Monday, February 6, 2012

ಕೊನೆಯ ಪತ್ರ...


ಬರೆಯುತ್ತಿರುವೆ ಪತ್ರ ನಾನು
ಖಾಲಿ ಪುಟವ ನೋಡುತ
ಮನದ ಮಾತನ್ನು ಹೇಳುತ್ತಿರುವೆ
ಎನನ್ನು ಬರೆಯದೆ
ನಿನ್ನ ತಲುಪುವ ಪ್ರಯತ್ನದಲ್ಲಿರುವೆ
ಮನೆಯ ನಾಲ್ಕು ಗೋಡೆ ದಾಟದೆ
ತಿಳಿಯದಾಗಿದೆ ನನಗೆ ಏನೆಂದು ಬರೆಯಲಿ

ನನ್ನ ಪ್ರತಿದಿನದ  ದಿನಚರಿಯಲ್ಲು
ತುಂಬಿದೆ ಬರಿ ಕ್ರುತಕ ನಗು
ಆಗದಿರಲಿ ಇದೆ ಶಾಶ್ವತ
ನನ್ನ ಪ್ರತಿ ಯಶಸ್ಸಿನ ಆಚರಣೆಯಲ್ಲು
ಕಾಡಿದೆ ನೀನ್ನ ನೆನಪುಗಳ ಕಾಟ
ಬಯಸಿದೆ ಮನವು ಮೌನವಾಗಿ
ನೀನ್ನ ಜೋತೆ ನಾಲ್ಕು ಮಾತು

ದಣೆದಿದೆ ನನ್ನ ಜೀವ ಸಂಘಷ೯ಗಳಿಗೆ ಸಿಲುಕಿ
ಸೋಲುತಿಹನು ನಾನು ಪ್ರತಿ ಕ್ಷಣವು
ಮಾಸುತಿವೆ ನೀನ್ನ ನೆನೆಪುಗಳು ಹೋರಾಟದಲ್ಲಿ
ಬಂದು ಸೇರು ಮನವ
ನೀನ್ನ ಕೊನೆಯ ನೆನಪು ಮನದಿಂದ ಮಾಸುವ ಮುನ್ನ
ಇನ್ನು ಸ್ವಲ್ಪ ತಡಮಾಡಿದರು
ಆಗುವೆ ನಾ ನಿನಗೆ ಅಪರಿಚಿತ

ಇದು ನಿನಗೆ ನನ್ನ ಕೊನೆಯ ಪತ್ರ
ಬರೆಯತ್ತಿರುವೆ ಪತ್ರ ನಾನು
ಖಾಲಿ ಪುಟವ ನೋಡತಾ ...

4 comments:

  1. ನಿಮ್ಮ ಕೊನೆಯ ಪತ್ರ .. ಪ್ರೇಮದ ವಿರಹದ ನೆನಪುಗಳ ವಿಚಿತ್ರ.. ಖಾಲಿ ಪುಟದಲ್ಲಿ ಕವಿತೆ ಸುಂದರವಾಗಿ ಮೂಡಿದೆ.. ಎರಡನೇ ಚರಣ ತುಂಬಾ ಇಷ್ಟ ಆಯಿತು... ಅತೀ ಸೊಗಸಾಗಿದೆ.. :)

    ReplyDelete
  2. gelaya nin hrudayada vedane prati saalinali toruttide.
    ede tara bhavanegala barahagalu moodibarali gelaya

    ReplyDelete
  3. ನಿಮ್ಮ ಒಪ್ಪಿಗೆ ಇಲ್ಲದೆ ನಾನು ನಿಮ್ಮ ಕವನವನ್ನು ಉಪಯೋಗಿಸಿದ್ದೇನೆ.. ಕ್ಷಮೆಯೊಂದಿಗೆ ಧನ್ಯವಾದಗಳು....

    ReplyDelete

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...