Saturday, May 18, 2013

ಯಾರದೂ ಸಾಲುಗಳು... ಇನ್ನಾರಿಗೊ ಸಾಲವಾಗಿ


ಇಷ್ಟವಿಲ್ಲದಿದ್ದರು ದಿನವು ಕಲೇಜಿಗೆ ಬರುತಿದ್ದೆ,
ಅದು ನನಗೆ ಖುಶಿ ನಿಡುತಿತ್ತು
ಅದು ನಿನಗಾಗಿ
ನಿನ್ನ ಕಣ್ಣುಗಳಿಗಾಗಿ
ಅಂಥ ಕಣ್ಣುಗಳನ್ನು ಬೇರೆಲ್ಲೂ ನೋಡಿರಲಿಲ್ಲ
ನಿ ಮುಂದೆ... ನಾ ಹಿಂದೆ
ನಾ ಹಿಂದೆ... ನಿ ಮುಂದೆ
ಬೇನ್ನಿಗು ಕಣ್ಣುಗಳಿದಿದ್ದರೆ ಎಷ್ಟು ಚಂದ?
ಎಲ್ಲದಕ್ಕು ಒಂದು ಲಿಮೀಟ್ ಇರಬೇಕು
ಕನಸುಗಳು ಬೇಡವೇಂದರು ನನ್ನ ಹಿಂದೆ ಬಿದಿದ್ದವು
ನಿನಗೆ ಹಾರುವ ಕನಸು... ದೂರ ತುಂಬಾ ದೂರ..
ಕಾಡು, ನಾಡು, ಬೇಟ್ಟ ಎಲ್ಲವನ್ನು ದಾಟಿ ದೂರ...
ದುಬೈ, ಲಂಡನ್, ನ್ಯೂಯಾಕೋ೯ ಇನ್ನೆಲ್ಲಿಗೂ
ನೀನು ಕನಸುಗಳ ಹಿಂದೆ ಬಿದ್ದೆ
ಕನಸುಗಳಿಗೆ ರೆಕ್ಕೆ ಮುಡಿದವು
ಏಳು ಸಮುದ್ರಗಳಾಚೆಯಿಂದ ರಾಜಕುಮಾರ ಹಾರಿ ಬಂದ
ಅವನು ಮಾಯಾವಿ
ಕೈ ಬೆರಳಿನಲ್ಲಿ ಪ್ರಪಂಚ ತೋರಿಸುವ ಚತುರ
ಬೀಜವಿಲ್ಲದೆ ಗಿಡ-ಮರಗಳ ಬೇಳೆಸುವ ಚತುರ
ಡಾಲರ್ ರುಪಾಯಿಗಳ ನುಂಗುತ್ತದೆ
ಡಾಲರ್ ಸಂಬಂದಗಳನ್ನು ನುಂಗುತ್ತದೆ
ಡಾಲರ್ ನಿನ್ನ ಕೊರಳಿಗೆ ಸುತಿತ್ತು
ಡಾಲರ್ ನಿನ್ನ ಹಣೆಯ ಮೇಲಿತ್ತು.
ಸಮುದ್ರ ದಾಟಲು ಬೇಕು ಬಲವಾದ ರೆಕ್ಕೆಗಳು
ವಿಮಾನ ಲೋಹದ ರೆಕ್ಕೆಗಳಿರುವ ಹಕ್ಕಿ
ಅದರಲ್ಲಿ ಕುಳಿತಾಗ ನಿನ್ನ ಮುಖದಲ್ಲಿ ಸಂಭ್ರಮದಾ ಕಾಮನಬಿಲ್ಲು
ರೆಕ್ಕೆ ಮುಡಿದವರನ್ನು ಭೂಮಿಯ ಮೇಲಿರುವವರು ಹಿಡಿಯುವುದು ಸುಲಭವಲ್ಲ.
ಟಾಟಾ....    ಬೈಬೈ.......  ಸೀಯೂ.........
ಅಲ್ಪ ವಿರಾಮ,  ವಿರಾಮ,  ಪೂಣ೯ ವಿರಾಮ.

(ಸಾಲುಗಳನ್ನುಸಾಲ ಕೊಟ್ಟವರು:- ಹಾಯ್ ಬೆಂಗಳೂರ್)

No comments:

Post a Comment

ತೋಚಿದ್ದು-ಗೀಚಿದ್ದು

ಇವತ್ತು ಮತ್ತೆ ಆಕಾಶದಲ್ಲಿ ನಕ್ಷತ್ರಗಳು ಸ್ಪಷ್ಟವಾಗಿ ಕಾಣಿಸುತ್ತಿವೆ, ಯಾಕೋ ಮೋಡಗಳಿಗೆ ನಮ್ಮೂರಿನ ದಾರಿ ಮರೆತಹಾಗಿದೆ, ಈ ವರ್ಷವೂ ಮುಂಗಾರು ಕೈ ಕೊಡುವ ಲಕ್ಷಣಗಳೂ ಕಾ...