Monday, July 8, 2013

ಪುಣೆ ಎಂಬ ಮಳೆಗಾಲದ ಸುಂದರಿ

ನಾನು ಪುಣೆಗೆ ಬಂದು ಸುಮಾರು ೮ ತಿಂಗಳುಗಳಾದವು, ನಾನು ಮೊದಲ ಸಲ ಪುಣೆಗೆ ಬಂದಿದ್ದು ೨೦೦೭ರಲ್ಲಿ, ನಂತರ ಅನೇಕ ಸಲ ಇಲ್ಲಿಗೆ ಬಂದರು ಇದಿದ್ದು ಮಾತ್ರ ಒಂದು ಏರಡು ದಿನ ಮಾತ್ರ, ಕಳೆದ ವಷ೯ದ ಕೊನೆಯಲ್ಲಿ ನನಗೆ ಇಲ್ಲೆಯೆ ಕೆಲಸ ಸಿಕ್ಕಿದ ನಂತರ ನಾನು  ಇಲ್ಲೆ ಇರುವುದು ಅನಿವಾಯ೯ವಾಯಿತು.


ಪ್ರತಿ ವಿಷಯದಲ್ಲು ಪುಣೆಯನ್ನು ಬೆಂಗಳೂರಿನೊಂದಿಗೆ ಹೊಲಿಸುತ್ತಾ ಪುಣೆಯನ್ನು ಸದಾ ಜರಿಯುತಿದ್ದೆ ಇದಕ್ಕೆ ನನಗೆ ಬೆಂಗಳೂರಿನ ಮೇಲೆ ಇದ್ದ ವಿಷೇಶ ಪ್ರೀತಿಯು ಕಾರಣವಿರಬಹುದು, ಇಲ್ಲಿನ ಬಾಗಿಲು-ಕಿಡಕಿಗಳಿಲ್ಲದ ಸಿಟಿ ಬಸ್ ಗಳನ್ನು, ಟ್ರಾಪಿಕ್ ಸಿಗ್ನಲ್ ನ್ನು ಕೇರ್ ಮಾಡದ ಜನರನ್ನು ಮತ್ತು ಅದನ್ನು ನೋಡಿದರು ಏನು ಮಾಡದೆ ಸುಮ್ಮನ್ನೆ ಇರುವ ಪೋಲಿಸರನ್ನು, ಇಲ್ಲಿಯ ವಡ-ಪಾವ, ಪೋವೆಯ ಜೋತೆ ಚಪಾತಿಯನ್ನು, ಬೇಸಿಗೆಯ ಸುಡುಬಿಸಿಲನ್ನು, ಚಳಿಗಾಲದ ಮೈ ಕೊರೆಯುವ ಚಳಿಯನ್ನು, ಅಥ೯ವಾಗದ ಮರಾಠಿ ಚಿತ್ರಗಳನ್ನು, ಗುರುವಾರದ ಕಿಚಡಿಯನ್ನು ಹೀಗೆ ಪ್ರತಿ ವಿಷಯದಲ್ಲೂ ಪುಣೆಯನ್ನು ಹೀಯಾಳಿಸುತ್ತಿದ್ದ ನಾನು, ಕೇವಲ ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆಯುವುದರಲ್ಲಿ ಪುಣೆಯ ಅದ್ಬುತವಾದ ಪ್ರಕ್ರುತಿ ಸೌಂಧಯ೯ಕ್ಕೆ ಸೋತು ಹೋಗಿರುವೆನು, ಫುಣೆ ಎಂಬ ಮಳೆಗಾಲದ ಸುಂದರಿಯ ಮೇಲೆ ನನಗೆ ಮೊದಲ ಸಲ ಪ್ರೀತಿ ಮೂಡಿದೆ.



ಪುಣೆಯ ವಿಷೇಶತೆಯೆಂದರೆ ಇದನ್ನು ಆವರಿಸಿರುವ ಬೇಟ್ಟಗಳ ಸಾಲುಗಳು, ಮಳೆಗಾಲದ ದಿನಗಳಂದು ಹಚ್ಹ-ಹಸಿರಿನ ಉಡುಪಿನಿಂದ ಈ ಬೇಟ್ಟಗಳು ಕಂಗಳಿಸುತ್ತವೆ, ಪ್ರತಿ ಮುಂಜಾನೆ ಬೇಟ್ಟಗಳಿಗೆ ಸಾನ್ನಮಾಡಿಸಲೆಂದೆ ಬರುವ ಮುಂಜಾನೆಯ ಮಳೆ, ಕೈ ಚಾಚಿದರೆ ಸಿಗುವಷ್ಟು ಕೆಳಗೆ ಬೇಟ್ಟಗಳಿಗೆ ಮುತ್ತಿಕಲು ದರಿಗಿಳುದು ಬರುವ ಸಾಲು ಸಾಲು ಮೋಡಗಳು, ಜೋತೆಗೆ ಬಿಸುವ ತಣ್ಣನೆ ಗಾಳಿ, ಅಬ್ಬಾ ಪುಣೆಯ ಮಳೆಗಾಲದ ಮುಂಜಾವುಗಳನ್ನು ವಣಿ೯ಸಲು ಅಕ್ಷರಗಳೆ ಸಾಲವು, ಅದರ ಸೋಬಗು ನೋಡಿದವನೆ ಧನ್ಯ, ಶನಿವಾರವಾಡಾ, ಸಿಂಘಡ್, ಪಿರಾಗ ಗುಟ್ಟ್ ಘಾಟ್, ಲೋಣಾವಾಲಾ ಡ್ಯಾಮ್, ಖಂಡಾಲಾ ಘಾಟ್, ಕಾತ್ರಜ್ ಝೊ, ಪುಣೆ ಯುನಿವ೯ಸಿಟಿ ಎಂಬ ನಿಗುಡ ಕಾಡು.... ಪಟ್ಟಿ ಬೆಳೆಯುತ್ತಲೆ ಹೊಗುತ್ತದೆ.




ಇನ್ನು ಪುಣೆಯ ಮಳೆಗಾಲದ ಈ ಸಂಜೆಗಳೂ ಅಷ್ಟೆ, ಸುಯ೯ ಅಸ್ತನಾಗುತಿದ್ದಂತೆಯೆ ಮತ್ತೆ ಮಳೆಯು ಪ್ರತ್ಯಕ್ಷವಾಗುತ್ತದೆ, ಮನೆಗೆ ಹೊಗುವವರಿಗೆಲ್ಲ ವಿಧಾಯ ಹೇಳಲು ಬಂದಂತೆ, ಸಂಜೆಯ ಮಳೆಯ ಜೋತೆಗೆ ಬಿಸಿ ಬಿಸಿ ವಡಾ-ಪಾವ್ ಕೂಡ ಇಷ್ಟವಾಗತೋಡಗಿದೆ, ಇನ್ನು ನಗರದ ಮಧ್ಯದಲ್ಲಿ ಹರಿಯುವ ಎರಡು ನದಿಗಳು ನಗರದ ಸೌಂಧರ್ಯವನ್ನು ಇನ್ನೂ ಹೇಚ್ಹಿಸಿವೆ, ನಾಗರಹಾವಿನ ಹಾಗೆ ಹೊಳಪುಳ್ಳ ಮತ್ತು ಅಂಕು-ಡೊಂಕಾಗಿರುವ ಪುಣೆ-ಮುಂಬೈ ಎಕ್ಸಪ್ರೆಸ್ ವೇ ನಲ್ಲಿ ಘಂಟೆಗೆ ನೂರೈವತ್ತರ ವೇಗದಲ್ಲಿ ಪ್ರಯಾಣೆಸುವಾಗ ಸಿಗುವ ರೋಮಾಂಚನ ಅದ್ಬುತ,




                                                            ಬೆಂಗಳೂರು ಏಷ್ಟೆ ಆಧುನಿಕ, ಮುಂದುವರೆದ ನಗರವಾದರು ಅದು ಪುಣೆಯನ್ನು ಮೂರು ವಿಷಯಗಳಲ್ಲಿ ಮಾತ್ರ ಮಿರಿಸಲು ಸಾಧ್ಯವಿಲ್ಲ. ಮೂದಲನೆಯದು ಪ್ರಕ್ರುತಿ ಸೌಂಧರ್ಯ, ಎರಡನೆಯದು ಇಲ್ಲಿನ ಆಧುನಿಕ ಕಾರುಗಳನ್ನು, ಹೌದು ಬಹುಷ್ಯ ಭಾರತದಲ್ಲೆ ಅತಿ ಹೆಚ್ಹಿನ ಮಸಿ೯ಡಿಜ್, ಆಡಿ, ಬಿ ಎಮ್ ಡಬ್ಲೂ ಕಾರುಗಳು ಪುಣೆಯಲ್ಲಿ ಇವೆ, ಪುಣೆಯ ಗಲ್ಲಿ-ಗಲ್ಲಿಗಳಲ್ಲಿ ಈ ಕಾರುಗಳ ದಶ೯ನವಾಗುತ್ತದೆ, ಇನ್ನು ಮೂರನೆಯದು ಪುಣೆಯ ಹುಡಗಿಯರು... ಓ ದೇವರೆ ಪುಣೆ ಹುಡಿಗಿಯರ ಸೌಂಧರ್ಯಕ್ಕೆ ಪುಣೆ ಹುಡಿಗಿಯರೆ ಸಾಟಿ ಇದಕ್ಕಿಂತ ಹೆಚ್ಹಿನ ವಣ೯ನೆ ಅಸಾಧ್ಯ, ಹಮ್ ಏಷ್ಟೆ ಬೇಡವೆಂದರು ನಾನಂತು ’ಪುಣೆ’ ಎಂಬ ಮಳೆಗಾಲದ ಸುಂದರಿಗೆ ಮನಸೋತು ಹೋಗಿದ್ದೆನೆ

Tuesday, June 25, 2013

ಹೀಗೊಂದು ಕಲ್ಯಾಣ

ದೂರದೂರಿನ ಕಲ್ಯಾಣಮಂಟಪದಲ್ಲಿಂದು
ನನ್ನ ಪ್ರೀತಿಯ ಜೀವಕೆ ಕಲ್ಯಾಣವಂತೆ
ವರನಾರೊ ನಾನರಿಯೆ
ವರನಾಗುವ ಅದ್ರುಷ್ಠ ನನಗಿಲ್ಲ

ಸಖಿಯರೆಲ್ಲೆ ಶ್ರಂಗರಿಸುತಿರುವರಂತೆ ಅವಳ
ನಾನರಿಯನೆ ಅವಳ ಚಲುವ...?
ಅವಳ ಹಸ್ತದಿ ಗಾಢ ಮದರಂಗಿಯಂತೆ
ಅದರ ಅಡಿ ಹುದಗಿ ಹೋಗಿರಬಹುದೆ ನನ್ನ ಹೆಸರು...?

ಅವಳ ಕಣ್ಣಂಚಲ್ಲಿ ಸಣ್ಣ ನೀರ ಬಿಂದುಗಳಂತೆ
ಅಲ್ಲಿರುವರಿಗೆ ಅದು ಆನಂದ ಭಾಷ್ಪವಂತೆ
ನನಗ್ಯಾಕೊ ಅನುಮಾನ
ಆನಂದ ಭಾಷ್ಪವೊ...? ನನ್ನ ಅಗಲಿಕೆಯ ನೋವೊ...?

ಸಂಜೆಯಷ್ಟಕೆ ಕಲ್ಯಾಣಮಂಟಪ ಖಾಲಿ ಖಾಲಿಯಂತೆ
ವರನ ಜೋತೆ ಕಾರಿನಲ್ಲಿ ಇವಳ ಪ್ರಯಾಣವಂತೆ
ನಾಳೆ ಅದೆ ಕಲ್ಯಾಣಮಂಟಪದಲ್ಲಿ ಇನ್ನೊಂದು ಮದುವೆಯಂತೆ
ಮತ್ತೆ ಅದ್ಯಾರ ಕಣ್ಣಲ್ಲಿ ನೀರೊ...?  ಆನಂದ ಭಾಷ್ಪವೊ...?

Saturday, May 25, 2013

ನಾನು ಕವಿ

ಅಂದು ನಾನು ಬಾಲವಿಲ್ಲದ ಕಪಿ
ಇಂದು ನಾನು ಪ್ರಾಸವಿಲ್ಲದ ಕವಿ

ಕಪಿಗು ಕವಿಗು ಇಲ್ಲ ಅಂತರ
ಇಬ್ಬರದು ಒಂದೇ ತಂತರ

ಕಪಿಯ ಆತುರ ಕವಿಯಂತೆ
ಕವಿಯ ಕೌತುಕ ಕಪಿಯಂತೆ

ಕಪಿಗೆ ಕಂಡೆದೆಲ್ಲೆ ಹಿಡಿಯುವ ಆತುರ
ಕವಿಗೆ ಕಂಡೆದೆಲ್ಲೆ ಬರೆಯುವ ಕಾತುರ

ಕಪಿಗಳೆಲ್ಲ ಸೇರಿದರೆ ಕಪಿಚೇಷ್ಟಿ
ಕವಿಗಳೆಲ್ಲ ಸೇರಿದರೆ ಕವಿಗೋಷ್ಠಿ

ಕಪಿಗಳಿಗೆ ಮುಗಿಯದ ತುರಿತ
ಕವಿಗಳದು ಮುಗಿಯದ ಕೊರೆತ

ಬರೆದೆ ಕಪಿಗಳ ಮೇಲೆ ಕವಿತೆ
ಆದರು ಓದಲಿಲ್ಲ ಜನತೆ

ಒಂದಂತು ನಿಜ ನಾನ್ನಲ್ಲ ಕಪಿ
ನಾನು ಪ್ರಾಸವಿಲ್ಲದ ಕವಿ

Saturday, May 18, 2013

ಯಾರದೂ ಸಾಲುಗಳು... ಇನ್ನಾರಿಗೊ ಸಾಲವಾಗಿ


ಇಷ್ಟವಿಲ್ಲದಿದ್ದರು ದಿನವು ಕಲೇಜಿಗೆ ಬರುತಿದ್ದೆ,
ಅದು ನನಗೆ ಖುಶಿ ನಿಡುತಿತ್ತು
ಅದು ನಿನಗಾಗಿ
ನಿನ್ನ ಕಣ್ಣುಗಳಿಗಾಗಿ
ಅಂಥ ಕಣ್ಣುಗಳನ್ನು ಬೇರೆಲ್ಲೂ ನೋಡಿರಲಿಲ್ಲ
ನಿ ಮುಂದೆ... ನಾ ಹಿಂದೆ
ನಾ ಹಿಂದೆ... ನಿ ಮುಂದೆ
ಬೇನ್ನಿಗು ಕಣ್ಣುಗಳಿದಿದ್ದರೆ ಎಷ್ಟು ಚಂದ?
ಎಲ್ಲದಕ್ಕು ಒಂದು ಲಿಮೀಟ್ ಇರಬೇಕು
ಕನಸುಗಳು ಬೇಡವೇಂದರು ನನ್ನ ಹಿಂದೆ ಬಿದಿದ್ದವು
ನಿನಗೆ ಹಾರುವ ಕನಸು... ದೂರ ತುಂಬಾ ದೂರ..
ಕಾಡು, ನಾಡು, ಬೇಟ್ಟ ಎಲ್ಲವನ್ನು ದಾಟಿ ದೂರ...
ದುಬೈ, ಲಂಡನ್, ನ್ಯೂಯಾಕೋ೯ ಇನ್ನೆಲ್ಲಿಗೂ
ನೀನು ಕನಸುಗಳ ಹಿಂದೆ ಬಿದ್ದೆ
ಕನಸುಗಳಿಗೆ ರೆಕ್ಕೆ ಮುಡಿದವು
ಏಳು ಸಮುದ್ರಗಳಾಚೆಯಿಂದ ರಾಜಕುಮಾರ ಹಾರಿ ಬಂದ
ಅವನು ಮಾಯಾವಿ
ಕೈ ಬೆರಳಿನಲ್ಲಿ ಪ್ರಪಂಚ ತೋರಿಸುವ ಚತುರ
ಬೀಜವಿಲ್ಲದೆ ಗಿಡ-ಮರಗಳ ಬೇಳೆಸುವ ಚತುರ
ಡಾಲರ್ ರುಪಾಯಿಗಳ ನುಂಗುತ್ತದೆ
ಡಾಲರ್ ಸಂಬಂದಗಳನ್ನು ನುಂಗುತ್ತದೆ
ಡಾಲರ್ ನಿನ್ನ ಕೊರಳಿಗೆ ಸುತಿತ್ತು
ಡಾಲರ್ ನಿನ್ನ ಹಣೆಯ ಮೇಲಿತ್ತು.
ಸಮುದ್ರ ದಾಟಲು ಬೇಕು ಬಲವಾದ ರೆಕ್ಕೆಗಳು
ವಿಮಾನ ಲೋಹದ ರೆಕ್ಕೆಗಳಿರುವ ಹಕ್ಕಿ
ಅದರಲ್ಲಿ ಕುಳಿತಾಗ ನಿನ್ನ ಮುಖದಲ್ಲಿ ಸಂಭ್ರಮದಾ ಕಾಮನಬಿಲ್ಲು
ರೆಕ್ಕೆ ಮುಡಿದವರನ್ನು ಭೂಮಿಯ ಮೇಲಿರುವವರು ಹಿಡಿಯುವುದು ಸುಲಭವಲ್ಲ.
ಟಾಟಾ....    ಬೈಬೈ.......  ಸೀಯೂ.........
ಅಲ್ಪ ವಿರಾಮ,  ವಿರಾಮ,  ಪೂಣ೯ ವಿರಾಮ.

(ಸಾಲುಗಳನ್ನುಸಾಲ ಕೊಟ್ಟವರು:- ಹಾಯ್ ಬೆಂಗಳೂರ್)

Sunday, April 21, 2013

ಲೈಫ್ ಆಫ್ ಪೈ...


         ಯಾಕೊ ಇತ್ತಿಚೆಗೆ ನಮ್ಮ ಊರೆ ನನಗೆ ಅಪರಿಚಿತವಾಗತೊಡಗಿದೆ, ಇಂಜನಿಯರಿಂಗ್ ಸೇರಿದ ಮೇಲೆ ಊರಿನಲ್ಲಿ ಕಾಲುತಿ ನಿಂತಿದ್ದೆ ಕಡಿಮೆ, ಇನ್ನು ಕೆಲಸಕ್ಕೆ ಸೇರಿದ ಮೇಲೆ ಪರಿಚಿತ ಜನರ ಮುಖಗಳು ಅಸ್ಪಷ್ಠವಾಗಿತ್ತುವೆ, ಇನ್ನು ನನ್ನ ಹಳ್ಳಿ ಕೂಡ ಅಮೂಲಾಗ್ರವಾಗಿ ಬದಲಾಗುತ್ತಿದೆ, ಮಣ್ಣು ಹಂಚ್ಚಿನ ಮನೆಗಳೆಲ್ಲ  ಆರ್ ಸಿ ಸಿ ಮನೆಗಳಾಗಿವೆ, ದೂಳಿನ ರಸ್ತೆಗಳೆಲ್ಲ ಡಂಬಾರು ಕಂಡಿವೆ, ನಾನು ಓದಿದ ಶಾಲೆಯನ್ನು ಕೆಡವಿ ಅಲ್ಲಿ ವಷ೯ದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಬಳಸುವ ರಂಗಮಂದಿರ ಕಟ್ಟಿಸಿದ್ದಾರೆ, ಶಾಲೆ ಊರಾಚೆಗೆ ಸ್ಥಳಾಂತರವಾಗಿದೆ. ಇನ್ನು ನಾನು ಹುಟ್ಟಿ ಬೆಳೆದ ಮನೆಯನ್ನು ಅನಾಥ ಮಾಡಿ ನಾವೆಲ್ಲಾ ಹೋಸ ಮನೆಗೆ ಬಂದು ಸುಮಾರು ಒಂದು ವಷ೯ವೆ ಕಳೆದಿದೆ, ಹಳೇಯ ಮನೆಯ ಎದರು ಹೋದಾಗಲೆಲ್ಲಾ ಅದು ನನ್ನ ಕೈ ಮಾಡಿ ಕರೆದಂತೆ ಬಾಸವಾಗುತ್ತದೆ, ನನ್ನನೇಕೆ ಬಿಟ್ಟು ಹೋದಿರಿ? ನಾನು ಮಾಡಿದ ತಪ್ಪಾಸರು ಏನು? ಏಂದು ಕೇಳಿದಂತೆ ಬಾಸವಾಗುತ್ತದೆ. ನಿಜ ಅದು ನಾನು ಹುಟ್ಟಿದ ಮನೆ, ನಾನು ಮೊದಲ ಬಾರಿ ಸ್ವತಂತ್ರವಾಗಿ ಹೆಜ್ಜೆ ಇಡಲು ಕಲಿತ ಮನೆ, ಮೊದಲ ಅಕ್ಷರ ಬರೆದ ಮನೆ ಅಂತಹ ಮನೆ ಬಿಟ್ಟು ಬಂದಿದ್ದು ನನಗೆ ತುಂಭಾ ಬೇಸರದ ಕ್ಷಣ, "ಮನೆ ಚಿಕ್ಕದಿರಬೇಕಂತೆ ಮನಸ್ಸು ದೊಡ್ಡದಿರಬೇಕಂತೆ" ಮುತ್ತಿನಂತಹ ಮಾತು, ಇನ್ನು ಈ ಬಾರಿ ಊರಿಗೆ ಹೋದಾಗ ಊರ ಬಸ್ ನಿಲ್ದಾಣದಲ್ಲಿ ಇದ್ದ ಗಂಗಮ್ಮಜ್ಜಿಯ ಅಂಗಡಿ ಕೂಡ ಮಾಯವಾಗಿತ್ತು, ಅತಿ ಚಿಕ್ಕದಾದ ನಮ್ಮರಿನಲ್ಲಿ ಬಸ್ ನಿಲ್ದಾಣದಲ್ಲಿ ಪ್ರಯಾಣೀಕರಿಗೆ ಕುಳಿತು ಕೊಳ್ಳಲು ಪ್ರತ್ಯಕ ಸ್ಥಳವೆ ಇರಲಿಲ್ಲ, ಗಂಗಮ್ಮುಜ್ಜಿಯ ಅಂಗಡಿಯೆ ಪ್ರಯಾಣಿಕರಿಗೆ ವಿಶ್ರಾಮಧಾಮವಾಗಿತ್ತು, ಒಟ್ಟಿನಲ್ಲಿ ಗಂಗಮ್ಮಜ್ಜಿಯ ಅಂಗಡಿ ನಮ್ಮರಿನ ಬಸ್ ನಿಲ್ದಾಣಕ್ಕೆ ಶೋಭೆತರುತಿತ್ತು, ಅಂತಹ  ಗಂಗಮ್ಮುಜ್ಜಿಯ ಅಂಗಡಿ ಮೊನ್ನೆ ಊರಿಗೆ ಹೋದಾಗ ಕಣ್ಮರೆಯಾಗಿತ್ತು, ಅಂಗಡಿ ಇಲ್ಲದ ಬಸ್ ನಿಲ್ದಾಣ ಹಾಳು ಸುರಿಯುತ್ತಿತ್ತು, ಒಟ್ಟಿನಲ್ಲಿ ನನ್ನ ಹಳ್ಳಿ ತುಂಭಾ ಬದಲಾಗುತ್ತಿದೆ.

                                   ******************************************
              "ಮುಂದಿನ ವಷ೯ ಹುಟ್ಟು ಹಬ್ಬ ಇಬ್ಬರು ಜೋತೆಗೆ ಆಚರಿಸೋಣ ಅದು ಬೆಂಗಳುರಿನಲ್ಲೆ" ಇದೆ ನೀನು ನನ್ನ ಜೋತೆ ಆಡಿದ ಕೋನೆಯ ಮಾತು, ಅದು ಸುಮಾರು ೧೦ ತಿಂಗಳುಗಳ ಹಿಂದೆ ಅದಾದ ಮೇಲೆ ಒಂದು ಬಾರಿಯು ಪೋನ್ ಮಾಡಿಲ್ಲ ಏನಾಯಿತು ನಿನಗೆ? ಕಳೆದ ಹತ್ತು ತಿಂಳುಗಳಿಂದ ಪ್ರತಿ ದಿನವು ನಿನ್ನ ಮೊಬೈಲ್ ಗೆ ಕಾಲ್ ಮಾಡಿತಿದ್ದೆನೆ ಆದರೆ ಅದು ಸ್ವಿಚ್ ಆಫ್, ಇನ್ನು ನಿನಗೆ ಏಷ್ಟು  ಈ-ಮೇಲ್ ಮಾಡಿರುವೇನೂ ಲೇಕ್ಕವಿಲ್ಲ, ಆದರೆ ಒಂದಕ್ಕು ಉತ್ತರವಿಲ್ಲ. ಯಾಕಿತರ ಮಾಡ್ತಾ ಇದ್ದಿಯಾ? ನನಗೆ ಗೊತ್ತು ನಿನಗೆ ನನ್ನ ಬ್ಲಾಗ್ ಅಂದರೆ ಸ್ವಲ್ಪವು ಇಷ್ಠವಿಲ್ಲ, ಇದುವರೆರು ಒಂದು ಬಾರಿಯು ನಿನು ಇದನ್ನು ಸುಮ್ಮನೆ ಎಂಬುವಂತೆಯು ನೋಡಿಲ್ಲ, ಆದರು ಮನದಲ್ಲಿ ಒಂದು ಸಣ್ಣ ಆಸೆ ಅದಕ್ಕೆ ನಿನ್ನ ಬಗ್ಗೆ ಇಲ್ಲಿ ಬರೆಯುತ್ತಿದೆನೆ.
  ಸುಮಾರು ಆರು ವಷ೯ಗಳ ಗೆಳೆತನ, ಇಬ್ಬರದು ಒಂದೇ ಹೆಸರು, ಹುಟ್ಟಿದ ದಿನ ಕೂಡ ಒಂದೇ, ಎಷ್ಟೋಂದು ವಿಚಿತ್ರ ಸ್ನೇಹಿತರು ನಾವು, ನಿನೆ ಅಲ್ಲವೆ ನನಗೆ "ಪ್ರಶು" ಎಂಬ ನಿಕ್ಕ ನೇಮ್ ಇಟ್ಟಿದ್ದು, ಆ ಹೆಸರೆಂದರೆ ನನಗೆ ಈಗಲು ತುಂಭಾ ಇಷ್ಠ, ಪ್ಲಿಜ್ ಕಮ್ ಬ್ಯಾಕ್, ಯಾವುದೆ ಕಾರಣಕ್ಕು ನಿನಗೆ ನೋವು ಉಂಟಾಗುವಂತೆ ಮಾತನಾಡುವುದಿಲ್ಲ, ಹಟ ಮಾಡುವುದಿಲ್ಲ, ನಿನಗೆ ಇಷ್ಟವಿಲ್ಲದ ವಿಷಯಗಳ ಬಗ್ಗೆ ಏನು ಕೇಳುವುದಿಲ್ಲ, ಪ್ಲಿಜ್ ಪ್ಲಿಜ್ ಪ್ಲಿಜ್ ಕಮ್ ಬ್ಯಾಕ್ ಅಷ್ಟೆ... ಬರುತ್ತಿ ಅಲ್ವಾ... ನಿನ್ನ ಒಂದು ಸಣ್ಣ ರಿಪ್ಲೇಗಾಗಿ ೧೦ ತಿಂಗಳುಗಳಿಂದ ಕಾಯುತ್ತಿರುವ ನಿನ್ನ ಗೆಳಯ... ಪ್ರಶು
    

Friday, March 8, 2013

ನಾನು... ನೀನು...


ಅಸಮಾನ್ಯ ನಾಮನಿಂದು
ನಾನೇನು ಸಾಮಾನ್ಯನಲ್ಲ
ಅಪ್ರತಿಮ ಸುಂದರಿ ನೀನು
ನಾನೇನು ಕುರುಪಿಯಲ್ಲ
ಬಲು ಕೋಮಲ ನಿನ್ನ ಮನಸ್ಸು
ನನ್ನ ಮನಸ್ಸೆನು ಕಠೋರವಲ್ಲ
ಜಾಣ ಮರೆವು ನಿಂದು
ತಮಾಶೆಗು ಮರೆಯುವನಲ್ಲ ನಾನು
ಬಹು ಮುಖ ಪ್ರತಿಭೆ ನಿಂದು
ನನಗಿರುವದು ಒಂದೇ ಮುಖ
ಅತಿರೇಕದ ಆಲಪನಿಂದು
ನಾನೇನು ನಿಭಾ೯ವುಕನಲ್ಲ
ಅರಸೋತ್ತಿಗೆಯ ರಾಣಿ ನೀನು
ನಾನೇನು ಬಡವನಲ್ಲ
ನೀ ಇಲ್ಲವೆಂದಡೆ
ನಾನೇನೂ ಇಲ್ಲವಾಗುವುದಿಲ್ಲ

ಬಿಡ್ರಿ ಎಷ್ಟೆ ಆದ್ರೂ ನಾವು ಕನ್ನಡಿಗರು


ಬಿಜಾಪೂರ್ ಜೋಳದ ರೋಟ್ಟಿ ಬಾಳ ರುಚಿ
ಮಂಡ್ಯಾ ಮುದ್ಯೆ ಬಲು ಗಟ್ಟಿ
ಆದ್ರೂ ನಾವು ತಿನ್ನೊದು ಪೀಜಾ-ಬಗ೯ರ್
ಬಿಡ್ರಿ ಎಷ್ಟೆ ಆದ್ರೂ ನಾವು ಕನ್ನಡಿಗರು

ಬೆಂಗಳೂರು-ಮೈಸೂರು ಹೈಟೆಕ್ ಸಿಟಿಗಳು
ಗುಲ್ಬಗ೯-ಬೀದರ್ ಮಣ್ಣಿನ ಸಿಟಿಗಳು
ಹೇಗಿದೆ ನೋಡ್ರಿ ನಮ್ಮ ಸಮಾನತೆ
ಬಿಡ್ರಿ ಎಷ್ಟೆ ಆದ್ರೂ ನಾವು ಕನ್ನಡಿಗರು

ಕಾವೇರಿ ಹೆಸರು ಬಂದ್ರೆ ಕನಾ೯ಟಕ ಬಂದ್
ಕೃಷ್ಣಾ ಹೆಸರು ಬಂದ್ರೆ ಬಾಯಿ ಬಂದ್
ಹೇಗಿದೆ ನೋಡ್ರಿ ನಮ್ಮ ಒಗಟ್ಟು
ಬಿಡ್ರಿ ಎಷ್ಟೆ ಆದ್ರೂ ನಾವು ಕನ್ನಡಿಗರು

ಬೆಂಗಳೂರು ಜನ ತಮಿಳ್ ಕಲಿತ್ರು
ಬಳ್ಳಾರಿ ಜನ ತೆಲಗುಗೆ ಜೈ ಅಂದ್ರು
ಒಟ್ಟಿನಲ್ಲಿ ಕನ್ನಡಮ್ಮನ ಅನಾಥ ಮಾಡಿದ್ವಿ
ಬಿಡ್ರಿ ಎಷ್ಟೆ ಆದ್ರೂ ನಾವು ಕನ್ನಡಿಗರು

ಕಾಸರಗೊಡು ಕೇರಳಕ್ಕೆ ಬಿಟ್ರೂ
ಸಾಂಗ್ಲಿ ಮಹಾರಾಷ್ಟ್ರಕ್ಕೆ ಕೊಟ್ರೂ
ಅವರ ಜೋತೆ ಇನ್ನೂ ಅನ್ನಿಸಿಕೊತಿವಿ
ಬಿಡ್ರಿ ಎಷ್ಟೆ ಆದ್ರೂ ನಾವು ಕನ್ನಡಿಗರು

ತಮಿಳ್ ಜನ್ರ ಒಗ್ಗಟ್ಟ ನೋಡ್ರಿ
ಮಹಾರಾಷ್ಟದರ ಸ್ವಾಭಿಮಾನ ನೋಡ್ರಿ
ಇವಾಗಲಾದ್ರು ಸ್ವಲ್ಪ ಕಲಿರಿ
ಇಲ್ಲ ಅಂದ್ರೆ ಜೋಗದ ಗುಂಡಿಗೆ ಬಿದ್ದು ಸಾಯಿರಿ

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...