Saturday, November 12, 2011

ನೀರಿಕ್ಷೆ





ಮೊದಲ ದಿನವೆ ಮನಸ್ಸಿನ ಮಹಲಿನಲ್ಲಿ ಬಂದು ಕುಳಿತು
ಕೇಲವೆ ದಿನಗಳಲ್ಲಿ ನೂರಾರು ಕನಸುಗಳ ಬಿತ್ತಿ
ಒಲವಿನ ಲೋಕದ ಪರಿಚಯ ಮಾಡಿಸಿದವಳೆ
ಹೇಳದೆ ಕೇಳದೆ ಎಲ್ಲಿಗೆ ಹೊರಟು ಹೋದೆ.


ಗೊತ್ತಿಲ್ಲವೆ ನಿನಗೆ ನಿನೀಲ್ಲದೆ ಅಪೂಣ೯ ನಾನು
ಪ್ರತಿ ದಿನವು ನಿನ್ನ ನೆನೆಯದ ಕ್ಷಣವಿಲ್ಲ
ಕೇಳದೆ ನಿನಗೆ ನನ್ನ ಮನಸ್ಸಿನ ರೋದನೆ
ಬರಬಾರದೆ ಮರಳಿ ನನ್ನ ಮನಸ್ಸಿನ ಮಹಲಿಗೆ?


ನಿನ್ನದೆ ನೆನಪುಗಳ ಮಳೆಯಲ್ಲಿ ನೆನೆದು 
ನಿದ್ರೆ  ಬರದೆ ಮಧ್ಯರಾತ್ರಿ ಹೊರನೆಡದರೆ
ಬಿಸುವ ತಂಗಾಳಿ ಕೊಡ ನನಗೆ ಹೇಳುವುದು
ಅವಳಿಲ್ಲದೆ ನೀನು ಬೆಳದಿಂಗಳಿಲ್ಲದ ರಾತ್ರಿಯಂತೆ.


ನೆನಯಬಾರದೆಂದು ನಿನ್ನ ಗಟ್ಟಿ ಮನವ ಮಾಡಿ ಕುಳಿತರು
ನಿನ್ನದೆ ನೆನಪುಗಳ ಸಾಲು ಸಾಲು ಮೋಡಗಳು
ಬೇಡವೆಂದರು ಸುಳಿಯುವವು ಮನದ ಮುಗಿಲಲ್ಲಿ
ಮನದಲ್ಲಿ ಮಳೆಯಿಲ್ಲ, ಆದರೆ ಕಣ್ಣಲ್ಲಿ ಮಾತ್ರ ನೀರು


ಬಾರದ ನಿನ್ನ ದಾರಿಯ ಕಾಯುತ ಕುಳಿತ ನನಗೆ
ಅಮ್ಮನಿಂದ ಪ್ರೀತಿಯ ಸಾಂತ್ವಾನದ ಮಾತುಗಳು
ಅದೆಲ್ಲೊ ನನಗಾಗಿ ಕಾಯುತಿಹಳಂತೆ ಅಪ್ಸರೆಯಂತಹ ಹುಡಗಿ
ಆದರೆ ನನಗೆ ಅಪ್ಸರೆಗಿಂತ ನಿನ್ನ ನೆನೆಪುಗಳ ಮಳೆಯಲ್ಲಿ ನೆನೆವುದೆ ಇಷ್ಠ.





4 comments:

  1. ನಿನ್ನ ಅಂತರಾಳದ ಮಾತುಗಳು ಈ ಕವನದ ಪದಗಳಾಗಿ ಮೂಡಿಬಂದಿವೆ.
    ಇದರಲ್ಲಿಯ ಒಂದೊಂದು ಪದವು ನಿನ್ನ ಪ್ರೀತಿಯ ಆಳವನ್ನು ತೋರಿಸುತ್ತಿವೆ,
    ಹೀಗೆ ಮುಂದುವರೆಯಲಿ ನಿನ್ನ ಅಂತರಾಳದ ಪದಗಳ ಜೋಡಣೆ........

    ReplyDelete
  2. the girl in question has lost her soulmate,sorry 2 say if ur r reading this

    ReplyDelete

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...