ಅಂದೊಂದು ಸಣ್ಣ ಹಳ್ಳಿ, ಹಳ್ಳಿಯ ಮದ್ಯ ಚಿಕ್ಕದಾದ ಒಂದು ಸುಂದರ ಕೆರೆ, ಊರಿನ ಪಕ್ಕ ಒಂದು ಸಣ್ಣ ಬೆಟ್ಟ, ಬೆಟ್ಟದ ಮೇಲೆ ಚಿಕ್ಕದಾದ ಶಿವನ ಮಂದಿರ, ಊರಿನ ಬಹುತೇಕ ಜನ ಸೋಮವಾರದಂದು ಆ ಮಂದಿರಕ್ಕೆ ಹೋಗಿ ಪೂಜೆ ಸಲ್ಲಿಸುವದು ವಾಡಿಕೆ.
ಅಂದೂಂದು ಸೋಮವಾರದ ಸಂಜೆ ಊರಿನ ಯುವಕನೂಬ್ಬ ಶಿವನ ಪೂಜೆಗೆಂದು ಬೆಟ್ಟಕೆ ಹೊರಟ್ಟಿರುತ್ತಾನೆ ಕೈಯಲ್ಲಿ ದೇವರಿಗೆಂದು ತೆಂಗಿನಕಾಯಿ, ಬಾಳೆಹಣ್ಣು ಮತ್ತು ಕಪೂ೯ರವನ್ನು ಹೂಂದಿರುವ ಸಣ್ಣ ಕೈ ಚೀಲವನ್ನು ತೆಗೆದೂಕೂಂಡು ಹೂಗುತ್ತಿದ್ದಾನೆ, ಸ್ವಲ್ಪದೂರ ಹೂದ ನಂತರ ಅವನ ಕಣ್ಣಿಗೆ ಒಬ್ಬ ಯುವತಿ ಕಾಣುತ್ತಾಳೆ, ಚಿಕ್ಕ ಮಕ್ಕಳೊಂದಿಗೆ ಅಂಗಳದಲ್ಲಿ ಆಡುತ್ತಿರುವ ಆ ಯುವತಿಯನ್ನು ಕಂಡು ಒಂದು ಕ್ಷಣ ಈ ಯುವಕ ನಿಂತು ಅವಳನ್ನೆ ದಿಟ್ಟಿಸಿ ನೋಡುತಿದ್ದಾನೆ.
ಆ ಗಾಡ ಕಪ್ಪು ಕಣ್ಣುಗಳು, ಸುಂದರವಾದ ಮುಖ, ಆ ಎತ್ತರವಾದ ನಿಲವು, ಬೆಳದಿಂಗಳ ಹಾಲು ಬೆಳಕಿನಂತೆ ಉಕ್ಕವ ನಗು, ಅವಳ ಸೌಂದರ್ಯವನ್ನು ಕಂಡು ಒಂದು ಕ್ಷಣ ಆ ಯುವಕ ಮಂತ್ರ ಮುಗ್ದನಂತೆ ನಿಂತು ಬಿಟ್ಟ, ಅವನ ಮನದಲ್ಲಿ ಒಂದು ಕ್ಷಣಕ್ಕೆ ಮಿಂಚಿನ ಸಂಚಾರ ಅರೆ ಈ ಸುಂದರಿಯನ್ನು ನಾನು ಎಲ್ಲೂ ನೋಡಿರುವೆ ಆದರೆ ಎಲ್ಲಿ? ಪಕ್ಕದ ಮನೆಯ ಹುಡಗಿಯೆ? ಪಕ್ಕದ ಓಣಿಯ ಹುಡಗಿಯೆ? ಅಥವಾ ದೂರದ ಸಂಭಂದಿಯೆ? ಛೇ....ಎಷ್ಟೆ ಪ್ರಯತ್ನಿಸಿದರು ಆ ಯುವಕನಿಗೆ ಏನು ನೆನೆಪಾಗಲಿಲ್ಲ ಆದರೆ ಅವಳ ಮುಖ ಮಾತ್ರ ಪರಿಚಯದ್ದು.
ಏನಾದರು ಆಗಲಿ ಎಂದು ಹತ್ತಿರ ಹೂರಟ ಯುವಕನನ್ನು ದೂರದಿಂದ ಗಮನಿಸಿದ ಯುವತಿ ಯುವಕನೆಡೆಗೆ ಮುಗಳು ನಗೆಯನ್ನು ಚಲ್ಲಿದಳು ಯುವಕನಿಗೂ ಪುಳಕ ಪರಿಚಯದವರಂತೆ ಮಾತನಾಡಿಸಿದ ಯುವತಿ ಯುವಕನಿಗೆ ಎಲ್ಲಿಗೆ ಹೂರಟಿರುವೆ ಎಂದು ಕೇಳಿದಳು, ಯುವಕ ಬೆಟ್ಟದ ದೆವಸ್ಥಾನಕ್ಕೆ ಹೂರಟಿರುವ ವಿಷಯ ತಿಳಿಸಿದ ಅದನ್ನು ಕೇಳಿದ ಯುವತಿ ಜೋತೆಗೆ ನಾನು ಬರಬಹುದೆ ಏಂದು ಕೇಳಿದಳು, ಅತೀವ ಸಂತೋಷದಿಂದ ಅವಳಿಗೆ ಒಪ್ಪಿಗೆ ಸೂಚಿಸಿದ.
ಮುಸ್ಸಂಜೆಯ ಆ ತಂಪು ಸಮಯದಲ್ಲಿ ಈ ಯುವ ಜೋಡಿ ಹೂರಟಿತು, ಮುಸ್ಸಂಜೆಯ ಸೂಯ೯ ಬಾನಂಗಳವನ್ನು ಕೆಂಪಾಗಿಸಿದ್ದ, ಈ ಯುವ ಜೋಡಿ ಮಾತಿನ ಮೋಡಿಯಲ್ಲಿ ಮುಳಗಿತ್ತು, ದಾರಿ ಸಾಗಿದ್ದೆ ಗೋತ್ತಾಗಲಿಲ್ಲ ಆಗಲೆ ಅವರು ಅಧ೯ ಬೆಟ್ಟವನ್ನು ಹತ್ತಿಯಾಗಿತ್ತು ಅಲ್ಲಿಂದ ತಿರುಗಿ ನೋಡಿದಾಗ ಆ ಊರಿನ ವಿಹಂಗಮ ನೋಟ ಕಾಣಿಸಿತ್ತು, ಆ ಊರಿನ ಕೆರೆ, ದೇವಸ್ತಾನ ಎಲ್ಲಾ ಸುಂದರವಾಗಿ ಕಾಣಿಸುತ್ತಿದವು, ಅಲ್ಲಿಂದ ಮತ್ತೆ ತಮ್ಮ ಪ್ರಯಾಣವನ್ನು ಮುಂದುವರೆಸಿದರು, ಸ್ವಲ್ಪ ಎತ್ತರ ಏರಿದ ನಂತರ ಹುಡಗಿಗೆ ಸುಸ್ತಾಗತೊಡಗಿತು, ಅವಳು ಯುವಕನಿಗೆ ನನ್ನಿಂದ ಮುಂದೆ ನೆಡೆಯಲು ಅಗದು ಎಂದಳು ಯುವಕ ಅವಳಿಗೆ ಸ್ವಲ್ಪ ದೂರ ನೆಡೆಯುವಂತೆ ವಿನಂತಿಸಿಕೂಂಡ ಆದರೆ ಅವಳು ನಿರಾಕರಿಸಿಬಿಟ್ಟಳು, ಯುವಕನಿಗೆ ಧಮ೯ಸಂಕಟ ಅವಳನ್ನು ಅಲ್ಲಿಯೆ ಬಿಟ್ಟು ಹೂಗುವ ಹಾಗಿಲ್ಲ, ಅವಳು ಇವನ ಜೋತೆ ನೆಡೆಯಲು ಸಿದ್ದವಿಲ್ಲ, ಕೊನೆಗೆ ಬಹು ಚಚೆ೯ಗಳ ನಂತರ ಯುವತಿ ಯುವಕನಿಗೆ ತನ್ನನ್ನು ಎತ್ತಿಕೊಂಡು ಹೂಗುವಂತೆ ವಿನಂತಿಸಿಕೊಳುತ್ತಾಳೆ.
ಯುವಕನಿಗೂ ಪುಳಕ ಸುಂದರವಾದ ಯುವತಿ ಯಾರೆಂದು ತಿಳಿಯದು, ಇಗ ಅವಳನ್ನು ಎತ್ತಿಕೊಂಡು ಬೆಟ್ಟ ಹತ್ತುವ ಅವಕಾಶ ಸಿಕ್ಕಿದೆ ಹೆಗೆತ್ತಾನೆ ನಿರಾಕರಿಸಿಯಾನು? ಅವನು ಅವಳ ಮಾತಿಗೆ ಒಪ್ಪಿ ಅವಳನ್ನು ತನ್ನ ಬಾಹುಗಳಲ್ಲಿ ಎತ್ತಿಕೂಳ್ಳಲು ಅವಳೆಡೆಗೆ ನೆಡೆದ ಆದರೆ ಇದ್ದಕ್ಕಿಂದತಲೆ ಇಲ್ಲಿಂದಲೂ ಬಾರಿ ಶಬ್ದ ಕೆಳಿಸತೂಡಗಿತು, ಯುವಕನಿಗೂ ಶಬ್ದ ಕೇಳಿ ಅಚ್ಚರಿ ಎಲ್ಲಿಂದ ಇದು ಬರುತ್ತಿದೆ ಎಂದು ಸುತ್ತಲು ನೋಡತೂಡಗಿದ ಅಷ್ಟರಲ್ಲೆ ದೂರದ ಒಂದೂಂದೆ ವಸ್ತುಗಳು, ಮರಗಳು, ಮನೆಗಳು ಮಾಯವಾಗತೂಡಗಿದವು, ಶಬ್ದವು ತಿವ್ರವಾಗ ತೂಡಗಿತು,ಯುವಕನಿಗೆ ಏನಾಗುತ್ತಿದೆ ಎಂದು ಅಥ೯ವಾಗಲಿಲ್ಲ ಅಷ್ಟರಲ್ಲೆ ನಿಧಾನವಾಗಿ ಬೆಟ್ಟ ಕರಗತೊಡಗಿತು, ಕೂನೆಗೆ ಆ ಸುಂದರ ಯುವತಿ ಕೂಡ ಬೆಳದಿಂಗಳ ಬೆಳಕಿನಂತೆ, ಸೂಯ೯ನ ಎದರು ಮುಂಜಾನೆಯ ಮಂಜಿನಂತೆ ಕರಗಿ ಹೋದಳು, ಶಬ್ದದ ತಿವ್ರತೆ ವಿಪರಿತವಾಯಿತು ಅಷ್ಟರಲ್ಲಿಯೆ ಯುವಕನತಲೆಗೆ ಯಾರೂ ಭಲವಾಗಿ ಹೂಡೆದಂತೆ ಬಾಸವಾಯಿತು, ಭಯದಿಂದ ಕಣ್ಣು ಬಿಟ್ಟು ನೋಡಿದರೆ ತಲೆಗೆ ಹೊಡೆದಿದ್ದು ನನ್ನ ಅಮ್ಮ, ತೀವ್ರ ಶಬ್ದ ಬರುತ್ತಿದದ್ದು ನನ್ನ ಮೂಬೈಲ್ ನ ಅಲಾರಮ್ ನಿಂದ, ಬೇಗ ಏಳು ಎಂದು ಅಮ್ಮ ಎಚ್ಚರಿಸಿ ಹೂರ ಹೋದರು, ನಾನು ನನ್ನ ಅದ್ರುಷ್ಟವನ್ನು ಶಪಿಸುತ್ತಾಕೂಳಿತೆ.
ಛೇ ಇನ್ನು ಸ್ವಲ್ಪ ಹೂತ್ತಿನಲ್ಲೆ ನಾನು ಆ ಸುಂದರ ಯುವತಿಯನ್ನು ನನ್ನ ಭಾಹುಗಳಲ್ಲಿ ಎತ್ತಿಕೂಳುತಿದ್ದೆ ಆದರೆ....... ಅದಕೆ ನಾಳೆಯಿಂದ ಅಲಾರಮ್ ನ್ನು ಅಧ೯ಗಂಟೆ ತಡವಾಗಿ ಇಡಬೇಕು ಎಂದು ನಿಧ೯ರಿಸಿರುವೆ ಮತ್ತು ಅಮ್ಮನಿಗೆ ಯಾವುದೆ ಕಾರಣಕ್ಕು ಬೆಳಗಿನ ನನ್ನ ನಿದ್ರೆಗೆ ಭಂಗ ತರಬಾರದು ಎಂದು ಹೆಳಿರುವೆ.
ಮತ್ತೆ ಅದೇ ಆ ಹುಡಗಿಯ ಆಗಮನದ ನೀರಿಕ್ಷೆಯಲ್ಲಿನ್ ನಿದ್ರೆಗೆ ಜಾರುತ್ತಿರುವೆ...........
chennagide....
ReplyDeleteade hudugi barali matte kanasinalli:)
ayo kanditavagalu bedaa ri....
ReplyDeleteyake?????
ReplyDeleteits big storey .....
ReplyDeletebig story?????helu keluva......
ReplyDeletesorry ri elli helalu agalla.....
ReplyDelete