Friday, March 8, 2013

ಬಿಡ್ರಿ ಎಷ್ಟೆ ಆದ್ರೂ ನಾವು ಕನ್ನಡಿಗರು


ಬಿಜಾಪೂರ್ ಜೋಳದ ರೋಟ್ಟಿ ಬಾಳ ರುಚಿ
ಮಂಡ್ಯಾ ಮುದ್ಯೆ ಬಲು ಗಟ್ಟಿ
ಆದ್ರೂ ನಾವು ತಿನ್ನೊದು ಪೀಜಾ-ಬಗ೯ರ್
ಬಿಡ್ರಿ ಎಷ್ಟೆ ಆದ್ರೂ ನಾವು ಕನ್ನಡಿಗರು

ಬೆಂಗಳೂರು-ಮೈಸೂರು ಹೈಟೆಕ್ ಸಿಟಿಗಳು
ಗುಲ್ಬಗ೯-ಬೀದರ್ ಮಣ್ಣಿನ ಸಿಟಿಗಳು
ಹೇಗಿದೆ ನೋಡ್ರಿ ನಮ್ಮ ಸಮಾನತೆ
ಬಿಡ್ರಿ ಎಷ್ಟೆ ಆದ್ರೂ ನಾವು ಕನ್ನಡಿಗರು

ಕಾವೇರಿ ಹೆಸರು ಬಂದ್ರೆ ಕನಾ೯ಟಕ ಬಂದ್
ಕೃಷ್ಣಾ ಹೆಸರು ಬಂದ್ರೆ ಬಾಯಿ ಬಂದ್
ಹೇಗಿದೆ ನೋಡ್ರಿ ನಮ್ಮ ಒಗಟ್ಟು
ಬಿಡ್ರಿ ಎಷ್ಟೆ ಆದ್ರೂ ನಾವು ಕನ್ನಡಿಗರು

ಬೆಂಗಳೂರು ಜನ ತಮಿಳ್ ಕಲಿತ್ರು
ಬಳ್ಳಾರಿ ಜನ ತೆಲಗುಗೆ ಜೈ ಅಂದ್ರು
ಒಟ್ಟಿನಲ್ಲಿ ಕನ್ನಡಮ್ಮನ ಅನಾಥ ಮಾಡಿದ್ವಿ
ಬಿಡ್ರಿ ಎಷ್ಟೆ ಆದ್ರೂ ನಾವು ಕನ್ನಡಿಗರು

ಕಾಸರಗೊಡು ಕೇರಳಕ್ಕೆ ಬಿಟ್ರೂ
ಸಾಂಗ್ಲಿ ಮಹಾರಾಷ್ಟ್ರಕ್ಕೆ ಕೊಟ್ರೂ
ಅವರ ಜೋತೆ ಇನ್ನೂ ಅನ್ನಿಸಿಕೊತಿವಿ
ಬಿಡ್ರಿ ಎಷ್ಟೆ ಆದ್ರೂ ನಾವು ಕನ್ನಡಿಗರು

ತಮಿಳ್ ಜನ್ರ ಒಗ್ಗಟ್ಟ ನೋಡ್ರಿ
ಮಹಾರಾಷ್ಟದರ ಸ್ವಾಭಿಮಾನ ನೋಡ್ರಿ
ಇವಾಗಲಾದ್ರು ಸ್ವಲ್ಪ ಕಲಿರಿ
ಇಲ್ಲ ಅಂದ್ರೆ ಜೋಗದ ಗುಂಡಿಗೆ ಬಿದ್ದು ಸಾಯಿರಿ

No comments:

Post a Comment

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...