Saturday, October 20, 2012

ನಿದ್ರೆ

ರಾತ್ರಿ ಹನ್ನೆರೆಡಾದರು ಬಾರದ ನಿದ್ರೆ
ನೂರರಿಂದ ಸೊನ್ನೆತನಕ ಎಣಿಸಿದರು ಸುಳಿಯದ ನಿದ್ರೆ
ಬೇಸರದಿ ಮನೆಯಿಂದ ಆಚೆ ನೆಡದರೆ
ದೂರದೆಲೆಲ್ಲೊ ನಾಯಿಯೊಂದರ ಓಳಿಡುವಿಕೆ
ಅಗೊಮ್ಮೆ ಇಗೊಮ್ಮೆ ಸಣ್ಣಗೆ ಸುರಿಯುವ ಮಳೆ
ಹುಡುಗನೊಬ್ಬ ಪ್ರಿಯಸಿಯೊಂದಿಗೆ ಪೋನಿನಲ್ಲಿ ಪಿಸುಗುಡುವಾ ದ್ರುಶ್ಯ
ನನ್ನಂತೆ ನಿದ್ರೆ ಬರದ ಹುಡುಗನೊಬ್ಬ
ಆಚೆ ಬದಿಯಲ್ಲಿ ನಿಂತು ಸಿಗರೇಟ ಹೊಗೆ ಹೊಮ್ಮಿಸುತ್ತಿರುವ ಬಗೆ
ಆಚೆ ಮನೆಯಲ್ಲಿ ಮೆಲ್ಲಗೆ ಕೇಳುವ ಟಿವಿ ಸದ್ದು
ಇಚೆ ಮನೆಯಲ್ಲಿ ಕಿಲಕಿಲ ನಗುವ ಸದ್ದು
ಇನ್ನೊಂದು ಮನೆಯ ಬಾಗಿಲ ಹಿಂದೆ  ಏನು ನೆಡೆಯುತಿಹುದೊ ನಾ ಅರಿಯೆ
ರಾತ್ರಿ ಪಾಳೆಯ ಕೆಲಸದಲ್ಲಿ ಮಗ್ನವಾಗಿರುವ ಜನ
ನೈಟು ಡ್ಯೊಟಿಯ ಪೋಲಿಸರ ಸಿಳ್ಳೆ
ನಿಜ೯ನ ರಸ್ತೆಯಲ್ಲಿ ಆಗೊಮ್ಮೆ-ಇಗೊಮ್ಮ ಇಣುಕುವ ವಾಹನಗಳು
ಕತ್ತಲಿನೊಡನೆ ಕುಸ್ತಿಯಲ್ಲಿ ನಿರತವಾದ ಬೀದಿ ದೀಪಗಳು
ಅರವತ್ತರ ಇಳಿವಯಸ್ಸಿನಲ್ಲು ಮಧ್ಯರಾತ್ರಿ ಚಹಾ-ಕಾಪಿ ಗಿರಾಕಿಗಳ
ಎದುರು ನೋಡುತ್ತಾ ಮುದುರಿ ಕುಳಿತ ತಾತ
ಅದೆಲ್ಲೊ ಇನ್ನಾವುದೊ ವ್ಯಾಪಾರದಲ್ಲಿ ಅದ್ಯಾರೊ ಮಗ್ನರು
ಬಹುಷ್ಯ ಇವರೆಲ್ಲೆರಿಗು ನನ್ನಂತೆಯೆ ನಿದ್ರೆ ಬಾರದ ರೋಗ
ಮನಗೆ ಮರಳಿ ಹಾಸಿಗೆಯಲ್ಲಿ ಊರಳಿದರು ಇನ್ನು ಸುಳಿಯದ ನಿದ್ರೆ
ಆದರೆ ಅದಾಗಲೆ ಕಿಟಕಿಯಾಚಿಯಲ್ಲಿ ಆರಂಭವಾಗಿತ್ತು ಪಕ್ಷಿಗಳ ಚಿಲಿಪಿಲಿ

No comments:

Post a Comment

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...