Saturday, May 21, 2011

ಶೆಟ್ಟರ ಅಂಗಡಿ ಲವ್ ಸ್ಟೊರಿ


                         ಅಂದು ಭಾನುವಾರ ಮಧ್ಯಾನದ ಸಮಯ ಯಾಕೋ ತುಂಬಾ ಬೇಜಾರಗುತಿತ್ತು ಸರಿ ಅಮ್ಮನ ಜೋತೆಯಾದರು ಮಾತನಾಡೋಣವೆಂದು ಮೊಬೈಲ್ ತೆಗೆದುಕೊಂಡೆ ಆದರೆ ಅದರಲ್ಲಿ ಬ್ಯಾಲನ್ಸ ಇರಲಿಲ್ಲ ಸರಿ ರಿಚ್ಯಜ್೯ ಮಾಡಿಸೊಣವೆಂದು ಪಾಕೆಟ್ ತೆಗೆದುಕೊಂಡೆ ಆದರೆ ಅದರಲ್ಲಿ ಬೆಳಗ್ಗೆ ಇದ್ದ 100 ರೂಪಾಯಿನ್ನು ನನಗೆ ಹೆಳದೆ ಅದಾಗಲೆ ಗೆಳಯ ಯಾವಾಗಲೊ ಎತ್ತಿಕೊಂಡಿದ್ದ, ಪಾಕೆಟಯಲ್ಲಾ ಜಾಲಾಡಿದಾಗ ಸಿಕ್ಕಿದ್ದು 1 ರೂಪಾಯಿ, ಸರಿ ಅದರಲ್ಲೆ ಅಮ್ಮನ ಜೋತೆ ಮಾತಾಡೊಣ ಎಂದು ಪಕ್ಕದ ಶೆಟ್ಟರ ಅಂಗಡಿಗೆ ಹೋಗಿ coin boxನಿಂದ ಅಮ್ಮನಿಗೆ ಕಾಲ್ ಮಾಡಿದೆ ಹಾಗೆಯೆ ಎದುರು ಮನೆಯ ಮಹಡಿ ಕಡೆ ನೋಡಿದೆ ಅಲ್ಲಿ ಹೋಸದಾಗಿ ನೆಲಸಲು ಬಂದಿದ್ದ ನಸಿ೯oಗ್ ಟೀಚರ್ ನಿಂತು ನನ್ನ ಕಡೆಗೆ smile ಕೊಡುತಿದ್ದಳು, ಜೋತಗೆ ಕಣ್ಣು ಸನ್ನೆಗಳು ಬೇರೆ, ನನಗೆ ಮನದಲ್ಲೆ double ಲಾಡು ತಿಂದ ಖುಶಿ, ಅಬ್ಬಾ ಕೋನೆಗು ನನ್ನ ಜೀವನದಲ್ಲಿ ಒಬ್ಬಳಾದರು ಹುಡಗಿ ನನಗೆ line ಕೊಡುತಿದ್ದಾಳಲ್ಲಾ ಎಂದು ಖುಶಿ, ಇತ್ತ ಪೋನಿನಲ್ಲಿ ಅಮ್ಮ ಮಾತನಾಡಿದ್ದು ಆಯ್ತು ನಿಮಿಷದ ನಂತರ ಪೋನ್ ಕಟ್ಟೂ ಆಯ್ತು ಆದರೆ ರೀಸಿವರ್ ಮಾತ್ರ ನಾನು ಕೆಳಗೆ ಇಡದೆ ಆ ಹುಡಗಿ ಎದರು ಪೋಜ್ ಕೋಡುತಿದ್ದೆ, ಹಾಗೆಯೆ ಒಂದೆರೆಡೂ ನಿಮಿಷಗಳು ಅವಳ್ಳನ್ನೆ ದಿಟ್ಟಿಸಿ ನೊಡುತ್ತಾ ಅವಳ ಕಣ್ಣುಗಳಿಗೆ ಸ್ಪಂದಿಸ ತೋಡಗಿದ್ದೆ ಆ ಎರಡೆ ನಿಮಿಷಗಳಲ್ಲಿ ಎಷ್ಟೂ ಕನಸಗಳು ಮನದಲ್ಲಿ ಮುಡಿದ್ದವು, 
              ನನ್ನನ್ನೆ ಗಮನಿಸುತ್ತಿದ್ದ ಶೆಟ್ಟರು ನನ್ನನ್ನು ಕನಸುಗಳ ಲೋಕದಿಂದ ವಾಸ್ತವ ಲೋಕಕ್ಕೆ ಕರೆದು ಹೇಳಿದರು " ತಮ್ಮಾ ಅಕಿ ನಿನ್ನ ನೋಡ್ತಾ ಇಲ್ಲ, ಅಕಾ  ಅಲ್ಲಿ ಕುಂತ್ತಾನಲ ಆ ಹೈಸ್ಕೊಲ್ ಮಾಸ್ತರ ಅವನ ನೋಡಿ ನಗಾಕ ಹತ್ಯಾಳ, ಒಂದು ವಾರದಿಂದ  ಇಬ್ರು ಹಿಂಗ ಮಾಡಾಕಾ ಹತ್ಯಾರ ನೀನು ಇವತ್ತು ನೋಡಿ ಅಷ್ಟೆ, ಸುಮ್ಮನ ಪೋನ್ ಇಟ್ಟು ಮನಿಗೆ ಹೋಗು ಅವರಿಗೆ ಡಿಸ್ಟಬ೯ ಮಾಡಬ್ಯಾಡ"

Saturday, May 14, 2011

ಗೆಳತಿಗೊಂದು ಮನವಿ


ಹೊಗದಿರು ಗೆಳತಿ ಆಚೆ ಸೂಯಾ೯ಸ್ತದ ಸಮಯದಿ
ಮರೆತಾನು ಸೂಯ೯ ಮರಳುವುದ, ಕಂಡು ನಿನ್ನ

ಹೊಗದಿರು ಗೆಳತಿ ಆಚೆ ಬೆಳದಿಂಗಳಿನಲ್ಲಿ ರಾತ್ರಿ
ಬಂದಾನು ಚಂದ್ರ ಇಳಿದು ಧರೆಗೆ ಮಾತನಾಡಿಸಲು ನಿನ್ನ

ಹೊಗದಿರು ಗೆಳತಿ ಹೂವಿನ ತೊಟಕೆ ಎಂದು
ಮರೆತಾವು ದುಂಬಿ ಮಧುವ ಹಿರುವುದ, ಕಂಡು ನಿನ್ನ

ಹೊಗದಿರು ಗೆಳತಿ ದೇವಸ್ತಾನಕ್ಕೆ ಎಂದು
ಮರೆತಾನು ದೇವರು ಭಕ್ತರ, ಕಂಡು ನಿನ್ನ

ಹೊಗದಿರು ಗೆಳತಿ ಜನರ ಗುಂಪಿನ ಮಧ್ಯ
ಬಿಟ್ಟಾರು ನಿನಗೆ ದ್ರುಷ್ಠಿ, ಕಂಡು ನಿನ್ನ ಸೌಂಧರ್ಯ

ಹೊಗದಿರು ಗೆಳತಿ ಬಿಸಿಲಿನಲಿ ಆಚೆ
ಸೂಟ್ಟಾವು ಸೂಯ೯ನ ಕಿರಣಗಳು ನಿನ್ನ ಕೋಮಲ ತ್ವಚೆಯ

ಹೊಗದಿರು ಗೆಳತಿ ಮಳೆಯಲಿ ಎಂದು
ಮಳೆಯ ನೀರಿನಲಿ ನೆನೆದು ಆದಿತು ನಿನಗೆ ಶೀತ

ಬಾರದಿರು ಗೆಳತಿ ನನ್ನ ಕನಸಿನಲಿ ಎಂದು
ಹೂಗುವುದು ಪೂಣ೯ ರಾತ್ರಿಯ ನಿದ್ರೆ ಅಂದು, ಕಂಡು ನಿನ್ನ

Monday, May 9, 2011

ನನ್ನ "ಮನೆತನ"ದ ಇತಿಹಾಸ


               "ಇತಿಹಾಸ" ಯಾವಾಗಲು ನನ್ನ ನೆಚ್ಚಿನ ವಿಷಯ, ಮಾಡಲು ಏನು ಕೆಲಸವಿಲ್ಲದಿದ್ದಾಗ ಏಹುದಾದರು ವ್ಯಕ್ತಿಯ ಅಥವಾ ದೇಶದ ಇತಿಹಾಸ ಕೆದಕುತ್ತಲೆ ಇರುತ್ತೆನೆ, ಹೀಗೆಯೆ ಅದೂಂದು ದಿನ ಸುಮ್ಮನೆ ಕುಳಿತು ಯಾವುದಾದರು ಇತಿಹಾಸ ಕೇದಕೊಣ ಎಂದು ಯೋಚಿಸುತ್ತಾ ಕುಳಿತಾಗ ಕಣ್ಣಿಗೆ ಬಿದಿದ್ದು ನನ್ನ ಹೆಸರಿನ ಮುಂದೆ ಇದ್ದ "ನಂದಿಗಾವಿ" ಎಂಬ ಶಬ್ದ, ಸರಿ ಇಂದು ನಮ್ಮ ಮನೆತನದ ಇತಿಹಾಸ ತಿಳಿಯೊಣ, ನಮ್ಮ ಮನೆತನಕ್ಕೆ ನಂದಿಗಾವಿ ಎಂಬ ಹೆಸರು ಹೇಗೆ ಬಂತು, ನಮ್ಮ ಪೂವ೯ಜರ ಇತಿಹಾಸವೇನು ಎಂಬ ಪ್ರಶ್ನೆಗಳು ನನ್ನ ತಲೆ ಹೂಕ್ಕವು. ನೋಡೊಣ ಎಂದು ಅಪ್ಪ, ಅಮ್ಮನನ್ನು ಕೇಳಿದರೆ ಅವರಿಗೆ ನಮ್ಮ ಮುತ್ತಾತನ ಹೆಸರೆ ಸರಿಯಾಗಿ ಗೋತ್ತಿಲ.
              ನಮ್ಮ ಮನೆತನದ ಇತಿಹಾಸವನ್ನು ಯಾರಲ್ಲಿ ಕೇಳುವದು? ಹೇಗೆ ತಿಳಿಯುವದು? ಎಂಬ ಪ್ರಶ್ನೆಗಳು ನನ್ನನ್ನು ಕಾಡುತ್ತಿದವು, ಅದಕ್ಕೆ ಉತ್ತರವಾಗಿ ಅಂದೂಂದು ದಿನ ನಮ್ಮ ಮನೆಗೆ ಹೆಳವರು (ಹೇಳುವವರು) ಬಂದರು, ತಕ್ಷಣವೆ ಅವರ ಬಳಿ ಹೋಗಿ ದಯವಿಟ್ಟು ನಮ್ಮ ಮನೆತನದ ಇತಿಹಾಸದ ಬಗ್ಗೆ ಹೇಳಿ ಎಂದಾಗ ತಮ್ಮ ಬಟ್ಟೆ ಗಂಟಿನಲ್ಲಿ ಇಟ್ಟಿದ್ದ ಹಳೆಕಾಲದ ಎರಡು ಪುಸ್ತಕ ತೆರೆದು ಅದರಲ್ಲಿ ಏನೂ ಹುಡಕಿ ಸ್ವಲ್ಪ ಸಮಯದ ಬಳಿಕ ನನ್ನ ಮನೆತನದ ಇತಿಹಾಸ ಹೇಳಲು ಆರಂಬಿಸಿದರು ( "ಹೆಳವರು" ಇವರು ಅಲೆಮಾರಿ ಜನಾಂಗದವರು, ಕೆಲವು ಕುಂಟುಂಬಗಳ ಮಾಹಿತಿಗಳನ್ನು ತಲ-ತಲಾಂತರಗಳಿಂದ ಸಂಗ್ರಹಿಸಿ ಇಟ್ಟುಕೂಳ್ಳುವುದೆ ಅವರ ಕೆಲಸ, ವಷ೯ಕ್ಕೆ ಒಂದುಸಾರಿ ತಮಗೆ ಸಂಬಂದಿಸಿದ ಮನೆತನದವರಿಂದ ಏನಾದರು ದಾನ ಪಡೆದು ಮತ್ತೆ ತಮ್ಮ ಅಲೆಮಾರಿ ಪ್ರಯಾಣ ಮುಂದುವರೆಸುವರು).
             ಸುಮಾರು 300 ವಷ೯ಗಳಿಗು ಹಿಂದೆ ಗುಲ್ಬಗ೯ ಬಳಿ ಒಂದು ಚಿಕ್ಕ ಹಳ್ಳಿಯಲ್ಲಿ (ನನಗೆ ಆ ಹಳ್ಳಿಯ ಹೆಸರು ಮರೆತು ಹೊಗಿದೆ) ಒಂದು ಚಿಕ್ಕ ಕುಂಟುಂಬವಿತ್ತು, ಮೂದಲೆ ಬಿಸಿಲಿನ ನಾಡಾದ ಗುಲ್ಬಗ೯ ಜಿಲ್ಲಿಯಲ್ಲಿ 3-4 ವಷ೯ಗಳಿಂದ ಸತತವಾಗಿ ಬರಗಾಲ ಬಂದ ಕಾರಣ ಆ ಚಿಕ್ಕ ಕುಂಟುಂಬ ತನ್ನ ಸಮಸ್ತ ಆಸ್ತಿಯನ್ನಲ್ಲೆ ಮಾರಿ ಹೋಸ ಜೀವನದ ಅನ್ವೇಷಣೆಯಲ್ಲಿ ಮಧ್ಯ ಕನಾ೯ಟಕದತ್ತ ಪ್ರಯಾಣ ಬೆಳಸಿತು ಹೀಗೆ ವಲಸೆ ಬಂದ ಅ ಕುಂಟುಂಬ ನೆಲಸಿದ್ದು ಇಗಿನ ದಾವಣಗೇರೆ ಜಿಲ್ಲೆಯ ಹರಿಹರ ತಾಲ್ಲೂಕಿನ ತುಂಗಭದ್ರಾ ನದಿ ದಂಡೆಯಲ್ಲಿ ಇರುವ "ನಂದಿಗಾವಿ" ಎಂಬ ಗ್ರಾಮದಲ್ಲಿ, ನದಿಯ ಪಕ್ಕದಲ್ಲೆ ಜಮೀನು ಮತ್ತು ಮನೆ ಮಾಡಿಕೊಂಡಿದ್ದರು ಆದರೆ ಕೇಲವೆ ವಷ೯ಗಳಲ್ಲಿ ಆ ಕುಂಟುಂಬಕ್ಕೆ ಮತ್ತೆ ಆಘಾತ ಕಾದಿತ್ತು, ಈ ಬಾರಿ ಸುರಿದ ಬಾರಿ ಮಳೆಯಿಂದ ತುಂಗಭದ್ರಾ ನದಿಯಲ್ಲಿ ಪ್ರವಾಹ ಬಂದು ಜಮೀನು ಮನೆಯಲ್ಲಾ ನೀರುಪಾಲಾಯಿತು ಮತ್ತೆ ಆ ಕುಂಟುಂಬ ಬಿದಿಪಾಲಯಿತು, ಕೊನೆಗೆ ನಂದಿಗಾವಿ ಗ್ರಾಮವನ್ನು ತೋರೆದು ನೆಡೆದವರಿಗೆ ಕರೆದು ಆಶ್ರಮ ಕೋಟ್ಟ ಊರು ಇಂದಿನ ಹಾವೇರಿ ಜೀಲ್ಲೆಯ ರಾಣೆಬೆನ್ನುರು ತಾಲ್ಲೂಕಿನ ಗುಡ್ಡದಬೇವಿನಹಳ್ಳಿ ಗ್ರಾಮ, ನಂದಿಗಾವಿ ಎಂಬ ಗ್ರಾಮದಿಂದ ಬಂದಿದ್ದರಿಂದ ಗುಡ್ಡದಬೇವಿನಹಳ್ಳಿಯ ಜನ ಪ್ರೀತಿಯಿಂದ "ನಂದಿಗಾವಿಯವರು" ಎಂಬ ಅಡ್ಡ ಹೆಸರಿನಿಂದ ಕರೆಯಲಾರಂಬಿಸಿದರು ಮುಂದೆ ಅದೆ ನಮ್ಮ ಮನೆತನದ ಹೆಸರಾಯಿತು.
           ಅಂದು ಕೇವಲ ಒಂದು ಚಿಕ್ಕ ಕುಂಟುಂಬವಾಗಿದ್ದ ಆ ಮನೆತನ ಇಂದು ಹಲವು ಕುಂಟುಂಬಗಳಾಗಿ ಮಾಪ೯ಟ್ಟಿದೆ, ಗುಡ್ದದಬೇವಿನಹಳ್ಳಿಯಲ್ಲಿಯೆ ನಂದಿಗಾವಿ ಮನೆತನಕ್ಕೆ ಸೇರಿದ ಸುಮಾರು 25 ಮನೆಗಳಿದ್ದು ಅಷ್ಟೆ ಅಲ್ಲದೆ ಕೆಲಸದ ಮೇಲೆ ಹೋಗಿ ಅನೇಕ ಕುಂಟುಂಬಗಳು ರಾಣೇಬೆನ್ನುರು,ಹಾವೇರಿ, ಹರಪನಹಳ್ಳಿ, ಹುಬಳ್ಳಿ, ಬೆಂಗಳೂರು, ಪುಣೆ ಮತ್ತು ವಿದೇಶಗಳಲ್ಲೂ ನೆಲೆಸಿದ್ದಾರೆ.
          ಇದು ಹೇಳವರು ಹೇಳಿದ ನನ್ನ ಮನೆತನದ ಇತಿಹಾಸ ಇದು ಎಷ್ಟೂ ನಿಜವೂ ದೇವರೆ ಬಲ್ಲ, ಆದರೆ ಹರಿಹರದ ಬಳಿ ತುಂಗಭದ್ರಾ ನದಿದಂಡೆಯಲ್ಲಿ ನಂದಿಗಾವಿ ಎಂಬ ಗ್ರಾಮ ಇರುವದು ನಿಜ, ಕಳೆದ ತಿಂಗಳು ಕೂತುಹಲದಿಂದ ಅಲ್ಲಿಗೆ ಹೋಗಿ ಬಂದಿದ್ದೆ, ಅದಕ್ಕೆ ನನಗೆ ಹೇಳವರ ಮಾತಿನ ಮೇಲೆ ನಂಬಿಕೆ ಬಂದಿದ್ದು, ಆದರು ನಿಜವಾದ ಇತಿಹಾಸ ಆ ದೇವರೆ ಬಲ್ಲ.

Wednesday, May 4, 2011

ಒಂದು ಮುಂಜಾವಿನಲಿ.....


                                                     ಬೆಳಗಿನ 5 ಗಂಟೆ.... ಇನ್ನು ಸೂಯ೯ ಉದಯಿಸಿಲ್ಲ ಆಗಲೆ ನಮ್ಮ ಓಣಿಯ ಕೋನೆಯಲ್ಲಿ ಇರುವ ಮುಸ್ಲಿಂರ ಮನೆಯ ಕೋಳಿಗಳು ಕೂಗಲು ಪ್ರಾರಂಬಿಸುತ್ತವೆ, ಅವುಗಳ ಕೂಗನ್ನು ಕೇಳಿ ನಮ್ಮ ಮನೆಯ ಎರಡು ನಾಯಿಗಳು ಬೋಗಳಲು ಆರಂಬಿಸುತ್ತವೆ ಅದರಲ್ಲೂ ನಮ್ಮ ಸಣ್ಣ ನಾಯಿಗಂತು ಅವರ ಮನೆಯ ಕೋಳಿಗಳು ಅಂದರೆ ಪಂಚಪ್ರಾಣ ಎಷ್ಟೊ ಸಾರಿ ಅವುಗಳನ್ನು  ಬೀಟೆಯಾಡಿ ಭಜ೯ರಿ ಬೋಜನ ಮಾಡಿದೆ, ನಾಯಿಗಳ ಬೋಗಳುವಿಕೆ ಕೇಳಿ ಅಮ್ಮ ಏದ್ದು ಅವುಗಳನ್ನು ಆಚೆಗೆ ಓಡಿಸುತ್ತಳೆ, ಆಗಲೆ  ಸಮಯ 5.40 ಪೂವ೯ದಲ್ಲಿ ಸೂಯ೯ನ ಆಗಮನದ ಸೂಚನೆಯಲ್ಲಿ ಅಲ್ಪ ಬೇಳಕು ಮೂಡಲು ಆರಂಬಿಸುತ್ತದೆ, ಹೋಲದಲ್ಲಿ ಕೆಲಸ ಮಾಡಲು ಹೋಗುವ ರೈತವಗ೯ದ ಜನರು ತಮ್ಮ ದೈನಂದಿನ ಬೆಳಗಿನ ಕಾಯ೯ಗಳನ್ನು ಆರಂಬಿಸುತ್ತಾರೆ.
                        
               ಸಮಯ 6..... ಭಾನಂಗಳದಲ್ಲಿ ಕೆಂಬಣ್ಣದ ಓಕಳಿ ಆಡುತ್ತಾ ಬಾಸ್ಕರನ ಆಗಮನವಾಗುತ್ತೆ, ಊರ ಸೇವಕ ಈರಪ್ಪ ನಳಗಳಲ್ಲಿ ನೀರು ಬಿಡಲು ಮೋಟಾರ್ ಆನ್ ಮಾಡಲು ಬೇಟ್ಟದೆಡೆಗೆ ಹೊಗುತ್ತಾನೆ, ಊರಿನ ಬಹುತೇಕ ಜನರು ಎದ್ದು ದೈನಂದಿನ ಕಾಯ೯ಯದಲ್ಲಿ ಮುಗ್ನರಾಗುತ್ತಾರೆ, 6.30ಕ್ಕೆ ನಳದಲ್ಲಿ ನೀರು ಬರಲು ಆರಂಭ, ಸ್ವಂತ ನಳ ಇಲ್ಲದ ಜನರು ನೀರಿಗಾಗಿ ಸಾವ೯ಜನಿಕ ನಳಗಳ ಬಳಿ ಜಮಾಯಿಸುತ್ತಾರೆ, ಆರಂಭದಲ್ಲಿ ನಗುಮುಖದೊಂದಿಗೆ ನಳದ ಬಳಿ ಆಗಮಿಸುವ ಮಹಿಳೆಯರು ಮಾತಿಗೆ ಮಾತು ಬೆಳಸಿ ಕೋನೆಗೆ ಮೆಲ್ಲಗೆ ಜಗಳ ಆರಂಬಿಸುತ್ತಾರೆ, ಅದರಲ್ಲು ಬಾಯಿ ಬಡುಕಿಯರಾದ ಮೂಲೆ ಮನೆಯ ಪಾರವ್ವ, ಪಕ್ಕದ ಮನೆಯ ಕಮಲವ್ವ ಮತ್ತು ಗಿರಿಜವ್ವ ಇದ್ದರಂತು ಮುಗಿದೆ ಹೊಯಿತು ಅವರ ಬಾಯಿಯಲ್ಲಿ ಬರುವ ಆ ಅಪ್ಪಟ್ಟ ಗ್ರಾಮ್ಯ ಬಾಷೆಯ ಸಂಸ್ಕ್ರುತ ಮಾತುಗಳನ್ನು ಕೇಳಿ ನಮ್ಮ ಕಿವಿಗಳು ಪಾವನವಾಗುತ್ತವೆ, ನೀರು ನಿಲ್ಲುವ ಸಮಯಕ್ಕೆ ಅಧ೯ ಸ್ನಾನವನ್ನು ಮುಗಿಸಿರುತ್ತಾರೆ, ಕೋನೆಗೆ ಏನು ಆಗಿಲ್ಲ ಅನ್ನುವಂತೆ ನಗು-ನಗುತ್ತಾ ಮನೆಗೆ ಹೋಗುತ್ತಾರೆ, ಅಷ್ಟರಲ್ಲೆ ಊರ ಪುಜಾರಪ್ಪ ಊರ ದೇವರಾದ ಬಸವಣ್ಣನಿಗೆ ತನ್ನ ಪೂಜೆಯನ್ನು ಅಪಿ೯ಸಿರುತ್ತಾನೆ.
                    ಸಮಯ 7.... ಇದು ನಾನು ನೀದ್ರೆಯಿಂದ ಎಳುವ ಸಮಯ, ಎದ್ದವನೆ ಬಚ್ಚಲು ಮನೆಗೆ ಹಲ್ಲುಜಲ್ಲು ಹೋಗುತ್ತೆನೆ ಅಲ್ಲಿ ನಲ್ಲಿಯಲ್ಲಿ ನೀರು ಬರುತ್ತಿರುತ್ತದೆ, ಆ ನೀರಿನಲ್ಲಿ ಆಟ ಆಡುತ್ತಾ ಮುಖ ತೋಳೆಯುವದೆ ಒಂದು ಮಜಾ, ನಂತರ ಟೀ ಕುಡಿಯುತ್ತಾ ಪೇಪರನವನಿಗಾಗಿ ಕಾಯುವದೆ ನನ್ನ ಕೆಲಸ, ಎಂದು ಸಮಯಕ್ಕೆ ಸರಿಯಾಗಿ ಬಾರದ ಆತ ವಿಷೇಶ ದಿನಗಳಂದು ಇನ್ನು ಲೇಟ್, 8.30ಕ್ಕೆ ಕೂಲಿಗೆ ಹೊಗುವ ಮತ್ತು ರೈತಾಪಿ ಜನ ತಮ್ಮ ಭುತ್ತಿಯ ಗಂಟುಗಳೊಂದಿಗೆ ಎತ್ತಿನ ಬಂಡಿಯಲ್ಲಿ ಹೋಲಗಳತ್ತ ತಮ್ಮ ಪ್ರಯಾಣಾ ಬೆಳಸುತ್ತಾರೆ, ಆ ಎತ್ತಿನ ಗಂಟೆಗಳ ಸದ್ದು, ಬಂಡೆಯ ಸದ್ದು ಕೆಳುವುದೆ ಚನ್ನ.
                    ಸಮಯ 9.... ಇಗ ನಮ್ಮ ಊರಿಗೆ ಸಕಾ೯ರಿ ಬಸ್ ಬರುವ ಸಮಯ, ಬಣ್ಣ-ಬಣ್ಣದ ಸಮವಸ್ತ್ರ ಧರಿಸಿದ ಚಿಕ್ಕ ಮಕ್ಕಳು, ಗರಿ-ಗರಿ ವಸ್ತದರಿಸಿದ ಹುಡುಗರು ಮತ್ತು ಅಂದ-ಚಂದದ ಚೂಡಿದಾರ ದರಿಸಿದ ಹುಡಗಿಯರು ಹೀಗೆ ಎಲ್ಲರು ಪಕ್ಕದ ಊರಿನ ಕಾನ್ವೆಂಟ್, ಶಾಲೆ ಮತ್ತು ಕಾಲೇಜ್ ಗೆ ಹೂಗಲು ತಯಾರಾಗಿ ಬಸ್ ಗಾಗಿ ಕಾಯುತ್ತಿರುತ್ತಾರೆ, ಎಂದಿಗು ಸರಿಯದ ಸಮಯಕ್ಕೆ ಬಾರದ ಬಸ್ ಅಧ೯ಗಂಟೆ ತಡವಾಗಿ ಬಂದು ಎಲ್ಲ ಮಕ್ಕಳನ್ನು ತನ್ನ ಒಡಲಿನಲ್ಲಿ ತುಂಬಿಕೊಂಡು ಭರ್ರೆಂದು ಧುಳು ಎಬ್ಬಿಸುತ್ತಾ ಮರೆಯಾಗುತ್ತದೆ.
          
                 ಸಮಯ 10.... ಇಗ ನಮ್ಮುರಿನ ಪರಮ ಸೋಮಾರಿ "ಮಲ್ಲಪ್ಪ" ನಿದ್ರೆಯಿಂದ ಏಳುವ ಸಮಯ ಮಹಾನ್ ಸೋಮಾರಿ ತನ್ನ ಹೆಂಡತಿ ಮಕ್ಕಳನ್ನು ಗೋಳು ಹೋಯಿಕೋಳ್ಳುವದೆ ಅವನ ಕಾಯಕ, ನಂತರ 10.30ಕ್ಕೆ ಬಣಕಾರ ಅಜ್ಜ ತಮ್ಮ ಮನೆಯ ಎಮ್ಮೆಗಳನ್ನು ಮೇಯಿಸಲು ಗುಡ್ಡಕ್ಕೆ ಹೋಡೆದುಕೋಂಡು ಹೋಗುವೂದರೊಂದಿಗೆ ನಮ್ಮುರಿನ ಮುಂಜಾವಿನ ಸಂಬ್ರಮಕ್ಕೆ ತೆರೆ ಬಿಳುತ್ತದೆ.

Tuesday, May 3, 2011

ಎಲ್ಲಿಗೆ ಈ ಪಯಣ...? ಯಾವುದು ದಾರಿ...?               ಜೀವನ ಯಾವಗಲು ಹರಿಯುವ ನೀರಿನಂತೆ ಪ್ರತಿದಿನವು ಬದಲಾವಣೆಗಳು ನಡೆಯುತ್ತಲೆ ಇರುತ್ತವೆ ಬಾಲ್ಯ, ಯವ್ವನ, ಮುಪ್ಪು ಹೀಗೆ ಕಾಲ ಬದಲಾಗುತ್ತಲೆ ಇರುತ್ತದೆ, ನನ್ನ ಜೀವನದಲ್ಲು ಈಗ ಬದಲಾವಣೆಯ ಕಾಲ ಇದುವರೆಗು ವಿಧ್ಯಾಥಿ೯ಯಾಗಿದ್ದ ನಾನು ಕೇಲವೆ ದಿನಗಳಲ್ಲಿ ಪ್ರೊಪೆಷನಲ್ ಲೈಪ್ ಗೆ  ಕಾಲಿರುಸುತ್ತಿದ್ದೆನೆ.
              ಹುಟ್ಟಿದು ಒಂದು ಊರು, ಬೆಳದಿದ್ದು ಒಂದು ಊರು, ಓದಿದ್ದು ಹಲವು ಊರುಗಳು, ಮುಂದೆ ಕೆಲಸ......? ಯಾವ ಊರೂ ತಿಳಿಯದು.... ಜೀವನವೆ ಒಂದುತರ ಪಯಣದ ಹಾಗೆ ಇದುವರೆಗು ನನಗೆ ಸೂಕ್ತವೆನಿಸದ ಹಾಗು ಹಿರಿಯರು ತೋರಿಸಿದ ದಾರಿಗಳಲ್ಲಿ ನನ್ನ ಪ್ರಯಾಣ ನೆಡಸಿದ್ದೆ ಆದರೆ ಇಗ ಒಂದು ರಿತಿ ಕವಲು ದಾರಿಗಳ ಮಧ್ಯ ನಿಂತಿದ್ದೆನೆ ಯಾವ ಮಾಗ೯ ಆಯ್ಕೆ ಮಾಡಿಕೊಳ್ಳ ಬೇಕೂ ತಿಳಿಯುತ್ತಿಲ್ಲ, ಹಿರಿಯರು ಕೊಡ ಆಯ್ಕೆಯನ್ನು ನನಗೆ ಬಿಟ್ಟಿದ್ದಾರೆ ಹಲವು ದಾರಿಗಳು, ಎಲ್ಲವು ನೋಡಲು ಚನ್ನ ಆದರೆ ಯಾವುದು ಸೂಕ್ಕ ತಿಳಿಯುತ್ತಿಲ್ಲ, ಮನದಲ್ಲಿ ಒಂದೇ ಪ್ರಶ್ನೆ "ದಾರಿಯಾವುದಯ್ಯ ಮುಂದಿನ ಪಯಣಕ್ಕೆ? ಯಾವ ದಾರಿ ಎಲ್ಲಿಗೆ ಹೋಗುತ್ತದೂ ತಿಳಿಯದಾಗಿದೆ. ಈ ಜೀವನವೆಂಬ ದಾರಿಯಲ್ಲಿ ಮುಂದಿನ ಪಯಣ ಎಲ್ಲಿಗೂ?... ಇದುವರೆಗು ನನಗೆ ಬಾಸ್  ಆಗಿದ್ದವರು ನಮ್ಮ ಸರ್/ಮ್ಯಾಡಮ್ ಗಳು, ಆದರೆ ಅವರು ಹೇಳಿದ ಯಾವುದೆ ಮಾತುಗಳನ್ನು ಸರಿಯಾಗಿ ಪಾಲಿಸಲೆ ಇಲ್ಲ ಆದರೆ ವ್ರುತ್ತಿ ಜೀವನದಲ್ಲಿ ಬಾಸ್ ಮಾತುಗಳನ್ನು ಸರಿಯಾಗಿ ಪಾಲಿಸದೆ ಇದ್ದರೆ ಕೆಲಸಕ್ಕೆ ಆಪತ್ತು, ಅಪ್ಪಟ ಸೋಮಾರಿಗಳಾದ ಮತ್ತು ಭೇಜವ್ದಾಬಾರಿಗಳಾದ ನನ್ನಂತವರಿಗೆ ಅದ್ಯಾವ ಕಂಪನಿಯಲ್ಲಿ ಅದ್ಯಾವ ಬಾಸ್ ಕೆಲಸ ಕೋಡುತ್ತಾನೊ ಕಾದು ನೋಡ ಬೇಕು, ನಾನು ತೆಗೆದಿರುವ ಅಂಕಗಳಿಗೆ ಕ್ಯಾಂಪಸ್ ಆಯ್ಕೆಯಾಗಲಿ ಅಥವಾ ಸರಕಾರಿ ಕೆಲಸವಾಗಲಿ ಕೇವಲ ಕನಸು, ಅದಕ್ಕೆ ನನ್ನ ಮುಂದಿನ ಜೀವನದ ಬಗ್ಗೆ ನನಗೆ ತುಂಬಾ ಕುತುಹಲವಿದೆ ನೋಡೂಣಾ ಏನಾಗೂತ್ತೊ.....
          ದೇವರೇ ಇದುವರೆಗು ನಾನು ನಿನ್ನಲ್ಲಿ ಕೇಳಿದಕ್ಕಿಂತ ಹೆಚ್ಚಿನದನ್ನೆ ನನಗೆ ನೀಡಿರುವೆ, ಈ ಸಾರಿ ಕೂಡ ನೀನು ನನ್ನ ಜೋತೆ ಇರುತ್ತಿ ಅಲ್ವಾ? ನಾನೇನು ಕೈ ತುಂಬಾ ಸಂಬಳ, ಎಮ್ ಎನ್ ಸಿ ಕಂಪನಿಯಲ್ಲಿ ಕೆಲಸ ಕೇಳಲ್ಲ, ಒಂದು ಚಿಕ್ಕ ಕಂಪನಿಯಲ್ಲಿ ಕೆಲಸ, ಒಳ್ಳೆ ಬಾಸ್ ಮತ್ತು ಅಪ್ಪ ಕೊಡುವ ಪಾಕೇಟ ಮನಿಗಿಂತ ಸ್ವಲ್ಪ ಜಾಸ್ತಿ ಸಂಬಳ ಅಷ್ಟೆ ಸಾಕು.... ದೇವರೆ ನನ್ನ ಆಸೆ ಇಡೇರುಸುತ್ತಿ ಅಲ್ವಾ?


ಬೆಂಗಳೂರು ಡೈರಿ

    ರಾಜಭವನ Road ಮೂಲಕ ನಾವು ಮೆಜೆಸ್ಟಿಕ್ ಕಡೆ ಹೋಗುವಾಗ ಬಸವೇಶ್ವರ ಸರ್ಕಲ್ ಬರುತ್ತೆ ಅಲ್ಲಿ ಸುಮಾರು 150 ಸೆಕೆಂಡ್ ಗಳ ಸಿಗ್ನಲ್ ಇದೆ, ನಾವು ಪ್ರತಿ ಸಂಜೆ ಅದೇ ರಸ್ತ...