ಈ ತಿಂಗಳ ಸಂಭಳದ ಕೆಲಸಕ್ಕೆ ಸೇರಿದ ನಂತರ ಜೀವಿನ ಒಂದು
ರೀತಿಯಲ್ಲಿ ಜೀತದಾಳಿನಂತಾಗಿದೆ, ಸೋಮವಾರದಿಂದ ಶುಕ್ರವಾರದತನಕ ಕತ್ತೆ ತರ ಕೆಲಸ ಮಾಡುವುದು ವಾರದ
ಅಂತ್ಯಕೆ ಮಹಾನ ಸಾಧನೆಗೇದವರಂತೆ ವರ್ತಿಸುತ್ತಾ ವೈಯಕ್ತಿಕ ಹವ್ಯ್ಯಾಸಗಳೆ ಮರೆತು ಹೋಗಿವೆ, ಇದಲ್ಲದಕು
ಕೋನೆ ಹೇಳಬೆಕೇಂದು ಶಪಥ ಮಾಡಿ ಇಂದಿನಿಂದ ಪ್ರತಿ ದಿನ ಕನಿಷ್ಠ ಅರ್ಧ ಗಂಟೆ ಬರವಣಿಗೆಗೆ ಮಿಸಲು
ಇಡಲು ನಿರ್ದರಿಸಿರುವೆ ಅದರ ಪ್ರತಿಪಲವೆ ಈ
" ಹೆಸರೇ ಇಲ್ಲದವರ ಕಥೆಗಳು"... ಇಲ್ಲಿ ಬರುವ ಕಥೆಗಳಗಿ ಧ್ವನಿ ಮಾತ್ರ ನಾನು ಆತ್ಮ
ಮಾತ್ರ ಬೇರೆ ಯಾರೊ, ನಾನು ಕೇಳಿದ, ನೋಡಿದ, ಅಪರಿಚಿತರ ( ಕೆಲವರು ಪರಿಚಿತರು) ವೈಯಕ್ತಿಕ ಜೀವನದ
ಅನುಭಗಳನ್ನು ನಿಮ್ಮ ಜೋತೆ ಹಂಚಿಕೊಳ್ಳುವ ಸಣ್ಣ ಪ್ರಯತ್ನ..... ಎಂದಿನಂತೆ ನಿಮ್ಮ ಪ್ರೋತ್ಸಾಹ
ಸದಾ ನನ್ನ ಜೋತೆ ಇರಲಿ,
ಹೆಸರೇ ಇಲ್ಲದವರ ಕಥೆಗಳು-1:-
" ಟಿಪ್
ಟಿಪ್ ಬರಸಾ ಪಾನಿ"
ನನ್ನ ಊರು ಉತ್ತರ ಕರ್ನಾಟಕದ ಬಯಲು ಸೀಮೆಯ ಒಂದು ಸಣ್ಣಹಳ್ಳಿ, ಬಯಲು ಸೀಮೆಯ ಜನ ಸ್ವಲ್ಪ ಒರಟು ಮತ್ತು ಸುಲಭವಾಗಿ ತಮ್ಮ ಭಾವನೆಗಳನ್ನು ವ್ಯಕ್ಯಪಡಿಸುವುದಿಲ್ಲ,
ಬಯಲು ಸಿಮೇಯ ಬೇಸುಗೆಯ ಸಂಜೆಗಳು ಬಲು ವಿಚಿತ್ರ ನನಗಂತು ಅವು ಬಹು ಬೇಸರದ ಸಂಜೆಗಳು,
ಜೋರಾಗಿ ಬಿಸುವ ಬಿಸಿಗಾಳಿ, ಎಲೇ ಉದಿರಿಸಿ ನಿಂತ ಮರಗಳು,
ಕೆಂಪನೆ ಮಣ್ಣಿನ ಬೋಳು ಗುಡ್ಡಗಳು, ಜೋತೆಗೆ ನಮ್ಮರಿನ ಬೇಸುಗಿಯೆ
ಸಂಜೆಗಳಲ್ಲಿ ಕರೆಂಟು(ವಿದ್ಯುತ್ತ) ಇರುವುದೇ ಇಲ್ಲ ಅದು ಬರುವುದು ರಾತ್ರಿ ೮ ನಂತರವೇ, ಕೆಲವಮ್ಮೆ ಸಂಜೆಗೆ ಸರಿಯಾಗಿ ವಿಪರೀತ ಮೋಡ ಕವಿದು ಗುಡುಗಲು ಮಿಂಚಲು ಆರಂಭವಾದರೆ ಮುಗಿಯಿತು
ಅದೊಂದು ಯುದ್ದಭೂಮಿಯಂತೆ, ಬೇರೆಯವರ ಬಗ್ಗೆ ಗೊತ್ತಿಲ್ಲ ಆದರೆ ನನಗಂತು ಇಂತಹ
ಸಂಜೆಗಳು ಅಂದರೆ ಒಂದು ರಿತಿಯ ವಿಚಿತ್ರ ತಳಮಳ.
ನಾವು ಆಗ ಇದ್ದ ಮನೆ ನಮ್ಮ ಅಜ್ಜನ ಕಾಲದ ನಾಲ್ಕು ಅಂಕಣದ ಮಣ್ಣಿನ ಮಾಳಿಗೆಯ
ಚಿಕ್ಕಮನೆ, ಅಂಕಣವೇಂದರೆ ನನಗು ಸರಿಯಾಗಿ ಗೋತ್ತಿಲ್ಲ,
ನಾನು ಬೇರೆಯವರಿಂದ ಕೇಳಿ ತಿಳಿದಿರುವ ಪ್ರಕಾರ ನಾಲ್ಕು ಕಂಭಗಳ ಮಧ್ಯದ ಜಾಗಕ್ಕೆ ಒಂದು
ಅಂಕಣವೇಂದು ಕರೆಯುತ್ತಾರೆ, ನಮ್ಮ ಮನೆ ೧೦ ಕಂಭಗಳಿಂದ ಕೂಡಿದ್ದ ನಾಲ್ಕು
ಅಂಕಣಗಳ ಚಿಕ್ಕ ಮನೆ, ಒಂದು ಅಡುಗೆ ಮನೆ, ಒಂದು
ದೇವರ ಮನೆ ಹಾಗು ಚಿಕ್ಕ ನಡುಮನೆ(ಹಾಲ್) ಅಷ್ಟೆ, ಮಳಗಳಷ್ಟು ಅಗಲದ ಮಣ್ಣು
ಮತ್ತು ಕಲ್ಲಿನಿಂದ ಕೂಡಿದ ಗೋಡೆಗಳು, ಕಟ್ಟಿಗೆ ಮತ್ತು ಮಣ್ಣಿನ ಮಾಳಿಗೆ
ಅಷ್ಟೆ ಆಮನೆಯ ಆಧಾರ, ಆ ಮನೆಗೆ ಯಾವುದೆ ಕಿಡಕಿಗಳು ಇರಲಿಲ್ಲ, ಬೆಳಕು ಮತ್ತು ಗಾಳಿ ಬರಲು ಎಲ್ಲ ಕೋಣೆಗಳಿಗು ಮಾಳಿಗೆಯಲ್ಲಿ ಒಂದೊಂದು ಭಾದಾಳ( ನಮ್ಮ ಊರ
ಆಡು ಭಾಷೆಯಲ್ಲಿ ಭಾದಾಳವೇಂದರೆ ಬೇಳಕಿನ ಕಿಂಡಿ)ಮಾಡಿದ್ದರು.
ಸಂಜೆ ಮಿಂಚು ಗುಡುಗು ಆರಂಭವಾದ ತಕ್ಷಣ ಅಮ್ಮ ನನಗೆ ಮನೆಹತ್ತಿ ಭಾದಾಳ ಮುಚ್ಚಲು
ಹೆಳುತಿದ್ದರು, ಪ್ರತಿ ಬೆಳಕಿನ ಕಿಂಡಿಗು (ಭಾದಾಳ) ಒಂದೊಂದು
ಮುರಿದ ಹಳೆಯ ಬಿದರಿನ ಬುಟ್ಟಿ ಮುಚ್ಚಿ ಅದರ ಮೇಲೆ ತಡಪಾಲು ( ಖಾಲಿಯಾದ ರಾಸಾಯನಿಕ ಗೊಬ್ಬರದ ಚೀಲಗಳಿಗೆ
ನಾವು ಆಡು ಭಾಷೆಯಲ್ಲಿ ತಡಪಾಲು ಎನ್ನುತ್ತೆವೆ) ಮುಚ್ಚಿ ಅದಕ್ಕೆ ಸುತ್ತಲು ನಾಲ್ಕು ಕಲ್ಲು ಇಟ್ಟು
ಗಾಳಿಗೆ ಹಾರದಂತೆ ಭದ್ರ ಪಡಿಸುತಿದ್ದೆವು, ಹಾ ಮರೆತಿದ್ದೆ ಆಗಿನ ಮನೆಗಳಿಗೆ
ಈಗಿನ ಹಾಗೆ ಮೇಟ್ಟಿಲುಗಳು ಇರತಿರಲಿಲ್ಲ, ಮನೆ ಹತ್ತಲು ಬಿದರಿನಿಂದ ಮಾಡಿದ
ಏಣಿಯ ಸಹಾಯ ಬೇಕಿತ್ತು, ಆದರೆ ಏಣಿಯ ಸಹಾಯವಿಲ್ಲದೆ ಮನೆ ಹತ್ತುವ ಕಲೆ ನನಗೆ
ಕರಗತವಾಗಿತ್ತು,( ಕೇವಲ ನಮ್ಮ ಮನೆ ಮಾತ್ರ) ಅದಕ್ಕೆ ಬೇಸಿಗೆಯ ಬೇಸರದ ಸಂಜೆ
ಮಳೆ ಆರಂಭವಾಗುವ ಸೂಚನೆ ಸಿಕ್ಕ ಕ್ಷಣ ಭಾದಾಳ ಮುಚ್ಚುವ ಕೆಲಸವನ್ನು ಅಮ್ಮ ನನಗೆ ವಹಿಸುತಿದ್ದಳು,
ನಮ್ಮ ಊರಿನ ಕಡೆ ಬೇಸಿಗೆಯ ಸಂಜೆಗಳಲ್ಲಿ ಏಷ್ಟು ಜೋರಾಗಿ ಮಳೆ ಬರುತಿತ್ತು ಅಂದರೆ
ಎಷ್ಟೆ ಭದ್ರವಾಗಿ ಭಾದಾಳ ಮುಚ್ಚಿದ್ದರು ಅದರಿಂದ ಮಳೆ ನೀರು ಒಳಗೆ ಬಸಿಯುತಿತ್ತು, ಅಷ್ಟೆ ಅಲ್ಲ ಬೇಸುಗೆ ಬಂದರೆ ಸಾಕು ಮಣ್ಣಿನ ಮಾಳಿಗೆಯ ಮೇಲೆ ಇರುವೆಗಳು ತಮ್ಮ ಸಂಸಾರ ಹೂಡುತಿದ್ದವು
ಅಷ್ಟೆ ಅಲ್ಲದೆ ಗೂಡುಗಳನ್ನು ನಿರ್ಮಿಸುತ್ತಿದ್ದವು( ಮಾಳಿಗೆ ಮೇಲೆ ರಂಧ್ರ ಕೊರೆಯುತ್ತಿದ್ದವು) ಮಳೆ
ಬಂದಾಗ ಈ ಇರುವೆ ಗೂಡುಗಳ ಮೂಲಕ ಮಳೆ ನೀರು ಮನೆಯ ಒಳಗೆ ಬಸಿಯುತ್ತಿತ್ತು, ಮಳೆ ಆರಂಭವಾದ ಕೇಲವೆ ಕ್ಷಣದಲ್ಲಿ ಮನೆ ಪೂರ್ಣ
ಸೋರುತಿತ್ತು, ಆಗ ಸೋರುವ ಜಾಗಗಳಲ್ಲಿ ಪಾತ್ರೆಗಳನ್ನು ಇಟ್ಟು ಸೊರುತಿದ್ದ
ಮಳೆ ನೀರನ್ನು ಸಂಗ್ರಹಿಸಿ ಹೋರಗೆ ಹಾಕುತಿದ್ದವು, ಆ ಕ್ಷಣ ನೋಡಿಯೆ ಶರೀಪ
ಸಾಹೇಬರು "ಸೋರುಹುತಿಹದು ಮನೆಯ ಮಳಿಗೆ" ಹಾಡು ಬರೆದಿದ್ದರೊ ಏನೊ...! ಆ ಕ್ಷಣದಲ್ಲಿ ಹೊಮ್ಮುತಿದ್ದ
ಟಪ್ ಟಪ್ ಶಭ್ದ ಕೇಳಿದಾಗಲೆಲ್ಲ ನನಗೆ "ಮೊಹ್ರಾ" ಚಿತ್ರದ " ಟಿಪ್ ಟಿಪ್ ಬರಸಾ ಪಾನಿ"
ಹಾಡೆ ನೆನಪಿಗೆ ಬರಿತಿತ್ತು, ಎಲ್ಲರಿಗೂ " ಟಿಪ್ ಟಿಪ್ ಬರಸಾ ಪಾನಿ" ಒಂದು ರೋಮ್ಯಾಟಿಕ್ ಸಾಂಗ್ ಆದರೆ ನನಗೆ
ಮಾತ್ರಾ ಇಂದಿಗು " ಟಿಪ್ ಟಿಪ್ ಬರಸಾ ಪಾನಿ" ಸೋರುತಿದ್ದ ನಮ್ಮ ಹಳೆಯ ಮನೆಯ ನೆನಪು ತರವು
ಹಾಡು, ಮರು ದಿನ ಮನೆ ಹತ್ತಿ ಮಾಳಿಗೆಯಲ್ಲಿಯ ಇರುವೇ ಗೊಡುಗಳೆನೆಲ್ಲ ಹುಡುಕಿ
ಮುಚ್ಚುವುದೇ ಪ್ರಮುಖ ಕೆಲಸ, ಎರಡೊ-ಮೂರೂ ದಿನಗಳ ನಂತರ ಮತ್ತದೆ ಸಂಜೆ ಮಳೆ
ಮತ್ತದೆ " ಟಿಪ್ ಟಿಪ್ ಬರಸಾ ಪಾನಿ".
ಈಗ ಅದು ಕೇವಲ ನೆನಪು
ಮಾತ್ರ, ನಾವು ಬೆಳಿಯುತ್ತಾ ಬೆಳೆಯುತ್ತಾ ನಮ್ಮ
ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಾ ಬಂದಿತು, ನಾಲ್ಕು ಅಂಕಣದ ಮಣ್ಣಿನ
ಮನೆಯಿಂದ ೩ ಬಿ ಎಚ್ ಕೆ ಮನೆಗೆ ಬಂದೆವು, ಈ ಆಧಿನಿಕ ಮನೆಗೆ ಭಾದಳ(ಬೆಳಕಿನ
ಕಿಂಡಿ)ಗಳಿಲ್ಲ, ಮನೆಗೆ ಮಣ್ಣಿನ ಮಾಳಿಗೆ ಇರದ ಕಾರಣ ಇರುವೆಗಳು ಗೋಡು ಕಟ್ಟುವುದಿಲ್ಲ,
ಮಳೆ ಬಂದಾಗ ಮನೆ ಸೋರುವುದು ಇಲ್ಲ, " ಟಿಪ್ ಟಿಪ್
ಬರಸಾ ಪಾನಿ" ಹಾಡು ಎಲ್ಲವು ಹಳೆಯ ಮಣ್ಣಿನ ಮನೆಯೊಂದಿಗೆ ಮರೆತೆ ಹೋಗಿವೆ.
ಬೆಳೆಯುತ್ತಾ ಬೆಳೆಯುತ್ತಾ
ಓದು ಕೆಲಸವೆಂದು ಹುಟ್ಟಿದ ಮನೆ ಊರು ಎಲ್ಲ ಬಿಟ್ಟು ಬೆಂಗಳೂರು ಎಂಬ ಮಹಾನಗರ ಸೇರಿದೆವು, ಬಂದು ಇಷ್ಟು ವರ್ಷವಾದರು ಬೆಂಗಳೂರು ಬಯಲು ಸೇಮೆಯ ಊರೂ ಮಲೇನಾಡೂ ಗೊತ್ತೆ
ಆಗುತ್ತಿಲ್ಲ, ಕೆಲವು ಎರಿಯಾಗಳು ಅಪ್ಪಟ ಮಲೆನಾಡಿನಂತೆ ಇನ್ನೂ ಕೆಲವು ಅಪ್ಪಟ
ಬಯಲು ಸೀಮೆಯಂತೆ ಇವೆ, ಇನ್ನು ವೈಟ್ ಪೀಲ್ಡ್ ಕಡೆ ಹೋದರೆ ಆಂದ್ರದಂತೆ ಎಲೇಕ್ಟ್ರಾನೀಕ್ಸ್
ಸಿಟಿ ಕಡೆ ಹೋದರೆ ತಮಿಳು ನಾಡಿಗೆ ಹೋದಂತೆ ಅನ್ನಿಸುತ್ತದೆ, ಅಷ್ಟೆ ಏಕೆ
ಕೆಲವು ಪ್ರದೇಶಗಳು ಬ್ರಾಮಣರ ಅಗ್ರಹಾರದಂತೆ, ಇನ್ನು ಕೆಲವು ಉತ್ತರ ಕರ್ನಾಟಕದ
ಲಿಂಗಾಯತರ ಹಳ್ಳಿಗಳತೆ, ಕೇಲವು ಮಂಡ್ಯದ ವಕ್ಕಲಿಗರ ಊರುಗಳಂತೆ ತೋರುತ್ತವೆ
ಒಟ್ಟಿನಲ್ಲಿ ಬೆಂಗಳೂರು ನನಗೆ ಬಿಡಿಸದ ಕಂಗಟ್ಟು.
ಬೆಂಗಳೂರಿನ ಬೇಸುಗೆಯ ಸಂಜೆಗಳಿಗು ನನ್ನ ಊರಿನ ಸಂಜೆಗಳಿಗು ತುಂಭಾ ವ್ಯಾತಸವಿದೆ
ಬೆಂಗಳೂರಿನ ಸಂಜೆಗಳಿಗೆ ಬಣ್ಣಗಳೆ ಇಲ್ಲ, ಇಲ್ಲಿನ ಪ್ರತಿ ಸಂಜೆಗಳು ಒಂದೆ ತರ(ಮಳೆ,ಚಳಿ, ಬೇಸುಗೆ) ಒಂದೇ ಬಣ್ಣ, ಇಷ್ಟೆಲ್ಲವನ್ನು ಇಗ ನೆನಪಿಸಿಕೊಳ್ಳಲು
ಕಾರಣವೇಂದರೆ, ಇಂತಹದೆ ಒಂದು ಬಣ್ಣವಿಲ್ಲದ ಬೆಂಗಳೂರಿನ ಸಂಜೆಯಲ್ಲಿ ಸೂರಿದ
ಸಣ್ಣನೆಯ ಮಳೆ ಮತ್ತು ಆ ಮಳೆಯಲ್ಲಿ ನೆನೆಯುತ್ತಾ " ಟಿಪ್ ಟಿಪ್ ಬರಸಾ ಪಾನಿ" ಎಂದು ಹಾಡುತಿದ್ದ
ಆ ಹುಡಗಿ
Nice one looking forward to read more and more .......
ReplyDelete