Wednesday, October 7, 2015

ಭಾವಿ ಪತ್ನಿಗೊಂದು ಪತ್ರ

ಹಾಯ್ ಡಿಯರ್...
ನಿನ್ನ ಏನಂತ ಕರೆಯೊದು ತಿಳಿತಿಲ್ಲ, ಎಲ್ಲಿ ಇದ್ದಿಯಾ? ಹೇಗ ಇದ್ದೆಯಾ? ಏನ್ ಮಾಡ್ತಾ
ಇದ್ದಿಯಾ? ಒಂದು ಗೊತ್ತಿಲ್ಲ, ಇರಲಿ ಬೀಡು ನನಗೆ ಸರ್ ಪ್ರೈಜ್ ಅಂದ್ರೆ ತುಂಭಾನೆ
ಇಷ್ಟಾ ಅದಕೆ ತಾನೆ ಅರೆಂಜ್ ಮ್ಯಾರೆಜ್ ಆಗ್ತಾ ಇರೊದು...
ಇತ್ತಿಚಿಗೆ ಮದುವೆ ವಿಷಯ ಬಂದಾಗಲೆಲ್ಲಾ ನಾನು ಒಂದೆ ವಿಷಯದ ಬಗ್ಗೆ ಯೊಚಿಸುತ್ತಾ
ಇರ್ತಿನಿ, ಅದು ನಿನ್ನ ಬಗ್ಗೆನೆ,
 ನೀನು ಹೇಗೆ ಇರಬಹುದು?
 ಎತ್ತರ ಇರಬಹುದಾ?
 ಕುಳ್ಳಿನಾ??
 ನನಗಿಂತಾ ಕಲರ್ ಇರಬಹುದಾ??? (ನಾನೇನು ತುಂಭಾ ಕಲರ್ ಇಲ್ಲಾ ಬೀಡು)
ನೀನ್ನ ಕಣ್ಣು ಹೇಗೆ ಇರಬಹುದು???
ನನಗೆ ಹುಡಗಿರಲ್ಲಿ ತುಂಭಾ ಇಷ್ಟಾ ಅಗೊದು ಕಣ್ಣುಗಳು, Hope ನಿನಗೆ ತುಂಭಾ ಮುದ್ದಾದ
ಕಣ್ಣುಗಳು ಇರಬಹುದು, ಅದನ್ನೆ ದೇವರಲ್ಲಿ ಕೂಡ ದಿನಾನು ಕೆಳುತ್ತಾ ಇರುತ್ತೆನೆ.

             ಇನ್ನು ನನಗಂತು ದೇವರಾಣೆ ಅಡುಗೆ ಮಾಡೊಕೆ ಬರಲ್ಲ, ಅಡುಗೆ ಮಾಡೊದು
ದೂರದ ಮಾತು ಕೊತ್ತಂಬರಿ,ಕರಿಬೇವು,ಮೆಣಸಿನಕಾಯಿ,ಇರುಳ್ಳಿ, ಟಮೋಟೊ ಬಿಟ್ಟು ಬೇರೆ
ತರಕಾರಿ ಹೆಸರು ಕೂಡ ಗೋತ್ತಿಲ್ಲ ನನಗೆ,
 So ನಾನು ಅಡುಗೆ ಮಾಡಿ ತಿನ್ನುಸ್ತಿನಿ ಅನ್ನೊದೆಲ್ಲ ಮರೆತು ಬಿಡು, ಆದರೆ ಪಾತ್ರೆ
ಮಾತ್ರ ತುಂಭಾ ಚನ್ನಾಗಿ ತೋಳಿತಿನಿ, ಬೇಕಿದ್ರೆ ದಿನಾನು ನಾನೇ ಪಾತ್ರೆ ತೋಳಿತಿನೆ,
ಊಟದ ವಿಷಯದಲ್ಲಿ ನಂದು ಯಾವುದೆ ತಕರಾರು ಇಲ್ಲಾ, ನೀನು ಕೇಸರಿ ಭಾತ್ ಗೆ ಸಕ್ಕರೆ ಬದಲು
ಊಪ್ಪೂ ಹಾಕಿ ಮಾಡಿಕೊಟ್ರು ಸುಮ್ಮನೆ ತಿಂದು ಮುಗಿಸ್ತಿನಿ, ನೋ ಕಂಪ್ಲೆಟ್ ಬರಿ
ಕಾಂಪ್ಲಿಮೆಂಟ್ಸ....

            ನನ್ನ ಹತ್ತಿರ ಕಾರು ಅಂತೂ ಇಲ್ಲ, ಕಾರು ತೆಗೆದುಕೊಳ್ಳಕೆ ಆಗದೆ
ಇರುವಷ್ಟು ಬಡವ ಏನಲ್ಲ, ಬಟ್ ಸುಮ್ಮನೆ ಷೋಕಿ ಮಾಡುವನು ನಾನ್ನಲ್ಲ, ನನಗೆ ಅಪ್ಪ
ಅಂದ್ರೆ ತುಂಭಾ ಇಷ್ಟ, ಅವರು ಕೊಡಿಸಿದ ಎಲ್ಲ ವಸ್ತುವನು ಜೋಪಾನವಾಗಿ
ನೋಡಿಕೊಳ್ಳಿತ್ತಿನಿ (Hope so ನೀನು ಕೂಡ ಅಪ್ಪನ ಅಯ್ಕೆಯೆ ಆಗಿರುತ್ತಿಯಾ
ಅನ್ಕೊತಿನಿ) ಅವರು ನಾನು ಕಾಲೇಜ್ ನಲ್ಲಿ ಇದ್ದಾಗ ಕೊಡಿಸಿದ ಬೈಕ್ ನನ್ನ ಹತ್ತಿರ
ಇನ್ನು ಇದೆ, ಅದೇ ಬೈಕನ್ನು ನಾನು ಇವಾಗಲು ಬಳಸುವದು,  ಅದನ್ನು ಮಾತ್ರ ಯಾವುದೆ
ಕಾರಣಕ್ಕು ಛೇಂಜ್ ಮಾಡುವ ಹಾಗಿಲ್ಲ, ಅದು ನಿನಗೆ ಇಷ್ಟ ಆಗಲಿಲ್ಲ ಅಂದ್ರೆ, ಬೇರೆ
ಇನ್ನೊಂದು ಬೈಕ್ ತಗೊಳೊನಾ ಎರಡು ಇರಲಿ.

ನನಗಂತು ಹುಡುಗಿಯರ ಜೊತೆ ಪ್ಲರ್ಟ ಮಾಡೊಕೆ ಬರಲ್ಲ, infact ನನ್ನ ಪ್ರೆಂಡ್ಸ
ಹೇಳ್ತಾರೆ ನನಗೆ ಸರಿಯಾಗಿ ಹುಡುಗಿರ ಜೋತೆ ಮಾತಾಡೊಕೆ ಬರಲ್ಲ ಅಂತಾ, ಆದರೆ ತುಂಭಾ
ಚನ್ನಾಗಿ ಅಲ್ಲದೆ ಇದ್ರು ಓದುವವರಿಗೆ ಬೋರ್ ಆಗದ ಹಾಗೆ ಕವಿತೆ ಬರಿತಿನಿ, So ನೀನು
ನನ್ನ ಮುಂದೆ ಸಿರಿ ಉಟ್ಟು ಬಂದಾಗಲೆಲ್ಲಾ ನಿನ್ನ ಬಗ್ಗೆ ಒಂದೊಂದು ಕವಿತೆ ಬರಿಬಲ್ಲೆ
ಮತ್ತು ಆ ಕವಿತೆ ತುಂಭಾ ನಿನೆ ಇರ್ತಿಯಾ ಬರಿ ನೀನೆ.. ಇನ್ನು ನೀನು ಹೀಗೆ ಇರಬೇಕೊ
ಹಾಗೆ ಇರಬೇಕೊ ಅಂತಾ ಯಾವುದೆ ಕಂಡಿಷನ್ಸ್ ಇಲ್ಲಾ, ನನ್ನ ಡ್ರೆಸೆ ಸೆನ್ಸ ತುಂಭಾ
ಕೆಟ್ಟದಾಗಿದೆ, ಶಾಪಿಂಗ್ ಮಾಡೊವಾಗ ನೀನ್ನ ಹೆಲ್ಪ ಬೇಕೆ ಬೇಕು ನನಗೆ...

ನಾನು ಸ್ವಲ್ಪಾ ಜಾಸ್ತಿಯೇ ಪೊಸೆಸಿವ್ , ಮತ್ತು ಮುಗಿನ ಮೇಲೆಯೆ ಕೋಪ ನನಗೆ,
ಕೋಪಬಂದ್ರೆ ಜಪ್ಪಯ್ಯ ಅಂದ್ರು ಮಾತಾಡಲ್ಲ ಪುಲ್ ಮೌನಿ ಆಗ್ತಿನಿ, ಆವಾಗ ನೀ ಸುಮ್ಮನ್ನೆ
ಒಂದು ಸಲ Sorry ಕೇಳು ಕರಗಿ ಹೋಗ್ತಿನಿ, ಇದೊಂದು ವಿಷಯ ಬೀಟ್ಟು ಬೇರೆ ಯಾವುದೆ
ವಿಷಯದಲ್ಲು ನೀನು ಅಡ್ಜಷ್ಟು ಆಗೊದು ಬೇಡ, ಎಲ್ಲ ವಿಷಯದಲ್ಲು ನಾನೆ ಅಡ್ಜಷ್ಟು
ಮಾಡ್ಕೊತಿನಿ, ನಾನೇನು ತುಂಭಾ ಸಾಚಾ ಅಲ್ಲ, ನನಗು ಕೇಲವು ಕೇಟ್ಟು ಅಭ್ಯಾಸಗಳು ಊಂಟು,
ಎಲ್ಲ ಇವಾಗಲೆ ಹೇಳಿಬಿಟ್ರೆ ಮುಂದೆ ಲೈಪ್ ನಲ್ಲಿ ಕುತುಹಲಾ ಅನ್ನೊದೆ ಇರಲ್ಲಾ
ಅಲ್ವಾ...
ನನ್ನ ಜಾಸ್ತಿ ಕಾಯಿಸಬೇಡ, ನೀನ್ನ ಇಷ್ಟ, ಕಷ್ಟ, ಕನಸು ಎಲ್ಲ ತಿಳಿಯೊ ಕಾತುರ ನನಗೆ...
 ಬೇಗ ಸಿಗ್ತಿಯಾ ಅಲ್ವ?

ಪ್ರಶು
( call me Prashu)

Wednesday, July 1, 2015

ಅನಾಮಿಕ...

        ಶನಿವಾರ ಆಫೀಸಿಗೆ ರಜೆ, ವಾರದ ೫ ದಿನಾ ಬೆಳಗ್ಗೆ ಎಂದು ಆಫೀಸ್ ಗೆ ರೆಡಿಯಾಗಿ ಹೋಗುವದರಲ್ಲಿ ಕಳೆದು ಹೊಗುತ್ತೆ ಊಳಿದಿರುವ ಎರಡು ದಿನ ಆದರು ಆರೋಗ್ಯದ ಕಡೆ ಗಮನ ಇರಲಿ ಅಂತ ಬೆಳಗ್ಗೆ ಬೇಗ ಎದ್ದು ಸ್ವಲ್ಪ ದೂರ ಆದರು ಪರ್ವಾಗಿಲ್ಲ ಅಂತ ಲಾಲ್ ಬಾಗ್ ಗೆ ಕಳೆದ ಒಂದು ತಿಂಗಳಿಂದ ವಾಕ್ ಹೋಗ್ತಾ ಇದ್ದೆ, ಅವತ್ತು ಕೂಡ ವಾಕ್ ಮಾಡೊಕೆ ಅಂತಾ ಬಂದಿದ್ದೆ, ವಯಸ್ಸು ಆದವರು, ವಯಸ್ಸು ಆಗದೆ ಇರುವವರುಹುಡುಗರು,ಹುಡಿಗಿಯರು ಮತ್ತು ಅವರ ನಾಯಿಗಳು ಹೀಗೆ ನಾನಾ ತರದ ಜನ ತಮ್ಮ ಪಾಡಿಗೆ ತಾವು ನೆಡೆಯುತ್ತಾ, ನುಲಿಯುತ್ತಾ, ನಗುತ್ತಾ ಸಾಗಿದ್ದರು, ಲಾಲ್ ಬಾಗ್ ಅಂದ್ರೆ ಕೇಳಬೇಕಾ? ಬಣ್ಣ-ಬಣ್ಣದ ಚಿಟ್ಟಿಗಳು ಆ ಚೀಟ್ಟೆಗಳನ್ನು ನೋಡಲೆಂದೆ ಬರವ ಯುವಕರು..

 ಅವತ್ತು ಅಷ್ಟೆ ನನ್ನ ಮುಂದೆ ನಾಲ್ಕು ಬಣ್ಣ-ಬಣ್ಣದ ಚಿಟ್ಟೆಗಳು(ಹುಡಗಿಯರು) ಹೋಗ್ತಾ ಇದ್ದವು, ಪರಬಾಷೆ ಚಿಟ್ಟೆಗಳು, ಯಾರಾದರು ಒಬ್ಬರಾದರು ತಿರಿಗಿ ನೋಡಲಿ ಅಂತಾ
                   ರಾಜಾ ಕೊ ರಣಿ ಸೇ ಪ್ಯಾರ್ ಹೋಗಯಾ ,
                   ಪೇಹಲಿ ನಜರ ಮೈ ಪೇಹಲಾ...
 ಹಾಡುತ್ತಾ ಇದ್ದೆ ಹುಡಗಿರು ಯಾರು ತಿರಗಿ ನೋಡಲಿಲ್ಲ ಆದರ್ರೆ ದಾರಿ ಪಕ್ಕದ ಬೇಂಚಿನಲ್ಲಿ ಕುಳಿತಿದ್ದ ತಾತ ಒಬ್ರು ನನ್ನ ಹಾಡು ಕೇಳಿ ಬಾರೊ ಇಲ್ಲಿ ಅಂತಾ ಕರೆದರು, ಒಂದು ಕ್ಷಣ ನಿಂತು ಅವರ ಮುಖಾ ನೋಡಿದೆ, ಈ ಕಡೆಯಿಂದ ನೋಡ್ರಿದೆ ದೇವೆಗೌಡ್ರ ತರಾನೆ ಕಾಣ್ತಾರೆ ಅವರಿಗಿತ್ತ ಸ್ವಲ್ಪ ಕಲರ್ ಇದ್ದಾರೆ, ನನ್ನ ಏನಕ್ಕೆ ಕರದರು? ಬೈತಾರಾ? ಹೊಗಲಾ? ಬೇಡ್ವಾ?... ಬೈದ್ರೆ ಬೈಲಿ ನೋಡೊಣಾ ಅಂತಾ ಹತ್ತಿರ ಹೋದೆ, ಮುಂದೆ ಹೋಗ್ತಾ ಇದ್ದ ನಾಲ್ಕು ಹುಡಗಿಯರ ಕಡೆಗೆ ಕೈ ತೋರಿಸುತ್ತಾ ಅದರಲ್ಲಿ ಯಾವ ಹುಡಗಿಗಾಗಿ ಹಾಡಿದೆ ಹೇಳು ಅಂದರು.

ನಾನು ಯಾಕ್ ತಾತಾ ಅದರಲ್ಲಿ ಏನದ್ರು ನಿಮ್ಮ ಮೊಮ್ಮಗಳು ಇದ್ದಾಳಾ ಅಂದೆ,
ತಾತಾ ವಜ್ರಮುನಿ ಲುಕ್ ನಲ್ಲಿ ಕೇಳಿದಕ್ಕೆ ಉತ್ತರ ಕೊಡು ಅಂದರು, ನಾನು ಅಯ್ಯೊ ಸುಮ್ನೆ ಕಾಳು ಹಾಕಿದೆ ತಾತ ಯಾರಾದರು ಒಬ್ಬ ಹುಡಗಿ ಆದರು ತಿರುಗಿ ನೋಡ್ತಾಳೆನೊ ಅಂತಾ ಆದರೆ ಯಾರು ನೋಡಲಿಲ್ಲ ಕಾಲ ಕೆಟ್ಟು ಹೋಯಿತು ತಾತ ಹುಡಗರಿಗೆ ಬೆಲೆನೆ ಇಲ್ಲಾ ಅಂದೆ...
ಸ್ಚಲ್ಪ ಹೋತ್ತು ನನ್ನ ಮುಖ ನೋಡಿದ ತಾತ ನಂತರ  ಮೌನಕ್ಕೆ ಶರಣಾದರು, ನಾನು ಮುಂದೆ ಹೋಗಲು ಮನಸ್ಸು ಬಾರದೆ ಅಲ್ಲಿ ನಿಲ್ಲಲ್ಲು ಆಗದೆ ಚಡಪಡಿಸುತಿದ್ದೆ,
ಅವರ ಮುಖ ನೋಡಿದರೆ ಮನೆಯಲ್ಲಿ ಮಗ ಅಥವಾ ಸೋಸೆ ಜೋತೆಗೆ ಜಗಳ ಮಾಡಿ ಬಂದ ರಿತಿ ಇತ್ತು ಸರಿ ಅವರ ಮುಖದಲ್ಲಿ ಸ್ವಲ್ಪ ನಗು ಮುಡಿಸೋಣ ಅಂತಾ ಹತ್ತಿರ ಹೋಗಿ ಕುಳಿತು
ತಾತಾ ನಿಮ್ಮ ಕಾಲದ ಹುಡಗಿಯರು ಹೀಗೆ ಇದ್ರಾ ಪುಲ್ ಆಪ್ ಅಟಿಟ್ಯೂಡ್?
ಅದಕ್ಕೆ ಅವರು ನಮ್ಮ ಕಾಲದ ಹುಡಗಿಯರು ಮತ್ತು ಆವಾಗಿನ ಬೆಂಗಳುರೂ ಎರಡು ತುಂಬಾ ಬೇರೆನೆ ಇದ್ರು ಅಂದ್ರು,
ನಾನು ಹುಡಿಗಿರನ್ನು ಬಿಟ್ಟಾಹಾಕಿ ನಿಮ್ಮ ಕಾಲದ ಬೆಂಗಳುರೂ ಹೇಗಿತ್ತು ಅಂದೆ.
ಅದಕೆ ತಾತ ನಮ್ಮ ಕಾಲದಲ್ಲಿ ಇದ್ದ ಬೆಂಗಳೂರು ಬೇರೆ ಈಗಿನ ಬ್ಯಾಂಗಲುರ್ ಬೇರೆ ಅಂದು ಒಂದು ಕ್ಷಣ ಮೌನವಾಗಿ ನಂತರ
         "ನಮ್ಮ ಕಾಲದ ಬೆಂಗಳೂರು  ಭುಮಿ ಮೇಲಿನ ಸ್ವಗ೯ವಾಗಿತ್ತು, ಎಲ್ಲಿ ನೋಡಿದರು ಹಸಿರು, ಬ್ರಿಟಿಷರ ಕಾಲದ ಬಂಗಲೆಗಳು, ಅಲ್ಲೂಂದು ಇಲ್ಲೂಂದು ಕಾರುಗಳು, ಆಗಿನ ಜನ ತುಂಭಾ ಸುಸ್ಕ್ರಂತರಾಗಿದ್ದರು, ಬಿಳಿ ಪಂಚೆ(ಕಚ್ಚಿ ಪಂಜೆ) ಕಪ್ಪು ಕೋಟು ಸ್ವಲ್ಪ ಶ್ರಿಮಂತರು ಮೈಸುರು ಪೇಟವನ್ನು ಹಾಕಿ, ಕೈಯಲ್ಲಿ ಒಂದು ಬ್ಯಾಗ್ ಹಿಡಿದು ಆಫೀಸ್ ಗೆ ಹೊಗುತಿದ್ದರು, ಆ ಬ್ಯಾಗ್ ನಲ್ಲಿ ಒಂದು ಟೀಫಿನ್ ಬಾಕ್ಸ ಇರುತಿತ್ತು ಅದರಲ್ಲಿ ಇಡ್ಲಿ, ದೋಸೆ ಅಥವಾ ಉಪಿಟ್ಟು ಇರುತಿತ್ತು, ಸಂಜೆ ಮರಳಿ ಮನೆಗೆ ಬರುವಾಗ ಅದೆ ಡಬ್ಬದಲ್ಲಿ ಹೆಂಡತಿಗಾಗಿ ಮಲ್ಲಿಗೆ ಹೂ ಮತ್ತು ಬಾದಾಮಿ ಹಲ್ವಾ ತರುತಿದ್ದರು.

          ಆಗ   ಬೆಂಗಳುರಿನಲ್ಲಿ ಇದಿದ್ದು ಬರೆ ಎರಡೆ ಕಾಲ ಒಂದು ಮಳೆಗಾಲ ಇನ್ನೊಂದು ಚಳಿಗಾಲ, ಆವತ್ತಿನ ಬೆಂಗಳುರಿಗೆ ಬೇಸಿಗೆ ಅಂದ್ರೆ ಏನು ಅಂತಾನೆ ತಿಳಿದಿರಲಿಲ್ಲ, ಚಳಿಗಾಲದಲ್ಲಿ ಅಧ೯ ತೋಳಿನ ಸ್ವೆಟರ್ ಮಳೆಗಾಲದಲ್ಲಿ ಪುಲ್ ತೋಳಿನ ಸ್ವೆಟರ್ ಹಾಕಿ ಉದ್ದನೆ ಚತ್ರಿ ಹಿಡಿದು ಜನ ಆಚೆ ಬರುತ್ತಾ ಇಂದ್ರು, ಮಳೆ ಬಂದ್ರೆ ಚತ್ರಿ ತಲೆ ಮೇಲೆ ಇಲ್ಲ ಅದ್ರೆ ಊರು ಗೋಲಾಗಿ ಅಥವಾ ಬೀದಿ ನಾಯಿ ಓಡಿಸಲು ಬಳಸ್ತಾ ಇದ್ರು, ಬಿ ಎಮ್ ಟಿ ಸಿ ಆಗ ಬಿ ಟಿ ಎಸ್ ಆಗಿತ್ತು. ಕೆಲವರು ಪ್ರೀತಿಯಿಂದ "ಬೆಪ್ಪ ತಕ್ಕಡಿ ಸವಿ೯ಸ್" ಅಂತಾ ಇನ್ನು ಕೆಲವರು "ಬಿಟ್ರೆ ತಿರುಗಿ ಸಿಗಲ್ಲಾ" ಅಂತಾ ತಮಾಶೆ ಮಡ್ತಾ ಇದ್ರು, ಸಾಕ್ಷಾತ್ತ ರಜನಿಕಾಂತ್ ಬಿ ಟಿ ಎಸ್  ನಲ್ಲಿ ಕಂಡೆಕ್ಟರ್ ಆಗಿದ್ರು ಅಂದ್ರೆ ನೋಡು ಆಗಿನ ಬೆಂಗಳುರು ಹೇಗಿತ್ತು ಅಂತಾ...


                                                                      will be continued 








Sunday, June 28, 2015

ಮತ್ತೆ ಮುಂಗಾರು...


ಮುಂಗಾರು The Most romantic seasons  ಮತ್ತೆ ಬಂದಿದೆ, ಮಡಿಚಿಟ್ಟಿದ್ದ ದಪ್ಪ ಹೊದಿಕೆಗಳ ಹೊರ ತೆಗೆಯುವ ಸಮಯ, Hot cup of coffee in open balcony as you trace the rain drop slides down your windows glass pane
ಒಂದು ಲೈನ್ ಸಾಕು ಮುಖದಲ್ಲಿ ಮುಗುಳುನಗೆ ಮುಡಲು.              

ನನಗಂತು ಮಳೆ ಅಂದ್ರೆ ನನ್ನ ಬೇಸ್ಟ ಗೆಳಯನಂತೆ, ನನ್ನ  Office computer ಮುಂದೆ ಕುಳಿತು ಆಚೆ ಬರುವ ಮಳೆಯ ಪ್ರಮಾಣ ಹೇಳಬಲ್ಲೆ, ಮಳೆ ಹನಿಗಳ ಚಟ-ಫಟ ಶಬ್ದಕಿಂತ ಮದುರ ಸಂಗೀತ ಇನ್ನೊಂದಿಲ್ಲ, ಬೇರೆಯವರಿಗೆ weekend ಮಳೆ ಒಂದು ತರದ ಶಿಕ್ಷೆಯಾದರೆ ನನಗಂತು ಸಂಬ್ರಮದ ದಿನವದು, ಸುರಿಯುವ ಮಳೆಯಲಿ ಚತ್ರಿ ಹಿಡಿದು ಅರೆಬರೆ ನೆನೆಯುತಾ ಹೋಗಿ ರಸ್ತೆ ಬದಿಯ ಗೂಡ ಅಂಗಡಿಯಲ್ಲಿ ಬಿಸಿ ಬಿಸಿ ಬಜ್ಜಿ ತಿನ್ನುತ ಚಹಾ ಕೂಡಿವುದರಲ್ಲಿಯೆ ಸ್ವಗ೯ ಕಾಣುವ ಪರಮ ಸುಖಿ ನಾ...

ರೂಮಿನ ಕಿಡಕಿಯಿಂದ ಸುರಿಯುವ ಮಳೆ ನೊಡುತ, ಅದರ ಛಟ-ಫಟ ಸದ್ದು ಕೇಳುತ ಬೆಚ್ಹನೆ ಹೊದಿಕೆ ಹೊದ್ದು ಮಲಗುವುದರಲ್ಲಿ ಸ್ವರ್ಗ ಸುಖ, ಬೆಳ್ಳಗ್ಗೆ ೧೦ ಆದರು ಆಗಸದಲ್ಲಿ ಸೂರ್ಯನ ಫ಼ೋಣ೯ ದಶ೯ನವಿಲ್ಲ, ಆಗಸದಲ್ಲಿ ಬರಿ ಕಪ್ಪು ಮೋಡಗಳ ಜಾತ್ರೆ, ಕಪ್ಪು ಮೋಡಗಳ ಮೋಡಿಸುವ ಚಿತ್ತಾರಗಳು ರವಿವಮ೯ನ ಕುಂಚದಲ್ಲಿ ಅರಳಿದ ಕಲೆಗಿಂತ ಕಡಿಮೆಯೇನಲ್ಲ.
ನನಗಂತು ಮಳೆಸುರಿಯುವಾಗ ಆಫ಼ೀಸಿನಲ್ಲಿ ಕುಳಿತು ಕೆಲಸ ಮಾಡುವದು ಅಸಾಧ್ಯದ ಮತು, ಮಳೆ ಆರಂಬ ಆರಂಭವಾದಡೆನೆ ಬಿಸಿ ಬಿಸಿ ಕಾಫಿಯೊಂದಿಗೆ ಬಾಲ್ಕಾನಿಯಲ್ಲಿ ಮಳೆನೋಡುತ ಮೈ ಮರೆತರೆ ಮಳೆ ನಿಲ್ಲುವವರೆಗು ನಾನು ಅಲ್ಲೆ.


ಮೊದಲ ಮಳೆ ಮಣ್ಣಿನೊಂದಿಗೆ ಬೆರತಾಗ ಹೊಮ್ಮುವ ಪರಿಮಳ ಆಸ್ವಾದಿಸಿದವನೆ ಬಲ್ಲ That smell is the best perfume ever & I wish I could wear that
ಇನ್ನು ಮಳೆಗು ಹಾಡಿಗು ಅವಿನಾಭಾವ ಸಂಬಂಧ, ಮನದಲ್ಲಿ ಬೇಡ ಬೇಡವೆಂದರು ಇಣುಕುವ ಹಾಡುಗಳು ಮತ್ತೆ ಮಳೆಗಾಲ ಆರಂಭ, ವಷ೯ದ ೧೨ ತಿಂಗಳು ಮಳೆ ಬಂದ್ರೆ ಏಷ್ಟು ಚಂದ ಅಲ್ವಾ?

ಮಳೆಯಲಿ ಜೋತೆಯಲಿ... ಮತ್ತೆ ಮಳೆಗಾಳ ಬಂದಿದೆ ನೆಗಡಿ, ಶೀತವೆಂಬ ಭಯ ಬಿಟ್ಟು enjoy the rain..
Walk in rain…
Dance in Rain…
Sing in rain….

ಖುಷಿ ಖುಷಿಯಿಂದ ಸ್ವಾಗತಿಸಿ.....


Wednesday, January 21, 2015

ನೆಮ್ಮದಿ...



ಅವಳು
ಇವಳು
ಬರಿ ವಂಚಕಿಯರು...

ಅವನು
ಇವನು
ಬರಿ ಸಮಯ ಸಾಧಕರು...

ನಿನ್ನೆ
ಮೊನ್ನೆ
ಮುಗಿದು ಹೋದ ಕಥೆ...


ನಾಳೆ
ನಾಡಿದ್ದು
ತಿಳಿಯದ ಕಥೆ...

ಬಂದು
ಬಳಗ
ಸಕ್ಕರೆಗೆ ಮುತ್ತಿದ ಇರುವೆ..

ಅಂತೆ
ಕಂತೆ
ಬರಿ ಸುಳ್ಳಿನ ಸಂತೆ...

ಆ ಊರು
ಈ ಊರು
ಮನಸ್ಸಿಗಿಲ್ಲ ನೆಮ್ಮದಿ...

Monday, July 8, 2013

ಪುಣೆ ಎಂಬ ಮಳೆಗಾಲದ ಸುಂದರಿ

ನಾನು ಪುಣೆಗೆ ಬಂದು ಸುಮಾರು ೮ ತಿಂಗಳುಗಳಾದವು, ನಾನು ಮೊದಲ ಸಲ ಪುಣೆಗೆ ಬಂದಿದ್ದು ೨೦೦೭ರಲ್ಲಿ, ನಂತರ ಅನೇಕ ಸಲ ಇಲ್ಲಿಗೆ ಬಂದರು ಇದಿದ್ದು ಮಾತ್ರ ಒಂದು ಏರಡು ದಿನ ಮಾತ್ರ, ಕಳೆದ ವಷ೯ದ ಕೊನೆಯಲ್ಲಿ ನನಗೆ ಇಲ್ಲೆಯೆ ಕೆಲಸ ಸಿಕ್ಕಿದ ನಂತರ ನಾನು  ಇಲ್ಲೆ ಇರುವುದು ಅನಿವಾಯ೯ವಾಯಿತು.


ಪ್ರತಿ ವಿಷಯದಲ್ಲು ಪುಣೆಯನ್ನು ಬೆಂಗಳೂರಿನೊಂದಿಗೆ ಹೊಲಿಸುತ್ತಾ ಪುಣೆಯನ್ನು ಸದಾ ಜರಿಯುತಿದ್ದೆ ಇದಕ್ಕೆ ನನಗೆ ಬೆಂಗಳೂರಿನ ಮೇಲೆ ಇದ್ದ ವಿಷೇಶ ಪ್ರೀತಿಯು ಕಾರಣವಿರಬಹುದು, ಇಲ್ಲಿನ ಬಾಗಿಲು-ಕಿಡಕಿಗಳಿಲ್ಲದ ಸಿಟಿ ಬಸ್ ಗಳನ್ನು, ಟ್ರಾಪಿಕ್ ಸಿಗ್ನಲ್ ನ್ನು ಕೇರ್ ಮಾಡದ ಜನರನ್ನು ಮತ್ತು ಅದನ್ನು ನೋಡಿದರು ಏನು ಮಾಡದೆ ಸುಮ್ಮನ್ನೆ ಇರುವ ಪೋಲಿಸರನ್ನು, ಇಲ್ಲಿಯ ವಡ-ಪಾವ, ಪೋವೆಯ ಜೋತೆ ಚಪಾತಿಯನ್ನು, ಬೇಸಿಗೆಯ ಸುಡುಬಿಸಿಲನ್ನು, ಚಳಿಗಾಲದ ಮೈ ಕೊರೆಯುವ ಚಳಿಯನ್ನು, ಅಥ೯ವಾಗದ ಮರಾಠಿ ಚಿತ್ರಗಳನ್ನು, ಗುರುವಾರದ ಕಿಚಡಿಯನ್ನು ಹೀಗೆ ಪ್ರತಿ ವಿಷಯದಲ್ಲೂ ಪುಣೆಯನ್ನು ಹೀಯಾಳಿಸುತ್ತಿದ್ದ ನಾನು, ಕೇವಲ ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆಯುವುದರಲ್ಲಿ ಪುಣೆಯ ಅದ್ಬುತವಾದ ಪ್ರಕ್ರುತಿ ಸೌಂಧಯ೯ಕ್ಕೆ ಸೋತು ಹೋಗಿರುವೆನು, ಫುಣೆ ಎಂಬ ಮಳೆಗಾಲದ ಸುಂದರಿಯ ಮೇಲೆ ನನಗೆ ಮೊದಲ ಸಲ ಪ್ರೀತಿ ಮೂಡಿದೆ.



ಪುಣೆಯ ವಿಷೇಶತೆಯೆಂದರೆ ಇದನ್ನು ಆವರಿಸಿರುವ ಬೇಟ್ಟಗಳ ಸಾಲುಗಳು, ಮಳೆಗಾಲದ ದಿನಗಳಂದು ಹಚ್ಹ-ಹಸಿರಿನ ಉಡುಪಿನಿಂದ ಈ ಬೇಟ್ಟಗಳು ಕಂಗಳಿಸುತ್ತವೆ, ಪ್ರತಿ ಮುಂಜಾನೆ ಬೇಟ್ಟಗಳಿಗೆ ಸಾನ್ನಮಾಡಿಸಲೆಂದೆ ಬರುವ ಮುಂಜಾನೆಯ ಮಳೆ, ಕೈ ಚಾಚಿದರೆ ಸಿಗುವಷ್ಟು ಕೆಳಗೆ ಬೇಟ್ಟಗಳಿಗೆ ಮುತ್ತಿಕಲು ದರಿಗಿಳುದು ಬರುವ ಸಾಲು ಸಾಲು ಮೋಡಗಳು, ಜೋತೆಗೆ ಬಿಸುವ ತಣ್ಣನೆ ಗಾಳಿ, ಅಬ್ಬಾ ಪುಣೆಯ ಮಳೆಗಾಲದ ಮುಂಜಾವುಗಳನ್ನು ವಣಿ೯ಸಲು ಅಕ್ಷರಗಳೆ ಸಾಲವು, ಅದರ ಸೋಬಗು ನೋಡಿದವನೆ ಧನ್ಯ, ಶನಿವಾರವಾಡಾ, ಸಿಂಘಡ್, ಪಿರಾಗ ಗುಟ್ಟ್ ಘಾಟ್, ಲೋಣಾವಾಲಾ ಡ್ಯಾಮ್, ಖಂಡಾಲಾ ಘಾಟ್, ಕಾತ್ರಜ್ ಝೊ, ಪುಣೆ ಯುನಿವ೯ಸಿಟಿ ಎಂಬ ನಿಗುಡ ಕಾಡು.... ಪಟ್ಟಿ ಬೆಳೆಯುತ್ತಲೆ ಹೊಗುತ್ತದೆ.




ಇನ್ನು ಪುಣೆಯ ಮಳೆಗಾಲದ ಈ ಸಂಜೆಗಳೂ ಅಷ್ಟೆ, ಸುಯ೯ ಅಸ್ತನಾಗುತಿದ್ದಂತೆಯೆ ಮತ್ತೆ ಮಳೆಯು ಪ್ರತ್ಯಕ್ಷವಾಗುತ್ತದೆ, ಮನೆಗೆ ಹೊಗುವವರಿಗೆಲ್ಲ ವಿಧಾಯ ಹೇಳಲು ಬಂದಂತೆ, ಸಂಜೆಯ ಮಳೆಯ ಜೋತೆಗೆ ಬಿಸಿ ಬಿಸಿ ವಡಾ-ಪಾವ್ ಕೂಡ ಇಷ್ಟವಾಗತೋಡಗಿದೆ, ಇನ್ನು ನಗರದ ಮಧ್ಯದಲ್ಲಿ ಹರಿಯುವ ಎರಡು ನದಿಗಳು ನಗರದ ಸೌಂಧರ್ಯವನ್ನು ಇನ್ನೂ ಹೇಚ್ಹಿಸಿವೆ, ನಾಗರಹಾವಿನ ಹಾಗೆ ಹೊಳಪುಳ್ಳ ಮತ್ತು ಅಂಕು-ಡೊಂಕಾಗಿರುವ ಪುಣೆ-ಮುಂಬೈ ಎಕ್ಸಪ್ರೆಸ್ ವೇ ನಲ್ಲಿ ಘಂಟೆಗೆ ನೂರೈವತ್ತರ ವೇಗದಲ್ಲಿ ಪ್ರಯಾಣೆಸುವಾಗ ಸಿಗುವ ರೋಮಾಂಚನ ಅದ್ಬುತ,




                                                            ಬೆಂಗಳೂರು ಏಷ್ಟೆ ಆಧುನಿಕ, ಮುಂದುವರೆದ ನಗರವಾದರು ಅದು ಪುಣೆಯನ್ನು ಮೂರು ವಿಷಯಗಳಲ್ಲಿ ಮಾತ್ರ ಮಿರಿಸಲು ಸಾಧ್ಯವಿಲ್ಲ. ಮೂದಲನೆಯದು ಪ್ರಕ್ರುತಿ ಸೌಂಧರ್ಯ, ಎರಡನೆಯದು ಇಲ್ಲಿನ ಆಧುನಿಕ ಕಾರುಗಳನ್ನು, ಹೌದು ಬಹುಷ್ಯ ಭಾರತದಲ್ಲೆ ಅತಿ ಹೆಚ್ಹಿನ ಮಸಿ೯ಡಿಜ್, ಆಡಿ, ಬಿ ಎಮ್ ಡಬ್ಲೂ ಕಾರುಗಳು ಪುಣೆಯಲ್ಲಿ ಇವೆ, ಪುಣೆಯ ಗಲ್ಲಿ-ಗಲ್ಲಿಗಳಲ್ಲಿ ಈ ಕಾರುಗಳ ದಶ೯ನವಾಗುತ್ತದೆ, ಇನ್ನು ಮೂರನೆಯದು ಪುಣೆಯ ಹುಡಗಿಯರು... ಓ ದೇವರೆ ಪುಣೆ ಹುಡಿಗಿಯರ ಸೌಂಧರ್ಯಕ್ಕೆ ಪುಣೆ ಹುಡಿಗಿಯರೆ ಸಾಟಿ ಇದಕ್ಕಿಂತ ಹೆಚ್ಹಿನ ವಣ೯ನೆ ಅಸಾಧ್ಯ, ಹಮ್ ಏಷ್ಟೆ ಬೇಡವೆಂದರು ನಾನಂತು ’ಪುಣೆ’ ಎಂಬ ಮಳೆಗಾಲದ ಸುಂದರಿಗೆ ಮನಸೋತು ಹೋಗಿದ್ದೆನೆ

Tuesday, June 25, 2013

ಹೀಗೊಂದು ಕಲ್ಯಾಣ

ದೂರದೂರಿನ ಕಲ್ಯಾಣಮಂಟಪದಲ್ಲಿಂದು
ನನ್ನ ಪ್ರೀತಿಯ ಜೀವಕೆ ಕಲ್ಯಾಣವಂತೆ
ವರನಾರೊ ನಾನರಿಯೆ
ವರನಾಗುವ ಅದ್ರುಷ್ಠ ನನಗಿಲ್ಲ

ಸಖಿಯರೆಲ್ಲೆ ಶ್ರಂಗರಿಸುತಿರುವರಂತೆ ಅವಳ
ನಾನರಿಯನೆ ಅವಳ ಚಲುವ...?
ಅವಳ ಹಸ್ತದಿ ಗಾಢ ಮದರಂಗಿಯಂತೆ
ಅದರ ಅಡಿ ಹುದಗಿ ಹೋಗಿರಬಹುದೆ ನನ್ನ ಹೆಸರು...?

ಅವಳ ಕಣ್ಣಂಚಲ್ಲಿ ಸಣ್ಣ ನೀರ ಬಿಂದುಗಳಂತೆ
ಅಲ್ಲಿರುವರಿಗೆ ಅದು ಆನಂದ ಭಾಷ್ಪವಂತೆ
ನನಗ್ಯಾಕೊ ಅನುಮಾನ
ಆನಂದ ಭಾಷ್ಪವೊ...? ನನ್ನ ಅಗಲಿಕೆಯ ನೋವೊ...?

ಸಂಜೆಯಷ್ಟಕೆ ಕಲ್ಯಾಣಮಂಟಪ ಖಾಲಿ ಖಾಲಿಯಂತೆ
ವರನ ಜೋತೆ ಕಾರಿನಲ್ಲಿ ಇವಳ ಪ್ರಯಾಣವಂತೆ
ನಾಳೆ ಅದೆ ಕಲ್ಯಾಣಮಂಟಪದಲ್ಲಿ ಇನ್ನೊಂದು ಮದುವೆಯಂತೆ
ಮತ್ತೆ ಅದ್ಯಾರ ಕಣ್ಣಲ್ಲಿ ನೀರೊ...?  ಆನಂದ ಭಾಷ್ಪವೊ...?

Saturday, May 25, 2013

ನಾನು ಕವಿ

ಅಂದು ನಾನು ಬಾಲವಿಲ್ಲದ ಕಪಿ
ಇಂದು ನಾನು ಪ್ರಾಸವಿಲ್ಲದ ಕವಿ

ಕಪಿಗು ಕವಿಗು ಇಲ್ಲ ಅಂತರ
ಇಬ್ಬರದು ಒಂದೇ ತಂತರ

ಕಪಿಯ ಆತುರ ಕವಿಯಂತೆ
ಕವಿಯ ಕೌತುಕ ಕಪಿಯಂತೆ

ಕಪಿಗೆ ಕಂಡೆದೆಲ್ಲೆ ಹಿಡಿಯುವ ಆತುರ
ಕವಿಗೆ ಕಂಡೆದೆಲ್ಲೆ ಬರೆಯುವ ಕಾತುರ

ಕಪಿಗಳೆಲ್ಲ ಸೇರಿದರೆ ಕಪಿಚೇಷ್ಟಿ
ಕವಿಗಳೆಲ್ಲ ಸೇರಿದರೆ ಕವಿಗೋಷ್ಠಿ

ಕಪಿಗಳಿಗೆ ಮುಗಿಯದ ತುರಿತ
ಕವಿಗಳದು ಮುಗಿಯದ ಕೊರೆತ

ಬರೆದೆ ಕಪಿಗಳ ಮೇಲೆ ಕವಿತೆ
ಆದರು ಓದಲಿಲ್ಲ ಜನತೆ

ಒಂದಂತು ನಿಜ ನಾನ್ನಲ್ಲ ಕಪಿ
ನಾನು ಪ್ರಾಸವಿಲ್ಲದ ಕವಿ

Confused Commuter Chronicles

Every morning, like clockwork, I boarded the metro from Mysore Road station. It had become a ritual — not just a commute, but a quiet slice ...