿಕಾರದಲ್ಲಿ ಇದ್ದರೂ ಪರಿಹಾರ ನಿಡಿದರೇ? ಅಷ್ಟೇ ಏಕೆ ಪಂಚಮಶೀಲ ಅಥವಾ ಕುರಬ ಜನಾಂಗದ ನಾಯಕರು ಅಧಿಕಾರಕ್ಕೆ ಬಂದಾಗ ಅವರೇನಾದರು ತಮ್ಮ ಕುಲಭಾಂದವರ ಏಳಿಗೆಗೆ ಶ್ರಮಿಸಿದ್ದಾರೆಯೇ?..... ಉತ್ತರ ಒಂದೇ ಇಲ್ಲ... ಇಲ್ಲ... ಇಲ್ಲ! ಹಾಗಿದ್ದರೆ ಪದೇ ಪದೇ ನೀವು ನಮ್ಮವರು ನಮ್ಮವರು ಎಂಬ ಭ್ರಮೆಯಲ್ಲಿ ಸಿಲುಕಿ ಯಾಕೇ ಹೀಗೆ ಮೋಸ ಹೋಗುತ್ತಿರಾ? ಇರುಳು ಕಂಡ ಭಾವಿಗೆ ಹಗಲು ಏಕೆ ಬಿಳುತ್ತೀರಿ?    
             ಕುವೆಂಪುರವರ "ವಿಶ್ವ ಮಾನವ" ಸಂದೇಶವನ್ನು ಒಂದು ಸಾರಿ ಓದಿ, ಕೇವಲ ಕುಲ ಜಾತಿಗಳೆ ಎಲ್ಲಾ ಅಲ್ಲ, ಮತಪಡಿಯಲು ಅಭ್ಯಥಿ೯ಗೆ ಜಾತಿಯೊಂದೆ ಅಹ೯ತೆಯಲ್ಲ, ಮುಂದೆ ನೀವು ಅಧಿಕಾರ ನೀಡುವಾಗ ಅಭ್ಯಥಿ೯ಯ ನೈಜ ಅಹ೯ತೆಯನ್ನು ಗಮನಿಸಿ.ಅವನು ಯಾವುದೇ ಕುಲ ಜಾತಿಯವನಾಗಿರಲಿ ಚಾರಿತ್ರ್ಯ ಶುದ್ಧವಾಗಿದ್ದರೆ  ಅವನನ್ನು ಬೆಂಬಲಿಸಿ.
   ಇದಾಗಲೇ ಕನಾ೯ಟಕ ದಕ್ಷಿಣ ಭಾರತದ ಬಿಹಾರ್ ಆಗುವತ್ತ ಸಾಗಿದೆ. ದಯವಿಟ್ಟು ಅದನ್ನು ತಪ್ಪಿಸಿ, ಕನಾ೯ಟಕದ ಜನತೆ ದಡ್ಡರಲ್ಲ! ಅನ್ಯಾಯ, ಅಕ್ರಮಗಳನ್ನು ಎಂದೂ ಸಹಿಸುವುದಿಲ್ಲ! ಎಂಬುದನ್ನು ರಾಜಕಾರಣಿಗಳಿಗೆ ಹಾಗೂ ಇತರ ರಾಜ್ಯಗಳಿಗೆ ತೋರಿಸಿ. ಮುಂದಿನ ಸಾರಿ ಅಧಿಕಾರ ನೀಡುವಾಗ ಒಂದು ಸಲ ಯೋಚಿಸಿ.... ನೆನಪಿರಲಿ ಪ್ರಪಂಚದಲ್ಲಿ ಇರುವದು ಒಂದೇ ಜಾತಿ, ಒಂದೇ ಕುಲ ಅದು ಮಾನವ ಕುಲ.............!


2 comments:

  1. nijavaada maatu...jaati nodi vote haaktaare ella.......but jaati toredu efficient person vote maadbeku.......aagle namma deshada pragati aagodu....

    ReplyDelete
  2. ಅಯ್ಯೊ ನಮ್ಮ ಜನಕ್ಕೆ ಅದ್ಯಾವಾಗ ಬುದ್ದಿ ಬರುತ್ತೊ ಆ ದೇವರೆ ಬಲ್ಲ...

    ReplyDelete

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...