Sunday, October 14, 2012

ಜೀವನವೆಂದರೆ....

                   ಅವನು ನಾನು ಓದಿದ ಕಲೇಜಿನಲ್ಲೆ ಓದಿದವನು ನನ್ನ ಸಿನಿಯರ್, ನನ್ನ ಪಕ್ಕದ ಊರಿನವನು, ತಂದೆ ತಾಯಿಗಳ ಒಬ್ಬನೆ ಮಗ, ದೂರದ ನಗರದಲ್ಲಿ ಒಳ್ಳೆಯ ಕೆಲಸದಲ್ಲಿ ಇದ್ದ,  ಕೆಲವು ವಷ೯ಗಳ ಹಿಂದೆ ಅವನ ತಂದೆ ತಾಯಿಗಳು ತಮ್ಮ ಸಂಬಧಿಕರಲ್ಲೆ ಒಂದು ಹುಡಗಿಯನ್ನು ತಮ್ಮ ಸೊಸೆಯಾಗಿ ಮನೆ ತುಂಬಿಸಿಕೊಂಡರು,  ಮಗನಿಗು ಅಪ್ಪ-ಅಮ್ಮ ಅಂದರೆ ತುಂಭಾ ಪ್ರೀತಿ ಹಿಗಾಗಿ ನಗರದಲ್ಲೆ ಒಂದು ಮನೆ ಮಾಡಿ ತಂದೆ ತಾಯಿಯನ್ನು ನಗರಕ್ಕೆ ಕರಸಿಕೊಂಡನು, ಗಂಡ-ಹೆಂಡತಿ, ಅಪ್ಪ-ಅಮ್ಮ ಸುಖಿ ಸಂಸಾರ, ಒಂದು ವಷ೯ದ ಬಳಿಕ ಒಂದು ಮುದ್ದಾದ ಗಂಡು ಮಗು ಕೂಡ ಆಯಿತು ಸ್ವಗ೯ಕ್ಕೆ ಮೂರೆ ಗೇಣು ಅನ್ನುವಷ್ಟು ಸಂತಸ ತುಂಬಿತ್ತು ಅವರ ಮನೆಯಲ್ಲಿ, ಆದರೆ ಅದ್ಯಾರ ವಕ್ರ ದ್ರುಷ್ಟಿ ಅವರ ಕುಟುಂದ ಮೇಲೆ ಬಿದ್ದಿತೊ ನಾ ಕಾಣೆ, ಅನಾರೋಗ್ಯವೆಂದು ಆಸ್ಪತ್ರೆ ಸೇರಿದ ಅವನ ತಂದೆ ಮನೆಗೆ ಮರಳಲೆ ಇಲ್ಲ, ಇನ್ನು ಆ ಚಿಕ್ಕ ಮಗುವಿನ ಆರೋಗ್ಯ ಕೂಡ ಪದೆ ಪದೆ ಹದಗೆಡುತಿತ್ತು, ಅದೂಂದು ದಿನ ತಿವ್ರ ತಪಾಸಣೆ ನೆಡಸಿದ ವೈದ್ಯರು ಮಗುವಿನ ಒಂದು ಕಿಡ್ನಿ  ವಿಪಲವಾಗಿರುವುದನ್ನು ಪತ್ತೆ ಮಾಡಿದರು, ಮೊದಲೆ ತಂದೆ ಕಳೆದುಕೊಂಡು ಆಘಾತ ಅನುಭವಿಸದ ಅವರಿಗೆ ದೇವರು ಮೊತ್ತೊಂದು ಆಘಾತ ನೀಡಿದ್ದ, ಈ ಮದ್ಯೆ ಅವನು ನಗರದಲ್ಲಿ ಇರುವ ತನ್ನ ಮನೆಗೆ ಮರಳಿದಾಗ ಅವನಿಗೆ ಇನ್ನೊಂದು ಆಘಾತ ಕಾದಿತ್ತು, ಅವನ ಮನೆಗೆ ಕಳ್ಳರು ಕನ್ನಹಾಕಿದ್ದರು, ಅಳೀದುಳಿದ ಸ್ವಲ್ಪ ಹಣ, ಬಂಗಾರ ಎಲ್ಲವನ್ನು ದೊಚ್ಚಿದ್ದರು, ಪಾಪ ಆಘಾತಗಳ ಮೇಲೆ ಆಘಾತ ಅನುಭವಿಸಿದ ಅವನ ಸ್ಥಿತಿ ಹೇಗಿರ ಬೇಡ, ದೇವರು ಕೊಟ್ಟರೆ ಬರಿ ಸಂತೋಷಗಳನ್ನೆ ಕೊಡುತ್ತಾನೆ, ಇಲ್ಲವಾದರೆ ಬರಿ ಕಷ್ಟಗಳ ಸರಮಾಲೆ, ಜೀವನವೆಂದರೆ ಇದೆನಾ? 

No comments:

Post a Comment

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...