Monday, March 28, 2016

ಹೆಸರೇ ಇಲ್ಲದವರ ಕಥೆಗಳು-2:- ನನ್ನೊಳಗೊಬ್ಬ ಕಳ್ಳ

ಈ ತಿಂಗಳ ಸಂಭಳದ ಕೆಲಸಕ್ಕೆ ಸೇರಿದ ನಂತರ ಜೀವಿನ ಒಂದು ರೀತಿಯಲ್ಲಿ ಜೀತದಾಳಿನಂತಾಗಿದೆ, ಸೋಮವಾರದಿಂದ ಶುಕ್ರವಾರದತನಕ ಕತ್ತೆ ತರ ಕೆಲಸ ಮಾಡುವುದು ವಾರದ ಅಂತ್ಯಕೆ ಮಹಾನ ಸಾಧನೆಗೇದವರಂತೆ ವರ್ತಿಸುತ್ತಾ ವೈಯಕ್ತಿಕ ಹವ್ಯ್ಯಾಸಗಳೆ ಮರೆತು ಹೋಗಿವೆ, ಇದಲ್ಲದಕು ಕೋನೆ ಹೇಳಬೆಕೇಂದು ಶಪಥ ಮಾಡಿ ಇಂದಿನಿಂದ ಪ್ರತಿ ದಿನ ಕನಿಷ್ಠ ಅರ್ಧ ಗಂಟೆ ಬರವಣಿಗೆಗೆ ಮಿಸಲು ಇಡಲು ನಿರ್ದರಿಸಿರುವೆ ಅದರ ಪ್ರತಿಪಲವೆ ಈ " ಹೆಸರೇ ಇಲ್ಲದವರ ಕಥೆಗಳು"... ಇಲ್ಲಿ ಬರುವ ಕಥೆಗಳಗಿ ಧ್ವನಿ ಮಾತ್ರ ನಾನು ಆತ್ಮ ಮಾತ್ರ ಬೇರೆ ಯಾರೊ, ನಾನು ಕೇಳಿದ, ನೋಡಿದ, ಅಪರಿಚಿತರ ( ಕೆಲವರು ಪರಿಚಿತರು) ವೈಯಕ್ತಿಕ ಜೀವನದ ಅನುಭಗಳನ್ನು ನಿಮ್ಮ ಜೋತೆ ಹಂಚಿಕೊಳ್ಳುವ ಸಣ್ಣ ಪ್ರಯತ್ನ..... ಎಂದಿನಂತೆ ನಿಮ್ಮ ಪ್ರೋತ್ಸಾಹ ಸದಾ ನನ್ನ ಜೋತೆ ಇರಲಿ,


 2. ನನ್ನೊಳಗೊಬ್ಬ ಕಳ್ಳ
          ನಾನು ಚಿಕ್ಕವನಿದ್ದಾಗ ಯಾವುದಕ್ಕದಾರು ತುಂಭಾ ಹಠ ಮಾಡಿದಾಗ, ಅತ್ತಾಗ ಅಮ್ಮ " ನೋಡ್ ನೀ ಹಿಂಗ ಹಠ ಮಾಡಿದರ ನಿನ್ನ ಕಳ್ಳಂಗ ಹಿಡಿದುಕೊಡ್ತಿನಿ" ಎಂದು ಹೆದರಿಸುತಿದ್ದ ನೆನಪು, ಭಾಲ್ಯದಲ್ಲಿ ಕಳ್ಳರೇಂದರೆ ನನಗೆ ಅವ್ಯಕ್ತ ಭಯ , ಕಳ್ಳರೇಂದರೆ ದಪ್ಪ ಮೀಸಿಯ, ಗಡ್ಡ ಬಿಟ್ಟ, ದಡುತಿ ದೇಹದ, ಬನಿಯನ್ನು ತೋಟ್ಟು ಸದಾ ಬಿಡಿ ಸೇದುತ್ತಿರುವ ಹೀಗೆ ವಿಚಿತ್ರ ಕಲ್ಪನೆಗಳು ಇದ್ದವು, ಇದರ ಜೋತೆ ಕಳ್ಳರೇಂದರೆ ತುಂಭಾ ಕೆಟ್ಟವರು, ಸಿಕ್ಕಿದೆನ್ನಲ್ಲೆ ಸಿಕ್ಕವರನ್ನೆಲ್ಲ ದೊಚುವವರು, ಅವರನ್ನು ನಾನು ರಾತ್ರಿ ಅಲ್ಲಿ ನೋಡಿದ್ದೆ ಇಲ್ಲಿ ನೋಡಿದ್ದೆ, ನೋಡಲು ಹಾಗೆ ಇದ್ದರು ಹೀಗೆ ಇದ್ದರು, ಎಂದು ಹೆದರುಸುತ್ತಿದ್ದ ಸ್ನೇಹಿತರು ಬೇರೆ.



          ಹೀಗೆ ಭಾಲ್ಯದಿಂದಲ್ಲೆ ಕಳ್ಳರೇಂದರೆ ವಿಚಿತ್ರ ನೋಟ ನನ್ನದು, ಯಾರಾದರು ಯಾರಿಗಾದರು ಕಳ್ಳರೇಂದರು ಕರೆದರೆ ಸಾಕು ಅವರಿಂದ ಮಾರು ದೂರ ಓಡುತಿದ್ದವ ನಾನು, ಕಳ್ಳತನ ಮಹಾ ಅಪರಾದವೆಂದು ನಂಬಿದ್ದವ ನಾನು, ಆದರೆ ನನಗೆ ಆಗ ತಿಳಿಯದೆ ಹೋದ ವಿಷಯವೇಂದರೆ ನನ್ನಲ್ಲೂ ಒಬ್ಬ ಕಳ್ಳನಿದ್ದಾನೆ, ನಾನು ಒಬ್ಬ "ಕಳ್ಳ" ಎಂದು, ಇದವರೆಗು ನನಗೆ ಸರಿಯಾಗಿ ಉತ್ತರ ಸಿಗದ ಪ್ರಶ್ನೆಯೇಂದರೆ "ಕಳ್ಳ" ಅಂದರೆ ಯಾರು? ಕಳ್ಳತನವೇಂದರೆ ಏನು? ಬೇರೆಯವರ ವಸ್ತುಗಳ್ಳನ್ನು ಹೇಳದೆ ತೆಗೆದುಕೊಳ್ಳುವವನೇ...? ಅಥವಾ ತನ್ನದಲ್ಲದ ತನಗೆ ಸಂಭಂದವಿಲ್ಲದ ವಸ್ತುಗಳನ್ನು ತನ್ನ ಬಳಿ ಇಟ್ಟುಕೊಳ್ಳುವವನೇ...?
          ಈ ತರ ಯೋಚಿಸಿದರೆ ಪ್ರತಿಯೋಬ್ಬರು ಒಂದಲ್ಲ ಒಂದು ರಿತಿ ಕಳ್ಳರೆ ಅಲ್ಲವೇ? ಎಲ್ಲರೊಳಗೂ ಒಬ್ಬ ಕಳ್ಳ ಇದ್ದೆ ಇರುತ್ತಾನೆ, ಆದರೆ ಯಾರು ಹೇಳಿಕೊಳ್ಳುವುದಿಲ್ಲ ಅಷ್ಟೆ, ನನ್ನ ಪ್ರಕಾರ ಪ್ರತಿಯೋಬ್ಬರು ಪ್ರತಿ ದಿನ ಏನಾದರು ಕಳ್ಳತನ ಮಾಡುತ್ತಲೆ ಇರುತ್ತಾರೆ, ಆದರೆ ಯಾರು ತಾನು ಮಾಡಿದ್ದು ಕಳ್ಳತನವೇಂದು ಹೇಳುವುದಿಲ್ಲ ಅಷ್ಟೆ, ಎಲ್ಲೂ ಕೆಲವರು ಯೋಗ್ ರಾಜ್ ಬಟ್ಟರಂತೆ "ಹೇಳಿ ಕೇಳಿ ಮೊದಲ ಚೂರು ಕಳ್ಳ ನಾನು" ಎಂದು ಬಿಂದಾಸ್ ಆಗಿ ಹಾಡುತ್ತಾರೆ, ಆ ಸಾಲಿಗೆ ಈಗ ನಾನು ಸೇರುತ್ತಿದ್ದೆನೆ.
          ಬಾಲ್ಯದಿಂದಲು ನಾನು ಇದವರೇಗು ಅದೇಷ್ಟು ವಸ್ತುಗಳನ್ನು ಕದಿದ್ದೆನೊ ನನಗೆ ಗೊತ್ತಿಲ್ಲ, ಕೆಲವು ಮಾತ್ರ ನೆನಪಿನಲ್ಲಿ ಇವೆ, ಉಳಿದೇವಲ್ಲೆ ಮರೆತು ಹೋಗಿವೆ, ಆ ಕೆಲವು ವಸ್ತುಗಳ ವಿವರ ಇಲ್ಲಿದೆ ನೀವು ಒಮ್ಮ ಓದಿ ಬಿಡಿ ಆದರೆ ದಯವಿಟ್ಟು ಪೋಲಿಸರಿಗೆ ಮಾತ್ರ ಹೇಳಬೇಡೆ ಪ್ಲೀಜ್.
          ನನ್ನ ಕಳ್ಳತನ ಆರಂಭವಾಗುವದು ಶಾಲೆಯಿಂದಲೆ ಅದೆಷ್ಟು ಹಿಂದಿರುಗಿಸದ ಬೆರೆಯವರ ಪೆನ್ನು, ಪೆನ್ಸಿಲ್ ಗಳು ನನ್ನಬಳಿಯೆ ಉಳಿದ ಹೋಗಿದ್ದವು,
          ಯಾರದೋ ತೋಟದಲ್ಲಿ ಕದ್ದು ತಿಂದ ಹಣ್ಣು
         ಅಪ್ಪನ ಜೇಬಿನಿಂದ ಕದ್ದ ದುಡ್ಡು
         ಅಮ್ಮನ ಸಕ್ಕರೆಯ ಡಭ್ಭಿಯಿಂದ ಕದ್ದ ಚಿಲ್ಲರೆ ಕಾಸು,
          ಬಸ್ ನಲ್ಲಿ ಟಿಕೇಟ್ ತಗಿಸದೆ ಕದ್ದು ಪ್ರಯಾಣ ಮಾಡಿದ್ದು
          ಕ್ರೀಕೆಟ್ ಆಡುವಾಗ ಸುಳ್ಳು ಲೆಕ್ಕ ತೊರಿಸಿ ಕದ್ದ ರನ್ ಗಳು
          ಪ್ರೋಗ್ರೆಸ್ ರೀರ್ಪೋಟ್ ನಲ್ಲಿ ಅಪ್ಪನ ಸಹಿ ಕದ್ದು ನಾನೆ ಮಾಡಿದ್ದು
          ಶಾಲೆಯಲ್ಲಿ ಪರೀಕ್ಷೆಗು ಮೊದಲೆ ಪ್ರಶ್ನೆ ಪತ್ರಿಕೆ ಕದಿದ್ದು
          ಉತ್ತರ ಪತ್ರಿಕೆಯನ್ನೆ ಕದ್ದು ಬದಲಿಸಿದ್ದು
          ಕಾಲೇಜ್ ನಲ್ಲಿ ಪ್ರತಿ ಇಂರ್ಟನಲ್ಲನಲ್ಲಿ ಕದ್ದು ಕಾಪಿ ಮಾಡಿದ್ದು,
          ಕದ್ದು ಪಡೆದ ಮತ್ತು ಬೇರೆಯವರಿಗೆ ಕೊಟ್ಟ ಹಾಜರಿಗಳು
          ಕದ್ದು ಹುಡಿಗಿಯರಿಗೆ ಲೈನ್ ಹೋಡೆದಿದ್ದು,
          ಕದ್ದು ಮೋವಿಗೆ ಹೋಗಿದ್ದು
          ಕದ್ದು ಸಿಗರೇಟ್ ಸೇದಿದ್ದು
          ಕದ್ದು ಕುಡುದಿದ್ದು
          ಅಷ್ಟೆ ಯಾಕೆ ಮೊದಲ ಪ್ರೇಮ ಪತ್ರ, ಅದು ಹೆಸರೆ ಇಲ್ಲದ ಪ್ರೇಮ ಪತ್ರ, ಅದೊ ಕೊಡ ಅಪ್ಪಟ ಕದ್ದ ಮಾಲು, ಯಾವೊದೊ ಪತ್ರಿಕೆಯಿಂದ ನಕಲು ಮಾಡಿದ್ದು,

          ಇನ್ನು ಇತ್ತಿಚಿನ ಲೇಟೆಷ್ಟ್ ಕಳತನಗಳೆಂದರೆ ವಾಟ್ಸ್ ಆಪ್, ಪೇಸ್ ಬುಕ್ ನಲ್ಲಿ ಯಾರಾರೋದು ಪೋಟೊಗಳನ್ನು ಅನುಮತಿಯಿಲ್ಲದ್ದೆ ಕಾದು ಸೆವ್ ಮಾಡಿಕೊಂಡಿದ್ದು, ಆಪೀಸಿನಲ್ಲಿ ಪಿ,ಯಲ್ ರಜೆ ಊಳಿಸಲು ಪಡೆದ ಸುಳ್ಳು ಸಿಕ್ ಲಿವ್ ಗಳು, ಅಷ್ಟೆ ಯಾಕೆ ಇನ್ ಕಮ್ ಟ್ಯಕ್ಸ್ ಹಣ ಉಳಿಸಲು(ಕದಿಯಲು) ಸುಳ್ಳು ಲೆಕ್ಕ ತೊರಿಸುವದು, ಪೋಲಿಸ್ ರು ಇಲ್ಲದೆ ಇರುವುದನ್ನು ಗಮನಿಸಿ ಸಿಗ್ನಲ್ ಜಂಪ್ ಮಾಡುವಾಗ ಕೊಡ ನನ್ನಳೊಗಿನ ಕಳ್ಳ ಸದಾ ಎಚ್ಚರಕೆಯಿಂದ ಇರುತ್ತಾನೆ, ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿ ಪೋಲಿಸರ ಕೈಗೆ ಸಿಕ್ಕು ನೂರರ ಬದಲು ೫೦ ನೋಟು ಕೂಟ್ಟು ೫೦ ರೂಪಾಯಿ ಊಳಿಸುವಾಗಲತ್ತು ನಾನೊಬ್ಬ ಅಪ್ಪಟ್ಟ ಕಳ್ಳನೆ ಆಗಿರುತ್ತೆನೆ.

          ಈಗ ಹೇಳಿ ಪ್ರಪಂಚದಲ್ಲಿ ಎಲ್ಲರು ಕಳ್ಳರೆ ಅಲ್ಲವೆ , ಪ್ರಪಂಚವೆ ಒಂದು ಕಳ್ಳರ ಸಂತೆ, ನಿಜವಾದ ಕಳ್ಳ ಕಳ್ಳತನ ಮಾಡುವುವನು ಹೊಟ್ಟೆಪಾಡಿಗಾಗಿ ಮತ್ತು ಅವನ ಒಳಗೆ ಕೇವಲ ಒಬ್ಬನೆ ಕಳ್ಳನಿರುತ್ತಾನೆ ಆದರೆ ನಮ್ಮ-ನಿಮ್ಮೂಳಗೆ ಅದೆಷ್ಟು ಕಳ್ಳರಿದ್ದಾರು ನಮಗೆ ಗೊತ್ತಿಲ್ಲ ಮತ್ತು ನಾವು ಕದಿಯೂವುದು........................!!!!!

Wednesday, March 23, 2016

ಹೆಸರೇ ಇಲ್ಲದವರ ಕಥೆಗಳು-1:- " ಟಿಪ್ ಟಿಪ್ ಬರಸಾ ಪಾನಿ"

       ಈ ತಿಂಗಳ ಸಂಭಳದ ಕೆಲಸಕ್ಕೆ ಸೇರಿದ ನಂತರ ಜೀವಿನ ಒಂದು ರೀತಿಯಲ್ಲಿ ಜೀತದಾಳಿನಂತಾಗಿದೆ, ಸೋಮವಾರದಿಂದ ಶುಕ್ರವಾರದತನಕ ಕತ್ತೆ ತರ ಕೆಲಸ ಮಾಡುವುದು ವಾರದ ಅಂತ್ಯಕೆ ಮಹಾನ ಸಾಧನೆಗೇದವರಂತೆ ವರ್ತಿಸುತ್ತಾ ವೈಯಕ್ತಿಕ ಹವ್ಯ್ಯಾಸಗಳೆ ಮರೆತು ಹೋಗಿವೆ, ಇದಲ್ಲದಕು ಕೋನೆ ಹೇಳಬೆಕೇಂದು ಶಪಥ ಮಾಡಿ ಇಂದಿನಿಂದ ಪ್ರತಿ ದಿನ ಕನಿಷ್ಠ ಅರ್ಧ ಗಂಟೆ ಬರವಣಿಗೆಗೆ ಮಿಸಲು ಇಡಲು ನಿರ್ದರಿಸಿರುವೆ ಅದರ ಪ್ರತಿಪಲವೆ ಈ " ಹೆಸರೇ ಇಲ್ಲದವರ ಕಥೆಗಳು"... ಇಲ್ಲಿ ಬರುವ ಕಥೆಗಳಗಿ ಧ್ವನಿ ಮಾತ್ರ ನಾನು ಆತ್ಮ ಮಾತ್ರ ಬೇರೆ ಯಾರೊ, ನಾನು ಕೇಳಿದ, ನೋಡಿದ, ಅಪರಿಚಿತರ ( ಕೆಲವರು ಪರಿಚಿತರು) ವೈಯಕ್ತಿಕ ಜೀವನದ ಅನುಭಗಳನ್ನು ನಿಮ್ಮ ಜೋತೆ ಹಂಚಿಕೊಳ್ಳುವ ಸಣ್ಣ ಪ್ರಯತ್ನ..... ಎಂದಿನಂತೆ ನಿಮ್ಮ ಪ್ರೋತ್ಸಾಹ ಸದಾ ನನ್ನ ಜೋತೆ ಇರಲಿ,

ಹೆಸರೇ ಇಲ್ಲದವರ ಕಥೆಗಳು-1:-
 " ಟಿಪ್ ಟಿಪ್ ಬರಸಾ ಪಾನಿ"
    ನನ್ನ ಊರು ಉತ್ತರ ಕರ್ನಾಟಕದ ಬಯಲು ಸೀಮೆಯ ಒಂದು ಸಣ್ಣಹಳ್ಳಿ, ಬಯಲು ಸೀಮೆಯ ಜನ ಸ್ವಲ್ಪ ಒರಟು ಮತ್ತು  ಸುಲಭವಾಗಿ ತಮ್ಮ ಭಾವನೆಗಳನ್ನು ವ್ಯಕ್ಯಪಡಿಸುವುದಿಲ್ಲ, ಬಯಲು ಸಿಮೇಯ ಬೇಸುಗೆಯ ಸಂಜೆಗಳು ಬಲು ವಿಚಿತ್ರ ನನಗಂತು ಅವು ಬಹು ಬೇಸರದ ಸಂಜೆಗಳು, ಜೋರಾಗಿ ಬಿಸುವ ಬಿಸಿಗಾಳಿ, ಎಲೇ ಉದಿರಿಸಿ ನಿಂತ ಮರಗಳು, ಕೆಂಪನೆ ಮಣ್ಣಿನ ಬೋಳು ಗುಡ್ಡಗಳು, ಜೋತೆಗೆ ನಮ್ಮರಿನ ಬೇಸುಗಿಯೆ ಸಂಜೆಗಳಲ್ಲಿ ಕರೆಂಟು(ವಿದ್ಯುತ್ತ) ಇರುವುದೇ ಇಲ್ಲ ಅದು ಬರುವುದು ರಾತ್ರಿ ೮ ನಂತರವೇ, ಕೆಲವಮ್ಮೆ ಸಂಜೆಗೆ ಸರಿಯಾಗಿ ವಿಪರೀತ ಮೋಡ ಕವಿದು ಗುಡುಗಲು ಮಿಂಚಲು ಆರಂಭವಾದರೆ ಮುಗಿಯಿತು ಅದೊಂದು ಯುದ್ದಭೂಮಿಯಂತೆ, ಬೇರೆಯವರ ಬಗ್ಗೆ ಗೊತ್ತಿಲ್ಲ ಆದರೆ ನನಗಂತು ಇಂತಹ ಸಂಜೆಗಳು ಅಂದರೆ ಒಂದು ರಿತಿಯ ವಿಚಿತ್ರ ತಳಮಳ.


          ನಾವು ಆಗ ಇದ್ದ ಮನೆ ನಮ್ಮ ಅಜ್ಜನ ಕಾಲದ ನಾಲ್ಕು ಅಂಕಣದ ಮಣ್ಣಿನ ಮಾಳಿಗೆಯ ಚಿಕ್ಕಮನೆ, ಅಂಕಣವೇಂದರೆ ನನಗು ಸರಿಯಾಗಿ ಗೋತ್ತಿಲ್ಲ, ನಾನು ಬೇರೆಯವರಿಂದ ಕೇಳಿ ತಿಳಿದಿರುವ ಪ್ರಕಾರ ನಾಲ್ಕು ಕಂಭಗಳ ಮಧ್ಯದ ಜಾಗಕ್ಕೆ ಒಂದು ಅಂಕಣವೇಂದು ಕರೆಯುತ್ತಾರೆ, ನಮ್ಮ ಮನೆ ೧೦ ಕಂಭಗಳಿಂದ ಕೂಡಿದ್ದ ನಾಲ್ಕು ಅಂಕಣಗಳ ಚಿಕ್ಕ ಮನೆ, ಒಂದು ಅಡುಗೆ ಮನೆ, ಒಂದು ದೇವರ ಮನೆ ಹಾಗು ಚಿಕ್ಕ ನಡುಮನೆ(ಹಾಲ್) ಅಷ್ಟೆ, ಮಳಗಳಷ್ಟು ಅಗಲದ ಮಣ್ಣು ಮತ್ತು ಕಲ್ಲಿನಿಂದ ಕೂಡಿದ ಗೋಡೆಗಳು, ಕಟ್ಟಿಗೆ ಮತ್ತು ಮಣ್ಣಿನ ಮಾಳಿಗೆ ಅಷ್ಟೆ ಆಮನೆಯ ಆಧಾರ, ಆ ಮನೆಗೆ ಯಾವುದೆ ಕಿಡಕಿಗಳು ಇರಲಿಲ್ಲ, ಬೆಳಕು ಮತ್ತು ಗಾಳಿ ಬರಲು ಎಲ್ಲ ಕೋಣೆಗಳಿಗು ಮಾಳಿಗೆಯಲ್ಲಿ ಒಂದೊಂದು ಭಾದಾಳ( ನಮ್ಮ ಊರ ಆಡು ಭಾಷೆಯಲ್ಲಿ ಭಾದಾಳವೇಂದರೆ ಬೇಳಕಿನ ಕಿಂಡಿ)ಮಾಡಿದ್ದರು.

          ಸಂಜೆ ಮಿಂಚು ಗುಡುಗು ಆರಂಭವಾದ ತಕ್ಷಣ ಅಮ್ಮ ನನಗೆ ಮನೆಹತ್ತಿ ಭಾದಾಳ ಮುಚ್ಚಲು ಹೆಳುತಿದ್ದರು, ಪ್ರತಿ ಬೆಳಕಿನ ಕಿಂಡಿಗು (ಭಾದಾಳ) ಒಂದೊಂದು ಮುರಿದ ಹಳೆಯ ಬಿದರಿನ ಬುಟ್ಟಿ ಮುಚ್ಚಿ ಅದರ ಮೇಲೆ ತಡಪಾಲು ( ಖಾಲಿಯಾದ ರಾಸಾಯನಿಕ ಗೊಬ್ಬರದ ಚೀಲಗಳಿಗೆ ನಾವು ಆಡು ಭಾಷೆಯಲ್ಲಿ ತಡಪಾಲು ಎನ್ನುತ್ತೆವೆ) ಮುಚ್ಚಿ ಅದಕ್ಕೆ ಸುತ್ತಲು ನಾಲ್ಕು ಕಲ್ಲು ಇಟ್ಟು ಗಾಳಿಗೆ ಹಾರದಂತೆ ಭದ್ರ ಪಡಿಸುತಿದ್ದೆವು, ಹಾ ಮರೆತಿದ್ದೆ ಆಗಿನ ಮನೆಗಳಿಗೆ ಈಗಿನ ಹಾಗೆ ಮೇಟ್ಟಿಲುಗಳು ಇರತಿರಲಿಲ್ಲ, ಮನೆ ಹತ್ತಲು ಬಿದರಿನಿಂದ ಮಾಡಿದ ಏಣಿಯ ಸಹಾಯ ಬೇಕಿತ್ತು, ಆದರೆ ಏಣಿಯ ಸಹಾಯವಿಲ್ಲದೆ ಮನೆ ಹತ್ತುವ ಕಲೆ ನನಗೆ ಕರಗತವಾಗಿತ್ತು,( ಕೇವಲ ನಮ್ಮ ಮನೆ ಮಾತ್ರ) ಅದಕ್ಕೆ ಬೇಸಿಗೆಯ ಬೇಸರದ ಸಂಜೆ ಮಳೆ ಆರಂಭವಾಗುವ ಸೂಚನೆ ಸಿಕ್ಕ ಕ್ಷಣ ಭಾದಾಳ ಮುಚ್ಚುವ ಕೆಲಸವನ್ನು ಅಮ್ಮ ನನಗೆ ವಹಿಸುತಿದ್ದಳು, ನಮ್ಮ ಊರಿನ ಕಡೆ ಬೇಸಿಗೆಯ ಸಂಜೆಗಳಲ್ಲಿ ಏಷ್ಟು ಜೋರಾಗಿ ಮಳೆ ಬರುತಿತ್ತು ಅಂದರೆ ಎಷ್ಟೆ ಭದ್ರವಾಗಿ ಭಾದಾಳ ಮುಚ್ಚಿದ್ದರು ಅದರಿಂದ ಮಳೆ ನೀರು ಒಳಗೆ ಬಸಿಯುತಿತ್ತು, ಅಷ್ಟೆ ಅಲ್ಲ ಬೇಸುಗೆ ಬಂದರೆ ಸಾಕು ಮಣ್ಣಿನ ಮಾಳಿಗೆಯ ಮೇಲೆ ಇರುವೆಗಳು ತಮ್ಮ ಸಂಸಾರ ಹೂಡುತಿದ್ದವು ಅಷ್ಟೆ ಅಲ್ಲದೆ ಗೂಡುಗಳನ್ನು ನಿರ್ಮಿಸುತ್ತಿದ್ದವು( ಮಾಳಿಗೆ ಮೇಲೆ ರಂಧ್ರ ಕೊರೆಯುತ್ತಿದ್ದವು) ಮಳೆ ಬಂದಾಗ ಈ ಇರುವೆ ಗೂಡುಗಳ ಮೂಲಕ ಮಳೆ ನೀರು ಮನೆಯ ಒಳಗೆ ಬಸಿಯುತ್ತಿತ್ತು, ಮಳೆ ಆರಂಭವಾದ ಕೇಲವೆ ಕ್ಷಣದಲ್ಲಿ  ಮನೆ ಪೂರ್ಣ ಸೋರುತಿತ್ತು, ಆಗ ಸೋರುವ ಜಾಗಗಳಲ್ಲಿ ಪಾತ್ರೆಗಳನ್ನು ಇಟ್ಟು ಸೊರುತಿದ್ದ ಮಳೆ ನೀರನ್ನು ಸಂಗ್ರಹಿಸಿ ಹೋರಗೆ ಹಾಕುತಿದ್ದವು, ಆ ಕ್ಷಣ ನೋಡಿಯೆ ಶರೀಪ ಸಾಹೇಬರು "ಸೋರುಹುತಿಹದು ಮನೆಯ ಮಳಿಗೆ" ಹಾಡು ಬರೆದಿದ್ದರೊ ಏನೊ...! ಆ ಕ್ಷಣದಲ್ಲಿ ಹೊಮ್ಮುತಿದ್ದ ಟಪ್ ಟಪ್ ಶಭ್ದ ಕೇಳಿದಾಗಲೆಲ್ಲ ನನಗೆ "ಮೊಹ್ರಾ" ಚಿತ್ರದ " ಟಿಪ್ ಟಿಪ್ ಬರಸಾ ಪಾನಿ" ಹಾಡೆ  ನೆನಪಿಗೆ ಬರಿತಿತ್ತು, ಎಲ್ಲರಿಗೂ " ಟಿಪ್ ಟಿಪ್ ಬರಸಾ ಪಾನಿ" ಒಂದು ರೋಮ್ಯಾಟಿಕ್ ಸಾಂಗ್ ಆದರೆ ನನಗೆ ಮಾತ್ರಾ ಇಂದಿಗು " ಟಿಪ್ ಟಿಪ್ ಬರಸಾ ಪಾನಿ" ಸೋರುತಿದ್ದ ನಮ್ಮ ಹಳೆಯ ಮನೆಯ ನೆನಪು ತರವು ಹಾಡು, ಮರು ದಿನ ಮನೆ ಹತ್ತಿ ಮಾಳಿಗೆಯಲ್ಲಿಯ ಇರುವೇ ಗೊಡುಗಳೆನೆಲ್ಲ ಹುಡುಕಿ ಮುಚ್ಚುವುದೇ ಪ್ರಮುಖ ಕೆಲಸ, ಎರಡೊ-ಮೂರೂ ದಿನಗಳ ನಂತರ ಮತ್ತದೆ ಸಂಜೆ ಮಳೆ ಮತ್ತದೆ " ಟಿಪ್ ಟಿಪ್ ಬರಸಾ ಪಾನಿ".

         ಈಗ ಅದು ಕೇವಲ ನೆನಪು ಮಾತ್ರ, ನಾವು ಬೆಳಿಯುತ್ತಾ ಬೆಳೆಯುತ್ತಾ ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಾ ಬಂದಿತು, ನಾಲ್ಕು ಅಂಕಣದ ಮಣ್ಣಿನ ಮನೆಯಿಂದ ೩ ಬಿ ಎಚ್ ಕೆ ಮನೆಗೆ ಬಂದೆವು, ಈ ಆಧಿನಿಕ ಮನೆಗೆ ಭಾದಳ(ಬೆಳಕಿನ ಕಿಂಡಿ)ಗಳಿಲ್ಲ, ಮನೆಗೆ ಮಣ್ಣಿನ ಮಾಳಿಗೆ ಇರದ ಕಾರಣ ಇರುವೆಗಳು ಗೋಡು ಕಟ್ಟುವುದಿಲ್ಲ, ಮಳೆ ಬಂದಾಗ ಮನೆ ಸೋರುವುದು ಇಲ್ಲ, " ಟಿಪ್ ಟಿಪ್ ಬರಸಾ ಪಾನಿ" ಹಾಡು ಎಲ್ಲವು ಹಳೆಯ ಮಣ್ಣಿನ ಮನೆಯೊಂದಿಗೆ ಮರೆತೆ ಹೋಗಿವೆ.
        ಬೆಳೆಯುತ್ತಾ ಬೆಳೆಯುತ್ತಾ ಓದು ಕೆಲಸವೆಂದು ಹುಟ್ಟಿದ ಮನೆ ಊರು ಎಲ್ಲ ಬಿಟ್ಟು ಬೆಂಗಳೂರು ಎಂಬ ಮಹಾನಗರ ಸೇರಿದೆವು, ಬಂದು ಇಷ್ಟು ವರ್ಷವಾದರು ಬೆಂಗಳೂರು ಬಯಲು ಸೇಮೆಯ ಊರೂ ಮಲೇನಾಡೂ ಗೊತ್ತೆ ಆಗುತ್ತಿಲ್ಲ, ಕೆಲವು ಎರಿಯಾಗಳು ಅಪ್ಪಟ ಮಲೆನಾಡಿನಂತೆ ಇನ್ನೂ ಕೆಲವು ಅಪ್ಪಟ ಬಯಲು ಸೀಮೆಯಂತೆ ಇವೆ, ಇನ್ನು ವೈಟ್ ಪೀಲ್ಡ್ ಕಡೆ ಹೋದರೆ ಆಂದ್ರದಂತೆ ಎಲೇಕ್ಟ್ರಾನೀಕ್ಸ್ ಸಿಟಿ ಕಡೆ ಹೋದರೆ ತಮಿಳು ನಾಡಿಗೆ ಹೋದಂತೆ ಅನ್ನಿಸುತ್ತದೆ, ಅಷ್ಟೆ ಏಕೆ ಕೆಲವು ಪ್ರದೇಶಗಳು ಬ್ರಾಮಣರ ಅಗ್ರಹಾರದಂತೆ, ಇನ್ನು ಕೆಲವು ಉತ್ತರ ಕರ್ನಾಟಕದ ಲಿಂಗಾಯತರ ಹಳ್ಳಿಗಳತೆ, ಕೇಲವು ಮಂಡ್ಯದ ವಕ್ಕಲಿಗರ ಊರುಗಳಂತೆ ತೋರುತ್ತವೆ ಒಟ್ಟಿನಲ್ಲಿ ಬೆಂಗಳೂರು ನನಗೆ ಬಿಡಿಸದ ಕಂಗಟ್ಟು.

       ಬೆಂಗಳೂರಿನ ಬೇಸುಗೆಯ ಸಂಜೆಗಳಿಗು ನನ್ನ ಊರಿನ ಸಂಜೆಗಳಿಗು ತುಂಭಾ ವ್ಯಾತಸವಿದೆ ಬೆಂಗಳೂರಿನ ಸಂಜೆಗಳಿಗೆ ಬಣ್ಣಗಳೆ ಇಲ್ಲ, ಇಲ್ಲಿನ ಪ್ರತಿ ಸಂಜೆಗಳು ಒಂದೆ ತರ(ಮಳೆ,ಚಳಿ, ಬೇಸುಗೆ) ಒಂದೇ ಬಣ್ಣ, ಇಷ್ಟೆಲ್ಲವನ್ನು ಇಗ ನೆನಪಿಸಿಕೊಳ್ಳಲು ಕಾರಣವೇಂದರೆ, ಇಂತಹದೆ ಒಂದು ಬಣ್ಣವಿಲ್ಲದ ಬೆಂಗಳೂರಿನ ಸಂಜೆಯಲ್ಲಿ ಸೂರಿದ ಸಣ್ಣನೆಯ ಮಳೆ ಮತ್ತು ಆ ಮಳೆಯಲ್ಲಿ ನೆನೆಯುತ್ತಾ " ಟಿಪ್ ಟಿಪ್ ಬರಸಾ ಪಾನಿ" ಎಂದು ಹಾಡುತಿದ್ದ ಆ ಹುಡಗಿ



ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...