Wednesday, November 9, 2011

"ಶ್ರೀ ಕೃಷ್ಣ"ನೆಂದರೆ ನನಗೆ


ಕದ್ದು ಬೆಣ್ಣೆ ತಿಂದು, ಬೇರೆಯವರ ಮುಖಕ್ಕೆ ಕೈವರಸಿ
"ಅಮ್ಮ ನಾನು ದೇವರಾಣೆ ಬೇಣ್ಣೆ ಕದ್ದಿಲ್ಲ"
ಎಂದು ಹೇಳಿದ ಸುಳ್ಳುಗಾರ.

ಹದಿನಾರು ಸಾವಿರ ಸ್ತ್ರೀಯರ ಸಂಗಮಾಡಿ
ಮಹಾನ್ ರಸಿಕನೇನಿಸಿದ
ಸ್ತ್ರೀ ವ್ಯಾಮೋಹಿ.

ಅಪ್ಪಟ ವೀರ, ಧಾನ ಶೂರ ಕಣ೯ನನ್ನು
ಮೋಸದಿಂದ ಸಾಯುವಂತೆ ಮಾಡಿದ
ಮಹಾನ್ ಮೋಸಗಾರ.

ಕ್ಷತ್ರಿಯನಾಗಿ ರಣರಂಗದಲ್ಲಿ ಯುದ್ದ ಮಾಡದೆ
ಸಾರತಿಯಾಗಿ ಕೇವಲ ತಂಗಿ ಗಂಡನ
ತಲೆ ಕಾದ ಸ್ವಾಥಿ೯.

ಸತ್ಯ, ಧಮ೯ವೆ ತನ್ನ ಪ್ರಾಣ ಎಂದು
ನಂಬಿದ್ದ ಧಮ೯ರಾಯನ ಬಾಯಿಯಲ್ಲಿ
ಸುಳ್ಳಾಡಿಸಿದ ಅಧಮಿ೯.

ಕೊನೆಯಲ್ಲಿ ತ್ರುಣಮಾನವನ ಬಾಣಕ್ಕೆ
ಬಲಿಯಾಗಿ ದಟ್ಟಡವಿಯಲ್ಲಿ ಬಿದ್ದ
ಅನಾಥ ಹೆಣ.

1 comment:

  1. ಯಾಕಪ್ಪ ಗೆಳೆಯ ನಿಂಗೆ ಶ್ರೀ ಕೃಷ್ಣನ ಮೇಲೆ ಕೋಪ...?
    ಅವನು ಯಾವುದಕ್ಕಾಗಿ ಆ ತರ ಮಾಡಿದ ಅಂತ ಗೊತ್ತಿಲ್ಲವೆ ನಿನಗೆ...?

    ReplyDelete

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...