Wednesday, September 24, 2025

Confused Commuter Chronicles

Every morning, like clockwork, I boarded the metro from Mysore Road station. It had become a ritual — not just a commute, but a quiet slice of time carved out for myself. I always chose the short train that ran between Mysore Road and Garudacharapalya. It wasn’t just about convenience; it was about comfort. These trains were less crowded, and more often than not, I’d find a seat — a small luxury in the chaos of city life.

The longer train, the one that ran all the way from Challaghatta to Whitefield, was a different beast altogether. Packed to the brim, it was a gamble I rarely took. My routine was simple: ride the short train to Garudacharapalya, then switch to the Whitefield-bound train for the final leg to ITPL.

But today was different.

I was in a hurry, hoping to reach the office early. As I stepped into the station, a Whitefield train was already waiting. Without a second thought, I hopped on. It was crowded, as expected, but luck was on my side — a seat opened up after a few stops. I settled in, phone in hand, scrolling through the news, music playing softly in my ears. The rhythm of the train, the hum of the city, and the comfort of routine lulled me into a quiet reverie.

Then came Garudacharapalya.

Almost on autopilot, I stood up, walked out of the train, and stepped onto the platform. It was only after the doors slid shut and the train began to pull away that it hit me — this wasn’t the short train. This was the Whitefield train. The one I was supposed to stay on.
I stood there, frozen, watching the train disappear into the distance, carrying my morning plans with it. A mix of disbelief and amusement washed over me. I couldn’t help but laugh at myself — standing there like a character in a silent comedy, outwitted by my own routine.

Sometimes, even the most familiar paths can surprise us.

 

Wednesday, July 25, 2018

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ ಉಂಟು, ಪ್ರಶ್ನೆ ಕೇಳಿದ ಎಲ್ಲರಿಗೂ ನಾನು ಇದೆ ಕಥೆ ಹೇಳುವದು. "ಒಂದು ಸಾರಿ ರಾಣಿ ಎಲಿಜಬೆತ್ ಲಂಡನ್ ನಿಂದ ಮದ್ರಾಸ್ ಗೆ ಹೋಗುತ್ತಿದ್ದರು, ಹಡಗಿನಲ್ಲಿ ಪ್ರಯಾಣ, ಇನ್ನೇನು ಮದ್ರಾಸ್ ಹತ್ತಿರ ಇದೆ ಅಂದಾಗ ಹಡಗು ಕೆಟ್ಟು ಹೋಯಿತು, so ಸಮೀಪದ ಬಂದರಿನಲ್ಲಿ ಹಡಗು ನಿಲ್ಲಿಸೋಣ ಅಂತಾ ಕ್ಯಾಪ್ಟನ್ ಮ್ಯಾಪ್ ನೋಡಿದಾಗ ಕಂಡಿದ್ದು ಕಾರವಾರ, ಕಾರವಾರದ ಬಂದರಿಗೆ ರಾಣಿ ಇದ್ದ ಹಡಗು ಬಂತು, ರಾಣಿ ಸ್ವಲ್ಪ ಅರ್ಜೆಂಟ್ ಕೆಲಸದ ನಿಮ್ಮಿತ್ತ ಬಂದಿದ್ದರಿಂದ ಹಡಗು ಸರಿಯಾಗುವ ತನಕ ಕಾಯುವುದಕ್ಕೆ ಆಗುವುದಿಲ್ಲವೆಂದು ಭೂ ಮಾರ್ಗವಾಗಿ ಮದ್ರಾಸಗೆ ಹೊರಟರು,
ಕಾರವಾರ ಯಲ್ಲಾಪುರ ಶಿರಸಿ ಹಾವೇರಿ ಮಾರ್ಗವಾಗಿ ನಮ್ಮ ಊರು ತಲುಪಿದಾಗ ರಾತ್ರಿ, ಇವತ್ತು ಇಲ್ಲೇ ಇದ್ದರಾಯಿತು ಎಂದು ನಿರ್ಧರಿಸಿದ ರಾಣಿ ನಮ್ಮ ಊರಿನ ಗೌಡಪ್ಪನ ಮನೆಗೆ ಹೋದಳು, ಗೌಡಪ್ಪ ಖುಷಿಯಿಂದ ರಾಣಿಯನ್ನು ಸ್ವಾಗತಿಸಿದ, ಅದು ಮಳೆಗಾಲ ದೋ ಎಂದು ಮಳೆ ಸುರಿಯುತ್ತಿತ್ತು, ಗೌಡಪ್ಪನ ಮನೆಯ ಒಂದು ಕಡೆ ಹಂಚು ಒಡೆದು ಸೋರುತಿತ್ತು, ರಾಣಿಗೆ ಗೌಡಪ್ಪ "ಬಿಸಿ ಬಿಸಿ ಜೋಳದ ರೊಟ್ಟಿ ಜೋತೆ ಮಣಿಸಿನಕಾಯಿ ಚಟ್ನಿ ಮಾಡಿಸೀನಿ ತಿನ್ನುವಂತೆ ಬಚ್ಚಲಿಗೆ ಹೋಗಿ ಕೈಕಾಲು ಮುಖ ತೋಳಕೊಂಡು ಬಾ" ಅಂದ, ಬಚ್ಚಲ ಕಡೆ ಹೋಗುತ್ತಿದ್ದ ರಾಣಿ ಸರಿಯಾಗಿ ನೋಡದೆ, ಮಳೆ ನೀರು ಸೋರುತಿದ್ದ ಕಡೆ ಹೋಗಿ ಆ ಹಸಿಯಾದ ನೆಲದ ಮೇಲೆ ಕಾಲು ಇಟ್ಟು ಜಾರಿ ಬಿದ್ದರು, ಬಿದ್ದ ರಭಸಕ್ಕೆ ರಾಣಿಯ ಬೆನ್ನ ಊನವಾಯಿತು, ಅಂದಿನಿಂದ ಭಾರತದ ಸಮಸ್ತ ಜನರೆಲ್ಲಾ ನಮ್ಮ ಊರಿಗೆ "ರಾಣಿ ಬೆನ್ನು ಊನವಾದ ಉರು" ಅಂತ ಕರೆಯಲು ಆರಂಭಿಸಿದರು ಕಾಲ ಕ್ರಮೇಣ ಅದು ರಾಣೇಬೆನ್ನೂರು ಎಂದಾಯಿತು.

Wednesday, July 18, 2018

'ಆದಿ'ಯ ಅಂತ್ಯವಿಲ್ಲದ ಕಥೆ

ಹುಳು ಹುಟ್ಟಿ ಸಾಯುತಿರೆ ನೆಲ ಸವೆದು ಕರಗುತಿರೆ ।
ಕಡಲೊಳೆತ್ತಲೋ ಹೊಸ ದ್ವೀಪವೇಳುವುದು ।।
ಕಳೆಯುತೊಂದಿರಲಿಲ್ಲಿ ಬೆಳೆವುದಿನ್ನೊಂದೆಲ್ಲೊ ।
ಅಳಿವಿಲ್ಲ ವಿಶ್ವಕ್ಕೆ ಮಂಕುತಿಮ್ಮ ।।

ಎಷ್ಟು ಅರ್ಥ ಪೂರ್ಣವಾಗಿದೆಯಲ್ಲ ಡಿವಿಜಿ ಯವರ ಈ ಕವನ ಪ್ರಶಾಂತ್, ಎಲ್ಲೋ ಒಂದು ಕಡೆ ಜೀವಿ ಸಾಯುತಿರೇ ಇನ್ನೆಲ್ಲೂ ಒಂದು ಜೀವಿ ಹುಟ್ಟುತಿರುತ್ತೆ, ಎಲ್ಲೂ ಒಂದು ಕಡೆ ಭೂಮಿ ಸಮುದ್ರದ ಆಳದಲ್ಲಿ ಮುಳಿಗಿದ್ರೆ ಇನ್ನೆಲ್ಲೋ ಒಂದು ಕಡೆ ಸಮುದ್ರದಿಂದ ನೆಲ ಆಚೆ ಬಂದಿರುತ್ತೆ, ನನ್ನ ಜೀವನದಲ್ಲೂ ಅಷ್ಟೇ ಒಂದು ಕಷ್ಟ ಮುಗಿತು ಅಂತ ನಿಟ್ಟುಸಿರು  ಬಿಡ್ತಾ ಇದ್ದಹಾಗೆ ಇನ್ನೊಂದು ಕಷ್ಟ ಎದುರು ನಿಂತಿರುತ್ತೇ.... ಆದಿ ಮಾತನಾಡುತ್ತಲೇ ಇದ್ದ ಕಾರ್ ನ ಎಫ್ ಎಮ ನಲ್ಲಿ ಮಹಮ್ಮದ್ ರಪಿಯ ಜಿನಾ ಎಹಾ ಮರನಾ ಎಹಾ, ಇಸಕೆ ಸಿವಾ ಜಾನಾ ಕಹಾ ಹಾಡು ಬರುತಿತ್ತು. ನಮ್ಮ ಕಾರ್ 40ರ ವೇಗದಲ್ಲಿ ಕೋಲಾರ ಕಡೆ ನಿಧಾನವಾಗಿ ಸಾಗಿತ್ತು, ಯಾಕೋ ಅಂದು ಆದಿ ಮಾತನಾಡುವ ಮೂಡ್ ನಲ್ಲಿ ಇದ್ದ.

ನೀನು ಯಾವಾಗಲೂ ಕೇಳ್ತಾ ಇದ್ದೆ  ನಾನು ಚೆನೈ ಬಿಟ್ಟು ಬೆಂಗಳೂರಿಗೆ ಯಾಕ್ ಬಂದೆ ಅಂತಾ, ನನಗೂ ಚೆನೈ ಬಿಡೋಕೆ ಇಷ್ಟಾ ಇರಲಿಲ್ಲ, ಎಷ್ಟೇ ಆದ್ರೂ ಅದು ನನ್ನ ಊರು ಅಲ್ವಾ ಬಟ್ ಅಲ್ಲಿ ಇರೋದು ತುಂಬಾ ಕಷ್ಟ ಆಗಿತ್ತು ನನಗೆ ಅಂದವ ಸುಮ್ಮನಾದ ಆದಿ.

ಯಾಕೆ ಅಂತ ಕೇಳಬೇಕು ಅನಿಸ್ತು ಆದರೆ ನಾನು ಮಾತಾಡಿದ್ರೆ ಅವನು ಮತ್ತೆ ಎಲ್ಲಿ ಮೌನಿ ಆಗ್ತನೋ ಅಂತಾ ಸುಮ್ಮನಿದ್ದೆ
ಕೆಲವು ಕ್ಷಣಗಳ ಬಳಿಕ ಮತ್ತೆ

ಆಗತಾನೆ ಎರಡನೇ ಅಣ್ಣನಿಗೆ ಮದುವೆ ಆಗಿತ್ತು, ಮನೆಗೆ ಅತ್ತಿಗೆ ಬಂದಿದ್ರು ತುಂಬಾ ಖುಷಿಯಾಗಿದ್ದೆ ಅತ್ತಿಗೆ ಅಂದ್ರೆ ತಾಯಿ ಇದ್ದ ಹಾಗೆ ತಾಯಿ ಅಷ್ಟು ಅಕ್ಕರೆ ಪ್ರೀತಿ ಸಿಗದೆ ಇದ್ದರು ಅದರ ಅರ್ಧ ಪ್ರೀತಿ ವಾತ್ಸಲ್ಯ ಸಿಕ್ಕರೆ ಸಾಕು ಅಂದು ಕೊಂಡಿದ್ದೆ ಆದರೆ ಕೆಲವೇ ದಿನಗಳಲ್ಲಿ ನನ್ನ ಆಸೆಗಳೆಲ್ಲ ನುಚ್ಚು ನೂರಾಗಿದ್ದವು, ಅತ್ತಿಗೆ ಯಾವತ್ತೂ ನನ್ನ ಜೊತೆ ಮಾತೆ ಆಡಲಿಲ್ಲ ನಾನಾಗೆ ಮಾತನಾಡಿಸಿದರೆ ಹಾ ಹೂ ನಲ್ಲೇ ಉತ್ತರ, ಅದಕ್ಕೆ ಅಣ್ಣನ ಸಾತ್ ಬೇರೆ ಅದುವರಿಗೂ ನಗುನಗುತ್ತಾ ಮಾತನಾಡುತ್ತಿದ್ದ ಅಣ್ಣನು ಅತ್ತಿಗೆಯನ್ನೇ ಹಿಂಬಾಲಿಸಿದ, ಪ್ರಶಾಂತ್ ಈ ಮೌನ ಎನ್ನುವುದು ಯಾವ ಮನುಷ್ಯನಾದರು ಅಭದ್ರನನ್ನಾಗಿ ಮಾಡುತ್ತದೆ ಅತೀವ ಹಿಂಸೆ ಕೊಡುತ್ತದೆ, ಅವರು ನನ್ನ ಜೊತೆ ಜಗಳ ಮಾಡಿದ್ದರೆ ಅಥವಾ ನನಗೆ ಬೈಯುತ್ತಾ ಇದಿದ್ದರೆ ಇಷ್ಟು ನೋವು ಆಗ್ತಾ ಇರಲಿಲ್ಲ ಆದರೆ ನನ್ನ ಜೊತೆಗೆ ಮತನಾಡುವುದನ್ನೇ ನಿಲ್ಲಿಸಿಬಿಟ್ಟಿದ್ದರು ಅದು ಕಾರಣವಿಲ್ಲದೆ. ಅಂದೆ ನಿರ್ಧರಿಸಿದ್ದೆ ಇನ್ನು ಈ ಮನೆಯಲ್ಲಿ ಇರಬಾರದು, ಬೇರೆ ಮನೆ ಮಾಡುತ್ತೇನೆ ಎಂದರೆ ದೂರದಲ್ಲಿರುವ ಅಪ್ಪ ಅಮ್ಮ ರಂಪ ಮಾಡುತ್ತಾರೆ, ಸುಮ್ಮನೆ ಯಾಕೆ ರಗಳೆ ಎಂದು ಚೆನೈ ಬಿಡುವ ನಿರ್ಧಾರ ಮಾಡಿದ್ದೆ.


ಕಾರಿನ ಮ್ಯೂಸಿಕ್ ಸಿಸ್ಟಮ್ ನಿಂದ ಸಣ್ಣಗೆ ಕೇಳಿ ಬರುತ್ತಿದ್ದ ಎಫ್ ಎಮ್ ನಲ್ಲಿ
"ಈಗ ಕೇಳಿ ಅಣ್ಣ ತಂಗಿ ಚಿತ್ರದ ಅಣ್ಣ ನಮ್ಮವನಾದರು ಅತ್ತೆಗೆ ನಮ್ಮವಳಾ ಹಾಡು ಬರುತ್ತಿರುವ ರಕ್ಷಾಬಂಧನ ಹಬ್ಬದ ವಿಶೇಷವಾಗಿ ನಿಮ್ಮ 92.7 ಬಿಗ್ ಎಫ್ ಎಮ್ ನಲ್ಲಿ ನಾನು ನಿಮ್ಮ Rapid Rashmi" 

ನಮ್ಮ ಕಾರ ಆಗಲೇ ಕೋಲಾರದ ಸಮೀಪದಲ್ಲಿತ್ತು

ಆದಿ ಟೀ?

ಬೇಡ ಪ್ರಶಾಂತ್ ಕೋಲಾರ ದಾಟಿದ ಮೇಲೆ ಕುಡಿಯೋಣ ಅಂದ ಆದಿ,
ಮತ್ತದೇ ಮೌನ.

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ

ಅವತ್ತು ತುಂಬಾ ಖುಷಿಯಾಗಿದ್ದೆ ಅಪ್ಪ ನನಗೆ ಹುಡುಗಿ ನೋಡಿದ್ದರು ಇನ್ಪ್ಯಾಕ್ಟ್ ನಾನು ಹೋಗಿದ್ದೆ, ಆ ಹುಡುಗಿ ಜೊತೆಗೆ ಮಾತಾಡಿದ್ದೆ ತುಂಬಾ ಮುದ್ದಾದ ಹುಡುಗೆ ನಂಗೆ ತುಂಬಾ ಇಷ್ಟಾ ಆಗಿದ್ದಳು, ಮನೆಗೆ ಬಂದ ಅಪ್ಪ ಇನ್ನೂ ಮೂರು ತಿಂಗಳಲ್ಲಿ ಅವಳಿಗೂ ನಿನಗೂ ಮದುವೆ ಅಂದಿದ್ರು, ಆಗ ಬೆಂಗಳೂರಿಗೆ ಬಂದು ಜಸ್ಟ್ 5 ತಿಂಗಳು ಆಗಿತ್ತು,
ಇನ್ನೆನ್ನೋ ಎಲ್ಲ ಕಷ್ಟಗಳು ಮುಗಿದವು ಅಂತ ಹಾಯಾಗಿದ್ದೆ,
ಆವತ್ತು ಶನಿವಾರ ಪ್ರಶಾಂತ್ ನನಗೆ ಚನ್ನಾಗಿ ನೆನಪಿದೆ ಅವತ್ತು ಲ್ಯಾಪ್ಟಾಪ್ನಲ್ಲಿ seethamma vakitlo sirimalle chettu ಮೂವಿ ನೋಡ್ತಾ ಇದ್ದೆ ಅದು ನನ್ನ ನೆಚ್ಚಿನ ಚಿತ್ರ ಅದರಲ್ಲಿ ಬರು ಪ್ರತಿ ಪಾತ್ರವೂ ನನಗೆ ಎಷ್ಟು ಇಷ್ಟಾ ಅಂದ್ರೆ ಆ ಚಿತ್ರನಾ ನಾನು ಎಷ್ಟು ಸಲಾ ನೋಡಿದ್ದೇನೋ ನನಗೆ ಗೊತ್ತಿಲ್ಲ, ಅವತ್ತು ನೋಡ್ತಾ ಇದ್ದೆ ಆಗ ಅಪ್ಪ ಪೋನ್ ಮಾಡಿದ್ದರು, ಆದಿ ನಿನ್ನ ಅಕೌಂಟ್ ನಲ್ಲಿ ಎಷ್ಟು ದುಡ್ಡು ಇಟ್ಟಿದ್ದಿಯಾ ಎಲ್ಲಾ ನನ್ನ ಅಕೌಂಟ್ ಗೆ ಟ್ರಾನ್ಸಪರ್ ಮಾಡು ಅಂದಿದ್ದರು, ಯಾವತ್ತೂ ಕೇಳದ ಅಪ್ಪ ಅಂದು ದುಡ್ಡು ಕೇಳಿದ್ದು ನೋಡಿ ಅಚ್ಚರಿ ಆಗಿತ್ತು, ಮರು ಮಾತಾಡದೆ ಹು ಅಂದಿದ್ದೆ ಮತ್ತು ಕಳಿಸಿದ್ದೆ. ಅದಾಗಿ ಒಂದು ತಿಂಗಳು ಆಗಿತ್ತು ಊರಿಗೆ ಹೋಗಿದ್ದೆ ನನ್ನ ಮೊದಲನೆ ಅಣ್ಣ ಕೂಡ ಬಂದಿದ್ದ. ಆಗಲೇ ಗೊತ್ತಾಗಿದ್ದು ನನಗೆ ಮೊದಲ ಅಣ್ಣ ಬೆಂಗಳೂರಿನಲ್ಲಿ ಫ್ಲಾಟ್ ತೆಗೆದುಕೊಂದಿದ್ದು, ಅದಕ್ಕೆ ಅಪ್ಪ ಕೊಡ 30 ಲಕ್ಷ ಕೊಟ್ಟಿದ್ದರು, ಅದರಲ್ಲಿ ನನ್ನ ಸೇವಿಂಗ್ ಕೂಡ ಇತ್ತು.
ನನ್ನ ಮದುವೆ ವಿಚಾರ ತಿಳಿದ ನನ್ನ ಮೊದಲ ಅಣ್ಣ ಮತ್ತು ಅತ್ತಿಗೆ ಎಲ್ಲಿ ಅಪ್ಪ ತನ್ನ ಉಳಿತಾಯದ ಹಣವನ್ನೆಲ್ಲಾ ನನ್ನ ಮದುವೆಗೆ ಖರ್ಚು ಮಾಡಿಬಿಡುತ್ತಾರೆನು ಎಂದು ಮೊದಲೇ ಪ್ಲಾನ್ ಮಾಡಿ ಮನೆಗೆ ಬಂದು ಹಠಮಾಡಿ ಅಪ್ಪ ಅಮ್ಮನನ್ನು ಒಪ್ಪಿಸಿ ಪ್ಲಾಟ್ ಬುಕ್ ಮಾಡಿದ್ದರು, ಅಸಹಾಯಕ ಅಮ್ಮ ನೆನ್ನದರು ಕಣ್ಣೀರು ಹಾಕಿದ್ದಳ್ಳು ಅಪ್ಪ ಮಾತ್ರ ನೆಪ ಮತ್ರಕ್ಕೆ ಆ ಹುಡುಗಿ ಮರೆತು ಬಿಡು ಇನ್ನೊಂದು ವರ್ಷ ಬಿಟ್ಟು ಅವಳಿಗಿಂತ ಚನ್ನಾಗಿರುವ ಹುಡುಗಿ ನೋಡುವ ಅಂದಿದ್ದರು, ನೆಪ ಮಾತ್ರಕ್ಕೂ ಯಾರು ನನ್ನ ಅಭಿಪ್ರಾಯ ಕೇಳಿರಲಿಲ್ಲ, ಪ್ರಶಾಂತ್ ಅಂದು ಜೀವನದಲ್ಲಿ ಎರಡನೇ ಸಲ ಸಂಭಂದಗಳನ್ನು ಅರ್ಥಮಾಡಿ ಕೊಳ್ಳುವುದರಲ್ಲಿ ನಾನು ಸೋತೆದ್ದೆ.

ಆದಿ ಮತ್ತೆ ಮೌನವಾಗಿದ್ದ ಆಗಲೇ ಕತ್ತಲು ಕವಿದಿತ್ತು, ಯಾಕೋ ಅವನ ಕಣ್ಣುಗಳಿಂದ ಕಣ್ಣೀರು ಉದುರುತ್ತಿರುವಂತೆ ಅನಿಸಿತು, ನನ್ನ ಕಣ್ಣುಗಳು ಮಂಜಗಿದ್ದವು,
ಆದಿ ಯಾಕೋ ಡ್ರೈವ್ ಮಾಡೋಕೆ ಆಗ್ತಾ ಇಲ್ಲ ಕಣೋ ಚೆನೈ ಇನ್ನು 220 km ಇದೆ ಅಷ್ಟು ದೂರ ನಂಗೆ ಡ್ರೈವ ಮಾಡೋ ಮೂಡ್ ಇಲ್ಲ ವಾಪ್ಪಸ್ ಬೆಂಗಳೂರು ಹೋಗುವ ಚೆನೈ ಟ್ರಿಪ್ ಮತ್ತೆ ಯಾವತ್ತಾದರೂ ಮಾಡೋಣ ಅಂದೆ.
ಅದಕ್ಕೆ ಆದಿಯು ತಲೆ ಆಡಿಸಿದ, ಮರು ಕ್ಷಣವೇ ಕಾರನ್ನು ಮರಳಿ ಬೆಂಗಳೂರಿನೆಡಗೆ ತಿರುಗಿಸಿದ್ದೆ.

ಬಾನೊಳಿರುವುದೆ ಪಕ್ಷಿ ಪಾರ್ವ ದಾರಿಯ ನಕ್ಷೆ ।
ಮೀನು ನೀರೊಳು ನುಸುಳೆ ಪಥನಿಯಮವಹುದೆ ।।
ಏನೊ ಜೀವವನೆಳೆವುದೇನೊ ನೂಕುವುದದನು ।
ನೀನೊಂದು ಗಾಳಿಪಟ ಮಂಕುತಿಮ್ಮ ।।

Saturday, April 28, 2018

ಬೆಂಗಳೂರು ಡೈರಿ


    ರಾಜಭವನ Road ಮೂಲಕ ನಾವು ಮೆಜೆಸ್ಟಿಕ್ ಕಡೆ ಹೋಗುವಾಗ ಬಸವೇಶ್ವರ ಸರ್ಕಲ್ ಬರುತ್ತೆ ಅಲ್ಲಿ ಸುಮಾರು 150 ಸೆಕೆಂಡ್ ಗಳ ಸಿಗ್ನಲ್ ಇದೆ, ನಾವು ಪ್ರತಿ ಸಂಜೆ ಅದೇ ರಸ್ತೆ ಮೂಲಕ ಮನೆಗೆ ಹೋಗುವುದು, ನಮ್ಮ ಕ್ಯಾಬ್ ಅಲ್ಲಿಗೆ ಸಂಜೆ 8.30 ರಿಂದ 8.40ರಷ್ಟಕ್ಕೆ ಬರುತ್ತೆ, ಅದೇ ರಸ್ತೆಯಲ್ಲಿ ವಿಧಾನಸೌಧ, ರಾಜಭವನ ಮತ್ತು ಕೆಲವು ದೊಡ್ಡ ಹೋಟೆಲ್ಗಳು ಇರುವುದರಿಂದ ರಾತ್ರಿ 10ರ ತನಕವು ಟ್ರಾಫಿಕ್ ಇರುತ್ತದೆ, ಬಸವೇಶ್ವರ ಸರ್ಕಲ್ ನ ಸಿಗ್ನಲ್ ದಾಟಲು ನಮ್ಮ ಕ್ಯಾಬ್ ಗೆ ಸುಮಾರು 2 ರಿಂದ 3 ನಿಮಿಷಗಳ ಸಮಯ ಬೇಕಾಗುತ್ತದೆ.
       ನಾನು ಹಲವು ದಿನಗಳಿಂದ ಗಮನಿಸಿದಂತೆ ಅಲ್ಲೊಂದು ಅಜ್ಜಿ ಸಿಗ್ನಲ್ ರೆಡ್ ಇದ್ದಾಗ cotton buds ಗಳ ಚಿಕ್ಕ ಚಿಕ್ಕ ಪ್ಯಾಕ್ ಗಳನ್ನು  ಹಿಡಿದುಕೊಂಡು ಬೈಕ್ ಸವಾರರು ಮತ್ತು ಕಾರುಗಳ ಹತ್ತಿರ ಹೋಗಿ ಮರುತ್ತಿದ್ದರು, ನಾನು ಗಮನಿಸಿದಂತೆ ಯಾರು ಅವುಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ, ಅದೊಂದು ದಿನ ನಮ್ಮ ಕ್ಯಾಬ್ ನ ಪಕ್ಕದಲ್ಲಿ ನಿಂತಿದ್ದ ಕಾರಿನ ಬಳಿ ಹೋದ ಅಜ್ಜಿ "ಬರಿ 15 ರೂಪಾಯಿ ಅಷ್ಟರಿ ತಗೊಳಿ" ಅನ್ನುತಿತ್ತು ಆ ಕಾರಿನ ಆಸಾಮಿ ಕಿಡಕಿಯ ಗ್ಲಾಸ್ ಕೂಡ ಇಳಿಸಲಿಲ್ಲ, ಆದರೂ ಹಠಬಿಡದ ಅಜ್ಜಿ ಹೋಗಲಿ 10 ರೂಪಾಯಿಗಾದ್ರು ತಗೊಳಿ ಎಂದು ಮತ್ತೆ ಕೇಳಿತು ಆದರೆ ಆ ವ್ಯಕ್ತಿಗೆ ಆ ಮಾತು ಕೇಳಿಸಲೇ ಇಲ್ಲ, ಯಾಕೋ ಆ ಅಜ್ಜಿ ಮುಖ ನೋಡಿ ಮನಸ್ಸಿಗೆ ತುಂಬಾ ಬೇಜರಾಯಿತು, ಹೋಗಲಿ ನಾನದರು ಕೊಳ್ಳವ ಎಂದು ಆ ಅಜ್ಜಿಯ ಕರೆದು " ಹೆಂಗಜ್ಜಿ ಒಂದು ಪ್ಯಾಕೇಟು" ಅಂದೆ ಅಜ್ಜಿ ಮುಖದಲ್ಲಿ ಯಾವುದೇ ಭಾವನೆಗಳು ಇಲ್ಲದೆ 30 ರೂಪಾಯಿ ಅಂದಿತು, ಆಗಲೇ ಸಿಗ್ನಲ್ ಹಸಿರು ಆಗಿತ್ತು ಕರೆದ ತಪ್ಪಿಗೆ 30 ರೂಪಾಯಿ ಕೊಟ್ಟು ಒಂದು ಪಾಕೆಟ್ cotton buds ಕೊಂಡೆ.
_____________________
        ಟ್ರಿಪ್ ಶೀಟ್ ನಲ್ಲಿ ಸಹಿ ಮಾಡಲು ಪೆನ್ ಹುಡುಕುತಿದ್ದೆ, ಕ್ಯಾಬ್ ನಲ್ಲಿ ಯಾರ ಬಳಿಯೂ ಪೆನ್ ಇರಲಿಲ್ಲ, ನಮ್ಮ ಕ್ಯಾಬ್ ಡ್ರೈವರ್ ಮುಂದೆ ಎಲ್ಲಾದರು ತಗೊಳೋನಾ ತಡ್ರಿ ಸರ್ ಎಂದು ಗಾಡಿ ಓಡಿಸುತ್ತಿದ್ದರು, ಅಲಸೂರ್ ಲೇಕ್ ಸಿಗ್ನಲ್ ಬಳಿ ಒಬ್ಬ ಬಾಲಕ ಪೆನ್ನುಗಳನ್ನು ಮಾರುತ್ತಿದ್ದ, ಅವನನ್ನು ಹತ್ತಿರ ಕರೆದ ನಮ್ಮ ಡ್ರೈವರ್ ಹೇಂಗೂ ಮರಿ ಪೆನ್ನು ಅಂದರು, ಅದಕ್ಕೆ ಆತ 10 ರೂಪಾಯಿ ಸಾರ್ ಅಂದ, ಸರಿ ಎಂದು 10ರ ಎರಡೂ ನೋಟು ಕೊಟ್ಟು ಎರಡು ಪೆನ್ನು ತೆಗೆದುಕೊಂಡರು, ಸಿಗ್ನಲ್ ಗ್ರೀನ್ ಆಗಿತ್ತು ಆಗಲೇ ಕ್ಯಾಬ್ ಹೊರಟಿತ್ತು, ಹಿಂದಿನಿಂದ ಸಾರ್ ಎಂದೂ ಕೂಗಿಕೊಂಡು ಓಡಿ ಬಂದ ಆ ಹುಡುಗ " ಸಾರ್ 1 ಪೆನ್ ತಗೊಂಡ್ರೆ 10 ರೂಪಾಯಿ, 2 ಪೆನ್ ತಗೊಂಡ್ರೆ 18 ರೂಪಿಯಿ ಅಷ್ಟೇ ಎಂದು ಎರಡು ರೂಪಾಯಿ ಮರಳಿಸಿ, ಕ್ಷಣಾರ್ಧದಲ್ಲಿ ಅಲ್ಲಿಂದ ಮಾಯವಾದ....

Thursday, April 26, 2018

ದೆವ್ವಗಳನ್ನು ಬೆನ್ನಟ್ಟಿ ಹೋದವನ ಕಥೆ

              ಆಗ ನಮ್ಮೂರಿನ ಪಕ್ಕದ ಹಳ್ಳಿಯ ಶಾಲೆಗೆ ಹೋಗುತ್ತಿದೆ ನನ್ನ ಜೊತೆ ಇನ್ನು ಅನೇಕ ಮಕ್ಕಳು ಬರುತ್ತಿದ್ದರು, ಸುಮಾರು 2 ಕಿಲೋಮೀಟರ್ ನೇಡದೆ ಹೋಗುತ್ತಿದ್ದೆವು, ಆ ಊರಿನ ರಸ್ತೆಯಲ್ಲಿ ಒಂದು ಹಾಳು ಬಾವಿಯೊಂದು ಇತ್ತು ಪಕ್ಕದಲ್ಲೇ ಒಂದು ದೈತ್ಯ ಹುಣಸೆಮರ, ಅಲ್ಲಿ ದೆವ್ವವಿದೆ ಎಂದು ನಾವೆಲ್ಲ ನಂಬಿದ್ದಿವು, ಆ ಸ್ಥಳ ಬಂದಾಗಲೆಲ್ಲ ನಮ್ಮ ಎದೆಯ ಬಡಿತ ಹೆಚ್ಚಾಗುತ್ತಿತ್ತು, ಆಗ ಎಲ್ಲಾ ನಾವು ದೆವ್ವಗಳ ಬಗ್ಗೆಯೇ ಮಾತಾಡುತ್ತಿದ್ದೆವು, ಕೊಳ್ಳಿದೆವ್ವ, ಗಾಳಿದೆವ್ವ, ಹೆಣ್ಣುದೆವ್ವ, ನಾಯಿ ದೆವ್ವ ಹೀಗೆ ಅನೇಕ ದೆವ್ವಗಳು ನಮ್ಮ ಮಾತಿನ ಮಧ್ಯ ಬರುತ್ತಿದ್ದವು, ಹಾಗೆಯೇ ನಮ್ಮೂರಿನಲ್ಲೇ ದೆವ್ವ ಮೈ ಮೇಲೆ ಬಂದದನ್ನು ನಾವು ಅನೇಕರು ಕಣ್ಣಾರೆ ನೋಡಿದ್ದೆವು, ಆಗ ದೆವ್ವಗಳೆಂದರೆ ವಿಪರೀತ ಭಯವಿತ್ತು ಆಗಲೇ ದೆವ್ವಗಳ ಬಗ್ಗೆ ವಿಚಿತ್ರ ಭಯಮಿಷಿತ್ರ ಕುತೂಹಲ ಮುಡಿತ್ತು.
                   ಹಳ್ಳಿಯ ಓದು ಮುಗಿಸಿ ಕಾಲೇಜಿಗೆ ಬೆಂಗಳೂರಿಗೆ ಕಾಲಿಟ್ಟ ಮೇಲು ದೆವ್ವಗಳ ಮೇಲಿನ ಕುತೂಹಲ ಕಡಿಮೆಯಾಗಿರಲಿಲ್ಲ, ಆದರೆ ಭಯ ಸ್ವಲ್ಪ ಕಡಿಮೆ ಆಗಿತ್ತು, ಪ್ರತಿ ಮದ್ಯಾಹ್ನ ನಾವು ಕ್ರಿಕೆಟ್ ಆಡಲು ಒಂದು ಚಿಕ್ಕ ಮೈದಾನಕ್ಕೆ ಹೋಗುತ್ತಿದ್ದೆವು ಅಲ್ಲಿ ಒಂದು ಹುಣಸಿಮರವಿತ್ತು, ಅದ್ಯಾಕೋ ಗೊತ್ತಿಲ್ಲ ಹುಣಸಿಮರವಿದ್ದಲ್ಲಿ ದೆವ್ವಗಳಿರುತ್ತವೆ ಎಂಬ ನಂಬಿಕೆ ನನ್ನಲ್ಲಿ ಆಳವಾಗಿ ಬೇರೂರಿತ್ತು, ಆ ಹುಣಸೆಮರದ ಸ್ವಲ್ಪ ಪಕ್ಕದಲ್ಲೇ ಒಂದು ಸ್ಮಶಾನ ಇತ್ತು, ಅದೇ ಕಾರಣಕ್ಕೆ ಅಲ್ಲಿ ಯಾರು ಆಟ ಆಡಲು ಬರುತ್ತಿರಲಿಲ್ಲ ಬಹುಷ್ಯ ನಾವೇ ಅಲ್ಲಿ ಮೊದಲು ಕ್ರಿಕೆಟ್ ಆಡಲು ಆರಂಭಿಸಿದ್ದು, ಮೊದಲೆಲ್ಲ ಸ್ವಲ್ಪ ಭಯ ವಿತ್ತು ಬರುಬರುತ್ತಾ ಅದು ಹೋಗಿ ದೆವ್ವಗಳ ಬಗ್ಗೆ ಕೇವಲ ಕುತೂಹಲ ಉಳಿದಿತ್ತು, ನಂತರ ಆ ಕುತೂಹಲ ದೆವ್ವವನ್ನೂ ಒಂದುಸಾರಿಯಾದರು ನೋಡಲೇ ಬೇಕು ಎಂಬ ಹಟವಾಗಿ ಬದಲಾಯಿತು, ಅದಕ್ಕೆ ನನ್ನ ಗೆಳೆಯರು ಸಾಥ ನೀಡಿದ್ದರು, ಅನೇಕ ರಾತ್ರಿ ನಾವು ಆ ಹುಣಸೆ ಮರದ ಬಳಿ ಹೋಗಿ ಬರುತ್ತಿದ್ದೆವು, ಆದರೆ ಎಂದು ನಮಗೆ ದೆವ್ವ ದರ್ಶನವಾಗಲಿಲ್ಲ, ಪರೀಕ್ಷಾ ಸಮಯದಲ್ಲೊಂತು ಆ ಹುಣುಸೆಮರದ ಸ್ಮಶಾನದ ಮೈದಾನ ನಮಗೆ ಓದಿನ ಚರ್ಚೆ ಮತ್ತು ಹಾಳು ಹರಟೆಯ ಸ್ಥಳವಾಗಿತ್ತು.
ಅದೇ ಸಮಯದಲ್ಲಿ ನನಗೆ ಪುಸ್ತಕ ಓದುವ ಅಭ್ಯಾಸ ಅಂಟಿತು, ಅದುವರೆಗೂ ಕೇವಲ ದೆವ್ವದ ಸಿನಿಮಾ ನೋಡುತ್ತಿದ್ದ ನಾನು ದೆವ್ವಗಳ ಬಗ್ಗೆ ಬಂದ ಪುಸ್ತಕಗಳನ್ನು ಓದಲು ಆರಂಭಿಸಿದೆ, ಆಗ ತಿಳಿದ ವಿಷಯವೆಂದರೆ ದೆವ್ವಗಳು ಕೇವಲ ಮನಷ್ಯ ಗಣದಲ್ಲಿ ಹುಟ್ಟಿದವರಿಗೆ ಮಾತ್ರ ಗೋಚರಿಸುತ್ತವೇ, ದೇವಗಣ ಮತ್ತು ರಾಕ್ಷಸಗಣದಲ್ಲಿ ಹುಟ್ಟಿದವರಿಗೆ ಅವು ಗೋಚರಿಸುದಿಲ್ಲವಂತೆ ಎಂಬ ಹೊಸದಾದ ವಿಷಯ ತಿಳಿಯಿತು ಬಹುಷ್ಯ ನಾವು ಮನುಷ್ಯಗಣದಲ್ಲಿ ಹುಟ್ಟಿಲ್ಲ ಹಾಗಾಗಿ ನಮಗೆ ಜನ್ಮದಲ್ಲಿ ದೇವ್ವ ದರ್ಶನ ಭಾಗ್ಯವಿಲ್ಲವೆಂದು ಸುಮ್ಮನಾದೆವು.

                ಇಂಜಿನಿಯರಿಂಗ್ ಮುಗಿದು ಕೆಲಸಕ್ಕೆ ಸೇರಿ ಕೆಲವು ವರ್ಷಗಳು ಉರಳಿದ್ದವವು, ದೆವ್ವಗಳನ್ನೂ ಮರೆತಾಗಿತ್ತು, ಮೊದಲ ಸಲ ಅಮೆರಿಕಾಕ್ಕೆ ಹೋಗಿದ್ದೆ, ಸೌತ್ ಕ್ಯಾರಿಲೋನಾದ ಕೊಲಂಬಿಯಾ ಎಂಬ ಪಟ್ಟಣದಲ್ಲಿ ಒಂದು ವಾರ ಇದ್ದೆ, ನನ್ನ ಜೊತೆ ನನ್ನ ಸಹೋದ್ಯೋಗಿ ಗ್ರೆಗ್ ಕೊಡ ಇದ್ದರು, ಪ್ರತಿ ಸಂಜೆ ಆಫೀಸ್ ಸಮಯದ ನಂತರ ನನ್ನನ್ನು ಅಮೇರಿಕಾ ದರ್ಶನಕ್ಕೆ ಕರೆದುಕೊಂಡು ಹೋಗುತ್ತಿದ್ದರು, ನನಗೆ ಇನ್ನೂ ಚನ್ನಾಗಿ ನೆನಪಿದೆ ಅಂದು ಗುರುವಾರ ಸಂಜೆ, ಶುಕ್ರವಾರ ಮಧ್ಯಾಹ್ನ ಗ್ರೆಗ್ ಮರಳಿ ಮಾಸವಿಲ್ ಗೆ ಹೋಗುವವರಿದ್ದರು, ನಾನು ಶನಿವಾರ ಭಾರತಕ್ಕೆ ವಾಪಸ್ಸು ಬರಬೇಕಿತ್ತು, ಸೋ ಅದು ನಾವಿಬ್ಬರು ಜೊತೆಗಿರುವ ಕೊನೆಯ ದಿನವಾಗಿದ್ದರಿಂದ ಗ್ರೆಗ್ ನನ್ನನ್ನು ರಿವರ್ ವಿವ್ವ ಎಂಬ ರೆಸ್ಟುರೇಟ್ ಗೆ ಕರೆದುಕೊಂಡು ಹೋದ, ನಮ್ಮ ಜೊತೆಗೆ ನಮ್ಮದೇ ಕಂಪನಿಯ ಇತರ ಇಬ್ಬರು ಸಹದ್ಯೋಗಿಗಳು ಇದ್ದರು, ಗ್ರೆಗ್ ಒಬ್ಬ ಅತ್ತುತ್ತಮ ಮಾತುಗಾರ ಕ್ಷಣಮಾತ್ರದಲ್ಲಿ ಯಾರ ಜೊತೆ ಬೇಕಾದರೂ ಗೆಳೆತನ ಮಾಡಬಲ್ಲವ, ಆತ ನನಗೆ ಆಫೀಸ್ ಕೆಲಸದ ಬಗ್ಗೆ ಹೇಳಿದಕ್ಕಿಂತ ಜೀವನ ಪಾಠವನ್ನೇ ಹೆಚ್ಚು ಮಾಡಿದ್ದ, ಅಂದು ರಾತ್ರಿ ಊಟ ಮುಗಿಸಿಕೊಂಡು ಹೋಟೆಲ್ ಗೆ ಮರಳಿ ಬಂದಾಗ ಮಧ್ಯರಾತ್ರಿ ಸುಮಾರು ಎರಡು ಘಂಟೆ, ನನ್ನ ರೂಮ್ ಹೋಟೆಲ್ ನ ಎರಡನೇ ಫ್ಲೋರ್ ನಲಿತ್ತು, ಗ್ರೆಗ್ 4ನೇ ಫ್ಲೋರ್ ನಲ್ಲಿ ಇದ್ದರು, ಬೆಳಗ್ಗೆ ಮತ್ತೆ 7.30 ಕ್ಕೆ ಆಫೀಸ್ ಗೆ ಹೋಗಬೇಕಾಗಿತ್ತು, ವಿಪರೀತ ನಿದ್ರೆ ಬೇರೆ ಬಂದಿದ್ದರಿಂದ ಸೀದಾ ರೂಮಿಗೆ ಬಂದವನೇ ಮಲಗಿ ಬಿಟ್ಟಿದ್ದೆ, ಆ ರೂಮು ಡಬಲ್ bed ಇದ್ದ ರೋಮ್ ಆಗಿತ್ತು, ಬಾಗಿಲಗೆ ಹತ್ತಿರವಿದ್ದ bed ನಲ್ಲಿ ನಾನು ಮಲಗಿದ್ದೆ, ಸುಮಾರು 10 ನಿಮಿಷಗಳಾಗಿತ್ತು, ಅರೆ ನಿದ್ರೆಯಲಿದ್ದೇ ಇದ್ದಕಿದ್ದ ಹಾಗೆ ಸುಮಾರು 10-12 ವರ್ಷದ ಬಲಕನೊಬ್ಬ ರೂಮಿನೊಳಗೆ ನೆಡೆದು ಬಂದ, ಬಾಗಿಲು ಲಾಕ್ ಮಾಡಿದ್ದು ನನಗೆ ಚನ್ನಾಗಿ ನೆನಪಿತ್ತು, ಆದರೂ ಅದು ಹೇಗೆ ಯಾರದು ಒಳಬರಲು ಸಾಧ್ಯ!!!? ಸೀದಾ ಬಂದ ಆ ಬಾಲಕ ಪಕ್ಕದಲ್ಲಿ ಖಾಲಿ ಇದ್ದ ಬೆಡ್ ನಲ್ಲಿ ಮಲಗಿದೆ, ಕ್ಷಣಾರ್ಧದಲ್ಲಿ ನನ್ನ ನಿದ್ರೆ ಹಾರಿತ್ತು, ಪಕ್ಕಕ್ಕೆ ತಿರುಗಿ ನೋಡಲು ನನಗೆ ಭಯವಾಗಿತ್ತು, ಮನದಲ್ಲೇ ಮುಕ್ಕೋಟ್ಟೆ ದೇವರಗಳನ್ನು ನೆನದಿದ್ದೆ, ಆ ಕ್ಷಣದಲ್ಲಿ ನನಗೆ ಪಕ್ಕಾ ಅದು ದೆವ್ವವೆ ಎಂಬ ಬಾವನೆ ಮೂಡಿತ್ತು, ಆ ಎರಡು bed ಗಳ ಮಧ್ಯ ಒಂದು ಚಿಕ್ಕ ಟೇಬಲ್ ಇತ್ತು ಅದರ ಮೇಲೆ ಒಂದು ಬೈಬಲ್ ಇಟ್ಟಿದ್ದರು, ನಾನು ನೋಡಿದ ಚಲನಚಿತ್ರಗಳಲ್ಲಿ ಕೈಯಲ್ಲಿ ಬೈಬಲ್ ಇದ್ದರೆ ದೆವ್ವಗಳು ಏನು ಮಾಡುವುದಿಲ್ಲ ಎಂಬುದು ನೆನಪಾಗಿ, ಹಿಂದೆ ತಿರಗದೆ ಟೇಬಲ್ ಮೇಲಿನ ಬೈಬಲ್ ಎತ್ತಿ ಅದ ಅವಚಿ ಮಲಗಿದ್ದೆ, ಅದ್ಯಾವಾಗ ನಿದ್ರೆ ಬಂದಿತ್ತೋ ಗೊತ್ತಿಲ್ಲ ಬೆಳಗ್ಗೆ ಅಲಾರಾಂ ಹೊಡೆದಾಗಲೇ ಎಚ್ಚರವಾಗಿತ್ತು, ಪಕ್ಕದ ಬೆಡ್ ಕಡೆ ನೋಡಿದರೆ ಯಾರು ಇಲ್ಲ, ಬೆಡ್ ಮೇಲಿನ ಬ್ಲಾಕೆಂಟ್ ಕೂಡ ಮಡಿಚಿ ಇಟ್ಟ ರೀತಿಯೇ ಇತ್ತು, ಬೈಬಲ್ ಟೇಬಲ್ ಮೇಲೆಯೇ ಇತ್ತು, ಹಾಗಾದರೆ ರಾತ್ರಿ ನಾನು ಕಂಡ ಬಾಲಕ ಎಲ್ಲಿ? ಬಾಗಿಲು ಕೂಡ ಲಾಕ್ ಆಗಿತ್ತು, ಹಾಗಾದರೆ ರಾತ್ರಿ ನಾನು ನೋಡಿದ ಬಾಲಕ ಕೇವಲ ನನ್ನ ಭ್ರಮೆಯೇ? ಅಥವಾ ಅದು ದೆವ್ವವ್ವೆ ನನಗಿನ್ನೂ ಅದು ಯಕ್ಷಪ್ರಶ್ನೆ ಯಾಗಿದೆ.
                   ಅದಾಗಿ ಕೆಲವು ವರ್ಷಗಳ ಬಳಿಕ ಅದೊಂದು ದಿನ ನಮ್ಮ ಊರಿನಿಂದ ಬೆಂಗಳೂರಿಗೆ ಕಾರಿನಲ್ಲಿ ಒಬ್ಬನ್ನೇ ಬರುತ್ತಿದ್ದೆ, ಚಿತ್ರದುರ್ಗದಿಂದ ಸ್ವಲ್ಪ ಮುಂದೆ ಬಂದಿದ್ದೆ, ನನ್ನ ಕಾರಿನ ಹಿಂದೆಯೇ ಒಂದು ಕಾರು ಬರುತಿತ್ತು, ಸುಮಾರು ದೂರದಿಂದ ಅದು ನನ್ನ ಕಾರನ್ನೇ ಪಾಲೊ ಮಾಡುತ್ತಿರುವಂತೆ ಅನಿಸಿತು, ಅದು ಕೂಡ ಕೆಂಪು ಬಣ್ಣದ ರೇನಾಲ್ಟ್ ಕಾರ್ ಮನಸಿಗ್ಗೆ ಖುಷಿ ಅನಿಸಿತು ಯಾಕಂದರೆ ನನ್ನದು ಅದೇ ಕಾರ್, ಸುಮಾರು 4-5 km ಹೋದ ನಂತರ ಮತ್ತೆ ಕನ್ನಡಿಯಲ್ಲಿ ಪರೀಕ್ಷೆ ಮಾಡಿದರೆ ಅದೇ ಕಾರ್ ನನ್ನ ಕಾರಿನ ಹಿಂದೆಯೇ ಬರುತ್ತಿದೆ, ಈ ಬಾರಿ ಸ್ವಲ್ಪ ಸೂಕ್ಷಮವಾಗಿ ಗಮನಿಸೆದೆ, ಒಬ್ಬ ಮಹಿಳೆ ಕಾರ್ ಡ್ರೈವ್ ಮಾಡುತ್ತಿದ್ದಳು, ಹಾಗೆ ಕಾರಿನ ನಂಬರ್ ಪ್ಲೇಟ್ ಕಡೆ ಕಣ್ಣು ಹಾಯಿಸಿದೆ ಒಂದು ಕ್ಷಣ ಮೈ ಜುಂ ಎಂದಿತು, ಯಾಕಂದರೆ ಆ ಕಾರಿನ ನಂಬರ್ KA 02 MM xxxx, ನನ್ನ ಕಾರಿನ ನಂಬರ ಕೂಡ ಅದೇ...


Sunday, August 6, 2017

ತೋಚಿದ್ದು-ಗೀಚಿದ್ದು


ಇವತ್ತು ಮತ್ತೆ ಆಕಾಶದಲ್ಲಿ ನಕ್ಷತ್ರಗಳು ಸ್ಪಷ್ಟವಾಗಿ ಕಾಣಿಸುತ್ತಿವೆ, ಯಾಕೋ ಮೋಡಗಳಿಗೆ ನಮ್ಮೂರಿನ ದಾರಿ ಮರೆತಹಾಗಿದೆ, ಈ ವರ್ಷವೂ ಮುಂಗಾರು ಕೈ ಕೊಡುವ ಲಕ್ಷಣಗಳೂ ಕಾಣುತ್ತಿದೆ, ಜೂನ್ ತಿಂಗಳ ಮೊದಲವಾರದಲ್ಲಿ ಪತ್ರಿಕೆಯಲ್ಲಿ ಬಂದಿದ್ದ ಹವಾಮಾನ ವರದಿಗಳೆಲ್ಲ ಸುಳ್ಳಾಗುತ್ತಿವೆ.
ನಾನು ಚಿಕ್ಕವನಿದ್ದಾಗ ಜೂನ್ ಮತ್ತು ಜುಲೈ ಪೂರ್ತಿ ಎಡಬಿಡದೆ ಮಳೆ ಸುರಿಯುತ್ತಿತ್ತು ಸುರಿವ ಮಳೆಯಲ್ಲಿ ಮುರಿದ ಕೊಡೆ ಹಿಡಿದು ಶಾಲೆಗೆ ಹೋಗುತ್ತಿದ್ದೆ, ಆ ಶಾಲೆಗೆ ಐದು ಊರಿನ ಮಕ್ಕಳು ಬರಿತ್ತಿದ್ದರು ಎಲ್ಲರೂ ನನ್ನಂತೆ ಎರಡೂ ಮೂರೂ ಕಿಲೋಮೀಟರ್ ನೆಡೆದು ಬರುತ್ತಿದ್ದರು, ಮೊನ್ನೆ ಊರಿಗೆ ಬಂದಾಗ ಆ ಶಾಲೆಯ ಹತ್ತಿರ ಹೋಗಿದ್ದೆ, ಶಾಲೆ ಮುಚ್ಚುವ ಸ್ಥಿತಿಯಲ್ಲಿ ಇದೆಯಂತೆ, ಈಗಿನ ಹಳ್ಳಿಯ ಮಕ್ಕಳಿಗೆ ಪಟ್ಟಣದ ಶಾಲೆಯ ಮೇಲೆ ಹೆಚ್ಚು ಪ್ರೀತಿ ಹಳ್ಳಿ ಶಾಲೆ ಅಂದರೆ ಅಸಡ್ಡೆ. 

ಯಾಕೋ ಈ ಮಳೆಗೂ ಹಳ್ಳಿಗಳೆಂದರೆ ಬೇಸರವಾಗಿರಬೇಕು ಪ್ರತಿದಿನ ಬೇಡವೆಂದರೂ ಬೆಂಗಳೂರಿನಲ್ಲಿ ಬೇಕಾ ಬಿಟ್ಟಿ ಸುರಿವ ಮಳೆ ಹಳ್ಳಿ ಕಡೆಗೆ ಮಾತ್ರ ಬರುತ್ತಿಲ್ಲ, ಒಣಗಿದ ಮಣ್ಣಿನಲ್ಲೇ ಬೀಜ ಬಿತ್ತಿ ಮಳೆಯ ನಿರೀಕ್ಷೆಯಲ್ಲಿರುವ ರೈತನ ನಿರೀಕ್ಷೆಗೆ ಕೊನೆಯಿಲ್ಲ...
*********
ಅಪ್ಪ ದೂರದ ಊರಿನ ಗುಡಿಸಿಲಿನಲ್ಲಿ ಅರೇ ಹೊಟ್ಟೆ ಉಂಡು ಬದುಕಿದ್ದಾನೆ, ಮಗ ಬೆಂಗಳೂರಿನಲ್ಲಿ ನಾಲ್ಕು ಅಂತಸ್ತಿನ ಮನೆ ಕಟ್ಟಿಸಿ ಅದಕ್ಕೆ ಅಪ್ಪನ ಹೆಸರಿಟ್ಟಿದ್ದಾನೆ..
**********
ರಸ್ತೆ ಬದಿ ನಿಂತಿದ್ದ ಹಸುವಿನ ಬಾಲ ಮುಟ್ಟಿ ನಮಸ್ಕರಿಸಿದ ಅಂಗಡಿಯಾತ, ಅದೇ ಹಸು ಅವನ ಅಂಗಡಿ ಮುಂದೆ ಇಟ್ಟಿದ್ದ ಬಾಳೆಹಣ್ಣಿಗೆ ಬಾಯಿ ಹಾಕಿದಾಗ ಅದನ್ನು ಮನಾಸಾ ಇಚ್ಛೆ ಥಳಿಸಿದ.

Friday, February 3, 2017

ನನ್ನ ಅಜ್ಜ

ಬೆಟ್ಟ ಕಡಿದು ಹೊಲವ ಮಾಡಿ
ಖಾಲಿತಲೆಯ ಮೇಲೆ ಕಲ್ಲು ಹೊತ್ತು
ಜೋಡಿ ಎತ್ತು ಕಡ ತಂದು
ಸುರಿವ ಬಿಸಿಲ ಲೆಕ್ಕ ಇಡದೆ
ಮೂರು ಹೊತ್ತು ಹೊಲವ ಉತ್ತಿ
ನಾಲ್ಕು ದಿನಕ್ಕೆ ಆಗುವಷ್ಟು ಜೋಳ ಬೆಳೆದವ.

ಮೂರು ಹೆಣ್ಣು ಮೂರು ಗಂಡು
ನಡುವೆ ಬಂದು ಹೋಗೊ ಬಂದು ಬಳಗ
ಎಲ್ಲ ಬಾರ ಹೊತ್ತ ಕೂನ ಬೆನ್ನಿನವ,
ಜಾಲಿ ಮರದ ಮರಗೆ ಹೋಗಿ ಕದ್ದು ಬಿಡಿ ಸೇದಿ
ಹಿತ್ತಲ ಬಾಗಿಲಿನಿಂದ ಬಂದು
ಮುದಕಿಂದ  ಮಾರು ದೂರ ಏನು ಅರಿಯದಂತೆ ಕೂತವ.

ಹಣೆಗೆ ಮೂರು ಬಟ್ಟು ವಿಭೂತಿ
ಹರಿದು ಹೋದ ಕಚ್ಚೆ ಬನಿಯನ್ನು
ಹೆಗಲ ಮೇಲೂಂದು ತುಂಡು ಬಟ್ಟೆ
ಮೆಟ್ಟುಗಳನೆಂದು ಮೆಟ್ಟದವ
ಹೊಟ್ಟೆತುಂಬ ಎಂದು ಉಣ್ಣದವ
ಕಷ್ಟಗಳಿಗೆಂದು ಅಂಜದವ.

ಸಾಲ ಸೂಲ ಮಾಡಿ
ಹೆಣ್ಣು ಮಕ್ಕಳ ಮದುವೆ ಮಾಡಿ
ಮೊಮ್ಮಕ್ಕಳ ಹೆಗಲ ಮೇಲೆ ಹೊತ್ತು ಕುಣಿದವ,
ಎಲ್ಲಿಂದಲೂ ಬರಿ ಗೈಲಿ ಬಂದು
ಹೊಲ ಮನೆಯ ಮಾಡಿ
ಊರ ತುಂಬ ಬಂದು ಬಳಗ ಗಳಿಸಿದವ.

ನಾನು ಕಣ್ಣು ತೆರೆಯುವ ಮೊದಲೇ ಇಹ ಲೋಕ ಯಾತ್ರೆ ಮುಗಿಸಿ,
ಗೋಡೆ ಮೇಲೆನ ಫೋಟೋದೊಳಗೆ ಕುಳಿತವ,
ನನ್ನಪ್ಪನ ಅಪ್ಪನವ ಅಪ್ಪನ ಪಡೆಯಂಚಂತೆ ಅವ,
ನನ್ನ ಹೆಗಲ ಮೇಲೆ ಹೊತ್ತು ಕುಣಿಸಿ ಆಡಿಸದೆ
ನನ್ನ ಬಿಟ್ಟು ಹೋದ ಕೆಟ್ಟ ಮುದುಕ ನನ್ನಜ್ಜ ಅವ.

Confused Commuter Chronicles

Every morning, like clockwork, I boarded the metro from Mysore Road station. It had become a ritual — not just a commute, but a quiet slice ...