Thursday, January 19, 2012

ಕಿಡಕಿಯಾಚಗಿನ ಕನಸು...


         (ಇದು ರವೀಂದ್ರನಾಥ ಠಾಗೂರರು  1912ರಲ್ಲಿ ಬರೆದ ಬಂಗಾಳಿ ನಾಟಕ "ಪೊಸ್ಟ ಆಪೀಸ್"ದಿಂದ ಸ್ಪೂಥಿ೯ಗೊಂಡು    ಬರೆದ ಕಥೆ, ಮೂಲ ಕಥೆಗೆ ದಕ್ಕೆಯಾಗದಂತೆ ವಿಭಿನ್ನವಾಗಿ ಸಂಕ್ಷಿಪ್ತವಾಗಿ ನಾಟಕವನ್ನು ಕಥೆ ರೂಪದಲ್ಲಿ ಬರೆದಿದ್ದೆನೆ, ನನ್ನಿಂದ ಮೂಲ ಕಥೆಗೆ ದಕ್ಕೆಯಾಗಿದ್ದರೆ ದಯವಿಟ್ಟು ಕ್ಷಮಿಸಿ) 
            
                 ಅಮಲ್ ಮಾದವರಾಯರ 5 ವಷ೯ದ ಒಬ್ಬನೆ ಮಗ, ಮಾದವರಾಯರಿಗೆ ಮಗನೆಂದರೆ ಅತಿಯಾದ ಪ್ರೀತಿ, ಒಬ್ಬನೆ ಮಗನಾದ ಕಾರಣ ಅದು ಸಹಜ ಕೂಡ, ಆದರೆ ಅವನಿಗ ಮಾರಣಾಂತಿಕ ಖಾಯಿಲೆಯಿಂದ ಬಳಲುತಿದ್ದಾನೆ, ವೈದ್ಯರು ಕೊಡ ತಮ್ಮ ಎಲ್ಲ ಪ್ರಯತ್ನಗಳ ನಂತರ ಕೈ ಚೆಲ್ಲಿದ್ದಾರೆ, ಅವನು ಏಷ್ಟು ಕಾಲ ಬದುಕುತ್ತಾನೆ ಎಂಬುದು ದೇವರ ಮೇಲೆ ಅವಲಂಬಿತ, ಅವನನ್ನು ಅತಿಯಾದ ದೂಳು ಮತ್ತು ಬೆಳಕಿನಿಂದ ದೂರವಿರಿಸಿದರೆ ಇನ್ನು ಸ್ವಲ್ಪ ಕಾಲ ನೀಮ್ಮ ಜೊತೆ ಇರಬಹುದು ಎಂದಿದ್ದರು ಆದ್ದರಿಂದ ಅಮಲ್ ನನ್ನು ಒಂದು ಕೋಣೆಯಲ್ಲಿ ಇಟ್ಟೆದ್ದಾರೆ ಅದರ ಎಲ್ಲ ಕಿಡಕಿ ಬಾಗಿಲುಗಳು ಸದಾ ಮುಚ್ಚಿರುತ್ತವೆ, ಆದರೆ ಬಾಲಕ ಅಮಲ್ ಗೆ ಮಾತ್ರ ತಾನು ಕೊಡ ಹೊರ ಹೋಗ ಬೇಕು ಆಟ ಆಡ ಬೇಕು ಎಂಬ ಆಸೆ.
                                           ****************
                    ಅದೊಂದು ಮಧ್ಯಾನ ಊಟದ ನಂತರ ಅಮನ್ ನ್ನು ಕೋಣೆಯಲ್ಲಿ ಮಲಗಿಸಿ ಮಾದವರಾಯರು ಆಚೆ ಹೊಗಿದ್ದಾರೆ, ಬಾಲಕ ಅಮಲ್ ಗೆ ಮಾತ್ರ ನಿದ್ರೆ ಬರುತ್ತಿಲ್ಲ, ಮಲಗಿರಲು ಆಗುತ್ತಿಲ್ಲ ಅದೆ ಸಮಯಕ್ಕೆ ಸರಿಯಾಗಿ ರಸ್ತೆ ಪಕ್ಕದ ಕಿಡುಕಿಯಿಂದ ದ್ವನಿಯೊಂದು ಕೆಳುತ್ತದೆ "ಮೊಸರು ಮೊಸರು ಗಟ್ಟಿ ಮೊಸರು, ತಾಜಾ ಮೊಸರು" ಆ ದ್ವನಿ ಕೇಳಿದ ಅಮಲ್ ಮೇಲ್ಲಗೆ ಕಿಡಕಿ ಪಕ್ಕ ಬಂದು ನಿಧಾನವಾಗಿ ಕಿಡಕಿ ಬಾಗಿಲು ತೆರೆಯುತ್ತಾನೆ, ವ್ಯಕ್ತಿಯೊಬ್ಬ ತಲೆಯಮೇಲೆ ಕುಡಕಿ ಹೊತ್ತೂಕೊಂಡು ಹೋಗುತ್ತಿದ್ದಾನೆ, ಅವನನ್ನು ಕಂಡ ಅಮಲ್ ಮೆಲ್ಲಗೆ "ಮೊಸರಣ್ಣ ಮೊಸರಣ್ಣ" ಎಂದು ಕೊಗಿದ, ಬಾಲಕನ ದ್ವನಿ ಕೆಳಿದ ಮೊಸರಿನವನು ಕಿಡಕಿ ಬಳಿ ಬಂದು
    ಏನ್ ಪುಟ್ಟಾ ಮೊಸರು ತಗೊತ್ತಿಯಾ?
    ನಾನು ಹೇಗೆ ತಗೊಳ್ಳಿ, ನನ್ನ ಹತ್ತಿರ ದೂಡ್ಡು ಇಲ್ಲ.
    ಮತ್ತೆ ಏನಕ್ಕೆ ಕರೆದೆ ಸುಮ್ಮನೆ ನನ್ನ ಟೈಮ್ ವೆಸ್ಟ್, ಎಂದ ಅದಕ್ಕೆ ಅಮಲ್
    "ನಾನು ನಿನ್ನ ಜೋತೆ ಬರಲೆ"
    ನನ್ನ ಜೋತೆ? ಯಾಕೆ?
    ನನಗೆ ಮನೆಯಿಂದ ಆಚೆ ಹೋಗಬೇಕು ಊರು ನೋಡ ಬೇಕು ಅಂತಾ ಆಸೆ, ಮನೆಯಲ್ಲೆ ಇದ್ದು ಬೇಜಾರಾಗಿದೆ.
    ನಿನ್ನ ಅಪ್ಪನಿಗೆ ಹೇಳು ಕರಕೊಂಡು ಹೊಕ್ತಾರೆ.
    ಇಲ್ಲ ನನಗೆ ಹುಷಾರಿಲ್ಲ, ಡಾಕ್ಟರ್ ಆಚೆ ಹೊಗದೆ ಮನೆಯಲ್ಲೆ ಇದ್ದರೆ ಬೇಗ ಗುಣವಾಗುತ್ತೆ ಅಂತಾ ಹೇಳಿದ್ದಾರೆ, ಅದಕೆ ಮನೆಯಲ್ಲಿ  ಯಾರು ನನ್ನ ಆಚೆ ಬಿಡುತ್ತಿಲ್ಲ.
   ಏನಾಗಿದೆ ನಿನಗೆ?
   ಅದೆಲ್ಲಾ ನನಗೆ ಗೊತ್ತಿಲ್ಲ್, ಮೊಸರಣ್ಣ ನೀನು ಎಲ್ಲಿಂದ ಬಂದೆ?
   ನನ್ನ ಹಳ್ಳಿಯಿಂದ.
   ನಿನ್ನ ಹಳ್ಳಿ? ಏಲ್ಲಿದೆ? ಇಲ್ಲಿಂದ ದೂರಾನಾ?
   ಹೌದು.. ಅಲ್ಲಿ ಬೇಟ್ಟಾ ಕಾಣುತ್ತಲ್ಲಾ ಅದರ ಪಕ್ಕ ಒಂದು ನದಿಯಿದೆ ನದಿ ಪಕ್ಕಾನೆ ನನ್ನುರು.
   ನಿಮ್ಮನೆಲಿ ಯಾರಾರು ಇದ್ದಾರೆ?
   ನಾನು, ನನ್ನ ಹೆಂಡತಿ, ನಾಲ್ಕು ಎಮ್ಮೆ, ದಿನಾ ಅವಳು ಎಮ್ಮೆ ಮೆಯಿಸಿ, ನದಿಯಲ್ಲಿ ಅವುಗಳಿಗೆ ಸಾನ್ನ ಮಾಡಿಸಿ ಹಾಲು ಕರೆದು ಅದಕ್ಕೆ ಹೆಪ್ಪು ಹಾಕಿ ಮೊಸರು ಮಾಡ್ತಾಳೆ ನಾನು ಅದನ್ನು ಊರು ಉರುಗೆ ತಗೊಂಡು ಹೋಗಿ ಮಾರ್ತಿನಿ.
   ಮೊಸರಣ್ಣ ನನ್ನ ನಿನ್ನ ಜೋತೆ ಕರೆದುಕೊಂಡು ಹೊಗು ನಾನು ಎಮ್ಮೆ ಮೆಯಿಸುವದು ಹಾಲು ಕರೆಯೊಂದು ಕಲಿತೆನೆ.
   ಬೇಡ ಪುಟ್ಟ ನೀನು ಓದಿ ದೊಡ್ಡವನಾಗಿ ಒಳ್ಳೆ ಕೆಲಸಕ್ಕೆ ಸೆರು.
   ನನಗೆ ಓದೊಕೆ ಇಷ್ಟ ಇಲ್ಲ, ನಾನು ದೊಡ್ಡವನಾಗಿ ನೀನ್ನ ತರ ಮೊಸರು ಮಾರ್ತಿನಿ ಊರು ಊರು ಅಡ್ಡಾಡ್ತಿನಿ.
    ಹ್ಹ.. ಹ್ಹ... ಸರಿ ಸರಿ ಈಗ ಈ ಮೊಸರು ತಗೊ.
    ಬೇಡ ನನ್ನ ಹತ್ತಿರ ದೂಡ್ಡು ಇಲ್ಲ.
    ನಿನ್ನ ಹತ್ರ ದೂಡ್ಡು ತಗೊಂಡೆ ದೆವರು ಮೆಚ್ಹತ್ತಾನಾ? ಇರಲಿ ಹಾಗೆ ತಗೊ ದೊಡ್ಡವನಾದ ಮೇಲೆ ದೂಡ್ಡು ಕೊಡುವಂತೆ.
    ಸರಿ.
   ಆಯ್ತು ನಾನು ಬರ್ತಿನಿ ಇನ್ನು ಅಧ೯ ಊರು ಅಡ್ಡಾಡ ಬೇಕು, ಎಂದು ಮೊಸರಿನವನು ಹೊರಟೂ ಹೋದ.
                                         *****************
                ಮೊಸರಿನವನು ಹೋದ ದಾರಿಯನ್ನೆ ನೋಡುತ್ತಾ ಅಮಲ್ ಗಟ್ಟಿಯಾಗಿ ಮೊಸರು ಮೊಸರು ಗಟ್ಟಿ ಮೊಸರು, ತಾಜಾ ಮೊಸರು ಎಂದು ತನ್ನಷಟ್ಟಕ್ಕೆ ತಾನೆ ಕೂಗಲಾರಂಬಿಸಿದ ಅದೆ ಸಮಕ್ಕೆ ಅದೆ ಮಾಗ೯ವಾಗಿ ಬರುತ್ತಿದ್ದ ಪಕ್ಕದ ಮನೆಯ ರಾಘವ್ ಅಂಕಲ್ ಅಮಲ್ ನನ್ನು ನೋಡಿ " ಹೇ ಅಮಲ್ ಒಳಗಡೆ ಹೋಗಿ ಮಲಗು ನಿನಗೆ ಮೊದಲೆ ಆರೋಗ್ಯ ಸರಿಯಿಲ್ಲವೆಂದರು ಅದಕ್ಕೆ ಅಮಲ್
"ಅಂಕಲ್ ನೀವು ಎಲ್ಲಿಗೆ ಹೊಗಿದ್ರಿ"
ಪೋಸ್ಟ ಆಪೀಸ್ ಗೆ ಹೋಗಿದ್ದೆ.
ಪೋಸ್ಟ ಆಪೀಸ್ ಗೆ ಯಾಕೆ?
ನನ್ನ ಮಗನಿಗೆ ಪತ್ರ ಬರೆದಿದ್ದೆ ಅದನ್ನು ಡಬ್ಬಿಗೆ ಹಾಕುಲು ಹೋಗಿದ್ದೆ.
ನಿಮ್ಮ ಮಗನಿಗೆ ಆ ಪತ್ರ ಯಾರು ಕೊಡ್ತಾರೆ?
ಪೋಸ್ಟ ಮನ್.
ಪೋಸ್ಟ ಮನ್? ಅವನು ಯಾರು?
ಪೋಸ್ಟ ಮನ್ ಅಂದರೆ ಎಲ್ಲರ ಮನೆಗು ಹೋಗಿ ಅವರ ಅವರ ಪತ್ರ ಕೊಡುವವನು.
ಅವನಿಗೆ ಎಲ್ಲರ ಮನೆಯೆನು ಗೊತ್ತಾ?
ಹಾ ಗೊತ್ತು.
ನಮ್ಮ ಮನೆನು ಗೊತ್ತಾ?
ಹಾ..
ಅಂಕಲ್ ನಾನು ದೊಡ್ಡವನಾದ ಮೇಲೆ ಪೋಸ್ಟ ಮನ್ ಆಗ್ತಿನಿ.
ಬೇಡ ಪುಟ್ಟ ನೀನು ಓದಿ ದೊಡ್ಡವನಾಗಿ ಒಳ್ಳೆ ಕೆಲಸಕ್ಕೆ ಸೇರು.
ಇಲ್ಲ ನನಗೆ ಓದೊಕೆ ಇಷ್ಟಾ ಇಲ್ಲ, ನಾನು ಪೋಸ್ಟ ಮನ್ ಆಗ್ತಿನಿ ಎಲ್ಲರ ಮನೆಗೆ ಹೋಗಿ ಅವರವರ ಪತ್ರ ಕೊಡ್ತಿನಿ, ಊರು ಊರು ಅಡಾಡುತ್ತೆನೆ.
ಅಮಲ್ ಆರೋಗ್ಯ ಪರಿಸ್ತಿತಿ ಅರಿತಿದ್ದ ರಾಘವ್ ಅಂಕಲ್ ಗೆ ಅವನ ಮಾತು ಕೇಳಿ ಕಣ್ಣಂಚಲಿ ನೀರು ಬಂದರು ತೋರಿಸದೆ,
ಆಯ್ತು ಹಾಗೆ ಮಾಡು ಈಗ ಹೋಗಿ ಮಲಗು ಎಂದರು ಆದರೆ ಅಮಲ್
ಅಂಕಲ್ ನನಗು ಯಾರಾದ್ರು ಪತ್ರ ಬರಿತ್ತಾರಾ?
ಹಾ ಪುಟ್ಟಾ ಚಿಕ್ಕಮಕ್ಕಳಿಗೆ ದೇವರು ಪತ್ರ ಬರೆಯುತ್ತಾನೆ.
ಅಂಕಲ್ ದೇವರು ಎಲ್ಲಿದ್ದಾನೆ?
ತುಂಭಾ ದೂರ.
ನೀವು ಅವನನ್ನು ನೋಡಿದ್ದಿರಾ?
ಇಲ್ಲ ಪುಟ್ಟ.
ಅಂಕಲ್ ದೆವರು ಏನಾದರು ನಿಮಗೆ ಸಿಕ್ಕರೆ ಅವರಿಗೆ ನನಗು ಒಂದು ಪತ್ರ ಬರೆಯಲು ಹೇಳ್ತಿರಾ?
ಖಂಡಿತಾ ಹೇಳ್ತಿನೆ, ಇವತ್ತೆ ಹೇಳ್ತಿನಿ, ನಾಳೆನೆ ದೇವರು ನಿನಗೆ ಒಂದು ಪತ್ರ ಬರಿತ್ತಾನೆ, ಸರಿ ನನಗಿಗ ಕೆಲಸ ಇದೆ ನೀನು ಹೊಗಿ ಮಲಗು ಎಂದು ಹೇಳಿ ರಾಘವ್ ಅಂಕಲ್ ತಮ್ಮ ಮನೆಯೆಡೆಗೆ ಹೋರಟರು.
                                     *****************
                ಕಿಡಕಿ ಪಕ್ಕ ಕೂಳಿತು ದಾರಿಯನ್ನೆ ದಿಟ್ಟಿಸುತ್ತಿದ್ದ ಅಮಲ್ ಗೆ ದಾರಿಯಲ್ಲಿ ಬರಿತ್ತಿದ್ದ ಒಬ್ಬ ಹುಡಗಿ ಕಂಡಳು, ಅವಳನ್ನು ನೋಡಿದ ಅಮಲ್ "ಓಯ್" ಎಂದು ಕೂಗಿದ, ಇವನ ದ್ವನಿ ಕೆಳೀದ ಬಾಲಕಿ ಕಿಡಕಿಯ ಬಳಿ ಬಂದು
ಏನು ಎಂದಳು?
ಯಾರು ನೀನು?
ಸುಧಾ?
ಯಾವ ಸುಧಾ?
ನಿನಗೆ ಗೋತಿಲ್ಲವ್ವಾ? ನಾನು ಹೂ ಮಾರುವವನ ಮಗಳು ಸುಧಾ.
ನೀನು ಏನು ಮಾಡ್ತಿಯಾ?
ನಾನು ದಿನವು ಹೂ ತೊಟಕ್ಕೆ ಹೊಗಿ ಬುಟ್ಟಿಯಲ್ಲಿ ಹೂ ಕಿತ್ತು ತರ್ತಿನಿ, ನಮ್ಮಪ್ಪಾ ಅವನ್ನು ಮಾರ್ತಾನೆ. ನೀನು ಏನು ಮಾಡ್ತಿಯಾ?
ನಾನು ಇಡಿದಿನ ಈ ಕಿಡಕಿ ಪಕ್ಕ ಕುಳಿತು ಹೊರಗಡೆ ನೋಡ್ತಾ ಇತಿ೯ನಿ.
ಯಾಕೆ ಮನೆ ಹೊರಗಡೆ ಬರಲ್ವಾ?
ಇಲ್ಲ ನನ್ನ ಆರೋಗ್ಯ ಸರಿಯಿಲ್ಲ, ಡಾಕ್ಟರ್ ಹೊರಗಡೆ ಹೋಗೂದು ಬೇಡಾ ಅಂದಿದ್ದಾರೆ.
ಹೋ ಹಾಗಾದ್ರೆ ನಿನು ಮನೆವಳಗಡೆನೆ ಇರು ಡಾಕ್ಟರ್ ಯಾವಗಲು ಸರಿಯಾಗೆ ಹೆಳ್ತಾರೆ, ಸರಿ ನನಗೆ ಲೇಟ್ ಆಕ್ತಾ ಇದೆ, ಲೇಟ್ ಆದ್ರೆ ಅಪ್ಪ ಬೈತಾರೆ ನಾನು ಹೊಗುತ್ತೆನೆ.
ಹೇ ಸುಧಾ... ನಾನು ಸರಿಯಾದ ಮೇಲೆ ನೀನ್ನ ಜೋತೆ ಹೂ ಕಿಳೊಕೆ ನಾನು ಬತ್ರಿನಿ ನನ್ನು ಕರೆದುಕೊಂಡು ಹೊಗು.
ಆಯ್ತು..
ಸಂಜೆ ಇದೆ ದಾರಿಲಿ ಬಾ, ನಿ ಕಿತ್ತ ಹೂ ನನಗೆ ತೊರಿಸು.
ಸರಿ ಸರಿ ಆಯ್ತು ಸಂಜೆ ಸಿಗ್ತಿನಿ.
ಸುಧಾ ಮರಿಬೇಡ..... ಸುಧಾ ಅದಾಗಲೆ ರಸ್ತೆಯ ತಿರುವಿನಲ್ಲಿ ಮರೆಯಾಗಿದ್ದಳು
                                  ******************
              ಕೆಲ ಸಮಯದ ಬಳಿಕ ಬಾಲನೊಬ್ಬ ಚೆಂಡು ಬ್ಯಾಟಿನಿಂದ ಅದೆ ರಸ್ತೆಯಲ್ಲಿ ಬಂದನು, ಅವನನ್ನು ಕಂಡ ಅಮಲ್ ಅವನ ಕೈಯಲ್ಲಿಂದ ಬ್ಯಾಟ್ ನೋಡಿ "ಹೇ ಏನದು"ಎಂದು ಕೇಳಿದ ಅದಕ್ಕೆ ಭಾಲಕ
ಇದು ಬ್ಯಾಟ್ ನಾನು ಕ್ರಿಕೆಟ್ ಆಡಾಲು ಹೋಗ್ತಾ ಇದ್ದೆನೆ.
ಕ್ರಿಕೆಟ್...? ಹೇಗೆ ಆಡ್ತಾರೆ..? ಒಂದ ಸಲ ಆಡಿ ತೋರಿಸು.
ನನ್ನ ಜೋತೆ ಗ್ರೌಂಡಿಗೆ ಬಾ ಅಲ್ಲೆ ನೋಡೂವಂತೆ.
ಇಲ್ಲ ನನ್ನ ಆರೋಗ್ಯ ಸರಿಯಿಲ್ಲ, ಅಲ್ಲಿಗೆ ಬರೊಕೆ ಆಗಲ್ಲ.
ಹೌದಾ ಸರಿ ಬಿಡು ನವು ಅಲ್ಲಿ ದಿನಾ ಆಡ್ತಿವೆ ನೀನ್ನ ಆರೋಗ್ಯ ಸರಿಯಾದ ಮೇಲೆ ನನ್ನ ಜೋತೆ ಬಾ, ನಿನಗು ಆಟ ಆಡಲು ಕಲಿಸ್ತಿನೆ.
ನಿಜವಾಗಲು...?
ಪ್ರಾಮಿಸ್.
ಆಯ್ತು ಕೆಲವೆ ದಿನಗಳಲ್ಲಿ ನನ್ನ ಆರೋಗ್ಯ ಸರಿಯಾಗುತ್ತೆ ಅಂತಾ ಅಪ್ಪಾ ಹೇಳಿದ್ದಾರೆ, ಆವಾಗ ನಾನು ನಿನ್ನ ಜೋತೆ ಆಟ ಆಡ್ತಿನಿ.
ಆಯ್ತು ನಾನು ಬರ್ತಿನಿ ನನ್ನ ಪ್ರೆಂಡ್ಸ ಕಾಯ್ತಾ ಇತ್ರಾರೆ, ಎಂದ ಬಾಲಕ ಕೆಲವೆ ಕ್ಷಣಗಳಲ್ಲಿ ಅಲ್ಲಿಂದ ಓಡಿ ಹೊಗಿದ್ದ.
      ಅಮಲ್ ಗೆ ಯಾಕೊ ಕಣ್ಣಿಗೆ ಮಂಜು ಕವಿದಂತಾಯಿತ್ತು ನಿಧಾನವಾಗಿ ಎಂದು ತನ್ನ ಹಾಸಿಗೆ ಬಳಿ ಬಂದು ಮಲಗಿದ
                                       *******************
                      ಸಂಜೆ ವೇಳೆಗಾಗಲೆ ಅಮಲ್ ಆರೋಗ್ಯ ಪರಿಸ್ಥಿತಿ ಗಂಭಿರವಾಗಿತ್ತು, ಕಣ್ಣು ಸುತ್ತಲು ಕಪ್ಪನೆಯ ಕಲೆ ಆವರಿಸಿತ್ತು, ಅವನಿಗೆ ಎಲ್ಲವು ಮಂಜು ಮಂಜಾಗಿ ಕಾಣಿಸಿತಿತ್ತು, ಮಾದವರಾಯರಿಗೆ ಏನು ಮಾಡಬೇಕು ತಿಳಿಯದೆ ಉಕ್ಕುತಿದ್ದ ದುಂಖವನ್ನು ತಡೆದುಕೊಂಡು ಮಗನ ಬಳಿ ಕುಳಿತಿದ್ದಾರೆ ಅದೆ ಸಮಯಕ್ಕೆ ರಾಘವ್ ಅಂಕಲ್ ಅಲ್ಲಿಗೆ ಬಂದರು.
       "ಅಮಲ್ ಅಮಲ್ ಪುಟ್ಟಾ ನೋಡು ನಿನಗೆ ಪತ್ರ ಬಂದಿದೆ, ಪೋಸ್ಟಮನ್ ಈಗತಾನೆ ಕೋಟ್ಟು ಹೊದ" ರಾಘವ್ ಅಂಕಲ್ ಮಾತು ಕೆಳಿ ಪ್ರಯಾಸದಿಂದ ಕಣ್ಣು ತೆರೆದು "ನಿಜವಾಗಲು...? ದೇವರು ನನಗೆ ಇಷ್ಟು ಬೇಗ ಪತ್ರ ಬರೆದನಾ? ಏನು ಬರೆದಿದ್ದಾನೆ?" ಎಂದನು, ರಾಘವ್ ಅಂಕಲ್ ತಮ್ಮ ಕೈಯಲ್ಲಿದ್ದ ಪತ್ರವನ್ನು ಅಮಲ್ ಬಳಿ ಬಂದು ಅವನ ಕೈಯಲ್ಲಿ ಇಟ್ಟರು,
"ಅಂಕಲ್ ಇದರಲ್ಲಿ ಏನು ಬರೆದಿದೆ? ನನಗೆ ಓದೊಕೆ ಬರಲ್ಲ, ನಾನು ದೊಡ್ಡವನಾಗಿ ಓದೊದು ಕಲಿತು ನಾನೆ ಈ ಪತ್ರ ಓದುತ್ತೆನೆ, ಉತ್ತರವನ್ನು ನಾನೆ ಬರೆಯುತ್ತೆನೆ ಅಲ್ಲಿಯವರೆಗು ಇದು ನನ್ನ ಹತ್ತಿರವೆ ಜೋಪಾನವಾಗಿ ಇರುತ್ತದೆ" ಎಂದು ಮೆಲ್ಲಗೆ ಪತ್ರ ತನ್ನ ಎದೆಗೆ ಹಚ್ಚಿಕೊಂಡು ನಿಧಾನವಾಗಿ ಕಣ್ಣು ಮುಚ್ಹಿ ತನ್ನ ಕೋನೆಯ ಊಸಿರಿನೊಂದಿಗೆ ಚಿರ ನಿದ್ರೆಗೆ ಜಾರಿದ.
   ಅದೆ ಸಮಯಕ್ಕೆ ಸರಿಯಾಗಿ ಕಿಡಕಿಯಲ್ಲಿ ಬಾಲಕಿಯೊಬ್ಬಳು "ಅಮನ್ ಅಮನ್" ಎಂದು ಕೂಗಿದಳು, ಅವಳ ಮಾತು ಕೇಳಿ ರಾಘವ ಅಂಕಲ್ ಕಿಡಕಿಯ ಬಳಿ ಬಂದರು, ಅವರನ್ನು ಕಂಡ ಬಾಲಕಿ
ಅಂಕಲ್ ಅಮನ್ ಇಲ್ವಾ?
ಇಲ್ಲಮ್ಮ ಅವನು ಈಗತ್ತಾನೆ ಮಲಗಿದ್ದಾನೆ.
ಏವಾಗ ಏಳ್ತಾನೆ?
ಗೊತ್ತಿಲ್ಲ... ತುಂಭಾ ಹೊತ್ತಾಗಬಹುದು.
ಹೌದಾ... ಅಂಕಲ್ ನನಗೆ ಒಂದು ಸಹಾಯ ಮಾಡ್ತಿರಾ?
ಹಾ... ಹೇಳು?
ಅವನು ಎದ್ದ ತಕ್ಷಣ ಅವನ ಕಿವಿಯಲ್ಲಿ ನಿನ್ನ ನೋಡೊಕೆ ಸುಧಾ ಬಂದಿದ್ದಳು, ಅವಳು ನೀನ್ನ ಮರೆತಿಲ್ಲ, ಎಂದು ಹೆಳಿ ಅವನಿಗೆ ಈ ಹೂ ಕೊಡಿ... ಎಂದು ಹೇಳಿ ರಾಘವ ಅಂಕಲ್ ಕೈಯಲ್ಲಿ ಒಂದು ಹೂ ಕೊಟ್ಟು ಹೊರಟು ಹೋದಳು.
 ರಾಘವ್ ಅಂಕಲ್ ಕಣ್ಣಿನಿಂದ ಕಂಬನಿಯೊಂದು ಜಾರಿ ಹೂ ಮೆಲೆ ಬಿದ್ದಿತು, ಪಡುವಣದಲ್ಲಿ ಸೂಯ೯ಕೂಡ ತನ್ನ ದಿನದ ಪ್ರಯಾಣ ಮುಗಿಸಿ ಅಸ್ತಮಿಸಿದ್ದ.
            *****************************************************************

Saturday, January 14, 2012

ಖಾಸ್ ಬಾತ್...


ನಮ್ಮ ಅವ್ವಾ ಹೇಳಿದಳು
ಅಕಿ ಡಾಕ್ಟರ್ ಅದಾಳ
ನೀ ಇಂಜಿನಿಯರ್ ಅದಿ
ಇಬ್ರು ಜೋಡಿ ಬಾಳ ಚಲೂ ಅಕತಿ.


ಅದಕ ನಾ ಹೇಳಿದೆ
ಏನ್ ಖಾಸ್ ಚಲೂ ಅಕತಿ
ಕಟ್ಟಿಗೊಂಡ ಒಂದ ವಷ೯ಕ್ಕ
ಎತ್ತ ಏರಿಗೆ ಎಳಿತು
ಕೋಣ ನೀರಿಗೆ ಎಳಿತು
ಅನ್ನಂಗ ಅಕತಿ.


ಸುಮ್ಮನ ಗಾದಿ ಯಾಕ ಕೆಡುಸ್ತಿ
ಅಕಿ ಕೋಣ ಅಲ್ಲ
ನೀ ಎತ್ತ ಅಲ್ಲ
ನಿಮೀಬ್ರು ಜೋಡಿ ಚಂದ ಕಾಣ್ತತಿ ಅಷ್ಟ.


ಏನ್ ಚಂದ ನಿನ್ನ ತಲಿ
ಅಕಿ ನೋಡಿದರ ದುಂಡ ಕಲ್ಲ ತರ ದಪ್ಪ ಅದಾಳ
ನಾ ನೋಡಿದರ ಕಡ್ಡಿತರ ತಳ್ಳಗ ಅದನಿ
ಒಂದ್ ವೇಳೆ ನಾ ಎಮ್ಮೆ ಮದುವೆ ಯಾದ್ರು
ಕೋಣನ ತರ ಇರ ಅಕಿ ವಲ್ಲೆ.


ಎಮ್ಮಿ ಕಟ್ಟಕೊತಿ ನೀ...? ಒಳ್ಳೆದು ಕಟ್ಟಕೊ
ನೀನ್ನ ಹಣೆ ಬರಹಾ ನಾ ಎನ್ ಮಾಡ್ಲಿ
ನಡಿ ನಾಳೆ ಸಂತಿಗೆ ಹೋಗಿ ನಿನಗ
ಚಂದದ ಒಂದ ಕರೆ ಎಮ್ಮೆ ತರೋಣ...

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...