Saturday, April 28, 2018

ಬೆಂಗಳೂರು ಡೈರಿ


    ರಾಜಭವನ Road ಮೂಲಕ ನಾವು ಮೆಜೆಸ್ಟಿಕ್ ಕಡೆ ಹೋಗುವಾಗ ಬಸವೇಶ್ವರ ಸರ್ಕಲ್ ಬರುತ್ತೆ ಅಲ್ಲಿ ಸುಮಾರು 150 ಸೆಕೆಂಡ್ ಗಳ ಸಿಗ್ನಲ್ ಇದೆ, ನಾವು ಪ್ರತಿ ಸಂಜೆ ಅದೇ ರಸ್ತೆ ಮೂಲಕ ಮನೆಗೆ ಹೋಗುವುದು, ನಮ್ಮ ಕ್ಯಾಬ್ ಅಲ್ಲಿಗೆ ಸಂಜೆ 8.30 ರಿಂದ 8.40ರಷ್ಟಕ್ಕೆ ಬರುತ್ತೆ, ಅದೇ ರಸ್ತೆಯಲ್ಲಿ ವಿಧಾನಸೌಧ, ರಾಜಭವನ ಮತ್ತು ಕೆಲವು ದೊಡ್ಡ ಹೋಟೆಲ್ಗಳು ಇರುವುದರಿಂದ ರಾತ್ರಿ 10ರ ತನಕವು ಟ್ರಾಫಿಕ್ ಇರುತ್ತದೆ, ಬಸವೇಶ್ವರ ಸರ್ಕಲ್ ನ ಸಿಗ್ನಲ್ ದಾಟಲು ನಮ್ಮ ಕ್ಯಾಬ್ ಗೆ ಸುಮಾರು 2 ರಿಂದ 3 ನಿಮಿಷಗಳ ಸಮಯ ಬೇಕಾಗುತ್ತದೆ.
       ನಾನು ಹಲವು ದಿನಗಳಿಂದ ಗಮನಿಸಿದಂತೆ ಅಲ್ಲೊಂದು ಅಜ್ಜಿ ಸಿಗ್ನಲ್ ರೆಡ್ ಇದ್ದಾಗ cotton buds ಗಳ ಚಿಕ್ಕ ಚಿಕ್ಕ ಪ್ಯಾಕ್ ಗಳನ್ನು  ಹಿಡಿದುಕೊಂಡು ಬೈಕ್ ಸವಾರರು ಮತ್ತು ಕಾರುಗಳ ಹತ್ತಿರ ಹೋಗಿ ಮರುತ್ತಿದ್ದರು, ನಾನು ಗಮನಿಸಿದಂತೆ ಯಾರು ಅವುಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ, ಅದೊಂದು ದಿನ ನಮ್ಮ ಕ್ಯಾಬ್ ನ ಪಕ್ಕದಲ್ಲಿ ನಿಂತಿದ್ದ ಕಾರಿನ ಬಳಿ ಹೋದ ಅಜ್ಜಿ "ಬರಿ 15 ರೂಪಾಯಿ ಅಷ್ಟರಿ ತಗೊಳಿ" ಅನ್ನುತಿತ್ತು ಆ ಕಾರಿನ ಆಸಾಮಿ ಕಿಡಕಿಯ ಗ್ಲಾಸ್ ಕೂಡ ಇಳಿಸಲಿಲ್ಲ, ಆದರೂ ಹಠಬಿಡದ ಅಜ್ಜಿ ಹೋಗಲಿ 10 ರೂಪಾಯಿಗಾದ್ರು ತಗೊಳಿ ಎಂದು ಮತ್ತೆ ಕೇಳಿತು ಆದರೆ ಆ ವ್ಯಕ್ತಿಗೆ ಆ ಮಾತು ಕೇಳಿಸಲೇ ಇಲ್ಲ, ಯಾಕೋ ಆ ಅಜ್ಜಿ ಮುಖ ನೋಡಿ ಮನಸ್ಸಿಗೆ ತುಂಬಾ ಬೇಜರಾಯಿತು, ಹೋಗಲಿ ನಾನದರು ಕೊಳ್ಳವ ಎಂದು ಆ ಅಜ್ಜಿಯ ಕರೆದು " ಹೆಂಗಜ್ಜಿ ಒಂದು ಪ್ಯಾಕೇಟು" ಅಂದೆ ಅಜ್ಜಿ ಮುಖದಲ್ಲಿ ಯಾವುದೇ ಭಾವನೆಗಳು ಇಲ್ಲದೆ 30 ರೂಪಾಯಿ ಅಂದಿತು, ಆಗಲೇ ಸಿಗ್ನಲ್ ಹಸಿರು ಆಗಿತ್ತು ಕರೆದ ತಪ್ಪಿಗೆ 30 ರೂಪಾಯಿ ಕೊಟ್ಟು ಒಂದು ಪಾಕೆಟ್ cotton buds ಕೊಂಡೆ.
_____________________
        ಟ್ರಿಪ್ ಶೀಟ್ ನಲ್ಲಿ ಸಹಿ ಮಾಡಲು ಪೆನ್ ಹುಡುಕುತಿದ್ದೆ, ಕ್ಯಾಬ್ ನಲ್ಲಿ ಯಾರ ಬಳಿಯೂ ಪೆನ್ ಇರಲಿಲ್ಲ, ನಮ್ಮ ಕ್ಯಾಬ್ ಡ್ರೈವರ್ ಮುಂದೆ ಎಲ್ಲಾದರು ತಗೊಳೋನಾ ತಡ್ರಿ ಸರ್ ಎಂದು ಗಾಡಿ ಓಡಿಸುತ್ತಿದ್ದರು, ಅಲಸೂರ್ ಲೇಕ್ ಸಿಗ್ನಲ್ ಬಳಿ ಒಬ್ಬ ಬಾಲಕ ಪೆನ್ನುಗಳನ್ನು ಮಾರುತ್ತಿದ್ದ, ಅವನನ್ನು ಹತ್ತಿರ ಕರೆದ ನಮ್ಮ ಡ್ರೈವರ್ ಹೇಂಗೂ ಮರಿ ಪೆನ್ನು ಅಂದರು, ಅದಕ್ಕೆ ಆತ 10 ರೂಪಾಯಿ ಸಾರ್ ಅಂದ, ಸರಿ ಎಂದು 10ರ ಎರಡೂ ನೋಟು ಕೊಟ್ಟು ಎರಡು ಪೆನ್ನು ತೆಗೆದುಕೊಂಡರು, ಸಿಗ್ನಲ್ ಗ್ರೀನ್ ಆಗಿತ್ತು ಆಗಲೇ ಕ್ಯಾಬ್ ಹೊರಟಿತ್ತು, ಹಿಂದಿನಿಂದ ಸಾರ್ ಎಂದೂ ಕೂಗಿಕೊಂಡು ಓಡಿ ಬಂದ ಆ ಹುಡುಗ " ಸಾರ್ 1 ಪೆನ್ ತಗೊಂಡ್ರೆ 10 ರೂಪಾಯಿ, 2 ಪೆನ್ ತಗೊಂಡ್ರೆ 18 ರೂಪಿಯಿ ಅಷ್ಟೇ ಎಂದು ಎರಡು ರೂಪಾಯಿ ಮರಳಿಸಿ, ಕ್ಷಣಾರ್ಧದಲ್ಲಿ ಅಲ್ಲಿಂದ ಮಾಯವಾದ....

No comments:

Post a Comment

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...