Friday, August 31, 2012

ಸದಾ ಕಾಡುವ ಕನಸು...

                      ಕಳೆದ ಒಂದೂವರೆ ವಷ೯ದಿಂದ ಒಂದು ವಿಚಿತ್ರವಾದ ಕನಸು ಕಾಡುತಿದೆ, ವಾರದಲ್ಲಿ ಒಂದುಸಲವಾದರು ಬಂದೆ ಬರುತ್ತದೆ, ನಿಧಾನವಾಗಿ ಚಲಿಸುತ್ತಿರು ರೈಲು, ಚಲಿಸುತ್ತಿರುವ ರೈಲಿನ್ನು ಹತ್ತಲು ಪ್ರಯತ್ನಿಸುತ್ತಿರು ಕೆಲವ ಜನರ ಗುಂಪು, ಆ ಗುಂಪಿನಲ್ಲಿ ನಾನು ಕೂಡ ಇದ್ದೆನೆ, ಎಲ್ಲ ಜನರು ಓಡಿ ಚಲಿಸುತ್ತಿರುವ ರೈಲನ್ನು ಹತ್ತಲು ಯಶಸ್ವಿಯಾಗುತ್ತಾರೆ ನಾನು ಇನ್ನೆನು ಹತ್ತಬೇಕು ಅಂದಾಗ ರೈಲು ವೇಗವಾಗಿ ಚಲಿಸುತ್ತದೆ, ನಾನು ಏಷ್ಟೆ ವೇಗವಾಗಿ ಓಡಿದರು ರೈಲು ಮಾತ್ರ ನನಗೆ ಸಿಗುವುದೆ ಇಲ್ಲ, ಕೊನೆಗೆ ಒಬ್ಬಂಟಿಯಾಗಿ ಉಳಿದು ಬಿಡುತ್ತೆನೆ.
               ಪ್ರತಿ ಬಾರಿಯು ಇದೆ ಕನಸು ಆದರೆ ಜನರ ಗುಂಪು ಮತ್ತು ರೈಲು ಚಲಿಸುವ ಸ್ಥಳ ಮಾತ್ರ ಬೇರೆ ಬೇರೆ ಆಗಿರುತ್ತದೆ, ಆದರೆ ಪ್ರತಿಬಾರಿಯು ಜನರ ಗುಂಪಿನಲ್ಲಿ ನಾನು ಇರುತ್ತೆನೆ ಮತ್ತು ರೈಲು ನನಗೆ ಮಾತ್ರ ಸಿಗುವುದೆ ಇಲ್ಲ, ಸುಮಾರು ಒಂದೂವರೆ ವಷ೯ದಿಂದ ಅದೆಸ್ಟು ಬಾರಿ ಈ ಕನಸು ನನಗೆ ಕಾಡಿದೆಯು ಲೆಕ್ಕವಿಲ್ಲ. ಆದರೆ ನಿಜ ಜೀವನದಲ್ಲಿ ಇದುವರೆಗು ನಾನು ಒಂದು ಬಾರಿಯು ರೈಲನ್ನು ಮಿಸ್ ಮಾಡಿಕೊಂಡಿಲ್ಲ(ಆದರೆ ಬಸ್ ನ್ನು ತುಂಭಾ ಸಲ ಮಿಸ್ ಮಾದಿಕೊಂಡಿದ್ದೆನೆ ಅದು ಬೇರೆ ಮಾತು), ಪ್ರತಿ ಸಲವು ಕನಸಿನಲ್ಲಿ ನನಗೆ ಮಾತ್ರ ರೈಲ್ ಏಕೆ ಸಿಗುವುದಿಲ್ಲ? ಈ ಪ್ರಶ್ನೆಗೆ ಉತ್ತರ ಹುಡಕಿ ಹುಡಕಿ ನನಗಂತು ಸಾಕಾಗಿ ಹೊಗಿದೆ, ಈ ಕನಸಿನ ಅಥ೯ವಾದರು ಏನು?
            ಕನಸಿನ ಅಥ೯ವೇನೆಯಿರಲಿ, ಮುಂದೆ ಒಂದು ದಿನ ಖಂಡಿತಾ ಆ ರೈಲನ್ನು ಹತ್ತೆ ಹತ್ತುತ್ತೆನೆ ಮತ್ತು ಅದೆಲ್ಲಿಗೆ ಹೋಗುತ್ತದೆ ಎಂಬದನ್ನು ಕಂಡು ಹಿಡಿಯುತ್ತೆನೆ ಎಂಬ ನಂಬಿಕೆ ಮಾತ್ರ ಇದೆ, ಇದು ಬರಿ ಕನಸೆ ಅಥವಾ ಇದಕ್ಕೆ ಏನಾದರು ವೀಶೆಷ ಅಥ೯ವೊಂಟೆ?

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...