Saturday, September 1, 2012

ಮಂಗಳಾರತಿ

ಗುರುವಾರದಂದು ಗುರುರಾಯರ ದಶ೯ನಕೆ
ತೆರಳಿದ್ದೆ ನಾ ಮಂದಿರಕ್ಕೆ
ಗುರುರಾಯರ ಎದರು ಕಂಡೆ ನಾ
ಕಪ್ಪು ಸಿರೆಯಲಿ ಹಾಲು ಬಣ್ಣದಾ ಚಲುವೆ.

ಜೋಡಿಸಿದ್ದ ಕೈ, ಮುಚ್ಹಿದ್ದ ಕಣ್ಣು
ತುಟಿಯಲ್ಲಿ ರಾಯರ ಸ್ಮರಣೆ
ನೋಡುತ ಅವಳ ನಾನು
ಮರತೆ ಆ ಕ್ಷಣ ಗುರುರಾಯರನ್ನೆ.

ಕಣ್ಣ್ ತೆರೆದು ರಾಯರಿಗೆ ವಂದಿಸಿ
ನೋಡಿದಳು ನನ್ನಡೆಗೆ ಒಂದು ಕ್ಷಣ
ಚಲ್ಲಿ ಹೂ ನಗೆ ನನ್ನಡೆಗೆ ಒಂದು ಬಾರಿ
ಹೊರಟು ಹೋದಳು ಮುಂದೆ ತಿರುಗಿ ನೋಡದೆ.

ಮನ ಅವಳ ಹಿಂದೆ, ದೇಹ ರಾಯರ ಮುಂದೆ
ನಾ ಎತ್ತ ಹೋಗಲಿ ತಿಳಿಯದಾಗಿತ್ತು
ಸುಟ್ಟಾಗಲೆ ಕೈ ಅರಿವಾಗಿತ್ತು ನನಗೆ
ನಿಂತಿದ್ದ ಅಚ೯ಕ ಎದುರು ಮಂಗಳಾರತಿಯೊಂದಿಗೆ.

1 comment:

  1. gururayarige thanks helo anta hudugiyannu ninge torisiddakke haage yava devastana pa adu i mean elli geleya.? olleya kavana geleya. keep it.

    ReplyDelete

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...