Tuesday, April 17, 2012

Time Pass...


ಅಂಕಲ್ Birthday cake ಸಂಜೆ 7.30ಕ್ಕೆ ಬೇಕು ಅದರ ಮೇಲೆ "Happy birthday Dear….. " ಹ್ಹಾ ಇದು ನನ್ನ ಲೈಪ್ ನಲ್ಲಿ ನಾನು order ಮಾಡ್ತಾ ಇರೂ 19 cake ಅನ್ನಿಸುತ್ತೆ, ಅಲ್ಲಾ ನನಗೆ 23 ವಷ೯ ಇದುವರೆಗು ಒಂದು ಸಲಾನು cake cut  ಮಾಡಲಿಲ್ಲ, cake ಮೇಲೆ ನನ್ನ ಹೆಸರು ನೋಡಲಿಲ್ಲ ಆದ್ರೆ ಬೇರೆಯವರಿಗೆ ಅಂತಾ 19 times order ಮಾಡಿದ್ದೆನೆ What the hell I am doing?
ಸರ್ 220 ಕೋಡಿ
ಹ್ಹಾ... ರ್ರಿ ಲಾಸ್ಟ್ ಟೈಮ್ 180 ಕೊಟ್ಟಿದ್ದೆ
ಅದು ಅವಾಗಾ ಸರ್, ಈಗ ಸಕ್ಕರೆ ರೇಟು, ಮೋಟ್ಟೆ ರೇಟು ಏಷ್ಟು ಆಗೆದೆ ಗೋತ್ತಾ?
ಸರಿ ನನಗು ಬೇಡ ನಿಮಗು ಬೇಡ 200 ತಗೋಳಿ
ಆಗಲ್ಲಾರಿ 1 ರೂಪಾಯಿನೂ ಕಡಿಮೆ ಆಗಲ್ಲ, 100 ರೂಪಾಯಿ ಅಡ್ವಾನ್ಸ್ ಇವಾಗಲೆ ಕೊಟ್ಟು ಹೋಗಿರಿ,
ಬಡ್ಡಿಮಗಾ 1 ರೂಪಾಯಿನೂ ಬಿಡಲ್ಲಾ ಅಂತಾನೆ next time ಬೇರೆ ಬೇಕರಿಗೆ ಹೋಗ ಬೇಕು ಆವಾಗ ಬುದ್ದಿ ಬರುತ್ತೆ ಇವನಿಗೆ ಅಂತಾ ಮನಸ್ಸಿನಲ್ಲೆ ಬೈತಾ ಪಸ್೯ಗೆ ಕೈ ಹಾಕಿ 100 ರುಪಾಯಿ ತಗಿತಾ ಇದ್ದೆ ಅಷ್ಟರಲ್ಲೆ ಒಂದು sweet voice  ಕಿವಿಗೆ ಬಿತ್ತು
ಅಂಕಲ್ ನಿನ್ನೆ ಕೇಕ್ ಆಡ೯ರ್ ಕೋಟ್ಟಿದ್ದೆನ್ನಲ್ಲಾ ರೇಡಿ ಇದಿಯಾ?
ಕೇಕ್ ರೇಡಿ ಇದೆ, 160 ರೂಪಾಯಿ ಕೊಡಿ
ಹುಡಗಿ ಪಸ್೯ಗೆ ಕೈ ಹಾಕಿ 100 ರ ಒಂದು ಮತ್ತು 50 ರ ಇನ್ನೊಂದು ನೋಟು ತೆಗೆದು ’ಅಯ್ಯೂ ಅಂಕಲ್ 10 rupees change  ಇಲ್ಲಾ 150 ತಗೊಳಿ please...’ ಅವಳ ಮಾತಿಗೆ ಬೇಕರಿಯವನು 
ಅಯ್ಯೂ ಪರ್ವಾಗಿಲ್ಲಾ ಕೊಡಿ ಅನ್ನೊದಾ, ಬಡ್ಡಿಮಗಾ ನನಗೆ 1 ರೂಪಾಯಿನೊ ಬಿಡಲಿಲ್ಲಾ ಅವಳಿಗೆ 10 ರೂಪಾಯಿ ಬಿಡ್ತಾ ಇದ್ದಾನೆ, ನನಗು 10 ರೂಪಾಯಿ ಬಿಟ್ಟಿದ್ರೆ ಇವನ ಮನೆ ಹಾಳು ಆಗ್ತಾ ಇತ್ತಾ? ಇವನ ಹೆಸರು ಹೇಳಕೊಂಡು ನಾನು 2 ಸೀಗರೇಟ್ ಸಿದ್ತಾ ಇದ್ದೆ, ಛೇ ಹುಡುಗುರಾಗಿ ಹುಟ್ಟಬಾರದು,
Thanks uncle ಅಂತಾ ನಗ್ತಾ ನಿಂತಿದ್ದ ಅವಳ ಮುಖ ಒಂದು ಸಲ ನೋಡಿದೆ
Wow what girl ನಕ್ಕಾಗ ಅವಳ ಗಲ್ಲದ ಮೇಲೆ ಮೂಡೊ ಡಿಂಪಲ್ಸ್ ಏಷ್ಟು ಮುದ್ದಾಗಿ ಕಾಣುತ್ತೆ, ದೇವರು ಹುಡಗಿಯರ smileಗೆ ಅದೇನ್ ಶಕ್ತಿ ಕೊಟ್ಟಿದ್ದಾನೊ, ಎಲ್ಲ ಹುಡುಗರು ಅವರ smileಗೆ ಸೋತು ಬಿಡ್ತಾರೆ, ಇಷ್ಟೊಂದು cute ಆಗಿರೊ ಹುಡಗಿನಾ ನಾನು 1st  time ನೋಡ್ತಾ ಇರೊದು? ಹ್ಹಾ....... ಇಲ್ಲಾ ತುಂಭಾ ಸಲಾ ಆದರೆ 1st time ನೋಡಿದ್ದು.... ಹ್ಹಾ ನೆನಪಾಯಿತು "ಮೇಘನಾ" ಇವಳಿಗಿಂತಾ cute ಆಗಿದ್ದ ಹುಡಗಿ….
                                                 ********************
                                           “  ಅನು ದಿನವು ನಿನ್ನ ನೋಡಿ
ನಿನಾದೆ ನನ್ನ ಮೋಡಿ
             ನಿನೊಂದು ಸಾರಿ ನನ್ನ ನೋಡಿ ನಕ್ಕರೆ 
                  ನಾನ್ನಲೇ ಕರಗಿ ಹೋಗುವೆ”
     ಮಗಾ ನನ್ನ ಹೊಸ ಕವಿತೆ ಹೇಗಿದೆ?
ನಮ್ಮ HOD classನಲ್ಲಿ ಕೋನೆ deskನಲ್ಲಿ ನಾನು ಹರಿ ಕುಳುತಿದ್ದೆವೆ, ಅವನು ಶ್ರದ್ದೆಯಿಂದ Notes ಬರಿತಾ ಇದ್ದಾನೆ ನಾನು ಕವಿತೆ ಬರಿತಾ ಇದ್ದೆನೆ,
ಸುಮ್ಮನೆ ಬಾಯಿ ಮುಚ್ಚ್ಕೊಂಡು Notesಬರಿ ಮುಂದಿನ ವಾರ Class testಗೆ ಇದರಿಂದಾನೆ ಪ್ರಶ್ನೆ ಕೆಳೊದು, ಅಂದಾ ಹರಿ
ಲೋ... ಈ ತಾತ Sharp Seriesನಲ್ಲಿ ಇರೊದನ್ನೆ ಬರಸುತ್ತಾನೆ ಸಂಜೆ ಮನೆಗೆ ಬಾ Sharp Seriesತೋರಿಸ್ತೆನೆ
    ನಿಜವಾಗಲೂ....?
   ಹೌದಪ್ಪ HOD ಮೇಲಾಣೆ, ಇವಾಗ ಈ Poem ಹೇಗಿದೆ ಹೇಳು,
ರಾಯರ ಕಣ್ಣು ಅದ್ಯಾವ ಹುಡಗಿ ಮೇಲೆ ಬಿತ್ತು?, ಹರೀಷ್ ನನ್ನ ಬಾಲ್ಯ ಸ್ನೆಹಿತ, ನನ್ನನ್ನು ತುಂಭಾ ಚನ್ನಾಗಿ ಅಥ೯ ಮಾಡಿಕೊಂಡಿದ್ದಾನೆ,"ನಾವು ಏನು ಹೇಳದೆ ನಮ್ಮ ಮನಸ್ಸಿನ ಭಾವನೆಗಳನ್ನು ಅಥ೯ಮಾಡಿಕೊಳ್ಳುವವರೆ ನಿಜವಾದ ಸ್ನೆಹಿತರಂತೆ" ಎಲ್ಲೂ ಓದಿದ ನೆನಪು ಬಹುಷ್ಯ ಆ ಮಾತನ್ನು ನಮ್ಮಿಬ್ಬರನ್ನು ನೋಡೆ ಹೇಳಿರ ಬೇಕು ಅನಿಸುತ್ತೆ.
  ಅದೊ ಅಲ್ಲಿ ನಿಂತಿದ್ದಾಳಲ್ಲಾ ಗುಂಗರು ಕುದಲುಗಳ Brown color ಬ್ಯಾಗ ಹಿಡಿದಿರೂ ಹುಡಾಗಿ, She is too cute na ಕಿಡಕಿಯಲ್ಲಿ ಅವಳೆಡೆಗೆ ಕೈ ಮಾಡಿ ತೋರಿಸಿದೆ.
  ಹೊ ಅವಳಾ....!
  ಅವಳಾ ನಾ.....!!! ಅಂದ್ರೆ ಅವಳು ನಿನಗೆ ಗೊತ್ತಾ? ಹುಡಗಿಯರ ವಿಷಯದಲ್ಲಿ ಹರಿ ನನಗಿಂತ ಯಾವಾಗಲು ಒಂದು ಹೆಜ್ಜೆ ಮುಂದೆ, ಅವನನ್ನು ನನ್ನಿಂದ ಈ ವಿಷಯದಲ್ಲಿ ಮಿರಿಸೊಕೆ ಆಗಲ್ಲ.
  ಗೊತ್ತು ಅವಳ ಹೆಸರು ಮೆಘನಾ ಅಂತಾ High School head master ಮಗಳು ಇಡಿ ಊರಿಗೆ  No-1 beauty ಎಲ್ಲಾ ಕಾಲೇಜ್ ಹುಡುಗರು ಅವಳಿಗೆ ಲೈನ್ ಹೋಡಿಯೊದು, ಸುಮ್ಮನೆ ಅವಳ ವಿಷಯ ಬಿಟ್ಟ ಬಿಡು,
ಇಡಿ ಊರಿಗೆ ಅವಳು ರಾಣಿನಾ? ಹೆಂಗೆ ಅಳಿದ್ರು ಈ ಊರು ಒಂದು ಮುಕ್ಕಾಲು ಗೇಣ್ ಇಲ್ಲಾ ರಾಣಿಯಂತೆ ರಾಣಿ, ನೊಡು ಮಗಾ ನಮ್ಮ ಗುರುಗಳಾದ ರವಿ ಬೆಳಗೆರೆಯವರು ಮಗು ಏನೆ ಆಗಲಿ Lets try and See ಅಂತಾ ಹೆಳಿದಾರೆ so i will try and check my luck,
 Ok that’s your wish ಎಂದು ತನ್ನ ಬ್ಯಾಗ್ ತೆಗೆದುಕೊಂಡು ಹೊರಟಿದ್ದ ಹರಿ ಬಾಗಿಲಿನ ತನಕ ಹೋಗಿ ನಂತರ ನನ್ನೆಡಗೆ ತಿರುಗಿ "ಹೇ ಸುನ್ನಿ ಇವತ್ತು mechinical ಪವನ್  Birthday so please ಸಂಜೆ ಬೇಕರಿಗೆ ಹೊಗಿ ಕೇಕ್ ತಗೊಂಡು ಬಾ ಅವನಿಗೆ surprises ಕೊಡೊಣ ಮರಿಬೇಡ.  
Hey idiot don’t call me sunny, I don’t like it ಆಯ್ತು ತರ್ತಿನಿ,
ಇದುವರೆಗು ಸುಮಾರು ಸಾವಿರ ಸಲ ಹೆಳಿದ್ದಿನೆ ಸುನ್ನಿ ಅಂತಾ ಕರಿಬೇಡ ಅಂತಾ ಆದ್ರು ಮತ್ತೆ ಮತ್ತೆ ಹಂಗೆ ಕರಿತಾನೆ, ಸುನ್ನಿ ಅಂದ್ರೆ ಅದೂ ಮುಸ್ಲಿಂರ ಒಂದು ಬುಡಕಟ್ಟು ಜನಾಂಗದ ಹೆಸರಂತೆ, ಪಾಕಿಸ್ತಾನದಲ್ಲಿ ಸುನ್ನಿ ಮತ್ತು ಶಿಯಾಗಳು ಯಾವಾಗಲು ಜನಾಂಗದ ಹೆಸರಿನಲ್ಲಿ ಹೊಡೆದಾಡುತ್ತಾರಂತೆ ನನಗೆ ಜಾತಿ ಬಗ್ಗೆ ಮಾತಾಡಿದರೆ ಆಗಲ್ಲಾ ಅಂತಹುದರಲ್ಲಿ  ಸುನ್ನಿ ಸುನ್ನಿ ಅಂತಾ ಕರಿತಾರೆ idiot.
   ನಮ್ಮ ಅಮ್ಮ ನನಗೆ ಪ್ರೀತಿಯಿಂದ "ಸುನೀಲ್" ಅಂತಾ ಹೆಸರಿಟ್ಟಿದ್ದಾರೆ, ಅವಳಿಗೆ ನನ್ನನ್ನು ಸುನೀಲ್ ಅಂತಾ ಕರೆಯೊದು ಅಂದ್ರೆ ತುಂಭಾ ಇಷ್ಠ, ಬೇರೆ ಯಾರಾದ್ರು ನನ್ನನ್ನು nick nameಲ್ಲಿ ಕರದರೆ ಅಷ್ಟೆ she will scold them ಯಾಕೆ ಅಂದ್ರೆ ಅವಳು ಕಾಲೇಜ್ ಗೆ ಹೊಗುವಾಗ ಟೈಮ್ ನಲ್ಲಿ ನಮ್ಮ ಕನ್ನಡ ಹಿರೊ ಸುನೀಲ್ ನ ಅಭಿಮಾನಿ, ಅವನಾ ಎಲ್ಲಾ ಮೂವಿಸು ನೊಡ್ತಿದ್ರತ್ತೆ, ಒಂತರಾ ಅವನ ಮೇಲೆ ಲವ್. ಅದಕ್ಕೆ ನನಗು ಸುನೀಲ್ ಅಂತಾ ಹೇಸರಿಟ್ಟಿದ್ದಾರೆ, ಪಾಪಾ ಸುನೀಲ್ ಅವರು accident ಆಗಿ ತಿರಿಕೊಂಡಾಗ ಅಮ್ಮ ಒಂದು ವಾರ ಅತ್ತಿದರಂತೆ, ಕೊನೆಗೆ ನಮ್ಮ ಅಜ್ಜಿ "ಲೇ ಸಾಕು ಸುಮ್ಮನಾಗೆ ಆ ಮಾಲಾಶ್ರೀ ಕೂಡ ಸುನೀಲ್ ನೆನಸಿಕೊಂಡು ನಿನ್ನಷ್ಟು ಅತ್ತಿಲ್ಲಾ" ಅಂದಾಗ ನಮ್ಮ ಅಮ್ಮ ಸುಮ್ಮನಾದ್ರಂತೆ ನೋಡಿ ನಂದು ಎಂತಾ crazy family .                                                                  ************************
                     ಸಂಜೆ ಪವನ್ ರೂಮ್ ಗೆ ಹೋದೆವು ಅಲ್ಲಿ ಅವನ ಹುಟ್ಟುಹಬ್ಬದ ಪಾಟಿ೯ ತುಂಭಾ ಜೊರಾಗಿಯೆ ನೆಡಿಯುತ್ತಾ ಇತ್ತು, ಬಿಯರ್, ಸಿಗರೇಟ್, ನಾನ್ ವೇಜ್ ಎಲ್ಲಾ ಅಲ್ಲಿ ಇತ್ತು, ಹರಿ ಮತ್ತು ನಾನು ಪವನ್ ಗೆ ವಿಶ್ ಮಾಡಿದೆವು ನಾನು ಕೇಕ್ ಗೆ ಕೈ ಹಾಕಿದರಿ ಹರಿ ಮಾತ್ರ ಸಿದಾ ಬಿಯರ್ ಬಾಟಲ್ ಗೆ ಕೈ ಹಾಕಿದ, ನಾವು ಬಾಲ್ಯ ಸೇಹಿತರಾದರು ಅವನು ಕುಡಿಯುವ ಮತ್ತು ಸಿಗರೇಟ್ ಅದ್ಯಾವ ಕಲಿತನೊ ನನಗೆ ಗೊತ್ತೆ ಆಗಲಿಲ್ಲ ಆದರೆ ನಾನು ಮಾತ್ರ ಈ ವಿಷಯದಲ್ಲಿ ಇನ್ನು ಮುಗ್ದ, ರೂಮಿನ ತುಂಭಾ ಸಿಗರೇಟ್ ನ ಹೋಗೆ ತುಂಭಿದ್ದರಿಂದ ನಾನು ಕೆಲವು ಕೇಕ್ ಪೀಸ್ ತೆಗೆದು ಕೊಂಡು ರೂಮಿನ ಆಚೆ ಬಂದು ಕುಳಿತೆ, ಕೆಲವು ಸಮಯದ ಬಳಿಕ ಹರಿ ಕೈಯಲ್ಲಿ ಸಿಗರೇಟ್ ಹಿಡಿದು ಆಚೆ ಬಂದು ನನ್ನ ಬಳಿ ಕುಳಿತ.
ಲೋ ಹರಿ ಸಿಗರೇಟ್ ಯಾಕೊ ಸಿದ್ತಿಯಾ?
ನಿನಗೆ ಮೇಘನಾ ಯಾಕೆ ಇಷ್ಟಾ?
ನನ್ನ ಪ್ರಶ್ನೆಗೆ ಇದು ಉತ್ತರ ಅಲ್ಲಾ,
ನೀನು ಮೇಘನಾ ಯಾಕೆ ಇಷ್ಟಾ ಪಡ್ತಿಯಾ ಹೆಳು ಆಮೇಲೆ ನಿನ್ನ ಪ್ರಶ್ನೆಗೆ ಉತ್ತರ ಕೊಡ್ತಿನಿ,
ಅವಳನ್ನು ನೊಡಿದಾಗ ನನ್ನ ಮನಸ್ಸಿನಲ್ಲಿ ವಿಚಿತ್ರ ಬದಲಾವಣೆ ಆಗುತ್ತೆ, ಒಂದು ರೀತಿ ಹೆಳಲಾಗದ ತಳಮಳ, ನನ್ನ ಹ್ರುದಯದ ಬಡಿತ ಜೋರಾಗುತ್ತೆ, Every time I looking at her my heart always skipping a beat, for me she’s Angelina jolie my dream girl, and she’s too hot maga,
Ooyi stop stop day dreams are not good to health ಅವಳ ಜೊತೆ ಒಂದಸಾರಿನು ಮಾತಾಡಿಲಾ ಇವಾಗಲೆ ಇತರ, ಇನ್ನು ಅವಳೆನಾದ್ರ ನಿನ್ನ ನೋಡಿ ನಕ್ಕರೆ ಅಷ್ಟೆ.
ಅದ್ಯಾಲ್ಲಾ ನಿನಗ್ಯಕೆ? ಈಗ ಸಿಗರೇಟ್ ಯಾಕೆ ಸೆದ್ತಿಯಾ ಹೇಳು?
Because  cigarette is hot, when I smoke my heart always skipping two beats , its keeps my mind active, and when I smoke I think better than I can.
But its poison yar, it kills
Ya but slowly... ಹರಿ ಮಾತಿಗೆ ಏನು ಹೆಳ ಬೇಕೊ ತಿಳಿಯದೆ ಸುಮ್ಮನಾದೆ.
ಹೆ ಸುನ್ನಿಲ್ ನೀನು ನಿಜವಾಗಲು ಮೇಘನಾ ಬಗ್ಗೆ serious  ಆಗಿದೆಯಾ ಅಥವಾ just time pass?
I am really serious yaar, but why such a question?
ನೋಡು just time pass ಆದ್ರೆ ಸರಿ, but serious ಆಗಿ ಮಾತ್ರ ಅವಳನ್ನು ತಗೊ ಬೇಡ.
ಯಾಕೆ? ನಿನೇನಾದ್ರು ಅವಳಿಗೆ ಲೈನ್ ಹೋಡಿತಿದಿಯಾ?
ಇಲ್ಲಪ್ಪ, ನಾನು ಹೆಳ್ತಾ ಇರೊದೆಲ್ಲಾ ನಿನ್ನ ಒಳ್ಳೆದಕ್ಕೆ, just forget her


(Will be Continue)


                                                

Monday, April 2, 2012

"ವಸು"ಳ ಪ್ರೇಮ



ಕಾದಿಹಳು ವಸುಂಧರೆ ವರುಣನಿಗೆ
ಪ್ರೇಯಸಿಯ ಚುಂಭನಕ್ಕೆ ಪ್ರೇಮಿ ಕಾದಂತೆ
ಹಸುವ ಹಾಲುಣಲು ಕರು ಕಾದಂತೆ
ತುಂಬು ಗಭಿ೯ಣಿ ಮಗುವ ಆಗಮನಕ್ಕೆ ಕಾದಂತೆ


ವರುಣನ ಸ್ಪಶ೯ಕಾಗಿ ವಸುಂಧರೆ ಹಂಬಲಿಸಿಹಳು
ನವ ವಿವಾಹಿತರು ಮಧು ಚಂದ್ರಕ್ಕೆ ಹಂಬಲಿಸಿದಂತೆ
ಕರುವಿನ ಅಂಭಾ ಕೇಳಲು ಹಸು ಹಂಬಲಿಸಿದಂತೆ
ಮಗುವ ಮೊದಲ ತೊದಲು ನುಡಿಗೆ ತಾಯಿ ಹಂಬಲಿಸಿದಂತೆ


ಆದರೆಕೊ ವರುಣನಿಗೆ ವಸುಂಧರೆ ಮೇಲೆ ಮುನಿಸು
ದಿನವು ಸತಾಯಿಸುವ ಪ್ರೇಯಸಿ ಮೇಲೆನ ಪ್ರೇಮಿಯ ಮುನಿಸಂತೆ
ಚಿನ್ನಾಟವಾಡಲು ತನ್ನೊಡನೆ ಬಾರದ ಹಸುವಿನ ಮೇಲೆನ ಕರುವಿನ ಮುನಿಸಂತೆ
ತವರಿನಿಂದ ಬೇಗ ಬಾರದ ಹೆಂಡತಿ ಮೇಲಿನ ಗಂಡನ ಮುನಿಸಂತೆ

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...