Friday, February 3, 2017

ನನ್ನ ಅಜ್ಜ

ಬೆಟ್ಟ ಕಡಿದು ಹೊಲವ ಮಾಡಿ
ಖಾಲಿತಲೆಯ ಮೇಲೆ ಕಲ್ಲು ಹೊತ್ತು
ಜೋಡಿ ಎತ್ತು ಕಡ ತಂದು
ಸುರಿವ ಬಿಸಿಲ ಲೆಕ್ಕ ಇಡದೆ
ಮೂರು ಹೊತ್ತು ಹೊಲವ ಉತ್ತಿ
ನಾಲ್ಕು ದಿನಕ್ಕೆ ಆಗುವಷ್ಟು ಜೋಳ ಬೆಳೆದವ.

ಮೂರು ಹೆಣ್ಣು ಮೂರು ಗಂಡು
ನಡುವೆ ಬಂದು ಹೋಗೊ ಬಂದು ಬಳಗ
ಎಲ್ಲ ಬಾರ ಹೊತ್ತ ಕೂನ ಬೆನ್ನಿನವ,
ಜಾಲಿ ಮರದ ಮರಗೆ ಹೋಗಿ ಕದ್ದು ಬಿಡಿ ಸೇದಿ
ಹಿತ್ತಲ ಬಾಗಿಲಿನಿಂದ ಬಂದು
ಮುದಕಿಂದ  ಮಾರು ದೂರ ಏನು ಅರಿಯದಂತೆ ಕೂತವ.

ಹಣೆಗೆ ಮೂರು ಬಟ್ಟು ವಿಭೂತಿ
ಹರಿದು ಹೋದ ಕಚ್ಚೆ ಬನಿಯನ್ನು
ಹೆಗಲ ಮೇಲೂಂದು ತುಂಡು ಬಟ್ಟೆ
ಮೆಟ್ಟುಗಳನೆಂದು ಮೆಟ್ಟದವ
ಹೊಟ್ಟೆತುಂಬ ಎಂದು ಉಣ್ಣದವ
ಕಷ್ಟಗಳಿಗೆಂದು ಅಂಜದವ.

ಸಾಲ ಸೂಲ ಮಾಡಿ
ಹೆಣ್ಣು ಮಕ್ಕಳ ಮದುವೆ ಮಾಡಿ
ಮೊಮ್ಮಕ್ಕಳ ಹೆಗಲ ಮೇಲೆ ಹೊತ್ತು ಕುಣಿದವ,
ಎಲ್ಲಿಂದಲೂ ಬರಿ ಗೈಲಿ ಬಂದು
ಹೊಲ ಮನೆಯ ಮಾಡಿ
ಊರ ತುಂಬ ಬಂದು ಬಳಗ ಗಳಿಸಿದವ.

ನಾನು ಕಣ್ಣು ತೆರೆಯುವ ಮೊದಲೇ ಇಹ ಲೋಕ ಯಾತ್ರೆ ಮುಗಿಸಿ,
ಗೋಡೆ ಮೇಲೆನ ಫೋಟೋದೊಳಗೆ ಕುಳಿತವ,
ನನ್ನಪ್ಪನ ಅಪ್ಪನವ ಅಪ್ಪನ ಪಡೆಯಂಚಂತೆ ಅವ,
ನನ್ನ ಹೆಗಲ ಮೇಲೆ ಹೊತ್ತು ಕುಣಿಸಿ ಆಡಿಸದೆ
ನನ್ನ ಬಿಟ್ಟು ಹೋದ ಕೆಟ್ಟ ಮುದುಕ ನನ್ನಜ್ಜ ಅವ.

No comments:

Post a Comment

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...