Wednesday, July 25, 2018

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ ಉಂಟು, ಪ್ರಶ್ನೆ ಕೇಳಿದ ಎಲ್ಲರಿಗೂ ನಾನು ಇದೆ ಕಥೆ ಹೇಳುವದು. "ಒಂದು ಸಾರಿ ರಾಣಿ ಎಲಿಜಬೆತ್ ಲಂಡನ್ ನಿಂದ ಮದ್ರಾಸ್ ಗೆ ಹೋಗುತ್ತಿದ್ದರು, ಹಡಗಿನಲ್ಲಿ ಪ್ರಯಾಣ, ಇನ್ನೇನು ಮದ್ರಾಸ್ ಹತ್ತಿರ ಇದೆ ಅಂದಾಗ ಹಡಗು ಕೆಟ್ಟು ಹೋಯಿತು, so ಸಮೀಪದ ಬಂದರಿನಲ್ಲಿ ಹಡಗು ನಿಲ್ಲಿಸೋಣ ಅಂತಾ ಕ್ಯಾಪ್ಟನ್ ಮ್ಯಾಪ್ ನೋಡಿದಾಗ ಕಂಡಿದ್ದು ಕಾರವಾರ, ಕಾರವಾರದ ಬಂದರಿಗೆ ರಾಣಿ ಇದ್ದ ಹಡಗು ಬಂತು, ರಾಣಿ ಸ್ವಲ್ಪ ಅರ್ಜೆಂಟ್ ಕೆಲಸದ ನಿಮ್ಮಿತ್ತ ಬಂದಿದ್ದರಿಂದ ಹಡಗು ಸರಿಯಾಗುವ ತನಕ ಕಾಯುವುದಕ್ಕೆ ಆಗುವುದಿಲ್ಲವೆಂದು ಭೂ ಮಾರ್ಗವಾಗಿ ಮದ್ರಾಸಗೆ ಹೊರಟರು,
ಕಾರವಾರ ಯಲ್ಲಾಪುರ ಶಿರಸಿ ಹಾವೇರಿ ಮಾರ್ಗವಾಗಿ ನಮ್ಮ ಊರು ತಲುಪಿದಾಗ ರಾತ್ರಿ, ಇವತ್ತು ಇಲ್ಲೇ ಇದ್ದರಾಯಿತು ಎಂದು ನಿರ್ಧರಿಸಿದ ರಾಣಿ ನಮ್ಮ ಊರಿನ ಗೌಡಪ್ಪನ ಮನೆಗೆ ಹೋದಳು, ಗೌಡಪ್ಪ ಖುಷಿಯಿಂದ ರಾಣಿಯನ್ನು ಸ್ವಾಗತಿಸಿದ, ಅದು ಮಳೆಗಾಲ ದೋ ಎಂದು ಮಳೆ ಸುರಿಯುತ್ತಿತ್ತು, ಗೌಡಪ್ಪನ ಮನೆಯ ಒಂದು ಕಡೆ ಹಂಚು ಒಡೆದು ಸೋರುತಿತ್ತು, ರಾಣಿಗೆ ಗೌಡಪ್ಪ "ಬಿಸಿ ಬಿಸಿ ಜೋಳದ ರೊಟ್ಟಿ ಜೋತೆ ಮಣಿಸಿನಕಾಯಿ ಚಟ್ನಿ ಮಾಡಿಸೀನಿ ತಿನ್ನುವಂತೆ ಬಚ್ಚಲಿಗೆ ಹೋಗಿ ಕೈಕಾಲು ಮುಖ ತೋಳಕೊಂಡು ಬಾ" ಅಂದ, ಬಚ್ಚಲ ಕಡೆ ಹೋಗುತ್ತಿದ್ದ ರಾಣಿ ಸರಿಯಾಗಿ ನೋಡದೆ, ಮಳೆ ನೀರು ಸೋರುತಿದ್ದ ಕಡೆ ಹೋಗಿ ಆ ಹಸಿಯಾದ ನೆಲದ ಮೇಲೆ ಕಾಲು ಇಟ್ಟು ಜಾರಿ ಬಿದ್ದರು, ಬಿದ್ದ ರಭಸಕ್ಕೆ ರಾಣಿಯ ಬೆನ್ನ ಊನವಾಯಿತು, ಅಂದಿನಿಂದ ಭಾರತದ ಸಮಸ್ತ ಜನರೆಲ್ಲಾ ನಮ್ಮ ಊರಿಗೆ "ರಾಣಿ ಬೆನ್ನು ಊನವಾದ ಉರು" ಅಂತ ಕರೆಯಲು ಆರಂಭಿಸಿದರು ಕಾಲ ಕ್ರಮೇಣ ಅದು ರಾಣೇಬೆನ್ನೂರು ಎಂದಾಯಿತು.

No comments:

Post a Comment

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...