Monday, May 9, 2011

ನನ್ನ "ಮನೆತನ"ದ ಇತಿಹಾಸ


               "ಇತಿಹಾಸ" ಯಾವಾಗಲು ನನ್ನ ನೆಚ್ಚಿನ ವಿಷಯ, ಮಾಡಲು ಏನು ಕೆಲಸವಿಲ್ಲದಿದ್ದಾಗ ಏಹುದಾದರು ವ್ಯಕ್ತಿಯ ಅಥವಾ ದೇಶದ ಇತಿಹಾಸ ಕೆದಕುತ್ತಲೆ ಇರುತ್ತೆನೆ, ಹೀಗೆಯೆ ಅದೂಂದು ದಿನ ಸುಮ್ಮನೆ ಕುಳಿತು ಯಾವುದಾದರು ಇತಿಹಾಸ ಕೇದಕೊಣ ಎಂದು ಯೋಚಿಸುತ್ತಾ ಕುಳಿತಾಗ ಕಣ್ಣಿಗೆ ಬಿದಿದ್ದು ನನ್ನ ಹೆಸರಿನ ಮುಂದೆ ಇದ್ದ "ನಂದಿಗಾವಿ" ಎಂಬ ಶಬ್ದ, ಸರಿ ಇಂದು ನಮ್ಮ ಮನೆತನದ ಇತಿಹಾಸ ತಿಳಿಯೊಣ, ನಮ್ಮ ಮನೆತನಕ್ಕೆ ನಂದಿಗಾವಿ ಎಂಬ ಹೆಸರು ಹೇಗೆ ಬಂತು, ನಮ್ಮ ಪೂವ೯ಜರ ಇತಿಹಾಸವೇನು ಎಂಬ ಪ್ರಶ್ನೆಗಳು ನನ್ನ ತಲೆ ಹೂಕ್ಕವು. ನೋಡೊಣ ಎಂದು ಅಪ್ಪ, ಅಮ್ಮನನ್ನು ಕೇಳಿದರೆ ಅವರಿಗೆ ನಮ್ಮ ಮುತ್ತಾತನ ಹೆಸರೆ ಸರಿಯಾಗಿ ಗೋತ್ತಿಲ.
              ನಮ್ಮ ಮನೆತನದ ಇತಿಹಾಸವನ್ನು ಯಾರಲ್ಲಿ ಕೇಳುವದು? ಹೇಗೆ ತಿಳಿಯುವದು? ಎಂಬ ಪ್ರಶ್ನೆಗಳು ನನ್ನನ್ನು ಕಾಡುತ್ತಿದವು, ಅದಕ್ಕೆ ಉತ್ತರವಾಗಿ ಅಂದೂಂದು ದಿನ ನಮ್ಮ ಮನೆಗೆ ಹೆಳವರು (ಹೇಳುವವರು) ಬಂದರು, ತಕ್ಷಣವೆ ಅವರ ಬಳಿ ಹೋಗಿ ದಯವಿಟ್ಟು ನಮ್ಮ ಮನೆತನದ ಇತಿಹಾಸದ ಬಗ್ಗೆ ಹೇಳಿ ಎಂದಾಗ ತಮ್ಮ ಬಟ್ಟೆ ಗಂಟಿನಲ್ಲಿ ಇಟ್ಟಿದ್ದ ಹಳೆಕಾಲದ ಎರಡು ಪುಸ್ತಕ ತೆರೆದು ಅದರಲ್ಲಿ ಏನೂ ಹುಡಕಿ ಸ್ವಲ್ಪ ಸಮಯದ ಬಳಿಕ ನನ್ನ ಮನೆತನದ ಇತಿಹಾಸ ಹೇಳಲು ಆರಂಬಿಸಿದರು ( "ಹೆಳವರು" ಇವರು ಅಲೆಮಾರಿ ಜನಾಂಗದವರು, ಕೆಲವು ಕುಂಟುಂಬಗಳ ಮಾಹಿತಿಗಳನ್ನು ತಲ-ತಲಾಂತರಗಳಿಂದ ಸಂಗ್ರಹಿಸಿ ಇಟ್ಟುಕೂಳ್ಳುವುದೆ ಅವರ ಕೆಲಸ, ವಷ೯ಕ್ಕೆ ಒಂದುಸಾರಿ ತಮಗೆ ಸಂಬಂದಿಸಿದ ಮನೆತನದವರಿಂದ ಏನಾದರು ದಾನ ಪಡೆದು ಮತ್ತೆ ತಮ್ಮ ಅಲೆಮಾರಿ ಪ್ರಯಾಣ ಮುಂದುವರೆಸುವರು).
             ಸುಮಾರು 300 ವಷ೯ಗಳಿಗು ಹಿಂದೆ ಗುಲ್ಬಗ೯ ಬಳಿ ಒಂದು ಚಿಕ್ಕ ಹಳ್ಳಿಯಲ್ಲಿ (ನನಗೆ ಆ ಹಳ್ಳಿಯ ಹೆಸರು ಮರೆತು ಹೊಗಿದೆ) ಒಂದು ಚಿಕ್ಕ ಕುಂಟುಂಬವಿತ್ತು, ಮೂದಲೆ ಬಿಸಿಲಿನ ನಾಡಾದ ಗುಲ್ಬಗ೯ ಜಿಲ್ಲಿಯಲ್ಲಿ 3-4 ವಷ೯ಗಳಿಂದ ಸತತವಾಗಿ ಬರಗಾಲ ಬಂದ ಕಾರಣ ಆ ಚಿಕ್ಕ ಕುಂಟುಂಬ ತನ್ನ ಸಮಸ್ತ ಆಸ್ತಿಯನ್ನಲ್ಲೆ ಮಾರಿ ಹೋಸ ಜೀವನದ ಅನ್ವೇಷಣೆಯಲ್ಲಿ ಮಧ್ಯ ಕನಾ೯ಟಕದತ್ತ ಪ್ರಯಾಣ ಬೆಳಸಿತು ಹೀಗೆ ವಲಸೆ ಬಂದ ಅ ಕುಂಟುಂಬ ನೆಲಸಿದ್ದು ಇಗಿನ ದಾವಣಗೇರೆ ಜಿಲ್ಲೆಯ ಹರಿಹರ ತಾಲ್ಲೂಕಿನ ತುಂಗಭದ್ರಾ ನದಿ ದಂಡೆಯಲ್ಲಿ ಇರುವ "ನಂದಿಗಾವಿ" ಎಂಬ ಗ್ರಾಮದಲ್ಲಿ, ನದಿಯ ಪಕ್ಕದಲ್ಲೆ ಜಮೀನು ಮತ್ತು ಮನೆ ಮಾಡಿಕೊಂಡಿದ್ದರು ಆದರೆ ಕೇಲವೆ ವಷ೯ಗಳಲ್ಲಿ ಆ ಕುಂಟುಂಬಕ್ಕೆ ಮತ್ತೆ ಆಘಾತ ಕಾದಿತ್ತು, ಈ ಬಾರಿ ಸುರಿದ ಬಾರಿ ಮಳೆಯಿಂದ ತುಂಗಭದ್ರಾ ನದಿಯಲ್ಲಿ ಪ್ರವಾಹ ಬಂದು ಜಮೀನು ಮನೆಯಲ್ಲಾ ನೀರುಪಾಲಾಯಿತು ಮತ್ತೆ ಆ ಕುಂಟುಂಬ ಬಿದಿಪಾಲಯಿತು, ಕೊನೆಗೆ ನಂದಿಗಾವಿ ಗ್ರಾಮವನ್ನು ತೋರೆದು ನೆಡೆದವರಿಗೆ ಕರೆದು ಆಶ್ರಮ ಕೋಟ್ಟ ಊರು ಇಂದಿನ ಹಾವೇರಿ ಜೀಲ್ಲೆಯ ರಾಣೆಬೆನ್ನುರು ತಾಲ್ಲೂಕಿನ ಗುಡ್ಡದಬೇವಿನಹಳ್ಳಿ ಗ್ರಾಮ, ನಂದಿಗಾವಿ ಎಂಬ ಗ್ರಾಮದಿಂದ ಬಂದಿದ್ದರಿಂದ ಗುಡ್ಡದಬೇವಿನಹಳ್ಳಿಯ ಜನ ಪ್ರೀತಿಯಿಂದ "ನಂದಿಗಾವಿಯವರು" ಎಂಬ ಅಡ್ಡ ಹೆಸರಿನಿಂದ ಕರೆಯಲಾರಂಬಿಸಿದರು ಮುಂದೆ ಅದೆ ನಮ್ಮ ಮನೆತನದ ಹೆಸರಾಯಿತು.
           ಅಂದು ಕೇವಲ ಒಂದು ಚಿಕ್ಕ ಕುಂಟುಂಬವಾಗಿದ್ದ ಆ ಮನೆತನ ಇಂದು ಹಲವು ಕುಂಟುಂಬಗಳಾಗಿ ಮಾಪ೯ಟ್ಟಿದೆ, ಗುಡ್ದದಬೇವಿನಹಳ್ಳಿಯಲ್ಲಿಯೆ ನಂದಿಗಾವಿ ಮನೆತನಕ್ಕೆ ಸೇರಿದ ಸುಮಾರು 25 ಮನೆಗಳಿದ್ದು ಅಷ್ಟೆ ಅಲ್ಲದೆ ಕೆಲಸದ ಮೇಲೆ ಹೋಗಿ ಅನೇಕ ಕುಂಟುಂಬಗಳು ರಾಣೇಬೆನ್ನುರು,ಹಾವೇರಿ, ಹರಪನಹಳ್ಳಿ, ಹುಬಳ್ಳಿ, ಬೆಂಗಳೂರು, ಪುಣೆ ಮತ್ತು ವಿದೇಶಗಳಲ್ಲೂ ನೆಲೆಸಿದ್ದಾರೆ.
          ಇದು ಹೇಳವರು ಹೇಳಿದ ನನ್ನ ಮನೆತನದ ಇತಿಹಾಸ ಇದು ಎಷ್ಟೂ ನಿಜವೂ ದೇವರೆ ಬಲ್ಲ, ಆದರೆ ಹರಿಹರದ ಬಳಿ ತುಂಗಭದ್ರಾ ನದಿದಂಡೆಯಲ್ಲಿ ನಂದಿಗಾವಿ ಎಂಬ ಗ್ರಾಮ ಇರುವದು ನಿಜ, ಕಳೆದ ತಿಂಗಳು ಕೂತುಹಲದಿಂದ ಅಲ್ಲಿಗೆ ಹೋಗಿ ಬಂದಿದ್ದೆ, ಅದಕ್ಕೆ ನನಗೆ ಹೇಳವರ ಮಾತಿನ ಮೇಲೆ ನಂಬಿಕೆ ಬಂದಿದ್ದು, ಆದರು ನಿಜವಾದ ಇತಿಹಾಸ ಆ ದೇವರೆ ಬಲ್ಲ.

No comments:

Post a Comment

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...