ಯಾಕೊ ಇತ್ತಿಚೆಗೆ ನಮ್ಮ ಊರೆ ನನಗೆ ಅಪರಿಚಿತವಾಗತೊಡಗಿದೆ, ಇಂಜನಿಯರಿಂಗ್ ಸೇರಿದ ಮೇಲೆ ಊರಿನಲ್ಲಿ ಕಾಲುತಿ ನಿಂತಿದ್ದೆ ಕಡಿಮೆ, ಇನ್ನು ಕೆಲಸಕ್ಕೆ ಸೇರಿದ ಮೇಲೆ ಪರಿಚಿತ ಜನರ ಮುಖಗಳು ಅಸ್ಪಷ್ಠವಾಗಿತ್ತುವೆ, ಇನ್ನು ನನ್ನ ಹಳ್ಳಿ ಕೂಡ ಅಮೂಲಾಗ್ರವಾಗಿ ಬದಲಾಗುತ್ತಿದೆ, ಮಣ್ಣು ಹಂಚ್ಚಿನ ಮನೆಗಳೆಲ್ಲ ಆರ್ ಸಿ ಸಿ ಮನೆಗಳಾಗಿವೆ, ದೂಳಿನ ರಸ್ತೆಗಳೆಲ್ಲ ಡಂಬಾರು ಕಂಡಿವೆ, ನಾನು ಓದಿದ ಶಾಲೆಯನ್ನು ಕೆಡವಿ ಅಲ್ಲಿ ವಷ೯ದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಬಳಸುವ ರಂಗಮಂದಿರ ಕಟ್ಟಿಸಿದ್ದಾರೆ, ಶಾಲೆ ಊರಾಚೆಗೆ ಸ್ಥಳಾಂತರವಾಗಿದೆ. ಇನ್ನು ನಾನು ಹುಟ್ಟಿ ಬೆಳೆದ ಮನೆಯನ್ನು ಅನಾಥ ಮಾಡಿ ನಾವೆಲ್ಲಾ ಹೋಸ ಮನೆಗೆ ಬಂದು ಸುಮಾರು ಒಂದು ವಷ೯ವೆ ಕಳೆದಿದೆ, ಹಳೇಯ ಮನೆಯ ಎದರು ಹೋದಾಗಲೆಲ್ಲಾ ಅದು ನನ್ನ ಕೈ ಮಾಡಿ ಕರೆದಂತೆ ಬಾಸವಾಗುತ್ತದೆ, ನನ್ನನೇಕೆ ಬಿಟ್ಟು ಹೋದಿರಿ? ನಾನು ಮಾಡಿದ ತಪ್ಪಾಸರು ಏನು? ಏಂದು ಕೇಳಿದಂತೆ ಬಾಸವಾಗುತ್ತದೆ. ನಿಜ ಅದು ನಾನು ಹುಟ್ಟಿದ ಮನೆ, ನಾನು ಮೊದಲ ಬಾರಿ ಸ್ವತಂತ್ರವಾಗಿ ಹೆಜ್ಜೆ ಇಡಲು ಕಲಿತ ಮನೆ, ಮೊದಲ ಅಕ್ಷರ ಬರೆದ ಮನೆ ಅಂತಹ ಮನೆ ಬಿಟ್ಟು ಬಂದಿದ್ದು ನನಗೆ ತುಂಭಾ ಬೇಸರದ ಕ್ಷಣ, "ಮನೆ ಚಿಕ್ಕದಿರಬೇಕಂತೆ ಮನಸ್ಸು ದೊಡ್ಡದಿರಬೇಕಂತೆ" ಮುತ್ತಿನಂತಹ ಮಾತು, ಇನ್ನು ಈ ಬಾರಿ ಊರಿಗೆ ಹೋದಾಗ ಊರ ಬಸ್ ನಿಲ್ದಾಣದಲ್ಲಿ ಇದ್ದ ಗಂಗಮ್ಮಜ್ಜಿಯ ಅಂಗಡಿ ಕೂಡ ಮಾಯವಾಗಿತ್ತು, ಅತಿ ಚಿಕ್ಕದಾದ ನಮ್ಮರಿನಲ್ಲಿ ಬಸ್ ನಿಲ್ದಾಣದಲ್ಲಿ ಪ್ರಯಾಣೀಕರಿಗೆ ಕುಳಿತು ಕೊಳ್ಳಲು ಪ್ರತ್ಯಕ ಸ್ಥಳವೆ ಇರಲಿಲ್ಲ, ಗಂಗಮ್ಮುಜ್ಜಿಯ ಅಂಗಡಿಯೆ ಪ್ರಯಾಣಿಕರಿಗೆ ವಿಶ್ರಾಮಧಾಮವಾಗಿತ್ತು, ಒಟ್ಟಿನಲ್ಲಿ ಗಂಗಮ್ಮಜ್ಜಿಯ ಅಂಗಡಿ ನಮ್ಮರಿನ ಬಸ್ ನಿಲ್ದಾಣಕ್ಕೆ ಶೋಭೆತರುತಿತ್ತು, ಅಂತಹ ಗಂಗಮ್ಮುಜ್ಜಿಯ ಅಂಗಡಿ ಮೊನ್ನೆ ಊರಿಗೆ ಹೋದಾಗ ಕಣ್ಮರೆಯಾಗಿತ್ತು, ಅಂಗಡಿ ಇಲ್ಲದ ಬಸ್ ನಿಲ್ದಾಣ ಹಾಳು ಸುರಿಯುತ್ತಿತ್ತು, ಒಟ್ಟಿನಲ್ಲಿ ನನ್ನ ಹಳ್ಳಿ ತುಂಭಾ ಬದಲಾಗುತ್ತಿದೆ.
******************************************
"ಮುಂದಿನ ವಷ೯ ಹುಟ್ಟು ಹಬ್ಬ ಇಬ್ಬರು ಜೋತೆಗೆ ಆಚರಿಸೋಣ ಅದು ಬೆಂಗಳುರಿನಲ್ಲೆ" ಇದೆ ನೀನು ನನ್ನ ಜೋತೆ ಆಡಿದ ಕೋನೆಯ ಮಾತು, ಅದು ಸುಮಾರು ೧೦ ತಿಂಗಳುಗಳ ಹಿಂದೆ ಅದಾದ ಮೇಲೆ ಒಂದು ಬಾರಿಯು ಪೋನ್ ಮಾಡಿಲ್ಲ ಏನಾಯಿತು ನಿನಗೆ? ಕಳೆದ ಹತ್ತು ತಿಂಳುಗಳಿಂದ ಪ್ರತಿ ದಿನವು ನಿನ್ನ ಮೊಬೈಲ್ ಗೆ ಕಾಲ್ ಮಾಡಿತಿದ್ದೆನೆ ಆದರೆ ಅದು ಸ್ವಿಚ್ ಆಫ್, ಇನ್ನು ನಿನಗೆ ಏಷ್ಟು ಈ-ಮೇಲ್ ಮಾಡಿರುವೇನೂ ಲೇಕ್ಕವಿಲ್ಲ, ಆದರೆ ಒಂದಕ್ಕು ಉತ್ತರವಿಲ್ಲ. ಯಾಕಿತರ ಮಾಡ್ತಾ ಇದ್ದಿಯಾ? ನನಗೆ ಗೊತ್ತು ನಿನಗೆ ನನ್ನ ಬ್ಲಾಗ್ ಅಂದರೆ ಸ್ವಲ್ಪವು ಇಷ್ಠವಿಲ್ಲ, ಇದುವರೆರು ಒಂದು ಬಾರಿಯು ನಿನು ಇದನ್ನು ಸುಮ್ಮನೆ ಎಂಬುವಂತೆಯು ನೋಡಿಲ್ಲ, ಆದರು ಮನದಲ್ಲಿ ಒಂದು ಸಣ್ಣ ಆಸೆ ಅದಕ್ಕೆ ನಿನ್ನ ಬಗ್ಗೆ ಇಲ್ಲಿ ಬರೆಯುತ್ತಿದೆನೆ.
ಸುಮಾರು ಆರು ವಷ೯ಗಳ ಗೆಳೆತನ, ಇಬ್ಬರದು ಒಂದೇ ಹೆಸರು, ಹುಟ್ಟಿದ ದಿನ ಕೂಡ ಒಂದೇ, ಎಷ್ಟೋಂದು ವಿಚಿತ್ರ ಸ್ನೇಹಿತರು ನಾವು, ನಿನೆ ಅಲ್ಲವೆ ನನಗೆ "ಪ್ರಶು" ಎಂಬ ನಿಕ್ಕ ನೇಮ್ ಇಟ್ಟಿದ್ದು, ಆ ಹೆಸರೆಂದರೆ ನನಗೆ ಈಗಲು ತುಂಭಾ ಇಷ್ಠ, ಪ್ಲಿಜ್ ಕಮ್ ಬ್ಯಾಕ್, ಯಾವುದೆ ಕಾರಣಕ್ಕು ನಿನಗೆ ನೋವು ಉಂಟಾಗುವಂತೆ ಮಾತನಾಡುವುದಿಲ್ಲ, ಹಟ ಮಾಡುವುದಿಲ್ಲ, ನಿನಗೆ ಇಷ್ಟವಿಲ್ಲದ ವಿಷಯಗಳ ಬಗ್ಗೆ ಏನು ಕೇಳುವುದಿಲ್ಲ, ಪ್ಲಿಜ್ ಪ್ಲಿಜ್ ಪ್ಲಿಜ್ ಕಮ್ ಬ್ಯಾಕ್ ಅಷ್ಟೆ... ಬರುತ್ತಿ ಅಲ್ವಾ... ನಿನ್ನ ಒಂದು ಸಣ್ಣ ರಿಪ್ಲೇಗಾಗಿ ೧೦ ತಿಂಗಳುಗಳಿಂದ ಕಾಯುತ್ತಿರುವ ನಿನ್ನ ಗೆಳಯ... ಪ್ರಶು