Sunday, February 12, 2012

ನನಗ್ಯಾಕೆ ಈ ಶಿಕ್ಷೆ?


           ನಾನು ಕೆಳ ಮಧ್ಯಮ ಕುಟುಂಬದಲ್ಲಿ ಹುಟ್ಟಿದ ಮಹಿಳೆ, ನನ್ನ ಹೆಸರು ನಿಮಗೆ ಹೇಳುವ ಅವಶ್ಯಕತೆ ಇಲ್ಲ ಯಾಕಂದರೆ ಇದು ಬರಿ ನನ್ನ ಕಥೆಯಲ್ಲ ಭಾರದ ಬಹುತೇಕ ಬಡ ಮತ್ತು ಮಧ್ಯಮ ವಗ೯ದ ಮಹಿಳೆಯರ ಕಥೆ, ಮೊದಲೆ ಹೇಳಿದಂತೆ ನಾನು ಮಧ್ಯಮ ವಗ೯ದ ಕುಟುಂಬದಲ್ಲಿ ಹಿರಿಯ ಮಗಳಾಗಿ ಹುಟ್ಟಿದೆ, ನನ್ನ ಅಪ್ಪ ವ್ಯವಸಾಯವನ್ನೆ ಅವಲಂಬಿಸಿ ಜೀವನ ನೇಡಸುವವರು, ಅಪ್ಪ-ಅಮ್ಮ ಇಬ್ಬರು ಓದಲು ಬರೆಯಲು ಕಲಿತವರು, ನನಗೆ ಒಬ್ಬ ತಮ್ಮ ಮತ್ತು ತಂಗಿ ಕೊಡ ಇದ್ದಾರೆ. 
           ನನಗು ಚಿಕ್ಕಮಗುವಾಗಿದ್ದಾಗ ಓದ ಬೇಕು ಎಂಬ ತುಂಭಾ ಆಸೆ ಇತ್ತು, ಅಪ್ಪ-ಅಮ್ಮ ಇಬ್ಬರು ಓದು ಬರಹ ಬಲ್ಲವರಾದ್ದರಿಂದ ನನ್ನನ್ನು ಓದಿಸುತ್ತಾರೆ ಎಂದು ನಂಬಿದ್ದೆ ಆದರೆ  7ನೇ ತರಗತಿ ಮುಗಿಯುತ್ತಿದ್ದಂತೆ ನನ್ನನ್ನು ಶಾಲೆಯಿಂದ ಬಿಡಿಸಿ ಮನೆಗೆಲಸಕ್ಕೆ ಮತ್ತು ವ್ಯವಸಾಯದ ಕೆಲಸಕ್ಕೆ ಹಚ್ಹಿದರು, ನನ್ನ ಅಪ್ಪ ವಷ೯ಪೂತಿ೯ ದುಡಿದಿದ್ದನ್ನು ಯಗಾಧಿ, ದಿಪಾವಳಿಯ ಹಿಂದಿನ ದಿನದ ಇಸ್ಪೆಟ್ ಆಟದಲ್ಲಿ ಮುಳಗಿಸುತ್ತಿದ್ದರು ಇನ್ನು ನನ್ನ ಅಮ್ಮನಿಗೆ ಬರಿ ಅಕ್ಕ-ಪಕ್ಕದವರ ಬಗ್ಗೆ ಮಾತನಾಡುವುದರಲ್ಲೆ ಮಜ, ಇನ್ನು ನನ್ನ ತಮ್ಮನಿಗೆ ಡ್ರೈವಿಂಗ್ ಹುಚ್ಚು, 6 ತಿಂಗಳು ಮನೆಯಲ್ಲಿ ಇದ್ದರೆ ಇನ್ನಾರು ತಿಂಗಳು ಲಾರಿ ಡ್ರೈವಿಂಗೆ ಹೊಗಿತಿದ್ದ, ಉಳಿದಿದ್ದು ನನ್ನ ತಂಗಿ ಅವಳಿಗೆ ಆ ದೆವರು ಮಾತುಗಳನ್ನೆ ಕಿತ್ತು ಕೊಂಡು ಮುಕಿಯನ್ನಾಗಿಸಿದ್ದ ಇದು ನನ್ನ ಕುಟುಂಬದ ಸಂಕ್ಷಿಪ್ಪ ವಿವರಣೆ.
          2೦ನೇ ವಯ್ಯಸಿನಿವರೆಗೆ ಹೊಲ-ಮನೆಗೆಲಸಗಳನ್ನು ಮಾಡುತ್ತಾ ಇಂದೆಲ್ಲ ನಾಳೆ ನನಗು ಒಳ್ಳೆಕಾಲ ಬರುತ್ತೆ ನನ್ನ ಕಷ್ಟಗಳು ಕೊನೆಯಾಗುತ್ತವೆ ಎಂಬ ನಂಬಿಕೆಯಲ್ಲಿದ್ದ ನನಗೆ ನನ್ನ ಮದುವೆಯ ಸುದ್ದಿ ನನ್ನಲ್ಲಿ ಹೋಸ ಕನಸುಗಳನ್ನು ಬಿತಿತ್ತು, ಎಲ್ಲ ಮಹಿಳೆಯರಂತೆ ನಾನು ನನ್ನ ಗಂಡನಾಗಿ ಬರುವವನ ಬಗ್ಗೆ ನೂರಾರು ಕನಸುಗಳನ್ನು ಕಂಡೆ, ಕೊನೆಗು ನನ್ನ ಅಪ್ಪ ಸುಂದರವಾಗಿದ್ದ, ನಮಗಿಂತ ಅನೂಕುಲಕರವಾದ ಹುಡುಗನನ್ನೆ ನನಗೆ ಹುಡಕಿದಾಗ ಮೊದಲ ಸಲ ನನ್ನಪ್ಪನ ಬಗ್ಗೆ ನನಗೆ ಹೆಮ್ಮೆ ಅನಿಸಿತ್ತು ಆದರೆ ವರದಕ್ಷಿಣೆಯಿಲ್ಲದೆ ಮದುವೆಗಳಾಗುವುದುಂಟೆ? ನನ್ನ ವಿಷಯದಲ್ಲು ಅಷ್ಟೆ ನನ್ನ ವರದಕ್ಷಣೆ ಮತ್ತು ಮದುವೆ ಖಚಿ೯ಗಾಗಿ ಅಪ್ಪ ಸ್ವಲ್ಪ ಜಮೀನನ್ನು ಕೊಡ ಮಾರಿದರು ಕೊನೆಗು ನನ್ನ ಮದುವೆ ಮಾಡಿದರು.
         ಮದುವೆಯ ನಂತರ ಕೆಲವು ದಿನ ಎಲ್ಲವು ಚನ್ನಾಗಿತ್ತು, ನನ್ನ ಗಂಡ ನನ್ನನ್ನು ಚನ್ನಾಗಿಯೆ ನೋಡಿಕೊಳ್ಳುತಿದ್ದ, ನನ್ನ ಗಂಡನಿಗೆ ನನ್ನ ಮೆಲೆ ತುಂಭಾ ಪ್ರೀತಿ ಅಂದುಕೊಂಡಿದ್ದೆ ಆದರೆ ಅದು ಪ್ರೀತಿಯಲ್ಲ ಕೆವಲ ನನ್ನ ದೇಹದ ಮೇಲಿನ ವ್ಯಾಮೊಹ ಎಂದು ತಿಳಿಯಲು ಬಹಳ ಸಮಯ ಹಿಡಿಯಲಿಲ್ಲ, ನಂತರ ಎಂದಿನಂತೆ ಮನೆ ಮತ್ತು ಹೊಲದ ಕೆಲಸ ಮದುವೆಯಾಗಿ 1 ವಷ೯ಕ್ಕೆ ಮುದ್ದಾದ ಹೆಣ್ಣು ಮಗುವಿನ ತಾಯಿಯಾದೆ ಅಲ್ಲಿಂದ ನನ್ನ ಅತ್ತೆಯ ಚುಚ್ಚುಮಾತುಗಳು ಆರಂಭ ತಾನು ಒಂದು ಹೆಣ್ಣು ಎಂಬುದನ್ನೆ ಮರೆತು ನಾನು ಹೆಣ್ನು ಮಗು ಹೆತ್ತಿದಕ್ಕೆ ಬಯ್ಯುತಿದ್ದರು, ಬಡ ಕುಂಟುಂಬದಲ್ಲಿ ಹುಟ್ಟಿದ್ದ ನನಗೆ ಇದು ಮೊದಲಿನಿಂದಲೆ ಅಭ್ಯಸವಾಗಿತ್ತು.
       ಈಗ ನಾನು ಮತ್ತೆ ಗಭಿ೯ಣಿ ಕೆಲದಿನಗಳ ಹಿಂದೆ ಮದುವೆ ಸಮಯದಲ್ಲಿ ಕೊಡಬೇಕಾಗಿದ್ದ 3೦ ಗ್ರಾಂ ಭಂಗಾರ ಇನ್ನು ಕೊಟ್ಟಿಲ್ ಅದನ್ನು ತಂದರೆ ಮಾತ್ರ ನಿನಗೆ ಮನೆಯಲ್ಲಿ ಪ್ರವೇಶ ಎಂದು ನನ್ನ ಗಂಡ ಮತ್ತು ನನ್ನ ಅತ್ತೆ ಮನೆಯಿಂದ ನನ್ನನ್ನು ಆಚೆ ಕಳಿಸಿದ್ದಾರೆ, ನಾನು ಗಭಿ೯ಣಿ ಎಂಭ ಕರುಣೆ ಕೊಡ ಅವರಿಗೆ ಇಲ್ಲ, ಇನ್ನು ಅಪ್ಪನಿಗೆ ಇರುವ ಸಾಲ ತಿರಿಸಲೆ ಆಗುತ್ತಿಲ್ಲ ಇನ್ನು ಭಂಗಾರ ಎಲ್ಲಿಂದ ತರುತ್ತಾರೆ? ಅಪ್ಪನ ಮನೆಯ ಮುಲೆಯಲ್ಲಿ ಕುಳಿತು ಅಳುವುದು ಬಿಟ್ಟರೆ ನನಗೆ ಬೆರೆ ದಾರಿಯೆ ಇಲ್ಲ, ನೀವೆ ಹೇಳಿ ನಾನು ಮಾಡಿದ ತಪ್ಪಾದರು ಏನು? ನನಗ್ಯಾಕೆ ಈ ಶಿಕ್ಷೆ? ಬಾಲ್ಯದಲ್ಲಿ ಓದಲು ಆಸೆ ಪಟ್ಟಿದ್ದು ತಪ್ಪೆ? ಹೆಣ್ಣು ಮಗು ಹೆತ್ತಿದ್ದು ತಪ್ಪೆ? ಬಡ ಕುಟುಂಬದಲ್ಲಿ ಹುಟ್ಟಿದ್ದು ತಪ್ಪೆ? ಅಥವಾ ಹೆಣ್ಣಾಗಿ ಹುಟ್ಟುವುದೆ ತಪ್ಪೆ?

No comments:

Post a Comment

ಬೆಂಗಳೂರು ಡೈರಿ

    ರಾಜಭವನ Road ಮೂಲಕ ನಾವು ಮೆಜೆಸ್ಟಿಕ್ ಕಡೆ ಹೋಗುವಾಗ ಬಸವೇಶ್ವರ ಸರ್ಕಲ್ ಬರುತ್ತೆ ಅಲ್ಲಿ ಸುಮಾರು 150 ಸೆಕೆಂಡ್ ಗಳ ಸಿಗ್ನಲ್ ಇದೆ, ನಾವು ಪ್ರತಿ ಸಂಜೆ ಅದೇ ರಸ್ತ...