Sunday, March 20, 2011

ಯಾಕೋ ಬೇಜಾರು......


      
                                           ಏನೂ ತಿಳಿಯದು ಯಾಕೊ ಇತ್ತಿಚಿಗೆ ತುಂಬಾ ಬೇಜಾರು ಆಗುತ್ತೆ, ತಕ್ಷಣಕ್ಕೆ ಮನಸ್ಸಿಗೆ ಅದೇನು ಆಗಿಬಿಡುತ್ತದೆಯೂ ತಿಳಿಯದು ಕೆಲ ಕ್ಷಣಗಳ ಹಿಂದೆ ಬಿಸಿ ಗಾಳಿ ತುಂಬಿದ ಬಲೂನಿನಂತೆ, ಉಲ್ಲಾಸದ ಚಿಲುಮೆಯಂತೆ ಚಿಮ್ಮುತಿದ್ದ ಮನಸ್ಸು ತಕ್ಷಣಕ್ಕೆ ತುಂಬಿದ ಬಲುನ್ ಒಡೆದು ಠುಸ್ ಎಂದು ಗಾಳಿ ಹೂರ ಹೋಗಿ ಕೆಲ ಕ್ಷಣಕ್ಕೆ ನೇಲಕ್ಕೆ ಬಿಳುವಂತೆ ಮನಸ್ಸು ಕೂಡ ಮಂಕಾಗಿ ಬಿಡುತ್ತದೆ, ಸುಮ್ಮನೆ ಬೇಜಾರಾಗಲು ಮನಸ್ಸಿಗೆ ಯಾವುದೆ ಕಾರಣಗಳು ಬೇಕಾಗಿಲ್ಲ, ಸೂಕ್ತ ಕಾರಣಗಳು ಇದ್ದು  ಮನಸ್ಸಿಗೆ ಬೇಜಾರಾದಗ ಏನೂ ಒಂದು ರೀತಿ ಆದರೆ ಕಾರಣವೆ ಇಲ್ಲದೆ ಬೇಜಾರಾದಾಗ ಏನು ಮಾಡಬೇಕು ತಿಳಿಯದು.
       ಅಪ್ಪ ಬೈದಾಗ, ಮುದ್ದಿನ ಅಮ್ಮನ ಜೋತೆ ಜಗಳ ಮಾಡಿದಾಗ, ಸ್ನೇಹಿತರು ಹಿಯ್ಯಾಳಿಸಿದಾ, ಮುಖ್ಯ ಕೆಲಸವಿರುವ ದಿನವೆ ಬಸ್ ಮಿಸ್ ಆದಗ, ಕಾಲೇಜಿನಲ್ಲಿ ನೆಚ್ಚಿನ ಸರ್/ಮೆಡಮ್ ಬೈದಾಗ, SMSಗೆ ಮುದ್ದಿನ ಗೆಳಯರು Reply ಮಾಡದಿದ್ದಾಗ, ಅಪ್ಪ-ಅಮ್ಮನನ್ನು ಇಷ್ಟ ಪಟ್ಟಷ್ಟೆ ಇಷ್ಟ ಪಡುವ ಹುಡಗಿ Facebook-Orkutನಲ್ಲಿ on-lineನಲ್ಲಿ ಇದ್ದರು ನನ್ನ ಜೋತೆ chat ಮಾಡಲು ಒಲ್ಲದಾದಾಗ ಮನಸ್ಸಿಗೆ ಬೇಜಾರಾಗುವದು ಸಹಜ ಆದರೆ ಯಾಕೊ ಸುಮ್ಮನೆ ಬೆಜಾರಿಗೆ ಉತ್ತರವೆ ಸಿಗುವುದಿಲ್ಲ.
                          ಮನಸ್ಸಿನ ಮನಸ್ಸಿಗೆ ಬೇಜಾರಾದಗ ಏನು ಹಿಡಿಸುವುದಿಲ್ಲ, ಎದುರುಗಡೆ ಎಷ್ಟೆ ಸುಂದರವಾದ ಹುಡಗಿ ಬಂದರು ಅವಳನ್ನು ಕಣ್ಣೆತ್ತಿ ಕೊಡ ನೋಡುವುದಿಲ್ಲ, ಅಚ್ಚು-ಮೆಚ್ಚಿನ ಸುಂದರ ಮೆಡಮ್ ಪಕ್ಕದಲ್ಲಿ ಕುಳಿತು Problem ಹೇಳಿಕೊಟ್ಟರು ಅದು ತಲೆಗೆ ಹೋಗುವುದಿಲ್ಲ, ಮೆಚ್ಚಿನ Heroನ Movie TVಯಲ್ಲಿ ಬರುತ್ತಿದರು ಕೂಡ Remote ನಿಂದ Channel ಬದಲಾಗುತ್ತಲೆ ಇರುತ್ತದೆ, ಊಟ ಸೇರುವುದಿಲ್ಲ, ಕೋನೆಗೆ ಮಲಗೋಣ ಎಂದರೆ ನಿದ್ರೆ ಬರುವುದಿಲ್ಲ ಸುಮ್ಮನೆ ಮಲಗಿ ಮೇಲುಗಡೆ ತಿರುಗುತ್ತಿರುವ ಅಥವಾ ನಿಂತಿರುವ ಫ಼್ಯಾನ್ ನ್ನು ದಿಟ್ಟಿಸಿ ನೋಡುವುದರಲ್ಲೆ ಮನಸ್ಸು ನಿರಂತರವಾಗಿರುತ್ತದೆ.
        ಈ ಮನಸ್ಸಿನ "ಹಾಗೆ ಬೇಜಾರಿಗೆ" ಏನು ಕಾರಣ? ಎಂದೂ ಎಷ್ಟೂ ತಿಂಗಳುಗಳ ಹಿಂದೆ ಅಪ್ಪ ಬೈದ ಮಾತುಗಳು ನೆನಪಾದಾಗ, ಯಾವಾಗಲೊ ಸೋತ ಕ್ರಿಕೆಟ್ ಪಂದ್ಯ ನೆನಪಾದಗ, ರಸ್ತೆಯಲ್ಲಿ ನೆಡೆಯುತ್ತಿರುವ ಯುವ ಜೋಡಿಯನ್ನು ನೋಡಿ ಮೆಚ್ಚಿನ ಹುಡಗಿ ನೆನಪಾದಾಗ, ಇದ್ದಕ್ಕಿದ್ದಂತೆ ಮಾವನ ಮಗನು ತೆಗೆದಿರುವ ಅಂಕಗಳು ನಾನು ತೆಗೆದಿರುವ ಅಂಕಗಳು ನೆನಪಾಗಿ ಎರಡನ್ನು ಹೊಲಿಸಿದಾಗ, ಊರಿನಲ್ಲಿ ಅಪ್ಪ-ಅಮ್ಮನ ಜೋತೆ ಹಾಯಾಗಿ ಇರುವ ಗೆಳಯ ನೆನಪಾದಾಗ, ಎಷ್ಟೂ ಬಾರಿ ನನ್ನಿಂದ ಸಹಾಯ ಪಡೆದು ನಾನು ಒಂದು ಸಣ್ಣ ಸಹಾಯ ಕೂರಿದಾಗ ನಿರಾಕರಿಸುವ ಅಹಂಕಾರಿ ಗೆಳಯ ನೆನಪಾದಾಗ ಹೀಗೆ ಒಂದಲ್ಲ ಒಂದು ಕಾರಣಕ್ಕೆ ಮನಸ್ಸು ಬೇಜಾರಾಗುತ್ತಲೆ ಇರುತ್ತದೆ, ಆದರೆ ಕೆಲ ಸಾರಿ ಕಾರಣವೆ ಇರುವುದಿಲ್ಲ ಅದೇನು ಮನಸ್ಸಿನ ಮಮ೯ವೂ ಆ ದೇವರೆ ಬಲ್ಲ.
                          ಇಂದೂ ಮತ್ತೆ ನನ್ನ ಮನಸ್ಸಿಗೆ ಯಾಕೊ ಬೇಜಾರು, ಇಡಿ ದಿನ Busyಯಾಗಿ ಇದ್ದೆ, ಹಾಯಾಗಿ ಕಳೆದೆ ನೆಚ್ಚಿನ Sirನ್ನು madamನ್ನು meet ಮಾಡಿದೆ, ಮೆಚ್ಚಿನ ಗೆಳತಿ ಜೋತೆ ಹರಟೆ ಹೊಡೆದೆ, ಅಪ್ಪ-ಅಮ್ಮನ ಜೋತೆ ಮಾತನಾಡಿದೆ, ಗೆಳಯರ ಜೋತೆ ಆಟ ಆಡಿದೆ ಆದರು ದಿನದ ಕೋನೆಗೆ ಯಾಕೊ ಬೇಜಾರು, ಇಂದು ಏನಾದರು ಆಗಲಿ ಈ ಬೇಜಾರಿನ ಮೂಲ ಹುಡುಕಲೆ ಬೇಕು ಎಂದು ಕುಳಿತೆ ಆದರೆ ಕೊನೆಗು ಆಗಲೆ ಇಲ್ಲ, ಆದರೆ ನಾನು ಸೋಲ್ಲನ್ನು ಅಷ್ಟು ಬೇಗ ಒಪ್ಪಿಕೊಳ್ಳುವುದಿಲ್ಲ Next time ಖಂಡಿತಾ ಕಂಡು ಹಿಡಿಯುತ್ತೆನೆ.            

Saturday, March 19, 2011

ನನ್ನ ಪ್ರೀತಿಯ ಅಪ್ಪ


                "ಅಪ್ಪ" ಇಂದು ಯಾಕೊ ನೀನು ನನಗೆ ತುಂಬಾ ನೆನಪು ಆಗ್ತಾ ಇದ್ದಿಯಾ, ಯಾಕೊ ನಿನ್ನನ್ನು ತುಂಬಾ miss ಮಾಡ್ತಾ ಇದ್ದೆನೆ, ನಾನು ಮನೆಯಲ್ಲಿ ಇರುವಾಗಲಿಲ್ಲ ಏನಾದರು ಕಾರಣಕ್ಕೆ ನೀನು ನನಗೆ ಬೈಯುತ್ತಲೆ ಇರುತಿದ್ದೆ ಆಗೆಲ್ಲಾ ನನಗೆ ತುಂಬಾ ಕಿರಿ ಕಿರಿ ಆಗ್ತಾ ಇತ್ತು ಆದರೆ ಇವತ್ತು ನಿನ್ನನ್ನು, ನಿನ್ನ ಬೈಗಳನ್ನು ತುಂಬಾ ಮಿಸ್ ಮಾಡ್ತಾ ಇದ್ದೆನೆ.
               ನನಗಿನ್ನು ನೆನಪಿದೆ ನಾನಗಾಗ 3-4 ವಷ೯ ಇರಬೇಕು ನಾವು ಆಗ ಆಣುರಿನಲ್ಲಿ ಇದ್ದೆವು ಪ್ರತಿದಿನ ನನ್ನನ್ನು ಅಂಗನವಾಡಿಗೆ ಕರೆದುಕೊಂಡು ಹೋಗಿ ಬಿಟ್ಟು ಬರುತಿದ್ದಿರಿ ಅಲ್ಲಿ ನನಗೆ ಮೆಸ್ಟ್ರು ಮಗ ಎಂಬ ವಿಶೇಷ ಕಾಳಜಿ ಸಿಗುತಿತ್ತು, ನಾನು 12 ವಷ೯ದವನಾಗುವವರೆಗು ಪ್ರತಿದಿನ ನೀವೆ ನನಗೆ ಸ್ನಾನ ಮಾಡಿಸುವದು, ಬೆರಳಿನ ಉಗುರು ಕತ್ತರಿಸುವದು, ನನ್ನ ಬಟ್ಟೆ Press ಮಾಡುವದು ಎಲ್ಲ ನೀವೆ ಮಾಡುತಿದ್ದಿರಿ, ಅದೆನೂ ನಿಮಗೆ ಅಣ್ಣ, ಅಕ್ಕನಿಗಿಂತ ನನ್ನ ಮೇಲೆಯೆ ಹೆಚ್ಚು ಪ್ರೀತಿ, ಮಮಕಾರ.
           3ನೇ ತರಗತಿಯವರೆಗು ನಮ್ಮೂರಿನಲ್ಲೆ ಓದಿದ ನಾನು 4ನೇ ತರಗತಿಗೆ ನಿಮ್ಮ ಶಾಲೆ ಸೇರುತ್ತೆನೆ ಅಂದಾಗ ಸಂತೋಷದಿಂದಲೆ ಒಪ್ಪಿದ್ದಿರಿ ನೀವು, ಪ್ರಥಮ ದಿನವೆ ಎಲ್ಲರಿಗು ನಾನು ಪರಿಚಯವಾಗಿದ್ದು ನಂದಿಗಾವಿ ಸರ್ ಮಗನೆಂದು ಹೂರತು ಹೋಸ ವಿದ್ಯಾಥಿ೯ ಎಂದಲ್ಲ, ನಿಮ್ಮ ಮಗನೆಂಬ ಒಂದೇ ಕಾರಣಕೆ ನನಗೆ ಆ ಶಾಲೆಯ ಎಲ್ಲಾ ತರಗತಿಗಳಿಗು, ಕೂಠಡಿಗಳಿಗು ಮುಕ್ತ ಪ್ರವೇಶವಿತ್ತು, ನಿಮ್ಮೆಲ್ಲರ ಆ ಹರಟೆ, ತಮಾಷೆಗಳು ನನಗೆ ಇನ್ನೊಂದು ಪ್ರಪಂಚವನ್ನು ತೊರಿಸಿತು, ಕೇವಲ ನಿಮ್ಮ ಮಗನೆಂಬ ಕಾರಣಕ್ಕೆ ಗ್ರಂಥಾಲಯದ ಯಾವುದೆ ಪುಸ್ತಕವನ್ನು ಯಾರದೆ ಅನುಮತಿ ಇಲ್ಲದೆ ತೆಗೆದುಕೂಳ್ಳುವ, ಓದುವ ಸ್ವಾತಂತ್ರ ನನಗೆ ಸಿಕ್ಕಿತ್ತು, ಅದು ಆ ಶಾಲೆಯಲ್ಲಿ ನಿಮಗೆ ಇದ್ದ ಗೌರವ, ಪ್ರೀತಿಯ ಒಂದು ತುಣಕು ಅಷ್ಟೆ, ಆ ಸ್ವಾತಂತ್ರ ಇದ್ದ ಕಾರಣದಿಂದಲೆ ನನಗೆ ಆ ಪುಟ್ಟ ವಯಸ್ಸಿಗೆ ದ..ಬೇಂದ್ರೆಯವರ "ನಾಕು ತಂತಿ", ಕುವೆಂಪುರವರ "ಮಲೆಗಳಲ್ಲಿ ಮದುಮಗಳು", ಕಾರಂತರ "ಮುಕ್ಕಜ್ಜಿಯ ಕನಸುಗಳು" ಹೀಗೆ ಇನ್ನು ಅನೇಕ ಗ್ರಂಥಗಳನ್ನು ನೋಡುವ ಬಾಗ್ಯ ಸಿಕ್ಕಿತ್ತು, ಆದರೆ ಆ ವಯಸ್ಸಿಗೆ ಅವುಗಳನ್ನು ಓದಿ ಅಥ೯ಮಾಡಿಕೊಳ್ಳುವ ಶಕ್ತಿ ನನ್ನಲ್ಲಿ ಇರಲಿಲ್ಲ ಆದರೆ ಅದು ನನಗೆ ಓದುವ ಗಿಳನ್ನು ಅಂಟಿಸಿತು.
            ಇನ್ನು ಮನೆಯಲ್ಲಿ ನಾನು ಎಷ್ಟೆ ತಲೆಹರಟೆ ಮಾಡಿದರು ಸುಮ್ಮನಿದ್ದು ಶಾಲೆಯಲ್ಲಿ ನನಗೆ ಬೇರೆ ಶಿಕ್ಷಕರಿಂದ ಶಿಕ್ಷೆ ಕೂಡಸುತಿದ್ದಿರಿ, ಇದೆ ವಿಷಯವಾಗಿ ನಾನು ನಿಮ್ಮ ಜೋತೆ ಮನೆಯಲ್ಲಿ ಎಷ್ಟೂಬಾರಿ ಜಗಳ ಮಾಡಿದುಂಟು, ನಿಮ್ಮದೆ ಹವ್ಯಾಸಗಳಾದ ದಿನಪತ್ರಿಕೆ ಓದುವದು, ಕ್ರಿಕೆಟ್ ನೋಡುವದು ನನಗೆ ಗೀಳಾಗಿ ಬಂದವು, ಆ ಚಿಕ್ಕ ವಯಸ್ಸಿನಲ್ಲಿ ಗಂಟೆಗಟ್ಟಲೆ ಪತ್ರಿಕೆ ಓದುತಿದ್ದೆ ಅದೆ ನನಗೆ ಅದ್ಬುತವಾದ ಸಾಮಾನ್ಯ ಜ್ನಾನ ನಿಡಿತು.
           5ನೇ ತರಗತಿಯಲ್ಲಿ ಇದ್ದಾಗ ನನಗೆ ENGLISHನ ಯಾವುದೊ ಒಂದು ಸರಳವಾದ ಪದ ಸರಿಯಾಗಿ ಬರೆಯಲು ಬಾರದಿದ್ದಾಗ ನನ್ನದೆ ತರಗತಿಯ ಹುಡಗಿಯಿಂದ   ನನ್ನ ಕೆನ್ನೆಗೆ ಹೂಡಸಿದ್ದು ನನಗಿನ್ನು ಹಸಿ-ಹಸಿಯಾಗಿ ನೆನಪಿದೆ, ಆಗ ಎಷ್ಟೂ ದಿನ ನಿಮ್ಮ ಮೆಲೆ ನನಗೆ ಕೂಪ ಇತ್ತು, ಕೆಲದಿನ ನಿಮ್ಮ ಜೋತೆ ಮಾತು ಬಿಟ್ಟಿದೆ ಆದರೆ ನನಗೆ ಇಗ ಅನಿಸುತ್ತದೆ ಅಂದು ನನಗೆ ನೀವು ಆ ಶಿಕ್ಷೆ ಕೊಡದಿದ್ದರೆ ಇಂದು ನಾನು ಇಂಜಿನಿಯರಿಂಗ ಓದುತ್ತಿರಲಿಲ್ಲ...... Thanks Dad
          ನಾನು ಇರುತಿದ್ದ ತರಗತಿಗಳಲ್ಲಿ ನೀವು ಯಾವಗಲು ಕಟ್ಟುನಿಟ್ಟಿನ  ಮತ್ತು ಶಿಸ್ತಿನ ಗುರುಗಳನ್ನೆ ಕಳುಹಿಸುತಿದ್ದಿರಿ ಪಾಪ ನನ್ನ ಸಲುವಾಗಿ ನನ್ನ ಸಹಪಾಟಿಗಳು ಶಿಕ್ಷೆ ಅನುಭವಿಸಿದುಂಟು, 5ನೇ ತರಗತಿಯಲ್ಲಿ ಇದ್ದಾಗ ನೆಡೆದ ತಾಲ್ಲೂಕ ಮಟ್ಟದ ಕ್ವಿಜ್ ಸ್ಪದೆ೯ಗೆ ನಿಮ್ಮ ಶಾಲೆಯಿಂದ ನನ್ನನ್ನು ಕಳುಹಿಸಿದಾಗ ಬೇರೆ ಶಿಕ್ಷಕರು ತಮಾಷೆ ಮಾಡಿದ್ದರು ಆದರೆ ಕೋನೆಗೆ ನಾನೆ ಗೆದ್ದು ಬಂದಾಗ ಎಲ್ಲರಿಗು ಆಶ್ಚಯ೯, ನನಗು ಕೂಡ ಒಂದು ಕ್ಷಣ ಶಾಕ್ ಆಗಿತ್ತು ಆದಿನ ನಿಮ್ಮ ಮುಖದಲ್ಲಿ ಇದ್ದ ಆನಂದವನ್ನು ನೋಡಲು ಎರಡು ಕಣ್ಣು ಸಾಲದಾಗಿದ್ದವು, ನಂತರ ತಮಾಷೆ ಮಾಡಿದ ಎಲ್ಲಾ ಶಿಕ್ಷಕರಿಗು ನೀವು ಟ್ರಿಟ್ ಕೂಡಿಸಿದ್ದು ಬೇರೆ ಕಥೆ.
         ಕೆಲಸಾರಿ ನಿಮ್ಮ ಅತಿಯಾದ ಕೋಪ, ನಿಮ್ಮ Rules ನನಗೆ ತುಂಬಾ ಕಿರಿ ಕಿರಿ ಮಾಡಿದುಂಟು, ಅದೇಕೂ ತಿಳಿಯದು ನಮ್ಮುರಿನ ಕ್ರಿಕೆಟ್ ಟಿಮ್ ಅಂದರೆ  ನಿಮಗೆ ಅದೇನು ಕೋಪನೊ ತಿಳಿಯದು, ಅವರ ಜೋತೆ  ಸೇರಲು ನನ್ನನ್ನು ಬಿಡುತ್ತಲೆ ಇರಲಿಲ್ಲ ಆಗ ನಿಮ್ಮ ಮೇಲೆ ಎಷ್ಟು ಕೋಪ ಬರುತಿತ್ತು ಗೋತ್ತಾ...? ಆದರೆ ನಿಮ್ಮ ಕಣ್ಣು ತಪ್ಪಿಸಿ ಸದಾ ನಾನು ಅವರ ಜೋತೆ ಕ್ರಿಕೆಟ್ ಆಡುತಿದ್ದೆ, ಅವರ ಜೋತೆ ಸೇರಿದರೆ ಎಲ್ಲಿ ಕೆಟ್ಟು ಬಿಡುತ್ತೆನೆ ಎಂಬ ಭಯತಾನೆ ನಿಮಗೆ? ಇಲ್ಲ ಅಪ್ಪಾ ಎಷ್ಟೆ ಆದರು ನಾನು ನಿಮ್ಮ ಮಗ.
         ಯಾವಗಲು ಅಣ್ಣನಿಗು, ಅಕ್ಕನಿಗು ಮತ್ತು ನನಗು Best oneನ್ನೆ select ಮಾಡುತಿದ್ದಿರಿ, ಅವರೇನೂ ನಿಮ್ಮ ಮಾತಿಗೆ ಒಪ್ಪಿ ನೀವು ತೋರಿದ ಹಾದಿಯಲ್ಲಿ ನೆಡೆಯುತಿದ್ದರು ಆದರೆ ನಾನು ನಿಮ್ಮ Bestಗಳನ್ನು ಎಂದು ಒಪ್ಪಿಕೂಳ್ಳಲೆ ಇಲ್ಲ, ಬರಿ ನನ್ನದೆ ಹಠ, ಎಂದು ಯಾವುದರಲ್ಲು ಸೋಲು ಒಪ್ಪದ ನೀವು ಅದೆಕೊ ಗೊತ್ತಿಲ್ಲ ಪ್ರತಿಬಾರಿ ನನ್ನ ಹಠದ ಎದಿರು ಸೋತ್ತಿದ್ದಿರಾ, ಒಂದು ಸಾರಿ ನಿಮ್ಮ ಜೋತೆ ಮನಸಾರೆ ಮನಬಿಚ್ಚಿ ಮಾತನಡ ಬೇಕು ಎಂದುಕೂಳ್ಳುತ್ತೆನೆ ಆದರೆ ನಿಮ್ಮ ಎದುರು ಮನಸ್ಸಿನ ಮಾತುಗಳೆ ಆಚೆ ಬರುವುದಿಲ್ಲ, ಹೆಳಬೇಕಾಗಿರುವುದನ್ನು ಬಿಟ್ಟು ಇನ್ನೆಲ್ಲ ಮಾತನಾಡುತ್ತೆನೆ, ಅಮ್ಮನ ಜೋತೆ ಸಲುಗೆಯಿಂದ ಮಾತನಾಡುವ ರೀತಿ ನಿಮ್ಮ ಜೋತೆ ಮಾತನಾಡ ಬೇಕು ಎಂದರು ನನ್ನಿಂದ ಸಾದ್ಯವಾಗುತ್ತಿಲ್ಲ.
         ಯಾಕೊ ಇಂದು ಬೆಳ್ಳಗ್ಗೆಯಿಂದ ನೀವು ತುಂಬಾ ನೆನಪಾಗುತ್ತಿದಿರಿ ಅದಕ್ಕೆ ಈ small flashback ಅಷ್ಟೆ, ನೆನಪುಗಳು ಎಷ್ಟು ಮದುರ, ಕೇಲವೆ ಕ್ಷಣಗಳಲ್ಲಿ ನಮ್ಮನ್ನು ಚಿಕ್ಕ ಮಗುವನ್ನಾಗಿಸಿ ಬಿಡುತ್ತವೆ, ಮನದಲ್ಲಿ ಉತ್ಸಾಹದ ಗಾಳಿಪಟ ಹಾರಿಸಿ ಬಿಡುತ್ತವೆ, 30 ವಷ೯ಗಳಿಂದ ಶಿಕ್ಷಕರಾಗಿ ನನ್ನಂತಹ ಸಾವಿರಾರು  ವಿದ್ಯಥಿ೯ಗಳ ಜೀವನಕ್ಕೆ ಮಾಗ೯ದಶ೯ನ ಮಾಡಿರುವ ಹಾಗು ಇಂದಿಗು ದಣಿಯದೆ ಅದೆ ಉತ್ಸಾಹದಿಂದ ವಿದ್ಯಾಥಿ೯ಗಳಿಗೆ ಪಾಠ ಮಾಡುತ್ತಿರುವ ನಿಮಗೆ ನನ್ನ ಕೋಟಿ-ಕೋಟಿ ವಂದನೆಗಳು........ Dad love U and missing U and mom U too
        

Thursday, March 17, 2011

ಕಲ್ಲು ಮತ್ತು ಅವಳು

ಇರುವದು ಅವಳಿಗು ಮತ್ತು ಕಲ್ಲಿಗು ಒಂದೇ ಒಂದು ವ್ಯತ್ಯಾಸ
ಅವಳು ಸಜೀವಿ ಕಲ್ಲು ನಿಜಿ೯ವಿ 
ಉಳಿದಂತೆ ಇರುವುದೆಲ್ಲ ಬರಿ ಸಾಮ್ಯತೆಗಳು
ಇಲ್ಲ ಕಲ್ಲಿಗೆ ಮನಸ್ಸು
ಇವಳ ಮನಸ್ಸೆ ಒಂದು ಕಲ್ಲು
ಇರುವುದಿಲ್ಲ ಕಲ್ಲಿನಲ್ಲಿ ಬಾವನೆಗಳು
ಇವಳು ಬಾವನೆಗಳೆ ಸತ್ತ ಹುಡಗಿ
ಕಲ್ಲೆಂದರೆ ಬರಿ ಒರಟಂತೆ
ಆಗ ಬೇಡ ಗೆಳತಿ ನೀನು ಒರಟು ಕಲ್ಲಂತೆ
ಬಳಸುವರು ಕಲ್ಲನ್ನು ಮನೆಯ ಅಡಿಪಾಯಕ್ಕೆ
ಒರಟು ಕಲ್ಲು ಹೂರುವದು ಮನೆಯ ಭಾರವನ್ನು
ನೀಡುವದು ನೆರಳನ್ನು ಆಶ್ರಯಿಸಿದ ಜನರಿಗೆ
ಆಗು ಈಗ ನೀನು ಕಲ್ಲಂತೆ
ಬೆಳಗು ನಿನ್ನ ನಂಬಿದವರ ಮನೆ ಮನಸ್ಸನ್ನು
ಆದರೆ ನೆನಪಿರಲಿ ಕೋಪ ಮನಸ್ತಾಪಗಳ
ಕಂಪನಕ್ಕೆ ಸಿಲುಕಿ ಕೆಡವ ಬೇಡ
ನಿನ್ನ ನಂಬಿದವರ ಮನೆಯ 
ನೆನಪಿರಲಿ ನೀನು ಸಜೀವಿ ನಿಜಿ೯ವಿಯಲ್ಲ...

Monday, March 7, 2011

ನನ್ನ ಪ್ರೀತಿಯ ಕಥೆ


ಕಂಡೆ ನಾನು ಅವಳ ಕಾಲೇಜು ಸಭಾಂಗಣದಿ
ಸೋತೆ ಅವಳ ಕಣ್ಣ ಕಾಂತಿಗೆ ಆ ಕ್ಷಣ
ಅನಿಸಿತು ನನಗೆ ಆಗ ಅವಳೆ ನನ್ನ ಕನಸಿನ ಹುಡಗಿ
ಹುಟ್ಟಿತು ಅವಳ ಮೇಲೆ ನನಗೆ ಮೂದಲ ನೋಟದಲ್ಲೆ ಪ್ರೀತಿ

ಮಾತನಾಡಿಸದಳು ನನ್ನ ಅವಳು ಅಂದೂಂದು ದಿನ ಕಾಲೇಜು ಅಂಗಳದಿ
ಮರು ಕ್ಷಣವೆ ಶುರುವಾಯಿತು ನನ್ನ ಮನದಿ ತಳ-ಮಳ
ಕಳೆದು ಹೋಯಿತು ನನಗೆ ಅಂದಿನಿಂದ ರಾತ್ರಿಯ ನಿದ್ರೆ
ಅನಿಸಿತು ನನಗೆ ಆಗ ಆಗಿರುವೆ ನಾನು ಅವಳ ಪ್ರೀಮಿ

ಕುಳಿತಳು ನನ್ನಪಕ್ಕ ಆ ದಿನ ಕ್ಲಾಸ್ ರೂಮಿನಲ್ಲಿ
ನನ್ನ ಕೈ ಮೇಲೆ ಕೈ ಇಟ್ಟು ಮಾತನಾಡಿಸಿದಳು ನನ್ನ
ಅನಿಸಿತಾಗ ನನಗೆ ಪಾವನವಾಯಿತು ನನ್ನ ಜೀವನ ಅವಳ ಸ್ಪಶ೯ದಿಂದ
ಅನಿಸಿತು ಆ ಕ್ಷಣಕ್ಕೆ ಇದೆ ಅವಳಿಗು ನನ್ನ ಮೇಲೆ ಪ್ರೀತಿ

ಬಂದಳು ಅವಳು ಈ ದಿನ ನನ್ನ ಬಳಿ ಕುಣಿಯುತ ಕಾಲೇಜು ಕ್ಯಾಂಟಿನಿನಲ್ಲಿ
ನನ್ನ ಕೈಯಲ್ಲಿ ಇಟ್ಟು ಒಂದು ಸುಂದರ ಪತ್ರಿಕೆ ನುಡಿದಳು
"ಗೆಳಯಾ ಇರುವದು ನನ್ನ ಮದುವೆ ಮುಂದಿನ ವಾರ
ಇದೂ ತಗೂ ಮೊದಲ ಲಗ್ನ ಪತ್ರಿಕೆ ನಿನಗೆ"
ಕೇಳಿ ಅವಳ ಮಾತು ಆ ಕ್ಷಣ ನಾನಾದೆ "ಇಂಗು ತಿಂದ ಮಂಗ"

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...