Sunday, August 6, 2017

ತೋಚಿದ್ದು-ಗೀಚಿದ್ದು


ಇವತ್ತು ಮತ್ತೆ ಆಕಾಶದಲ್ಲಿ ನಕ್ಷತ್ರಗಳು ಸ್ಪಷ್ಟವಾಗಿ ಕಾಣಿಸುತ್ತಿವೆ, ಯಾಕೋ ಮೋಡಗಳಿಗೆ ನಮ್ಮೂರಿನ ದಾರಿ ಮರೆತಹಾಗಿದೆ, ಈ ವರ್ಷವೂ ಮುಂಗಾರು ಕೈ ಕೊಡುವ ಲಕ್ಷಣಗಳೂ ಕಾಣುತ್ತಿದೆ, ಜೂನ್ ತಿಂಗಳ ಮೊದಲವಾರದಲ್ಲಿ ಪತ್ರಿಕೆಯಲ್ಲಿ ಬಂದಿದ್ದ ಹವಾಮಾನ ವರದಿಗಳೆಲ್ಲ ಸುಳ್ಳಾಗುತ್ತಿವೆ.
ನಾನು ಚಿಕ್ಕವನಿದ್ದಾಗ ಜೂನ್ ಮತ್ತು ಜುಲೈ ಪೂರ್ತಿ ಎಡಬಿಡದೆ ಮಳೆ ಸುರಿಯುತ್ತಿತ್ತು ಸುರಿವ ಮಳೆಯಲ್ಲಿ ಮುರಿದ ಕೊಡೆ ಹಿಡಿದು ಶಾಲೆಗೆ ಹೋಗುತ್ತಿದ್ದೆ, ಆ ಶಾಲೆಗೆ ಐದು ಊರಿನ ಮಕ್ಕಳು ಬರಿತ್ತಿದ್ದರು ಎಲ್ಲರೂ ನನ್ನಂತೆ ಎರಡೂ ಮೂರೂ ಕಿಲೋಮೀಟರ್ ನೆಡೆದು ಬರುತ್ತಿದ್ದರು, ಮೊನ್ನೆ ಊರಿಗೆ ಬಂದಾಗ ಆ ಶಾಲೆಯ ಹತ್ತಿರ ಹೋಗಿದ್ದೆ, ಶಾಲೆ ಮುಚ್ಚುವ ಸ್ಥಿತಿಯಲ್ಲಿ ಇದೆಯಂತೆ, ಈಗಿನ ಹಳ್ಳಿಯ ಮಕ್ಕಳಿಗೆ ಪಟ್ಟಣದ ಶಾಲೆಯ ಮೇಲೆ ಹೆಚ್ಚು ಪ್ರೀತಿ ಹಳ್ಳಿ ಶಾಲೆ ಅಂದರೆ ಅಸಡ್ಡೆ. 

ಯಾಕೋ ಈ ಮಳೆಗೂ ಹಳ್ಳಿಗಳೆಂದರೆ ಬೇಸರವಾಗಿರಬೇಕು ಪ್ರತಿದಿನ ಬೇಡವೆಂದರೂ ಬೆಂಗಳೂರಿನಲ್ಲಿ ಬೇಕಾ ಬಿಟ್ಟಿ ಸುರಿವ ಮಳೆ ಹಳ್ಳಿ ಕಡೆಗೆ ಮಾತ್ರ ಬರುತ್ತಿಲ್ಲ, ಒಣಗಿದ ಮಣ್ಣಿನಲ್ಲೇ ಬೀಜ ಬಿತ್ತಿ ಮಳೆಯ ನಿರೀಕ್ಷೆಯಲ್ಲಿರುವ ರೈತನ ನಿರೀಕ್ಷೆಗೆ ಕೊನೆಯಿಲ್ಲ...
*********
ಅಪ್ಪ ದೂರದ ಊರಿನ ಗುಡಿಸಿಲಿನಲ್ಲಿ ಅರೇ ಹೊಟ್ಟೆ ಉಂಡು ಬದುಕಿದ್ದಾನೆ, ಮಗ ಬೆಂಗಳೂರಿನಲ್ಲಿ ನಾಲ್ಕು ಅಂತಸ್ತಿನ ಮನೆ ಕಟ್ಟಿಸಿ ಅದಕ್ಕೆ ಅಪ್ಪನ ಹೆಸರಿಟ್ಟಿದ್ದಾನೆ..
**********
ರಸ್ತೆ ಬದಿ ನಿಂತಿದ್ದ ಹಸುವಿನ ಬಾಲ ಮುಟ್ಟಿ ನಮಸ್ಕರಿಸಿದ ಅಂಗಡಿಯಾತ, ಅದೇ ಹಸು ಅವನ ಅಂಗಡಿ ಮುಂದೆ ಇಟ್ಟಿದ್ದ ಬಾಳೆಹಣ್ಣಿಗೆ ಬಾಯಿ ಹಾಕಿದಾಗ ಅದನ್ನು ಮನಾಸಾ ಇಚ್ಛೆ ಥಳಿಸಿದ.

Wednesday, August 2, 2017

ಹೆಸರೇ ಇಲ್ಲದವರ ಕಥೆಗಳು-3 Low-ಕೇಶ

          ಲೋಕೇಶ್ ನನ್ನ ಆಪ್ತ ಮಿತ್ರರಲ್ಲಿ ಒಬ್ಬ, friendship ಅನ್ನೋವದು ಯಾವಾಗ ಯಾರ ಜೊತೆ ಹೇಂಗೆ ಆಗುತ್ತೆ ಅಂತಾ ಹೇಳುವದಕ್ಕೆ ಆಗೋದೆ ಇಲ್ಲ ನೋಡಿ, ನಾನು, ಲೋಕಿ ಜೊತೆಗೆ ಓದಿದವರಲ್ಲ, ಒಂದೇ ಊರಿನವರು ಅಲ್ಲ, ಅವನು ನನ್ನ classmate ಫ್ರೆಂಡ್, ಯಾವತ್ತೋ ಒಂದು ದಿನ notes ತೆಗೆದುಕೊಳ್ಳಲು ನಮ್ಮ ಕಾಲೇಜಿಗೆ ಬಂದಿದ್ದ love at first sight ಅನ್ನುತರಲ್ಲಾ ಹಂಗೆ ನಮ್ಮದು friendship at first sight, ಆವತ್ತು ಪರಿಚಯವಾದವನು ಒಂದೇ ದಿನದಲ್ಲಿ ನನ್ನ ಆತ್ಮೀಯ ಮಿತ್ರನಾದ, "ನಮ್ಮ ಮನಸ್ಸಿನ ಭಾವನೆಗಳನ್ನು ನಾವು ಹೇಳದೆ ಇದ್ದರೂ ಅದನ್ನೂ ಅರ್ಥ ಮಾಡಿಕೊಳ್ಳುವವರೆ ನಮ್ಮ ನಿಜವಾದ ಆತ್ಮೀಯ ಸ್ನೇಹಿತರಂತೆ" ಎಲ್ಲೊ ಓದಿದ ನೆನಪು, ಮಾತು ನಮ್ಮಿಬ್ಬರಿಗೂ ಬಹಳ ಹೊಂದಿತ್ತು.


      ಲೋಕೇಶ್ ನನ್ನನ್ನು ಯಾವಾಗಲೂ ಒಂದು ಪ್ರಶ್ನೆ ಕೇಳುತ್ತಿದ್ದ (ದಿನದಲ್ಲಿ ಕನಿಷ್ಠವೆಂದರು ಎರಡು ಬಾರಿ ಕೇಳೆ ಕೇಳುತ್ತಿದ್ದ) "ಮಗಾ ನನ್ನ ತಲೆಯಲ್ಲಿ ಸ್ವಲ್ಪ ಕೂದಲು ಕಡಿಮೆ ಇದೆ ಅಲ್ವಾ??? ಪ್ರಶ್ನೆ ಕೇಳುತ್ತಿದ್ದಾಗ ಒಂದು ಕನ್ನಡಿಮುಂದೆ ನಿಂತಿರುತ್ತಿದ್ದ ಇಲ್ಲವೇ ಅವನ ಮುಂದೆ ಯಾರಾದರೂ ಉದ್ದ ಕೂದಲಿನ ಹುಡುಗ ಹಾದು ಹೋಗಿರುತ್ತಿದ್ದ, ಇದೆ ಕಾರಣಕ್ಕೆ ನಾನು ಅವನನ್ನೂ ಯಾವಾಗಲೂ Low-ಕೇಶಾ ( ಕೇಶ =ಕೂದಲು) ಎಂದು ಕಾಡಿಸುತ್ತಿದ್ದೆ, in fact ನನ್ನ mobileನಲ್ಲಿ ಅವನ ಹೆಸರನ್ನೂ ನಾನು Low ಕೇಶಾ ಎಂದೇ ಸೇವ್ ಮಾಡಿಕೊಡಿದ್ದೆ.

        ಆಗ ನಾವು engineering final sem, ಮಲ್ಲೇಶ್ವರಂ ನಲ್ಲಿ ನಮ್ಮ ವಾಸ(ನಾನು, ಪ್ರಣಯ ರಾಜ ಗಾಂಧಿ ಮತ್ತು ನಾಳಮಹಾರಾಜರು) studies holidays, ಲೋಕಿ ಕೂಡ ನಮ್ಮ ಮನೆಗೆ ಓದಲು ಬರುತ್ತಿದ್ದ, ಅಲ್ಲಿ ಓದುವುದಕ್ಕಿಂತ ಹಾಳು ಹರಟೆಯೇ ಜಾಸ್ತಿ ಇರುತ್ತಿತ್ತು, ವಾರದಲ್ಲಿ ಮೂರರಿಂದ ನಾಲ್ಕುಸಲ ಕಾಡು ಮಲ್ಲೇಶ್ವರ, ಸಾಯಿಬಾಬಾ, ರಾಘವೇಂದ್ರ ಸ್ವಾಮಿ ಮಠಕ್ಕೆ ತಪ್ಪದೆ ಹೋಗುತ್ತಿದ್ದೆವು ಹಾಗಂತ ನಾವೇನು ಮಹಾನ್ ದೈವ ಭಕ್ತರೇನಲ್ಲ ಆದರೂ ತಪ್ಪದೆ ದೇವಸ್ಥಾನಗಳಿಗೆ ಹೋಗುತ್ತಿದ್ದವು ಅದಕ್ಕೆ ಬೇರೆಯದೇ ಕಾರಣಗಳು ಇದ್ದವು, ಇದೆ ಸಮಯದಲ್ಲಿ ನಮ್ಮ ಲೋಕಿಗೆ ಮಲ್ಲೇಶ್ವರಂ ಒಂದು ಹುಡುಗೆ ಮೇಲೆ ಕಣ್ಣುಬಿದಿತು, ಅಂದಿನಿಂದ ಅವನ ದಿನಚರಿಯೇ ಬದಲಾಗಿ ಹೋಯಿತು, ಬೆಳಗ್ಗೆ 11ಕ್ಕೆ ಏಳುತಿದ್ದವ 5.30 ಕ್ಕೆ ಎಳಲು ಆರಂಭಿಸಿದ, ಯಾಕೋ ಇಷ್ಟು ಬೇಗ ಎದ್ದಿದ್ದೀಯಾ ಅಂದ್ರೆ ಮಗಾ ನಾನು ಜಾಗಿಂಗ್ ಮಾಡೋಕೆ ಹೋಗ್ತಾ ಇದ್ದೀನಿ ಅಂದ ಅವನ ಹುಚ್ಚಾಟಗಳ ಪರಿಚಯವಿದ್ದ ನನಗೆ ಇದರಲ್ಲಿ ಅಂತಹ ವಿಶೇಷ ಕಾಣಿಸಲಿಲ್ಲ, ಇದಕ್ಕೂ ಮುನ್ನ ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದ ಹುಡುಗಿ ನೋಡಲು ದೂರದ ಬೀದರ್ ಗೆ ಹೋಗಿ ಬಂದಿದ್ದ, ಅದಾದ ಸ್ವಲ್ಪ ದಿನಕ್ಕೆ ಮಂಡ್ಯದ ಹುಡುಗಿಗೆ ಮನಸ್ಸು ಕೊಟ್ಟಿದ್ದ ಅವನು, ದಿನಾ ರಾತ್ರಿ ಹೋಟಿಲ್ ಗೆ ಹೋಗಿ ರಾಗಿ ಮುದ್ದೆ ತಿಂದು ಬರಯುತ್ತಿದ್ದ ಯಾಕಪ್ಪಾ ಹಿಂಗೇ ಅಂದಿದಕ್ಕೆ "ರಾಗಿ ಮುದ್ದೆ ಆರೋಗ್ಯಕ್ಕೆ ಓಳ್ಳೆದ್ ಕಣ್ಣ್ ಳಾ ಅಂತ ಮಂಡ್ಯ ಹೈಕಳ ಸ್ಟೈಲ್ ನಲ್ಲಿ ಉತ್ತರ ಕೊಟ್ಟಿದ್ದ ಇಂತ್ತಿಪ್ಪ ಲೋಕಿ ಅವತ್ತು ಸಂಜೆ ಮನೆಗೆ ಬಂದಾಗ ಕೈಯಲ್ಲಿ ಒಂದು ಪುಸ್ತಕ ತಂದಿದ್ದ, ನನ್ನ ಹತ್ತಿರ ಇದ್ದ ನೂರಾರು ಪುಸ್ತಕಗಳನ್ನು ಕಣ್ಣೆತ್ತಿಯೂ ನೋಡದ ಅವ ಪುಸ್ತಕ ತಂದಿದ್ದು ಕಂಡು ನನಗೆ ಅಚ್ಚರಿ ಯಾಗಿತ್ತು, ಮಹಾಶಯನ ಮನಸ್ಸು ಗೆದ್ದ ಪುಸ್ತಕ ಯಾವುದು ಎಂದು ಕುತೂಹಲದಿಂದ ನೋಡಿದರೆ ಅದು "30 ದಿನಗಳಲ್ಲಿ ಕನ್ನಡದ ಮೂಲಕ ಮಾಲಿಯಾಳಿ ಕಲಿಯಿರಿ".


            ಅದೇ ಸಮಯದಲ್ಲಿ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಪೋಟವಾಯಿತು ಘಟನೆಯ ಬಳಿಕ ಹುಡಗಿ ಕಾಣಿಯಾದಳಂತೆ, ನಮ್ಮ ಲೋಕಿಗೊ ವಿಪರೀತ ತಳಮಳ, ಕೊನೆಗೂ ಒಂದು ವಾರದ ಬಳಿಕ ತಿಳಿದು ಬಂದಿದ್ದು ಏನೆಂದರೆ ಘಟನೆಗು ಅವರಿಗೂ ಏನು ಸಂಭಂದವೆ ಇರಲಿಲ್ಲ ಆದರೆ ಹುಡುಗಿ ಅಪ್ಪನದು ಬೇಕರಿ ಇಂತತೆ ಅದರ ಬಳಿಯೇ ಘಟನೆ ನೆಡೆದಿದ್ದು, ಇದಾದ ಬಳಿಕ ವಿಪರೀತ ಹೆದರಿದ ಅವರು ಬೆಂಗಳೂರು safe ಇಲ್ಲವೆಂದು ವಾಪಸ ತಮ್ಮ ಊರಿಗೆ ಸಂಸಾರ ಸಮೇತ ಹೊರಟು ಹೋದರಂತೆ...

will be continued...

Friday, February 3, 2017

ನನ್ನ ಅಜ್ಜ

ಬೆಟ್ಟ ಕಡಿದು ಹೊಲವ ಮಾಡಿ
ಖಾಲಿತಲೆಯ ಮೇಲೆ ಕಲ್ಲು ಹೊತ್ತು
ಜೋಡಿ ಎತ್ತು ಕಡ ತಂದು
ಸುರಿವ ಬಿಸಿಲ ಲೆಕ್ಕ ಇಡದೆ
ಮೂರು ಹೊತ್ತು ಹೊಲವ ಉತ್ತಿ
ನಾಲ್ಕು ದಿನಕ್ಕೆ ಆಗುವಷ್ಟು ಜೋಳ ಬೆಳೆದವ.

ಮೂರು ಹೆಣ್ಣು ಮೂರು ಗಂಡು
ನಡುವೆ ಬಂದು ಹೋಗೊ ಬಂದು ಬಳಗ
ಎಲ್ಲ ಬಾರ ಹೊತ್ತ ಕೂನ ಬೆನ್ನಿನವ,
ಜಾಲಿ ಮರದ ಮರಗೆ ಹೋಗಿ ಕದ್ದು ಬಿಡಿ ಸೇದಿ
ಹಿತ್ತಲ ಬಾಗಿಲಿನಿಂದ ಬಂದು
ಮುದಕಿಂದ  ಮಾರು ದೂರ ಏನು ಅರಿಯದಂತೆ ಕೂತವ.

ಹಣೆಗೆ ಮೂರು ಬಟ್ಟು ವಿಭೂತಿ
ಹರಿದು ಹೋದ ಕಚ್ಚೆ ಬನಿಯನ್ನು
ಹೆಗಲ ಮೇಲೂಂದು ತುಂಡು ಬಟ್ಟೆ
ಮೆಟ್ಟುಗಳನೆಂದು ಮೆಟ್ಟದವ
ಹೊಟ್ಟೆತುಂಬ ಎಂದು ಉಣ್ಣದವ
ಕಷ್ಟಗಳಿಗೆಂದು ಅಂಜದವ.

ಸಾಲ ಸೂಲ ಮಾಡಿ
ಹೆಣ್ಣು ಮಕ್ಕಳ ಮದುವೆ ಮಾಡಿ
ಮೊಮ್ಮಕ್ಕಳ ಹೆಗಲ ಮೇಲೆ ಹೊತ್ತು ಕುಣಿದವ,
ಎಲ್ಲಿಂದಲೂ ಬರಿ ಗೈಲಿ ಬಂದು
ಹೊಲ ಮನೆಯ ಮಾಡಿ
ಊರ ತುಂಬ ಬಂದು ಬಳಗ ಗಳಿಸಿದವ.

ನಾನು ಕಣ್ಣು ತೆರೆಯುವ ಮೊದಲೇ ಇಹ ಲೋಕ ಯಾತ್ರೆ ಮುಗಿಸಿ,
ಗೋಡೆ ಮೇಲೆನ ಫೋಟೋದೊಳಗೆ ಕುಳಿತವ,
ನನ್ನಪ್ಪನ ಅಪ್ಪನವ ಅಪ್ಪನ ಪಡೆಯಂಚಂತೆ ಅವ,
ನನ್ನ ಹೆಗಲ ಮೇಲೆ ಹೊತ್ತು ಕುಣಿಸಿ ಆಡಿಸದೆ
ನನ್ನ ಬಿಟ್ಟು ಹೋದ ಕೆಟ್ಟ ಮುದುಕ ನನ್ನಜ್ಜ ಅವ.

ತೋಚಿದ್ದು-ಗೀಚಿದ್ದು

ಇವತ್ತು ಮತ್ತೆ ಆಕಾಶದಲ್ಲಿ ನಕ್ಷತ್ರಗಳು ಸ್ಪಷ್ಟವಾಗಿ ಕಾಣಿಸುತ್ತಿವೆ, ಯಾಕೋ ಮೋಡಗಳಿಗೆ ನಮ್ಮೂರಿನ ದಾರಿ ಮರೆತಹಾಗಿದೆ, ಈ ವರ್ಷವೂ ಮುಂಗಾರು ಕೈ ಕೊಡುವ ಲಕ್ಷಣಗಳೂ ಕಾ...