ನಮ್ಮ ಅವ್ವಾ ಹೇಳಿದಳು
ಅಕಿ ಡಾಕ್ಟರ್ ಅದಾಳ
ನೀ ಇಂಜಿನಿಯರ್ ಅದಿ
ಇಬ್ರು ಜೋಡಿ ಬಾಳ ಚಲೂ ಅಕತಿ.
ಅದಕ ನಾ ಹೇಳಿದೆ
ಏನ್ ಖಾಸ್ ಚಲೂ ಅಕತಿ
ಕಟ್ಟಿಗೊಂಡ ಒಂದ ವಷ೯ಕ್ಕ
ಎತ್ತ ಏರಿಗೆ ಎಳಿತು
ಕೋಣ ನೀರಿಗೆ ಎಳಿತು
ಅನ್ನಂಗ ಅಕತಿ.
ಸುಮ್ಮನ ಗಾದಿ ಯಾಕ ಕೆಡುಸ್ತಿ
ಅಕಿ ಕೋಣ ಅಲ್ಲ
ನೀ ಎತ್ತ ಅಲ್ಲ
ನಿಮೀಬ್ರು ಜೋಡಿ ಚಂದ ಕಾಣ್ತತಿ ಅಷ್ಟ.
ಏನ್ ಚಂದ ನಿನ್ನ ತಲಿ
ಅಕಿ ನೋಡಿದರ ದುಂಡ ಕಲ್ಲ ತರ ದಪ್ಪ ಅದಾಳ
ನಾ ನೋಡಿದರ ಕಡ್ಡಿತರ ತಳ್ಳಗ ಅದನಿ
ಒಂದ್ ವೇಳೆ ನಾ ಎಮ್ಮೆ ಮದುವೆ ಯಾದ್ರು
ಕೋಣನ ತರ ಇರ ಅಕಿ ವಲ್ಲೆ.
ಎಮ್ಮಿ ಕಟ್ಟಕೊತಿ ನೀ...? ಒಳ್ಳೆದು ಕಟ್ಟಕೊ
ನೀನ್ನ ಹಣೆ ಬರಹಾ ನಾ ಎನ್ ಮಾಡ್ಲಿ
ನಡಿ ನಾಳೆ ಸಂತಿಗೆ ಹೋಗಿ ನಿನಗ
ಚಂದದ ಒಂದ ಕರೆ ಎಮ್ಮೆ ತರೋಣ...
"ನಡಿ ನಾಳೆ ಸಂತಿಗೆ ಹೋಗಿ ನಿನಗ
ReplyDeleteಚಂದದ ಒಂದ ಕರೆ ಎಮ್ಮೆ ತರೋಣ..."
Ha ha ha.. funny!
thanks friend...:)
ReplyDelete