Monday, April 2, 2012

"ವಸು"ಳ ಪ್ರೇಮ



ಕಾದಿಹಳು ವಸುಂಧರೆ ವರುಣನಿಗೆ
ಪ್ರೇಯಸಿಯ ಚುಂಭನಕ್ಕೆ ಪ್ರೇಮಿ ಕಾದಂತೆ
ಹಸುವ ಹಾಲುಣಲು ಕರು ಕಾದಂತೆ
ತುಂಬು ಗಭಿ೯ಣಿ ಮಗುವ ಆಗಮನಕ್ಕೆ ಕಾದಂತೆ


ವರುಣನ ಸ್ಪಶ೯ಕಾಗಿ ವಸುಂಧರೆ ಹಂಬಲಿಸಿಹಳು
ನವ ವಿವಾಹಿತರು ಮಧು ಚಂದ್ರಕ್ಕೆ ಹಂಬಲಿಸಿದಂತೆ
ಕರುವಿನ ಅಂಭಾ ಕೇಳಲು ಹಸು ಹಂಬಲಿಸಿದಂತೆ
ಮಗುವ ಮೊದಲ ತೊದಲು ನುಡಿಗೆ ತಾಯಿ ಹಂಬಲಿಸಿದಂತೆ


ಆದರೆಕೊ ವರುಣನಿಗೆ ವಸುಂಧರೆ ಮೇಲೆ ಮುನಿಸು
ದಿನವು ಸತಾಯಿಸುವ ಪ್ರೇಯಸಿ ಮೇಲೆನ ಪ್ರೇಮಿಯ ಮುನಿಸಂತೆ
ಚಿನ್ನಾಟವಾಡಲು ತನ್ನೊಡನೆ ಬಾರದ ಹಸುವಿನ ಮೇಲೆನ ಕರುವಿನ ಮುನಿಸಂತೆ
ತವರಿನಿಂದ ಬೇಗ ಬಾರದ ಹೆಂಡತಿ ಮೇಲಿನ ಗಂಡನ ಮುನಿಸಂತೆ

No comments:

Post a Comment

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...