Monday, December 3, 2012

2012ರ ನೆನಪುಗಳು ಮತ್ತು 2013ರ ಬಯಕೆಗಳು

          2012 ಜನವೇರಿ ತಿಂಗಳ ಒಂದ್ ದಿನಾ ಕನ್ನಡಿ ಮುಂದೆ ನಿಂತು ನನ್ನ ಮುಖ ನಾನೆ ನೋಡಿಕೊಂಡಾಗ ಶಾಕ್....!!! ಯಾಕಂದ್ರೆ ನನ್ನ ಗಡ್ಡದಲ್ಲಿ ಒಂದು ಬಿಳಿ ಕುದಲು ಕಣಿಸಿಕೋಡಿತ್ತು, ಅಲ್ಲಾ ತಲೆಯಲ್ಲಿ ಬಿಳಿ ಕುದಲು ಆದರೆ ಯಾನಾದ್ರು ಹಚ್ಚಕೊಬಹುದು ಆದರೆ ಗಡ್ಡಕ್ಕೆ ಏನಾದ್ರು ಹಚ್ಚೊಕೆ ಆಗುತ್ತಾ..? ಒಟ್ಟಿನಲ್ಲಿ 2012ರ ಆರಂಭಾನೆ ಚನ್ನಾಗಿ ಇರಲಿಲ್ಲ, ವಷ೯ದ ಆರಂಭದಲ್ಲಿ ಒಂದೇ ಇದ್ದ ಕುದುಲು ವಷ೯ದ ಕೊನೆಗೆ ನಾಲ್ಕ ಆಗಿದೆ, ಏನ್ನ ಮಾಡ್ಲಿ...? ಯಾರಿಗೆ ಹೇಳಲಿ ನನ್ನ ಕಷ್ಟ...???
                                                          ***
          ನಿಮಗೆ ನೆನಪಿದಿಯಾ ಹೈಸ್ಕೂಲಿನಲ್ಲಿ ಕುವೆಂಪು ಅವರ ಒಂದು ಕವಿತೆ ಇತ್ತು  "ಓ ನನ್ನ ಚೇತನ ಆಗು ನಿ ಅನಿಕೆತನ... ಏಲ್ಲಿಯು ನಿಲ್ಲದಿರು ಮನೆಯನ್ನು ಕಟ್ಟದಿರು.." ಬರಿ ಇವೆರೆಡು ಲೈನು ನೆನಪದೆ.... ಆಗ ಯಾಕೊ ಗೊತ್ತಿಲ್ಲ ಈ ಕವಿತೆ ತುಂಭಾ ಇಷ್ಠಾ ಆಗಿತ್ತು, ಕುವೆಂಪು ರವರು ಹೇಳಿದಂತೆ "ವಿಶ್ವ ಮಾನವ"ನ ತರ ಇರೋಣಾ ಅಂದುಕೊಡಿದ್ದೆ ಆದರೆ ಆದು ತುಂಭಾ ಕಷ್ಠ 2012ರಲ್ಲಿ ಇದರ ಅನುಭವ ನನಗೆ ತುಂಭಾ ಚನ್ನಾಗಿ ಆಗಿದೆ, ಅದಕೆ 2013ರಲ್ಲಿ ಒಂದೇ ಕಡೆ ನೆಲೆ ನಿಲ್ಲಲ್ಲು ಪ್ರಯತ್ನಿಸುವೆ
                                                          ***
               ಮುಂದಿನವಾರ ಪ್ರಳಯ ಆಗುತ್ತೆ ಅಂತಾ ಕೆಲವರು ಆಗಲ್ಲ ಅಂತಾ ಕೆಲವರು ವಾದಿಸ್ತಾ ಇದ್ದರೆ, ನನಗೆ ಪ್ರಳಯ ಆದ್ರೆ ತುಂಭಾ ಸಂತೋಷ, ಆಗದೆ ಇದ್ರುನು ಸಂತೋಷ, ಆದ್ರೆ ಎಲ್ಲರು ಒಟ್ಟಿಗೆ ಸಾಯಿ ಬಹುದು ಎಂತಾ ಅದ್ರಷ್ಟು ಅಲ್ವಾ... ಆಗದೆ ಇದ್ರೆ ಜೀವನದಲಿ ನಾನು ಅನುಭವಿಸ ಬೇಕಾಗುರುವದು ತುಂಭಾ ಇದೆ ಅದನ್ನೆಲ್ಲಾ ಅನುಭವಿಸಬವುದು, ನೋಡೊಣಾ...
                                                         ***
                  2012 ರಲ್ಲಿ ನನ್ನ 5 ಜನ ಆತ್ಮಿಯ ಸ್ನೇಹಿತರು ವಿವಾಹ ಬಂಧನಕ್ಕೆ ಒಳಗಾದರು ಅವರಿಗೆಲ್ಲಾ ದೇವರು ಒಳ್ಳೆದು ಮಾಡಲಿ, ಅನಿವಾರ್ಯ ಕಾರಣಗಳಿಂದ 5 ಜನರ ಮದುವೆಗಳಿಗು ನಾನು ಹೊಗಲಿಲ್ಲ, ಅದಕ್ಕಾಗಿ ನಾನು ಕ್ಷಮೆ ಕೇಳಿದರು ನನ್ನ ಇಬ್ಬರು ಸ್ನೆಹಿತಿಯರು ನನ್ನ ಮೇಲಿನ ರಿವೇಂಜಿಗಾಗಿ ಯಾವುದೆ ಕಾರಣಕ್ಕು ಮುಂದೆ ನನ್ನ ಮದುವೆಗೆ ಬರಲ್ಲಾ ಅಂತಾ ಇವಾಗಲೆ ಬಾಂಡ್ ಪೇಪರ್ ಮೇಲೆ ಬರದು ರುಜು ಮಾಡಿರೊ ಹಾಗೆ ಹೇಳಿ ಬಿಟ್ಟಿದ್ದಾರೆ, ಅನ್ಯಾಯವಾಗಿ ನನಗೆ ಸಿಗಬಹುದಾಗಿದ್ದ ಎರಡು ಉಡುಗರೆ ಮಿಸ್ ಆದವು ಅಂತಾ ಬೇಸರ ಆಗ್ತಾ ಇದೆ, ಪರವಾಗಿಲ್ಲ ಆದಷ್ಟು ಬೇಗ 2013 ರಲ್ಲಿ ನಮಗೆ ಸಿಹಿ ಸುದ್ದಿ ಕಟ್ರೆ ಅಷ್ಟೆ ಸಾಕು, ಉಳಿದಂತೆ ಇಬ್ಬರು ಸ್ನೆಹಿತರು 2012ರಲ್ಲಿ ಮತ್ತೆ ಲವ್ ನಲ್ಲಿ ಬಿದಿದ್ದಾರೆ ದೇವರು ಅವರನ್ನು ಕಾಪಾಡಲಿ, ಇನ್ನೊಬ್ಬ ಹೋಸ ಗೆಳತಿಗಾಗಿ ಕಾಯ್ತಾ ಇದ್ದಾನೆ ಅವನಿಗೆ ಹೋಸ ವಷ೯ದಲ್ಲಿ ಹೋಸ ಹುಡಗಿ ಸಿಗಲಿ
                                                      ***
                ವಷ೯ದ ಕೊನೆಗೆ ಭಟ್ರ "ಡ್ರಾಮಾ" ನೋಡಿ ನಾನಂತು ಮನಸಾರೆ ನಕ್ಕೆ, ಸಾದ್ಯವಾದರೆ ನೀವು ನೋಡಿ ಹೊಟ್ಟೆ ತುಂಭಾ ನಕ್ಕು ಬಿಡಿ, "ಒಂದು ಜೀವನ ಸಾಲದು" ನಾನು 2012 ರಲ್ಲಿ ಓದಿದ ಅದ್ಬುತ ಪುಸ್ತಕ, ಭಾರತದ ರಾಜಕೀಯ, ರಾಜಕಾರಣಿಗಳು ಮತ್ತು ಸ್ವತಂತ್ರ ಭಾರತದ ಇತಿಹಾಸದ ಬಗ್ಗೆ ತಿಳಿಯುವ ಆಸಕ್ತಿ ಇರುವವರಿಗೆ ಸಂಗ್ರಹ ಯೋಗ್ಯ ಪುಸ್ತಕ

Friday, November 2, 2012

ಚುಕ್ಕಿ

ಅಲ್ಲ ಇದು ಗಗನದಾ ಚುಕ್ಕಿ
ಇದು ನಲ್ಲೆಯ ಗಲ್ಲದ ಚುಕ್ಕೆ
ಕೆಂದುಟ್ಟಿಗಳ ಪಕ್ಕದ ಚುಕ್ಕೆ
ಅಲ್ಲ ಇದು ಬರಿ ಕಪ್ಪು ಚುಕ್ಕೆ
ನನ್ನ ಮನಸ್ಸು ಕದ್ದ ಕಳ್ಳ ಚುಕ್ಕೆ
ನಾ ಮನಸೋತ ಚುಕ್ಕೆ
ಅವಳ ಸೌಂದರ್ಯಕ್ಕೆ ಇಟ್ಟ ದ್ರುಷ್ಠಿ ಚುಕ್ಕೆ
ನಲ್ಲೆ ನಕ್ಕಾಗ ನಗುವ ಚುಕ್ಕೆ
ನಲ್ಲೆಯ ನೋವಲಿ ಮಿಯುವ ಚುಕ್ಕೆ
ನಲ್ಲೆಯ ಕೋಪಕೆ ಬೆದರದ ಚುಕ್ಕೆ
ನಲ್ಲೆ ನಾಚುವಾಗ ಮಿಂಚುವ ಚುಕ್ಕೆ
ಮುಟ್ಟಲು ಹೋದರೆ ನಾಚಿ ಮರೆಯಾಗುವ ಚುಕ್ಕೆ
ಬೇರೆಯವರಿಗೆ ಕಾಣದ ಚುಕ್ಕೆ
ನನಗೆ ಮಾತ್ರ ಸದಾ ಕಾಡುವ ಚುಕ್ಕೆ
ಇದು ನನ್ನ ನಲ್ಲೆಯ ಗಲ್ಲದ ಚುಕ್ಕೆ

Sunday, October 21, 2012

ನಮ್ಮ ಏರಿಯಾ ಸ್ವಾಮಿನಾಥನ್ ಶೆಟ್ಟಿ

ನಮ್ಮ ಏರಿಯಾ ಸ್ವಾಮಿನಾಥನ್ ಶೆಟ್ಟಿ
ಬಲು ಗಟ್ಟಿ ಯಾಕಂದ್ರೆ ಅವರು ಜಟ್ಟಿ
ಅವರ ಮಗಳು ಬಲು ಬ್ಯೂಟಿ
ಎಷ್ಟೆ ಆದರು ಮಲಿಯಾಳಿ ಕುಟ್ಟಿ

Saturday, October 20, 2012

ನಿದ್ರೆ

ರಾತ್ರಿ ಹನ್ನೆರೆಡಾದರು ಬಾರದ ನಿದ್ರೆ
ನೂರರಿಂದ ಸೊನ್ನೆತನಕ ಎಣಿಸಿದರು ಸುಳಿಯದ ನಿದ್ರೆ
ಬೇಸರದಿ ಮನೆಯಿಂದ ಆಚೆ ನೆಡದರೆ
ದೂರದೆಲೆಲ್ಲೊ ನಾಯಿಯೊಂದರ ಓಳಿಡುವಿಕೆ
ಅಗೊಮ್ಮೆ ಇಗೊಮ್ಮೆ ಸಣ್ಣಗೆ ಸುರಿಯುವ ಮಳೆ
ಹುಡುಗನೊಬ್ಬ ಪ್ರಿಯಸಿಯೊಂದಿಗೆ ಪೋನಿನಲ್ಲಿ ಪಿಸುಗುಡುವಾ ದ್ರುಶ್ಯ
ನನ್ನಂತೆ ನಿದ್ರೆ ಬರದ ಹುಡುಗನೊಬ್ಬ
ಆಚೆ ಬದಿಯಲ್ಲಿ ನಿಂತು ಸಿಗರೇಟ ಹೊಗೆ ಹೊಮ್ಮಿಸುತ್ತಿರುವ ಬಗೆ
ಆಚೆ ಮನೆಯಲ್ಲಿ ಮೆಲ್ಲಗೆ ಕೇಳುವ ಟಿವಿ ಸದ್ದು
ಇಚೆ ಮನೆಯಲ್ಲಿ ಕಿಲಕಿಲ ನಗುವ ಸದ್ದು
ಇನ್ನೊಂದು ಮನೆಯ ಬಾಗಿಲ ಹಿಂದೆ  ಏನು ನೆಡೆಯುತಿಹುದೊ ನಾ ಅರಿಯೆ
ರಾತ್ರಿ ಪಾಳೆಯ ಕೆಲಸದಲ್ಲಿ ಮಗ್ನವಾಗಿರುವ ಜನ
ನೈಟು ಡ್ಯೊಟಿಯ ಪೋಲಿಸರ ಸಿಳ್ಳೆ
ನಿಜ೯ನ ರಸ್ತೆಯಲ್ಲಿ ಆಗೊಮ್ಮೆ-ಇಗೊಮ್ಮ ಇಣುಕುವ ವಾಹನಗಳು
ಕತ್ತಲಿನೊಡನೆ ಕುಸ್ತಿಯಲ್ಲಿ ನಿರತವಾದ ಬೀದಿ ದೀಪಗಳು
ಅರವತ್ತರ ಇಳಿವಯಸ್ಸಿನಲ್ಲು ಮಧ್ಯರಾತ್ರಿ ಚಹಾ-ಕಾಪಿ ಗಿರಾಕಿಗಳ
ಎದುರು ನೋಡುತ್ತಾ ಮುದುರಿ ಕುಳಿತ ತಾತ
ಅದೆಲ್ಲೊ ಇನ್ನಾವುದೊ ವ್ಯಾಪಾರದಲ್ಲಿ ಅದ್ಯಾರೊ ಮಗ್ನರು
ಬಹುಷ್ಯ ಇವರೆಲ್ಲೆರಿಗು ನನ್ನಂತೆಯೆ ನಿದ್ರೆ ಬಾರದ ರೋಗ
ಮನಗೆ ಮರಳಿ ಹಾಸಿಗೆಯಲ್ಲಿ ಊರಳಿದರು ಇನ್ನು ಸುಳಿಯದ ನಿದ್ರೆ
ಆದರೆ ಅದಾಗಲೆ ಕಿಟಕಿಯಾಚಿಯಲ್ಲಿ ಆರಂಭವಾಗಿತ್ತು ಪಕ್ಷಿಗಳ ಚಿಲಿಪಿಲಿ

Sunday, October 14, 2012

ಜೀವನವೆಂದರೆ....

                   ಅವನು ನಾನು ಓದಿದ ಕಲೇಜಿನಲ್ಲೆ ಓದಿದವನು ನನ್ನ ಸಿನಿಯರ್, ನನ್ನ ಪಕ್ಕದ ಊರಿನವನು, ತಂದೆ ತಾಯಿಗಳ ಒಬ್ಬನೆ ಮಗ, ದೂರದ ನಗರದಲ್ಲಿ ಒಳ್ಳೆಯ ಕೆಲಸದಲ್ಲಿ ಇದ್ದ,  ಕೆಲವು ವಷ೯ಗಳ ಹಿಂದೆ ಅವನ ತಂದೆ ತಾಯಿಗಳು ತಮ್ಮ ಸಂಬಧಿಕರಲ್ಲೆ ಒಂದು ಹುಡಗಿಯನ್ನು ತಮ್ಮ ಸೊಸೆಯಾಗಿ ಮನೆ ತುಂಬಿಸಿಕೊಂಡರು,  ಮಗನಿಗು ಅಪ್ಪ-ಅಮ್ಮ ಅಂದರೆ ತುಂಭಾ ಪ್ರೀತಿ ಹಿಗಾಗಿ ನಗರದಲ್ಲೆ ಒಂದು ಮನೆ ಮಾಡಿ ತಂದೆ ತಾಯಿಯನ್ನು ನಗರಕ್ಕೆ ಕರಸಿಕೊಂಡನು, ಗಂಡ-ಹೆಂಡತಿ, ಅಪ್ಪ-ಅಮ್ಮ ಸುಖಿ ಸಂಸಾರ, ಒಂದು ವಷ೯ದ ಬಳಿಕ ಒಂದು ಮುದ್ದಾದ ಗಂಡು ಮಗು ಕೂಡ ಆಯಿತು ಸ್ವಗ೯ಕ್ಕೆ ಮೂರೆ ಗೇಣು ಅನ್ನುವಷ್ಟು ಸಂತಸ ತುಂಬಿತ್ತು ಅವರ ಮನೆಯಲ್ಲಿ, ಆದರೆ ಅದ್ಯಾರ ವಕ್ರ ದ್ರುಷ್ಟಿ ಅವರ ಕುಟುಂದ ಮೇಲೆ ಬಿದ್ದಿತೊ ನಾ ಕಾಣೆ, ಅನಾರೋಗ್ಯವೆಂದು ಆಸ್ಪತ್ರೆ ಸೇರಿದ ಅವನ ತಂದೆ ಮನೆಗೆ ಮರಳಲೆ ಇಲ್ಲ, ಇನ್ನು ಆ ಚಿಕ್ಕ ಮಗುವಿನ ಆರೋಗ್ಯ ಕೂಡ ಪದೆ ಪದೆ ಹದಗೆಡುತಿತ್ತು, ಅದೂಂದು ದಿನ ತಿವ್ರ ತಪಾಸಣೆ ನೆಡಸಿದ ವೈದ್ಯರು ಮಗುವಿನ ಒಂದು ಕಿಡ್ನಿ  ವಿಪಲವಾಗಿರುವುದನ್ನು ಪತ್ತೆ ಮಾಡಿದರು, ಮೊದಲೆ ತಂದೆ ಕಳೆದುಕೊಂಡು ಆಘಾತ ಅನುಭವಿಸದ ಅವರಿಗೆ ದೇವರು ಮೊತ್ತೊಂದು ಆಘಾತ ನೀಡಿದ್ದ, ಈ ಮದ್ಯೆ ಅವನು ನಗರದಲ್ಲಿ ಇರುವ ತನ್ನ ಮನೆಗೆ ಮರಳಿದಾಗ ಅವನಿಗೆ ಇನ್ನೊಂದು ಆಘಾತ ಕಾದಿತ್ತು, ಅವನ ಮನೆಗೆ ಕಳ್ಳರು ಕನ್ನಹಾಕಿದ್ದರು, ಅಳೀದುಳಿದ ಸ್ವಲ್ಪ ಹಣ, ಬಂಗಾರ ಎಲ್ಲವನ್ನು ದೊಚ್ಚಿದ್ದರು, ಪಾಪ ಆಘಾತಗಳ ಮೇಲೆ ಆಘಾತ ಅನುಭವಿಸಿದ ಅವನ ಸ್ಥಿತಿ ಹೇಗಿರ ಬೇಡ, ದೇವರು ಕೊಟ್ಟರೆ ಬರಿ ಸಂತೋಷಗಳನ್ನೆ ಕೊಡುತ್ತಾನೆ, ಇಲ್ಲವಾದರೆ ಬರಿ ಕಷ್ಟಗಳ ಸರಮಾಲೆ, ಜೀವನವೆಂದರೆ ಇದೆನಾ? 

Saturday, October 13, 2012

ಅವಳು

           
            ಅವಳ ನಯನ
            ಕಾಮನಬಿಲ್ಲ ಹೊಂಗಿರಣ
            ಅವಳ ನಾಚಿಕೆ
            ಮುಟ್ಟಿದರೆ ಮುನಿಯಂತೆ
            ಅವಳ ನೆನಪು
           ಹೋಳಿಗೆಯಷ್ಟು ಸವಿ
           ಅವಳ ನೋಡಲು
           ನನ್ನ ಮನದಿ ತಲ್ಲಣ
            ಅವಳ ನೆಡತೆ
           ಜನಕರಾಜನ ಮಗಳಂತೆ
           ಅವಳ ನೃತ್ಯನ
            ನವಿಲು ನಾಚುವಂತೆ
           ಅವಳ ನಗುವು
           ಮುಂಗಾರಿಗೆ ಮುನ್ನಡಿಯಂತೆ
           ಅವಳ ನಾಸಿಕ
           ನೋಡಲು ಬಲು ಚಂದ
           ಅವಳೂರು ನಾಸಿಕ್
           ಇಲ್ಲಿಂದ ಬಲು ದೂರ
           ಅವಳು ನನಗೆ
           ಗಗನದಾ ಕುಸುಮ

Thursday, September 13, 2012

ನನ್ನ ದಿನಚರಿಯ ಪುಟದಿಂದ...

          ಮೂರು ವಷ೯ದಿಂದ ಒಮ್ಮೆಯು ಸ್ವಚಮಾಡದ ರೂಮ್ ನ್ನು ಗೆಳಯನ ಹುಟ್ಟುಹಬ್ಬಕ್ಕಾಗಿ ಸ್ವಚಮಾಡಿ, ಬಲುನುಗಳಿಂದ ಸಿಂಗರಿಸಿ, ಬಣ್ಣ-ಬಣ್ಣದ ಅಕ್ಷರಗಳಲ್ಲಿ ಹೆಸರು ಬರೆದು ಹಬ್ಬದಂತೆ ಆಚರಿಸಿದ ಆದಿನ.... ರಾತ್ರಿ ೧೧ರ ಸಮಯದಲ್ಲಿ ಸುರಿಯುವ ಮಳೆಯಲ್ಲಿ ನೆನೆಯುತ್ತಾ ಕೇಕ್ ತಂದ ಇನ್ನೊಂದು ದಿನ.... ದೂರದಲ್ಲೆಲ್ಲೂ ಇದ್ದ ಗೆಳಯನನ್ನು ಮದ್ಯರಾತ್ರಿ ಹೋಗಿ ಕರೆದು ಕೊಂಡು ಬಂದು ಹುಟ್ಟುಹಬ್ಬ ಆಚರಿಸಿದ ಮತ್ತೊಂದು ದಿನ... ರಾತ್ರಿ ೧೦ಕ್ಕೆ ಮಲಗುವ ಅಭ್ಯಾಸವಿದ್ದರು ರಾತ್ರಿ ೧೨ಕ್ಕೆ ವಿಶ್ ಮಾಡಬೇಕೆಂದು ಅಲಾರಾಂ ಇಟ್ಟುಕೊಂಡು ಮಲಗಿ ೧೨ಕ್ಕೆ ಎದ್ದು ಮೊದಲಿಗರಾಗಿ ವಿಶ್ ಮಾಡಿದ ಆ ಘಳಿಗೆ... ಹಿಗೆಯೆ ನನ್ನ ಆತ್ಮಿಯ ಗೆಳೆಯರ ಹುಟ್ಟುಹಬ್ಬಗಳ ಸಂಬ್ರಮದ ಆಚರಣೆಗಳನ್ನು ನೆನೆಯುತ್ತಾ ಹೊದರೆ ಎಷ್ಟೊಂದು ಸಂತಸವಲ್ಲವೆ..
           ಆದರೆ ಇದೆ ಆತ್ಮಿಯ ಗೆಳಯರು ನಮ್ಮ ಹುಟ್ಟು ಹಬ್ಬದ ದಿನ ಕನಿಷ್ಠಪಕ್ಷ ಒಂದು ವಿಶ್ ಮಾಡದಿದ್ದರೆ ಹೇಗಾಗಬೇಡ? ಖಂಡಿತಾ ಅದು ತುಂಭಾ ನೋವು ನಿಡುವ ಘಳಿಗೆ, ಅದರ ಅನುಭವ ಇತಿಚೆಗೆ ನನಗು ಮತ್ತು ನನ್ನ ಮಿತ್ರನಿಗು ಆದಗ ತುಂಭಾ ಬೇಸರವೆನಿಸಿತು. ಅಷ್ಟೊಂದು ಆತ್ಮಿಯರೆನಿಕೊಂಡವರಿಂದ ಒಂದು ಶುಭ ಸಂದೇಶ ನೀರಿಕ್ಷಿಸುವುದು ತಪ್ಪೆ?(ಕೊನೆಪಕ್ಷ ಒಂದು ಎಸ್.ಎಮ್.ಎಸ್). ಅದ್ಯಾರೂ ಗೊತ್ತಿಲ್ಲದ ಗೆಳಯನೊಬ್ಬ ಫ಼ೆಸ್ ಬುಕ್ ನಲ್ಲಿ ಮಾಡಿದ ವಿಶ್ ನೋಡಿ ನಿಮ್ಮ ಹಲವು ವಷ೯ಗಳ (ಆತ್ಮಿಯ)ಗೆಳಯ "ನಿನ್ನ ಬತ್೯ಡೆ ಮೂಗಿದು ಹೊಯಿತೆ ನನಗೆ ಹೆಳಲೆ ಇಲ್ಲವಲ್ಲಾ" ಎಂದಾಗ ನಿಮಗೆ ಏನು ಅನಿಸಬಹುದು? ನೀರಿಕ್ಷೆಗಳಿಂದ ನೋವು ಅನ್ನುತ್ತಾರೆ, ಆದರೆ ಸಾಮಾನ್ಯರಲ್ಲಿ ಸಾಮಾನ್ಯರಾದ ನಾವು ಆತ್ಮಿಯರಿಂದ ಮುಗುಳುನಗೆಯ ಒಂದು ಮಾತು ನೀರಿಕ್ಷಿಸುವುದು ತಪ್ಪೆ? ಬಹುಷ್ಯ ತಪ್ಪು ನಮ್ಮದೆ ಅನಿಸುತ್ತದೆ, ಏಕೆಂದರೆ ನಮಗೆ ಮಾತ್ರ ಅವರು ಆತ್ಮಿಯರು ಆದರೆ ಅವರಿಗೆ ನಾವು.....................  ಅನಿಸುತ್ತದೆ.
        ಅದೆಷ್ಟೂ ಅನಾಥ ಮಕ್ಕಳಿಗೆ ತಮ್ಮ ಜನ್ಮದಿನವೆಂದು ಏಂಬುದೆ ತಿಳಿದಿರುಹುದಿಲ್ಲ, ಇನ್ನು ಅವರಿಗೆ ಹುಟ್ಟುಹಬ್ಬದ ಸಂಭ್ರಮವೆಲ್ಲಿ?, ನಮ್ಮ ಜನ್ಮದಿನದಂದು ಅನಾಥ ಮಕ್ಕಳಿಗೆ ಸಿಹಿ ಹಂಚಿ ಅವರೊಡೂನೆ ಅಲ್ಪ ಸಮಯ ಕಳೆದರೆ ಅವರಿಗು ಅಲ್ಪ ಸಂತಸ ನಿಡಿದ ಪುಣ್ಯವಾದರು ಬರುತ್ತದೆ, ಮನಸಿಗು ನಿಮ್ಮದಿ ಸಿಗುತ್ತದೆ ಇದು ಈ ಸಾರಿ ನಾನು ಮತ್ತು ನನ್ನ ಗೆಳಯ ಕಂಡುಕೊಂಡ ಸತ್ಯ. ಅತ್ಮಿಯತೆ ಎಂಬ ಮುಖವಾಡ ದರಿಸಿ ನಮ್ಮೊಡನೆ ಇರುವ ಗೆಳಯರಿಗಿಂತ ಅನಾಥ ಮಕ್ಕಳ ನಿಶಕಲ್ಮಷ ಮನಸೆ ಹೆಚ್ಹು ಮದನಿಡುತ್ತದೆ.
  ಗೆಳಯನೊಬ್ಬನ ಒತ್ತಾಯದ ಮೆರೆಗೆ ನನ್ನ ದಿನಚರಿಯಲ್ಲಿ ಅಡಗಿದ್ದ ನನ್ನ ಈ ಭಾವನೆಗಳನ್ನು  ಇಲ್ಲಿ ಬರೆದಿದ್ದೆನೆ ಯಾರಿಗಾದರು ಬೇಸರವಾಗಿದ್ದರೆ ಅಥವಾ ನೋವು ಆಗಿದ್ದರೆ ಅದಕ್ಕೆ ನಾನು ಹೊಣೆಯಲ್ಲ. 

Saturday, September 1, 2012

ಮಂಗಳಾರತಿ

ಗುರುವಾರದಂದು ಗುರುರಾಯರ ದಶ೯ನಕೆ
ತೆರಳಿದ್ದೆ ನಾ ಮಂದಿರಕ್ಕೆ
ಗುರುರಾಯರ ಎದರು ಕಂಡೆ ನಾ
ಕಪ್ಪು ಸಿರೆಯಲಿ ಹಾಲು ಬಣ್ಣದಾ ಚಲುವೆ.

ಜೋಡಿಸಿದ್ದ ಕೈ, ಮುಚ್ಹಿದ್ದ ಕಣ್ಣು
ತುಟಿಯಲ್ಲಿ ರಾಯರ ಸ್ಮರಣೆ
ನೋಡುತ ಅವಳ ನಾನು
ಮರತೆ ಆ ಕ್ಷಣ ಗುರುರಾಯರನ್ನೆ.

ಕಣ್ಣ್ ತೆರೆದು ರಾಯರಿಗೆ ವಂದಿಸಿ
ನೋಡಿದಳು ನನ್ನಡೆಗೆ ಒಂದು ಕ್ಷಣ
ಚಲ್ಲಿ ಹೂ ನಗೆ ನನ್ನಡೆಗೆ ಒಂದು ಬಾರಿ
ಹೊರಟು ಹೋದಳು ಮುಂದೆ ತಿರುಗಿ ನೋಡದೆ.

ಮನ ಅವಳ ಹಿಂದೆ, ದೇಹ ರಾಯರ ಮುಂದೆ
ನಾ ಎತ್ತ ಹೋಗಲಿ ತಿಳಿಯದಾಗಿತ್ತು
ಸುಟ್ಟಾಗಲೆ ಕೈ ಅರಿವಾಗಿತ್ತು ನನಗೆ
ನಿಂತಿದ್ದ ಅಚ೯ಕ ಎದುರು ಮಂಗಳಾರತಿಯೊಂದಿಗೆ.

Friday, August 31, 2012

ಸದಾ ಕಾಡುವ ಕನಸು...

                      ಕಳೆದ ಒಂದೂವರೆ ವಷ೯ದಿಂದ ಒಂದು ವಿಚಿತ್ರವಾದ ಕನಸು ಕಾಡುತಿದೆ, ವಾರದಲ್ಲಿ ಒಂದುಸಲವಾದರು ಬಂದೆ ಬರುತ್ತದೆ, ನಿಧಾನವಾಗಿ ಚಲಿಸುತ್ತಿರು ರೈಲು, ಚಲಿಸುತ್ತಿರುವ ರೈಲಿನ್ನು ಹತ್ತಲು ಪ್ರಯತ್ನಿಸುತ್ತಿರು ಕೆಲವ ಜನರ ಗುಂಪು, ಆ ಗುಂಪಿನಲ್ಲಿ ನಾನು ಕೂಡ ಇದ್ದೆನೆ, ಎಲ್ಲ ಜನರು ಓಡಿ ಚಲಿಸುತ್ತಿರುವ ರೈಲನ್ನು ಹತ್ತಲು ಯಶಸ್ವಿಯಾಗುತ್ತಾರೆ ನಾನು ಇನ್ನೆನು ಹತ್ತಬೇಕು ಅಂದಾಗ ರೈಲು ವೇಗವಾಗಿ ಚಲಿಸುತ್ತದೆ, ನಾನು ಏಷ್ಟೆ ವೇಗವಾಗಿ ಓಡಿದರು ರೈಲು ಮಾತ್ರ ನನಗೆ ಸಿಗುವುದೆ ಇಲ್ಲ, ಕೊನೆಗೆ ಒಬ್ಬಂಟಿಯಾಗಿ ಉಳಿದು ಬಿಡುತ್ತೆನೆ.
               ಪ್ರತಿ ಬಾರಿಯು ಇದೆ ಕನಸು ಆದರೆ ಜನರ ಗುಂಪು ಮತ್ತು ರೈಲು ಚಲಿಸುವ ಸ್ಥಳ ಮಾತ್ರ ಬೇರೆ ಬೇರೆ ಆಗಿರುತ್ತದೆ, ಆದರೆ ಪ್ರತಿಬಾರಿಯು ಜನರ ಗುಂಪಿನಲ್ಲಿ ನಾನು ಇರುತ್ತೆನೆ ಮತ್ತು ರೈಲು ನನಗೆ ಮಾತ್ರ ಸಿಗುವುದೆ ಇಲ್ಲ, ಸುಮಾರು ಒಂದೂವರೆ ವಷ೯ದಿಂದ ಅದೆಸ್ಟು ಬಾರಿ ಈ ಕನಸು ನನಗೆ ಕಾಡಿದೆಯು ಲೆಕ್ಕವಿಲ್ಲ. ಆದರೆ ನಿಜ ಜೀವನದಲ್ಲಿ ಇದುವರೆಗು ನಾನು ಒಂದು ಬಾರಿಯು ರೈಲನ್ನು ಮಿಸ್ ಮಾಡಿಕೊಂಡಿಲ್ಲ(ಆದರೆ ಬಸ್ ನ್ನು ತುಂಭಾ ಸಲ ಮಿಸ್ ಮಾದಿಕೊಂಡಿದ್ದೆನೆ ಅದು ಬೇರೆ ಮಾತು), ಪ್ರತಿ ಸಲವು ಕನಸಿನಲ್ಲಿ ನನಗೆ ಮಾತ್ರ ರೈಲ್ ಏಕೆ ಸಿಗುವುದಿಲ್ಲ? ಈ ಪ್ರಶ್ನೆಗೆ ಉತ್ತರ ಹುಡಕಿ ಹುಡಕಿ ನನಗಂತು ಸಾಕಾಗಿ ಹೊಗಿದೆ, ಈ ಕನಸಿನ ಅಥ೯ವಾದರು ಏನು?
            ಕನಸಿನ ಅಥ೯ವೇನೆಯಿರಲಿ, ಮುಂದೆ ಒಂದು ದಿನ ಖಂಡಿತಾ ಆ ರೈಲನ್ನು ಹತ್ತೆ ಹತ್ತುತ್ತೆನೆ ಮತ್ತು ಅದೆಲ್ಲಿಗೆ ಹೋಗುತ್ತದೆ ಎಂಬದನ್ನು ಕಂಡು ಹಿಡಿಯುತ್ತೆನೆ ಎಂಬ ನಂಬಿಕೆ ಮಾತ್ರ ಇದೆ, ಇದು ಬರಿ ಕನಸೆ ಅಥವಾ ಇದಕ್ಕೆ ಏನಾದರು ವೀಶೆಷ ಅಥ೯ವೊಂಟೆ?

Sunday, May 27, 2012

Star and the boy

At the end of the day Once again I am sitting alone
In a terrace as a looser, Helpless, careless and
Just watching the sky…

Some stars on the sky Start to laugh at me
One small tear came out of my eye to
Say something to those stars but I
Just closed my eye and hide tear

But after few seconds one star
Start to fall towards the earth and told to me
“Hey boy pray what you want I am
Sacrificing myself for you, just watch me and pray, you will get your wish soon”

While I start to think to whom I pray
For me … no it’s selfish, for my dad or my mom or
For brother or for my love… for whom???
The star almost near the earth and it’s still telling quick

But I am confused still I am thinking, finally its reached earth
Before closing the eyes it’s told to me, I wasted my life for idiot like u
 Your really a looser, you dumb no one can change your life
You just go to hell

Tuesday, April 17, 2012

Time Pass...


ಅಂಕಲ್ Birthday cake ಸಂಜೆ 7.30ಕ್ಕೆ ಬೇಕು ಅದರ ಮೇಲೆ "Happy birthday Dear….. " ಹ್ಹಾ ಇದು ನನ್ನ ಲೈಪ್ ನಲ್ಲಿ ನಾನು order ಮಾಡ್ತಾ ಇರೂ 19 cake ಅನ್ನಿಸುತ್ತೆ, ಅಲ್ಲಾ ನನಗೆ 23 ವಷ೯ ಇದುವರೆಗು ಒಂದು ಸಲಾನು cake cut  ಮಾಡಲಿಲ್ಲ, cake ಮೇಲೆ ನನ್ನ ಹೆಸರು ನೋಡಲಿಲ್ಲ ಆದ್ರೆ ಬೇರೆಯವರಿಗೆ ಅಂತಾ 19 times order ಮಾಡಿದ್ದೆನೆ What the hell I am doing?
ಸರ್ 220 ಕೋಡಿ
ಹ್ಹಾ... ರ್ರಿ ಲಾಸ್ಟ್ ಟೈಮ್ 180 ಕೊಟ್ಟಿದ್ದೆ
ಅದು ಅವಾಗಾ ಸರ್, ಈಗ ಸಕ್ಕರೆ ರೇಟು, ಮೋಟ್ಟೆ ರೇಟು ಏಷ್ಟು ಆಗೆದೆ ಗೋತ್ತಾ?
ಸರಿ ನನಗು ಬೇಡ ನಿಮಗು ಬೇಡ 200 ತಗೋಳಿ
ಆಗಲ್ಲಾರಿ 1 ರೂಪಾಯಿನೂ ಕಡಿಮೆ ಆಗಲ್ಲ, 100 ರೂಪಾಯಿ ಅಡ್ವಾನ್ಸ್ ಇವಾಗಲೆ ಕೊಟ್ಟು ಹೋಗಿರಿ,
ಬಡ್ಡಿಮಗಾ 1 ರೂಪಾಯಿನೂ ಬಿಡಲ್ಲಾ ಅಂತಾನೆ next time ಬೇರೆ ಬೇಕರಿಗೆ ಹೋಗ ಬೇಕು ಆವಾಗ ಬುದ್ದಿ ಬರುತ್ತೆ ಇವನಿಗೆ ಅಂತಾ ಮನಸ್ಸಿನಲ್ಲೆ ಬೈತಾ ಪಸ್೯ಗೆ ಕೈ ಹಾಕಿ 100 ರುಪಾಯಿ ತಗಿತಾ ಇದ್ದೆ ಅಷ್ಟರಲ್ಲೆ ಒಂದು sweet voice  ಕಿವಿಗೆ ಬಿತ್ತು
ಅಂಕಲ್ ನಿನ್ನೆ ಕೇಕ್ ಆಡ೯ರ್ ಕೋಟ್ಟಿದ್ದೆನ್ನಲ್ಲಾ ರೇಡಿ ಇದಿಯಾ?
ಕೇಕ್ ರೇಡಿ ಇದೆ, 160 ರೂಪಾಯಿ ಕೊಡಿ
ಹುಡಗಿ ಪಸ್೯ಗೆ ಕೈ ಹಾಕಿ 100 ರ ಒಂದು ಮತ್ತು 50 ರ ಇನ್ನೊಂದು ನೋಟು ತೆಗೆದು ’ಅಯ್ಯೂ ಅಂಕಲ್ 10 rupees change  ಇಲ್ಲಾ 150 ತಗೊಳಿ please...’ ಅವಳ ಮಾತಿಗೆ ಬೇಕರಿಯವನು 
ಅಯ್ಯೂ ಪರ್ವಾಗಿಲ್ಲಾ ಕೊಡಿ ಅನ್ನೊದಾ, ಬಡ್ಡಿಮಗಾ ನನಗೆ 1 ರೂಪಾಯಿನೊ ಬಿಡಲಿಲ್ಲಾ ಅವಳಿಗೆ 10 ರೂಪಾಯಿ ಬಿಡ್ತಾ ಇದ್ದಾನೆ, ನನಗು 10 ರೂಪಾಯಿ ಬಿಟ್ಟಿದ್ರೆ ಇವನ ಮನೆ ಹಾಳು ಆಗ್ತಾ ಇತ್ತಾ? ಇವನ ಹೆಸರು ಹೇಳಕೊಂಡು ನಾನು 2 ಸೀಗರೇಟ್ ಸಿದ್ತಾ ಇದ್ದೆ, ಛೇ ಹುಡುಗುರಾಗಿ ಹುಟ್ಟಬಾರದು,
Thanks uncle ಅಂತಾ ನಗ್ತಾ ನಿಂತಿದ್ದ ಅವಳ ಮುಖ ಒಂದು ಸಲ ನೋಡಿದೆ
Wow what girl ನಕ್ಕಾಗ ಅವಳ ಗಲ್ಲದ ಮೇಲೆ ಮೂಡೊ ಡಿಂಪಲ್ಸ್ ಏಷ್ಟು ಮುದ್ದಾಗಿ ಕಾಣುತ್ತೆ, ದೇವರು ಹುಡಗಿಯರ smileಗೆ ಅದೇನ್ ಶಕ್ತಿ ಕೊಟ್ಟಿದ್ದಾನೊ, ಎಲ್ಲ ಹುಡುಗರು ಅವರ smileಗೆ ಸೋತು ಬಿಡ್ತಾರೆ, ಇಷ್ಟೊಂದು cute ಆಗಿರೊ ಹುಡಗಿನಾ ನಾನು 1st  time ನೋಡ್ತಾ ಇರೊದು? ಹ್ಹಾ....... ಇಲ್ಲಾ ತುಂಭಾ ಸಲಾ ಆದರೆ 1st time ನೋಡಿದ್ದು.... ಹ್ಹಾ ನೆನಪಾಯಿತು "ಮೇಘನಾ" ಇವಳಿಗಿಂತಾ cute ಆಗಿದ್ದ ಹುಡಗಿ….
                                                 ********************
                                           “  ಅನು ದಿನವು ನಿನ್ನ ನೋಡಿ
ನಿನಾದೆ ನನ್ನ ಮೋಡಿ
             ನಿನೊಂದು ಸಾರಿ ನನ್ನ ನೋಡಿ ನಕ್ಕರೆ 
                  ನಾನ್ನಲೇ ಕರಗಿ ಹೋಗುವೆ”
     ಮಗಾ ನನ್ನ ಹೊಸ ಕವಿತೆ ಹೇಗಿದೆ?
ನಮ್ಮ HOD classನಲ್ಲಿ ಕೋನೆ deskನಲ್ಲಿ ನಾನು ಹರಿ ಕುಳುತಿದ್ದೆವೆ, ಅವನು ಶ್ರದ್ದೆಯಿಂದ Notes ಬರಿತಾ ಇದ್ದಾನೆ ನಾನು ಕವಿತೆ ಬರಿತಾ ಇದ್ದೆನೆ,
ಸುಮ್ಮನೆ ಬಾಯಿ ಮುಚ್ಚ್ಕೊಂಡು Notesಬರಿ ಮುಂದಿನ ವಾರ Class testಗೆ ಇದರಿಂದಾನೆ ಪ್ರಶ್ನೆ ಕೆಳೊದು, ಅಂದಾ ಹರಿ
ಲೋ... ಈ ತಾತ Sharp Seriesನಲ್ಲಿ ಇರೊದನ್ನೆ ಬರಸುತ್ತಾನೆ ಸಂಜೆ ಮನೆಗೆ ಬಾ Sharp Seriesತೋರಿಸ್ತೆನೆ
    ನಿಜವಾಗಲೂ....?
   ಹೌದಪ್ಪ HOD ಮೇಲಾಣೆ, ಇವಾಗ ಈ Poem ಹೇಗಿದೆ ಹೇಳು,
ರಾಯರ ಕಣ್ಣು ಅದ್ಯಾವ ಹುಡಗಿ ಮೇಲೆ ಬಿತ್ತು?, ಹರೀಷ್ ನನ್ನ ಬಾಲ್ಯ ಸ್ನೆಹಿತ, ನನ್ನನ್ನು ತುಂಭಾ ಚನ್ನಾಗಿ ಅಥ೯ ಮಾಡಿಕೊಂಡಿದ್ದಾನೆ,"ನಾವು ಏನು ಹೇಳದೆ ನಮ್ಮ ಮನಸ್ಸಿನ ಭಾವನೆಗಳನ್ನು ಅಥ೯ಮಾಡಿಕೊಳ್ಳುವವರೆ ನಿಜವಾದ ಸ್ನೆಹಿತರಂತೆ" ಎಲ್ಲೂ ಓದಿದ ನೆನಪು ಬಹುಷ್ಯ ಆ ಮಾತನ್ನು ನಮ್ಮಿಬ್ಬರನ್ನು ನೋಡೆ ಹೇಳಿರ ಬೇಕು ಅನಿಸುತ್ತೆ.
  ಅದೊ ಅಲ್ಲಿ ನಿಂತಿದ್ದಾಳಲ್ಲಾ ಗುಂಗರು ಕುದಲುಗಳ Brown color ಬ್ಯಾಗ ಹಿಡಿದಿರೂ ಹುಡಾಗಿ, She is too cute na ಕಿಡಕಿಯಲ್ಲಿ ಅವಳೆಡೆಗೆ ಕೈ ಮಾಡಿ ತೋರಿಸಿದೆ.
  ಹೊ ಅವಳಾ....!
  ಅವಳಾ ನಾ.....!!! ಅಂದ್ರೆ ಅವಳು ನಿನಗೆ ಗೊತ್ತಾ? ಹುಡಗಿಯರ ವಿಷಯದಲ್ಲಿ ಹರಿ ನನಗಿಂತ ಯಾವಾಗಲು ಒಂದು ಹೆಜ್ಜೆ ಮುಂದೆ, ಅವನನ್ನು ನನ್ನಿಂದ ಈ ವಿಷಯದಲ್ಲಿ ಮಿರಿಸೊಕೆ ಆಗಲ್ಲ.
  ಗೊತ್ತು ಅವಳ ಹೆಸರು ಮೆಘನಾ ಅಂತಾ High School head master ಮಗಳು ಇಡಿ ಊರಿಗೆ  No-1 beauty ಎಲ್ಲಾ ಕಾಲೇಜ್ ಹುಡುಗರು ಅವಳಿಗೆ ಲೈನ್ ಹೋಡಿಯೊದು, ಸುಮ್ಮನೆ ಅವಳ ವಿಷಯ ಬಿಟ್ಟ ಬಿಡು,
ಇಡಿ ಊರಿಗೆ ಅವಳು ರಾಣಿನಾ? ಹೆಂಗೆ ಅಳಿದ್ರು ಈ ಊರು ಒಂದು ಮುಕ್ಕಾಲು ಗೇಣ್ ಇಲ್ಲಾ ರಾಣಿಯಂತೆ ರಾಣಿ, ನೊಡು ಮಗಾ ನಮ್ಮ ಗುರುಗಳಾದ ರವಿ ಬೆಳಗೆರೆಯವರು ಮಗು ಏನೆ ಆಗಲಿ Lets try and See ಅಂತಾ ಹೆಳಿದಾರೆ so i will try and check my luck,
 Ok that’s your wish ಎಂದು ತನ್ನ ಬ್ಯಾಗ್ ತೆಗೆದುಕೊಂಡು ಹೊರಟಿದ್ದ ಹರಿ ಬಾಗಿಲಿನ ತನಕ ಹೋಗಿ ನಂತರ ನನ್ನೆಡಗೆ ತಿರುಗಿ "ಹೇ ಸುನ್ನಿ ಇವತ್ತು mechinical ಪವನ್  Birthday so please ಸಂಜೆ ಬೇಕರಿಗೆ ಹೊಗಿ ಕೇಕ್ ತಗೊಂಡು ಬಾ ಅವನಿಗೆ surprises ಕೊಡೊಣ ಮರಿಬೇಡ.  
Hey idiot don’t call me sunny, I don’t like it ಆಯ್ತು ತರ್ತಿನಿ,
ಇದುವರೆಗು ಸುಮಾರು ಸಾವಿರ ಸಲ ಹೆಳಿದ್ದಿನೆ ಸುನ್ನಿ ಅಂತಾ ಕರಿಬೇಡ ಅಂತಾ ಆದ್ರು ಮತ್ತೆ ಮತ್ತೆ ಹಂಗೆ ಕರಿತಾನೆ, ಸುನ್ನಿ ಅಂದ್ರೆ ಅದೂ ಮುಸ್ಲಿಂರ ಒಂದು ಬುಡಕಟ್ಟು ಜನಾಂಗದ ಹೆಸರಂತೆ, ಪಾಕಿಸ್ತಾನದಲ್ಲಿ ಸುನ್ನಿ ಮತ್ತು ಶಿಯಾಗಳು ಯಾವಾಗಲು ಜನಾಂಗದ ಹೆಸರಿನಲ್ಲಿ ಹೊಡೆದಾಡುತ್ತಾರಂತೆ ನನಗೆ ಜಾತಿ ಬಗ್ಗೆ ಮಾತಾಡಿದರೆ ಆಗಲ್ಲಾ ಅಂತಹುದರಲ್ಲಿ  ಸುನ್ನಿ ಸುನ್ನಿ ಅಂತಾ ಕರಿತಾರೆ idiot.
   ನಮ್ಮ ಅಮ್ಮ ನನಗೆ ಪ್ರೀತಿಯಿಂದ "ಸುನೀಲ್" ಅಂತಾ ಹೆಸರಿಟ್ಟಿದ್ದಾರೆ, ಅವಳಿಗೆ ನನ್ನನ್ನು ಸುನೀಲ್ ಅಂತಾ ಕರೆಯೊದು ಅಂದ್ರೆ ತುಂಭಾ ಇಷ್ಠ, ಬೇರೆ ಯಾರಾದ್ರು ನನ್ನನ್ನು nick nameಲ್ಲಿ ಕರದರೆ ಅಷ್ಟೆ she will scold them ಯಾಕೆ ಅಂದ್ರೆ ಅವಳು ಕಾಲೇಜ್ ಗೆ ಹೊಗುವಾಗ ಟೈಮ್ ನಲ್ಲಿ ನಮ್ಮ ಕನ್ನಡ ಹಿರೊ ಸುನೀಲ್ ನ ಅಭಿಮಾನಿ, ಅವನಾ ಎಲ್ಲಾ ಮೂವಿಸು ನೊಡ್ತಿದ್ರತ್ತೆ, ಒಂತರಾ ಅವನ ಮೇಲೆ ಲವ್. ಅದಕ್ಕೆ ನನಗು ಸುನೀಲ್ ಅಂತಾ ಹೇಸರಿಟ್ಟಿದ್ದಾರೆ, ಪಾಪಾ ಸುನೀಲ್ ಅವರು accident ಆಗಿ ತಿರಿಕೊಂಡಾಗ ಅಮ್ಮ ಒಂದು ವಾರ ಅತ್ತಿದರಂತೆ, ಕೊನೆಗೆ ನಮ್ಮ ಅಜ್ಜಿ "ಲೇ ಸಾಕು ಸುಮ್ಮನಾಗೆ ಆ ಮಾಲಾಶ್ರೀ ಕೂಡ ಸುನೀಲ್ ನೆನಸಿಕೊಂಡು ನಿನ್ನಷ್ಟು ಅತ್ತಿಲ್ಲಾ" ಅಂದಾಗ ನಮ್ಮ ಅಮ್ಮ ಸುಮ್ಮನಾದ್ರಂತೆ ನೋಡಿ ನಂದು ಎಂತಾ crazy family .                                                                  ************************
                     ಸಂಜೆ ಪವನ್ ರೂಮ್ ಗೆ ಹೋದೆವು ಅಲ್ಲಿ ಅವನ ಹುಟ್ಟುಹಬ್ಬದ ಪಾಟಿ೯ ತುಂಭಾ ಜೊರಾಗಿಯೆ ನೆಡಿಯುತ್ತಾ ಇತ್ತು, ಬಿಯರ್, ಸಿಗರೇಟ್, ನಾನ್ ವೇಜ್ ಎಲ್ಲಾ ಅಲ್ಲಿ ಇತ್ತು, ಹರಿ ಮತ್ತು ನಾನು ಪವನ್ ಗೆ ವಿಶ್ ಮಾಡಿದೆವು ನಾನು ಕೇಕ್ ಗೆ ಕೈ ಹಾಕಿದರಿ ಹರಿ ಮಾತ್ರ ಸಿದಾ ಬಿಯರ್ ಬಾಟಲ್ ಗೆ ಕೈ ಹಾಕಿದ, ನಾವು ಬಾಲ್ಯ ಸೇಹಿತರಾದರು ಅವನು ಕುಡಿಯುವ ಮತ್ತು ಸಿಗರೇಟ್ ಅದ್ಯಾವ ಕಲಿತನೊ ನನಗೆ ಗೊತ್ತೆ ಆಗಲಿಲ್ಲ ಆದರೆ ನಾನು ಮಾತ್ರ ಈ ವಿಷಯದಲ್ಲಿ ಇನ್ನು ಮುಗ್ದ, ರೂಮಿನ ತುಂಭಾ ಸಿಗರೇಟ್ ನ ಹೋಗೆ ತುಂಭಿದ್ದರಿಂದ ನಾನು ಕೆಲವು ಕೇಕ್ ಪೀಸ್ ತೆಗೆದು ಕೊಂಡು ರೂಮಿನ ಆಚೆ ಬಂದು ಕುಳಿತೆ, ಕೆಲವು ಸಮಯದ ಬಳಿಕ ಹರಿ ಕೈಯಲ್ಲಿ ಸಿಗರೇಟ್ ಹಿಡಿದು ಆಚೆ ಬಂದು ನನ್ನ ಬಳಿ ಕುಳಿತ.
ಲೋ ಹರಿ ಸಿಗರೇಟ್ ಯಾಕೊ ಸಿದ್ತಿಯಾ?
ನಿನಗೆ ಮೇಘನಾ ಯಾಕೆ ಇಷ್ಟಾ?
ನನ್ನ ಪ್ರಶ್ನೆಗೆ ಇದು ಉತ್ತರ ಅಲ್ಲಾ,
ನೀನು ಮೇಘನಾ ಯಾಕೆ ಇಷ್ಟಾ ಪಡ್ತಿಯಾ ಹೆಳು ಆಮೇಲೆ ನಿನ್ನ ಪ್ರಶ್ನೆಗೆ ಉತ್ತರ ಕೊಡ್ತಿನಿ,
ಅವಳನ್ನು ನೊಡಿದಾಗ ನನ್ನ ಮನಸ್ಸಿನಲ್ಲಿ ವಿಚಿತ್ರ ಬದಲಾವಣೆ ಆಗುತ್ತೆ, ಒಂದು ರೀತಿ ಹೆಳಲಾಗದ ತಳಮಳ, ನನ್ನ ಹ್ರುದಯದ ಬಡಿತ ಜೋರಾಗುತ್ತೆ, Every time I looking at her my heart always skipping a beat, for me she’s Angelina jolie my dream girl, and she’s too hot maga,
Ooyi stop stop day dreams are not good to health ಅವಳ ಜೊತೆ ಒಂದಸಾರಿನು ಮಾತಾಡಿಲಾ ಇವಾಗಲೆ ಇತರ, ಇನ್ನು ಅವಳೆನಾದ್ರ ನಿನ್ನ ನೋಡಿ ನಕ್ಕರೆ ಅಷ್ಟೆ.
ಅದ್ಯಾಲ್ಲಾ ನಿನಗ್ಯಕೆ? ಈಗ ಸಿಗರೇಟ್ ಯಾಕೆ ಸೆದ್ತಿಯಾ ಹೇಳು?
Because  cigarette is hot, when I smoke my heart always skipping two beats , its keeps my mind active, and when I smoke I think better than I can.
But its poison yar, it kills
Ya but slowly... ಹರಿ ಮಾತಿಗೆ ಏನು ಹೆಳ ಬೇಕೊ ತಿಳಿಯದೆ ಸುಮ್ಮನಾದೆ.
ಹೆ ಸುನ್ನಿಲ್ ನೀನು ನಿಜವಾಗಲು ಮೇಘನಾ ಬಗ್ಗೆ serious  ಆಗಿದೆಯಾ ಅಥವಾ just time pass?
I am really serious yaar, but why such a question?
ನೋಡು just time pass ಆದ್ರೆ ಸರಿ, but serious ಆಗಿ ಮಾತ್ರ ಅವಳನ್ನು ತಗೊ ಬೇಡ.
ಯಾಕೆ? ನಿನೇನಾದ್ರು ಅವಳಿಗೆ ಲೈನ್ ಹೋಡಿತಿದಿಯಾ?
ಇಲ್ಲಪ್ಪ, ನಾನು ಹೆಳ್ತಾ ಇರೊದೆಲ್ಲಾ ನಿನ್ನ ಒಳ್ಳೆದಕ್ಕೆ, just forget her


(Will be Continue)


                                                

Monday, April 2, 2012

"ವಸು"ಳ ಪ್ರೇಮಕಾದಿಹಳು ವಸುಂಧರೆ ವರುಣನಿಗೆ
ಪ್ರೇಯಸಿಯ ಚುಂಭನಕ್ಕೆ ಪ್ರೇಮಿ ಕಾದಂತೆ
ಹಸುವ ಹಾಲುಣಲು ಕರು ಕಾದಂತೆ
ತುಂಬು ಗಭಿ೯ಣಿ ಮಗುವ ಆಗಮನಕ್ಕೆ ಕಾದಂತೆ


ವರುಣನ ಸ್ಪಶ೯ಕಾಗಿ ವಸುಂಧರೆ ಹಂಬಲಿಸಿಹಳು
ನವ ವಿವಾಹಿತರು ಮಧು ಚಂದ್ರಕ್ಕೆ ಹಂಬಲಿಸಿದಂತೆ
ಕರುವಿನ ಅಂಭಾ ಕೇಳಲು ಹಸು ಹಂಬಲಿಸಿದಂತೆ
ಮಗುವ ಮೊದಲ ತೊದಲು ನುಡಿಗೆ ತಾಯಿ ಹಂಬಲಿಸಿದಂತೆ


ಆದರೆಕೊ ವರುಣನಿಗೆ ವಸುಂಧರೆ ಮೇಲೆ ಮುನಿಸು
ದಿನವು ಸತಾಯಿಸುವ ಪ್ರೇಯಸಿ ಮೇಲೆನ ಪ್ರೇಮಿಯ ಮುನಿಸಂತೆ
ಚಿನ್ನಾಟವಾಡಲು ತನ್ನೊಡನೆ ಬಾರದ ಹಸುವಿನ ಮೇಲೆನ ಕರುವಿನ ಮುನಿಸಂತೆ
ತವರಿನಿಂದ ಬೇಗ ಬಾರದ ಹೆಂಡತಿ ಮೇಲಿನ ಗಂಡನ ಮುನಿಸಂತೆ

Saturday, March 10, 2012

ಕನಸು


ಎರಡು ವಷ೯ದ ಗೆಳತನ
ಎರಡು ಕ್ಷಣದ ಕನಸಂತೆ
ಕಣ್ಣ ತೆರೆದಾಗ ನಾನೆಲ್ಲೊ...? ನಿನೆಲ್ಲೊ..?
ನನ್ನ ಕನಸಲ್ಲಿ ಬಂದಿದ್ದು ನೀನಾ?
ನನಗೇಕೊ ಅನುಮಾನ
ಆ ಕನಸಲ್ಲಿ ನನಗೆ ಸಿಕ್ಕಿದ್ದು
ನನ್ನ ಜೀವನದ ವಸಂತ
ನನ್ನ  ಜೀವನದ ಬೆಳಕು
ನನ್ನ ಜೀವನದ  ಸಂತಸ
ನನ್ನ  ಜೀವನದ ಗುರಿ
ನನ್ನ ತುಟಿಯಲ್ಲೊಂದು ನಗು
ಹೌದು ಎರಡು ಕ್ಷಣದ ಕನಸಲ್ಲಿ 
ನಾ ನಿನ್ನಲ್ಲಿ ನನ್ನ ಬದುಕ ಕಂಡೆ
ಎರಡು ಕ್ಷಣದ ಬಳಿಕ
ನೀ ನನ್ನ ಬದುಕೆ ಕದ್ದೆ.

Wednesday, February 22, 2012

ಮನಸ್ಸಿನ ಮಮ೯


ಯಾವ ಹುತ್ತದಲ್ಲಿ
ಅಧ್ಯಾವ ಹಾವೂ..?
ಯಾರ ಮನಸ್ಸಿನಲ್ಲಿ
ಅಧ್ಯಾರ ಕನಸೊ...?


ಕೆದಕಿದಾಗ ಹಿಂದಿನ ಸತ್ಯ
ಸಿಗುವೂದೆಲ್ಲಾ ಬರಿ ಕಹಿಸತ್ಯ
ತಿಳಿದಾಗ ಅವಳ ಮನಸ್ಸಿನ ಮಮ೯
ಅರಿತೆ ನಾನು ಅದು ನನ್ನ ಪಾಲಿನ ಕಮ೯


ಕೋಗಿಲೆಯೆಂದು ನಂಬಿದೆ
ಆದರೆ ಸಿಕ್ಕಿದ್ದು ಮಾತ್ರ ಕಾಗೆ
ಬಣ್ಣ ಒಂದೆಯಾದೊಡೆ
ಕಾಗೆ ಕೋಗಿಲೆಗಳೆರೆಡು ಒಂದೇನಾ?


ನನ್ನ ಮನಸ್ಸಿನ ಪರಿಶುದ್ದತೆಗೆ
ಹುಳಿ ಹಿಂಡಿ ನುಡಿದಳು
ಗೆಳಯ ಈಗ ನೀನು ಶುದ್ದನಲ್ಲ
ನಿನ್ನ ಮನಸ್ಸು ಈಗ ಅಶುದ್ದ.

Sunday, February 12, 2012

ನನಗ್ಯಾಕೆ ಈ ಶಿಕ್ಷೆ?


           ನಾನು ಕೆಳ ಮಧ್ಯಮ ಕುಟುಂಬದಲ್ಲಿ ಹುಟ್ಟಿದ ಮಹಿಳೆ, ನನ್ನ ಹೆಸರು ನಿಮಗೆ ಹೇಳುವ ಅವಶ್ಯಕತೆ ಇಲ್ಲ ಯಾಕಂದರೆ ಇದು ಬರಿ ನನ್ನ ಕಥೆಯಲ್ಲ ಭಾರದ ಬಹುತೇಕ ಬಡ ಮತ್ತು ಮಧ್ಯಮ ವಗ೯ದ ಮಹಿಳೆಯರ ಕಥೆ, ಮೊದಲೆ ಹೇಳಿದಂತೆ ನಾನು ಮಧ್ಯಮ ವಗ೯ದ ಕುಟುಂಬದಲ್ಲಿ ಹಿರಿಯ ಮಗಳಾಗಿ ಹುಟ್ಟಿದೆ, ನನ್ನ ಅಪ್ಪ ವ್ಯವಸಾಯವನ್ನೆ ಅವಲಂಬಿಸಿ ಜೀವನ ನೇಡಸುವವರು, ಅಪ್ಪ-ಅಮ್ಮ ಇಬ್ಬರು ಓದಲು ಬರೆಯಲು ಕಲಿತವರು, ನನಗೆ ಒಬ್ಬ ತಮ್ಮ ಮತ್ತು ತಂಗಿ ಕೊಡ ಇದ್ದಾರೆ. 
           ನನಗು ಚಿಕ್ಕಮಗುವಾಗಿದ್ದಾಗ ಓದ ಬೇಕು ಎಂಬ ತುಂಭಾ ಆಸೆ ಇತ್ತು, ಅಪ್ಪ-ಅಮ್ಮ ಇಬ್ಬರು ಓದು ಬರಹ ಬಲ್ಲವರಾದ್ದರಿಂದ ನನ್ನನ್ನು ಓದಿಸುತ್ತಾರೆ ಎಂದು ನಂಬಿದ್ದೆ ಆದರೆ  7ನೇ ತರಗತಿ ಮುಗಿಯುತ್ತಿದ್ದಂತೆ ನನ್ನನ್ನು ಶಾಲೆಯಿಂದ ಬಿಡಿಸಿ ಮನೆಗೆಲಸಕ್ಕೆ ಮತ್ತು ವ್ಯವಸಾಯದ ಕೆಲಸಕ್ಕೆ ಹಚ್ಹಿದರು, ನನ್ನ ಅಪ್ಪ ವಷ೯ಪೂತಿ೯ ದುಡಿದಿದ್ದನ್ನು ಯಗಾಧಿ, ದಿಪಾವಳಿಯ ಹಿಂದಿನ ದಿನದ ಇಸ್ಪೆಟ್ ಆಟದಲ್ಲಿ ಮುಳಗಿಸುತ್ತಿದ್ದರು ಇನ್ನು ನನ್ನ ಅಮ್ಮನಿಗೆ ಬರಿ ಅಕ್ಕ-ಪಕ್ಕದವರ ಬಗ್ಗೆ ಮಾತನಾಡುವುದರಲ್ಲೆ ಮಜ, ಇನ್ನು ನನ್ನ ತಮ್ಮನಿಗೆ ಡ್ರೈವಿಂಗ್ ಹುಚ್ಚು, 6 ತಿಂಗಳು ಮನೆಯಲ್ಲಿ ಇದ್ದರೆ ಇನ್ನಾರು ತಿಂಗಳು ಲಾರಿ ಡ್ರೈವಿಂಗೆ ಹೊಗಿತಿದ್ದ, ಉಳಿದಿದ್ದು ನನ್ನ ತಂಗಿ ಅವಳಿಗೆ ಆ ದೆವರು ಮಾತುಗಳನ್ನೆ ಕಿತ್ತು ಕೊಂಡು ಮುಕಿಯನ್ನಾಗಿಸಿದ್ದ ಇದು ನನ್ನ ಕುಟುಂಬದ ಸಂಕ್ಷಿಪ್ಪ ವಿವರಣೆ.
          2೦ನೇ ವಯ್ಯಸಿನಿವರೆಗೆ ಹೊಲ-ಮನೆಗೆಲಸಗಳನ್ನು ಮಾಡುತ್ತಾ ಇಂದೆಲ್ಲ ನಾಳೆ ನನಗು ಒಳ್ಳೆಕಾಲ ಬರುತ್ತೆ ನನ್ನ ಕಷ್ಟಗಳು ಕೊನೆಯಾಗುತ್ತವೆ ಎಂಬ ನಂಬಿಕೆಯಲ್ಲಿದ್ದ ನನಗೆ ನನ್ನ ಮದುವೆಯ ಸುದ್ದಿ ನನ್ನಲ್ಲಿ ಹೋಸ ಕನಸುಗಳನ್ನು ಬಿತಿತ್ತು, ಎಲ್ಲ ಮಹಿಳೆಯರಂತೆ ನಾನು ನನ್ನ ಗಂಡನಾಗಿ ಬರುವವನ ಬಗ್ಗೆ ನೂರಾರು ಕನಸುಗಳನ್ನು ಕಂಡೆ, ಕೊನೆಗು ನನ್ನ ಅಪ್ಪ ಸುಂದರವಾಗಿದ್ದ, ನಮಗಿಂತ ಅನೂಕುಲಕರವಾದ ಹುಡುಗನನ್ನೆ ನನಗೆ ಹುಡಕಿದಾಗ ಮೊದಲ ಸಲ ನನ್ನಪ್ಪನ ಬಗ್ಗೆ ನನಗೆ ಹೆಮ್ಮೆ ಅನಿಸಿತ್ತು ಆದರೆ ವರದಕ್ಷಿಣೆಯಿಲ್ಲದೆ ಮದುವೆಗಳಾಗುವುದುಂಟೆ? ನನ್ನ ವಿಷಯದಲ್ಲು ಅಷ್ಟೆ ನನ್ನ ವರದಕ್ಷಣೆ ಮತ್ತು ಮದುವೆ ಖಚಿ೯ಗಾಗಿ ಅಪ್ಪ ಸ್ವಲ್ಪ ಜಮೀನನ್ನು ಕೊಡ ಮಾರಿದರು ಕೊನೆಗು ನನ್ನ ಮದುವೆ ಮಾಡಿದರು.
         ಮದುವೆಯ ನಂತರ ಕೆಲವು ದಿನ ಎಲ್ಲವು ಚನ್ನಾಗಿತ್ತು, ನನ್ನ ಗಂಡ ನನ್ನನ್ನು ಚನ್ನಾಗಿಯೆ ನೋಡಿಕೊಳ್ಳುತಿದ್ದ, ನನ್ನ ಗಂಡನಿಗೆ ನನ್ನ ಮೆಲೆ ತುಂಭಾ ಪ್ರೀತಿ ಅಂದುಕೊಂಡಿದ್ದೆ ಆದರೆ ಅದು ಪ್ರೀತಿಯಲ್ಲ ಕೆವಲ ನನ್ನ ದೇಹದ ಮೇಲಿನ ವ್ಯಾಮೊಹ ಎಂದು ತಿಳಿಯಲು ಬಹಳ ಸಮಯ ಹಿಡಿಯಲಿಲ್ಲ, ನಂತರ ಎಂದಿನಂತೆ ಮನೆ ಮತ್ತು ಹೊಲದ ಕೆಲಸ ಮದುವೆಯಾಗಿ 1 ವಷ೯ಕ್ಕೆ ಮುದ್ದಾದ ಹೆಣ್ಣು ಮಗುವಿನ ತಾಯಿಯಾದೆ ಅಲ್ಲಿಂದ ನನ್ನ ಅತ್ತೆಯ ಚುಚ್ಚುಮಾತುಗಳು ಆರಂಭ ತಾನು ಒಂದು ಹೆಣ್ಣು ಎಂಬುದನ್ನೆ ಮರೆತು ನಾನು ಹೆಣ್ನು ಮಗು ಹೆತ್ತಿದಕ್ಕೆ ಬಯ್ಯುತಿದ್ದರು, ಬಡ ಕುಂಟುಂಬದಲ್ಲಿ ಹುಟ್ಟಿದ್ದ ನನಗೆ ಇದು ಮೊದಲಿನಿಂದಲೆ ಅಭ್ಯಸವಾಗಿತ್ತು.
       ಈಗ ನಾನು ಮತ್ತೆ ಗಭಿ೯ಣಿ ಕೆಲದಿನಗಳ ಹಿಂದೆ ಮದುವೆ ಸಮಯದಲ್ಲಿ ಕೊಡಬೇಕಾಗಿದ್ದ 3೦ ಗ್ರಾಂ ಭಂಗಾರ ಇನ್ನು ಕೊಟ್ಟಿಲ್ ಅದನ್ನು ತಂದರೆ ಮಾತ್ರ ನಿನಗೆ ಮನೆಯಲ್ಲಿ ಪ್ರವೇಶ ಎಂದು ನನ್ನ ಗಂಡ ಮತ್ತು ನನ್ನ ಅತ್ತೆ ಮನೆಯಿಂದ ನನ್ನನ್ನು ಆಚೆ ಕಳಿಸಿದ್ದಾರೆ, ನಾನು ಗಭಿ೯ಣಿ ಎಂಭ ಕರುಣೆ ಕೊಡ ಅವರಿಗೆ ಇಲ್ಲ, ಇನ್ನು ಅಪ್ಪನಿಗೆ ಇರುವ ಸಾಲ ತಿರಿಸಲೆ ಆಗುತ್ತಿಲ್ಲ ಇನ್ನು ಭಂಗಾರ ಎಲ್ಲಿಂದ ತರುತ್ತಾರೆ? ಅಪ್ಪನ ಮನೆಯ ಮುಲೆಯಲ್ಲಿ ಕುಳಿತು ಅಳುವುದು ಬಿಟ್ಟರೆ ನನಗೆ ಬೆರೆ ದಾರಿಯೆ ಇಲ್ಲ, ನೀವೆ ಹೇಳಿ ನಾನು ಮಾಡಿದ ತಪ್ಪಾದರು ಏನು? ನನಗ್ಯಾಕೆ ಈ ಶಿಕ್ಷೆ? ಬಾಲ್ಯದಲ್ಲಿ ಓದಲು ಆಸೆ ಪಟ್ಟಿದ್ದು ತಪ್ಪೆ? ಹೆಣ್ಣು ಮಗು ಹೆತ್ತಿದ್ದು ತಪ್ಪೆ? ಬಡ ಕುಟುಂಬದಲ್ಲಿ ಹುಟ್ಟಿದ್ದು ತಪ್ಪೆ? ಅಥವಾ ಹೆಣ್ಣಾಗಿ ಹುಟ್ಟುವುದೆ ತಪ್ಪೆ?

Monday, February 6, 2012

ಕೊನೆಯ ಪತ್ರ...


ಬರೆಯುತ್ತಿರುವೆ ಪತ್ರ ನಾನು
ಖಾಲಿ ಪುಟವ ನೋಡುತ
ಮನದ ಮಾತನ್ನು ಹೇಳುತ್ತಿರುವೆ
ಎನನ್ನು ಬರೆಯದೆ
ನಿನ್ನ ತಲುಪುವ ಪ್ರಯತ್ನದಲ್ಲಿರುವೆ
ಮನೆಯ ನಾಲ್ಕು ಗೋಡೆ ದಾಟದೆ
ತಿಳಿಯದಾಗಿದೆ ನನಗೆ ಏನೆಂದು ಬರೆಯಲಿ

ನನ್ನ ಪ್ರತಿದಿನದ  ದಿನಚರಿಯಲ್ಲು
ತುಂಬಿದೆ ಬರಿ ಕ್ರುತಕ ನಗು
ಆಗದಿರಲಿ ಇದೆ ಶಾಶ್ವತ
ನನ್ನ ಪ್ರತಿ ಯಶಸ್ಸಿನ ಆಚರಣೆಯಲ್ಲು
ಕಾಡಿದೆ ನೀನ್ನ ನೆನಪುಗಳ ಕಾಟ
ಬಯಸಿದೆ ಮನವು ಮೌನವಾಗಿ
ನೀನ್ನ ಜೋತೆ ನಾಲ್ಕು ಮಾತು

ದಣೆದಿದೆ ನನ್ನ ಜೀವ ಸಂಘಷ೯ಗಳಿಗೆ ಸಿಲುಕಿ
ಸೋಲುತಿಹನು ನಾನು ಪ್ರತಿ ಕ್ಷಣವು
ಮಾಸುತಿವೆ ನೀನ್ನ ನೆನೆಪುಗಳು ಹೋರಾಟದಲ್ಲಿ
ಬಂದು ಸೇರು ಮನವ
ನೀನ್ನ ಕೊನೆಯ ನೆನಪು ಮನದಿಂದ ಮಾಸುವ ಮುನ್ನ
ಇನ್ನು ಸ್ವಲ್ಪ ತಡಮಾಡಿದರು
ಆಗುವೆ ನಾ ನಿನಗೆ ಅಪರಿಚಿತ

ಇದು ನಿನಗೆ ನನ್ನ ಕೊನೆಯ ಪತ್ರ
ಬರೆಯತ್ತಿರುವೆ ಪತ್ರ ನಾನು
ಖಾಲಿ ಪುಟವ ನೋಡತಾ ...

Thursday, January 19, 2012

ಕಿಡಕಿಯಾಚಗಿನ ಕನಸು...


         (ಇದು ರವೀಂದ್ರನಾಥ ಠಾಗೂರರು  1912ರಲ್ಲಿ ಬರೆದ ಬಂಗಾಳಿ ನಾಟಕ "ಪೊಸ್ಟ ಆಪೀಸ್"ದಿಂದ ಸ್ಪೂಥಿ೯ಗೊಂಡು    ಬರೆದ ಕಥೆ, ಮೂಲ ಕಥೆಗೆ ದಕ್ಕೆಯಾಗದಂತೆ ವಿಭಿನ್ನವಾಗಿ ಸಂಕ್ಷಿಪ್ತವಾಗಿ ನಾಟಕವನ್ನು ಕಥೆ ರೂಪದಲ್ಲಿ ಬರೆದಿದ್ದೆನೆ, ನನ್ನಿಂದ ಮೂಲ ಕಥೆಗೆ ದಕ್ಕೆಯಾಗಿದ್ದರೆ ದಯವಿಟ್ಟು ಕ್ಷಮಿಸಿ) 
            
                 ಅಮಲ್ ಮಾದವರಾಯರ 5 ವಷ೯ದ ಒಬ್ಬನೆ ಮಗ, ಮಾದವರಾಯರಿಗೆ ಮಗನೆಂದರೆ ಅತಿಯಾದ ಪ್ರೀತಿ, ಒಬ್ಬನೆ ಮಗನಾದ ಕಾರಣ ಅದು ಸಹಜ ಕೂಡ, ಆದರೆ ಅವನಿಗ ಮಾರಣಾಂತಿಕ ಖಾಯಿಲೆಯಿಂದ ಬಳಲುತಿದ್ದಾನೆ, ವೈದ್ಯರು ಕೊಡ ತಮ್ಮ ಎಲ್ಲ ಪ್ರಯತ್ನಗಳ ನಂತರ ಕೈ ಚೆಲ್ಲಿದ್ದಾರೆ, ಅವನು ಏಷ್ಟು ಕಾಲ ಬದುಕುತ್ತಾನೆ ಎಂಬುದು ದೇವರ ಮೇಲೆ ಅವಲಂಬಿತ, ಅವನನ್ನು ಅತಿಯಾದ ದೂಳು ಮತ್ತು ಬೆಳಕಿನಿಂದ ದೂರವಿರಿಸಿದರೆ ಇನ್ನು ಸ್ವಲ್ಪ ಕಾಲ ನೀಮ್ಮ ಜೊತೆ ಇರಬಹುದು ಎಂದಿದ್ದರು ಆದ್ದರಿಂದ ಅಮಲ್ ನನ್ನು ಒಂದು ಕೋಣೆಯಲ್ಲಿ ಇಟ್ಟೆದ್ದಾರೆ ಅದರ ಎಲ್ಲ ಕಿಡಕಿ ಬಾಗಿಲುಗಳು ಸದಾ ಮುಚ್ಚಿರುತ್ತವೆ, ಆದರೆ ಬಾಲಕ ಅಮಲ್ ಗೆ ಮಾತ್ರ ತಾನು ಕೊಡ ಹೊರ ಹೋಗ ಬೇಕು ಆಟ ಆಡ ಬೇಕು ಎಂಬ ಆಸೆ.
                                           ****************
                    ಅದೊಂದು ಮಧ್ಯಾನ ಊಟದ ನಂತರ ಅಮನ್ ನ್ನು ಕೋಣೆಯಲ್ಲಿ ಮಲಗಿಸಿ ಮಾದವರಾಯರು ಆಚೆ ಹೊಗಿದ್ದಾರೆ, ಬಾಲಕ ಅಮಲ್ ಗೆ ಮಾತ್ರ ನಿದ್ರೆ ಬರುತ್ತಿಲ್ಲ, ಮಲಗಿರಲು ಆಗುತ್ತಿಲ್ಲ ಅದೆ ಸಮಯಕ್ಕೆ ಸರಿಯಾಗಿ ರಸ್ತೆ ಪಕ್ಕದ ಕಿಡುಕಿಯಿಂದ ದ್ವನಿಯೊಂದು ಕೆಳುತ್ತದೆ "ಮೊಸರು ಮೊಸರು ಗಟ್ಟಿ ಮೊಸರು, ತಾಜಾ ಮೊಸರು" ಆ ದ್ವನಿ ಕೇಳಿದ ಅಮಲ್ ಮೇಲ್ಲಗೆ ಕಿಡಕಿ ಪಕ್ಕ ಬಂದು ನಿಧಾನವಾಗಿ ಕಿಡಕಿ ಬಾಗಿಲು ತೆರೆಯುತ್ತಾನೆ, ವ್ಯಕ್ತಿಯೊಬ್ಬ ತಲೆಯಮೇಲೆ ಕುಡಕಿ ಹೊತ್ತೂಕೊಂಡು ಹೋಗುತ್ತಿದ್ದಾನೆ, ಅವನನ್ನು ಕಂಡ ಅಮಲ್ ಮೆಲ್ಲಗೆ "ಮೊಸರಣ್ಣ ಮೊಸರಣ್ಣ" ಎಂದು ಕೊಗಿದ, ಬಾಲಕನ ದ್ವನಿ ಕೆಳಿದ ಮೊಸರಿನವನು ಕಿಡಕಿ ಬಳಿ ಬಂದು
    ಏನ್ ಪುಟ್ಟಾ ಮೊಸರು ತಗೊತ್ತಿಯಾ?
    ನಾನು ಹೇಗೆ ತಗೊಳ್ಳಿ, ನನ್ನ ಹತ್ತಿರ ದೂಡ್ಡು ಇಲ್ಲ.
    ಮತ್ತೆ ಏನಕ್ಕೆ ಕರೆದೆ ಸುಮ್ಮನೆ ನನ್ನ ಟೈಮ್ ವೆಸ್ಟ್, ಎಂದ ಅದಕ್ಕೆ ಅಮಲ್
    "ನಾನು ನಿನ್ನ ಜೋತೆ ಬರಲೆ"
    ನನ್ನ ಜೋತೆ? ಯಾಕೆ?
    ನನಗೆ ಮನೆಯಿಂದ ಆಚೆ ಹೋಗಬೇಕು ಊರು ನೋಡ ಬೇಕು ಅಂತಾ ಆಸೆ, ಮನೆಯಲ್ಲೆ ಇದ್ದು ಬೇಜಾರಾಗಿದೆ.
    ನಿನ್ನ ಅಪ್ಪನಿಗೆ ಹೇಳು ಕರಕೊಂಡು ಹೊಕ್ತಾರೆ.
    ಇಲ್ಲ ನನಗೆ ಹುಷಾರಿಲ್ಲ, ಡಾಕ್ಟರ್ ಆಚೆ ಹೊಗದೆ ಮನೆಯಲ್ಲೆ ಇದ್ದರೆ ಬೇಗ ಗುಣವಾಗುತ್ತೆ ಅಂತಾ ಹೇಳಿದ್ದಾರೆ, ಅದಕೆ ಮನೆಯಲ್ಲಿ  ಯಾರು ನನ್ನ ಆಚೆ ಬಿಡುತ್ತಿಲ್ಲ.
   ಏನಾಗಿದೆ ನಿನಗೆ?
   ಅದೆಲ್ಲಾ ನನಗೆ ಗೊತ್ತಿಲ್ಲ್, ಮೊಸರಣ್ಣ ನೀನು ಎಲ್ಲಿಂದ ಬಂದೆ?
   ನನ್ನ ಹಳ್ಳಿಯಿಂದ.
   ನಿನ್ನ ಹಳ್ಳಿ? ಏಲ್ಲಿದೆ? ಇಲ್ಲಿಂದ ದೂರಾನಾ?
   ಹೌದು.. ಅಲ್ಲಿ ಬೇಟ್ಟಾ ಕಾಣುತ್ತಲ್ಲಾ ಅದರ ಪಕ್ಕ ಒಂದು ನದಿಯಿದೆ ನದಿ ಪಕ್ಕಾನೆ ನನ್ನುರು.
   ನಿಮ್ಮನೆಲಿ ಯಾರಾರು ಇದ್ದಾರೆ?
   ನಾನು, ನನ್ನ ಹೆಂಡತಿ, ನಾಲ್ಕು ಎಮ್ಮೆ, ದಿನಾ ಅವಳು ಎಮ್ಮೆ ಮೆಯಿಸಿ, ನದಿಯಲ್ಲಿ ಅವುಗಳಿಗೆ ಸಾನ್ನ ಮಾಡಿಸಿ ಹಾಲು ಕರೆದು ಅದಕ್ಕೆ ಹೆಪ್ಪು ಹಾಕಿ ಮೊಸರು ಮಾಡ್ತಾಳೆ ನಾನು ಅದನ್ನು ಊರು ಉರುಗೆ ತಗೊಂಡು ಹೋಗಿ ಮಾರ್ತಿನಿ.
   ಮೊಸರಣ್ಣ ನನ್ನ ನಿನ್ನ ಜೋತೆ ಕರೆದುಕೊಂಡು ಹೊಗು ನಾನು ಎಮ್ಮೆ ಮೆಯಿಸುವದು ಹಾಲು ಕರೆಯೊಂದು ಕಲಿತೆನೆ.
   ಬೇಡ ಪುಟ್ಟ ನೀನು ಓದಿ ದೊಡ್ಡವನಾಗಿ ಒಳ್ಳೆ ಕೆಲಸಕ್ಕೆ ಸೆರು.
   ನನಗೆ ಓದೊಕೆ ಇಷ್ಟ ಇಲ್ಲ, ನಾನು ದೊಡ್ಡವನಾಗಿ ನೀನ್ನ ತರ ಮೊಸರು ಮಾರ್ತಿನಿ ಊರು ಊರು ಅಡ್ಡಾಡ್ತಿನಿ.
    ಹ್ಹ.. ಹ್ಹ... ಸರಿ ಸರಿ ಈಗ ಈ ಮೊಸರು ತಗೊ.
    ಬೇಡ ನನ್ನ ಹತ್ತಿರ ದೂಡ್ಡು ಇಲ್ಲ.
    ನಿನ್ನ ಹತ್ರ ದೂಡ್ಡು ತಗೊಂಡೆ ದೆವರು ಮೆಚ್ಹತ್ತಾನಾ? ಇರಲಿ ಹಾಗೆ ತಗೊ ದೊಡ್ಡವನಾದ ಮೇಲೆ ದೂಡ್ಡು ಕೊಡುವಂತೆ.
    ಸರಿ.
   ಆಯ್ತು ನಾನು ಬರ್ತಿನಿ ಇನ್ನು ಅಧ೯ ಊರು ಅಡ್ಡಾಡ ಬೇಕು, ಎಂದು ಮೊಸರಿನವನು ಹೊರಟೂ ಹೋದ.
                                         *****************
                ಮೊಸರಿನವನು ಹೋದ ದಾರಿಯನ್ನೆ ನೋಡುತ್ತಾ ಅಮಲ್ ಗಟ್ಟಿಯಾಗಿ ಮೊಸರು ಮೊಸರು ಗಟ್ಟಿ ಮೊಸರು, ತಾಜಾ ಮೊಸರು ಎಂದು ತನ್ನಷಟ್ಟಕ್ಕೆ ತಾನೆ ಕೂಗಲಾರಂಬಿಸಿದ ಅದೆ ಸಮಕ್ಕೆ ಅದೆ ಮಾಗ೯ವಾಗಿ ಬರುತ್ತಿದ್ದ ಪಕ್ಕದ ಮನೆಯ ರಾಘವ್ ಅಂಕಲ್ ಅಮಲ್ ನನ್ನು ನೋಡಿ " ಹೇ ಅಮಲ್ ಒಳಗಡೆ ಹೋಗಿ ಮಲಗು ನಿನಗೆ ಮೊದಲೆ ಆರೋಗ್ಯ ಸರಿಯಿಲ್ಲವೆಂದರು ಅದಕ್ಕೆ ಅಮಲ್
"ಅಂಕಲ್ ನೀವು ಎಲ್ಲಿಗೆ ಹೊಗಿದ್ರಿ"
ಪೋಸ್ಟ ಆಪೀಸ್ ಗೆ ಹೋಗಿದ್ದೆ.
ಪೋಸ್ಟ ಆಪೀಸ್ ಗೆ ಯಾಕೆ?
ನನ್ನ ಮಗನಿಗೆ ಪತ್ರ ಬರೆದಿದ್ದೆ ಅದನ್ನು ಡಬ್ಬಿಗೆ ಹಾಕುಲು ಹೋಗಿದ್ದೆ.
ನಿಮ್ಮ ಮಗನಿಗೆ ಆ ಪತ್ರ ಯಾರು ಕೊಡ್ತಾರೆ?
ಪೋಸ್ಟ ಮನ್.
ಪೋಸ್ಟ ಮನ್? ಅವನು ಯಾರು?
ಪೋಸ್ಟ ಮನ್ ಅಂದರೆ ಎಲ್ಲರ ಮನೆಗು ಹೋಗಿ ಅವರ ಅವರ ಪತ್ರ ಕೊಡುವವನು.
ಅವನಿಗೆ ಎಲ್ಲರ ಮನೆಯೆನು ಗೊತ್ತಾ?
ಹಾ ಗೊತ್ತು.
ನಮ್ಮ ಮನೆನು ಗೊತ್ತಾ?
ಹಾ..
ಅಂಕಲ್ ನಾನು ದೊಡ್ಡವನಾದ ಮೇಲೆ ಪೋಸ್ಟ ಮನ್ ಆಗ್ತಿನಿ.
ಬೇಡ ಪುಟ್ಟ ನೀನು ಓದಿ ದೊಡ್ಡವನಾಗಿ ಒಳ್ಳೆ ಕೆಲಸಕ್ಕೆ ಸೇರು.
ಇಲ್ಲ ನನಗೆ ಓದೊಕೆ ಇಷ್ಟಾ ಇಲ್ಲ, ನಾನು ಪೋಸ್ಟ ಮನ್ ಆಗ್ತಿನಿ ಎಲ್ಲರ ಮನೆಗೆ ಹೋಗಿ ಅವರವರ ಪತ್ರ ಕೊಡ್ತಿನಿ, ಊರು ಊರು ಅಡಾಡುತ್ತೆನೆ.
ಅಮಲ್ ಆರೋಗ್ಯ ಪರಿಸ್ತಿತಿ ಅರಿತಿದ್ದ ರಾಘವ್ ಅಂಕಲ್ ಗೆ ಅವನ ಮಾತು ಕೇಳಿ ಕಣ್ಣಂಚಲಿ ನೀರು ಬಂದರು ತೋರಿಸದೆ,
ಆಯ್ತು ಹಾಗೆ ಮಾಡು ಈಗ ಹೋಗಿ ಮಲಗು ಎಂದರು ಆದರೆ ಅಮಲ್
ಅಂಕಲ್ ನನಗು ಯಾರಾದ್ರು ಪತ್ರ ಬರಿತ್ತಾರಾ?
ಹಾ ಪುಟ್ಟಾ ಚಿಕ್ಕಮಕ್ಕಳಿಗೆ ದೇವರು ಪತ್ರ ಬರೆಯುತ್ತಾನೆ.
ಅಂಕಲ್ ದೇವರು ಎಲ್ಲಿದ್ದಾನೆ?
ತುಂಭಾ ದೂರ.
ನೀವು ಅವನನ್ನು ನೋಡಿದ್ದಿರಾ?
ಇಲ್ಲ ಪುಟ್ಟ.
ಅಂಕಲ್ ದೆವರು ಏನಾದರು ನಿಮಗೆ ಸಿಕ್ಕರೆ ಅವರಿಗೆ ನನಗು ಒಂದು ಪತ್ರ ಬರೆಯಲು ಹೇಳ್ತಿರಾ?
ಖಂಡಿತಾ ಹೇಳ್ತಿನೆ, ಇವತ್ತೆ ಹೇಳ್ತಿನಿ, ನಾಳೆನೆ ದೇವರು ನಿನಗೆ ಒಂದು ಪತ್ರ ಬರಿತ್ತಾನೆ, ಸರಿ ನನಗಿಗ ಕೆಲಸ ಇದೆ ನೀನು ಹೊಗಿ ಮಲಗು ಎಂದು ಹೇಳಿ ರಾಘವ್ ಅಂಕಲ್ ತಮ್ಮ ಮನೆಯೆಡೆಗೆ ಹೋರಟರು.
                                     *****************
                ಕಿಡಕಿ ಪಕ್ಕ ಕೂಳಿತು ದಾರಿಯನ್ನೆ ದಿಟ್ಟಿಸುತ್ತಿದ್ದ ಅಮಲ್ ಗೆ ದಾರಿಯಲ್ಲಿ ಬರಿತ್ತಿದ್ದ ಒಬ್ಬ ಹುಡಗಿ ಕಂಡಳು, ಅವಳನ್ನು ನೋಡಿದ ಅಮಲ್ "ಓಯ್" ಎಂದು ಕೂಗಿದ, ಇವನ ದ್ವನಿ ಕೆಳೀದ ಬಾಲಕಿ ಕಿಡಕಿಯ ಬಳಿ ಬಂದು
ಏನು ಎಂದಳು?
ಯಾರು ನೀನು?
ಸುಧಾ?
ಯಾವ ಸುಧಾ?
ನಿನಗೆ ಗೋತಿಲ್ಲವ್ವಾ? ನಾನು ಹೂ ಮಾರುವವನ ಮಗಳು ಸುಧಾ.
ನೀನು ಏನು ಮಾಡ್ತಿಯಾ?
ನಾನು ದಿನವು ಹೂ ತೊಟಕ್ಕೆ ಹೊಗಿ ಬುಟ್ಟಿಯಲ್ಲಿ ಹೂ ಕಿತ್ತು ತರ್ತಿನಿ, ನಮ್ಮಪ್ಪಾ ಅವನ್ನು ಮಾರ್ತಾನೆ. ನೀನು ಏನು ಮಾಡ್ತಿಯಾ?
ನಾನು ಇಡಿದಿನ ಈ ಕಿಡಕಿ ಪಕ್ಕ ಕುಳಿತು ಹೊರಗಡೆ ನೋಡ್ತಾ ಇತಿ೯ನಿ.
ಯಾಕೆ ಮನೆ ಹೊರಗಡೆ ಬರಲ್ವಾ?
ಇಲ್ಲ ನನ್ನ ಆರೋಗ್ಯ ಸರಿಯಿಲ್ಲ, ಡಾಕ್ಟರ್ ಹೊರಗಡೆ ಹೋಗೂದು ಬೇಡಾ ಅಂದಿದ್ದಾರೆ.
ಹೋ ಹಾಗಾದ್ರೆ ನಿನು ಮನೆವಳಗಡೆನೆ ಇರು ಡಾಕ್ಟರ್ ಯಾವಗಲು ಸರಿಯಾಗೆ ಹೆಳ್ತಾರೆ, ಸರಿ ನನಗೆ ಲೇಟ್ ಆಕ್ತಾ ಇದೆ, ಲೇಟ್ ಆದ್ರೆ ಅಪ್ಪ ಬೈತಾರೆ ನಾನು ಹೊಗುತ್ತೆನೆ.
ಹೇ ಸುಧಾ... ನಾನು ಸರಿಯಾದ ಮೇಲೆ ನೀನ್ನ ಜೋತೆ ಹೂ ಕಿಳೊಕೆ ನಾನು ಬತ್ರಿನಿ ನನ್ನು ಕರೆದುಕೊಂಡು ಹೊಗು.
ಆಯ್ತು..
ಸಂಜೆ ಇದೆ ದಾರಿಲಿ ಬಾ, ನಿ ಕಿತ್ತ ಹೂ ನನಗೆ ತೊರಿಸು.
ಸರಿ ಸರಿ ಆಯ್ತು ಸಂಜೆ ಸಿಗ್ತಿನಿ.
ಸುಧಾ ಮರಿಬೇಡ..... ಸುಧಾ ಅದಾಗಲೆ ರಸ್ತೆಯ ತಿರುವಿನಲ್ಲಿ ಮರೆಯಾಗಿದ್ದಳು
                                  ******************
              ಕೆಲ ಸಮಯದ ಬಳಿಕ ಬಾಲನೊಬ್ಬ ಚೆಂಡು ಬ್ಯಾಟಿನಿಂದ ಅದೆ ರಸ್ತೆಯಲ್ಲಿ ಬಂದನು, ಅವನನ್ನು ಕಂಡ ಅಮಲ್ ಅವನ ಕೈಯಲ್ಲಿಂದ ಬ್ಯಾಟ್ ನೋಡಿ "ಹೇ ಏನದು"ಎಂದು ಕೇಳಿದ ಅದಕ್ಕೆ ಭಾಲಕ
ಇದು ಬ್ಯಾಟ್ ನಾನು ಕ್ರಿಕೆಟ್ ಆಡಾಲು ಹೋಗ್ತಾ ಇದ್ದೆನೆ.
ಕ್ರಿಕೆಟ್...? ಹೇಗೆ ಆಡ್ತಾರೆ..? ಒಂದ ಸಲ ಆಡಿ ತೋರಿಸು.
ನನ್ನ ಜೋತೆ ಗ್ರೌಂಡಿಗೆ ಬಾ ಅಲ್ಲೆ ನೋಡೂವಂತೆ.
ಇಲ್ಲ ನನ್ನ ಆರೋಗ್ಯ ಸರಿಯಿಲ್ಲ, ಅಲ್ಲಿಗೆ ಬರೊಕೆ ಆಗಲ್ಲ.
ಹೌದಾ ಸರಿ ಬಿಡು ನವು ಅಲ್ಲಿ ದಿನಾ ಆಡ್ತಿವೆ ನೀನ್ನ ಆರೋಗ್ಯ ಸರಿಯಾದ ಮೇಲೆ ನನ್ನ ಜೋತೆ ಬಾ, ನಿನಗು ಆಟ ಆಡಲು ಕಲಿಸ್ತಿನೆ.
ನಿಜವಾಗಲು...?
ಪ್ರಾಮಿಸ್.
ಆಯ್ತು ಕೆಲವೆ ದಿನಗಳಲ್ಲಿ ನನ್ನ ಆರೋಗ್ಯ ಸರಿಯಾಗುತ್ತೆ ಅಂತಾ ಅಪ್ಪಾ ಹೇಳಿದ್ದಾರೆ, ಆವಾಗ ನಾನು ನಿನ್ನ ಜೋತೆ ಆಟ ಆಡ್ತಿನಿ.
ಆಯ್ತು ನಾನು ಬರ್ತಿನಿ ನನ್ನ ಪ್ರೆಂಡ್ಸ ಕಾಯ್ತಾ ಇತ್ರಾರೆ, ಎಂದ ಬಾಲಕ ಕೆಲವೆ ಕ್ಷಣಗಳಲ್ಲಿ ಅಲ್ಲಿಂದ ಓಡಿ ಹೊಗಿದ್ದ.
      ಅಮಲ್ ಗೆ ಯಾಕೊ ಕಣ್ಣಿಗೆ ಮಂಜು ಕವಿದಂತಾಯಿತ್ತು ನಿಧಾನವಾಗಿ ಎಂದು ತನ್ನ ಹಾಸಿಗೆ ಬಳಿ ಬಂದು ಮಲಗಿದ
                                       *******************
                      ಸಂಜೆ ವೇಳೆಗಾಗಲೆ ಅಮಲ್ ಆರೋಗ್ಯ ಪರಿಸ್ಥಿತಿ ಗಂಭಿರವಾಗಿತ್ತು, ಕಣ್ಣು ಸುತ್ತಲು ಕಪ್ಪನೆಯ ಕಲೆ ಆವರಿಸಿತ್ತು, ಅವನಿಗೆ ಎಲ್ಲವು ಮಂಜು ಮಂಜಾಗಿ ಕಾಣಿಸಿತಿತ್ತು, ಮಾದವರಾಯರಿಗೆ ಏನು ಮಾಡಬೇಕು ತಿಳಿಯದೆ ಉಕ್ಕುತಿದ್ದ ದುಂಖವನ್ನು ತಡೆದುಕೊಂಡು ಮಗನ ಬಳಿ ಕುಳಿತಿದ್ದಾರೆ ಅದೆ ಸಮಯಕ್ಕೆ ರಾಘವ್ ಅಂಕಲ್ ಅಲ್ಲಿಗೆ ಬಂದರು.
       "ಅಮಲ್ ಅಮಲ್ ಪುಟ್ಟಾ ನೋಡು ನಿನಗೆ ಪತ್ರ ಬಂದಿದೆ, ಪೋಸ್ಟಮನ್ ಈಗತಾನೆ ಕೋಟ್ಟು ಹೊದ" ರಾಘವ್ ಅಂಕಲ್ ಮಾತು ಕೆಳಿ ಪ್ರಯಾಸದಿಂದ ಕಣ್ಣು ತೆರೆದು "ನಿಜವಾಗಲು...? ದೇವರು ನನಗೆ ಇಷ್ಟು ಬೇಗ ಪತ್ರ ಬರೆದನಾ? ಏನು ಬರೆದಿದ್ದಾನೆ?" ಎಂದನು, ರಾಘವ್ ಅಂಕಲ್ ತಮ್ಮ ಕೈಯಲ್ಲಿದ್ದ ಪತ್ರವನ್ನು ಅಮಲ್ ಬಳಿ ಬಂದು ಅವನ ಕೈಯಲ್ಲಿ ಇಟ್ಟರು,
"ಅಂಕಲ್ ಇದರಲ್ಲಿ ಏನು ಬರೆದಿದೆ? ನನಗೆ ಓದೊಕೆ ಬರಲ್ಲ, ನಾನು ದೊಡ್ಡವನಾಗಿ ಓದೊದು ಕಲಿತು ನಾನೆ ಈ ಪತ್ರ ಓದುತ್ತೆನೆ, ಉತ್ತರವನ್ನು ನಾನೆ ಬರೆಯುತ್ತೆನೆ ಅಲ್ಲಿಯವರೆಗು ಇದು ನನ್ನ ಹತ್ತಿರವೆ ಜೋಪಾನವಾಗಿ ಇರುತ್ತದೆ" ಎಂದು ಮೆಲ್ಲಗೆ ಪತ್ರ ತನ್ನ ಎದೆಗೆ ಹಚ್ಚಿಕೊಂಡು ನಿಧಾನವಾಗಿ ಕಣ್ಣು ಮುಚ್ಹಿ ತನ್ನ ಕೋನೆಯ ಊಸಿರಿನೊಂದಿಗೆ ಚಿರ ನಿದ್ರೆಗೆ ಜಾರಿದ.
   ಅದೆ ಸಮಯಕ್ಕೆ ಸರಿಯಾಗಿ ಕಿಡಕಿಯಲ್ಲಿ ಬಾಲಕಿಯೊಬ್ಬಳು "ಅಮನ್ ಅಮನ್" ಎಂದು ಕೂಗಿದಳು, ಅವಳ ಮಾತು ಕೇಳಿ ರಾಘವ ಅಂಕಲ್ ಕಿಡಕಿಯ ಬಳಿ ಬಂದರು, ಅವರನ್ನು ಕಂಡ ಬಾಲಕಿ
ಅಂಕಲ್ ಅಮನ್ ಇಲ್ವಾ?
ಇಲ್ಲಮ್ಮ ಅವನು ಈಗತ್ತಾನೆ ಮಲಗಿದ್ದಾನೆ.
ಏವಾಗ ಏಳ್ತಾನೆ?
ಗೊತ್ತಿಲ್ಲ... ತುಂಭಾ ಹೊತ್ತಾಗಬಹುದು.
ಹೌದಾ... ಅಂಕಲ್ ನನಗೆ ಒಂದು ಸಹಾಯ ಮಾಡ್ತಿರಾ?
ಹಾ... ಹೇಳು?
ಅವನು ಎದ್ದ ತಕ್ಷಣ ಅವನ ಕಿವಿಯಲ್ಲಿ ನಿನ್ನ ನೋಡೊಕೆ ಸುಧಾ ಬಂದಿದ್ದಳು, ಅವಳು ನೀನ್ನ ಮರೆತಿಲ್ಲ, ಎಂದು ಹೆಳಿ ಅವನಿಗೆ ಈ ಹೂ ಕೊಡಿ... ಎಂದು ಹೇಳಿ ರಾಘವ ಅಂಕಲ್ ಕೈಯಲ್ಲಿ ಒಂದು ಹೂ ಕೊಟ್ಟು ಹೊರಟು ಹೋದಳು.
 ರಾಘವ್ ಅಂಕಲ್ ಕಣ್ಣಿನಿಂದ ಕಂಬನಿಯೊಂದು ಜಾರಿ ಹೂ ಮೆಲೆ ಬಿದ್ದಿತು, ಪಡುವಣದಲ್ಲಿ ಸೂಯ೯ಕೂಡ ತನ್ನ ದಿನದ ಪ್ರಯಾಣ ಮುಗಿಸಿ ಅಸ್ತಮಿಸಿದ್ದ.
            *****************************************************************

Saturday, January 14, 2012

ಖಾಸ್ ಬಾತ್...


ನಮ್ಮ ಅವ್ವಾ ಹೇಳಿದಳು
ಅಕಿ ಡಾಕ್ಟರ್ ಅದಾಳ
ನೀ ಇಂಜಿನಿಯರ್ ಅದಿ
ಇಬ್ರು ಜೋಡಿ ಬಾಳ ಚಲೂ ಅಕತಿ.


ಅದಕ ನಾ ಹೇಳಿದೆ
ಏನ್ ಖಾಸ್ ಚಲೂ ಅಕತಿ
ಕಟ್ಟಿಗೊಂಡ ಒಂದ ವಷ೯ಕ್ಕ
ಎತ್ತ ಏರಿಗೆ ಎಳಿತು
ಕೋಣ ನೀರಿಗೆ ಎಳಿತು
ಅನ್ನಂಗ ಅಕತಿ.


ಸುಮ್ಮನ ಗಾದಿ ಯಾಕ ಕೆಡುಸ್ತಿ
ಅಕಿ ಕೋಣ ಅಲ್ಲ
ನೀ ಎತ್ತ ಅಲ್ಲ
ನಿಮೀಬ್ರು ಜೋಡಿ ಚಂದ ಕಾಣ್ತತಿ ಅಷ್ಟ.


ಏನ್ ಚಂದ ನಿನ್ನ ತಲಿ
ಅಕಿ ನೋಡಿದರ ದುಂಡ ಕಲ್ಲ ತರ ದಪ್ಪ ಅದಾಳ
ನಾ ನೋಡಿದರ ಕಡ್ಡಿತರ ತಳ್ಳಗ ಅದನಿ
ಒಂದ್ ವೇಳೆ ನಾ ಎಮ್ಮೆ ಮದುವೆ ಯಾದ್ರು
ಕೋಣನ ತರ ಇರ ಅಕಿ ವಲ್ಲೆ.


ಎಮ್ಮಿ ಕಟ್ಟಕೊತಿ ನೀ...? ಒಳ್ಳೆದು ಕಟ್ಟಕೊ
ನೀನ್ನ ಹಣೆ ಬರಹಾ ನಾ ಎನ್ ಮಾಡ್ಲಿ
ನಡಿ ನಾಳೆ ಸಂತಿಗೆ ಹೋಗಿ ನಿನಗ
ಚಂದದ ಒಂದ ಕರೆ ಎಮ್ಮೆ ತರೋಣ...

ತೋಚಿದ್ದು-ಗೀಚಿದ್ದು

ಇವತ್ತು ಮತ್ತೆ ಆಕಾಶದಲ್ಲಿ ನಕ್ಷತ್ರಗಳು ಸ್ಪಷ್ಟವಾಗಿ ಕಾಣಿಸುತ್ತಿವೆ, ಯಾಕೋ ಮೋಡಗಳಿಗೆ ನಮ್ಮೂರಿನ ದಾರಿ ಮರೆತಹಾಗಿದೆ, ಈ ವರ್ಷವೂ ಮುಂಗಾರು ಕೈ ಕೊಡುವ ಲಕ್ಷಣಗಳೂ ಕಾ...