Saturday, October 13, 2012

ಅವಳು

           
            ಅವಳ ನಯನ
            ಕಾಮನಬಿಲ್ಲ ಹೊಂಗಿರಣ
            ಅವಳ ನಾಚಿಕೆ
            ಮುಟ್ಟಿದರೆ ಮುನಿಯಂತೆ
            ಅವಳ ನೆನಪು
           ಹೋಳಿಗೆಯಷ್ಟು ಸವಿ
           ಅವಳ ನೋಡಲು
           ನನ್ನ ಮನದಿ ತಲ್ಲಣ
            ಅವಳ ನೆಡತೆ
           ಜನಕರಾಜನ ಮಗಳಂತೆ
           ಅವಳ ನೃತ್ಯನ
            ನವಿಲು ನಾಚುವಂತೆ
           ಅವಳ ನಗುವು
           ಮುಂಗಾರಿಗೆ ಮುನ್ನಡಿಯಂತೆ
           ಅವಳ ನಾಸಿಕ
           ನೋಡಲು ಬಲು ಚಂದ
           ಅವಳೂರು ನಾಸಿಕ್
           ಇಲ್ಲಿಂದ ಬಲು ದೂರ
           ಅವಳು ನನಗೆ
           ಗಗನದಾ ಕುಸುಮ

No comments:

Post a Comment

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...