ಈ ತಿಂಗಳ
ಸಂಭಳದ ಕೆಲಸಕ್ಕೆ ಸೇರಿದ ನಂತರ ಜೀವಿನ ಒಂದು ರೀತಿಯಲ್ಲಿ ಜೀತದಾಳಿನಂತಾಗಿದೆ, ಸೋಮವಾರದಿಂದ ಶುಕ್ರವಾರದತನಕ
ಕತ್ತೆ ತರ ಕೆಲಸ ಮಾಡುವುದು ವಾರದ ಅಂತ್ಯಕೆ ಮಹಾನ ಸಾಧನೆಗೇದವರಂತೆ ವರ್ತಿಸುತ್ತಾ ವೈಯಕ್ತಿಕ ಹವ್ಯ್ಯಾಸಗಳೆ
ಮರೆತು ಹೋಗಿವೆ, ಇದಲ್ಲದಕು ಕೋನೆ ಹೇಳಬೆಕೇಂದು ಶಪಥ ಮಾಡಿ ಇಂದಿನಿಂದ ಪ್ರತಿ ದಿನ ಕನಿಷ್ಠ ಅರ್ಧ ಗಂಟೆ
ಬರವಣಿಗೆಗೆ ಮಿಸಲು ಇಡಲು ನಿರ್ದರಿಸಿರುವೆ ಅದರ ಪ್ರತಿಪಲವೆ ಈ " ಹೆಸರೇ ಇಲ್ಲದವರ ಕಥೆಗಳು"...
ಇಲ್ಲಿ ಬರುವ ಕಥೆಗಳಗಿ ಧ್ವನಿ ಮಾತ್ರ ನಾನು ಆತ್ಮ ಮಾತ್ರ ಬೇರೆ ಯಾರೊ, ನಾನು ಕೇಳಿದ, ನೋಡಿದ, ಅಪರಿಚಿತರ
( ಕೆಲವರು ಪರಿಚಿತರು) ವೈಯಕ್ತಿಕ ಜೀವನದ ಅನುಭಗಳನ್ನು ನಿಮ್ಮ ಜೋತೆ ಹಂಚಿಕೊಳ್ಳುವ ಸಣ್ಣ ಪ್ರಯತ್ನ.....
ಎಂದಿನಂತೆ ನಿಮ್ಮ ಪ್ರೋತ್ಸಾಹ ಸದಾ ನನ್ನ ಜೋತೆ ಇರಲಿ,
2. ನನ್ನೊಳಗೊಬ್ಬ ಕಳ್ಳ
ನಾನು ಚಿಕ್ಕವನಿದ್ದಾಗ ಯಾವುದಕ್ಕದಾರು
ತುಂಭಾ ಹಠ ಮಾಡಿದಾಗ, ಅತ್ತಾಗ ಅಮ್ಮ " ನೋಡ್ ನೀ ಹಿಂಗ ಹಠ ಮಾಡಿದರ
ನಿನ್ನ ಕಳ್ಳಂಗ ಹಿಡಿದುಕೊಡ್ತಿನಿ" ಎಂದು ಹೆದರಿಸುತಿದ್ದ ನೆನಪು, ಭಾಲ್ಯದಲ್ಲಿ ಕಳ್ಳರೇಂದರೆ ನನಗೆ ಅವ್ಯಕ್ತ ಭಯ , ಕಳ್ಳರೇಂದರೆ
ದಪ್ಪ ಮೀಸಿಯ, ಗಡ್ಡ ಬಿಟ್ಟ, ದಡುತಿ ದೇಹದ,
ಬನಿಯನ್ನು ತೋಟ್ಟು ಸದಾ ಬಿಡಿ ಸೇದುತ್ತಿರುವ ಹೀಗೆ ವಿಚಿತ್ರ ಕಲ್ಪನೆಗಳು ಇದ್ದವು,
ಇದರ ಜೋತೆ ಕಳ್ಳರೇಂದರೆ ತುಂಭಾ ಕೆಟ್ಟವರು, ಸಿಕ್ಕಿದೆನ್ನಲ್ಲೆ
ಸಿಕ್ಕವರನ್ನೆಲ್ಲ ದೊಚುವವರು, ಅವರನ್ನು ನಾನು ರಾತ್ರಿ ಅಲ್ಲಿ ನೋಡಿದ್ದೆ
ಇಲ್ಲಿ ನೋಡಿದ್ದೆ, ನೋಡಲು ಹಾಗೆ ಇದ್ದರು ಹೀಗೆ ಇದ್ದರು, ಎಂದು ಹೆದರುಸುತ್ತಿದ್ದ ಸ್ನೇಹಿತರು ಬೇರೆ.
ಹೀಗೆ ಭಾಲ್ಯದಿಂದಲ್ಲೆ ಕಳ್ಳರೇಂದರೆ
ವಿಚಿತ್ರ ನೋಟ ನನ್ನದು, ಯಾರಾದರು ಯಾರಿಗಾದರು ಕಳ್ಳರೇಂದರು ಕರೆದರೆ ಸಾಕು ಅವರಿಂದ
ಮಾರು ದೂರ ಓಡುತಿದ್ದವ ನಾನು, ಕಳ್ಳತನ ಮಹಾ ಅಪರಾದವೆಂದು ನಂಬಿದ್ದವ ನಾನು,
ಆದರೆ ನನಗೆ ಆಗ ತಿಳಿಯದೆ ಹೋದ ವಿಷಯವೇಂದರೆ ನನ್ನಲ್ಲೂ ಒಬ್ಬ ಕಳ್ಳನಿದ್ದಾನೆ,
ನಾನು ಒಬ್ಬ "ಕಳ್ಳ" ಎಂದು, ಇದವರೆಗು ನನಗೆ
ಸರಿಯಾಗಿ ಉತ್ತರ ಸಿಗದ ಪ್ರಶ್ನೆಯೇಂದರೆ "ಕಳ್ಳ" ಅಂದರೆ ಯಾರು? ಕಳ್ಳತನವೇಂದರೆ ಏನು? ಬೇರೆಯವರ ವಸ್ತುಗಳ್ಳನ್ನು ಹೇಳದೆ ತೆಗೆದುಕೊಳ್ಳುವವನೇ...?
ಅಥವಾ ತನ್ನದಲ್ಲದ ತನಗೆ ಸಂಭಂದವಿಲ್ಲದ ವಸ್ತುಗಳನ್ನು ತನ್ನ ಬಳಿ ಇಟ್ಟುಕೊಳ್ಳುವವನೇ...?
ಈ ತರ ಯೋಚಿಸಿದರೆ ಪ್ರತಿಯೋಬ್ಬರು ಒಂದಲ್ಲ
ಒಂದು ರಿತಿ ಕಳ್ಳರೆ ಅಲ್ಲವೇ? ಎಲ್ಲರೊಳಗೂ ಒಬ್ಬ ಕಳ್ಳ ಇದ್ದೆ ಇರುತ್ತಾನೆ,
ಆದರೆ ಯಾರು ಹೇಳಿಕೊಳ್ಳುವುದಿಲ್ಲ ಅಷ್ಟೆ, ನನ್ನ ಪ್ರಕಾರ
ಪ್ರತಿಯೋಬ್ಬರು ಪ್ರತಿ ದಿನ ಏನಾದರು ಕಳ್ಳತನ ಮಾಡುತ್ತಲೆ ಇರುತ್ತಾರೆ, ಆದರೆ
ಯಾರು ತಾನು ಮಾಡಿದ್ದು ಕಳ್ಳತನವೇಂದು ಹೇಳುವುದಿಲ್ಲ ಅಷ್ಟೆ, ಎಲ್ಲೂ ಕೆಲವರು
ಯೋಗ್ ರಾಜ್ ಬಟ್ಟರಂತೆ "ಹೇಳಿ ಕೇಳಿ ಮೊದಲ ಚೂರು ಕಳ್ಳ ನಾನು" ಎಂದು ಬಿಂದಾಸ್ ಆಗಿ ಹಾಡುತ್ತಾರೆ,
ಆ ಸಾಲಿಗೆ ಈಗ ನಾನು ಸೇರುತ್ತಿದ್ದೆನೆ.
ಬಾಲ್ಯದಿಂದಲು ನಾನು ಇದವರೇಗು ಅದೇಷ್ಟು
ವಸ್ತುಗಳನ್ನು ಕದಿದ್ದೆನೊ ನನಗೆ ಗೊತ್ತಿಲ್ಲ, ಕೆಲವು ಮಾತ್ರ
ನೆನಪಿನಲ್ಲಿ ಇವೆ, ಉಳಿದೇವಲ್ಲೆ ಮರೆತು ಹೋಗಿವೆ, ಆ ಕೆಲವು ವಸ್ತುಗಳ ವಿವರ ಇಲ್ಲಿದೆ ನೀವು ಒಮ್ಮ ಓದಿ ಬಿಡಿ ಆದರೆ ದಯವಿಟ್ಟು ಪೋಲಿಸರಿಗೆ
ಮಾತ್ರ ಹೇಳಬೇಡೆ ಪ್ಲೀಜ್.
ನನ್ನ ಕಳ್ಳತನ ಆರಂಭವಾಗುವದು ಶಾಲೆಯಿಂದಲೆ
ಅದೆಷ್ಟು ಹಿಂದಿರುಗಿಸದ ಬೆರೆಯವರ ಪೆನ್ನು, ಪೆನ್ಸಿಲ್ ಗಳು
ನನ್ನಬಳಿಯೆ ಉಳಿದ ಹೋಗಿದ್ದವು,
ಯಾರದೋ ತೋಟದಲ್ಲಿ ಕದ್ದು ತಿಂದ ಹಣ್ಣು
ಅಪ್ಪನ ಜೇಬಿನಿಂದ ಕದ್ದ ದುಡ್ಡು
ಅಮ್ಮನ ಸಕ್ಕರೆಯ ಡಭ್ಭಿಯಿಂದ ಕದ್ದ
ಚಿಲ್ಲರೆ ಕಾಸು,
ಬಸ್ ನಲ್ಲಿ ಟಿಕೇಟ್ ತಗಿಸದೆ ಕದ್ದು
ಪ್ರಯಾಣ ಮಾಡಿದ್ದು
ಕ್ರೀಕೆಟ್ ಆಡುವಾಗ ಸುಳ್ಳು ಲೆಕ್ಕ
ತೊರಿಸಿ ಕದ್ದ ರನ್ ಗಳು
ಪ್ರೋಗ್ರೆಸ್ ರೀರ್ಪೋಟ್ ನಲ್ಲಿ ಅಪ್ಪನ
ಸಹಿ ಕದ್ದು ನಾನೆ ಮಾಡಿದ್ದು
ಶಾಲೆಯಲ್ಲಿ ಪರೀಕ್ಷೆಗು ಮೊದಲೆ ಪ್ರಶ್ನೆ
ಪತ್ರಿಕೆ ಕದಿದ್ದು
ಉತ್ತರ ಪತ್ರಿಕೆಯನ್ನೆ ಕದ್ದು ಬದಲಿಸಿದ್ದು
ಕಾಲೇಜ್ ನಲ್ಲಿ ಪ್ರತಿ ಇಂರ್ಟನಲ್ಲನಲ್ಲಿ
ಕದ್ದು ಕಾಪಿ ಮಾಡಿದ್ದು,
ಕದ್ದು ಪಡೆದ ಮತ್ತು ಬೇರೆಯವರಿಗೆ ಕೊಟ್ಟ
ಹಾಜರಿಗಳು
ಕದ್ದು ಹುಡಿಗಿಯರಿಗೆ ಲೈನ್ ಹೋಡೆದಿದ್ದು,
ಕದ್ದು ಮೋವಿಗೆ ಹೋಗಿದ್ದು
ಕದ್ದು ಸಿಗರೇಟ್ ಸೇದಿದ್ದು
ಕದ್ದು ಕುಡುದಿದ್ದು
ಅಷ್ಟೆ ಯಾಕೆ ಮೊದಲ ಪ್ರೇಮ ಪತ್ರ, ಅದು ಹೆಸರೆ ಇಲ್ಲದ ಪ್ರೇಮ ಪತ್ರ, ಅದೊ ಕೊಡ ಅಪ್ಪಟ ಕದ್ದ ಮಾಲು,
ಯಾವೊದೊ ಪತ್ರಿಕೆಯಿಂದ ನಕಲು ಮಾಡಿದ್ದು,
ಇನ್ನು ಇತ್ತಿಚಿನ ಲೇಟೆಷ್ಟ್ ಕಳತನಗಳೆಂದರೆ
ವಾಟ್ಸ್ ಆಪ್, ಪೇಸ್ ಬುಕ್ ನಲ್ಲಿ ಯಾರಾರೋದು ಪೋಟೊಗಳನ್ನು ಅನುಮತಿಯಿಲ್ಲದ್ದೆ
ಕಾದು ಸೆವ್ ಮಾಡಿಕೊಂಡಿದ್ದು, ಆಪೀಸಿನಲ್ಲಿ ಪಿ,ಯಲ್ ರಜೆ ಊಳಿಸಲು ಪಡೆದ ಸುಳ್ಳು ಸಿಕ್ ಲಿವ್ ಗಳು, ಅಷ್ಟೆ ಯಾಕೆ
ಇನ್ ಕಮ್ ಟ್ಯಕ್ಸ್ ಹಣ ಉಳಿಸಲು(ಕದಿಯಲು) ಸುಳ್ಳು ಲೆಕ್ಕ ತೊರಿಸುವದು, ಪೋಲಿಸ್
ರು ಇಲ್ಲದೆ ಇರುವುದನ್ನು ಗಮನಿಸಿ ಸಿಗ್ನಲ್ ಜಂಪ್ ಮಾಡುವಾಗ ಕೊಡ ನನ್ನಳೊಗಿನ ಕಳ್ಳ ಸದಾ ಎಚ್ಚರಕೆಯಿಂದ
ಇರುತ್ತಾನೆ, ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿ ಪೋಲಿಸರ ಕೈಗೆ ಸಿಕ್ಕು ನೂರರ
ಬದಲು ೫೦ ನೋಟು ಕೂಟ್ಟು ೫೦ ರೂಪಾಯಿ ಊಳಿಸುವಾಗಲತ್ತು ನಾನೊಬ್ಬ ಅಪ್ಪಟ್ಟ ಕಳ್ಳನೆ ಆಗಿರುತ್ತೆನೆ.
ಈಗ ಹೇಳಿ ಪ್ರಪಂಚದಲ್ಲಿ ಎಲ್ಲರು ಕಳ್ಳರೆ
ಅಲ್ಲವೆ , ಪ್ರಪಂಚವೆ ಒಂದು ಕಳ್ಳರ ಸಂತೆ, ನಿಜವಾದ ಕಳ್ಳ ಕಳ್ಳತನ ಮಾಡುವುವನು ಹೊಟ್ಟೆಪಾಡಿಗಾಗಿ ಮತ್ತು ಅವನ ಒಳಗೆ ಕೇವಲ ಒಬ್ಬನೆ ಕಳ್ಳನಿರುತ್ತಾನೆ
ಆದರೆ ನಮ್ಮ-ನಿಮ್ಮೂಳಗೆ ಅದೆಷ್ಟು ಕಳ್ಳರಿದ್ದಾರು ನಮಗೆ ಗೊತ್ತಿಲ್ಲ ಮತ್ತು ನಾವು ಕದಿಯೂವುದು........................!!!!!