ajeeb dastan hai yeah
kaha suru kaha khatam
yeah manzlie hai kon se na
wo samjh sake na hum
ನಿಜ ಜೀವನ ತುಂಭಾ ವಿಚಿತ್ರ ಎಲ್ಲೂ ಆರಂಭವಾಗುತ್ತೆ, ಇನ್ನೆಲ್ಲೂ ಕೋನೆಯಾಗುತ್ತೆ. ಏನೂ ಆಗಬೇಕು ಎಂದುಕೊಳ್ಳುತ್ತೆವೆ, ಇನ್ನೆನೊ ಆಗುತ್ತೆವೆ. ಯಾರನ್ನೊ ಬಯಸುತ್ತೆವೆ ಇನ್ಯಾರ ಜೋತೆ ಬದುಕುತ್ತೆವೆ. ಒಟ್ಟಿನಲ್ಲಿ ಜೀವನವನ್ನು ಅಥ೯ಮಾಡಿಕೋಳ್ಳುವದು ತುಂಭಾ ಕಷ್ಟ.
ನಾನು ಡಿಪ್ಲೊಮಾ ಓದುವಾಗ ನನಗೊಬ್ಬ ಗೆಳಯ ಇದ್ದ, ನನ್ನ ಸಹಪಾಠಿ ಮತ್ತು ರೊಮ್ ಮೇಟ್ ಕೊಡ ಆಗಿದ್ದ, ತುಂಭಾ ತಾಳ್ಮೆ ಸಹನೆಯಿಂದ ಇರುತ್ತಿದ್ದ ಒಟ್ಟಿನಲ್ಲಿ ತುಂಭಾ ಒಳ್ಳೆಯ ಹುಡುಗ, ಅಪ್ಪ-ಅಮ್ಮ ಅಂದರೆ ತುಂಭಾ ಪ್ರೀತಿ ಅವನಿಗೆ. 4-5 ದಿನಗಳಿಗೆ ಒಂದು ಸಾರಿ ಊರಿಗೆ ಹೋಗಿ ಬರುತ್ತಿದ್ದ, ಅಷ್ಟೊಂದು ಮನೆ ಮತ್ತು ಮನೆಯವರನ್ನು ಹಚ್ಚಿಕೊಂಡಿದ್ದ, ರಾಹುಲ್ ದ್ರಾವಿಡ್ ಅಂದರೆ ತುಂಭಾ ಇಷ್ಟ ತಾಳ್ಮೆಯಲ್ಲಿ ಅವರನ್ನು ಮಿರುಸುತಿದ್ದ, ಯಾರೆ ಬಂದರು ಅವರ ಜೋತೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದ, ಯಾವುದಕ್ಕು ಹಠ ಮಾಡುತ್ತಿರಲಿಲ್ಲ. ಡಿಪ್ಲೊಮಾ ಮುಗಿದ ಮೇಲು ದೂರದ ಊರಿಗೆ ಕೆಲಸಕ್ಕೆ ಹೋಗದೆ ಊರಿನಲ್ಲೆ ಸಣ್ಣ ಕೆಲಸ ಮಾಡುತ್ತಾ ಅಪ್ಪ-ಅಮ್ಮನ ಜೋತೆ ಇದ್ದ.
ಕೆಲದಿನಗಳ ಹಿಂದೆ ರಾಣೆಬೇನ್ನೂರಿಗೆ ಹೋದಾಗ ನನಗೆ ನನ್ನ ಇನ್ನೊಬ್ಬ ಗೆಳಯ ಸಿಕ್ಕಿದ್ದ, ಮಾತಿನ ಮದ್ಯ ಈ ನನ್ನ ಮಿತ್ರನ ವಿಷಯ ಬಂದಿತು, ಕುತುಹಲದಿಂದ ಅವನ ಬಗ್ಗೆ ವಿಚಾರಿಸಿದಾಗ ನನಗೆ ಅಚ್ಚರೆ ಕಾದಿತ್ತು, ನನ್ನ ಪ್ರೀತಿಯ ಮಿತ್ರ, ಸಹನೆಯ ಮೂತಿ೯, ಅಪ್ಪ-ಅಮ್ಮನ ಮುದ್ದಿನ ಮಗ ಇತ್ತಿಚೆಗೆ ಮನೆಯವರ ವಿರೋದದ ನಡುವೆಯು ಹುಡಗಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿ ದೂರದ ಹೋರ ರಾಜ್ಯದ ಊರಿನಲ್ಲಿ ವಾಸವಾಗಿದ್ದಾನೆದ್ದು ಕೇಳಿ ನನಗೆ ಅಚ್ಚರಿಯಾಯಿತು, ಅಷ್ಟೊಂದು ಹಚ್ಚಿಕೊಂಡಿದ್ದ ಅಪ್ಪ-ಅಮ್ಮನನ್ನು ಬಿಟ್ಟುಹೋಗುವಷ್ಟು ಗಾಡವಾಗಿತ್ತೆ ಅವನ ಪ್ರೀತಿ? 4-5 ದಿನಗಳಿಗೊಮ್ಮೆ ಮನೆಗೆ ಹೋಗಿಬರುತ್ತಿದ್ದ ಅವನು 6 ತಿಂಗಳು ಒಂದೇ ಊರಿನಲ್ಲಿ ಇದ್ದರು ಅಪ್ಪ-ಅಮ್ಮನ ಮುಖ ನೋಡದಷ್ಟು ಕಠೋರವಾಗಿ ಬಿಟ್ಟಾನಾ? ಒಂದೇ ಊರಿನಲ್ಲಿ ಇದ್ದರೆ ಎಲ್ಲಿ ಮತ್ತೆ ಅಪ್ಪ-ಅಮ್ಮನನ್ನು ಮಾತನಾಡಿಸಬೇಕಾಗುತ್ತದೆ ಏಂದು ಅಷ್ಟೊಂದು ದೂರದ ಊರಿಗೆ ಹೋರಟು ಹೋದೆಯ್ಯಾ? ನಿಜವಾಗಲು ಪ್ರೀತಿ ಅಷ್ಟೊಂದು ಕೇಟ್ಟದ್ದಾ? ಕಠೋರವಾದದ್ದಾ?
ಗೆಳಯಾ ನೀನು ಮಾಡಿದ್ದು ತಪ್ಪು ಎಂದು ನಾನು ಹೇಳುತ್ತಿಲ್ಲ ಆದರೆ ಒಂದು ಕ್ಷಣ ಯೋಚಿಸು 2-3 ವಷ೯ಗಳಿಂದ ಪ್ರೀತಿಸುತ್ತಿರುವ ಹುಡಗಿಗಾಗಿ ನೀನು ಅಷ್ಟೆಲ್ಲಾ ತ್ಯಾಗ ಮಾಡಿದೆ ಆದರೆ ನೀನು ಹುಟ್ಟಿದಾಗಿನಿಂದಲು (ಸುಮಾರು 2 ದಶಕಗಳಿಂದ) ನೀನ್ನನ್ನು ಪ್ರೀತಿಸುತ್ತಿರುವ ಅಪ್ಪ-ಅಮ್ಮನಿಗೆ ಕೊಟ್ಟ ನೋವು ಸರಿಯೆ? ಪ್ರೀತಿಸುವದು, ಪ್ರೀತಿಸಿದ ಹುಡಗಿಯನ್ನು ಮದುವೆಯಾಗುವದು ತಪ್ಪಲ್ಲ. ಆದರೆ ಆ ಪ್ರೀತಿಯ ಜೋತೆ ಅಪ್ಪ-ಅಮ್ಮನು ಇದ್ದರೆ ಅದೆಷ್ಟು ಚೆಂದ ಅಲ್ಲವೆ. ಗೆಳಯಾ ನನಗೆನೊ ನೀನು ದುಡುಕಿದೆ ಅನ್ನಿಸುತ್ತಿದೆ, ನಿನ್ನ ಅಪ್ಪ-ಅಮ್ಮನನ್ನು ನಾನು ಬಲ್ಲೆ ಸ್ವಲ್ಪ ಪ್ರಯತ್ನಿಸಿದ್ದರೆ ಅವರನ್ನು ಒಪ್ಪಿಸಬಹುದಿತ್ತು. ಅದು ಅಲ್ಲದೆ ನೀನು ಸ್ವಲ್ಪ ನಿಧಾನಿಸಬೇಕಿತ್ತು ಅನಿಸುತ್ತದೆ, ಯಾಕೆಂದರೆ ಈ ಚಿಕ್ಕ ವಯ್ಯಸಿಗೆ ಮದುವೆ ಬೇಕಿತ್ತಾ?
ಆದರೆ ಒಂದು ವಿಷಯದಲ್ಲಿ ಮಾತ್ರ ನೀನು ತುಂಭಾ ಗ್ರೇಟ್ ಆಗಿ ಬಿಟ್ಟೆ, ನೀನು ಪ್ರೀತಿಸಿ ಮದುವೆಯಾದ ಹುಡಗಿ "ಅಂಗವಿಕಲೆ" ಎಂದು ಕೇಳಿದಾಗ ನನಗೆ ತುಂಭಾ ಅಚ್ಚರೆ ಮತ್ತು ಸಂತೋಷವಾಯಿತು, ನೀನು ನನ್ನ ಗೆಳೆಯ ಎನ್ನಲು ಹೆಮ್ಮೆ ಅನ್ನಿಸುತ್ತದೆ, ಆಗಿದ್ದು ಆಗಿ ಹೋಯಿತು, ಪ್ರೀತಿ ತುಂಭಾ ಪವಿತ್ರವಾದದ್ದು, ಅದು ಪುಣ್ಯವಂತರಿಗೆ ಮಾತ್ರ ಸಿಗುವಂತಹದು, ಏಲ್ಲರಿಗು ಅದು ದೊರಕುವುದಿಲ್ಲ, ನಮೆಗೆಲ್ಲ ಅದು ಕೈಗೆ ಸಿಗದ ನಕ್ಷತ್ರ ಕೇವಲ ನಕ್ಷತ್ರವನ್ನು ನೋಡಿ ಸಂತೋಷಪಡಬೇಕು ಅಷ್ಟೆ ಆದರೆ ನೀನು ಆ ನಕ್ಷತ್ರ ಪಡೆದ ಅದ್ರಷ್ಟವಂತ, ಪ್ರೀತಿಸಿದ ಹುಡಗಿಯನ್ನು ಕೋನೆಯವರೆಗು ಸಂತೋಷದಿಂದ ನೋಡಿಕೊ, ಸವ೯ವನ್ನು ಬಿಟ್ಟು ನೀನ್ನ ಜೋತೆ ಬಂದಿರುವ ಆ ಹುಡಗಿಯ ಮನಸ್ಸು ಏಂದು ನೋಯಿಸ ಬೇಡ, ಸಾದ್ಯವಾದರೆ ಒಂದು ಸಾರಿ ಅಪ್ಪ-ಅಮ್ಮನ ಹತ್ತಿರ ಕ್ಷೆಮೆ ಕೇಳು, ನಿನ್ನ ವೈವಾಹಿಕ ಜೀವನಕೆ ನನ್ನ ಶುಭ ಹಾರೈಕೆಗಳು ಮತ್ತು ನೀನ್ನ ಅನುಮತಿ ಇಲ್ಲದೆ ನೀನ್ನ ವೈಯಕ್ತಿಕ ಜೀವನದ ಬಗ್ಗೆ ಬರೆದಿದ್ದಕ್ಕೆ ಕ್ಷಮೆ ಇರಲಿ...