Monday, July 8, 2013

ಪುಣೆ ಎಂಬ ಮಳೆಗಾಲದ ಸುಂದರಿ

ನಾನು ಪುಣೆಗೆ ಬಂದು ಸುಮಾರು ೮ ತಿಂಗಳುಗಳಾದವು, ನಾನು ಮೊದಲ ಸಲ ಪುಣೆಗೆ ಬಂದಿದ್ದು ೨೦೦೭ರಲ್ಲಿ, ನಂತರ ಅನೇಕ ಸಲ ಇಲ್ಲಿಗೆ ಬಂದರು ಇದಿದ್ದು ಮಾತ್ರ ಒಂದು ಏರಡು ದಿನ ಮಾತ್ರ, ಕಳೆದ ವಷ೯ದ ಕೊನೆಯಲ್ಲಿ ನನಗೆ ಇಲ್ಲೆಯೆ ಕೆಲಸ ಸಿಕ್ಕಿದ ನಂತರ ನಾನು  ಇಲ್ಲೆ ಇರುವುದು ಅನಿವಾಯ೯ವಾಯಿತು.


ಪ್ರತಿ ವಿಷಯದಲ್ಲು ಪುಣೆಯನ್ನು ಬೆಂಗಳೂರಿನೊಂದಿಗೆ ಹೊಲಿಸುತ್ತಾ ಪುಣೆಯನ್ನು ಸದಾ ಜರಿಯುತಿದ್ದೆ ಇದಕ್ಕೆ ನನಗೆ ಬೆಂಗಳೂರಿನ ಮೇಲೆ ಇದ್ದ ವಿಷೇಶ ಪ್ರೀತಿಯು ಕಾರಣವಿರಬಹುದು, ಇಲ್ಲಿನ ಬಾಗಿಲು-ಕಿಡಕಿಗಳಿಲ್ಲದ ಸಿಟಿ ಬಸ್ ಗಳನ್ನು, ಟ್ರಾಪಿಕ್ ಸಿಗ್ನಲ್ ನ್ನು ಕೇರ್ ಮಾಡದ ಜನರನ್ನು ಮತ್ತು ಅದನ್ನು ನೋಡಿದರು ಏನು ಮಾಡದೆ ಸುಮ್ಮನ್ನೆ ಇರುವ ಪೋಲಿಸರನ್ನು, ಇಲ್ಲಿಯ ವಡ-ಪಾವ, ಪೋವೆಯ ಜೋತೆ ಚಪಾತಿಯನ್ನು, ಬೇಸಿಗೆಯ ಸುಡುಬಿಸಿಲನ್ನು, ಚಳಿಗಾಲದ ಮೈ ಕೊರೆಯುವ ಚಳಿಯನ್ನು, ಅಥ೯ವಾಗದ ಮರಾಠಿ ಚಿತ್ರಗಳನ್ನು, ಗುರುವಾರದ ಕಿಚಡಿಯನ್ನು ಹೀಗೆ ಪ್ರತಿ ವಿಷಯದಲ್ಲೂ ಪುಣೆಯನ್ನು ಹೀಯಾಳಿಸುತ್ತಿದ್ದ ನಾನು, ಕೇವಲ ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆಯುವುದರಲ್ಲಿ ಪುಣೆಯ ಅದ್ಬುತವಾದ ಪ್ರಕ್ರುತಿ ಸೌಂಧಯ೯ಕ್ಕೆ ಸೋತು ಹೋಗಿರುವೆನು, ಫುಣೆ ಎಂಬ ಮಳೆಗಾಲದ ಸುಂದರಿಯ ಮೇಲೆ ನನಗೆ ಮೊದಲ ಸಲ ಪ್ರೀತಿ ಮೂಡಿದೆ.ಪುಣೆಯ ವಿಷೇಶತೆಯೆಂದರೆ ಇದನ್ನು ಆವರಿಸಿರುವ ಬೇಟ್ಟಗಳ ಸಾಲುಗಳು, ಮಳೆಗಾಲದ ದಿನಗಳಂದು ಹಚ್ಹ-ಹಸಿರಿನ ಉಡುಪಿನಿಂದ ಈ ಬೇಟ್ಟಗಳು ಕಂಗಳಿಸುತ್ತವೆ, ಪ್ರತಿ ಮುಂಜಾನೆ ಬೇಟ್ಟಗಳಿಗೆ ಸಾನ್ನಮಾಡಿಸಲೆಂದೆ ಬರುವ ಮುಂಜಾನೆಯ ಮಳೆ, ಕೈ ಚಾಚಿದರೆ ಸಿಗುವಷ್ಟು ಕೆಳಗೆ ಬೇಟ್ಟಗಳಿಗೆ ಮುತ್ತಿಕಲು ದರಿಗಿಳುದು ಬರುವ ಸಾಲು ಸಾಲು ಮೋಡಗಳು, ಜೋತೆಗೆ ಬಿಸುವ ತಣ್ಣನೆ ಗಾಳಿ, ಅಬ್ಬಾ ಪುಣೆಯ ಮಳೆಗಾಲದ ಮುಂಜಾವುಗಳನ್ನು ವಣಿ೯ಸಲು ಅಕ್ಷರಗಳೆ ಸಾಲವು, ಅದರ ಸೋಬಗು ನೋಡಿದವನೆ ಧನ್ಯ, ಶನಿವಾರವಾಡಾ, ಸಿಂಘಡ್, ಪಿರಾಗ ಗುಟ್ಟ್ ಘಾಟ್, ಲೋಣಾವಾಲಾ ಡ್ಯಾಮ್, ಖಂಡಾಲಾ ಘಾಟ್, ಕಾತ್ರಜ್ ಝೊ, ಪುಣೆ ಯುನಿವ೯ಸಿಟಿ ಎಂಬ ನಿಗುಡ ಕಾಡು.... ಪಟ್ಟಿ ಬೆಳೆಯುತ್ತಲೆ ಹೊಗುತ್ತದೆ.
ಇನ್ನು ಪುಣೆಯ ಮಳೆಗಾಲದ ಈ ಸಂಜೆಗಳೂ ಅಷ್ಟೆ, ಸುಯ೯ ಅಸ್ತನಾಗುತಿದ್ದಂತೆಯೆ ಮತ್ತೆ ಮಳೆಯು ಪ್ರತ್ಯಕ್ಷವಾಗುತ್ತದೆ, ಮನೆಗೆ ಹೊಗುವವರಿಗೆಲ್ಲ ವಿಧಾಯ ಹೇಳಲು ಬಂದಂತೆ, ಸಂಜೆಯ ಮಳೆಯ ಜೋತೆಗೆ ಬಿಸಿ ಬಿಸಿ ವಡಾ-ಪಾವ್ ಕೂಡ ಇಷ್ಟವಾಗತೋಡಗಿದೆ, ಇನ್ನು ನಗರದ ಮಧ್ಯದಲ್ಲಿ ಹರಿಯುವ ಎರಡು ನದಿಗಳು ನಗರದ ಸೌಂಧರ್ಯವನ್ನು ಇನ್ನೂ ಹೇಚ್ಹಿಸಿವೆ, ನಾಗರಹಾವಿನ ಹಾಗೆ ಹೊಳಪುಳ್ಳ ಮತ್ತು ಅಂಕು-ಡೊಂಕಾಗಿರುವ ಪುಣೆ-ಮುಂಬೈ ಎಕ್ಸಪ್ರೆಸ್ ವೇ ನಲ್ಲಿ ಘಂಟೆಗೆ ನೂರೈವತ್ತರ ವೇಗದಲ್ಲಿ ಪ್ರಯಾಣೆಸುವಾಗ ಸಿಗುವ ರೋಮಾಂಚನ ಅದ್ಬುತ,
                                                            ಬೆಂಗಳೂರು ಏಷ್ಟೆ ಆಧುನಿಕ, ಮುಂದುವರೆದ ನಗರವಾದರು ಅದು ಪುಣೆಯನ್ನು ಮೂರು ವಿಷಯಗಳಲ್ಲಿ ಮಾತ್ರ ಮಿರಿಸಲು ಸಾಧ್ಯವಿಲ್ಲ. ಮೂದಲನೆಯದು ಪ್ರಕ್ರುತಿ ಸೌಂಧರ್ಯ, ಎರಡನೆಯದು ಇಲ್ಲಿನ ಆಧುನಿಕ ಕಾರುಗಳನ್ನು, ಹೌದು ಬಹುಷ್ಯ ಭಾರತದಲ್ಲೆ ಅತಿ ಹೆಚ್ಹಿನ ಮಸಿ೯ಡಿಜ್, ಆಡಿ, ಬಿ ಎಮ್ ಡಬ್ಲೂ ಕಾರುಗಳು ಪುಣೆಯಲ್ಲಿ ಇವೆ, ಪುಣೆಯ ಗಲ್ಲಿ-ಗಲ್ಲಿಗಳಲ್ಲಿ ಈ ಕಾರುಗಳ ದಶ೯ನವಾಗುತ್ತದೆ, ಇನ್ನು ಮೂರನೆಯದು ಪುಣೆಯ ಹುಡಗಿಯರು... ಓ ದೇವರೆ ಪುಣೆ ಹುಡಿಗಿಯರ ಸೌಂಧರ್ಯಕ್ಕೆ ಪುಣೆ ಹುಡಿಗಿಯರೆ ಸಾಟಿ ಇದಕ್ಕಿಂತ ಹೆಚ್ಹಿನ ವಣ೯ನೆ ಅಸಾಧ್ಯ, ಹಮ್ ಏಷ್ಟೆ ಬೇಡವೆಂದರು ನಾನಂತು ’ಪುಣೆ’ ಎಂಬ ಮಳೆಗಾಲದ ಸುಂದರಿಗೆ ಮನಸೋತು ಹೋಗಿದ್ದೆನೆ

ತೋಚಿದ್ದು-ಗೀಚಿದ್ದು

ಇವತ್ತು ಮತ್ತೆ ಆಕಾಶದಲ್ಲಿ ನಕ್ಷತ್ರಗಳು ಸ್ಪಷ್ಟವಾಗಿ ಕಾಣಿಸುತ್ತಿವೆ, ಯಾಕೋ ಮೋಡಗಳಿಗೆ ನಮ್ಮೂರಿನ ದಾರಿ ಮರೆತಹಾಗಿದೆ, ಈ ವರ್ಷವೂ ಮುಂಗಾರು ಕೈ ಕೊಡುವ ಲಕ್ಷಣಗಳೂ ಕಾ...