ನನಗೆ ಶಿಕ್ಷಕರೆಂದರೆ ಅಪಾರ ಪ್ರೀತಿ ಮತ್ತು ಗೌರವ, ನಾನು ಒಬ್ಬ ಶಿಕ್ಷಕನ ಮಗನಾಗಿದ್ದರಿಂದಲೊ ಏನೋ ಗೊತ್ತಿಲ್ಲ, ನನಗೆ ಕಲಿಸಿದ ಎಲ್ಲಾ ಶಿಕ್ಷಕರನ್ನು ನಾನು ತುಂಬಾ ಗೌರವಿಸುತ್ತೇನೆ, ಯಾವಾಗಲು ನೆನೆಯುತ್ತೇನೆ, ವಿದ್ಯಾಥಿ೯ಗಳ ಜೀವನ ನಿರೂಪಣೆಯಲ್ಲಿ ಶಿಕ್ಷಕರ ಪಾತ್ರ ಅಪಾರ ಅದಕ್ಕೆ ನಾನು ಅವರೆನ್ನೆಲ್ಲ
"ಎಂದು ಮರೆಯಲಾಗದವರು" ಎಂದು ಕರೆಯತ್ತಿರುವದು. 1 ರಿಂದ 1೦ನೇ ತರಗತಿವರೆಗೆ ಕಲಿಸಿದ ಎಲ್ಲಾ ಶಿಕ್ಷಕರನ್ನು ನಾನು ಇಲ್ಲಿ ನೆನೆಯುತ್ತಿದ್ದೇನೆ.
(1 ರಿಂದ 3ನೇ ತರಗತಿಯವರೆಗೆ ನಾನು ಸಕಾ೯ರಿ ಕಿರಿಯ ಪ್ರಾಥಮಿಕ ಶಾಲೆ ಗುಡ್ಡದ ಬೇವಿನಹಳ್ಳಿಯಲ್ಲಿ ಮತ್ತು 4 ರಿಂದ 7ನೇ ತರಗತಿಯವರೆಗೆ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆ ಆಣೂರಿನ್ನಲ್ಲಿ ಓದಿದ್ದು)
1) ಖಾಗಿ೯ ಸರ್- ಇವರು ನನಗೆ 1 ಮತ್ತು 2 ನೇ ತರಗತಿಯಲ್ಲಿ ಕಲಿಸಿದ್ದರು ತುಂಬ ಒಳ್ಳೆ ಸರ್ , ಯಾವಾಗಲು ಬರಿ ಮಗ್ಗಿ ಬರೆಯಲು ಹೆಳ್ಳುತಿದ್ದರು, ಇವರಿಗೆ ಸ್ವಲ್ಪ ದ್ರಷ್ಠಿ ದೋಷ ಇತ್ತು, ಅದನ್ನು ನಾವು ತುಂಬಾ ಚೆನ್ನಾಗಿ ಬಳಸಿಕೂಳ್ಳುತ್ತಿದ್ದವು.
2)ಮತ್ತಿಹಳ್ಳಿ ಸರ್- ಇವರು ನನಗೆ 3ನೇ ತರಗತಿಯಲ್ಲಿ ಕಲಿಸಿದ್ದರು, ಇವರು ತುಂಬಾ ಹೋಡೆಯುತಿದ್ದರು, ನಮಗೆಲ್ಲ ಇವರನ್ನು ಕಂಡರೆ ಆಗ ತುಂಬಾ ಭಯ, ಇವರಿಗೆ ವೀಪರಿತ ಕುಡಿಯುವ ಹವ್ಯಾಸ ಇತ್ತು, ಸಂಬಳವಾದ ನಂತರ ಇವರು ಒಂದು ವಾರ ಶಾಲೆಗೆ ಬರುತ್ತಿರಲಿಲ್ಲ.
3)ಮನೋಹರ ಕೊಪ್ಪದ- ಇವರು ನನಗೆ 4ನೇ ತರಗತಿಯಲ್ಲಿ ಕಲಿಸಿದ್ದರು ಮತ್ತು ಇವರು ನಮ್ಮ ಶಾಲೆಯ ಧೈಹಿಕ ಶಿಕ್ಷಕರು ಆಗಿದ್ದರು, ಯಾವಾಗಲು ನನಗೆ ಅಳಿಯ ಅಳಿಯ ಎಂದು ಕರೆಯುತ್ತಿದ್ದರು, ತಮ್ಮ ಮಗಳನ್ನು ನನಗೆ ಕೊಡುವುದಾಗಿ ಮತ್ತು ನನ್ನನ್ನು ಅವರ ಮನೆ ಅಳಿಯನ್ನಾಗಿ ಮಾಡಿಕೊಳ್ಳುವುದಾಗಿ ತಮಾಷೆ ಮಾಡುತಿದ್ದರು.
4)ಆರ್, ಬಿ, ಕೊಪ್ಪದ- ಇವರು 5ನೇ ತರಗತಿಯಲ್ಲಿ ಹಿಂದಿ ವಿಷಯ ಕಲಿಸಿದ್ದರು, ಇವರಿಗೆ ಬಿ,ಪಿ ಇತ್ತು, ತುಂಬಾ ಕೋಪ ಬರುತಿತ್ತು, ಕೋಪ ಬಂದಾಗ ಯಾವುದಾದರು ಹುಡುಗನಿಗೆ ಸರಿಯಾಗಿ ಹೊಡೆಯುತ್ತಿದರು.
5) ಮಂಜುಳಾ ಟೀಚರ್- ಇವರು ನನಗೆ ಕಲಿಸಿದ ಮೂದಲ ಟೀಚರ್, 5 6 ಮತ್ತು 7ನೇ ತರಗತಿಯಲ್ಲಿ ನನಗೆ ಗಣಿತ ಕಲಿಸಿದ್ದರು, ನನ್ನ ಮೇಲೆ ಇವರಿಗೆ ತುಂಬಾ ಪ್ರೀತಿ, ಎಂದು ಯಾವತ್ತು ಇವರು ನನಗೆ ಬೈದಿಲ್ಲ ಮತ್ತು ಹೊಡೆದಿಲ್ಲ, ೭ನೇ ತರಗತಿಯಲ್ಲಿ ಇದ್ದಾಗ ಇವರಿಗೆ ಮದುವೆ ಆಯಿತು, ಅವರ ಮದುವೆ ಪೋಟ ಇನ್ನು ನಮ್ಮ ಮನೆಯಲ್ಲಿ ಇದೆ.
6)ದೇವೇಂದ್ರ್ ಸರ್- ಇವರು ನನಗೆ 7ನೆ ತರಗತಿಯಲ್ಲಿ ವಿಜ್ಯಾನ ಕಲಿಸಿದ್ದರು ತುಂಬಾ ಬುದ್ದಿವಂತರು,
7)ಮಲ್ಲಿಕಾಜು೯ನ್ ಸಣ್ಣಗೌಡ್ರ- 7ನೇ ತರಗತಿಯಲ್ಲಿ ಸಮಾಜ ಮತ್ತು ಕನ್ನಡ ಕಲಿಸಿದ್ದರು, ತುಂಭಾ ಬುದ್ದಿವಂತರು ಆದರೆ ಸ್ವಲ್ಪ ಅಹಂಕಾರಿ, ಇಗ ಅವರಿಗೆ ಬ್ಲಡ್ ಕ್ಯಾನ್ಸರ್ ಇದೆಯಂತೆ ಮಣಿಪಾಲ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರಂತೆ, ದೇವರು ಬೇಗ ಇವರ ಆರೋಗ್ಯ ಸುದಾರಿಸಲಿ.
8)ಹರಿಹರ ಸರ್- 6ನೇ ತರಗತಿಯಲ್ಲಿ ಕನ್ನಡ ಕಲಿಸಿದ್ದರು, ತುಂಭಾ ಸೌಮ್ಯ ಸ್ವಬಾವದವರು, ಯಾವಾಗಲು ತಾವಾಯಿತು ತಮ್ಮ ಕೆಲಸವಾಯಿತು ಎಂದು ಇರುತ್ತಿದ್ದರು
9)ಕೆ.ಎಸ್.ನಂದಿಗಾವಿ- ನನ್ನ ತಂದೆಯವರು, 6ನೇ ತರಗತಿಯಲ್ಲಿ ಹಿಂದಿ ವಿಷಯ ಕಲಿಸಿದ್ದರು, ತುಂಭಾ ಕೋಪಿಷ್ಠರು, ಪ್ರತಿಯೊಬ್ಬ ವಿದ್ಯಾಥಿ೯ಗೂ ಬೇರೆ ಬೇರೆ ಅಡ್ಡ ಹೆಸರುಗಳಿದ್ದ ಕರೆಯುತ್ತಿದ್ದರು, ತುಂಭಾ ತಮಾಷೆ ಮಾಡುತ್ತಿದ್ದರು.
(
ನಾನು ಓದಿದ ಹೈಸ್ಕೊಲ್ ಸಿ.ಇ.ಎಸ್.ಎಮ್.ಎಸ್.ಎಚ್ ಆಲದಗೇರಿ)
1)ದೊಡ್ಡಮನಿ ಸರ್- ನಮ್ಮ ಪ್ರಧಾನ ಗುರುಗಳು, ತುಂಬಾ ಕಟ್ಟು-ನಿಟ್ಟು ಮತ್ತು ತುಂಬಾ ಹೊಡೆಯುತ್ತಿದ್ದರು, ನಮಗೆ ಸಮಾಜ, ಕನ್ನಡ ಮತ್ತು ಇಂಗ್ಲೀಷ ವಿಷಯಗಳ್ಳನ್ನು ಕಲಿಸಿದ್ದರು, ಯಾವಗಲು ಬೈಯುತ್ತಲೆ ಇರುತ್ತಿದ್ದರು ಮತ್ತು ವೀಪರಿತ ಬರೆಸುತ್ತಿದ್ದರು.
2)ಸೀಮಿಕೆರಿ ಸರ್- He is Mr-Perfect ನನ್ನ ಜೀವನದಲ್ಲಿ ಇದುವರೆಗೂ ಇಂತಹ ಶಿಕ್ಷಕರನ್ನು ನೋಡೆ ಇಲ್ಲ, ಯಾವುದೇ ವಿಷಯ ಕಲಿಸುವ ಮೊದಲು ಅದರಲ್ಲಿ ತಾವು ಸಂಪೂಣ೯ ಪರಿಪೂಣ೯ರಾಗಿ ನಂತರ ನಮಗೆ ಕಲಿಸುತ್ತಿದ್ದರು, ತುಂಬಾ ಕಟ್ಟುನಿಟ್ಟು, ಇವರು ನಮಗೆ ಇಂಗ್ಲೀಷ್, ಕನ್ನಡ ಮತ್ತು ಭೂಗೋಳ ಕಲಿಸಿದ್ದರು, ಇವರ ಕೈ ಬರಹ ತುಂಭಾ ಸುಂದರವಾಗಿತ್ತು.
3)ಶೆಟ್ಟಿ ಸರ್- ಉಡುಪಿ ಮೂಲದವರು, 8ನೇ ತರಗತಿಯಲ್ಲಿ ಸೈನ್ಸ್ ಕಲಿಸಿದ್ದರು, ಇವರಿಗೆ ಮೂಗಿನ ಮೇಲೆಯೇ ಕೋಪ, ವೀದ್ಯಾಥಿ೯ಗಳಿಗೆ ತುಂಬಾ ಹೊಡೆಯುತ್ತಿದ್ದರು, ನನ್ನ ನೆಚ್ಚಿನ ಗುರುಗಳು, ಯಾರಿಗೂ ಇವರು ಕೇರ್ ಮಾಡುತ್ತಿರಲಿಲ್ಲ, ಒಂದು ಸಾರಿ ಬಿ.ಇ.ಓ ಜೊತೆ ಶಾಲೆಯಲ್ಲಿಯೇ ಭಜ೯ರಿ ಜಗಳ ಮಾಡಿದ್ದರು.
4)ಗೀತಾ ಕುಲಕಣಿ೯- ಅಪ್ಪಟ ಬ್ರಾಹ್ಮಣ ಕುಟುಂಬದಿಂದ ಬಂದವರು, ಸನ್ಯಾಸಿಣಿ ನನಗೆ 8,9 ಮತ್ತು 1೦ನೇ ತರಗತಿಯಲ್ಲಿ ಹಿಂದಿ ವಿಷಯ ಕಲಿಸಿದ್ದರು, ನನ್ನ ಪ್ರೀತಿಯ ಗುರುಮಾತೆ, ನಾನು ಯಾರ ಜೊತೆನಾದರೂ ಜಗಳ ಮಾಡಿದಾಗ, ನನಗೆ ಕೋಪ ಬಂದಾಗಲೆಲ್ಲ ಸಮಾಧಾನಪಡಿಸುತ್ತಿದ್ದರು, ಯಾವಾಗಲೂ ರಾಮಾಯಣ ಮಹಾಭಾರತದ ಕಥೆಗಳನ್ನು ಹೆಳುತ್ತಿದ್ದರು ಪ್ರತಿ ವಷ೯ ಕೆಲ ಬಡ ವಿದ್ಯಾಥಿ೯ಗಳ ಪೀಜ್ ಇವರೆ ಕಟ್ಟುತಿದ್ದರು.
5) ಪಿ,ಎಮ್ ಸುತ್ತಕೋಟಿ- ನಮ್ಮ ಪಿ,ಇ ಸರ್, ನನ್ನ ಮೇಲೆ ತುಂಬಾ ಪ್ರೀತಿ, ಜೀವನದಲ್ಲಿ ಯವಾಗಲೂ ಅತ್ಯುತ್ತಮವಾದುದ್ದನ್ನೇ ಆರಿಸುಕೊ ಎಂದು ನನಗೆ ಯಾವಾಗಲೂ ಹೇಳುತ್ತಿದ್ದರು, ನಾನು ಇಷ್ಠಪಟ್ಟ ಎಲ್ಲಾ ಆಟಗಳಲ್ಲೂ ನನಗೆ ಅವಕಾಶ ಕೊಡುತ್ತಿದ್ದರು, ಆದರೆ ಆಟ ಆಡಿಸುವಾಗ ಮಾತ್ರ ತುಂಬಾ ಗಂಭೀರವಾಗಿ ಇರುತ್ತಿದ್ದರು, ಎಷ್ಟೋ ಬಾರಿ ಗ್ರೌಂಡ್ ತುಂಬಾ ನನ್ನನ್ನು ಓಡಾಡಿಸಿಕೊಂಡು ಹೋಡೆದಿದ್ದಾರೆ, ನನ್ನಲ್ಲಿನ ಸೋಮಾರಿತನ ಹೋಗಲಾಡಿಸಲು ನನ್ನನ್ನು 3೦೦೦ ಮೀಟರ್ ಓಟಕ್ಕೆ ಶಾಲೆಯ ಖಾಯಂ ಅಭ್ಯಥಿ೯ಯಾಗಿ ಮಾಡಿದ್ದರು, ಒಟ್ಟು 3 ಸಲ 3೦೦೦ ಮೀಟರ್ ಓಡಿದ್ದೆ ಆದರೆ ಪ್ರತಿ ಬಾರಿ ನಾನೆ ಕೋನೆಯವನಾಗಿ ಗುರಿ ಮುಟ್ಟಿದ್ದೆ.
6)ಎಮ್.ಎನ್ ನಾರಜ್ಜಿ- ಗಣಿತದ ಶಿಕ್ಷಕರು ನನ್ನನ್ನು ಕಂಡರೆ ಆಗುತ್ತಿರಲಿಲ್ಲ, ಯಾವಾಗಲೂ ನನಗೆ ಬೈಯುತ್ತಿದ್ದರು, ಗಣಿತದಲ್ಲಿ ಇವರು ತುಂಬಾ ಮೇಧಾವಿಗಳಾಗಿದ್ದರು.
7)ಗಿಡ್ಡಣ್ಣನವರ್ ಸರ್- 1೦ನೇ ತರಗತಿಯಲ್ಲಿ ಸೈನ್ಸ್ ಕಲಿಸಿದ್ದರು, ತುಂಭಾ ಶಾಂತ ಸ್ವಭಾವದವರು ಮತ್ತು ಮುಗ್ದರು, ಇವರಿಗೆ ಸರಿಯಾಗಿ ಬೈಯ್ಯಲೂ ಬರುತ್ತಿರಲ್ಲಿಲ್ಲ, 2 ವಷ೯ಗಳ ಹಿಂದೆ ಹ್ರದಯಾಘಾತದಿಂದ ನಿಧನರಾದರು.
8)ಭ್ಯಾಗವಾದಿ ಸರ್- ತುಂಬಾ ಫ಼ನ್ ಮ್ಯಾನ್, ಯಾವಾಗಲು ತಮಾಷೆ ಮಾಡುತ್ತಿದ್ದರು, ನಮಗೆ ಕನ್ನಡ, ಇಂಗ್ಲೀಷ್ ಮತ್ತು ಸಮಾಜ ವಿಷಯ ಕಲಿಸಿದ್ದರು, ಇವರಿಗೆ ಗಂಡು ಮಕ್ಕಳು ಇರಲಿಲ್ಲ 3 ಜನ ಹೆಣ್ಣು ಮಕ್ಕಳು ಆದ್ದರಿಂದ ಯಾವಾಗಲೂ ಹುಡುಗರಿಗೆ ಬಯ್ಯುತ್ತಿದ್ದರು.
9)ಗೊಣಿಗೇರ ಸರ್- ನಮ್ಮ ಕ್ರಾಪ್ಟ ಸರ್, ಇವರು ತುಂಬಾ ಉದ್ದ ಇದ್ದರು, 1೦ನೇ ತರಗತಿಯಲ್ಲಿ ನಮ್ಮ Class Teacher ಆಗಿದ್ದರು, ತರಗತಿಯಲ್ಲಿ ಏನೆ ಗಲಾಟೆ ಆದರೂ ಮೊದಲು ಹೊಡೆಯುತ್ತಿದಿದ್ದು ಕೊನೆಯ ಡೆಸ್ಕನಲ್ಲಿ ಕುಳಿತಿರುತ್ತಿದ್ದ ನಮ್ಮನ್ನು.
1೦) ಲೋಕೆಶ ಸರ್- 1೦ನೇ ತರಗತಿಯಲ್ಲಿ ಇದ್ದಗ ನಮ್ಮ ಪಿ.ಇ ಶಿಕ್ಷಕರಾಗಿದ್ದರು, ವಯಸ್ಸಾದ ಕಾರಣ ಸದಾ ಅನಾರೋಗ್ಯದಿದ್ದ ಬಳಲುತ್ತಿದ್ದರು.
11) ಅಜ್ಜಪ್ಪ ಸರ್- 1೦ನೇ ತರಗತಿಯಲ್ಲಿ ನನಗೆ ಕನ್ನಡ ವಿಷಯ ಕಲಿಸಿದ್ದರು, ನನ್ನ ಜೀವನದಲ್ಲಿ ನಾನು ಜಗಳ ಮಾಡಿದ ಏಕೈಕ ಶಿಕ್ಷಕರು, ಅದೊಂದು ದಿನ ಯಾರೋ ಮಾಡಿದ ತಪ್ಪಿಗೆ ನನ್ನನ್ನು ಬೈದಾಗ ಅವರಿಗೂ ನನಗೂ ಮಾತಿಗೆ ಮಾತು ಬೆಳೆದು ಪ್ರಧಾನ ಗುರುಗಳವರೆಗೂ ದೂರು ಹೋಗಿತ್ತು, ಕೆಲ ದಿನಗಳ ನಂತರ ಅವರು ಪಾಶ್ವ೯ವಾಯುಗೆ ತುತ್ತಾಗಿದ್ದರು .