Monday, December 3, 2012

2012ರ ನೆನಪುಗಳು ಮತ್ತು 2013ರ ಬಯಕೆಗಳು

          2012 ಜನವೇರಿ ತಿಂಗಳ ಒಂದ್ ದಿನಾ ಕನ್ನಡಿ ಮುಂದೆ ನಿಂತು ನನ್ನ ಮುಖ ನಾನೆ ನೋಡಿಕೊಂಡಾಗ ಶಾಕ್....!!! ಯಾಕಂದ್ರೆ ನನ್ನ ಗಡ್ಡದಲ್ಲಿ ಒಂದು ಬಿಳಿ ಕುದಲು ಕಣಿಸಿಕೋಡಿತ್ತು, ಅಲ್ಲಾ ತಲೆಯಲ್ಲಿ ಬಿಳಿ ಕುದಲು ಆದರೆ ಯಾನಾದ್ರು ಹಚ್ಚಕೊಬಹುದು ಆದರೆ ಗಡ್ಡಕ್ಕೆ ಏನಾದ್ರು ಹಚ್ಚೊಕೆ ಆಗುತ್ತಾ..? ಒಟ್ಟಿನಲ್ಲಿ 2012ರ ಆರಂಭಾನೆ ಚನ್ನಾಗಿ ಇರಲಿಲ್ಲ, ವಷ೯ದ ಆರಂಭದಲ್ಲಿ ಒಂದೇ ಇದ್ದ ಕುದುಲು ವಷ೯ದ ಕೊನೆಗೆ ನಾಲ್ಕ ಆಗಿದೆ, ಏನ್ನ ಮಾಡ್ಲಿ...? ಯಾರಿಗೆ ಹೇಳಲಿ ನನ್ನ ಕಷ್ಟ...???
                                                          ***
          ನಿಮಗೆ ನೆನಪಿದಿಯಾ ಹೈಸ್ಕೂಲಿನಲ್ಲಿ ಕುವೆಂಪು ಅವರ ಒಂದು ಕವಿತೆ ಇತ್ತು  "ಓ ನನ್ನ ಚೇತನ ಆಗು ನಿ ಅನಿಕೆತನ... ಏಲ್ಲಿಯು ನಿಲ್ಲದಿರು ಮನೆಯನ್ನು ಕಟ್ಟದಿರು.." ಬರಿ ಇವೆರೆಡು ಲೈನು ನೆನಪದೆ.... ಆಗ ಯಾಕೊ ಗೊತ್ತಿಲ್ಲ ಈ ಕವಿತೆ ತುಂಭಾ ಇಷ್ಠಾ ಆಗಿತ್ತು, ಕುವೆಂಪು ರವರು ಹೇಳಿದಂತೆ "ವಿಶ್ವ ಮಾನವ"ನ ತರ ಇರೋಣಾ ಅಂದುಕೊಡಿದ್ದೆ ಆದರೆ ಆದು ತುಂಭಾ ಕಷ್ಠ 2012ರಲ್ಲಿ ಇದರ ಅನುಭವ ನನಗೆ ತುಂಭಾ ಚನ್ನಾಗಿ ಆಗಿದೆ, ಅದಕೆ 2013ರಲ್ಲಿ ಒಂದೇ ಕಡೆ ನೆಲೆ ನಿಲ್ಲಲ್ಲು ಪ್ರಯತ್ನಿಸುವೆ
                                                          ***
               ಮುಂದಿನವಾರ ಪ್ರಳಯ ಆಗುತ್ತೆ ಅಂತಾ ಕೆಲವರು ಆಗಲ್ಲ ಅಂತಾ ಕೆಲವರು ವಾದಿಸ್ತಾ ಇದ್ದರೆ, ನನಗೆ ಪ್ರಳಯ ಆದ್ರೆ ತುಂಭಾ ಸಂತೋಷ, ಆಗದೆ ಇದ್ರುನು ಸಂತೋಷ, ಆದ್ರೆ ಎಲ್ಲರು ಒಟ್ಟಿಗೆ ಸಾಯಿ ಬಹುದು ಎಂತಾ ಅದ್ರಷ್ಟು ಅಲ್ವಾ... ಆಗದೆ ಇದ್ರೆ ಜೀವನದಲಿ ನಾನು ಅನುಭವಿಸ ಬೇಕಾಗುರುವದು ತುಂಭಾ ಇದೆ ಅದನ್ನೆಲ್ಲಾ ಅನುಭವಿಸಬವುದು, ನೋಡೊಣಾ...
                                                         ***
                  2012 ರಲ್ಲಿ ನನ್ನ 5 ಜನ ಆತ್ಮಿಯ ಸ್ನೇಹಿತರು ವಿವಾಹ ಬಂಧನಕ್ಕೆ ಒಳಗಾದರು ಅವರಿಗೆಲ್ಲಾ ದೇವರು ಒಳ್ಳೆದು ಮಾಡಲಿ, ಅನಿವಾರ್ಯ ಕಾರಣಗಳಿಂದ 5 ಜನರ ಮದುವೆಗಳಿಗು ನಾನು ಹೊಗಲಿಲ್ಲ, ಅದಕ್ಕಾಗಿ ನಾನು ಕ್ಷಮೆ ಕೇಳಿದರು ನನ್ನ ಇಬ್ಬರು ಸ್ನೆಹಿತಿಯರು ನನ್ನ ಮೇಲಿನ ರಿವೇಂಜಿಗಾಗಿ ಯಾವುದೆ ಕಾರಣಕ್ಕು ಮುಂದೆ ನನ್ನ ಮದುವೆಗೆ ಬರಲ್ಲಾ ಅಂತಾ ಇವಾಗಲೆ ಬಾಂಡ್ ಪೇಪರ್ ಮೇಲೆ ಬರದು ರುಜು ಮಾಡಿರೊ ಹಾಗೆ ಹೇಳಿ ಬಿಟ್ಟಿದ್ದಾರೆ, ಅನ್ಯಾಯವಾಗಿ ನನಗೆ ಸಿಗಬಹುದಾಗಿದ್ದ ಎರಡು ಉಡುಗರೆ ಮಿಸ್ ಆದವು ಅಂತಾ ಬೇಸರ ಆಗ್ತಾ ಇದೆ, ಪರವಾಗಿಲ್ಲ ಆದಷ್ಟು ಬೇಗ 2013 ರಲ್ಲಿ ನಮಗೆ ಸಿಹಿ ಸುದ್ದಿ ಕಟ್ರೆ ಅಷ್ಟೆ ಸಾಕು, ಉಳಿದಂತೆ ಇಬ್ಬರು ಸ್ನೆಹಿತರು 2012ರಲ್ಲಿ ಮತ್ತೆ ಲವ್ ನಲ್ಲಿ ಬಿದಿದ್ದಾರೆ ದೇವರು ಅವರನ್ನು ಕಾಪಾಡಲಿ, ಇನ್ನೊಬ್ಬ ಹೋಸ ಗೆಳತಿಗಾಗಿ ಕಾಯ್ತಾ ಇದ್ದಾನೆ ಅವನಿಗೆ ಹೋಸ ವಷ೯ದಲ್ಲಿ ಹೋಸ ಹುಡಗಿ ಸಿಗಲಿ
                                                      ***
                ವಷ೯ದ ಕೊನೆಗೆ ಭಟ್ರ "ಡ್ರಾಮಾ" ನೋಡಿ ನಾನಂತು ಮನಸಾರೆ ನಕ್ಕೆ, ಸಾದ್ಯವಾದರೆ ನೀವು ನೋಡಿ ಹೊಟ್ಟೆ ತುಂಭಾ ನಕ್ಕು ಬಿಡಿ, "ಒಂದು ಜೀವನ ಸಾಲದು" ನಾನು 2012 ರಲ್ಲಿ ಓದಿದ ಅದ್ಬುತ ಪುಸ್ತಕ, ಭಾರತದ ರಾಜಕೀಯ, ರಾಜಕಾರಣಿಗಳು ಮತ್ತು ಸ್ವತಂತ್ರ ಭಾರತದ ಇತಿಹಾಸದ ಬಗ್ಗೆ ತಿಳಿಯುವ ಆಸಕ್ತಿ ಇರುವವರಿಗೆ ಸಂಗ್ರಹ ಯೋಗ್ಯ ಪುಸ್ತಕ

No comments:

Post a Comment

ಬೆಂಗಳೂರು ಡೈರಿ

    ರಾಜಭವನ Road ಮೂಲಕ ನಾವು ಮೆಜೆಸ್ಟಿಕ್ ಕಡೆ ಹೋಗುವಾಗ ಬಸವೇಶ್ವರ ಸರ್ಕಲ್ ಬರುತ್ತೆ ಅಲ್ಲಿ ಸುಮಾರು 150 ಸೆಕೆಂಡ್ ಗಳ ಸಿಗ್ನಲ್ ಇದೆ, ನಾವು ಪ್ರತಿ ಸಂಜೆ ಅದೇ ರಸ್ತ...