ದೆಹಲಿಯ ಮಾಗಿಯ ಚಳಿಯನ್ನು ಅನುಭವಿಸಿದವರೆ ಬಲ್ಲರು, ಆ ಚುಮು ಚುಮು ಮುಂಜಾನೆಯಲ್ಲಿ ಮೈ ನಡಿಗಿಸುವ ಚಳಿಯಲ್ಲಿ ಎರೆಡೆರೆಡು ಹೊದಿಕೆ ಹೊದ್ದು ಮಲಗುವುದರಲ್ಲಿ ಅದೆಂತಹ ಸುಖ, ಇಂತಹ ಮಾಗಿಯ ಚಳಿಯ ಒಂದು ಮುಂಜಾವಿನ ಸಕ್ಕರೆಯ ಸವಿ ನಿದ್ರೆಯಲ್ಲಿದ್ದ ರವಿಗೆ ಫೊನ್ ರೀಂಗಾದಾಗ ಎಚ್ಹರವಾಯಿತು, ಒಲ್ಲದ ಮನಸ್ಸಿನಿಂದಲೆ ಹಲೋ ಎಂದನು ಆ ಕಡೆಯಿಂದ ಮಾತನಾಡುತ್ತಿರುವವರು ಕಂಪನಿಯ ಎಂ.ಡಿ ಎಂದು ತಿಳಿದಾಗ ಸವಿ ನಿದ್ರೆಯಲ್ಲ ಇಳಿದು ಹೋಯಿತು. "ಬೆಳಗಿನ ೯ ಘಂಟೆ ವಿಮಾನಕ್ಕೆ ಮುಂಬೈಗೆ ಹೋಗಿ ಅಲ್ಲಿ ನೆಡೆಯುವ ಕಂಪನಿ ಮೀಟಿಂಗ್ ನಲ್ಲಿ ಬಾಗವಹಿಸಿ ರಾತ್ರಿ ಮರಳಿ ೮ ಘಂಟೆ ವಿಮಾನಕ್ಕೆ ದೆಹಲಿಗೆ ಬಾ, ಮಧ್ಯಾನ ೩ಕ್ಕೆ ಮೀಟಿಂಗ್ ಮುಗಿಯುತ್ತದೆ ನಂತರ ನೀನು ಎಲ್ಲಿಯಾದರು ಹೋಗು ಆದರೆ ರಾತ್ರಿ ದೆಹಲಿಗೆ ಮರಳಿ ಬಾ, ಏರ ಟೀಕೆಟ್ಸ್ ಬುಕ್ ಆಗಿದೆ" ಎಂದು ಒಂದೇ ಉಸಿರಿನಲಿ ಹೇಳಿದ ಎಂ.ಡಿ ಇವನು ಮರುಮಾತನಾಡುವ ಮೊದಲೆ ಫೋನ್ ಕಟ್ಟ್ ಮಾಡುದ್ದ.
ಒಲ್ಲದ ಮನಸ್ಸಿನಿಂದ ಒಂದು ದಿನದ ಮುಂಬೈ ಪ್ರವಾಸಕ್ಕೆ ಹೋರಟ ರವಿಗೆ ತಲೆಯಲ್ಲಿ ಒಂದೆ ಪ್ರಶ್ನೆ, ಮೀಟಿಂಗ್ ನಂತರ ಏನು ಮಾಡುವದು? ವಿಮಾನಯಾನದ ಸಮಯವೆಲ್ಲಾ ಯೋಚಿಸಿದ ಇವನಿಗೆ ಕೊನೆಗೆ ನೆನಪಾಗಿದ್ದು ಮುಂಬೈನಲ್ಲಿ ನೆಲಸಿರುವ ತನ್ನ ಕಾಲೇಜ್ ಗೆಳತಿ ಪಲ್ಲವಿ, ಕಾಲೇಜ್ ನಲ್ಲಿ ಓದೂತಿದ್ದಾಗ ಇದ್ದ ಇವನ ೮ ಜನರ ಗೆಳಯರ ಗುಂಪಿನಲ್ಲಿ ಅವಳು ಒಬ್ಬಳು, ಓದೂ ಮುಗಿದ ನಂತರ ಮದುವೆಯಾಗಿ ಗಂಡನ ಜೋತೆ ಮುಂಬೈಗೆ ಬಂದು ನೆಲಸಿ ಸುಮಾರು ೪ ವಷ೯ಗಳಾದವು, ಅವಳನ್ನಾದರು ಬೇಟ್ಟಿಯಾಗೋಣ ಎಂದು ನಿಧ೯ರಿಸಿ ಮುಂಬೈ ಏರ್ ಪೋಟ್೯ಗೆ ಬಂದು ಅವಳಿಗೆ ಫೊನ್ ಮಾಡಿದ, ಎಂದು ಸರಿಯಾದ ಸಮಯಕ್ಕೆ ಫೋನ್ ರೀಸಿವ್ ಮಾಡದ ಅವಳು ಇಂದು ಮಾತ್ರ ಒಂದೇ ರೀಂಗಿಗೆ ರೀಸಿವ್ ಮಾಡಿದಳು, ಉಭಯಕುಶೋಲೊಪಾರಿಯ ನಂತರ ಸಂಜೆ ೪ ಘಂಟೆಗೆ ಸಿಗುತ್ತಿಯಾ ಎಂದಾಗ ಅವಳು ಸಂತೋಷದಿಂದ ಒಪ್ಪಿದಳು, ಕೊನೆಗೆ ಸಂಜೆ ಗೇಟ್ ವೇ ಆಫ್ ಇಂಡಿಯಾ ಬಳಿ ಇಬ್ಬರು ಸೇರಲು ನಿಧ೯ರಿಸಿದರು.
ಕಂಪನಿಯ ಮೀಂಟಿಗ್ ಮುಗಿದ ತಕ್ಷಣ ಟ್ಯಾಕ್ಸಿ ಹಿಡಿದು ಗೇಟ್ ವೇ ಆಫ್ ಇಂಡಿಯಾ ಬಳಿ ಬಂದನು, ಪಲ್ಲವಿ ಕೊಡ ಹೇಳಿದ ಸಮಯಕ್ಕೆ ಸರಿಯಾಗಿ ಬಂದಳು, ಎಷ್ಟೊ ವಷ೯ಗಳ ನಂತರ ನೋಡಿದ್ದರಿಂದ ಮೊದಲು ಸ್ವಲ್ಪ ಭಾವುಕರಾದರು ಮೊದ ಮೂದಲು ಮೌನ ನಂತರ ಮತ್ತೆ ಹಳೆಯ ನೆನಪುಗಳಿಗೆ ಜಾರಿದರು, ಕೆಲ ಸಮಯದ ಬಳಿಕ
ಮೊನ್ನೆ ವಿನಯ್ ಫೊನ್ ಮಾಡಿದ್ದ ನೀನ್ನ ಬಗ್ಗೆ ಎಲ್ಲಾ ಹೇಳಿದ ನಿನಂತು ನನಗೆ ಏನು ಹೇಳಲ್ಲಾ ಅಲ್ವಾ, ನಿನಗೆ ಹೋಸ ಗೆಳತಿ ಸಿಕ್ಕಿದ್ದಾಳಂತೆ ಹೌದಾ? ಹೇಗಿದ್ದಾಳೆ? ತುಂಭಾ ಸುಂದರವಾಗಿರುವ, ನೀನಗೆ ಹೆಳಿಮಾಡಿಸದಂತಹ ಹುಡಿಗಿನೆ ಸಿಕ್ಕಿದ್ದಾಳೆ ತಾನೆ?
ಅವಳ ಮಾತಿಗೆ ರವಿ ನಗುತ್ತ ಹೌದು ಸಿಕ್ಕಿದ್ದಾಳೆ ಎಂದ.
ಹೇಗಿದ್ದಾಳೆ?
ತುಂಭಾ ಸುಂದರವಾದ ಹುಡಗಿ, ಎತ್ತರ, ತುಂಭಾ ಮಾತಾಡ್ತಾಳೆ, ನಾನಂದ್ರೆ ತುಂಭಾ ಇಷ್ಠ. ಮೊದಲ ಸಲ ನೋಡಿದಾಗಲೆ ಅವಳು ನನಗೆ ಇಷ್ಠ ಆದಳು, ನಿಮ್ಮನ್ನೆಲ್ಲಾ ಬಿಟ್ಟು ದೆಹಲಿಗೆ ಬಂದ ಮೇಲೆ ತುಂಭಾ ಒಂಟಿಯಾಗಿ ಬಿಟ್ಟೆ, ನಿಮ್ಮನ್ನು, ಆ ಕಾಲೇಜ್ ಲೈಪನ್ನು ಮರೆಯಬೇಕು ಅಂತಾ ತುಂಭಾ ಕಷ್ಠ ಪಡ್ತಾ ಇದ್ದೆ ಆವಾಗಲೆ ಅವಳು ನನಗೆ ಸಿಕ್ಲು.
ಇವನನ್ನೆ ದಿಟ್ಟಿಸಿ ನೋಡ್ತಾ ಇದ್ದ ಪಲ್ಲವಿ ಹತ್ತಿರ ಬಂದು ಕುತುಹಲದಿಂದ ಕೋನೆಗು ನೀನು ಜೋಡಿಯಾದೆ, ಅಂತು ನಮ್ಮ ಗ್ರೂಪ್ ನಲ್ಲಿ ಎಲ್ಲರು ಸೆಟ್ಟಲ್ ಆದ ಹಾಗೆ ಆಯಿತ್ತು, ಲೋ ನೀನ್ನ ಹುಡಗಿ ಬಗ್ಗೆ ಇನ್ನೂ ಸ್ವಲ್ಪ ಹೇಳೊ ಪ್ಲಿಜ್.... ಪಲ್ಲವಿ ಮಾತುಗಳಿಗೆ ಸ್ಪದಿಸಿದ ರವಿ ಪಶ್ಚಿಮದ ದಿಗಂತದಲ್ಲಿ ಮುಳುಗಿತ್ತಿದ್ದ ಸೂಯ೯ನನ್ನೆ ದಿಟ್ಟಿಸಿ ನೋಡುತ್ತಾ ಮತ್ತೆ ಮಾತು ಆರಂಭಿಸಿದ.
"ಅವಳು ಏಷ್ಟೆ ಬೇಡ ಅಂದ್ರು ಹಠಮಾಡಿ ಮುಖದ ಮೇಲೆ ಹಾರಿ ಬರುವ ಆ ಕುದಲುಗಳು, ನನ್ನ ಪಕ್ಕ ಬಂದು ನಿಂತ್ರೆ ನನ್ನ ಕಿವಿತನಕ ಬರುತ್ತಾಳೆ ಅಷ್ಟು ಎತ್ತರ, ನಿಧಾನವಾಗಿ ನೆಡೆದು ಗೊತ್ತೆ ಇಲ್ಲ ಯಾವಗಲು ಬರಿ ಓಟ, ತುಂಭಾ ಅವಸರದಲ್ಲಿ ಇತ್ರಾ೯ಳೆ, ತಾನು ಕನಪ್ಯೊಸ್ ಆಗ್ತಾಳೆ ನನ್ನು ಕನಪ್ಯೊಸ್ ಮಾಡ್ತಾಳೆ, ಅವಳ ದ್ವನಿಯಲ್ಲಿ ಅದೆನೊ ಜಾದು ಇದೆ ಅವಳು ಮಾತಾಡ್ತಾ ಇದ್ರೆ ಕೆಳ್ತಾನೆ ಇರಬೇಕು ಅನ್ನಿಸುತ್ತೆ, ಆದರೆ ತುಂಭಾ ಕೆಟ್ಟದಾಗಿ ಹಾಡ್ತಾಳೆ, ಸ್ವಲ್ಪ ಮುಗೋಪಿ ಆದ್ರೆ ತುಂಭಾ ಒಳ್ಳಯವಳು, ಸ್ವಲ್ಪ ಮರೆವು ಜಾಸ್ತಿ ಸಂಜೆ ಪೋನ ಮಾಡು ನಿನಗೇನೊ ಹೆಳಬೇಕು ಅಂತಾಳೆ ಪೋನ್ ಮಾಡೆದ್ರೆ ಯಾಕೆ ಪೋನ್ ಮಾಡದೆ ಅಂತಾಳೆ, ಮೇಕಪ್ ಮಾಡಿಕೊಂಡ್ರೆ ತುಂಭಾ ಕೆಟ್ಟದಾಗಿ ಕಾಣ್ತಾಳೆ, ತುಂಭಾ ಸಿಂಪಲ್ ಹುಡಗಿ ಆದ್ರೆ ಸ್ವಲ್ಪ ದಪ್ಪ ಇದ್ದಾಳೆ, ಮಧ್ಯಾನ ನೀದ್ದೆ ಮಾಡಿ ಎದ್ದಾಗ ಚಿಕ್ಕ ಮಗುತರ ಮುದ್ದಾಗಿ ಕಾಣ್ತಾಳೆ, ಅವಳ ಕಣ್ಣು ನೋಡ್ತಾ ಇದ್ರೆ ಪ್ರಪಂಚದ ಸೌಂದರ್ಯವೆಲ್ಲಾ ಕಣ್ಣಲ್ಲೆ ಇದೆಯೆನೊ ಅನ್ನುವಷ್ಟು ಸುಂಧರವಾಗಿವೆ, ಸಿನಿಮಾ ನೋಡಿ ಕಣ್ಣಿರು ಹಾಕುವಷ್ಠೂ ಭಾವಜೀವಿ, ಟೀ ಅಂದ್ರೆ ಅಲ೯ಜಿ ಆದರೆ ಕಾಪಿ ಅಂದ್ರೆ ತುಂಭಾ ಇಷ್ಠ ಒಂದೆಸಲ ಎರೆಡೆರೆಡು ಕಫ್ ಕಾಪಿ ತಗೊಂಡು ಸಣ್ಣಮಗು ತರ ಕುಡಿತಾಳೆ", ಬಿಡು ಪಲ್ಲವಿ ಏಷ್ಟ ಹೇಳಿದರು ಮುಗಿಯದ ಒಂದು ಸುಂದರ ಕಾವ್ಯ ಅವಳು.
ಹೇ ಮುಂದಿನ ಸಲ ಮುಂಬೈಗೆ ಬರುವಾಗ ಅವಳನ್ನು ಕರೆದುಕೊಂಡು ಬಾ ನಾನು ಅವಳನ್ನು ನೋಡಬೇಕು ಓಕೆ, ಸರಿ ನನಗೆ ಲೇಟ್ ಆಗ್ತಾ ಇದೆ ಮನೆಯಲ್ಲಿ ಎಲ್ಲ ಕಾಯ್ತಾ ಇರುತ್ತಾರೆ ನಾನು ಬರ್ತಿನಿ, ಮರಿಬೇಡ ಮುಂದಿನ ಸಲ ನಮ್ಮ ಮನೆಗೆ ನೀನ್ನ ಹುಡಗಿ ಜೋತೆ ಬರಬೇಕು ಎಂದು ಹೇಳಿ ಮನೆಗೆ ಮರಳಿ ಹೋರಟಳು, ಅವಳೀಗೆ "ಬಾಯ್" ಹೇಳಿದ ರವಿ ಅವಳು ಹೋದ ದಿಕ್ಕನ್ನೆ ನೋಡುತ್ತಾ ಮನಸ್ಸಿನಲ್ಲೆ "ಹುಚ್ಚು ಹುಡಗಿ ನಾನು ಇದುವರೆಗು ಹೇಳಿದ್ದು ಇವಳ ಬಗ್ಗೆನೆ ಎಂದು ಇವಳಿಗೆ ಅಥಾ೯ನೆ ಅಗಲಿಲ್ಲ, ನನ್ನ ಜೀವನದಲ್ಲಿ ಯಾವ ಹುಡಗಿನು ಇಲ್ಲ, ನಾನು ಹೇಳಿದ್ದೆಲ್ಲಾ ಬರಿ ಸುಳ್ಳು, ಇವಳೆ ನನ್ನ ಮೂದಲ ಲವ್, ಮೊದಲ ಲವ್ ಮರೆಯುವದು ಎಷ್ಠೂ ಕಷ್ಠ ಅಂತ ನನಗೆ ಮಾತ್ರ ಗೊತ್ತು, ಇವಳನ್ನು ಮರೆಯಬೇಕು ಅಂತಾನೆ ಎಲ್ಲರಿಂದ ಅಷ್ಟೂ ದೂರ ಹೋದೆ ಆದರೆ ಮನಸ್ಸಿನಿಂದ ಮಾತ್ರ ಅವಳು ದೂರ ಆಗಲೆ ಇಲ್ಲ, ಇವಳಿಗೆ ನನ್ನ ಪ್ರೀತಿ ಅಥಾ೯ನೆ ಆಗಲಿಲ್ಲವೂ ಅಥವಾ ಎಲ್ಲ ಗೊತ್ತಿದ್ದು ನಾಟಕ ಮಾಡಿದಳಾ? ಗೋತ್ತಿಲ್ಲ, ಪ್ರಪಂಚದಲ್ಲಿ ಏಷ್ಟೂಂದು ಹುಡಗಿಯರು ಇದ್ರು ನಾನ್ಯಾಕೆ ಈ ಪೆದ್ದಿಯನ್ನು ಪ್ರೀತಿಸಿದೆ? ಕೆಲವು ಪ್ರಶ್ನೆಗಳಿಗೆ ಉತ್ತರವೆ ಇರುವುದಿಲ್ಲ" ಎಂದು ತನಗೆ ತಾನೆ ಸಮಾಧಾನ ಮಾಡಿಕೊಂಡು ಮರಳಿ ದೆಹಲಿಯತ್ತ ಪ್ರಯಣಕ್ಕೆ ಹೊರಟ, ಸಂಜೆಯ ತಂಗಾಳಿಗೆ ಮೈಒಡ್ಡಿ ನಿಂತಿದ್ದ ಗೇಟ್ ವೇ ಆಫ್ ಇಂಡಿಯಾ ಇಂದು ಮತ್ತೊಂದು ಪ್ರೇಮ ಕಥೆಗೆ ಸಾಕ್ಷಿಯಾಯಿತು.