Thursday, March 29, 2012

ಓ ನನ್ನ ಪ್ರೀತಿಯ...


ನಿನ್ನೆಂದರೆ ನಶೆ
ನಿನ್ನೆಂದರೆ ವಿಷ
ನಿನ್ನೆಂದರೆ ಬೆಂಕಿ


ಅದೇನು ನಶೆ ನಿನ್ನ ಚುಂಬನದಲ್ಲಿ
ನಿನ್ನ ಭಂಗಾರದ ಮೈ ಬಣ್ಣಕ್ಕೆ
ಚುಂಬಿಸುತ್ತಾ ಇದ್ದರೆ ಪ್ರಪಂಚವನ್ನೆ ಮರೆತು ಬಿಡುವೆ


ದಿನಕ್ಕೆ ಕನಿಷ್ಠ ಮೂರು ಬಾರಿ
ಆದರು ನಿನಗೆ ಚುಂಬಿಸದಿದ್ದರೆ
ಅದೇನೊ ಕಳೆದುಕೊಂಡ ಅನುಭವ


ನಿನ್ನ ಸಂಗ ಮಾಡಿರುವ ವಿಷಯ
ನನ್ನ ಮನೆಯಲ್ಲಿಯೆನಾದರು ತಿಳಿದರೆ
ಅಷ್ಟೆ ನನ್ನ ಗತಿ


ಎಲ್ಲರು ನನಗೆ ಕೈ ಕೊಟ್ಟಾಗ
ನನ್ನ ಕೈ ಹಿಡಿದವಳು ನೀನು
ಕ್ಷಣವಾದರು ನನ್ನ ಒಂಟಿತನ ದೂರವಾಗಿಸಿದೆ


ನನ್ನೆಲ್ಲ ಗೆಳಯರನ್ನು
ಒಬ್ಬಳೆ ಸ್ವಲ್ಪವು ಬೇಸರಿಸಿಕೊಳ್ಳದೆ
ಖುಷಿ ಪಡಿಸಿದವಳು ನೀನು


ನಿನ್ನ ಸಹವಾಸದಿಂದ ಆರೋಗ್ಯ ನಷ್ಟ
ಹಣವು ವ್ಯಥ೯ ಆದರು
ನಿನೆಂದರೆ ನನಗೆ ಬಲು ಇಷ್ಟ


ಈ ಕ್ಷಣ ಕಾಡುತಿದೆ ನಿನ್ನ ನೆನಪು
ಎಲ್ಲಿರುವೆ ಬೇಗ ಬರಬಾರದೆ
ಓ ನನ್ನ ಪ್ರೀತಿಯ "ಸಿಗರೆಟ್"

No comments:

Post a Comment