ಅಂದು ನಾನು ಬಾಲವಿಲ್ಲದ ಕಪಿ
ಇಂದು ನಾನು ಪ್ರಾಸವಿಲ್ಲದ ಕವಿ
ಕಪಿಗು ಕವಿಗು ಇಲ್ಲ ಅಂತರ
ಇಬ್ಬರದು ಒಂದೇ ತಂತರ
ಕಪಿಯ ಆತುರ ಕವಿಯಂತೆ
ಕವಿಯ ಕೌತುಕ ಕಪಿಯಂತೆ
ಕಪಿಗೆ ಕಂಡೆದೆಲ್ಲೆ ಹಿಡಿಯುವ ಆತುರ
ಕವಿಗೆ ಕಂಡೆದೆಲ್ಲೆ ಬರೆಯುವ ಕಾತುರ
ಕಪಿಗಳೆಲ್ಲ ಸೇರಿದರೆ ಕಪಿಚೇಷ್ಟಿ
ಕವಿಗಳೆಲ್ಲ ಸೇರಿದರೆ ಕವಿಗೋಷ್ಠಿ
ಕಪಿಗಳಿಗೆ ಮುಗಿಯದ ತುರಿತ
ಕವಿಗಳದು ಮುಗಿಯದ ಕೊರೆತ
ಬರೆದೆ ಕಪಿಗಳ ಮೇಲೆ ಕವಿತೆ
ಆದರು ಓದಲಿಲ್ಲ ಜನತೆ
ಒಂದಂತು ನಿಜ ನಾನ್ನಲ್ಲ ಕಪಿ
ನಾನು ಪ್ರಾಸವಿಲ್ಲದ ಕವಿ
ಹ್ಹ ಹ್ಹ ಹ್ಹಾ! ಎಂಥಾ ಹೋಲಿಕೆ ಸ್ವಾಮಿ... ಕಪಿಗಳಿಗೂ ಕವಿಗಳಿಗೂ... ಇಂಥ ಕವನ ಎಲ್ಲೂ ನೋಡಿರಲಿಲ್ಲ! ವಿಶಿಷ್ಟ ಕವನ ನಿಮ್ಮದು!
ReplyDeletethank you...
Deleteಒಂದಂತು ನಿಜ ನಾನ್ನಲ್ಲ ಕಪಿ
ReplyDeleteನಾನು ಪ್ರಾಸವಿಲ್ಲದ ಕವಿ
ಹೌದು ನಾನು ಕವಿ, ಕಪಿ ಅಲ್ಲ
DeleteGud1 Prashanth..... :).....
ReplyDeleteha ha....
ಕಪಿಗಳೆಲ್ಲ ಸೇರಿದರೆ ಕಪಿಚೇಷ್ಟಿ
ಕವಿಗಳೆಲ್ಲ ಸೇರಿದರೆ ಕವಿಗೋಷ್ಠಿ
ಕಪಿಗಳಿಗೆ ಮುಗಿಯದ ತುರಿತ
ಕವಿಗಳದು ಮುಗಿಯದ ಕೊರೆತ
thank you sir
Deleteಕಪಿಯಾದರೆ ಕವಿಯಾಗಲು ಸಾಧ್ಯ...ವರ್ಣಮಾಲೆಯಲ್ಲಿ ’ಪ’ ಮೊದಲಿಗೆ.
ReplyDeleteತುಂಬಾ ಚನ್ನಾಗಿದೆ ಹೋಲಿಕೆ ಕೋರಿಕೆ ಹಾರಿಕೆ ....
thank you
Deleteವಾಹ್ .. ಕಪಿಗು ಕವಿಗು ಇಲ್ಲ ಅಂತರ ಇಬ್ಬರದು ಒಂದೇ ತಂತರ.. ಇಷ್ಟವಾಯ್ತು ಕ(ಪಿ)ವಿಗೂ ಕ(ವಿ)ಪಿಗೂ ಇರುವ ಅಂತರ ...
ReplyDeletethank you...
Deleteಎಷ್ಟು ಚೆನ್ನಾಗಿ ಹೋಲಿಕೆ....
ReplyDeleteಚೆನ್ನಾಗಿದೆ.
thank you sir
DeleteNijavada maatugalu.
ReplyDeletethank you
Deleteಕವಿ... ಕಪಿಯ ವರ್ಣನೆ ಹೋಲಿಕೆ ಸೊಗಸಾಗಿದೆ
ReplyDeleteಕವಿ ಕಪಿಯಾಗಬಲ್ಲ.. ಕಪಿ ಕವಿಯಾಗಬಲ್ಲ
(ಕವಿ=ಕನ್ಯಾ ವೀಕ್ಷಕ...
ಕಪಿ=ಕನ್ಯಾ ಪಿತೃ)
thanksss
Deleteನನ್ನ ಬಗ್ಗೆ ಏನಪ್ಪಾ ಬರೆಯೋಣ ಅಂತ ಹುಡುಕುತ್ತಿದ್ದೆ, ಅಂತೂ ನಿಮ್ಮ ಕವಿತೆಯಲ್ಲೇ ನನ್ನ ಬಗ್ಗೆಯೇ ಬರೆದಂತಿರುವ ಸಾಲುಗಳು ಕಂಡು ಧಿಲ್ ಖುಷ್ ಆಗೋಯ್ತು.
ReplyDelete" ಅಂದು ನಾನು ಬಾಲವಿಲ್ಲದ ಕಪಿ
ಇಂದು ನಾನು ಪ್ರಾಸವಿಲ್ಲದ ಕವಿ" :-D
http://badari-poems.blogspot.in
thankss sir
Delete