Tuesday, June 25, 2013

ಹೀಗೊಂದು ಕಲ್ಯಾಣ

ದೂರದೂರಿನ ಕಲ್ಯಾಣಮಂಟಪದಲ್ಲಿಂದು
ನನ್ನ ಪ್ರೀತಿಯ ಜೀವಕೆ ಕಲ್ಯಾಣವಂತೆ
ವರನಾರೊ ನಾನರಿಯೆ
ವರನಾಗುವ ಅದ್ರುಷ್ಠ ನನಗಿಲ್ಲ

ಸಖಿಯರೆಲ್ಲೆ ಶ್ರಂಗರಿಸುತಿರುವರಂತೆ ಅವಳ
ನಾನರಿಯನೆ ಅವಳ ಚಲುವ...?
ಅವಳ ಹಸ್ತದಿ ಗಾಢ ಮದರಂಗಿಯಂತೆ
ಅದರ ಅಡಿ ಹುದಗಿ ಹೋಗಿರಬಹುದೆ ನನ್ನ ಹೆಸರು...?

ಅವಳ ಕಣ್ಣಂಚಲ್ಲಿ ಸಣ್ಣ ನೀರ ಬಿಂದುಗಳಂತೆ
ಅಲ್ಲಿರುವರಿಗೆ ಅದು ಆನಂದ ಭಾಷ್ಪವಂತೆ
ನನಗ್ಯಾಕೊ ಅನುಮಾನ
ಆನಂದ ಭಾಷ್ಪವೊ...? ನನ್ನ ಅಗಲಿಕೆಯ ನೋವೊ...?

ಸಂಜೆಯಷ್ಟಕೆ ಕಲ್ಯಾಣಮಂಟಪ ಖಾಲಿ ಖಾಲಿಯಂತೆ
ವರನ ಜೋತೆ ಕಾರಿನಲ್ಲಿ ಇವಳ ಪ್ರಯಾಣವಂತೆ
ನಾಳೆ ಅದೆ ಕಲ್ಯಾಣಮಂಟಪದಲ್ಲಿ ಇನ್ನೊಂದು ಮದುವೆಯಂತೆ
ಮತ್ತೆ ಅದ್ಯಾರ ಕಣ್ಣಲ್ಲಿ ನೀರೊ...?  ಆನಂದ ಭಾಷ್ಪವೊ...?

2 comments:

  1. ಕಲ್ಯಾಣ ಮಂಟಪಕ್ಕೆಲ್ಲಿ ಭಾವನೆ ಗೆಳೆಯ? ಈವತ್ತು ಇವರು ನಾಳೆ ಅವರು. ಅದಕ್ಕೆ ತುಂಬಾ ಬೇಕು ಹೊಟ್ಟೆ!
    ಕಳೆದುಕೊಂಡ ಆಕೆಯ ಬಗ್ಗೆ ತುಂಬಾ ತೀವ್ರವಾಗಿದೆ ಕಾವ್ಯದಲ್ಲಿ ಅಳಲು.
    http://badari-poems.blogspot.in/

    ReplyDelete

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...