Wednesday, May 4, 2011

ಒಂದು ಮುಂಜಾವಿನಲಿ.....


                                                     ಬೆಳಗಿನ 5 ಗಂಟೆ.... ಇನ್ನು ಸೂಯ೯ ಉದಯಿಸಿಲ್ಲ ಆಗಲೆ ನಮ್ಮ ಓಣಿಯ ಕೋನೆಯಲ್ಲಿ ಇರುವ ಮುಸ್ಲಿಂರ ಮನೆಯ ಕೋಳಿಗಳು ಕೂಗಲು ಪ್ರಾರಂಬಿಸುತ್ತವೆ, ಅವುಗಳ ಕೂಗನ್ನು ಕೇಳಿ ನಮ್ಮ ಮನೆಯ ಎರಡು ನಾಯಿಗಳು ಬೋಗಳಲು ಆರಂಬಿಸುತ್ತವೆ ಅದರಲ್ಲೂ ನಮ್ಮ ಸಣ್ಣ ನಾಯಿಗಂತು ಅವರ ಮನೆಯ ಕೋಳಿಗಳು ಅಂದರೆ ಪಂಚಪ್ರಾಣ ಎಷ್ಟೊ ಸಾರಿ ಅವುಗಳನ್ನು  ಬೀಟೆಯಾಡಿ ಭಜ೯ರಿ ಬೋಜನ ಮಾಡಿದೆ, ನಾಯಿಗಳ ಬೋಗಳುವಿಕೆ ಕೇಳಿ ಅಮ್ಮ ಏದ್ದು ಅವುಗಳನ್ನು ಆಚೆಗೆ ಓಡಿಸುತ್ತಳೆ, ಆಗಲೆ  ಸಮಯ 5.40 ಪೂವ೯ದಲ್ಲಿ ಸೂಯ೯ನ ಆಗಮನದ ಸೂಚನೆಯಲ್ಲಿ ಅಲ್ಪ ಬೇಳಕು ಮೂಡಲು ಆರಂಬಿಸುತ್ತದೆ, ಹೋಲದಲ್ಲಿ ಕೆಲಸ ಮಾಡಲು ಹೋಗುವ ರೈತವಗ೯ದ ಜನರು ತಮ್ಮ ದೈನಂದಿನ ಬೆಳಗಿನ ಕಾಯ೯ಗಳನ್ನು ಆರಂಬಿಸುತ್ತಾರೆ.
                        
               ಸಮಯ 6..... ಭಾನಂಗಳದಲ್ಲಿ ಕೆಂಬಣ್ಣದ ಓಕಳಿ ಆಡುತ್ತಾ ಬಾಸ್ಕರನ ಆಗಮನವಾಗುತ್ತೆ, ಊರ ಸೇವಕ ಈರಪ್ಪ ನಳಗಳಲ್ಲಿ ನೀರು ಬಿಡಲು ಮೋಟಾರ್ ಆನ್ ಮಾಡಲು ಬೇಟ್ಟದೆಡೆಗೆ ಹೊಗುತ್ತಾನೆ, ಊರಿನ ಬಹುತೇಕ ಜನರು ಎದ್ದು ದೈನಂದಿನ ಕಾಯ೯ಯದಲ್ಲಿ ಮುಗ್ನರಾಗುತ್ತಾರೆ, 6.30ಕ್ಕೆ ನಳದಲ್ಲಿ ನೀರು ಬರಲು ಆರಂಭ, ಸ್ವಂತ ನಳ ಇಲ್ಲದ ಜನರು ನೀರಿಗಾಗಿ ಸಾವ೯ಜನಿಕ ನಳಗಳ ಬಳಿ ಜಮಾಯಿಸುತ್ತಾರೆ, ಆರಂಭದಲ್ಲಿ ನಗುಮುಖದೊಂದಿಗೆ ನಳದ ಬಳಿ ಆಗಮಿಸುವ ಮಹಿಳೆಯರು ಮಾತಿಗೆ ಮಾತು ಬೆಳಸಿ ಕೋನೆಗೆ ಮೆಲ್ಲಗೆ ಜಗಳ ಆರಂಬಿಸುತ್ತಾರೆ, ಅದರಲ್ಲು ಬಾಯಿ ಬಡುಕಿಯರಾದ ಮೂಲೆ ಮನೆಯ ಪಾರವ್ವ, ಪಕ್ಕದ ಮನೆಯ ಕಮಲವ್ವ ಮತ್ತು ಗಿರಿಜವ್ವ ಇದ್ದರಂತು ಮುಗಿದೆ ಹೊಯಿತು ಅವರ ಬಾಯಿಯಲ್ಲಿ ಬರುವ ಆ ಅಪ್ಪಟ್ಟ ಗ್ರಾಮ್ಯ ಬಾಷೆಯ ಸಂಸ್ಕ್ರುತ ಮಾತುಗಳನ್ನು ಕೇಳಿ ನಮ್ಮ ಕಿವಿಗಳು ಪಾವನವಾಗುತ್ತವೆ, ನೀರು ನಿಲ್ಲುವ ಸಮಯಕ್ಕೆ ಅಧ೯ ಸ್ನಾನವನ್ನು ಮುಗಿಸಿರುತ್ತಾರೆ, ಕೋನೆಗೆ ಏನು ಆಗಿಲ್ಲ ಅನ್ನುವಂತೆ ನಗು-ನಗುತ್ತಾ ಮನೆಗೆ ಹೋಗುತ್ತಾರೆ, ಅಷ್ಟರಲ್ಲೆ ಊರ ಪುಜಾರಪ್ಪ ಊರ ದೇವರಾದ ಬಸವಣ್ಣನಿಗೆ ತನ್ನ ಪೂಜೆಯನ್ನು ಅಪಿ೯ಸಿರುತ್ತಾನೆ.
                    ಸಮಯ 7.... ಇದು ನಾನು ನೀದ್ರೆಯಿಂದ ಎಳುವ ಸಮಯ, ಎದ್ದವನೆ ಬಚ್ಚಲು ಮನೆಗೆ ಹಲ್ಲುಜಲ್ಲು ಹೋಗುತ್ತೆನೆ ಅಲ್ಲಿ ನಲ್ಲಿಯಲ್ಲಿ ನೀರು ಬರುತ್ತಿರುತ್ತದೆ, ಆ ನೀರಿನಲ್ಲಿ ಆಟ ಆಡುತ್ತಾ ಮುಖ ತೋಳೆಯುವದೆ ಒಂದು ಮಜಾ, ನಂತರ ಟೀ ಕುಡಿಯುತ್ತಾ ಪೇಪರನವನಿಗಾಗಿ ಕಾಯುವದೆ ನನ್ನ ಕೆಲಸ, ಎಂದು ಸಮಯಕ್ಕೆ ಸರಿಯಾಗಿ ಬಾರದ ಆತ ವಿಷೇಶ ದಿನಗಳಂದು ಇನ್ನು ಲೇಟ್, 8.30ಕ್ಕೆ ಕೂಲಿಗೆ ಹೊಗುವ ಮತ್ತು ರೈತಾಪಿ ಜನ ತಮ್ಮ ಭುತ್ತಿಯ ಗಂಟುಗಳೊಂದಿಗೆ ಎತ್ತಿನ ಬಂಡಿಯಲ್ಲಿ ಹೋಲಗಳತ್ತ ತಮ್ಮ ಪ್ರಯಾಣಾ ಬೆಳಸುತ್ತಾರೆ, ಆ ಎತ್ತಿನ ಗಂಟೆಗಳ ಸದ್ದು, ಬಂಡೆಯ ಸದ್ದು ಕೆಳುವುದೆ ಚನ್ನ.
                    ಸಮಯ 9.... ಇಗ ನಮ್ಮ ಊರಿಗೆ ಸಕಾ೯ರಿ ಬಸ್ ಬರುವ ಸಮಯ, ಬಣ್ಣ-ಬಣ್ಣದ ಸಮವಸ್ತ್ರ ಧರಿಸಿದ ಚಿಕ್ಕ ಮಕ್ಕಳು, ಗರಿ-ಗರಿ ವಸ್ತದರಿಸಿದ ಹುಡುಗರು ಮತ್ತು ಅಂದ-ಚಂದದ ಚೂಡಿದಾರ ದರಿಸಿದ ಹುಡಗಿಯರು ಹೀಗೆ ಎಲ್ಲರು ಪಕ್ಕದ ಊರಿನ ಕಾನ್ವೆಂಟ್, ಶಾಲೆ ಮತ್ತು ಕಾಲೇಜ್ ಗೆ ಹೂಗಲು ತಯಾರಾಗಿ ಬಸ್ ಗಾಗಿ ಕಾಯುತ್ತಿರುತ್ತಾರೆ, ಎಂದಿಗು ಸರಿಯದ ಸಮಯಕ್ಕೆ ಬಾರದ ಬಸ್ ಅಧ೯ಗಂಟೆ ತಡವಾಗಿ ಬಂದು ಎಲ್ಲ ಮಕ್ಕಳನ್ನು ತನ್ನ ಒಡಲಿನಲ್ಲಿ ತುಂಬಿಕೊಂಡು ಭರ್ರೆಂದು ಧುಳು ಎಬ್ಬಿಸುತ್ತಾ ಮರೆಯಾಗುತ್ತದೆ.
          
                 ಸಮಯ 10.... ಇಗ ನಮ್ಮುರಿನ ಪರಮ ಸೋಮಾರಿ "ಮಲ್ಲಪ್ಪ" ನಿದ್ರೆಯಿಂದ ಏಳುವ ಸಮಯ ಮಹಾನ್ ಸೋಮಾರಿ ತನ್ನ ಹೆಂಡತಿ ಮಕ್ಕಳನ್ನು ಗೋಳು ಹೋಯಿಕೋಳ್ಳುವದೆ ಅವನ ಕಾಯಕ, ನಂತರ 10.30ಕ್ಕೆ ಬಣಕಾರ ಅಜ್ಜ ತಮ್ಮ ಮನೆಯ ಎಮ್ಮೆಗಳನ್ನು ಮೇಯಿಸಲು ಗುಡ್ಡಕ್ಕೆ ಹೋಡೆದುಕೋಂಡು ಹೋಗುವೂದರೊಂದಿಗೆ ನಮ್ಮುರಿನ ಮುಂಜಾವಿನ ಸಂಬ್ರಮಕ್ಕೆ ತೆರೆ ಬಿಳುತ್ತದೆ.

No comments:

Post a Comment

ಬೆಂಗಳೂರು ಡೈರಿ

    ರಾಜಭವನ Road ಮೂಲಕ ನಾವು ಮೆಜೆಸ್ಟಿಕ್ ಕಡೆ ಹೋಗುವಾಗ ಬಸವೇಶ್ವರ ಸರ್ಕಲ್ ಬರುತ್ತೆ ಅಲ್ಲಿ ಸುಮಾರು 150 ಸೆಕೆಂಡ್ ಗಳ ಸಿಗ್ನಲ್ ಇದೆ, ನಾವು ಪ್ರತಿ ಸಂಜೆ ಅದೇ ರಸ್ತ...